ಪುಟ:Praantabhaashhe-Rashhtrabhaashhe.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೬ - ಪೂರ್ವ ಸಂಸ್ಕಾರಗಳ ಸಂಗ್ರಹವನ್ನೆಲ್ಲ ಸರ್ವಅನುಭವಗಳ ಸಾರವನ್ನೆಲ್ಲ
ಪರಂಪರೆಯಿಂದ ಹಿರಿಯರು ಕಿರಿಯರಿಗೆ ಕೈಯೆತ್ತಿ ಕೊಡಲು ಅನುವಾಯಿತು
ಈ ದೃಷ್ಟಿಯಿಂದ ನೋಡಿದರೆ ಮನುಷ್ಯನ ವಿಕಾಸದ ಇತಿಹಾಸದಲ್ಲಿ,
ಮಾನವ ಸಂಸ್ಕೃತಿಯ ಬೆಳವಣಿಗೆಯ ಚರಿತ್ರೆಯಲ್ಲಿ ಭಾಷೆ ಬರೆಹಗಳಿಗೆ
ಅತ್ಯಂತ ಪ್ರಮುಖ ಸ್ಥಾನವು ದೊರೆಯುವದು ಅಥವಾ ಭಾಷ ಬರಹಗಳು
ಇಲ್ಲದೆ ಹೋಗಿದ್ದರೆ, ಸಂಸ್ಕೃತಿ ಪ್ರಗತಿಗಳ ಸಂಗ್ರಹ ಮತ್ತು ಪ್ರಸಾರ ಈ
ಪ್ರಕಾರ ವ್ಯವಸ್ಥಿತವಾಗಿ ವೇಗದಿಂದ ಆಗುತ್ತಿರಲಿಲ್ಲ ಎಂದು ಧಾರಾಳವಾಗಿ
ಹೇಳಬಹುದು.
ಯಾವ ಭಾಷೆ ?
ಜಗತ್ತಿನಲ್ಲಿ ಭಾಷೆ ಒಂದೇ ಇಲ್ಲ. ಕನಿಷ್ಟ ಸಾವಿರಾರು ಬಾಯಿ ಭಾಷೆ
ಬರೆಹದ ಭಾಷೆಗಳು ಇವೆ. ಅವುಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಲಿಪಿರಹಿತ
ಎದ್ದು ಸಣ್ಣ ಸಣ್ಣ ಮಾನವೀ ಗುಂಪುಗಳು ಮಾತಾಡುವಂತವು ಇವೆ. ಇ೦ಥ
ಅಲ್ಪ ಸಂಖ್ಯರು ಸಾಮಾನ್ಯವಾಗಿ ತಮ್ಮ ನೆರೆಯಲ್ಲಿರುವ ಲಿಪಿಬದ್ಧ ಭಾಷೆ
ಯನ್ನು ತಮ್ಮ ಸಾಂಸ್ಕೃತಿಕ ಭಾಷೆಯನ್ನಾಗಿ ಮಾಡಿಕೊಂಡಿರುವದು ಕಂಡು
ಬರುವದು, ಬಾಯಿ ಭಾಷೆಗಳಲ್ಲಿ ಇಂಥ ಸಾಹಿತ್ಯಾದಿಗಳು ನಿರ್ಮಾಣವಾಗಿಲ್ಲ
ನಿರ್ಮಾಣವಾಗಲು ಈಗ ಅನುಕೂಲವಿಲ್ಲ. ಪ್ರತಿನಿತ್ಯದ ಸಾಮಾನ್ಯ ಪ್ರಾಣಿ
ಜೀವನಕ್ಕೆ ಅವಶ್ಯವಿರುವ ಶಬ್ದ ಭಾಂಡಾರವು ಮಾತ್ರ ಆ ಭಾಷೆಗಳಲ್ಲಿರುವದು.
ಲಿಪಿಬದ್ದವಾಗಿ ಗ್ರಂಥಸ್ಥವಾದ ಭಾಷೆಗಳು ಜಗತ್ತಿನಲ್ಲಿ ಸುಮಾರು ೨೦೦
ಇರಬಹುದು. ಅವೆಲ್ಲವುಗಳನ್ನು ಒಬ್ಬನೆ ಮನುಷ್ಯನು ಅರಿತಿರುವದು ಸಾಧ್ಯ
ವಿಲ್ಲ. ಹಾಗೆ ಅರಿಯಬೇಕಾದರೆ ಇಡೀ ಜೀವನವನ್ನೆಲ್ಲ ಬರೀ ಭಾಷೆಗಳನ್ನು
ಕಲಿಯುವುದರಲ್ಲಿಯೇ ಕಳೆಯಬೇಕಾದೀತು. ಅದು ಬರೀ ಕಷ್ಟ ನಾದ್ಯವಷ್ಟೇ
ಅಲ್ಲ, ಅಶಕ್ಯವೂ ಅವ್ಯವಹಾರವೂ ಅಯೋಗ್ಯವೂ ಇರುವದು. ನಾನಾನ್ಯತಃ
ಮನುಷ್ಯನು ತಾನು ಯಾವ ಪ್ರದೇಶದಲ್ಲಿ ಇಲ್ಲವೆ ಪ್ರಾಂತದಲ್ಲಿರುವನೊ
ಯಾವ ಜನರಲ್ಲಿ ವಾಸಿಸುವನೂ ಆಯಾ ಭಾಷೆಯನ್ನು ಚನ್ನಾಗಿ ಕಲಿತು
ಕೊಂಡರೆ ಸಾಕಾಗುವದು. ಭಾಷೆ, ಭಾಷಾಶಾಸ್ತ್ರ, ಭಾಷೆಯ ವ್ಯುತ್ಪತ್ತಿ
ಮುಂತಾದವುಗಳ ಅಭ್ಯಾಸ ಮಾಡುವ ಪಂಡಿತರು ಇಲ್ಲವೆ ವಿಜ್ಞಾನಾದಿಗ
ಳನ್ನು ಅಭ್ಯಸಿಸುವರು ದೇಶಪರ್ಯಟಕರು ಹೆಚ್ಚು ಭಾಷೆಗಳನ್ನು ಕಲಿತರೆ ಕಲಿ