ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

           ಯಸಿ ಹ್ಯಕಾಮಾ ಮಾ ಸೇವೇತ ಸ್ತ್ರಿಯಮನ್ಯಾಮಪಿ ಧ್ರುವಮ್ |
           ಶತಧಾsಸ್ಯ ಫಲೇನ್ಯೂರ್ಧಾ ಇತ್ಯುಕ್ತ: ಸೋsಭವತ್ ಪುರಾ ||೩೪||

(ವನಪರ್ವ, ೨೯೧)

“ಅವನಲ್ಲಿ ಆಸಕ್ತಿಯಿರದ ಯಾವ ಯಾವ ಪರಸ್ತ್ರೀಯನ್ನು ಆತನು ಬಲಾತ್ಕಾರದಿಂದ ಭೋಗಿಸಿದರೆ ಆತನ ಶಿರಸ್ಸು ಸಹಸ್ರ ಹೋಳಾಗುವದು” ಎಂಬ ಶಾಪವನ್ನು ಮೊದಲೇ ಕೊಡಲಾಗಿತ್ತು. ಬ್ರಹ್ಮದೇವನು ಸೀತೆಗೆ ಈ ವಿಧದ ಆಶ್ವಾಸನೆಯನ್ನು ಕೊಟ್ಟ ಕಾರಣ- ಸೀತೆಯು ಲಂಕೆಯಲ್ಲಿದ್ದರೂ ಭ್ರಷ್ಟಳಾಗದೇ ಉಳಿದಿರುವುದರ ಶ್ರೇಯವು. ಅವಳ ಪಾತಿವ್ರತ್ಯಕ್ಕಿರದೆ, ರಾವಣನಿಗೆ ದೊರೆತ ಶಾಪಗಳ ಮೂಲಕವೆಂದು ಹೇಳಬಹುದು.

ಉಪಸಂಹಾರ
ಐಹಿಕ ಸುಖಸಮೃದ್ಧಿಗಾಗಿ ಮತ್ತು ದುಃಖನಿವಾರಣೆಗಾಗಿ ಮಾನವನು ಸತತ ಪ್ರಯತ್ನಗಳನ್ನು ನಡೆಸಿರುತ್ತಾನೆ. ಇದು ಆತನ ಬಲವತ್ತರವಾದ ಸ್ವಾಭಾವಿಕ ಪ್ರವೃತ್ತಿಯಾಗಿದೆ. ತನ್ನ ಉದ್ದಿಷ್ಟಗಳನ್ನು ಸಾಧ್ಯಮಾಡಿಕೊಳ್ಳಲು ಆತನು ಎಲ್ಲ ಶಕ್ತಿಗಳನ್ನು ಬಳಸುತ್ತಾನೆ. ಹೀಗೆ ಮಾಡಿಯೂ ಧ್ಯೇಯಗಳು ಕೈಗೂಡದಿದ್ದರೆ, ಪ್ರಯತ್ನಗಳು ವಿಫಲ ಎಂದೆನಿಸಿದಾಗ ಆತನು ಮಾನವೇತರ ಅಥವಾ ಅತಿಮಾನವೀ, ಮಹಾಮಾನವೀಶಕ್ತಿಗಳಿಗೆ ಶರಣುಹೋಗುತ್ತಾನೆ. ವಿಜ್ಞಾನದಲ್ಲಿ ಪ್ರಗತಿಯಾದಂತೆ ಅಸಾಧ್ಯವೆನಿಸಿದ ಸಂಗತಿಗಳು ಸಾಧ್ಯವಾಗಿವೆ; ಸಹಜವಾಗಿ, ಸುಲಭವಾಗಿ ದೊರೆಯುವಂತಾಗಿವೆ. ಇಂದಿನ ಐಹಿಕ ಜೀವನವು ವಿವಿಧ ರೀತಿಯಿಂದ ಸಮೃದ್ಧವಾಗಿದೆ. ಇಷ್ಟೆಲ್ಲ ಸಾಧಿಸಿದ್ದರೂ ಮಾನವೇತರ ಶಕ್ತಿ ಸಾಮರ್ಥ್ಯದ ಬಗ್ಗೆ ಅವನಿಗಿದ್ದ ಶ್ರದ್ಧೆ, ಕುತೂಹಲ ಕಡಿಮೆಯಾಗಿಲ್ಲ. ಕೆಲವು ಸುಶಿಕ್ಷಿತ ಸುಸಂಸ್ಕೃತ ಬುದ್ಧಿನಿಷ್ಠರನ್ನು ಬಿಟ್ಟರೆ ಬಹುಸಂಖ್ಯ ಜನರು ಈ ಸಾಮರ್ಥ್ಯವನ್ನು ಹೆಚ್ಚಾಗಿ ನಂಬುತ್ತಾರೆ. ಐಹಿಕ ಉದ್ದಿಷ್ಟ ಅಭಿಲಾಷೆಗಳ ಪೂರ್ತಿಗಾಗಿ ಜನರು ಇಂದು ಕೂಡ ಸತ್ಯನಾರಾಯಣವ್ರತವನ್ನಾಚರಿಸುತ್ತಾರೆ; ಹರಕೆಗಳನ್ನು ಬೇಡಿಕೊಳ್ಳುತ್ತಾರೆ; ವ್ರತನಿಯಮಗಳನ್ನು ಕೈಕೊಳ್ಳೂತ್ತಾರೆ; ದೇವರಿಗೆ ಬೇಡಿಕೊಳ್ಳುತ್ತಾರೆ. ಮಠ-ಮಂದಿರಗಳಲ್ಲಿ ಭಕ್ತಾದಿಗಳ ದಟ್ಟಣೆಯಾಗುತ್ತಿರುವುದು ಐಹಿಕ ಲಾಭಕ್ಕಾಗಿಯೇ ಎಂದೆನ್ನಬಹುದು. ಆತ್ಮೋದ್ಧಾರಕ್ಕಾಗಿ ಹೋಗುವವರು ಅತಿವಿರಳವಿರುತ್ತಾರೆ.