ಪುಟ:ನಾಸ್ತಿಕ ಕೊಟ್ಟ ದೇವರು.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಒ೦ಟಿ ನಕ್ಷತ್ರ ನಕ್ಕಿತು

೧೩೫

ಮುನ್ನುಗ್ಗುತ್ತಿದ್ದುವು. ಕುಪ್ಪಳಿಸುತ್ತ ಹಾರುತ್ತ ಕಿಲಕಿಲನೆ ನಗುತ್ತ ನೀರು ಧುಮು ಧುಮುಸಿ ಹರಿಯಿತು, ಕಾಲುವೆಗಳಲ್ಲಿ, ಉಪಕಾಲುವೆಗಳಲ್ಲಿ.
ಎಚ್ಚತ್ತ ಹಿರಿಯ " ಓಹ್ ! " ಎಂದ.
ಬಾಗಿದ್ದ ನಡು ನಿಡಿದುಕೊಂಡಿತು. ಜಡವಾಗಿದ್ದ ಕಾಲುಗಳು ಚೇತನಗೊಂಡುವು.
ಆತ ಮತ್ತೆ ಆಂದ: “ಓಹ್ ! ಓಹ್ !”
ದೂರಕ್ಕೆ ದೂರಕ್ಕೆ ಆತನ ಹೊಲಗಳಿದ್ದ ಕಡೆಗೂ ನೀರು ಧಾವಿಸಿತು.
ಬೇರೊಂದನ್ನೂ ಗಮನಿಸದೆ ಹಿರಿಯ ಆ ನೀರನ್ನೆ ನೋಡಿದ; ಆ ನೀರಿನ ಹಿಂದೆಯೇ ಒಡಿದ.
ತಂದೆಯಷ್ಟೇ ವೇಗವಾಗಿ ಓಡುವುದು ರಾಮನಿಗೂ ಕಷ್ಟವೆನಿಸಿತು.
...ಗುಡಿಸಲ ಮುಂದೆ ರಾಮನ ತಾಯಿ ನಿಂತಿದ್ದಳು. ಚಿಕ್ಕ ಹುಡುಗನಂತೆ ಓಡುತ್ತ ಬ೦ದ ಗಂಡನನ್ನು ನೋಡಿ ಆಕೆಯೆ೦ದಳು :
"ಲಚ್ಚಿಗೆ ಎರಿಗೆಯಾಯ್ತು! ಗಂಡು ಮಗು!”
"ಓಹ್ !" ಎಂದ ಹಿರಿಯ, ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನೊರೆಸಿಕೊಳ್ಳುತ್ತ.— "ಓಹ್ ! ಓಹ್ !"
ಎಲ್ಲ ಬೇಗೆಯನ್ನೂ ಮರೆಸುವ ಹಾಗೆ ಬೀಸುತ್ತಿತ್ತು ತಣ್ಣನೆಯ ಗಾಳಿ. ವಾತಾವರಣ ತುಂಬಿತ್ತು, ಹಾಲುಹೊಳೆಯ ಜುಳುಜುಳು ಗೀತದಿಂದ. ಮಂದವಾಗಿ ಕಾಣಿಸುತ್ತಿದ್ದುವು, ಬಲು ದೂರದಲ್ಲಿ ಅಣೆಕಟ್ಟಿನ ದೀಪಮಾಲೆಗಳು.
ಮೇಲ್ಗಡೆ ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದುವು.
ಅವುಗಳನ್ನೇ ಮುಗ್ಧನಾಗಿ ಹಿರಿಯ ನೋಡಿದ.
ಪಶ್ಚಿಮದಲ್ಲಿ ಒಂಟಿಯಾಗಿಯೆ ಇದ್ದೊಂದು ನಕ್ಷತ್ರ ಅವನನ್ನು ಕಂಡು ನಕ್ಕಿತು.
ಅದನ್ನು ಗಮನಿಸಿದ ಹಿರಿಯ ರುಮಾಲನ್ನೆಳೆದು, ತಲೆಯಾಡಿಸುತ್ತ, ಅಂದ: "ಉಚ್ಮುಂಡೆ !"
ಆ ನಕ್ಷತ್ರ ಮತ್ತೆ ನಕ್ಕಿತು.