ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಇರದಿದ್ದರೆ, ಶಾಪ-ವರಗಳನ್ನು ನಂಬುತ್ತಿರಲಿಲ್ಲ. ಕರ್ಮವಾದದ ಸಿದ್ಧಾಂತವನ್ನು
ಪೂರ್ಣವಾಗಿ ಅಲ್ಲಗಳೆಯಲಾಗದಿದ್ದರೂ, ಅದರ ಪೋಷಣೆಯು ಸಹ ಮಾನವನ
ವಿಶಿಷ್ಟ ಪ್ರವತ್ತಿಯ ಮೂಲಕವೇ ಆಗಿದೆ.
ಶಾಪ-ವರಗಳನ್ನು ಯಥೋಚಿತವಾಗಿ, ಸಮರ್ಪಕವಾಗಿ, ಯೋಗ್ಯವಾಗಿ
ಸಹಜ ರೀತಿಯಲ್ಲಿ ಬಳಸಿ ವಾಲ್ಮೀಕಿಯು ರಾಮಕಥೆಗೆ ದಿವ್ಯ ಮೆರುಗನ್ನು
ಕೊಟ್ಟಿದ್ದಾನೆ.
ರಾಮಕಥೆಯು ನಾರದನಿಗೆ ಪೂರ್ವದಲ್ಲಿಯೇ ಗೊತ್ತಿತ್ತು. ಅದನ್ನು ವಾಲ್ಮೀಕಿಗೆ
ಹೇಳಿದನು. ಆ ಕಥೆಯು ಆಗ ಅಷ್ಟೊಂದು ಪ್ರಚಾರದಲ್ಲಿರಲಿಲ್ಲ. ನಾರದನು
ಹೇಳಿದ ಕಥೆಯಲ್ಲಿ ಮೂರು ವರಗಳ ಉಲ್ಲೇಖವಿದೆ.೭೬
ವರ-ಶಾಪಗಳ ಕಲ್ಪನೆಯು ರಾಮಾಯಣದ ಪೂರ್ವದಿಂದಲೂ ಇದೆ
ಎಂಬುದು ಸ್ಪಷ್ಟಸಂಗತಿಯಾಗಿದೆ. ಈ ಕಲ್ಪನೆಯನ್ನು ವಾಲ್ಮೀಕಿಯು ತನ್ನ
ಪ್ರತಿಭೆಯಿಂದ ಸೂಕ್ಷ್ಮವಾಗಿ ಬಳಸಿ ರಾಮಕಥೆಯನ್ನು ಸರ್ವಾಂಗಸುಂದರವಾಗಿ
ಮಾಡಿದನು. ವಾಲ್ಮೀಕಿಯ ರಾಮಾಯಣವು ಶತಶತಮಾನಗಳಿಂದ ಜನರ
ಮನಸ್ಸಿನಲ್ಲಿ, ಭಕ್ತಾದಿಗಳಲ್ಲಿ, ರಸಿಕರಲ್ಲಿ ತನ್ನ ಸ್ಥಾನವನ್ನು ದೃಢವಾಗಿರಿಸಿಕೊಂಡಿದೆ.
ನಾರದನು ಹೇಳಿದ ಕಥೆಗಳಲ್ಲಿ ವಾಲ್ಮೀಕಿಯು ತನ್ನ ಪ್ರಜ್ಞೆಯಿಂದ, ನವಚೈತನ್ಯದಿಂದ
ಅದನ್ನು ಪೋಷಿಸಿ ರಾಮಾಯಣವನ್ನು ಅಮರಗೊಳಿಸಿದ್ದಾನೆ. ರಾಮಾಯಣದ
ಸೌಂದರ್ಯದ ಹಲವಾರು ಕೋನಗಳಲ್ಲಿ ಶಾಪ-ವರಗಳು ಒಂದು ಥಳಥಳಿಸುವ
ಸ್ಥಾನವನ್ನು ಪಡೆದಿದೆ. ಇದನ್ನು ಎತ್ತಿ ತೋರಿಸುವುದೇ 'ಶಾಪಾದಪಿ-ವರಾದಪಿ'
ಉದ್ದೇಶವಾಗಿದೆ.

ವಿಜಾಪುರ

ಶ್ರೀ ರ. ಭಿಡೆ

೧-೧-೧೯೮೭




——————
೭೬. ಬಾಲಕಾಂಡ, ೧-೨೨, ೭೬, ೮೬.