ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೯೫

“ತರುಣಳಾದ ಈ ಸ್ತ್ರೀಯನ್ನು ಕಟ್ಟಿಕೊಂಡು ತಪಸ್ವಿಗಳೆನಿಸುವ ನೀವು ಯಾವ ರೀತಿ ಕಾಡಿನಲ್ಲಿ ವಾಸಿಸುತ್ತೀರಿ? ಈ ಮುನಿವೇಷಕ್ಕೆ ಸಲ್ಲದ ಆಯುಧಗಳನ್ನು ಧರಿಸಿ ಒಂದೇ ಸ್ತ್ರೀಯನ್ನು ಉಪಯೋಗಿಸುವ ಅಧಮರು ನೀವು; ಪಾಪಿಗಳು, ಮುನಿವೇಷಕ್ಕೆ ಕಲಂಕವನ್ನು ತರುವಂಥವರು, ನೀವು ಯಾರು? ವಿವಾಹವಾಗಲು ಯೋಗ್ಯವಿರುವ ಇವಳು ನನ್ನ ಪತ್ನಿಯಾಗುವಳು!” (ಅರಣ್ಯಕಾಂಡ, ೨, ೧೧-೧೩)
ಈ ಬಗೆಯಾಗಿ ಪತಿವ್ರತೆಯನ್ನು ನಿಂದಿಸುವ ಉದ್ಗಾರಗಳು ಪತಿವ್ರತೆಯಾದ ಸೀತೆಯ ಕಿವಿಗಳಿಗೆ ಬಿದ್ದಾಗ ಅವಳ ಪಾತಿವ್ರತ್ಯದ ತೇಜವು ಏಕೆ ಪ್ರಕಟವಾಗಲಿಲ್ಲ? ಕಾಗೆಯ ರೂಪವನ್ನು ತಾಳಿ ಬಂದ ಇಂದ್ರಪುತ್ರನು ಸೀತೆಯ ಸ್ತನಗಳೊಡನೆ ಚೇಷ್ಟೆ ನಡೆಸಿದಾಗ ಪಾತಿವ್ರತ್ಯದ ತೇಜಸ್ಸು ಏಕೆ ಹೊರಬರಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ. ಇಂದ್ರಪುತ್ರನಿಂದ ನಡೆದ ಶೃಂಗಾರ ಚೇಷ್ಟೆಗಳ ವಿವರಣೆಯನ್ನು ಸೀತೆಯು ತಾನಾಗಿ ಹನುಮಂತನಿಗೆ ಹೇಳಿದ್ದಾಳೆ. ಅದು ವಿಶ್ವಸನೀಯವಲ್ಲವೆಂದು ಹೇಗೆ ಹೇಳಲು ಸಾಧ್ಯ?೬೮ ವಿರಾಧನಂತಹ ರಾಕ್ಷಸನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವುದಂತೂ ದೂರವಿರಲಿ, ಸಾಮಾನ್ಯ ಕಾಗೆಯನ್ನು ಶಿಕ್ಷಿಸುವದು ಸಹ ಅವಳಿಂದಾಗಲಿಲ್ಲ. ಹೀಗಿರುವದರಿಂದ ಪಾತಿವ್ರತ್ಯದ ಫಲ-ಬಲಗಳ ಅನುಬವವು ಒಮ್ಮೆಯೂ ಕಂಡುಬಂದಿಲ್ಲ; ಅಂದಬಳಿಕ ಮಂಡೋದರಿಯ ಉದ್ಗಾರಗಳನ್ನು ವಿಶೇಷಗಂಭೀರವಾಗಿ ವಿಶ್ಲೇಷಿಸುವ ಅವಶ್ಯಕತೆ ಇಲ್ಲ.
ಪಾತಿವ್ರತ್ಯದ ಶಕ್ತಿಯ ಬಗ್ಗೆ ಸೀತೆಯ ಉದ್ಗಾರಗಳನ್ನು ಲಕ್ಷ್ಯಿಸಿ ಅವುಗಳಲ್ಲಿಯ ನಿಜಾಂಶವನ್ನು ಪರಿಶೋಧಿಸಬೇಕು.

          ಅಸಂದೇಶಾತ್ತು ರಾಮಸ್ಯ ತಪಶ್ಚಾನುಪಾಲನಾತ್ |
          ನ ತ್ವಾಂ ಕುರ್ಮಿ ದಶಗ್ರೀವ ಭಸ್ಮ ಭಸ್ಮಾರ್ಹತೇಜಸಾ ||

“ರಾಮನ ಆಜ್ಞೆಯಿರದ ಕಾರಣ ಮತ್ತು ತಪಸ್ಸಿನ ಪರಿಪಾಲನೆಯೇ ಒಂದು ಕರ್ತವ್ಯವಾಗಿದ್ದುದರಿಂದ ಪಾತಿವ್ರತ್ಯದ ತೇಜಸ್ಸಿನಿಂದ ನಿನ್ನನ್ನು ಸುಟ್ಟು ಭಸ್ಮ ಮಾಡುವುದು ಸಾಧ್ಯವಿದ್ದರೂ ನಾನು ಆ ರೀತಿ ಮಾಡುವುದಿಲ್ಲ.”೬೦ ಈ ಮರಾಠಿ

——————
೬೮. ಸುಂದರಕಾಂಡ, ೩೮.
೬೯. ಸುಂದರಕಾಂಡ, ೨೨.