ಬೆಳಗಿದ ದೀಪಗಳು

ವಿಕಿಸೋರ್ಸ್ದಿಂದ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ವಾಸುದೇವ ಸಾಹಿತ್ಯರತ್ನ ಮಾಲೆ––೬
ಮತ್ತು
ಮನೋಹರ ಗ್ರಂಥಮಾಲೆಯ ೧೧೩ನೆಯ ಕುಸುಮ


ಬೆಳಗಿದ ದೀಪಗಳು

( ಚಾರಿತ್ರಿಕ-ಕಥೆಗಳು )


ಬರೆದವರು :
ಕೆರೂರ, ವಾಸುದೇವಾಚಾರ್ಯರು.


ಎಪ್ರಿಲ್
೧೯೫೨


೦೧-೧೨-೦


ಪ್ರಕಾಶಕರು:
ಧೀರೇಂದ್ರ ವಾಸುದೇವಾಚಾರ್ಯ ಕೆರೂರ




ಸಂಪಾದಕರು :
ಜಿ, ಬಿ, ಜೋಶಿ

( ಮೊದಲನೆ ಆವೃತ್ತಿ ೨೫೦೦ ಪ್ರತಿಗಳು )

ಪುಸ್ತಕ ಮಾರಾಟಗಾರರು:

ವಾಸುದೇವ ಪುಸ್ತಕಾಲಯ
ಬಾಗಿಲಕೋಟೆ.

ಮನೋಹರ ಗ್ರಂಥಮಾಲೆ
ಧಾರವಾಡ.

ಮುದ್ರಕರು:
ವಿ. ವಾಯ್. ಜಠಾರ
ಕರ್ನಾಟಕ ಪ್ರಿಂಟಿಂಗ್ ವರ್ಕ್ಸ್, ಧಾರವಾಡ.


ಪ್ರಕಾಶಕರ ಮಾತು[ಸಂಪಾದಿಸಿ]

ನಾನು ಮನೋಹರ ಗ್ರಂಥಮಾಲೆಯ ಸಂಪಾದಕರಾದ ಶ್ರೀ. ಜಿ. ಬಿ. ಜೋಶಿಯವರ ಸಹಾಯದಿಂದ ದಿವಂಗತ ಕೆರೂರ ವಾಸುದೇವಾಚಾರ್ಯರು ಬರೆದ ಸಾಹಿತ್ಯವನ್ನೆಲ್ಲ ಒಂದು ಕ್ರಮಬದ್ಧವಾದ ರೀತಿಯಲ್ಲಿ ಪುಸ್ತಕರೂಪವಾಗಿ ಪ್ರಕಟಿಸಬೇಕೆಂದೆಣಿಸಿ ಈ“ವಾಸುದೇವ ಸಾಹಿತ್ಯರತ್ನಮಾಲೆ"ಯನ್ನು ಪ್ರಾರಂಭ ಸಿದ್ದೇನೆ. ಒಂಬತ್ತು ಚಾರಿತ್ರಿಕ ಕಥೆಗಳ ಸಂಗ್ರಹವಾದ “ ಬೆಳಗಿದ ದೀಪಗಳು " ಆ ಮಾಲೆಯಲ್ಲಿಯ ಆರನೆಯ ರತ್ನ.

ನಂಜನಗೂಡಿನ ಸತಿಹಿತೈಷಿಣೀ ಗ್ರಂಥಮಾಲೆಯ ಸಂಪಾದಿಕೆಯರಾದ ಶ್ರೀಮತಿ ತಿರುಮಲಾಂಬಾ ಅವರು ದಿವಂಗತ ವಾಸುದೇವಾಚಾರ್ಯರ ಮೇಲಿನ ತಮ್ಮ ಗೌರವದಿಂದ, ತಮ್ಮಲ್ಲಿದ್ದ 'ಸಚಿತ್ರ ಭಾರತ'ದ ಮೊದಲ ಸಂಪುಟವನ್ನು ಸಮಯಕ್ಕೆ ಒದಗಿಸಿಕೊಟ್ಟು ಸಹಾಯಮಾಡಿದ್ದಾರೆ ; ಅದಕ್ಕಾಗಿ ನಾನು ಅವರಿಗೆ ಉಪಕೃತನಾಗಿದ್ದೇನೆ. ಅಲ್ಲದೆ ಈ ಮೊದಲೆ ಸಚಿತ್ರ ಭಾರತದ ಮೂರೂ ಸಂಪುಟಗಳನ್ನು ಕೊಟ್ಟು ಗ್ರಂಥಪ್ರಕಟನೆಗೆ ಸಹಾಯ ಮಾಡಿದ ಹುಬ್ಬಳ್ಳಿಯ ಶ್ರೀ ಸರಸ್ವತಿ ವಿದ್ಯಾರಣ್ಯ ವಾಚನಾಲಯದ ಸಂಚಾಲಕರಿಗೂ ಮೂರನೆಯ ಸಂಪುಟವೊಂದನ್ನು ಕೊಟ್ಟ ಶ್ರೀಮಂಗಳವೇಢ ಶ್ರೀನಿವಾಸರಾಯರಿಗೂ ನಾನು ಋಣಿಯಾಗಿದ್ದೇನೆ.

––ಧೀರೇಂದ್ರ ನಾ, ಕರೂರ


ಅರಿಕೆ[ಸಂಪಾದಿಸಿ]

ವಾಸುದೇವಾಚಾರ್ಯರು ಆಗೀಗ ತಮ್ಮ 'ಸಚಿತ್ರ ಭಾರತ' ದಲ್ಲಿ ಈ ಕತೆಗಳನ್ನು ಬರೆದು ಪ್ರಕಟಿಸಿದರು, 'ಸಂಪೂರ್ಣಕಥೆ' ಎಂದು ಇವಕ್ಕೆ ಅವರೇ ನಾಮಕರಣ ಮಾಡಿದರು. ಅವುಗಳಲ್ಲಿ ಕಾಲ್ಪನಿಕ ಮತ್ತು ಐತಿಹಾಸಿಕ ಕಥೆಗಳದೊಂದು, ಚಾರಿತ್ರಿಕ ಕಥೆಗಳದೊಂದು, ಪತ್ತೇದಾರಿ-ಕಥೆಗಳದೊಂದು, ಸಾಮಾಜಿಕ ಕಥೆಗಳದೊಂದು ಹೀಗೆ ಬೇರೆ ಬೇರೆ ಸಂಕಲನಗಳನ್ನು ಮಾಡಿ, ಪ್ರತಿಯೊಂದು ಸಂಕಲನಕ್ಕೂ ಬೇರೆ ಬೇರೆ ಹೆಸರಿಟ್ಟು ಪ್ರಕಟಿಸಲಾಗಿದೆ. 'ಪ್ರೇಮ ವಿಜಯ' ಅವುಗಳಲ್ಲಿಯ ಮೊದಲನೆಯ ಸಂಕಲನ. 'ಬೆಳಗಿದ ದೀಪಗಳು' ಎರಡನೆಯದು. ತೊಳೆದ ಮುತ್ತು ಮೂರನೆಯದು. 'ಬೆಳ್ಳಿ ಚಿಕ್ಕೆ' ನಾಲ್ಕನೆಯದು.

ಏಕಸಮಯದಲ್ಲಿ ಈ ಗ್ರಂಥಗಳು ವಾಸುದೇವ ಸಾಹಿತ್ಯ ರತ್ನಮಾಲೆಯಲ್ಲಿ ಪ್ರಕಟವಾಗಿಯೂ, `ಮನೋಹರ ಗ್ರಂಥಮಾಲೆಯಲ್ಲಿಯ ಗ್ರಾಹಕರಿಗೂ ದೊರೆಯುವಂತಾದುದು, ಮತ್ತು ಅದಕ್ಕೆ ಅನುಕೂಲ ಮಾಡಿ- ಕೊಟ್ಟುದು ಶ್ರೀ ಧೀರೇಂದ್ರ ನಾ, ಕರೂರ ಅವರ ಸಹಕಾರ ಸಹಾಯದಿಂದ ಎಂಬದನ್ನು ಬೇರೆ ಹೇಳಬೇಕಾಗಿಲ್ಲ. ಆದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ

- ಜಿ. ಬಿ. ಜೋಶಿ.


ಪರಿವಿಡಿ[ಸಂಪಾದಿಸಿ]

೧.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೨
೩.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೭
೪.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೫೩
೫.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೮೨
೬.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೯೪
೭.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೦೨
೮.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೧೦
೯.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೩೪

ನರಗುಂದದ ಸಾವಿತ್ರಿಬಾಯಿ

ಶುಭಾಂಗಿಯಾದ ವನಿತೆಯೆಂದರೆ ಈ ಜಗತಲದಲ್ಲಿ ನಯನಾಭಿರಾಮವಾಗಿ ತೋರುವ ನವಕುಸುಮವಲ್ಲದೆ ಮತ್ತೊಂದಲ್ಲ. ಹೊಸ ಚಿಗುರಿನಿಂದೊಪ್ಪುವ ಕುಡಿವಳ್ಳಿಯಲ್ಲಿ ಹೊಂಬಣ್ಣದಿಂದೊಪ್ಪಿ ನಲಿದಾಡುವ ಅರಳುಮೊಗ್ಗೆಯ ಅಂದವನ್ನು ಕಂಡು ಮನಸೋತು ಬೆರಗಾಗಿ ನಿಂದಿರದವರಾರು ? ಆ ಪೊಗರೊಗುವ ಪೂವಿನ ತನಿಗಂಪಿನ ಸೊಂಪಿಗೆ ಮೆಚ್ಚಿ ತಲೆದೂಗದಿರುವವರಾದರೂ ಯಾರು ? ಅದರಂತೆಯೇ ಕೋಮಲಾಂಗಿಯ ಸರ್ವಾಂಗ ಸುಂದರಿಯ ಚಾರುತರ ವಿಲಾಸವತಿಯ ಮೃದುಭಾಷಿಣಿಯ ಸೌಜನ್ಯಯುತ ಕಲಂಕರಹಿತವಾದ ಆಚರಣದವಳೂ ಆದ ಲಲನಾಮಣಿಯನ್ನು ಕಂಡು ಆಶುಕವನ್ನು ಪಡೆಯದಿರುವ ಮನುಷ್ಯನು ಪಶುಸಮಾನನೇ. ಪ್ರೇಮ ಮಮತೆ ದಯಾಪರತೆಗಳ ಸುರುಚಿರವಾದ ಮೂರುತಿಯಾದ ಸೀಮಂತಿನಿಯು ಲೀಲಾವಿಲಾಸಗಳಿಂದ ನಲಿದಾಡಿ ಮೃದುಹಾಸಗೈಯುತ್ತೆ ಚಿಂತಾರಹಿತಳಾಗಿ ಸಂತೋಷದಿಂದ ಮೆರೆಯುತ್ತಿರಬೇಕಲ್ಲದೆ ಅವಳು ನಿಷ್ಟುರವಾದ ದುಃಸ್ಥಿತಿಗಿಡಾಗಿ ಕೊರಗಿ ಸೊರಗಿ ಅಕಾಲ ಮೃತ್ಯುವಿನ ತುತ್ತಾಗಿ ಹೋಗುತ್ತಿರುವ ನೋಟವು ಶೋಚನೀಯವಾದದ್ದಲ್ಲವೆ ? ಕಲ್ಲುಕಣಿಯಾಗಿರುವ ಪುರುಷನು ದುಃಖಸಾಗರದಲ್ಲಿ ಮುಳುಮುಳುಗಿ ಎದ್ದರೇನಾಗುವದು ? ಆದರೆ ಕೋಮಲೆಯರಾದ ಭಾಮಿನಿಯರಿಗೆ ಕಷ್ಟಕ್ಲೇಶಗಳ ಬಳಿ ತಗಲಿದರೆ ಸಾಕು, ಅವರು ಕಂದಿಕುಂದಿಹೋಗದಿರುವರೆ ? ಆದರೂ ಮಕರಂದಮಯವಾದ ಪುಷ್ಪಗಳಲ್ಲಿಯ ಸಾರವನ್ನು ಸಂಗ್ರಹಿಸುವಾಗ ಗಂದಿಗನು ಅವುಗಳನ್ನು ಹಿಂಡಿ ಹಿಪ್ಪೆ ಯಾಗಿ ಮಾಡುವಂತೆ, ಸುಚರಿತೆಯರ ಸುಭಾವಗಳನ್ನು ಪರೀಕ್ಷಿಸುವದಕ್ಕಾಗಿ ಪರಮಾತ್ಮನು ಅವರನ್ನು ಬಾಧೆಗೀಡುಮಾಡುವದುಂಟು. ದಮಯಂತಿ ತಾರಾಮತಿಯರೂ ಸೀತೆ ದೌಪದಿಯರ ಭಗವಂತನೊಡ್ಡಿದ ಪಣದಲ್ಲಿ ತಾವೇ ವಿಜಯವನ್ನು ಹೊಂದಿದರೆಂಬ ಮಾತುಗಳನ್ನು ನಾವು ಪುರಾಣಗಳಲ್ಲಿ ಕೇಳುತ್ತೇವೆ. ಅಂಥ ಮಹಾಸತಿಯರು ಅರ್ವಾಚೀನವಾದ ಇತಿಹಾಸವನ್ನು ಅಲಂಕರಿಸಿದ ಉದಾಹರಣಗಳಾದರೂ ಆನೇಕವಾಗಿರುವವು. ನರಗುಂದದ ಸಾವಿತ್ರಿ ಬಾಯಿಯು ಆಂಧ ಮಹಾಸತಿಯರ ಮಾಲಿಕೆಯಲ್ಲಿ ಕಂಗೊಳಿಸುವ ಅನರ್ಘವಾದ ರತ್ನವೇ ಆಗಿರುವಳು

ಸಾವಿತ್ರಿಬಾಯಿಯು ತೇಜಸ್ವಿನಿಯಾದ ಸು೦ದರಿಯ ಸುಟ್ಟು ತಮ್ಮ ವಾದ ಆಚರಣದವಳ ಪ್ರೇಮಲವಾದ ಅಂತಃಕರಣದವಳ ಉಬಾರಚರಿ ತಳೂ ಆದ ಮಾನಿನಿಯು, ಶ.ಚಿಸ್ಮಿತೆಯಾದ ಆ ಮೃದುಭಾಷಿಣಿಯು ಅತಿಥಿ ಅಭ್ಯಾಗತರಿಗೆ ಮಾಡುತ್ತಿರುವ ಆದರಾತಿಥ್ಯಗಳು ಇಮ್ಮಡಿಯಾಗಿ ಸುಖಪ್ರದ ವಾಗುತ್ತಿದ್ದವು. ಸೇವಕಜನ ಆಶ್ರಿತ ಮುಂತಾದವರ ಪರಿಪೋಷಣವನ್ನು ಮಾಡುವದರಲ್ಲಿ ಆ ಹಿತೈಷಿಣಿಯು ಯಾವಾಗಲೂ ದಕ್ಷಳಾಗಿರುತ್ತಿದ್ದಳು. ಸೊಬಗಿನ ಹೂವಿಳ್ಯ, ವಸಂತ ಪೂಜೆ, ಗೌರೀಪೂಜನ ಮುಂತಾದ ಮಹೋ ತೃವಗಳ ಮೂಲಕ ನರಗುಂದದ ನಾರೀವೃಂದದಲ್ಲಿ ಆನಂದ ವಿನೋದ ಸ್ನೇಹಾಭಿವೃದ್ದಿಗಳನ್ನು ಅವಳು ಹೆಚ್ಚಿಸುತ್ತಿದ್ದಳು. ಕಥೆ, ಕೀರ್ತನ, ಪುರಾಣ, ಪುಣ್ಯ ಕಥೆ ಮುಂತಾದ ಧರ್ಮಜಾಗ್ರತಿಯ ಕೃತ್ಯಗಳಾದರೂ ಆ ಸಾದ್ವಿಯ ಪ್ರೋತ್ಸಾಹನದಿಂದಲೇ ನಡೆಯುತ್ತಿದ್ದವು. ಶಾಸ್ಪೋಕ್ತ ವಾದ ವ್ರತ ಉದ ಸನ ಜಪತಪಾದಿಗಳನ್ನು ಆ ಪುಣ್ಯವಂತಿಯಾಜ ಮಹಾಸತಿಯು ಆಸಕ್ತಿ ಯಿಂದ ಮಾಡ ತಿರುವದರಿಂದ ಅವಳಲ್ಲಿ ಕ್ರಿಯಾಸಿದ್ದಿ ವಾಕ್ಸಿದ್ದಿಗಳು ಪ್ರಾಪ್ತವಾಗಿದ್ದವೆಂಬದನ್ನು ಆಗಿನವರು ಮನಗಂಡಿದ್ದರು. ಮೈದೊಳೆದು ಮಡಿಯಾಗಿ ಆ ಶುಚಿತ್ರ ತೆಯು ವೃಂದಾವನಕ್ಕೆ ಬಂದು ತುಲಸೀ ಪೂಜನ ವನ್ನು ಮಾಡಿ ಪ್ರದಕ್ಷಿಣೆ ಮಾಡುವಾಗ ಭೂತಬಾಧೆಯವರೂ ಹಾವು ಚೇಳು ಗಳನು ಕಡಿಸಿಕೊಂಡವರೂ ಹೊಟ್ಟೆ ಕಡತ ಮುಂತಾದ ಬೇನೆಯವರೂ ಅಲ್ಲಿಗೆ ಬಂದು ಅವಳು ಕೊಟ್ಟ ತೀರ್ಥವನ್ನು ಸೇವಿಸಿ ವಾಸಿಯಾಗುತ್ತಿದ್ದರು. "ನಿನಗೆ ಒಳಿತಾಗುವದು ” "ನಿನ್ನ ಇಚ್ಛೆ ಕೈಗೂಡುವದು" ಎಂದು ಆ ಪುಣ್ಯಶೀಲೆಯು ಯಾರಿಗಾದರೂ ಹೇಳಿದ್ದರೆ ಅದರಂತೆಯೇ ಆಗುತ್ತಿತ್ತೆಂದು ಜನರು ಹೇಳುತ್ತಾರೆ. ಅನಸೂಯೆ ಅರುಂಧತಿ ಲೋಪಾಮುದ್ರೆ ಸಾವಿತ್ರಿ ಮುಂತಾದ ಮಹಾ ಸತಿಯರು ಪೂರ್ವ ಕಾಲದಲ್ಲಿ ತೋರಿಸಿದ ಮಾಹಾತ್ಮ ಗಳು ಕಟ್ಟು ಕಥೆಯೆಂದು ಸದ್ದು ಣಗಳ ಪ್ರಭಾವಕ್ಕೆ ಪರಕೀಯರಾದ ಜನರು ಹೇಳುತ್ತಿರುವರು. ಅಂಥವರು ನರಗುಂದದ ಸಾವಿತ್ರೀದೇವಿಯು ನಿನ್ನ ವೆನ್ನಿನ ಪ್ರತ್ಯಕ್ಷವಾದ ಉದಾಹರಣವನ್ನು ಕಂಡು ಬುದ್ದಿ ಗಲಿಯಲಿ. ಇಂಥ ಅತ್ಯುಚ್ಚವಾದ ಸುವ್ರತೆಯರು ನಿಮ್ಮ ಆರ್ಯಭೂಮಿಯಲ್ಲಿ ಮಾತ್ರ ಜನಿಸಿದ ರೆಂದೂ ಇನ್ನಾ ದರೂ ಜನಿಸಿದರೆ ಆರ್ಯ ಭೂಮಿಯಲ್ಲಿಯೇ ಜನಿಸುವರೆಂದೂ ನಮ್ಮ ವಾಚಕರು ಚನ್ನಾಗಿ ಲಕ್ಷ್ಮದಲ್ಲಿಡತಕ್ಕದ್ದು.

"ದೌರ್ಮ೦ತ್ರಾನ್ನ ಪತಿರ್ವಿನಶ್ಯತಿ” ಎಂಬಂತೆ ನರಗುಂದದ ಬಾಬಾಸಾಹೇಬನು ಮಮರುಕ ರಾದ ದುರ್ಜನರ ದುರ್ಬೋಧನಕ್ಕೆ ಕಿವಿ ಗೊಟ್ಟು ಇಂಗ್ಲಿಶ್ ಸರಕಾರದ ಮೇಲೆ ಬಂಡುಮಾಡಿದನು, ಬಾಬಾಸಾಹೇ ಬನ ಕ್ಷುದ್ರವಾದ ಸಂಸ್ಥಾನವೆಷ್ಟು ಮಾತ್ರದ್ದು, ಅವನ ಬಲವೇನು ಸುಟ್ಟಿತು, ಕತ್ತಿ ತುಬಾಕಿಗಳ ಉಪಯೋಗವನ್ನರಿಯದವರೂ ಸಮರವನ್ನು ಕಣ್ಣಿಲೆ ನೋಡದವರೂ ಆದ ನೂರಾರು ಜನ ರೆಂಟೆಯ ಬಂಟರನ್ನು ಕೂಡಿಸಿಕೊಂಡು ಆವಿಚಾರಿಯ ಮೂರ್ಖನೂ ಆದ ಬಾಬಾಸಾಹೇಬನು ಬಲಾಡ್ಯರಾದ ಇಂಗ್ಲಿಶ್ ಸರಕಾರದವರ ಮೇಲೆ ಬಂದು ಮಾಡ ಹೋದರೆ ಅದೆಲ್ಲಿಗೆ ಮುಟ್ಟು ವದು ? ಒಂದು ದಿನ ಒಪ್ಪತ್ತಿನಲ್ಲಿ ಬಾಬಾಸಾಹೇಬನ ಬಂಡು ಮುರಿದು ಹೋಗಿ ಅವನ ಸಂಸ್ಥಾನವು ಡಬ್ಬ ಬಿದ್ದು ಹೋಯಿತು. ( ಕಾಲಯುಕ್ತ ಸಂವತ್ಸರದ ಜೈಷ್ಠ ಶು, ೧೦ ಮಂಗಳವಾರ )

ವಿಜಯಿಯಾದ ಇಂಗ್ಲಿಶ್ ಸೇನಾಧೀಶನು, ನರಗುಂದ ಗ್ರಾಮವನ್ನು ಸುಲಿಯಬಹುದೆಂದು ತಳ್ಳಿ ಸೇನೆಗೆ ಆಪ್ಪಣೆಕೊಟ್ಟ ಮೇರಿಗೆ ಮರುದಿವಸ ಬುಧವಾರ ಪ್ರಾತಃಕಾಲದಲ್ಲಿಯೇ ಉದ್ರಿಕರಾದ ಆ ಸೈನಿಕರು ಕೇಕೆ ಹೊಡೆಯುತ್ತೆ ಊರಲ್ಲಿ ಹೊಕ್ಕರು. ಊರ ಅಗಸೆಯ ಬಾಗಿಲದಲ್ಲಿ ದೊಡ್ಡ ದೊಂದು ಆನೆಯು ಅಡ್ಡಾಗಿ ನಿಂತಿತ್ತು. ಗುಂಡುಗಳ ಕಡಾಟಕ್ಕು ಬರ್ಚಿಗಳ ಚುಚ್ಚು ವಿಕೆಗೂ ಅಂಜಿ ಸಜೀವವಾಗಿರುವ ಆ ಮಾಂಸದ ಸತ್ವ ತವು ಹಿಂತಿರುಗಿ ಊರಲ್ಲಿ ಹೊಕ್ಕು, ಸೈನಿಕರ ಹಾವಳಿಗೆ ಭೀತಿಗೊಂಡು ಸತ್ತೆ ಕೆಟ್ಟೆನೆಂದು ಓಡಾಡುತ್ತಿರುವ ಗ್ರಾಮವಾಸಿಗಳನ್ನು ತುಳಿಯುತ್ತೆ ಹಾಹಾಕಾರವನ್ನೆಬ್ಬಿಸಿ ಬಿಟ್ಟಿತು.

ಇಂಗ್ಲಿಶ್ ಸೈನಿಕರು ಊರಲ್ಲಿ ಸೇರಿದವರೇ ನೆಟ್ಟಗೆ ಶ್ರೀ ವೆಂಕಟೇಶನ ಗುಡಿಗೆ ಬಂದರು. ಪೂಜಾರಿಯು ದೇವರ ಆರ್ಚೆಯನ್ನು ನಡಿಸಿದ್ದನು. ಅಶಿಕ್ಷಿತರಾದ ಸೈನಿಕರು ವೆಂಕಟೇಶನ ಮೂರ್ತಿಯ ಮೇಲೆ ಗುಂಡುಹಾರಿಸಿ ಆ ಮೂರ್ತಿಯನ್ನು ಒಡೆದುಹಾಕಿದರು. ಗುಡಿಯಲ್ಲಿ ಇದ್ದದ್ದು ಬಿದ್ದದ್ದನ್ನೆಲ್ಲ ಸುಲುಕೊಂಡರು, ಬಳಿ ತಲಾ ಸೈನಿಕರು ಊರ ಜನರ ಮನೆಮನೆ ಹೊಕ್ಕು ಸುಲಿಗೆಯನ್ನು ನಡೆಸಿದರು. ಅರ್ಥ ಹಾನಿ ಮಾನಹಾನಿ ಧನಹಾನಿ ಪ್ರಾಣಹಾನಿಗಳು ಒದಗಿ ಬಂದಾಗ, ಪಾಷ, ಅಲ್ಲಿಯ ಜನರ ಮನಸ್ಸಿನ ಸ್ಥಿತಿ ಏನಾಗಿರಬೇಡ ! ಎದೆಯೊಡೆದು ಕೈ ಕಾಲುಗಳಲ್ಲಿಯ ನಾಡಿಗಳು ಸತ್ತಂತಾಗಿ ಆ ಜನರು ಅಲ್ಲಲ್ಲಿ ಪ್ರೇತ ಪಾಯರಾಗಿ ಬಿದ್ದು ಕೊಂಡಿದ್ದರು. ತನ್ನ ಮನೆ ಯಲ್ಲಿಯ ವಸ್ತು ವಡವೆಗಳುಳಿದರೆ ಶ್ರೀ ವೆಂಕಟೇಶನಿಗೆ ಟೆಂಕಿಯ ಮುಡುಪು ಕೊಡುವೆನೆಂದು ಕೃಪಣನಾದ ಕೋಮಟಿಗನು ಮನಸ್ಸಿನಲ್ಲಿಯೇ ಬೇಡಿ ಕೊಳ್ಳುತ್ತಿದ್ದನು. ಏನು ಹೋದರೂ ತನ್ನ ಜನಿವಾರವೊಂದುಳಿಯಲೆಂದು ಚಿಂತಿಸಿ ಸಾಧುಭಾವನಾದ ಬ್ರಾಹ್ಮಣನೋರ್ವನು ತನ್ನ ಯಜ್ಯೋಪವೀತ ವನ್ನು ಟೊಂಕದಲ್ಲಿಯ ಪಂಚೆಯಲ್ಲಿ ಅಡಗಿಸಿಟ್ಟ, ವೆಂಕಟೇಶಸ್ತೋತ್ರವನ್ನು ಆರಂಭದಿಂದ ದ ವರೆಗೆ ಕಣ್ಣು ಮುಚ್ಚಿ ಪಠಿಸುವಷ್ಟರಲ್ಲಿ, ಸೋಲ್ಡರನೊಬ್ಬನು ಆ ಬಡಬ್ರಾಹ್ಮಣನ ಬೆನ್ನು ಮೇಲೆ ಒಳಿತಾಗಿ ಗುಮ್ಮಿ ಅವನ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಎತ್ತಿಕೊಂಡು ನಡೆದನು. ಮತ್ತೊಬ್ಬರ ಮನೆಯಲ್ಲಿಯ ಮಡಿವಸ್ತ್ರಗಳ ಮರೆಯನ್ನು ಹರಿಹೊಡೆದು ಮುಸಲ್ಮಾನ ನಾದ ಸೈನಿಕನೊಬ್ಬನು ಅಲ್ಲಿಯ ದೇವರಮನೆ ಹೊಕ್ಕು ದೇವರ ಪೆಟ್ಟಿಗೆ ದೊಡ್ಡದೇವರ ಪೆಟ್ಟಿಗೆಗಳನ್ನು ಬಿಟ್ಟು ಬಿಚ್ಚಿ ನೋಡಿದನು. ಜಂಗಮರ ಮಠವನ್ನು ಹೊಕ್ಕು ಆಡ್ಡಾಡಿ ನೋಡಿ ಹೋಗುವಾಗ ಸಿಪಾಯಿಯೊಬ್ಬನು ತರುಣಿಯಾದ ಶರಣಮ್ಮನ ಮುಖವನ್ನು ವಿನೋದಕ್ಕಾಗಿ ಚುಂಬಿಸಿದ್ದರೆ ಆ ದುರಾತ್ಮನನ್ನು ದಂಡಿಸುವವರಾರು ? ಪಟ್ಟಣಸೆಟ್ಟಿಯು ತನ್ನ ಮನೆಯ ಇದ್ದ ಮುತ್ತು ಬಂಗಾರಗಳನ್ನು ಕಟ್ಟಿಕೊಂಡು ಪಾರಾಗಿ ಹೋಗಬೇಕೆಂದು ಮಾಳಿಗೆಯನ್ನೇರಿರಲು ಸೈನಿಕನೊಬ್ಬನು ಅವನನ್ನು ಹಿಡಿದು ನಮ್ಮ ನ್ನು ವಂಚಿಸಬೇಕೆಂದು ಮಾಡಿದ್ದಿಯಾ ?” ಎಂದು ನುಡಿದು ಆ ಅಪರಾಧಕ್ಕಾಗಿ ಅವನು ಆ ಸೆಟ್ಟಿಯನ್ನು ಒಳಿತಾಗಿ ತಳಿಸಿದನು. ಕಳ್ಳನಾರು? ಸೆಟ್ಟಿಯೇ ? ದುಷ್ಕರ್ಮ | ಬಾವಲಿಗಾಗಿ ಸೈನಿಕರು ಪುರುಷ೮ ಕಿವಿಗಳನ್ನು ಹರಿದರು; ನತ್ತುಗಳಿಗಾಗಿ ಹೆಣ್ಣು ಮಕ್ಕಳ ಮೂಗುಗಳನ್ನು ಹರಿದರು, ತಮಗೆ ಬೇಕಾಗದಿದ್ದ ಕಾಳುಕಡಿಗಳನ್ನು ಆ ಮೂಥರು ನೆಲದ ಪಾಲು ಮಾಡಿ ಹೊಗ ಬೇಕೆ ? ಭಾಡಬಡಕಲುಗಳನ್ನು ಈಡಾಡಿ ಒಡೆದರು, ಅರಿವೆ. ಅಂಚಡಿಗಳಿಗೆ ನರಗುಂದದ ಸಾವಿತ್ರಿಬಾಯಿ

ಬೆಂಕಿಹಚ್ಚಿದರು. ಸುಲಿಗೆಯೇ ಅದು, ಯಾರಿಗೆ ದೋಷವನ್ನಿಡುವಿರಿ ? ತನ್ನ ಅಚಾತುರ್ಯದ ಮಣಲಕವ:ಗಿ ಗ್ರಜರಿಗೆ ಇಂಥ ವ್ಯಸನವನ್ನು ತಂದಿಟ್ಟ ಬಾಬಾಸಾಹೇಬನೇ ದೊ ಮು; {{3} =YTಾ…? ತits, ಸುಲಿಗೆಯ ಗೊಂದಲವು ಸಿ * ಬಂದಿ ವಗೆ ಬಾಭ" ಸಾಹೇಬನ ಮನೆಯ ಹೆಂಗಸರನ್ನು ಬ೦ದಿಗಳನ್ನಗಿ ಮಾಡಿ ತರಬೇಕೆಂದು ಸೇನಾಧಿ ಕಾರಿಯ ಅಪ್ಪಣೆಯಾಯಿತು. ಕೇಳುವಟೇನು ? ಹಬಲಿಯು ಅರಮನೆಯ ಕಡೆಗೆ ಮತ್ತೆ ನಡೆದಿತ್ತು. ಬಾಬಾಸಾಹೇಬನ ಪತ್ನಿಯಾದ ಸಾವಿತ್ರಿಬಾಯಿ ಯನ್ನೂ ಆವನ ಮಲತಾಯಿ: ಮಾದ ಯಮುನಾಬಾಯಿಯನ್ನ ಹಿಡಿ ತಂದು ಕೊಟ್ಟವರಿಗೆ ಇನಾಮು ಸಿಕ್ಕುವದಿತ್ತಾದ ಕಾರಣ ಸೈನಿಕರು ಅರಮನೆಯನ್ನು ಬಹುಪರಿಯಾಗಿ ಶೋಧಿಸಿ ನೋಡಿದರು. ಆ ಹೆಣ್ಣುಮಕ್ಕಳು ಸಿಕ್ಕಲೇ ಇಲ್ಲ, ರಾಜನ ಕಾರಭಾರಿ ಪುರೋಹಿತ ಆಿತ ಮುಂತಾದವರ ಮನೆಗಳನ್ನು ಅವರು ಅಗಿದು ನೋಡಿದರು. ಆ ಸ್ತ್ರೀಯರೆಲ್ಲಿಯೂ ಸಿಕ್ಕಲಿಲ್ಲ. ಆ ರಾಜಸ್ತ್ರೀಯರನ್ನು ಹಿಡಿಯು ಮಾನ ತೆಗೆದುಕೊಳ್ಳಬೇಕೆಂಬ ಆಗ್ರಹವು ಇಂಗ್ಲಿಶ್ ಅಧಿಕಾರಿಗಿಲ್ಲದಿದ್ದರೂ ಸ್ವಾಮಿಟ್ರೋಹಿಗಳೂ ಉಂಡಮನೆಯ ಗಳಗಳನ್ನೆಣಿಸುವವರೂ ಆದ ನರಾಧಮರಾದ ಬಾಹ್ಮಣರಿಗೆ ಅ೦ಥ ಆಗ್ರಹವು ಅಧಿಕವಾಗಿತ್ತು. ಆದರೂ ಆ ಪಾಪಿಗಳ ಕೈಗೆ ಆ ಪುಣ್ಯಾತ್ಮಿಯರು ಸಿಕ್ಕಲೇ ವ್ಯ: ಮಂಗಳವಾರ ಮಧ್ಯರಾತ್ರಿಯ ಸುಮಾರಕ್ಕೆ ಯಾರೆಣ? ಇಬ್ಬರು ಕಂಬಳಿಯ ಮುಸುಗಿಟ್ಟು ಕೊಂಡು ನರಗುಂದದಿಂದ ದಕ್ಷಿಣಾಭಿಮುಖಿಗಳಾಗಿ ನಡೆದಿದ್ದರು. ಬೆಳದಿಂಗಳು ಮುಳುಗಿ ಹೋಗಿದೆ; ಜನರು ಹೋಗಿ ಬರುವ ದಾರಿಯಲ್ಲಿಯೂ ಕಾಣಲಿಲ್ಲದು. ಆ ಪ್ರಯಾಣಸ್ಥರು ಬಹು ಕಷ್ಟದೊಂದಿಗೆ ನಡೆದಿದ್ದರು. ಯಾರವರು ? ಎಲ್ಲಿಗೆ ನಡೆದಿರುವರು ? ಅವರ ಆಕೃತಿಗಳನ್ನು ನೋಡಿದರೆ ಅವರು ಹೆಣ್ಣು ಮಕ್ಕಳಾಗಿ ತೋರಿದರು. ಶ್ರೀ ಕೆ. ಅಲ್ಲಿ ನೋಡಿರಿ; ಓರ್ವಳು ದೊಡ್ಡದೊಂದು ಮುಳ್ಳು ಹೆಟ್ಟವನ್ನೆಡವಿ ಧಡಕ್ಕದೆ ಬಿದ್ದಳು. ಮತ್ತೋರ್ವಳು ಅವಳನ್ನು ಎತ್ತಿಕೊಳ್ಳಲು ಯತ್ನ ಮಾಡುತ್ತಿರುವಳು, ಬಿದ್ದವಳು ಸುವಾಸಿನಿಯಾದ ಸ್ತ್ರೀಯು ಅವಳುಟ್ಟಿರುವ ಜರದ ದುಕೂಲದ ಮೇಲಿ೦ದಲೂ ಮೈಮೇಲಿನ ರತ್ನ ಖಚಿತವಾದ ಆಭರಣಗಳ ಮೇಲಿಂದಲೂ ಅವಳು ಘನವಂತನೋರ್ವನ ಹೆಂಡತಿಯಾಗಿರಲಿಕ್ಕೆ ಸಾಕು. ಮತ್ತೋರ್ವಳು ಕೆಂಪು ಸೀರೆಯನ್ನುಟ್ ವಳು ಬ್ರಾಹ್ಮಣರ ವಿಧವೆಯು. ಅನನುಭೂತವಾದ ಶ್ರಮಕ್ಕಾಗಿಯ ಹೊಟ್ಟೆಯೊಳಗಿನ ದುಃಖಕ್ಕಾಗಿಯೂ ಆ ಕೋಮಲೆಯರ ಕುತ್ತಿಗೆ ಶಿರಬಿಗಿದು ಬಾಯೊಳಗಿಂದ ಶಬ್ದಗಳು ಚನ್ನಾಗಿ ಹೊರಡಲಿಲ್ಲವು.

"ಸಾವಿತ್ರಿ ಬಾಯಿ, ಮಗುವೆ, ಎಂಥ ಭರದಿಂದ ಮುಳ್ಳು ಕೊಂಪೆಯನ್ನೆಡನಿದಿ ಅಮ್ಮಾ" ಎಂದು ನುಡಿದು ಆ ಮುದುಕೆಯು ತಾನೂ ಆಲ್ಲಿ ಕುಳಿತು ಸಾವಿತ್ರಿಬಾಯಿಯ ಕಾಲು ಹಿಡಿದು ನೋಡಿದಳು.

"ಕೆಟ್ಟ ಕಗ್ಗತ್ತಲೆ. ನನ್ನ ಕಣ್ಣಿಗೆ ಈ ಮುಳ್ಳು ಕಾಣಿಸಲೇ ಇಲ್ಲ. ಕಾಲುತುಂಬ ಮುಳ್ಳು ಮುರಿದವು.”

"ಅಯ್ಯೋ ! ಕಲ್ಲುಗುಂಡಿಗಳನ್ನು ತುಳಿದು ತುಳಿದು ನಿನ್ನೀ ಕೋಮಲವಾದ ಪಾದಗಳು ಬಾಳು ಹುಣ್ಣಾಗಿಹೋಗಿವೆ. ಅಂಥದರಲ್ಲಿ ಈ ಮುಳ್ಳುಗಳು ನಟ್ಟಿದ್ದರಿಂದ ನಿನ್ನ ಕಾಲೆಲ್ಲ ರಕ್ತಮಯವಾಗಿ ಹೋಗಿದೆ ! ” ಎಂದು ಸಾವಿತ್ರೀಬಾಯಿಯ ಅತ್ತೆಯು ಸೊಸೆಯ ಕಾಲು ಹಿಡಿದು ನೋಡಿ ನಿಟ್ಟುಸುರು ಬಿಟ್ಟಳು.

"ಅತ್ತೆಯವರೆ, ಹಿರಿಯ ಮನುಷ್ಯರಾದ ನೀವು ನನ್ನ ಕಾಲುಹಿಡಿಯಬಹುದೆ? ಬಿಡಿರಿ ; ನಾನೇ ಮುಳ್ಳುಗಳನ್ನು ಕಿತ್ತಿ ತೆಗೆಯುತ್ತೇನೆ." ಎಂದು ಸಾವಿತ್ರೀಬಾಯಿಯು ಆರ್ತಸ್ವರದಿಂದ ನುಡಿದಳು.

"ಇಂಥ ದುರ್ಧರವಾದ ಪ್ರಸಂಗವು ಬಂದೊದಗಿದಾಗ ಹಿರಿ-ಕಿರಿತನಗಳನ್ನು ಕಟ್ಟಿಕೊಂಡೇನು ಪ್ರಯೋಜನ? ನನ್ನ ಸೊಸೆಯೇ, ನಿನ್ನ ಕಾಲಲ್ಲಿಯ ಮುಳ್ಳು ತೆಗೆಯಗೊಡು. ಇಲ್ಲಿ ನಿನಗೆ ಉಪಚಾರವನ್ನು ಮಾಡುವವರು ಯಾರಿದ್ದಾರೆ?"

"ಅಮ್ಮಾ, ಮುಳ್ಳುಗಳೆಲ್ಲ ಮುರಿದುಹೋಗಿವೆ. ತೆಗೆಯಲಿಕ್ಕೆ ಬರುವಂತಿಲ್ಲ. ಮೇಲಾಗಿ ಇಲ್ಲಿ ಹೊತ್ತುಗಳೆಯುವಂತೆಯೂ ಇಲ್ಲ. ಹೇಗಾದರೂ ಮಾಡಿ ನಾನು ನಡಿಯುವೆನು. ಏಳಿರಿ."

"ಹೇಗೆ ನಡೆಯುವಿ ನನ್ನ ಗೌರೀ ! ದೈವವೇ, ನಮಗೆಂಥ ಕೆಟ್ಟ ಕಾಲವನ್ನು ತಂದಿಟ್ಟಿ ? ಸಾವಿತ್ರೀಬಾಯಿ, ಒಂದು ಕ್ಷಣಹೊತ್ತಾದರೂ ವಿಶ್ರಾಂತಿಯನ್ನು ಪಡೆ. ” ಎಂದು ಅತ್ತೆಯಾದ ಯಮುನಾಬಾಯಿಯು ಸೊಸೆಯ ಮೈದಡವಿ ಕಣ್ಣು ತುಂಬಾ ನೀರು ತಂದು ಬಿಕ್ಕಿ ಬಿಕ್ಕಿ ಅತ್ತಳು.

"ಅಮ್ಮಾ, ಯುವವುರಿಯ ಮಾರ್ಗವನ್ನು ಹಿಡಿದು ನಡೆದವರಾದ ನಮಗಿನ್ನು ಮಧ್ಯದಲ್ಲಿ ವಿಶ್ರಾಂತಿ:: ಕ್ಷೆಣಿ. ಕೆ ? ಆಮಂಗಲವಾದ ದೇಹವು ಭಿನ್ನ ಮಾದರೀನು, ನಿಚ್ಛಿನ್ನ ದನಿ: ? ಕಾಲ: ಸೀಳಿ ರಕ್ತ ಸುರಿದರೇನು; ತಲೆಯೊಡೆದು ಜೊf tಾ ದನ? ಒಕ್ಕೆಯವರೇ. ನಾವಿನ್ನು ಕಾಲಕಳೆದರೆ ೯ಣಕ್ಕಿಂತಲೂ ಅಸಹ್ಯವಾಗಿರುವ ಅಮರ್ಯಾದೆಯು ನಮ್ಮನ್ನು ಆ ಕಳಿಸಿಕೊಳ್ಳದೆ ಬಿಡದು, ಶತ್ರುಗಳು ನಮ್ಮನ್ನು ಹುಡುಕುತ್ತಿರುವ ದಿತು. ಅವರ ಕೈಗೆ ನಾಸ್ತಿ ಸಿಕ್ಕಿದೆನಾದರೆ ನಮ್ಮ ಕೀರ್ತಿ ಕಲೇವರಗಳೆರಡೂ ಕೆಟ್ಟ ತ ಳಾ:ಹೋಗುವವು ಏಳಿರಿ ಎಂದು ನುಡಿದು ನರಗುಂದದ ರಾಣಿ ಗಾದೆ ಸಾವಿತ್ರೀ ದೇವಿಯು ವನಚರ ರಂತೆ ಜಿಡವಿ?\fಡಾಗಿ ನಡೆಯಲ: ರಫಿ: ಸಿದಳು,

"ಸಾವಿತ್ರೀ, ಪುರಾಣದಲ್ಲಿಯ ಸ, ನಿತಿಗೆ ಹಿ? ೮ಾದ ನನ್ನ ಸಾವಿತ್ರಿ, ನಿನ್ನಿ ಪುಣ್ಯದ ದೇಹವು ಅಮಂಗಲವಾದದ್ದೆಂದು ಸರ್ವಥಾ ಹೇಳಿ ಬೇಡ ಕಂಡಿಯಾ, ಪತಿ ವ್ರತಾಮಣಿಯೆ, ಮತ್ತಾರಿಗೋಸ್ಕರವಾಗಿರದಿದ್ದರೂ ನಿನ ಗೋಸ್ಕರವಾಗಿಯಾದರೂ ಶ್ರೀ ವೆಂಕಟೇಶನು ನಮಗಿನ್ನಾದರೂ ಸುದಿವಸ ಗಳನ್ನು ತೋರದೆ ಇರನು.”

"ಯಮುನಾಭಾಯಿಸಾಹೇಬ , ನಿಮ್ಮ ಹುಚ್ಚುತನವನ್ನೆಂದು ಹೋಗಬೇಕು ? ಪ್ರಾಣ ಹೋದ ಬಳಿಕ ವೈದ್ಯನ ಚಿಕಿತ್ಸೆಯಿಂದೇನಾTS ವದು ? ಯಜಮಾನರ ಪತ್ರಣ ಕೈಯೇ ಸಂಕಟ ಬಂದೊದಗಿದೆ ಯಂತೆ ! ಇನ್ನು ನಮಗೆ ಸುದಿವಸಗಳನ್ನು ತೋರು ನಮ ನೆಕಟೇಶನ ಕೈಯಲ್ಲಿಯ ಉಳಿದಿಲ್ಲ. ಸುಮ್ಮನೆ ಹಾದಿ ಹಿಡಿಯಿರಿ, ಎಂದು ಸಾವಿತ್ರಿಬಾಯಿಯು ನಿಶ್ಚಯದ ಮಾತುಗಳನ್ನಾಡಿದರೂ ಅವಳ ಹೊಟ್ಟೆಯಲ್ಲಿ ದುಃಖವು ಬಾರಿ ಬಂದಿತು ಸತಿಯ ನೆನಪಾದ ಕೂಡಲೆ ಹೊಟ್ಟೆಯಲ್ಲಿ ಕಾಡ್ಮಿಚ್ಚು ಹೊಕ್ಕಂತಾಗಿ ಆ ಸತಿಯು ದೊಡ್ಡ ದನಿ ತೆಗೆದು ಕಿತ್ತಳು.

ಯಮುನಾಬಾಯಿಯು ಸೊಸೆಯನ್ನು ತಬ್ಬಿಕೊಂಡು ಇಾನ ಗೋಳಿಟ್ಟು ಆತ್ತು 11 ಪ್ರಜಾವಲೆಯಾದ ದೇವಿಯೆ, ನಿನಗಿಷ್ಟು ದುಃಖ ಸಂಪೂ ೧೯• ಕಥೆಗಳು ವಾದೀತೆಂದು ನಾನು ಬನಸಿನಲ್ಲಿಯೂ ಕಂಡವಳಲ್ಲ. ಭಕ್ತಾಭಿಮಾನಿಯಾದ ನಮ್ಮ ವೆಂಕಟೀಶನು ಹೀಗೆ ನಡುನೀರಲ್ಲಿ ಬಿದ ಕ್ಕಿಲ್ಲ. ನನ್ನ ಬಾಬಾನಿಗೆ ಕಡೆಗೆ ಏಜಯವಾಗುವದೆ: ದು ರಾಜfಯಿ ಸದು ಕೂಚ ಕೇಳಿರುವರು, ” ಎಂದು ಸಾವಿತ್ರಿ ಬಾಯಿಗೆ ಸಮಾಧಾನ ಲೇ ,ಲು ಯತ್ನಿಸಿದಳು, ( ಹುಚ್ಚು ಮಾತಿದು , ನವಗ್ರಹಗಳೂ ಜೋಯಿಸರೂ ನನಗೆ ನಿಜಯವನ್ನು ಗಳಿಸಿಕಬಲ್ಲರಾದರೆ ಜರಿಗೆ ನೀತಿಶಾಸ್ತ್ರಗಳೇಕೆ ಬೇಕು? ಚತುರ ಸಾಯ ಸೇನೆ ಸೇನಾಪತಿಗಳಿಂದೇನು ಪ್ರಯೋಜನ ? ಜೋಯಿ ಸರ ಮಾತು ಕೇಳಿದಲ್ಲಿಯೇ ನಮ್ಮ ರಾಜ್ಯವು ಕ್ಷಣಾರ್ಧದಲ್ಲಿ ಕಪ್ಪು ರದಂತೆ ಸುಟ್ಟು ಹೋಗಿ, ಅದರ ಬೂದಿ ಕೂಟ ಉಳಿಯಲಿಲ್ಲ ನಡೆಯಿರಿನ್ನು, ಹಾದೀ ಹಿಡಿಯೋಣ, ” ಮುಂದೆ ಕೆಲಮಟ್ಟಿಗೆ ಹಾದಿ ನಡೆದ ಬಳಿಕ ಯಮುನಾಬಾಯಿಯು ಮತ್ತೆ ತನ್ನ ಸೊಸೆಯನ್ನು ಕುರಿತು ( ಸಾವಿತ್ರಿಬಾಯಿ, ಇಷ್ಟು ಬೇಗನೆ ನಾವು ಆತ್ಮಹತ್ಯೆಯನ್ನು ಮಾಡಿಕೊಳ್ಳುವದು ಪಕ್ವವಿಚಾರದ ಮಾತಾಗ ಲಿಕ್ಕಿಲ್ಲ. ಪುರುಷರ ಭಾಗ್ಯ೦ತಿರುವದೆಂಬ ಮಾತು ದೇವತೆಗಳಿಗೆ ಕೂಡ ತಿಳಿಯದ ಮಾತ೦ತೆ, ದೇವರ ಕೃಪೆಯಿಂದ ನಮ್ಮ ಬಾಬಾನಿಗೆ ವಿಜಯ ಪ್ರಾಪ್ತಿಯಾಗಿ ಅವನು ನರಗುಂದಕ್ಕೆ ರಾಜನಾಗಿ ಬಂದಾಗ, ನೀನು ಮಡಿದು ಹೋದ ವಾರ್ತೆಯು ನನಿಗೆ ತಿಳಿದರೆ ಎಷ್ಟು ವ್ಯಸನವಾಗಬೇಡ !” (( ಅಮಾ, ನಿಮಗೇಕೆ ದುರ್ಬುದ್ಧಿ ಹುಟ್ಟಿದಂತೆ ಕಾಣುತ್ತದೆ. ನಮ್ಮ ಯಜಮಾನರು ಆಡಗಿರುವ ಸ್ಥಳವನ್ನು ಗೃಹಭೇದಿಯಾದ ಆ ನರಾ ಧನನು ನಮ್ಮ ಶ ಸುಳಿಗೆ ತೋರಿಸಿ ಕೊಡಲಿಕ್ಕೆ ಹೊರಟಿದ್ದಾನಂತೆ. ಸಿಕ್ಕರೆ ಶತ್ರುಗಳು ಅವರ ಪ್ರಾಣವನ್ನು ತೆಗೆದುಕೊಳ್ಳದೆ ಬಿಡರು. ಅದಷ್ಟು ಸಂಭ್ರಮವನ್ನು ನೀವು ಹಣ್ಣು ಪಟ್ಟ : ಯೋ ಬಿಡ ಬೇಕೆನ್ನು ವಿರೇನು?' ಎಂದು ಸಾವಿತ್ರಿಬಾಯಿಯು ತಿರಸಾ ಬಿ.cಬ ನಿಹಿ ದಳು. ಆ ಮಾತು ಕೇಳಿ ಯಮುನಬೆಯ ಹೃದಯದಲ್ಲಿ ಭೀತಿ ದುಃಖ ಗಳು ಒಮ್ಮೆಲೆ ಭರದಿಂದ ಹೊಕ್ಕವು ಅವಳು ಧರಧರನೆ ನಡುಗಿ ನೆಲಕ್ಕೆ ಕೂಡ ಬಿದ್ದಳು. ಕಟ್ಟಡವಿಯ ನಟ್ಟ ನಡುವೆ ಕುಳಿತು ಅವಳು ಗಟ್ಟಿಯಾಗಿ ಅಳು ೬ರಲು, ಆದು ಅರಣ್ಯರೋದನವೆಂದು ನಾವು ಹೇಳಿದರೆ ಹೆಚ್ಚಿನದೇನಾಯಿತು? ನರಗುಂದದ ಸಾವಿತ್ರಿಬಾರ್ ಆಚರ ಐಹಿಕವಾದ ಸಕಲ ಬಂಧನಗಳನ್ನು ದೃಢನಿಶ್ಚಯವೆಂಬ ಶಕ್ಷ್ಯದಿಂದ ಹರಿದು ಚಲ್ಲಿ ವಿಕಾರರಹಿತಳಾಗಿದ್ದ ಸಾವಿತ್ರಿಬಾಯಿಯು ತನ್ನ ಮೇಲೆ ಕಡು ಕೊಂಡು ಬಿದ್ದಿದ್ದ ದುಃಖದ ಪರ್ವತವನ್ನು ತೃಣಪ್ರಾಯ ವಾಗಿ ಲೆಕ್ಕಿಸಿ ಧೈರ್ಯ ನನ್ನ ವಲ೦ಬಿಸಿ ಮಾರ್ಗಕ್ರಮಣವನ್ನು ಮಾಡಲಾರಂಭಿಸಿದಳು. ಮನಸ್ಸು ಎಷ್ಟು ಗಟ್ಟಿಯಾಗಿದ್ದರೇನು, ನಡೆಯಲು ಕಾಲುಗಳಲ್ಲಿ ಪ್ರಾಣ ಬೇಡವೆ ? ಆ ಸಾದ್ವಿಯ ಕೋಮಲವಾದ ಚರಣಕ ಹುಲಗಳು ಕಲ್ಲುಮುಳ್ಳು ಗಳ ಧಕ್ಕಡಿಗೆ ಭಿನ್ನ ವಿಚ್ಛಿನ್ನವಾಗಿ ಹೋಗಿದ್ದವು. ಒಚ್ಛೆ ಬಿಟ್ಟರೆ ಮೈತುಂಬ ಸಾವಿರ ಚೇಳುಗಳು ಕಡಿದಷ್ಟು, ವೇದನೆಯ ಆ ಕೋಮಲಾಂಗಿಗೆ ಆಗು ಕಿತ್ತು. ಆ ಗರತಿ- ಗಂಗಾದೇವಿಯ ಕಣ್ಣುಗಳಿಂದ ಆಶು ಪ್ರವಾಹಗಳು ನಡೆ ದವು. ( ಪರಮಾತ್ಮ, ಕೃಷ್ಣ, ' 8:33 ಇAT' ಎಂದು ಹೇಳುವಾಗ ನಿನಗೆ ಸುಲಭವಾಯಿತು. ಈ ದುಃಖವನ್ನು ಅನುಭವಿಸಲು ಬರ ಬಾರದೆ ? ಆಗಲಿ, ನಿನ್ನಿಚ್ಛೆ ! ” ಎಂದವಳೇ ಆ ಸತಿ ರು ತನ್ನ ಮೈಮೇಲಿನ ಶಾಲನ್ನು ಚರಚರನೆ ಸೀಳಿ ಪಟ್ಟಿಗಳನ್ನು ಮಾಡಿ ತನ್ನ ಪದಗಳಿಗೆ ಮಾದರಕ್ಷದಂತೆ ಸುತ್ತಿಕೊಂಡಳು. ಮುಂಚೆಗಿತ ಕಾಲೂರಿ ನಡೆಯಲು ಕೊಂಚ ಅನುಕೂಲ ವಾಯಿತು. ಅವಳು ಮುಂದಕ್ಕೆ ಹೆಜ್ಜೆ ಯನ್ನಿಟ್ಟಳು. ಸೊಸೆಯ ಕಷ್ಟವನ್ನು ನೋಡಿ ಅತ್ತೆಗೆ ಮಿತಿ ಮೀರಿದ ಖೇದವಾಯಿತು. ಅವಳು ದೇವರ ಹೆಸರಿ ಮಣ್ಣು ತೂರಿ ಹಾದಿ ಹಿಡಿದಳು. ಅವಿಕಾರಿಯಾದ ಪರಮಾತ್ಮನು ಆ ಮಗು ಕೆಯ ಮಾತುಗಳನ್ನು ಹಚ್ಚಿಕೊಳ್ಳಲಿಲ್ಲ; ತನ್ನ ಮೈ ಮೇಲೆ ಅವಳು ತೂರಿದ ಮಣ್ಣನ್ನು ಜಾಡಿಸಿಕೊಳ್ಳಲೂ ಇಲ್ಲ; ತನ್ನ ಸಂಕಲ್ಪವನ್ನೂ ಬಿಡಲಿಲ್ಲ. ಕೊಲ್ಲೂರಿಗೆ ಹೋಗಬೇಕೆಂದು ಹೊರಟವರಾದ ಆ ಸ್ತ್ರೀಯರು ಪಾದೀ ತಪ್ಪಿ ಸಂಗಳವೆಂಬ ಗ್ರಾಮಕ್ಕೆ ಬಂದರು. ಆ ಊರ ಮುಂದೆ ಮಲಪ್ರಭಾ ನದಿಯು ಹರಿಯುತ್ತಿತ್ತು, ಅವರು ಅಲ್ಲಿಗೆ ಬಂದಾಗ ಇನನ್ನಿ ಮರು ಯುಳಿದಿತ್ತು. ಆ ಊರ ಕಣ್ಣು ಮಕ್ಕಳು ಸುಸಜವಾಗಿ ಹಾಡುತ್ತೆ ಧಾನ್ಯ ಗಳನ್ನು ಬೀಸುತ್ತಿದ್ದರು. ಅಲ್ಲಲ್ಲಿ ಕೋಳಿಗಳು ಒಳಿತಾಗಿ ಕೂಗಿ, ಉದ್ಯಮ ಶೀಲರಾದ ಜನರನ್ನು ಆಲಸ್ಯಮಯವಾದ ನಿದ್ರಾವಸ್ಥೆಯಿಂದ ಎಚ್ಚರಗೊಳಿ ಸುತ್ತಿದ್ದವು. ಧಡಧಡನೆ ಹರಿಯುತ್ತಿರುವ ಮಲಪ್ರಭಾ ನದಿಯು ಜನರ ನಾಲ್ಕು ಗಳಿಗೆ ಮೈ- ಕೈಗಳನ್ನೂ ಅರಿವೆ-ಅಂಚಡಿಗಳನ್ನೂ ನಿರ್ಮಲವಾಗಿ ತೊಳೆಯುವೆನು ಬನ್ನಿರೆಂದು ಕೂಗುವಳೋ ಎಂಬಂತೆ ಕಂಡಳು.

"ಸಾವಿತ್ರಿಬಾಯಿ, ನಾವು ಯಾವ ಊರಿಗೆ ಬಂದೆವು? ಇದು ಕೊಣ್ಣೂರ ಗ್ರಾಮದಂತೆ ತೋರುವದಿಲ್ಲ” ಎಂದು ಯಮುನಾಬಾಯಿಯು ಕೇಳಿದಳು.

"ಇದು ಕೊಣ್ಣೂರಲ್ಲ; ನಮ್ಮ ತೋಟ ಮಾವಿನ ಗಿಡಗಳ ಗುಂಪುಗಳು ಕಾಣುವದಿಲ್ಲ. ಆದರೂ ಇಲ್ಲಿಗಿಂತ ಕೊಣ್ಣೂರಲ್ಲಿ ಏನು ಹೆಚ್ಚಿದೆ ? ಇಲ್ಲಿಯೂ ಮಲಪ್ರಭಾಮಾತೆಯು ನಮ್ಮ ಕೊನೆಯ ಪ್ರಾರ್ಥನೆಯನ್ನು ಲಾಲಿಸಲು ಸಿದ್ಧಳಾಗಿಯೇ ಇರುವಳು. ಸಮಯವು ತೀರ ಸಮೀಪಿಸಿತು. ಐಹಿಕವಾದ ವಿಚಾರಗಳಿಗೆ ಇನ್ನೆಷ್ಟು ಮಾತ್ರವೂ ಆಸ್ಪದವನ್ನು ಕೊಡದೆ ಗಂಗಾಮಾತೆಯ ಉತ್ಸಂಗವನ್ನು ಆಶ್ರಯಿಸೋಣ.”

ಅವರೀರ್ವರೂ ನದಿಯ ತೀರಕ್ಕೆ ಬಂದರು. ಆಂದೆಯೇ ಸೋನೆ ಹೆಚ್ಚಾಗಿ ಬರುತ್ತಿರುವದರಿಂದ ಆ ಸ್ಥಳದಲ್ಲಿ ನೀರು ಆಳವಾಗಿತ್ತು. ಸಾವಿತ್ರಿಬಾಯಿಯು ಅದನ್ನು ನೋಡಿ ಒಂದು ಪ್ರಕಾರದ ವಿಲಕ್ಷಣವಾದ ಉತ್ಸಾಹವನ್ನು ಕಳೆದು “ನೋಡಿದಿರಾ ಅತ್ತೆಯವರೆ, ಗಂಗಾಮಾತೆಯು ತನ್ನ ಉದರದಲ್ಲಿ ನಮಗೆ ಸ್ಥಳಕೊಡ ಬೇಕಾಗಿರುವದರಿಂದಲೇ ಹೇಗೆ ಉಕ್ಕೇರಿ ಬರುತ್ತಿರುವಳು? ಬನ್ನಿರಿ, ಸ್ನಾನಮಾಡಿ ವೆಂಕಟೇಶನಿಗೆ ಕಡೆಯ ಪ್ರಣಾಮವನ್ನು ಮಾಡಿ ಈ ದುಃಖಸಾಗರವನ್ನು ದಾಟಿ ಹೋಗೋಣ” ಎಂದು ನುಡಿದು ಮಲಾಪಹಾರಿಣಿಯ ವಿಮಲವಾದ ಜಲದಲ್ಲಿ ತಾನು ಸ್ನಾನ ಮಾಡಿ ಅತ್ತೆಯ ಮೈ ತೊಳಿಸಿದಳು.

ಉತ್ತರಾಭಿಮುಖಿಯರಾಗಿ ನಿಂತು ಇಬ್ಬರೂ ನರಗುಂದದ ವೆಂಕಟೇಶ ನಿಗೆ ಪ್ರಾಮ ಮಾಡಿ ಗದಕಂಠಯರಾಗಿ ಕಣ್ಣೀರು ತಂದು “ದೇವ-ದೇವೇಶ, ಇದೆಲ್ಲ ನಿನ್ನಿಚ್ಛೆಗೆ ಬಂದಿತಲ್ಲವೆ ? ಆಗಲಿ. ನಿನ್ನ ಪಾದಾರವಿಂದದ ಸೇವೆಯನ್ನು ನಮಗೆ ನಿರಂತರವಾಗಿ ಕೊಡು ” ಎಂದು ಬೇಡಿಕೊಂಡರು.

ವೆಂಕಟೇಶನಿಗೆ ಪ್ರಣಾಮವಾದ ಬಳಿಕ ಸಾವಿತ್ರಿಬಾಯಿಯ ಹೃದಯವನ್ನೆಲ್ಲ ಬಾಬಾಸಾಹೇಬನ ಮೂರ್ತಿಯು ವ್ಯಾಪಿಸಿಕೊಂಡಿತು. ನಿರ್ಭರವಾದ ದುಃಖವು ಒಮ್ಮೆಲೆ ಒಟ್ಟರಸಿ ಬಂದಿತು. ದೊಡ್ಡ ದನಿ ತೆಗೆದು ಅವಳು ಅತ್ತಳು. "ಪತಿರಾಜ, ಪತಿರಾಜ! ನಿನ್ನ ಪಾದಾರವಿಂದಗಳಿಗೆ ಈ ದೀನೆಯಾದ ದಾಸಿಯ ಪ್ರಣಾಮ ಮಾಡುತ್ತಾಳೆ, ಸ್ವೀಕರಿಸಬೇಕು. ತಮಗೂ ತಮ್ಮ ಸಂಸ್ಥಾನಕ್ಕೂ ದೊಡ್ಡದೊಂದು ವಿಪತ್ತು ಬಂದಿರುವ ಸಂಗತಿಯನ್ನು ನೆನೆದೇ ನಾನು ವ್ಯಸನಪಡುತ್ತೇನೆ. ಇಲ್ಲವಾದರೆ ನಮ್ಮ ಮೂರ್ತಿಯ ಧ್ಯಾನವಾದಾಗ ನನಗೆ ದುಃಖವಾಗುವ ಬಗೆ ಹೇಗೆ ? ಹೋಗಿ ಬರುತ್ತೇನೆ, ಅಪ್ಪಣೆಯಿರಲಿ! ಪರಲೋಕದಲ್ಲಿ ತಮ್ಮ ಪಾದಾರವಿಂದಗಳ ಪ್ರವೇಶವಾಗುವದರೊಳಗಾಗಿಯೇ ದಾಸಿಯಾದ ನಾನು ಅಲ್ಲಿ ಸೇವೆಗೆ ಸಿದ್ಧಳಾಗಿರಬೇಕಲ್ಲವೆ? ” ಎಂದು ನುಡಿದ ಸಾವಿತ್ರಿಬಾಯಿಯ ಕೈಕಾಲುಗಳು ಥರಥರನೆ ನಡುಗಿದವು. ಮರ್ಧೆ ಬಂದು ಅವಳಲ್ಲಿಯೇ ನೆಲಕ್ಕೆ ಬಿದ್ದಳು. ಯಮುನಾಬಾಯಿಯು ಸೊಸೆಯನ್ನೆತ್ತಿ ತಬ್ಬಿಕೊಂಡು ಅವಳ ಕಣ್ಣುಗಳನ್ನು ನೀರಿನಿಂದ ತೊಳೆದು ಅವಳನ್ನು ಎಚ್ಚರಿಸಿದಳು.

"ಸಾವಿತ್ರೀದೇವಿ, ಇನ್ನೇನು ಮಾಡತಕ್ಕದ್ದು ಹೇಳು. ನೀನು ವಿಚಾರ ಶೀಲಳು. ನಾವು ಆತ್ಮಹತ್ಯೆಯ ಪಾಪಕೃತ್ಯವನ್ನು ಮಾಡಿ ಸಾಯಬೇಕೆ ?”

"ಇನ್ನೊಮ್ಮೆ ಸ್ನಾನ ಮಾಡೋಣ ಬನ್ನಿರಿ, ಆ ಮೇಲೆ ಹೇಳುವೆನು " ಎಂದು ಸಾವಿತ್ರೀದೇವಿಯು ಎದೆಮಟ್ಟಿಗೆ ನೀರು ಬರುವ ಸ್ಥಳಕ್ಕೆ ಬಂದಳು.

"ಇಲ್ಲಿ ನೀರು ಆಳವಾಗಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರೆ ಮುಳುಗಿಳುಗುವವು" ಎ೦ದು ಯಮುನಾಬಾಯಿಯು ತಟ್ಟನೆ ನಿಂತು ನುಡಿದಳು.

"ಮುದಿಹುಚ್ಚೆ! ಇನ್ನೇತರ ಆಂಜಿಕೆ” ಎಂದವಳೇ ಸಾವಿತ್ರೀ ದೇವಿಯು ಅತ್ತೆಯನ್ನು ತಬ್ಬಿಕೊಂಡು ಧುಡುಮ್ಮನೆ ನೀರಲ್ಲಿ ದುಮುಕಿದಳು.

ಹೋಯಿತು, ಮುಳುಗಿ ಹೋಯಿತು! ಅಲ್ಲಿ ನೋಡಿರಿ, ಭಗವಂತನು ಉಲ್ಲಾಸದಿಂದ ನಿರುಮಿಸಿದಂಥ ಮಕರಂದ ನಯವಾದ ಕುಸುಮವು ಹೇಗೆ ನೀರಲ್ಲಿ ಅಕಸ್ಮಾತ್ತಾಗಿ ಮುಳುಗಿಹೋಯಿತು! ಅಂಥ ಸೌಂದರ್ಯ, ಆಂಥ ಕಾಂತಿ, ಅಂಥ ಕೋಮಲತೆ, ಆ೦ಥ ಪರಿಮಳಗಳಿಂದ ಯುತವಾದ ಕುಸುಮವು ಪ್ರಫುಲ್ಲಿತವಾಗಿ ತಲೆದೋರಿತೇಕೋ, ಹಾಗೆ ಆಕಸ್ಮಾತ್ತಾಗಿ ಅಡಗಿಹೋಯಿತೇಕೋ, ಆಗಾಧಲೀಲನಾದ ಭಗವಂತನೊಬ್ಬನಿಗೇ ಗೊತ್ತು !


ವೀರಮಾತೆಯಾದ ದೇವಲದೇವಿ

ಈಗಿನ ಬುಂದೇಲಖಂಡದಲ್ಲಿ ಚಂದೇಲವಂಶದ ರಾಜರು ಪೂರ್ವಕಾಲದಲ್ಲಿ ಆಳುತ್ತಿದ್ದರು. ಅವರ ರಾಜಧಾನಿಯು 'ಮಹೋಬಾ ' ಎಂಬ ಪಟ್ಟಣವಿದ್ದು, ಆ ರಾಜ್ಯಕ್ಕಾದರೂ ಮಹೋಬಾ ರಾಜ್ಯವೆಂಬ ಹೆಸರಿತ್ತು. ದಿಲ್ಲಿಯಲ್ಲಿ ಪೃಥ್ವೀರಾಜ ಚವ್ಹಾನನು ಆಳುತ್ತಿರುವಾಗ ಮಹೋಬಾದಲ್ಲಿ ಪುರಮಲ್ಲನೆಂಬ ರಾಜನಿದ್ದನು. ಪುರಮಲ್ಲನ ಪೂರ್ವಜರು ಉದಾರರೂ, ಐಶ್ವರ್ಯವಂತರೂ, ವೀರರೂ ಆದ ರಾಜರಾಗಿಹೋದರು. ಪುರಮಲ್ಲನಾದರೂ ತನ್ನ ರಾಜ್ಯದಲ್ಲಿಯ ವೀರರಾದ ಸರದಾರರ ಪುಣ್ಯದಿಂದ ಅನೇಕಯುದ್ಧಗಳಲ್ಲಿ ವಿಜಯವನ್ನು ಸಂಪಾದಿಸಿಕೊಂಡಿದ್ದನು. ಹೀಗೆ ಆಯತ್ತವಾಗಿ ಪ್ರಾಪ್ತವಾದ ವಿಜಯಗಳಿಂದ ಕೊಬ್ಬೇರಿದ ಪುರ ಮಲ್ಲನು ನಿಷ್ಕಾರಣವಾಗಿ ಪರಪೀಡೆಮಾಚಲುದಕನಾದ್ದರಿಂದ ಸುತ್ತಲಿನ ರಾಜರು ಅವನ ನಾಶಮಾಡುವ ಉದ್ಯೋಗ ಮಾಡಿ, ಗೊಂಡರೆಂಬ ಸಂಸ್ಕೃತರಾದ ಜನಾ೦ಗೆದವರನ್ನು ಎಬ್ಬಿಸಿ ಮಕೊರ್ಟಬಾ ರಾಜ್ಯದ ಮೇಲೆ ಅಭಿಯೋಗ ಮಾಡಿಸಿದರು. ಕಾಡು ಜನರೂ ಕರರ ಬಲಾಡ್ಯರೂ ಆದ ಗೊಂಡಜನರು ಪುರಮಲ್ಲನ ಬಲವನ್ನು ತೀತಿರಿವಾಡಿ ಬಡಿದು ಅವನನ್ನು ಒತ್ತಿ ಹಣ್ಣು ಮಾಡಿದರು.

ಆಗ ಪುರನ ಮುಖ್ಯ ಸರದಾರನಾಗಿದ್ದ ಜಸ್ಸರಾಜನೆಂಬ ಅಸಹಾಯ ಶೂರನು ಕ್ಷುದನಾಗಿ ಉದ್ರಿಕ್ತರಾದ ತನ್ನ ಪಟುಭಟರನ್ನು ಕಟ್ಟಿಕೊ೦ಡು ಜನರ ಮೇಲೆ ಸಾಗಿಹೋದನು. ಕಡಗಲಿಯಾದ ಜಸ್ಸರಾಜನು ತನ್ನ ಪ್ರಂಚಡವಾದ ಸೇನೆಯನ್ನು ಕಟ್ಟಿ ಕೊ೦ಡು ತಮ್ಮ ಪಾರಿಪತ್ಯಕ್ಕಾಗಿ ಬರುವನೆಂಬ ವರ್ತಮಾನವನ್ನು ಕೇಳಿ ಗೊಂಡರಾದರೂ ತಮಗೆ ಪ್ರೋತ್ಸಾಕತನವನ್ನು ಕೊಟ್ಟಿರುವ ರಾಜರ ಬೆಂಬಲವನ್ನು ಹೊಂದಿ ಒಳ್ಳೇ ಸಾಹಸದಿಂದ ಕಾದಿದರು. ಆದರೆ ಜಸ್ಟರಾಜನ ಮುಂದೆ ಅವರ ಆಟ ಸಾಗಲಿಲ್ಲ. ಆ ಆ್ಯಂಕರವಾದ ಯುದ್ಧವಲ್ಲಿ ಸಹಸ್ರಾವಧಿ ಜನ ಗೊಂಡರು ರಣದೇವತೆಗೆ ಆಕುಶಿಯಾಗಿ ಹೋದರು, ಅವರ ಮುಖ್ಯ ಪಟ್ಟಣವಾದ ದೇವಗರಾ ಎಂಬ ಭವ್ಯವಾದ ಕೋಟಿಯು ನೆಲಸಮವಾಗಿಹೋಯಿತು. ಆ ಜನರ ಗ್ರಾಮಗಳೆಲ್ಲ ಸುಟ್ಟು ಹೋಗಿ ದೇಶವೆಲ್ಲ ಸ್ಮಶಾನದಂತೆ ಕಾಣಿಸಿತು. ಮಹೋಬಾದ ರಾಜನಾದ ಪುರಮಲ್ಲನ ಕೀರ್ತಿಗೆ ತಗಲಿದ ಕಲಂಕವನ್ನು ಜಸ್ಸತಾಜನು ಗೊಂಡಜನರ ರಕ್ತದ ಗುಂಡದಲ್ಲಿ ನಿರ್ಮಲವಾಗಿ ತೊಳೆದು ಹಾಕಿದನು.

ಆದರೆ ಮಹೋಬಾ ರಾಜ್ಯದ ದುರ್ದೈವದಿಂದ ವೀರಾಗ್ರೇಸರನಾದ ಜಸ್ಸತಾಜನು ಸಮರಾಂಗಣದಲ್ಲಿ ಮಡಿದು ನೀರಸ್ವರ್ಗವನ್ನೈದಿದನು. ಅವನ ಮರಣದಿಂದ ಆ ರಾಜ್ಯದ ಆಧಾರಸ್ತಂಭವೇ ಮುರಿದಂತಾಯಿತು. ಪುರಮಲ್ಲನಲ್ಲದಿದ್ದರೂ ಆವನ ರಾಣಿಯಾದ ಮುಲುಂದದೇವಿಯು ಮಡಿದುಹೋದ ಜಸ್ಸರಾಜನ ಪರದೇಶಿಗಳಾದ ಮಕ್ಕಳನ್ನು ಕರಿಸಿಕೊಂಡು ಅವರನ್ನು ತನ್ನ ಹೊಟ್ಟಮಕ್ಕಳಂತೆ ಜೋಕೆಮಾಡಿ, ಅವರು ದೊಡ್ಡವರಾದ ಬಳಿಕ ಅವರ ಸ್ವಾಸ್ತಿಯಾಗಿದ್ದ ಕಲಿಂಜರ ಕೋಟೆಯನ್ನೂ ಅದಕ್ಕೆ ಹೊಂದಿದ ಭೂಮಿ, ಸೀಮೆಗಳನ್ನೂ ಅವರ ಸ್ವಾಧೀನ ಮಾಡಿಸಿದಳು.

ಅಲಾ ಉದಿಲ್ಲರೆಂಬ ಜಸ್ಪರಾಜನ ಮಕ್ಕಳಾದರೂ ತಂದೆಗಿಂತಲೂ ಒಂದು ತೂಕ ಮಿಗಿಲಾದ ವೀರರೂ, ಕ್ಷಾತ್ರಧರ್ಮದಲ್ಲಿ ಒಳ್ಳೇ ಅಭಿಮಾನವುಳ್ಳವರೂ ಆಗಿದ್ದರು. ಭಾರತ ಮಹಿಲಾಮಣಿಗಳಲ್ಲಿ ಅತ್ಯಂತವಾಗಿ ವಿರಾಜಿಸುತ್ತಿರುವ ಶ್ರೀ ದೇವಲದೇವಿಯ ಹೊಟ್ಟೀಮಕ್ಕಳೇ ಅವರು ! ಆ ವೀರಪತ್ನಿಯಲ್ಲಿ ವಾಸಿಸುತ್ತಿರುವ ಸ್ವಕುಲಾಭಿಮಾನವೂ, ರಾಜನಿಷ್ಠೆಯ, ಸತ್ಯ ಪ್ರೀತಿಯ, ದೃಢನಿಶ್ಚಯವೂ ಆ ಮಾತೆಯ ಮಕ್ಕಳಲ್ಲಿ ಅನ್ಯೂನವಾಗಿ ಬಿಂಬಿಸಿದ್ದದ್ದು ಆಶ್ಚರ್ಯವೆ ? ಅಲಾ ಉದಿಲ್ಲರ ದರ್ಸವು ಪರರಾಯರ ಎದೆಯಲ್ಲಿ ಭೀತಿಯನ್ನುಂಟುಮಾಡಿತು; ಅವರ ಕ್ರುದ್ಧವಾದ ಕಟಾಕ್ಷಗಳನ್ನು ಕಂಡು ಅವನೀಶರೆಲ್ಲರೂ ನವರಾದರು ; ಅವರ ದಂಡಪಹಾರವು ಪುಂಡುಗಾರರ ಟೊಂಕವನ್ನು ಮುರಿದುಹಾಕಿತು. ಮಾನನೀಯರಾದ ಆ ಬಂಧುಗಳಿವರು ಮಹೋಬಾರಾಜ್ಯದ ಮಹನೀಯರಲ್ಲಿ ಸನ್ಮಾನ್ಯರಾಗಿದ್ದರು.

ಆದರೆ ಅಂಥ ಪರಮಸಾಹಸಿಗಳಾದ ಆಪದ್ಬಂಧುಗಳನ್ನು ಆದರಿಸಿ ತನ್ನ ರಾಜ್ಯದಲ್ಲಿಟ್ಟು ಕೊಳ್ಳುವ ಜಾಣತನವು ಪುರ ಮಲ್ಲನಲ್ಲಿ ಇರಲಿಲ್ಲ. ಅವಿಚಾರಿಗೆ ಸಾರಾಸಾರ ವಿಚಾರವೆಲ್ಲಿ? ಪುರಹರ ಕುಲಕಲಕನಾದ ಮಂಡೂರ ಪಟ್ಟಣದ ರಾಜನೋರ್ವನು ಮಹಾನುಭಾವರಾದ ಅಲ್ಲಾ ಉದಿಲ್ಲರಲ್ಲಿ ಮತ್ಸರವನ್ನು ತಾಳಿ, ಅವರ ವಿರುದ್ಧವಾಗಿ ಪುರಮಲ್ಲನ ಕಿವಿಯಲ್ಲಿ ಕುಮಂತ್ರವನ್ನು ಊದಿದ್ದರಿಂದ ಕಿವಿಹರಕನಾದ ಆ ರಾಜನು ಆ ವೀರರಾದ ಅಣ್ಣ ತಮ್ಮಂದಿರಲ್ಲಿ ಅಸೂಯೆಯನ್ನು ತಳೆದು, ಅವರೊಡನೆ ಇಲ್ಲದ ನೆವತೆಗೆದು ವ್ಯಾಜ್ಯ ಮಾಡಲಾರಂಭಿಸಿದನು. ಪುರಮಲ್ಲನೆಷ್ಟು ನೀಚನಾದರೂ, ಅವನು ರಾಜನು, ತಾವು ಪ್ರಜರೆಂಬ ತಾರತಮ್ಯವನ್ನರಿತು ರಾಜನಿಷ್ಠರಾದ ಆ ಬಂಧುವರ್ಯರು ತಮಗಾದ ಅಪಮಾನ ತೊಂದರೆಗಳನ್ನು ಅನಿರ್ವಾಹಕ್ಕಾಗಿ ನುಂಗಿಕೊಳ್ಳುತ್ತ ಹೋದರು.

ಆದರೂ ಸಹಿಷ್ಣುತೆಗಾದರೂ ಪರಿಮಿತಿಯುಂಟಷ್ಟೆ? ಒಂದು ದಿನ ಪುರಮಲ್ಲನು ಅಲಾ ಉದಿಲ್ಲರ ಮನೆಗೆ ಅತಿಥಿಯಾಗಿ ಬಂದು ಯಥೇಚ್ಛವಾಗಿ ಉಂಡು ತಿಂದು ಮರಳಿ ಹೋಗುವಾಗ ಅಲಾರಾಯನ ಪ್ರೀತಿಯ ಕುದುರೆಯನ್ನು ತನಗೆ ಕೊಡಬೇಕೆಂದು ಆಗ್ರಹದಿಂದ ಕೇಳಿದನು. ತೇಜಸ್ವಿಯಾದ ಕ್ಷತ್ರಿಯನು ತನ್ನ ಕೈಯಲ್ಲಿಯ ಖಡ್ಗವನ್ನಾಗಲಿ, ತಾನು ಹತ್ತುವ ಕುದುರೆಯನ್ನಾಗಲಿ ಪ್ರಾಣಹೋದರೂ ಅನ್ಯರಿಗೆ ಕೊಡುವನೆ ? ಅಲಾರಾಯನು ರಾಜನಿಗೆ ವಿನಯದಿಂದ ಬೆಸಗೊ೦ಡದ್ದೆ ನ೦ದರೆ : “ ರಾಜನ್, ಈ ಕುದುರೆಯು ನಮ್ಮ ತಂದೆಯವರು ಹತ್ತುವ ಕುದುರೆಯ ಮರಿಯು; ಇದನ್ನು ನಾನು ನನ್ನ ಜೀವಕ್ಕಿಂತಲೂ ಹೆಚ್ಚಾಗಿ ಜೋಕೆ ಮಾಡಿದ್ದೇನೆ. ರಾಜ ಇಚ್ಛೆಯಿದ್ದರೆ ಈ ದಾಸನ ಮನೆಯಲ್ಲಿದ್ದ ಬೇರೆ ಬೇಕಾದ ವಸ್ತುಗಳು ಅವರವೇ ಇವೆ. ಮಾತ್ರ ಈ ಕುದುರೆಯನ್ನು ಬಿಟ್ಟುಕೊಡಲು ನನಗೆ ಮನಸ್ಸಾಗದು.”

"ಅಲಾ, ನಾನು ಯಾರೆಂದು ತಿಳಿದು ನೀನು ಈ ನನ್ನ ಪ್ರಾರ್ಥನೆಯನ್ನು ನಿರಾಕರಿಸಿದಿ?" ಎಂದು ಪುರನಲ್ಲನು ಕ್ರುದ್ಧನಾಗಿ ಕೇಳಿದನು.

"ತಾವು ನನ್ನ ರಾಜರೆಂದೇ ನಾನು ವಿನಯದಿಂದ ವಿಜ್ಞಾಪನೆ ಮಾಡಿಕೊಳ್ಳುತ್ತೇನೆ. ಈ ಮಾತಿನಲ್ಲಿ ರಾಜರನ್ನು ಹೆಚ್ಚಿಗೆ ಆಗ್ರಹ ತೊಡಬಾರದು.”

"ಎಚ್ಚರದಿಂದ ಮಾತಾಡು, ಉದ್ದಾಮನೆ! ಒಳ್ಳೇ ಮಾತಿನಿಂದ ಈ ಕುದುರೆಯನ್ನು ನನಗೆ ಕೊಡುವಿಯೋ ಇಲ್ಲವೊ?" ಎಂದು ಪುರಮಲ್ಲನು ಗದ್ದರಿಸಿ ಕೇಳಿದನು.

"ಪುರ ಮಲ್ಲರಾಜ, ಯಃಕಶ್ಚಿತವಾದ ಕುದುರೆಯೇನು, ಅದರ ನಿಮಿತ್ತವಾಗಿ ನೀವು ನನ್ನೊಡನೆ ನಿಷ್ಠುರವಾಡುವದೇನು! ನಮ್ಮ ವೈರಿಯಾದ ಆ ಪುರಹರಕುಲಾಪಸದನ ಮಾತು ಕೇಳಿಕೊಂಡು ಕುದುರೆಯ ನೆವಮಾಡಿ ನೀವು ನಮಗೆ ಪೀಡೆ ಮಾಡಬೇಕೆಂದು ಯೋಚಿಸಿರುವಿರಿ. ಅದಕ್ಕಾಗಿ ನಾನು ಶಪಥದಿಂದ ಹೇಳುವದೇನಂದರೆ, ನೀವು ನಿಮ್ಮ ರಾಜ್ಯವನ್ನು ಕೊಟ್ಟರೂ ಈ ಕುದುರೆಯನ್ನು ನಾನು ನಿಮಗೆ ಕೊಟ್ಟವನಲ್ಲ ; ಏನು ಮಾಡುವದು ಮಾಡಿರಿ !” ಎಂದು ಅಲಾರಾಯನು ದರ್ಪದಿಂದ ನುಡಿದನು.

"ಮಾಡುವದನ್ನು ಮಾಡಬೇ? ಯಾರಲ್ಲಿ! ಸೇವಕರೆ, ಈ ಮೂಢರಾದ ಬಂಧುಗಳನ್ನು ಕಂಬಕ್ಕೆ ಬಿಗಿದು ಕುದುರಿಯನ್ನು ತೆಗೆದುಕೊಂಡು ನಡೆಯಿರಿ" ಎಂದು ನೀತಿಹೀನನಾದ ಆ ರಾಜನು ಆಜ್ಞೆಗೈದನು.

ಅಷ್ಟೊತ್ತಿನ ವರೆಗೆ ಸುಮ್ಮನಿದ್ದ ಉದಿಲ್ಲರಾಯನು ಸುಗಮಲ್ಲನ ಉದ್ದತವಾದ ನುಡಿ ಕೇಳಿ ಸಂತಪ್ತನಾಗಿ ಆವೇಶದಿಂದ ಖಡ್ಗವನ್ನು ಹಿರಿದು, "ಪುರಮಲ್ಲ, ನೀನೀಗ ರಾಜನಲ್ಲ, ಪರಸ್ವವನ್ನು ಬಲಾಕಾರದಿಂದ ಅಪಹರಿಸಬಂದ ಚೋರನು, ಈಗಿಂದೀಗಲೇ ಈ ಕೋಟೆಯ ಹೊರ ಬಿದ್ದು ಹೋಗು. ಜಸ್ಸರಾಜನ ಮಕ್ಕಳ ಕ್ರೋಧವನ್ನು ಪ್ರಜ್ವಲಿಸಿ ಬದುಕಿದವರಿಲ್ಲ !” ಎ೦ದು ರಾಜನನ್ನು ಅಧಿಕ್ಷೇಪಿಸಿ ನುಡಿದನು.

ಹೇಡಿಯು ಕೆಟ್ಟ ಮನಸ್ಸಿನವನಾದರೂ ಅವನು ಹೇಡಿಯೇ ಅಲ್ಲವೆ ? ಉದಿಲ್ಲನು ಚದರಿಸಿ ನುಡಿದ ಮಾತು ಕೇಳಿ ಪುರಮಲ್ಲನ ಎದೆ ಕಂಪಿಸಿತು. ಕಣ್ಣೆತ್ತಿ ಆ ತರ.ಣನ ಮುಖ ನೋಡಲು ಅವನಿಗೆ ಧೈರ್ಯ ಸಾಲಲಿಲ್ಲ. ಮಾತಾಡಲು ಉಸುರು ಬಂದ ಬಳಿಕ ಆ ರಾಜನು ಅಲಾನನ್ನು ಕುರಿತು ಅಂದದ್ದು : "ಪ್ರಜೆಗಳಾದದ್ದಕ್ಕೆ ನೀವು ನಿಮ್ಮ ರಾಜನನ್ನು ಒಳಿತಾಗಿ ಸಂಭಾವಿಸಿದಿರಿ. ಆಗಲಿ, ನೀವಿನ್ನು ನನ್ನ ರಾಜ್ಯದಲ್ಲಿ ಇರಲಾಗದು, ಈಗಿಂದೀಗಲೆ ನೀವು ಈ ಕೋಟೆಯನ್ನು ಬಿಟ್ಟು ನಡೆಯಿರಿ ನಿಮ್ಮ ಉಂಬಳಿಯು ಈ ಕ್ಷಣದಿಂದ ಸರಕಾರಕ್ಕೆ ಸೇರಿತು.”

"ಪುರವಲ್ಲ, ಕವಡೆಯ ನಿನ್ನಿ ಉಂಬಳಿಯನ್ನು ನಾನೆಷ್ಟು ಮಾತ್ರವೂ ಲೆಕ್ಕಿಸುವದಿಲ್ಲ. ಉದಾರಚರಿತಂದ ನಮ್ಮ ಪೂರ್ವಜರು ಈ ಸಿಂಹಾಸನದ ನಿಷ್ಠೆಗಾಗಿ ಇಲ್ಲಿ ನಿಂತು ಕೊಂಡಿದ್ದರಿಂದ ನಾವೂ ಇಲ್ಲಿ ನಿಂತೆವು ಭೂಸ್ವಾಗಳ ಆಶೆಗಾಗಿ ಯಾವ 2೦ಭಿಮಾನಿಯಾದ ನೀರನಾದರೂ ರಣರಂಗದಲ್ಲಿ ತನ್ನ ಶಿರಸ್ಸನ್ನು ಸಮರ್ಪಿಸಲು ಒಪ್ಪಲಾರನು. ರಾಜನಿಷ್ಠೆಗಾಗಿಯೇ ವೀರರು ತಮ್ಮ ಪ್ರಾಣವನ್ನು ಕೊಡುವರು, ನಮ್ಮ ತಂದೆಯಾದ ಜಸ್ಸರಾಜ ಬಹದ್ದರನು ತನ್ನ ಶಿರಃ ಕಮಲವನ್ನು ರಣದೇವಿಗೆ ಸಮರ್ಪಿಸಿ ನಿನ್ನೀ ತಲೆಯು ನಿನ್ನ ಧಡಕ್ಕೆ ಅಂಟಿಕೊಂಡಿರುವಂತೆ ಮಾಡಿದ್ದು ಭೂಸ್ಪಾಸ್ತಿಗಳ ಆಸೆಗಾಗಿ ಆಲ್ಲವೆಂಬದನ್ನು ನೀನು ಮರೆಯದಿರಲಾರಿ, ನಡೆ ! ನೀನು ನಿನ್ನ ಅರಮನೆಯಲ್ಲಿ ಸೇಂಕೊಳ್ಳುವದರೊಳಗಾಗಿಯೇ ನಾವು ನಿನ್ನಿ ಅನೀತಿಮ ಬರುವಾದ ರಾಜ್ಯವನ್ನು ಬಿಟ್ಟು ಹೋಗಿರುವೆವೆಂದು ತಿಳಿದುಕೋ !" ಎದು ಉದ್ರೇಕದಿಂದ ನುಡಿದು ಅಲಾರಾಯನು ಕೂಡಲೆ ತನ್ನ ಕಹಳೆಗಳನ್ನು ಊದಿಸಿದನು.

ತಮ್ಮ ನಾಯಕರದ ಅಲಾ ಉದಿಲ್ಲರು ರಾಜ್ಯವನ್ನು ಬಿಟ್ಟು ಹೋಗುವರೆಂಬ ವರ್ತಮಾನವನ್ನು ಕಲಿಂಜರ ಕೋಟೆಯಲ್ಲಿದ್ದ ಎರಡು ಸಾವಿರ ಜನ ಪಟುಭಟರಾದ ರಾವುತರು ತಮ್ಮ ಮನೆಮಾರುಗಳನ್ನು ಕಾಲಿಲೊದ್ದು ತಮ್ಮ ಯಜಮಾನರೊಡನೆ ತಾವೂ ಹೊರಟಿದ್ದು ಹೋಗಲು ಸಿದ್ದ ಭಾದರು. ಠಣವಾದ್ಯಗಳ ಘನವಾದ ನಿನಾದವೆಸಗಿತು. ಎರಡು ಸಾವಿರ ಕೆಜಿಗಳು ಕಲಿಂಜರ ಕೋಟಿ ಯ ಹೊರಗಿದ್ದ ಬೈಲಿನಲ್ಲಿ ನಿಂತು ಕೊಂಡು ಆರ್ಭಟಿಯಿಂದ ಕಿರುಳಿದವು. ರಾವುತರು ಧರಿಸಿರುವ ಭಾಲೆ ಖಡ್ಗಗಳು ಬಿಸಿಲಿನಲ್ಲಿ ಚಕ ಚಕನೆ ಹೊಳೆದವು. "ಜಸ್ಸರಾಜ ಮಹಾರಾಜಕಿ ಜಯ್! ” ಎಂಬ ರಣಗರ್ಜನೆಯೊಂದಿಗೆ ಅಲಾಉದಿಲ್ಲರು ಅ೦ದು ಕಲಿಂಜರವನ್ನು ಬಿಟ್ಟು ನಡೆದರು. ಫುರಗೊಟ್ಟು, ಒಕ್ಕಟ್ಟಿನಲ್ಲಿ ಓಡುತ್ತಿರುವ ಕುದುರೆಗಳ ಖುರಾಘಾತ ಕ್ಕೆದ್ದ ಕೆಂಧೂಲಿಯ ಆ ಉದ್ರಿಕ್ತವಾದ ಸೇನೆಯನ್ನು ಅಡಗಿಸಿತು. ಕಂಧೂಲಿಯ ಕಣ್ಮರೆಯಾಗುವವರೆಗೂ ಕಂಬನಿಗಳ ಮಿಡಿದಾರ್ತೆಯರಾಗಿ ಪುರನಾರಿಯರು ತಮ್ಮ ವೀರರು ಹೋದ ಮಾರ್ಗವನ್ನು ನೋಡುತ್ತಲೇ ಇದ್ದರು.

ವಿಜಯಶ್ರೀಯನ್ನು ಭುಜಕ್ಕೆ ಕಟ್ಟಿಕೊಂಡು ಬಿಜಯ ಮಾಡಿರುವ ಆ ವೀರರಿಗೆ ಎಲ್ಲಿ ಹೋದಲ್ಲಿ ಆಸ್ಪದವೇ ; ಎಲ್ಲಿ ಹೋದಲ್ಲಿ ಮರ್ಯಾದೆಯೇ. ಆ ಕಾಲದಲ್ಲಿ ಹಿಂದೂ ರಾಜರು ಎಬ್ಬಿಸಿರುವ ಆತ್ಮಕಲಹದ ಸುಯೇ ಆಗಿತ್ತು. ಅಂಥ ಸಮಯದಲ್ಲಿ ರಣಮರ್ದಕರಾದ ಎರಡು ಸಾವಿರ ಜನ ಕಲಿಗಳಾದ ರಾವುತರ ನಾಯಕರು ಆಯತ್ತವಾಗಿ ತನ್ನ ಆಶ್ರಯವನ್ನು ಬಯಸಿ ಬಂದದ್ದು ಕನೋಜದ ರಾಜನಿಗೆ ಬಂಗಾರವೇ ಆಯಿತು. ಅವನು ಆಲಾಉದಿಲ್ಲರನ್ನು ಬಹುಮಾನದಿಂದ ಎದಿಗೊFಂಡು ತನ್ನ ರಾಜಧಾನಿಗೆ ಕರೆತಂದು ಅವರಿಗೆ ಇನಾಮು ಜಾಗೀರುಗಳನ್ನು ಕೊಟ್ಟು ಇರಿಸಿಕೊಂಡನು.

ಈ ಸಂಗತಿಗಳಾಗಿ ಕೆಲವು ಕಾಲವಾದಮೇಲೆ, ದಿಲ್ಲಿಯ ಸಾರ್ವಭೌಮನಾದ ಪೃಥ್ವಿರಾಜ ಚವ್ಹಾನನಃ ಸಮೇತಾ ಪಟ್ಟಣದ ರಾಜನ ರೂಪವತಿಯಾದ ಮಗಳ ಮೋಹಕ್ಕೆ ಸಿಲ್ಕಿ, ಆ ಪಟ್ಟಣದ ಮೇಲೆ ಅಭಿಯೋಗ ಮಾಡಿ ತನ್ನ ರಮಣಿಯನ್ನು ಎತ್ತಿಕೊಂಡು ದಿಲ್ಲಿಯ ಹಾದೀ ಹಿಡಿದನು. ಮಲ್ಲನೂ, ಮಂಡೂರಿನ ರಾಜನೂ ಮೇವಾಡದ ರಾಜನ ಪಕ್ಷವನ್ನು ಹಿಡಿದು ಕನ್ಯಾಪಹಾರಿಯಾಗಿದ್ದ ಪೃಥ್ವೀರಾಜನ ಬೆನ್ನಟ್ಟಿ ಹೋದರು. ತಾನು ತಂದಿದ್ದ ಸುಮನೋಹರವಾದ ಸುಲಿಗೆಯನ್ನು ಸುರಕ್ಷಿತವಾಗಿ ಅಲ್ಲಿಗೆ ಒಯ್ಯುವ ಆವಸರವು ಪೃಥ್ವಿರಾಜನಿಗೆ ಇದ್ದದ್ದರಿಂದ ಸೊತಷ್ಟು ಸೋತು, ಗೆದ್ದಷ್ಟು ಗೆದ್ದವನಾಗಿ ಹಾಗೂ ಹೀಗೂ ಮಾಡಿ ಒಂದಾವರ್ತಿ ತನ್ನ ಕಾಮಿನಿಯೊಡನೆ ದಿಲ್ಲಿಗೆ ಬಂದು ಮುಟ್ಟಿದನು.

ಪೃಥ್ವೀರಾಜನ ಸೈನಿಕರಲ್ಲಿ ಅನೇಕರು ಕ್ಷತರಾಗಿ ಮಾರ್ಗದಲ್ಲಿ ಬಿದ್ದುಕೊಂಡಿದ್ದರು. ಕ್ಷಾತ್ರ ಕುಲಕಲಕನಾದ ಪುರಮಲ್ಲನು ನಿರಾಶ್ರಿತರಾಗಿ ಬಿದ್ದಿರುವ ಆ ಬಡ ಜನರನ್ನು ಹಿಡಿದು, ಕಟಕರು ಕುರಿಗಳನ್ನು ಕೊಲ್ಲುವಂತೆ, ಕನಿಕರವಿಲ್ಲದೆ ಕಡಿಸಿ ಚಲ್ಲಿಸಿದನು. ಹೃದಯದ್ರಾವಕವಾಗಿರುವ, ಆ ರಾಕ್ಷಸೀ ದುಷ್ಕೃತ್ಯದ ವರ್ತಮಾನವನ್ನು ಕೇಳಿ ಪೃಥ್ವಿರಾಜನು ಅತಿಶಯವಾಗಿ ಸಂಪತ್ತು ನಾಗಿ ಸಿಡಿಲಿನಂತೆ ಗಡಗಡನೆ ಗರ್ಜಿಸಿ ಪುರಮಲ್ಲನನ್ನು ರಸಾತಲಕ್ಕೆ ಮೆಟ್ಟಿಯೇ ತೀರುವೆನೆಂದು ಪ್ರತಿಜ್ಞೆ ಮಾಡಿ ಮಹೋಬಾ ಪಟ್ಟಣದ ಮೇಲೆ ಸಾಗಿಬಂದನು.

ದಿಲೀಶ್ವರನ ಸೇನಾಸಮುದ್ರವು ಪುಶ ಮಲ್ಲನ ರಾಜ್ಯದಲ್ಲಿ ಭೋರಿಟ್ಟು ಸೇರಿ ನಹಿಪ್ರತಿಯಾದ ಕೊಲೆಯನ್ನು ಮಾಡಲಾರಂಭಿಸಿತು. ಪೃಥ್ವೀರಾಜ ನಾರು, ಅವನಿಗೆದುರಾಗಿ ನಿಲ್ಲಲು ಪುರಮಲ್ಲನೆಷ್ಟರವನು!

        ಚೇಳಿನ ಮಂತ್ರವು ಗೊತ್ತಿಲ್ಲಾ
        ಹೋಗಿ ಹಿಡಿದ ಹಾವಿನ ಬಾಲಾ

ಎಂಬಂತೆ ಆವಿಮರ್ಶಕಾರಿಯಾದ ಆ ಪುರಮಲ್ಲನು ಇನ್ನೇನು ಗತಿಯೆಂದು ಬಾಯಿಬಿಡುತ್ತೆ ತನ್ನ ಮಂತ್ರಿಗಳೊಡನೆ ಆಲೋಚಿಸಬಂದನು. ಹೀಗೆ ಗಡ್ಡಕ್ಕೆ ಉರಿಹತ್ತಿದ ಸಮಯದಲ್ಲಿ ಯಾರೇನು ಮಾಡುವರು? ಆಗ ಪುರಮಲ್ಲನ ರಾಣಿಯಾದ ಮಲುಂದದೇವಿಯು ಪತಿಯನ್ನು ಒತ್ತಟ್ಟಿಗೆ ಕರೆದು ಅಂದದ್ದು : "ಹೇಗಾದರೂ ಮಾಡಿ ಅಲಾಉದಿಲ್ಲರನ್ನು ಕರಿಸಿಕೊಳ್ಳಿರಿ. ಆ ರಣಧುರಂಧರರಿಲ್ಲದೆ ಈಗಿನ ದುರ್ಧರವಾದ ಪ್ರಸಂಗವು ನೀಗುವಂತಿಲ್ಲ. ವೃಥಾಭಿಮಾನಕ್ಕೀಡಾಗುವ ಸಮಯವಿದಲ್ಲ. ಜಸ್ಸರಾಜನ ಮಕ್ಕಳು ಬರುವವರೆಗೆ ಆವಧಿಯನ್ನು ಕೊಡಬೇಕೆಂದು ದಿಲ್ಲಿಯ ಸಾರ್ವಭೌಮನಿಗೆ ಹೇಳಿಕೊಂಡರೆ, ಮಹಾವಂಶಸಂಭವನಾದ ಪೃಥ್ವೀರಾಜನು ಒಡಂಬಡದೆ ಇರಲಿಕ್ಕಿಲ್ಲ."

ಸೂರ್ಯಚಂದ್ರ ಅಗ್ನಿಯೇ ಮುಂತಾದ ದೇವತಾಸಂಭವರ ವಂಶಜರಾದ ಆ ಕಾಲದ ರಜಪೂತರು ಧರ್ಮಯುದ್ಧಕ್ಕೆ ತಲೆಬಾಗಿ ನಡೆಯುವರಾದ್ದರಿಂದ ಪೃಥ್ವಿರಾಜನು, ಪುರಮಲ್ಲನು ಕೇಳಿಕೊಂಡ ಅವಧಿಯನ್ನು ಕೊಡಲಿಕ್ಕೆ ಸಂತೋಷದಿಂದ ಒಪ್ಪಿಕೊಂಡನು. ಜಗ್‌ನುಷನೆಂಬ ವಾಕ್ಚತುರನಾದ ಚಾರಣನನ್ನು ಅಲಾಉದಿಲ್ಲರ ಮನವೊಲಿಸಿ ಅವರನ್ನು ಕರತರುವದ ಕ್ಯಾಗಿ ಕಳಿಸೋಣವಾಯಿತು. ಅನುನಯದಲ್ಲಿ ನಿಪುಣನಾದ ಆ ಚಾರಣನು ಹೊಟ್ಟೆಯೊಳಗಿನ ಹರಳು ಕರಗಿಸುವಂಥ ಕರುಣಾಜನಕವಾದ ನುಡಿಗಳಿಂದ ಅಲಾಉದಿಲ್ಲರನ್ನು ಕುರಿತು ನುಡಿದದ್ದು: “ಮಹಾನುಭಾವರೆ, ಭೀಮಾರ್ಜುನವಿಗೆ ಸಮಾನರಾದ ನಿಮ ೦ಥ ಮಹಾವೀರರು ಬದುಕಿರುವಾಗಲೆ ಶತ್ರುಗಳು ಒಂದು ನಿಮ್ಮ ಜನ್ಮಭೂಷಿಯಾದ ಮಹೊಬಾ ಪ್ರಾಂಶವನ್ನು ಹೊಕ್ಕು ಆದನ್ನು ಧ್ವಂಸ ಮಾಡುತ್ತಿರುವದನ್ನು ಅರಿತು ನೀವಿಲ್ಲಿ ನಿಶ್ಚಿಂತರಂತೆ ಕುಳಿತಿರಬಹುದೆ ? ನಿಮ್ಮ ಬೆಂಬಲವಿಲ್ಲದ್ದಕ್ಕಾಗಿ ಜಸ್ಟರಾಜರ ಪರಮ ಸ್ನೇಹಿತರಾದ ಬೀರಸಿಂಗ ನರಸಿಂಗ ಮುಂತಾದ ವೃದ್ದ ವೀರರೆಲ್ಲರೂ ಪೃಥ್ವೀರಾಜನ ಶಸ್ತ್ರಾಸ್ತ್ರಗಳ ಕಠೋರವಾದ ಪ್ರಕಾರಗಳಿಗೆ ಈಡಾಗದೆ ಮಡಿದುಹೋದರು. ಪರಮ ರಮಣೀಯವಾದ ಶ್ರೀಶವಹ ಪಟ್ಟಣವು ಸುಟ್ಟು ಬೂದಿಯಾಗಿ ಹೋಯಿತು. ಮನೆಮನೆಗಳಲ್ಲಿ ಪತಿವಿಯೋಗದ ದುಃಖದಿಂದ ಅಳುತ್ತಿರುವ ವಿಧವೆಯರ ಘೋರತರವಾದ ಆರ್ತ ಸ್ವರವು ಕೇಳುವವರ ಎದೆಗಳನ್ನು ಸೀಳಿ ಹೋಳಾಗಿ ಮಾಡುತ್ತಿರುವದು. ಈ ಸಮಯದಲ್ಲಿ ನೀವು ವಿಳಂಬ ಮಾಡದೆ ನಿಮ್ಮ ಜನ್ಮಭೂಮಿಯ ಮಾನರಕ್ಷಣೆಗಾಗಿ ಹೋರಟು ಬನ್ನಿರಿ." ಆ ಮಾತು ಕೇಳಿ ಅಲಾರಾಯನು ಕರಕರನ ಹಲ್ಲು ಕರೆದು "ಮಾತಾಡಬೇಡ ಜಗ್‌ನುಷ ! ನೃಪಕುಲಕಲಂಕನಾದ ಆ ಪುರಮಲ್ಲನ ಮೈಗೆ ಕಕ್ಕಡವನ್ನು ಸುತ್ತಿ ಪೃಥ್ವಿರಾಜನು ಅವನನ್ನು ಸುಡುತ್ತಿರುವದನ್ನು ನಾನು ಪ್ರತ್ಯಕ್ಷವಾಗಿ ಕಂಡರೂ ಬಿಡಿಸಿಕೊಳ್ಳುವವನಲ್ಲ ! ಪಿತೃವಿಹೀನನಾದ ಈ ನರಪಶುವನ್ನು ನಮ್ಮ ತಂದೆಯವರು ಎತ್ತಿ ಆಡಿಸಿ ಜೋಕೆ ಮಾಡಿದ್ದರ ಪ್ರತಿ ಫಲವು ನಮಗೆ ವನವಾಸನೆ ? ಕುಗ್ರಾಮದ ಇವನ ರಾಜ್ಯವನ್ನು ಬೆಳಿಸಿ ಘನತೆಗೇರಿಸಿದ್ದರ ಉಪಕಾರವನ್ನು ಇವನು ನಮ್ಮ ಪಿತ್ರಾರ್ಜಿತವಾದ ಆಸ್ತಿಯನ್ನು ಅಪಹರಿಸಿಕೊಂಡು ತೀರಿಸಿದನೆ ? ರಾಜನಿಷ್ಠೆಗಾಗಿ ಪ್ರಾಣವನ್ನು ತೃಣಕ್ಕೂ ಕಡಿಮೆಯಾಗಿಮಾಡಿ ರಣರಂಗದಲ್ಲಿ ಆಹುತಿಯಾಗಿ ಕೊಡುವವರಾದ ನಮ್ಮನ್ನು ಕೀಳರೆಂದು ತಿಳಿದು ಈ ಕೂಳನು ಮಾನಹಾನಿ ಮಾಡಿದನಲ್ಲಿ? ಖಲಭುಜಂಗನಾದ ಆ ಪುರಹರನೇ ನಿಮ್ಮ ರಾಜ್ಯವನ್ನು ಕಾಪಾಡಿಕೊಳ್ಳಲಿ. ನಡೆ; ನಾವು ಬರುವದಿಲ್ಲ ಹೋಗು ” ಎಂದು ನಿರ್ಭರ್ತ್ಸಿಸಿ ನುಡಿದನು.

"ಧೀರರೆ, ಇಂಥ ಪ್ರಜ್ವಲಿತವಾದ ಕ್ರೋಧಾಗ್ನಿಯು ನಿಮ್ಮಂಥ ಪರ ಮೋದಾರರಾದ ಮಹಾತ್ಮರ ಹೃದಯದಲ್ಲಿ ಮಾತ್ರ ವಾಸಿಸುತ್ತಿರುವದೆಂದೇ ಒಳಿತಾಗಿರುವದು. ನೀಚರ ಹೃದಯದಲ್ಲಿ ಅದು ಸೇರಿದ್ದಾದರೆ ಆ ದುರ್ಧರನಾದ ಬೆಂಕಿಯಿಂದ ಆ ಜನರು ತನ್ನಿಂದ ತಾನೇ ಸುಟ್ಟು ಹೋಗುತ್ತಿದ್ದರು. ಈ ಕೋಧಾಗ್ನಿಯನ್ನು ನೀವು ಪುನಮಲ್ಲರಾಜರ ಮೇಲೆ ಪ್ರಯೋಗಿ ಬಹುದಾದರೂ ಮಹಾಮಾತೆಯವರಾದ ಮಂಚದೇವಿಯರಲ್ಲಿ ಇದನ್ನು ನೀನೆಂತು ಪ್ರಯೋಗಿಸುವಿರಿ ? ರಾಣಿಯವರು ವ್ಯಸನಾಕರಃಗಿ ಕಣ್ಣೀರು ಸುರಿಸುತ್ತೆ ನನ್ನನ್ನು ಕುರಿತು ' ಜಗನುಷ, ನನ್ನ ಮಕ್ಕಳಂತಿರುವ ಆ ವೀರ ಬಂಧುಗಳಾದ ಅಲಾ ಉದಿಲ್ಲರೀ ಪ್ರಸಂಗದಲ್ಲಿದ್ದರೆ, ನಮಗೆ ಈ ದುರ್ದಶೆಯು ಪ್ರಾಪ್ತವಾಗುತ್ತಿದ್ದಿಲ್ಲ. ನನ್ನ ತೊಡೆಯ ಮೇಲೆ ಆಡಿ ಬೆಳೆದವರಾದ ಆ ಬಾಲಕರು ನನ್ನ ವಿನಂತಿಯನ್ನು ಸರ್ವಥಾ ನಿರಾಕರಿಸಲಿಕ್ಕಿಲ್ಲ. ಪ್ರಸಂಗದಲ್ಲಿ ಬರದಿದ್ದರೆ ನನ್ನ ಆಣೆಯಾಗಿದೆ ಎಂದು ಅವರಿಗೆ ಹೇಳು. ವೀರಮಾತೆಯವರಾದ ದೇವಲದೇವಿಯರಿಗೂ ನಾನು ಸೆರಗೊಡ್ಡಿ ಬೇಡಿ ಕೊಂಡಿರುವೆನೆಂದು ಹೇಳು.' ಹೀಗೆ ಆಜ್ಞಾಪಿಸಿ ನನ್ನನ್ನು ಕಳಿಸಿದ ರಾಣಿ ಯವರು ನಿಮ್ಮ ಮಾರ್ಗ ಪ್ರತಿಕ್ಷೆ ಮಾಡುತ್ತ. ಅರಮನೆಯ ಚಂದ್ರ ಶಾಲೆಯಲ್ಲಿಯೇ ನಿಂತುಕೊಂಡಿರುವರು. ನಿಮ್ಮ ಮೊರೆಯನ್ನು ಕಾಣದೆ ಅವರು ಬಾಯಿಯಲ್ಲಿ ನೀರು ಹಾಕುವದಿಲ್ಲವೆಂದು ಹೇಳಿದ್ದಾರೆ ನಡೆಯಿರಿ, ಉಪೇಕ್ಷೆ ಮಾಡುವ ಸಮಯವಿದಲ್ಲ. ನಿರಾಶೆಯ ಭರದಲ್ಲಿ ಆ ನಮ್ಮ ರಾಣಿಯವರು ಜೀವಕ್ಕೆ ಅಪಾಯವನ್ನು ಮಾಡಿಕೊಂಡರೆ ಮುಂದೆ ನಿಮ್ಮಲ್ಲಿ ಹುಟ್ಟಿದ ಪಶ್ಚಾತ್ತಾಪದ ಬೆಂಕಿಯು ಸಪ್ತ ಸಮುದ್ರಗಳಲ್ಲಿಯ ನೀರು ತಂದು ಹೋಯ್ದರೂ ನೊಂದಲರಿಯದು!”

ತನ್ನ ದೇಶದ ರಾಣಿಯೂ, ಜೀವದ ಗೆಳತಿಯ ಆದ ಶ್ರೀ ಮಲುಂದ ದೇವಿಗೆ ಪ್ರಾಪ್ತವಾಗಿರುವ ದುರವಸ್ಥೆಯ ವೃತ್ತಾಂತವನ್ನು ಕೇಳಿ ಉದಾರ ಚರಿತೆಯಾದ ದೇವಲದೇವಿಯ ಮನಸ್ಸು ಕರಗಿ ನೀರಾಯಿತು. ಉದ್ವೇಗ ದಿಂದ ಅವಳು ದುಃಖಿಸಿ ದುಃಖಿಸಿ ಅತ್ತಳು. ಆವೇಶದಿಂದ ಅವಳು ತನ್ನ ಹಿರಿಯ ಮಗನನ್ನು ಕುರಿತು "ಆಲಾ, ಇನ್ನೊಂದು ಮಾತಾಡದೆ ನೀನೀಗಲೆ ನಿನ್ನ ಕುದುರೆಗೆ ತಡಿ ಹಾಕಿಸು. ಅಕೋ, ದುಃಖಭರಾರ್ತಳಾದ ಮಲುಂದ ದೇವಿಯ ಮೂರ್ತಿಯು ನನ್ನ ಕಣ್ಣೆದುರಿಗೆ ಕಟ್ಟಿದಂತಾಗಿದೆ. ಏಳೆಲ್ಲಿ ! ಸ್ನಾನ ಭೋಜನಾದಿಗಳ ವಿಚಾರವನ್ನು ಮಾಡದೆ ನೀನೀಗಲೆ ಹಾದಿ ಹಿಡಿ ! ” ಎಂದು ಆಜ್ಞಾಪಿಸಿದಳು.

ಆಗ ಉದಿಲ್ಲನೆದ್ದು ತಾಯಿಗೆ ಅಂದದ್ದು : "ಅಮಾ, ಪುರಮಲ್ಲನಿಗೆ ದೇಹಾಂತ ಶಾಸನವನ್ನು ವಿಧಿಸದೆ ಬಿಡುವದಿಲ್ಲೆಂದು ನಾವು ನಿಶ್ಚಯಿಸಿರುತ್ತೇವೆ ಮಗನಿಗೆ ಹಗೆಗಳಾದ ನಾವು ತಾಯಿಗೆ ಹಿತವಂತರಾಗುವ ಬಗೆಹೇಗೆ?”

"ಮಗುವೆ, ಪುರಮಲ್ಲನು ತಪ್ಪುಗಾರನು ಸರಿ, ಆದರೆ ನಾವು ಇಂಥ ದುರ್ಭರವಾದ ಸಮಯದಲ್ಲಿ ರಾಜನ ದೋಷಗಳನ್ನೆಣಿಸದೆ ನಮ್ಮ ಮಾತೃ ಭೂಮಿಯ ಕಡೆಗೆ ಲಕ್ಷ ಕೊಟ್ಟು ಕೆಲಸ ಮಾಡತಕ್ಕದ್ದು, ರಾಜನು ಕರ್ತವ್ಯ ಪರಾಙ್ಮುಖನಾದನೆಂದು ಅಂಥದೇ ತಪ್ಪನ್ನು ನಾವು ಮಾಡತಕ್ಕದ್ದಲ್ಲ."

"ಉದಾರಚರಿತಳಾದ ನನ್ನ ಮಾತೆಯೆ, ನಾವು ಮಹೋಬಾದ ರಾಜ್ಯದಿಂದ ಹೊರಗೆ ಹಾಕಿಸಿಕೊಂಡು ಬರುವಾಗಲೇ ಆ ಸಿಂಹಾಸನದ ನಿಷ್ಠೆಯನ್ನು ಅಲ್ಲಿಯೇ ಹರಿದೊಗೆದು ಬಂದೆವು. ನಾವೀಗ ಪ್ರಜರಲ್ಲ; ಪುರಮಲ್ಲನು ರಾಜನಲ್ಲ, ರಾಜನಿಷ್ಠೆ ಮತ್ತಿನಲ್ಲಿಯದು?” "ಛಿಃ! ತಿಳಿಗೇಡಿಗಳಿರಾ, ರಾಜನು ಪ್ರಸನ್ನನಾಗಿ ನಿಮ್ಮ ಬಯಕೆಗಳನ್ನು ಪೂರೈಸುತ್ತಿರುವಾಗ ಮಾತ್ರ ಅವನ ಇಚ್ಛಾನುವರ್ತಿಯಾಗಿ ನಡೆಯುವವನು ರಾಜನಿಷ್ಠನೆಂದು ಹೇಳಬಹುದೆ ? ಇದು ಬಣಜಿಗರ ವ್ಯಾಪಾರವು. ಸಿಂಹಾಸನದಲ್ಲಿರುವ ನಿಶ್ಚಲವಾದ ಪ್ರೇಮಕ್ಕೆ ಮಾತ್ರ ರಾಜನಿಷ್ಠೆಯೆಂಬ ಹೆಸರು. ಆ ಸಿಂಹಾಸನದ ಮೇಲೆ ಕುಳ್ಳಿರಲು ಹುಟ್ಟಿದ ಗೊಂಬೆಯಾದ ಪುರಮಲ್ಲನ ತಪ್ಪುಗಳನ್ನೆಣಿಸಿ ನಾವು ಆ ಸಿಂಹಾಸನದ ಉಪೇಕ್ಷೆ ಮಾಡಕೂಡದು. ನಿಮ್ಮನ್ನು ಹಡೆದವರು ಮಹೋಬಾದ ಸಿಂಹಾಸನವನ್ನು ಜೀವದ ಹಂಗುತೊರೆದು ಭದ್ರವಾಗಿ ಸ್ಥಾಪಿಸಿ, ಅದನ್ನು ಕಾಪಾಡಿಕೊಂಡು ಹೋಗುವ ಭಾರವನ್ನು ನಿಮ್ಮ ಮೇಲೆ ಆಸ್ಥೆಯಿಂದ ಹೊರಿಸಿ ಪರಲೋಕವಾಸಕ್ಕೆ ತೆರಳಿದಾಗ ನೀವಿಂಥ ಪಿತೃದೋಹವನ್ನು ಚಿಂತಿಸುವಿರ ? ವಿಚಾರ ತಿಳಿದು ನೋಡಿರಿ ” ಎಂದು ಆ ಪತಿವ್ರತೆಯಾದ ಮಹಾಸತಿಯು ಬೋಧಿಸಿದಳು.

"ಜಸ್ಸರಾಜರ ವಿಚಾರಗಳೂ ಅವರ ರಾಜನಿಷ್ಟೆಯ ಅವರ ಚಿತೆಯಲ್ಲಿ ಸುಟ್ಟು ಹೋದವು. ಮಾನಧನರಾದ ನಾವು ಪುರಮಲ್ಲನು ಮಾಡಿದ ಅಪರಾಧವನ್ನು ಮರೆಯುವದೂ ಇಲ್ಲ; ಪುರಮಲ್ಲನನು ಕ್ಷಮಿಸುವದೂ ಇಲ್ಲ!"ಎಂದು ಉದಿಲ್ಲನು ಮತ್ತೆ ಸೆಟೆಯಿಂದ ನುಡಿದನು.

ಈ ಮಾತು ಕೇಳಿ ದೇವಲದೇವಿಗೆ ಪರಮಾವಧಿಯ ಸಂತಾಪವಾಯಿತು. ಅವಳು ಭರದಿಂದ ಮುಂದಕ್ಕೆ ಬಂದು ಉದಿಲ್ಲನ ಕೈಯಲ್ಲಿಯ ಖಡ್ಗವನ್ನು ಸೆಳಕೊಂಡು 'ಹೇಡಿಯೆ, ಕ್ಷತ್ರಿಯರ ಆಯುಧವನ್ನು ಧರಿಸಲು ನೀವು ಸರ್ವಥಾ ಅಯೋಗ್ಯನಾಗಿರುವಿ. ಪರಾಕ್ರಮಶಾಲಿಗಳಂತೆ ಯುದ್ಧ ಮಾಡಿ ಜನ್ಮಭೂನಿಗೆ ತಗಲಿರುವ ಕಲಂಕವನ್ನು ದೂರಮಾಡುವ ಸಾಮರ್ಥ್ಯವಿಲ್ಲದಕ್ಕಾಗಿ ನೀನು ಇಲ್ಲದ ನೆವ ಹೇಳಿ ಮೈಗಳ್ಳನಂತೆ ಮನೆಯಲ್ಲಿ ಕುಳ್ಳಿರಬೇಕೆನ್ನುವಿ. ಜಸ್ಸರಾಜರ ವೀರ್ಯಕ್ಕೆ ಹುಟ್ಟಿ, ಮೇಲೆ ನನ್ನ ಹಾಲು ಕುಡಿದು ನೀನಿಂಥ ಅಭದ್ರವಾದ ಮಾತಾಡುನಿಯಾ ? ನಿನ್ನಂಥ ಅಧಮನನ್ನು ಕಂಡು ಇವನು ಜಸ್ಸರಾಜನ ಮಗನಲ್ಲವೆಂದು ಶಂಕಿಸಿ ಯಾರಾದರೂ ನನಗೆ ಜಾರಿಣಿಯೆಂಬ ಅಪಶಬ್ದವನ್ನಿಟ್ಟಾರು. ಮೂರ್ಖಾ, ಬುದ್ಧಿಯನ್ನೆಲ್ಲಿಟ್ಟುರುವಿ ? ನಡೆ ನನ್ನೆದುರಿನಲ್ಲಿ ನಿಲ್ಲಬೇಡ ! ಯಾರಲ್ಲಿ ? ಜವಾನಸಿಂಗ, ನನ್ನ ಕುದುರೆಗೆ ತಡಿ ಹಾಕಿಸಿ ಸಿದ್ಧ ಮಾಡು. ಮುಲುಂದದೇವಿಗೆ ನಾನು ಕೊಟ್ಟಿರುವ ವಚನ ವನ್ನು ಪಾಲಿಸುವದಕ್ಕಾಗಿ, ನಾನೇ ರಣಾಂಗಣದಲ್ಲಿ ಹೊಕ್ಕು ಶತ್ರಾಸಂಹಾರವನ್ನು ಮಾಡುವನು. ಗಂಡಸರೆಂಬವರು ಬಂದು ನನ್ನ ಪರಾಕ್ರಮವನ್ನಾದರೂ ನೋಡಲಿ !” ಎಂದು ಮಂದಿರವೆಲ್ಲ ಗದ್ದರಿಸುವಂತೆ ಉಚ್ಚಧ್ವನಿಯಿಂದ ಮಾತಾಡಿದಳು.

ಹೀಗೆ ಆವೇಶವನ್ನು ತಾಳಿ ಆದಿಶಕ್ತಿಯಂತೆ ಆರ್ಭಟಿಸಿ ಮಾತಾಡುತ್ತಿ ವಶಪಾಣಿಯಾದ ಮಾತೆಯನ್ನು ಕಂಡು, ಆ ಲೋಕೈಕವೀರರ ಮದವೆಲ್ಲ ಇಳಿದುಹೋಯಿತು. ಯಾವ ಮಾತೆಯ ಉತ್ಸಂಗದಲ್ಲಿ ಯಥೇಷ್ಟವಾಗಿ ಕುಣಿ ಕುಣಿದಾಡಿ ಸುಹಾಸಯುತವಾದ ಅವಳ ಪ್ರೇಮಲವಾದ ಮುಖಾಂಭೋಜವನ್ನು ಕಂಡು ಚನ್ನಾಟ ಮಾಡುತ್ತಿದರೋ, ಆ ಮಾತೆಯು ಇವಳೇ ಆಹುದೇನೆಂದು ಆ ತರುಣರು ಅವಳ ಮುಖವನ್ನು ಮಿಕಿಮಿಕಿ ನೋಡಿದರು. ಮಾತೃದೇವತೆಯ ಅನುಲ್ಲಂಘನೀಯವಾದ ಆಜ್ಞೆಯನ್ನು ತತ್ಕಾಲವೇ ಶಿರಸಾವಹಿಸದಿದ್ದ ಔದ್ಧತ್ಯಕ್ಕಾಗಿ ಅವರಿಗೆ ಪಶ್ಚಾತ್ತಾಪವಾಯಿತು. ಕೂಡಲೆ ಅವರು ಆ ಮಹಾಸತಿಯ ಕಾಲುಗಳನ್ನು ಗಟ್ಟಿಯಾಗಿ ಹಿಡುಕೊಂಡು ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಂಡರು

ಮಾತೆಯೇ ಅವಳು, ಕಾಲ್ಗೆರಗಿದ ಮಕ್ಕಳನ್ನು ಎತ್ತಿ ತಬ್ಬಿಕೊಂಡು ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಅವಳಂದದ್ದು : "ವೀರ ಮಣಿಗಳೇ, ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಏಳಿರಿನ ಮಲುಂದದೇವಿಯರು ಚಂದ್ರಶಾಲೆಯಲ್ಲಿ ನಿಂತು ನಿಮ್ಮ ಮಾರ್ಗಪ್ರತೀಕ್ಷೆ ಮಾಡುತ್ತಿರುವರಂತೆ. ವಿಲಂಬ ಮಾಡದೆ ಅವರನ್ನು ಕಾಣಿಸಿಕೊಂಡು ಸುರರು ಕೊಂಡಾಡುವಂತೆ ಯುದ್ಧ ಮಾಡಿರಿ. "

ಸಂಗಡಲೆ ಹೊರಡುವ ಸಿದ್ಧತೆಯಾಯಿತು. ಅಲಾ ಉದಿಲ್ಲರು ವೀರರಿಗುಚಿತವಾದ ಪೋಷಾಕು ಮಾಡಿಕೊಂಡು ಅಶ್ವಾರೂಢರಾಗಿ ನಿಂತರು, ದೇವಲ ದೇವಿಯು ತಾನೊಂದು ಮಂಗಲೋತ್ಸವಕ್ಕಾಗಿ ಸಂಭ್ರಮದಿಂದ ಹೊರಟಿರುವಳೋ ಎಂಬಂತೆ ನಗೆಮುಖವನ್ನು ತಳೆದು ತನ್ನ ಅಂದಣವನ್ನೇರಿದಳು. ಕನೋಜದ ಕೆಲಜನ ಭಟರೂ ಆಲಾ ಉದಿಲ್ಲರ ಅನುಯಾಯಿಗಳೂ ರಹ ಗರ್ಜನೆಯನ್ನು ಮಾಡುತ್ತೆ ಮಹೋಬಾದ ಮಾರ್ಗವನ್ನು ಹಿಡಿದು ನಡೆದರು

ಪುರಮಲ್ಲರಾಜನೂ ಅವನ ರಾಣಿಯಾದ ಮುಲುಂದದೇವಿಯ ಆಲಾ ಉದಿಲ್ಲರನ್ನೂ ದೇವಲದೇವಿಯನ್ನೂ ಎದಿರ್ಗೊ೦ಡು ಕರಕೊಂಡು ಹೋಗಲು ಅರ್ಧ ಹಾದಿಗೆ ಬಂದಿದ್ದರು. ಪುರಮಲ್ಲನು ರಾಜನಾಗಿದ್ದರೂ ಅಭಿಮಾನವನ್ನು ಬಿಟ್ಟು ಅಲಾ ಉದಿಲ್ಲರನ್ನು ಆದರದಿಂದ ಅಪ್ಪಿಕೊಂಡು ತಾನು ಮಾಡಿದ ಅಪರಾಧವನ್ನು ಕ್ಷಮಿಸಬೇಕೆಂದು ಆ ಬಂಧುದ್ವಯರಿಗೆ ಬೇಡಿಕೊಂಡನು. ಮಲುಂದದೇವಿಯು, ದೇವಲದೇವಿಯ ಕೈಹಿಡಿದು "ಬನ್ನಿರಿ ವೀರಮಾತೆಯರೆ, ನೀವಿಂಥ ಮಹಾತ್ಮರಾದ ಮಕ್ಕಳನ್ನು ಹಡೆದು ದೇಶ ಸಂರಕ್ಷಣದಂಥ ಪವಿತ್ರವಾದ ಮಹತ್ಕಾರ್ಯವನ್ನು ಮಾಡಿಸಿ ಇಹಪರಗಳಲ್ಲಿಯೂ ಖ್ಯಾತಿವತಿಯರಾಗುವಿರಿ. ರಜಪೂತ ಮಾತೆಯ ಮಾಹಾತ್ಮವು ಯಾರಿಗೂ ಬಾರದು.” ಎಂದು ಸಂಭಾವಿಸಿ ಅವಳನ್ನು ತನ್ನ ಕೋಣೆಯಲ್ಲಿ ಕುಳ್ಳಿರಿಸಿಕೊಂಡು ರಾಜಧಾನಿಯ ಮಾರ್ಗವನ್ನು ಹಿಡಿದಳು. ದೇವಲದೇವಿಯ ಮಕ್ಕಳು ರಾಜನೊಡನೆ ಉತ್ಸಾಹದಿಂದ ಆಲೋಚನೆ ಮಾಡುತ್ತೆ ಮಹೋಬಾ ನಗರಕ್ಕೆ ಹೊರಟರು.

ಅಲಾ ಉದಿಲ್ಲರು ಮಹೋಬಾಕ್ಕೆ ಬಂದರೆಂಬ ವರ್ತಮಾನವನ್ನು ಕೇಳಿ ಪೃಥ್ವೀರಾಜನು ಪುರಮಲ್ಲನನ್ನು ಯುದ್ಧಕ್ಕೆ ಆಹ್ವಾನಮಾಡಿ, ಬೇಕಾದರೆ ಇಂದಿಗೇಳನೆಯ ದಿವಸ ಯುದ್ಧ ಪ್ರಾರಂಭವಾಗಲೆಂದೂ ಇಲ್ಲದಿದ್ದರೆ ಜಯ ಪತ್ರವನ್ನು ಕೊಟ್ಟು ದಿಲ್ಲಿಯ ಮಾಂಡಲಿಕನಾಗಿರಬೇಕೆಂದೂ ತಿಳಿಸಿದನು. ಇಷ್ಟು ಅತಿತರಾತುರತೆಯಿಂದ ಯುದ್ಧಕ್ಕೆ ಸನ್ನದ್ಧನಾಗಲು ಆಸ್ಪದವಿರಲಿಲ್ಲ. ಲೋಚನೆಗಳ ಮೇಲೆ ಆಪ್ತಾಲೋಚನೆಗಳು ನಡೆದವು.

ಆಗ ದೇವಲದೇವಿಯು ತನ್ನ ಜೇಷ್ಠ ಪುತ್ರನನ್ನು ಕರೆದು “ಆಲಾ, ಯುದ್ಧಕ್ಕೆ ಹೊರಡಲು ನಿನಗೆ ಅವಕಾಶ ಬೇಕಾಗಿರುವದೇನು? ತಿಂದುಂಡು ಮೈಯಲ್ಲಿ ಪುಷ್ಟಿಯನ್ನು ತಂದುಕೊಳ್ಳಲು ಸಮಯವನ್ನು ಬೇಡುವಿರಾ?" ಎಂದು ಜರಿದು ಕೇಳಿದಳು.

ಈ ಮಾತು ಕೇಳಿ ಅಲಾನು ಕಿಂಚಿತ್ ಕ್ರುದ್ಧನಾಗಿಯೂ, ಕಿಂಚಿತ್ ಮಂದಸ್ಮಿತನಾಗಿಯೂ ತಾಯಿಯನ್ನು ಕುರಿತು "ಯಾರಿಗೆ ಈ ಮಾತಾಡುವಿ ಮಾತೆ ? ಈ ನಿನ್ನ ಮಗನು ರಣರಂಗದಲ್ಲಿ ಹೊಗಲು ಅವಕಾಶವನ್ನು ಬೇಡುವ ಹುಡುಗನೆ? ನೀರಡಿಸಿರುವ ನನ್ನೀ ಖಡ್ಗವು ಶತ್ರುಗಳ ರಕ್ತಪಾನವನ್ನು ಮಾಡಲು ಹಾತೊರೆಯುತ್ತಿರುವದು. ಆದರೇನು ಮಾಡಲಿ, ಪುರ ಮಲ್ಲನು ರಣಕ್ಕೆ ಅಂಜಿ ಜಕಜಕನೆ ಜರಿಯುತ್ತಿರುವನು. ಹೇಡಿಯ ಬೆನ್ನು ಕಟ್ಟಬಾರದೆಂದು ಏಕೆ ಅನ್ನುತ್ತಾರೆ? ಈ ಪುರಮಲ್ಲನ ಬೆನ್ನು ಕಟ್ಟಿ ಬಂದವನಾದ ನಾನು ಈಗಲೆ ನಿಮ್ಮ ನಿಂದೆಗೆ ಗುರಿಯಾದೆನಲ್ಲ !"

"ಚಿಂತೆಯಿಲ್ಲ, ಬಹದ್ದರನಾದ ನನ್ನ ಮಗನೆ! ಆದರೂ ಪುರಮಲ್ಲನು ರಣಭೂಮಿಯನ್ನು ಹೋಗಲು ಮೀನಮೇಷ ಮಾಡುತ್ತಿರುವದನ್ನು ಕಂಡು ನನಗೆ ಅತಿಶಯವಾದ ವಿಷಾದವಾಗುತ್ತದೆ. ನಾನೀಗಲೆ ಮುಲುಂದ ದೇವಿಯನ್ನು ಕಂಡು ಅವಳ ಮುಖಾಂತರವಾಗಿ ಮೂಢನಾದ ಅವಳ ಗಂಡನನ್ನು ಇಂದೆಯೇ ರಣಕ್ಕೆ ಅಟ್ಟುವಂತೆ ಮಾಡುವೆನು."

ಇಂದು ವೀರರೆಲ್ಲರೂ ಯುದ್ಧಕ್ಕೆ ಹೊರಡುವವರು. ಸುಗಂಧ ತೈಲಗಳನ್ನು ಹಚ್ಚಿಕೊಂಡು ಅವರು ಅಭ್ಯಂಗ ಸ್ನಾನ ಮಾಡಿದರು ; ಕನ್ನಡಿಯಂತೆ ಹೊಳಪಾಗಿರುವ ತಮ್ಮ ಶಸ್ತ್ರಗಳ ಧಾರೆಯನ್ನು ಪರೀಕ್ಷಿಸಿ ನೋಡಿದರು ತಮ್ಮ ಪ್ರೀತಿಯ ಕುದುರೆಗಳಿಗೆ ಉತ್ತಮೋತ್ತಮವಾದ ತಿನಿಸು ನೀಡಿದರು; ಭೋಜನೋತ್ತರ ಮಿತ್ರರೆಲ್ಲರೂ ಕೂಡಿ ಅಫೀಮಿನ ಗುಳಿಗೆಗಳನ್ನು ಸೇವಿಸಿ ಕುಸುಂಬೆಯ ಕಾಡೆಯನ್ನು ಕುಡಿದು ಹುರುಪಾದರು. ಬಳಿಕ ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡು ಆ ಪ್ರರಿಷ್ಟರ ಕಡೆಯ ಭೆಟ್ಟಿಯನ್ನು, ಆನಂದ ಭರಿತವಾದ ಮುಖಮುದ್ರೆಯನ್ನು ತಳೆದು, ತೆಗೆದುಕೊಂಡು ರಣರಂಗವನ್ನು ಪ್ರವೇಶ ಮಾಡಿದರು.

ಸುಂದರನೂ, ಪೀನೋನ್ನತವಾದ ದೇಹವುಳ್ಳವನೂ ಆದ ಆಲಾರಾಯನು ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡು ದಟ್ಟಾಗಿರುವ ತನ್ನ ಮೀಸೆಗೆ ಒಳಿತಾಗಿ ಹುರಿಯಿಕ್ಕಿ ಕೈಯಲ್ಲಿ ಬಿಚ್ಚುಗತ್ತಿಯನ್ನು ಹಿಡುಕೊಂಡು ತನ್ನ ಮಾತೆಯ ಪಾದವಂದನಕ್ಕಾಗಿ ಬಂದು ಅವಳ ಎದುರಿನಲ್ಲಿ ಮಂದಸ್ಮಿತನಾಗಿ ನಿಂತುಕೊಂಡನು ಭೀಮಸೇನನಂತೆ ವಿಕ್ರಮಶಾಲಿಯಾದ ಮಗನ ಪ್ರಫುಲ್ಲಿತವಾದ ಮುಖವನ್ನೂ, ಅವನ ವಿಚಿತ್ರವಾದ ವೇಷವನ್ನೂ ಕಂಡು ಆ ಮಾತೆಯು ಕೃತಾರ್ಥಳಾಗಿ ಅವನನ್ನು ಅಪ್ಪಿಕೊಂಡು ಹರಿಸಿ "ಆಲಾರಾಯಾ, ನಿನ್ನ ಭುಜದ ಮೇಲೆ ವಿಜಯಲಕ್ಷ್ಮಿಯು ನಲಿದಾಡಲಿ! ಬಂಟನಾಗಿ ಶತ್ರುಗಳ ಎದೆಯನ್ನೂ, ವೀರ ಸ್ವರ್ಗದ ಸೋಪಾನವನ್ನ ಮೆಟ್ಟುವವನಾಗು. ನೀನೀಗ ಕೇಸರೀ ಬಣ್ಣದ ಪೋಷಾಕು ಮಾಡಿಕೊಂಡಿ ರುವಿ. ನೀನು ದೇವಪುರುಷನಾದಿ. ಈ ವೇಷಕ್ಕೆ ಸದೃಶವಾದ ಪರಾಕ್ರಮವನ್ನು ಮಾಡಿ ತೋರಿಸು, ಮತ್ತೇನು ಹೇಳಲಿ ?"

ಅಷ್ಟರಲ್ಲಿ ಊದಿಲ್ಲನೂ ಕೇಸರೀ ಪೋಷಾಕು ಮಾಡಿಕೊಂಡು ತನ್ನ ಖಡ್ಗವನ್ನು ಒಯ್ಯಾರದಿಂದ ಬೀಸಾಡುತ್ತೆ ಬಂದು ದೇವದೇವಿಯ ಕಾಲ್ಗೆರಗಿ ಉಲ್ಲಾಸದಿಂದ ನಗುತ್ತೆ ನಿಂತನು.

"ಉದಿಲ್ಲ, ನೀನೇತಕಿ೦ಥ ಪೋಷಾಕು ಮಾಡಿಕೊಂಡಿ? ನಿನ್ನನ್ನು ನಗರರಕ್ಷಣಕ್ಕಾಗಿ ನಿಯಮಿಸಿದ್ದಿಲ್ಲವೆ ?" ಎಂದು ತಾಯಿಯು ತುಸು ಚಕಿತಳಾಗಿ ಕೇಳಿದಳು

"ಅಮ್ಮಾ, ನಿನ್ನ ಪ್ರಶ್ನೆಗಳಿ೦ದಿನ್ನೇನು ಪ್ರಯೋಜನ? ತೊಟ್ಟ ಬಳಿಕ ಈ ಪೋಷಾಕವನ್ನು ಕಳೆಯಬಾರದಷ್ಟೆ? ” ಎಂದು ಉದಿಲ್ಲನು ಆಲರಾಯನ ಮಂದೀಲದ ಚುಂಗನ್ನು ಚನ್ನಾಗಿ ಸಿಕ್ಕಿಸುತ್ತೆ ನುಡಿದನು. (ಬಾಹ್ಮಣರಲ್ಲಿ ಇದಕ್ಕೂ ಘೋರತರವಾದ ಪ್ರತಿಜ್ಞೆಯಿರುವದು. ಅವರು ಊಟಕ್ಕೆ ಕುಳಿತಾಗ ಒಂದಾವರ್ತಿ ಕಡೆಯ ಆಪೋಶನವನ್ನು ತೆಗೆದುಕೊಂಡರೆ ಪುನಃ ಒಂದು ತುತ್ತು ಕೂಡಾ ಬಾಯಿಯಲ್ಲಿ ಹಾಕಲಿಕ್ಕಿಲ್ಲ !)

ಉದಿಲ್ಲನ ಸಲೀಲವಾದ ನುಡಿ ಕೇಳಿ "ನಿನಗೀ ಪೋಷಾಕು ಮಾಡಿಕೊಳ್ಳಲು ಯಾರು ಹೇಳಿದರು?” ಎಂದು ದೇವಲದೇವಿಯು ಕೇಳಿದಳು.

"ಯಾರೇಕೆ ಹೇಳಬೇಕು ಅವ್ವಾ? ಈ ನಮ್ಮ ಅಣ್ಣನೂ ನಾನೂ ಭಾಗಾದಿಗಳಷ್ಟೆ? ಸಮಸ್ತವಾದ ವಸ್ತುಗಳಲ್ಲಿ ಇವನೂ ನಾನೂ ಸಮಪಾಲುಗಾರರು. ಹೀಗಿರಲು ಈ ಕೃತ್ರಿಮಭಾವದವನು ನನ್ನ ಪಾಲಿಗೆ ಈ ಮಣ್ಣಿನ ಭೂಮಿಯನ್ನಿಟ್ಟು ತಾನೊಬ್ಬನೇ ವೀರಸ್ವರ್ಗವನ್ನು ಆಕ್ರಮಿಸುವೆನೆಂದರೆ ನಾನು ಕೇಳುವೆನೆ ?"

ಧನ್ಯತೆಯ ಭರದಲ್ಲಿ ದೇವಲದೇವಿಯು ಓಡಿ ಬಂದು ತನ್ನ ಕಡೆಹುಟ್ಟ ಮಗನಾದ ಉದಿಲ್ಲನನ್ನು ಗಟ್ಟಿಯಾಗಿ ಅಪ್ಪಿಕೊಂಡು ಆನಂದಾಶ್ರುಗಳನ್ನು ಸುರಿಸಿದಳು.

"ಅಮ್ಮಾ, ಬೇಗನೆ ನನಗೆ ಅಪ್ಪಣೆಕೊಡು. ನಾವು ಮಾಡುವ ಕಾಲಹಾನಿಯನ್ನು ನಮ್ಮ ರಾಜನು ಕ್ಷಮಿಸಿದರೂ ಕ್ಷಮಿಸುವನು, ಆದರೆ ನನ್ನ ಕುದುರೆಯು ಒಂದು ಕ್ಷಣದ ತಡವನ್ನು ಕ್ಷಮಿಸಲಾರದು. ಕೇಳಿದಿಯಾ ಖೋಮನ್ ಬಹಾದ್ದರನು ಹೇಗೆ ಉಚ್ಚಸ್ವರಿಂದ ಹೇಂಕರಿಸಿ ನನ್ನನ್ನು ಕರೆಯುತ್ತಿರುವನು?”

"ಹೋಗಿ ಬನ್ನಿರಿ ನನ್ನ ಮುದ್ದು ಮಕ್ಕಳೆ! ಕಂಡಿರೋ, ಯುದ್ಧ ಮಾಡುವಾಗ ಬೇರೆ ವಿಚಾರಗಳಿಗೀಡಾಗದೆ ಕೀರ್ತಿಯನ್ನೊಂದನ್ನೇ ಅನುಲಕ್ಷಿಸಿ ಸಾಹಸಮಾಡಿರಿ. ನಿಮ್ಮನ್ನು ಹಡೆದಾಗ ನನಗೆಷ್ಟು ಸಂತೋಷವೊ, ಅದಕ್ಕಿಮ್ಮಡಿಯಾದ ಸಂತೋಷವು ನೀವು ವೀರರಂತೆ ಯುದ್ಧ ಮಾಡಿ ರಣದಲ್ಲಿ ಮಡಿದ ವರ್ತಮಾನವನ್ನು ಕೇಳಿದಾಗ ಆಗುವದು. ಅಮಂಗಲವು ದೂರವಾಗಲಿ! ನೀವು ವಿಜಯಿಗಳೇ ಆಗಿ ಮರಳಿ ಬರುವಿರೆಂದು ನಾನು ಆಶಿಸುತ್ತೇನೆ ” ಎಂದು ದೇವಲದೇವಿಯು ಪೊಂದಟ್ಟೆಯಲ್ಲಿಯ ಅನರ್ಘವಾದ ಮುತ್ತುಗಳನ್ನು ತೆಗೆದುಕೊಂಡು ಮಕ್ಕಳ ಮೇಲೆ ನಿವಾಳಿಸಿ ಚಲ್ಲಿ ಅವರನ್ನು ಆಶೀರ್ವದಿಸಿ ಕಳಿಸಿಕೊಟ್ಟಳು.

ಏನಂದರೇನು? ಇಂಥ ಪ್ರಸಂಗದಲ್ಲಿ ಹಡೆದ ತಾಯಿಯ ಕರುಳು ಕರಗಿ ನೀರಾಗದಿರುವದೆ? ಅಲಾ ಉದಿಲ್ಲರು ಉತ್ಸಾಹದಿಂದ ತಮ್ಮ ಕುದುರೆಗಳನ್ನೋಡಿಸುತ್ತ ಹೋಗಿ, ದೇವಲದೇವಿಯ ಕಣ್ಮರೆಯಾದ ಕೂಡಲೆ ಆ ಅಬಲೆಯ ಕಣ್ಣುಗಳಲ್ಲಿ ಅಶ್ರುಗಳೊತ್ತಿಬಂದವು. ಯಾರಿಗೂ ತೋರಗೊಡದಂತೆ ಅವಳು ಆ ಸವಿಯಾಗದಿರುವ ನೀರಹನಿಗಳನ್ನು ಮೆಲ್ಲನೆ ಒರಸಿಕೊಂಡು ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿಟ್ಟು ಭಗವಂತನ ಮಂಗಲಪ್ರದವಾದ ಸ್ತುತಿಯುಳ್ಳ ಪದಗಳನ್ನು ಹಾಡುತ್ತೆ ಕುಳಿತಳು.

ಕಥೆಯನ್ನು ಕೇಳುವವರಿಗೆ ಬೇಸರಿಕೆಯೇ ಇರುವದಿಲ್ಲ. ಇಷ್ಟಾದ ಬಳಿಕ ಮುಂದೇನಾಯಿತೆಂದು ಅವರು ಕಥೆಗಾರರನ್ನು ಪೀಡಿಸಿ ಕೇಳುವವರೇ. ಆದರೆ ಕಥೆಗಾರನ ಗತಿಯೇನು? ಮುಂದಿನ ಸಂಗತಿಗಳನ್ನು ಅರಿತುಕೊಳ್ಳುವ ಲವಲವಿಕೆ ವಾಚಕರಿಗಿದ್ದರೆ ಇತಿಹಾಸದ ಪುಸ್ತಕಗಳಿವೆ, ಹುಡುಕಾಡಿ ನೋಡಲಿ.


ನೂರಜಹಾನ

ತನ್ನ ಅನುಪಮೇಯವಾದ ಸೌಂದರ್ಯ ಮತ್ತು ಆಶ್ಚರ್ಯಪೂರ್ಣವಾದ ಚರಿತ್ರ ಇವುಗಳ ಯೋಗದಿಂದ ಇಡೀ ಜಗತ್ತಿನ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದ್ದ ನೂರಜಹಾನಳಿಗೆ ಸರಿಯಾದ ಸುಪ್ರಸಿದ್ಧ ಸ್ತ್ರೀಯರು ವಿರಳವಾಗಿ ದೊರೆಯುವರು. ಆಸೀರಿಯಾ ಪ್ರಾಂತದಲ್ಲಿ ಸೇಮಿರಾಮಿಸ ರಾಣಿಯು ಅಥವಾ ಇಜಿಪ್ತ ದೇಶದಲ್ಲಿ ಕ್ಲಿವೋಪಾದ್ರಾ ರಾಣಿಯು ತಮ್ಮ ಅನಿ ಯಂತ್ರಿತವಾದ ಅಧಿಕಾರವನ್ನು ನಡೆಸಿದಂತೆ ಸಾರ್ವಭೌಮ ಬಾದಶಹಾ ಜಹಾಂಗೀರನ ಮೇಲೂ ಅವನ ಪ್ರಚಂಡವಾದ ರಾಜ್ಯದ ಮೇಲೂ ನೂರಜಹಾನ ಇವಳು ಇಪ್ಪತ್ತು ವರ್ಷಗಳ ವರೆಗೆ ತನ್ನ ಅಖಂಡವಾದ ಸತ್ತೆಯನ್ನು ನಡೆಸಿದಳು.

ಈ ಸೌಂದರ್ಯಶಾಲಿನಿಯಾದ ಸ್ತ್ರೀಯ ಬಾಲಕತನದ ಮತ್ತು ಪ್ರೌಢತ್ವದ ಇತಿಹಾಸವು ಸರ್ವತ್ರ ಆಶ್ಚರ್ಯಮಯವಾಗಿ ಕಂಡುಬರುತ್ತದೆ. ನೂರಜಹಾನಳ ತಂದೆಯಾದ ಖ್ವಾಜಾಆಯಾಸ ಇವನು ಪಶ್ಚಿಮಾರ್ತರಿಯ ಮೂಲನಿವಾಸಿಯಾಗಿದ್ದು, ತನ್ನ ದೈವಪರೀಕ್ಷೆಯನ್ನು ಮಾಡುವದರ ಸಲುವಾಗಿ ಜನ್ಮಭೂಮಿಯನ್ನು ಬಿಟ್ಟು ಹಿಂದುಸ್ಥಾನಕ್ಕೆ ಬಂದಿದ್ದನು. ಸುಪ್ರಸಿದ್ಧವಾದ ಒಂದು ದೊಡ್ಡ ಕುಲದಲ್ಲಿ ಇವನು ಜನ್ಮವನ್ನು ತಾಳಿದ್ದರೂ ದುರ್ದೈವದ ಚಕ್ರದಲ್ಲಿ ಸಿಲುಕಿ ಇವನ ಮನೆತನವು ತೀರ ಹೀನಸ್ಥಿತಿಗೆ ಬಂದು ಮುಟ್ಟಿತ್ತು. ಇವನಿಗೆ ಕೊಡುವದಕ್ಕೆ ಇವನ ತಂದೆಯ ಹತ್ತರ ದ್ರವ್ಯವಿರದಿದ್ದರೂ ಅವನಿಂದ ಇವನಿಗೆ ದೊರೆದ ವಸ್ತುಏನ ಯೋಗ್ಯತೆಯು ದ್ರವ್ಯದಕಿಂತ ಎಷ್ಟೋ ಮಡಿಯಿಂದ ದೊಡ್ಡದಾಗಿತ್ತು. ಆ ದೊರೆದ ವಸ್ತುವೆಂದರೆ, ಉದಾರಿ ಶಿಕ್ಷಣವು ಈ ಶಿಕ್ಷಣದ ಸಂಸ್ಕಾರವು ಖ್ಯಾ ಜಾಆಯಾಸ ಇವನ ಬುದ್ಧಿಯ ಮೇಲೆ ಹಾಗು ಅ೦ತಃಕರಣದ ಮೇಲೆ ಒಳಿತಾಗಿ ಆಗಿತ್ತು. ಇವನ ಮನೆತನದಂತೆ ಹೀನಸ್ಥಿತಿಯನ್ನು ಹೊಂದಿದ ಒಂದು ಮನೆ ತನದೊಳಗಿನ ಸುಸ್ವರೂಪಿಯಾದ ತರುಣಿಯ ಮೇಲೆ ಇವನು ತನ್ನ ತಾರುಣ್ಯದ ಪ್ರಾರಂಭದಿಂದಲೇ ಪ್ರೇಮ ಮಾಡಹತ್ತಿದ್ದನು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಅವರ ವಿವಾಹವಾಗಿ ಉಭಯತರಲ್ಲಿ ಪತಿ ಪತ್ನಿಯರ ಸಂಬಂಧವು ಘಟಿತವಾಯಿತು. ಆ ಕಾಲಕ್ಕೆ ಉತ್ತರ ಭಾಗದಲ್ಲಿರುತ್ತಿದ್ದ ತಾರ್ತರ ಜನರಿಗೆ ದಾರಿದ್ರದ ವ್ಯಥೆಯು ಅಸಹ್ಯವಾಗಹತ್ತಿತೆಂದರೆ, ಅವರು ಹಿಂದುಸ್ಥಾನದ ದಾರಿಯನ್ನು ಹಿಡಿಯುತ್ತಿದ್ದರು. ಮನೆ ಬಾಗಿಲವಿಲ್ಲದೆ ಗೃಹಸ್ಥಾಶ್ರಮವನ್ನು ಆರಂಭಿಸಿದ ಸ್ವಾಜಾ ಆಯಾಸನಿಗಾದರೂ ಇದೇ ಮಾರ್ಗವನ್ನು ಅವಲಂಬಿಸಬೇಕಾಯಿತು,

ಪ್ರವಾಸದ ನಿಶ್ಚಯವಾದ ಕೂಡಲೆ ಖ್ಯಾ ಜಾಳಿಯಾಸನು ತನ್ನ ಹತ್ತಿರ ವಿದ್ದ ಎಲ್ಲ ಚೂರು ಚಾರು ಒಡಿವೆಗಳನ್ನು ಮಾರಿ, ಒಂದು ಕುದುರೆ ಮತ್ತು ಸ್ವಲ್ಪು ಹಣ, ಇಷ್ಟು ಸಾಮಗ್ರಿಯನ್ನು ತನ್ನ ಸಂಗಡ ತೆಗೆದುಕೊಂಡು ಪತ್ನಿ ಸಮೇತನಾಗಿ ಹಿಂದುಸ್ಥಾನಕ್ಕೆ ಬರಬೇಕೆಂದು ಹೊರಟನು. ಕೋಮಲ, ಅದರಲ್ಲಿ ಗರ್ಭಿಣಿ ಸ್ಥಿತಿಯನ್ನು ಹೊಂದಿ ತೀರ ಅಶಕ್ತಳಾದ ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕುಳ್ಳಿರಿಸಿ, ಖಾಜಾಆಯಾಸನು ಅವಳ ಹಿಂದೆ ನಡೆಯಹತ್ತಿದನು.

ಕೆಲವು ಕಾಲದ ವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು. ಆದರೆ ಅವರು ಮಾಡೆತಕ್ಕೆ ಪ್ರವಾಸವು ಅವರು ಯೋಚಿಸಿದಷ್ಟು ಸನಿವಾಸ ವುಳ್ಳದ್ದಾಗಿದ್ದಿಲ್ಲ; ಹಾಗು ಹತ್ತಿರವಿದ್ದ ಗಂಟು ಸಾಕಾಗುವಂತಿದ್ದಿಲ್ಲ. ಹತ್ತರ ವಿದ್ದ ಎಲ್ಲ ಹಣವು ತೀರಿಹೋದ ಬಳಿಕ ಅವರು ದೊಡ್ಡ ಪೇಚಿನಲ್ಲಿ ಬಿದ್ದರು. ಭಿಕ್ಷೆಯ ವೃತ್ತಿಯನ್ನು ಸ್ವೀಕರಿಸಿ ಕೆಲವು ದಿವಸಗಳ ವರೆಗೆ ತಮ್ಮ ಮಾರ್ಗ ಕ್ರಮಣವನ್ನು ಮಾಡಿದರು. ಇವರು ಹಿಂದುಸ್ಥಾನ ಮತ್ತು ತಾರ್ತರಿ ಇವುಗಳ ಮಧ್ಯದಲ್ಲಿರುವ ಸಿರ್ಜನವಾದ ಪ್ರದೇಶ: ಸೀಮೆಯನ್ನು ಹೊಕ್ಕ ಬಳಿಕ ಪ್ರಾರಂಭವಾದ ಇವರ ಕಷ್ಟಾ ಪೇಷ್ಟೆಗಳ ವರ್ಣನ ಮಾಡು ವದು ತೀರ ಅಶಕ್ಯವಾದದ್ದು. ಅಸಹ್ಯವಾದ ಕಟಕಟ ಚಳಿ ಚು ; ರಾತ್ರಿ ಯಲ್ಲಾದರೂ ವಿಶ್ರಮಿಸಿಕೊಳ್ಳಬೇಕೆಂದರೆ ಗಂಡು ಸಲ ಸಹ ಇಲ್ಲ; ಸc ಕಟ ದಲ್ಲಿ ಯಾರನ್ನಾದರೂ ಕರೆಯಬೇಕೆ ದರೆ, ಇವರ ಕೂಗು ಕೇಳಿ ಸವಿಾಸದಲ್ಲಿ ರುವವರು ಯಾರಾದರೂ ಸಹಾಯಾರ್ಥ ಬಂದಾರೆಂದು ಕಲ್ಪಿಸುವದು ಸಹ ತೀರ ಅಸಂಭವವು; ಹಿಂದಕ್ಕೆ ತಿರುಗಿ ಹೋಗಬೇಕೆಂದರೆ, ತಮ್ಮ ದೇಶವು ಬಹಳೀ ದೂರ ಉಳಿದದ್ದರಿಂದ ಮಾರ್ಗದಲ್ಲಿ ಉಂಟಾಗುವ ಅಸಂಖ್ಯ ದುಃಖ ಗಳ ಕಲ್ಪನೆಯು ಅವರ ಮುಂದೆ ಬಂದು ನಿಲ್ಲುತ್ತಿತ್ತು; ಮುಂದೆ ಹೋಗ ಬೇಕೆಂದರೆ, ಆ ನಿರ್ಜನವಾದ ಪ್ರದೇಶದಲ್ಲಿ ಮರಣದ ಹೊರತು ಎರಡನೆಯ ಗತಿಯೇ ಇದ್ದಿದ್ದಿಲ್ಲ.

ಆದರೂ ಆ ಉಭಯತರು ಎದೆಯನ್ನು ಗಟ್ಟಿ ಮಾಡಿ ಆ ನಿರ್ಜನವಾದ ಅರಣ್ಯವನ್ನು ಹೊಕ್ಕರು. ಅವರು ಅನುಭವಿಸುತ್ತಿದ್ದ ಕಷ್ಟಾಪೇಷ್ಟೆಗಳು ಸಾಕಷ್ಟಾಗಲಿಲ್ಲವೇನೋ ಎಂಬಂತೆ ಅವರ ದುರ್ದೈವಕ್ಕನಿಸಿ ಅವರ ಮೇಲೆ ಪರಾಕಾಷ್ಠೆಯ ಪ್ರಸಂಗವು ಬಂದೊದಗಿತು. ಖಾಜಾಆಯಾಸನ ಹೆಂಡತಿಗೆ ಪ್ರಸವವೇದನೆಗಳು ಆಗಹತ್ತಿದವು. ಪ್ರಾಣವು ನಿಲ್ಲುತ್ತದೋ ಹೋಗುತ್ತದೆ ಎಂಬ ಸ್ಥಿತಿಯಲ್ಲಿರುವಾಗ ಅವಳು ಪ್ರಸೂತಳಾಗಿ, ಮುಂದೆ ಯಾವಾಕೆಯು ನನ್ನ ಆಯುಷ್ಯವನ್ನು ಸ್ವರ್ಗತುಲ್ಯವಾದ ವೈಭವದಲ್ಲಿ ಕಳೆದ ಆ ನೂರಜಹಾನಳ ಜನ್ಮವು ಅಂಥ ವಿಪದಾವಸ್ಥೆಯಲ್ಲಾಯಿತು. ಮಾರ್ಗವನ್ನಾಕ್ರಮಿಸುವ ಯಾವನಾದರೊಬ್ಬ ದಾರಿಕಾರನು ಭೆಟ್ಟಿಯಾದರೆ ಅವನಿಂದ ಸಹಾಯವು ದೊರೆತೀತೆಂಬ ಆಶೆಯಿಂದ, ಆ ಉಭಯತರು ಆ ಚಿಕ್ಕ ಅರ್ಭಕವನ್ನು ಹತ್ತಿರ ಕರೆದುಕೊಂಡು ಕೆಲವು ಕಾಲ ಹರಣ ಮಾಡಿದರು. ಆದರೆ ಅಮವಾಸ್ಯೆಯ ನಿಬಿಡಾಂಧಕಾರದಲ್ಲಿ ಚಂದ್ರ ಪ್ರಕಾಶವನ್ನ ಸೇಕ್ಷಿಸುವವರಂತೆ ಆವರ ಅವಸ್ಥೆಯಾಯಿತು. ಕಟ್ಟ ಕಡೆಗೆ ಸೂರನು ಅಸ್ತನಾಗಿ, ಭಯಾನಕವಾದ ರಾತ್ರೆಯು ಹಬ್ಬ ಹತ್ತಿತು. ಮೊದಲೇ ಅರಣ್ಯವು, ಅದರಲ್ಲಿ ನಿಬಿಡಾಂಧಕಾರನದ ರಾತ್ರೆಯು, ನಾಲ್ಕೂ ದಿಕ್ಕಿನಿಂದ ಹಿಂಸ್ರಶ್ವಾಸದಗಳ ಭಯಾನಕ ಗರ್ಜನೆಗಳು ಅವರ ಕಿವಿಗೆ ಬೀಳಹತ್ತಿ, ಅಂಜಿಕೆಯಿಂದ ಅವರ ಹೌಹಾರಿ ಹೋಯಿತು. ಇಂಥ ಸ್ಥಿತಿಯಲ್ಲಿ ಆ ಸ್ಥಾನದಲ್ಲಿ ರಾತ್ರೆಯನ್ನು ಕಳೆಯುವದು ಬಹಳ ಗಂಡಾಂತರದ್ದೆಂದು ತಿಳಿದು ಶ್ವಾಜಾ ಆಯಾಸನು ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕೂಡಿಸಿದನು. ತಾಯಿಯು ಮಗುವನ್ನು ತನ್ನ ಎದೆಗೆ ಅನುಚಿಕೊಂಡಳು. ಆದರೆ ಆಕೆಯು ತೀರ ಸೋತುಹೋದದ್ದರಿಂದ ಮಗುವನ್ನು ಎತ್ತಿ ಹಿಡಿಯುವದು ಸಹ ಅವಳಿಗೆ ಅಸಾಧ್ಯವಾಯಿತು. ಆಯಾಸನು ತನ್ನ ಶಕ್ತಿಯನ್ನು ಮಾರಿ ದಣಿದುಹೋದದ್ದರಿಂದ ಅವನಿಗೆ ತನ್ನ ಕಾಲುಗಳ ಮೇಲೆ ನಿಲ್ಲುವದು ಸಹ ಅಸಂಭವವುಳ್ಳದ್ದಾಯಿತು. ಮಗುವಿನ ವಿಷಯವಾಗಿ ತಮ್ಮ ಅಂತಃಕರಣಗಳನ್ನು ಕಳವಳಿಸಕೊಟ್ಟರೆ ತಾವು ಪಾರಗಾಣುವದು ದುಃಸಾಧ್ಯವೆಂದು ತುಸುಹೊತ್ತಿನ ವಿಚಾರಾಂತ್ಯದಲ್ಲಿ ಅವರಿಗೆ ತೋಚಹತ್ತಿ, ಆ ಕೂಸನ್ನು ಮಾರ್ಗದಲ್ಲಿಯೇ ಇಟ್ಟು ಬಿಡಬೇಕೆಂದು ಅವರ ಕೊನೆಯ ನಿಶ್ಚಯವಾಯಿತು. ಸುತ್ತುವದಕ್ಕೆ ಅರಿವೆಯ ಚಿಂದಿಗಳಾದರೂ ಅವರ ಹತ್ತಿರ ಇರದ್ದರಿಂದ, ಲತಾ ಪಲ್ಲವಗಳಿಂದ ಆ ಕೂಸನ್ನು ಮುಚ್ಚಿ, ಅದರ ರಕ್ಷಣ ಮಾಡುವದಕ್ಕಾಗಿ ಶೋಕಾಕುಲ ಅಂತಃಕರಣಗಳಿಂದ ಪರಮೇಶ್ವರನ ಪ್ರಾರ್ಥನೆಯನ್ನು ಮಾಡಿ, ಅತ್ಯಂತ ದುಃಖದಿಂದ ಅಶ್ರುಧಾರೆಗಳನ್ನು ಸುರಿಸುತ್ತ ಆ ಉಭಯತರು ಮುಂದಿನ ಮಾರ್ಗವನ್ನು ಕ್ರಮಿಸಹತ್ತಿದರು. ಅಂಥ ಸ್ಥಿತಿಯಲ್ಲಿ, ತಂದೆ-ತಾಯಿಗಳು ಕೇವಲ ನಿರುಪಾಯವುಳ್ಳವರಾಗಿ ಆ ಕೂಸನ್ನು ಒಂದು ವೃಕ್ಷದ ಬುಡದಲ್ಲಿ ಇಟ್ಟಿದ್ದರೂ ಅದರ ಭಾಗ ದಯವಾಗತಕ್ಕದ್ದಿದ್ದದರಿಂದ ಅದು ರಕ್ಷಿಸಲ್ಪಟ್ಟಿತು, ಯಾವ ವೃಕ್ಷದ ಬುಡದಲ್ಲಿ ಆ ಕೂಸನ್ನು ಇಟ್ಟಿದ್ದರೋ ಆ ವೃಕ್ಷವು ಕಾಣದಂತಾದ ಕೂಡಲೆ ನೂರಜಹಾನಳ ತಾಯಿಯ ಅಂತಃಕರಣವು ನೀರಾಯಿತು, ಅವಳು ಕುದುರೆಯ ಮೇಲಿಂದ ನೆಲಕ್ಕೆ ಬಿದ್ದು ಆಕ್ರೋಶ ಮಾಡಹತ್ತಿದಳು. ತನ್ನ ಸುಕುಮಾರಳಾದ ಮಗಳ ಕಡೆಗೆ ಧಾವಿಸಿ ಹೋಗುವದಕ್ಕಾಗಿ ನೆಲಬಿಟ್ಟು ಏಳುವದಕ್ಕೆ ಪ್ರಯತ್ನ ಮಾಡಹತ್ತಿದಳು; ಆದರೆ ಆ ಪ್ರಯತ್ನದಲ್ಲಿಯೇ ಉಳಿದ ಎಲ್ಲ ಶಕ್ತಿಯು ನಷ್ಟವಾಗಿ ಅವಳು ಭೂಮಿಯ ಮೇಲೆ ನಿಶ್ಚೇಷ್ಟಿತಳಾಗಿ ಬಿದ್ದುಕೊಂಡಳು, ಸ್ವಲ್ಪ ಎಚ್ಚರಪಡೆಯಹತ್ತಿದ ಕೂಡಲೆ ಸ್ವಾಜಾಕ್ಆಯಾಸನು ಅವಳ ಸಮಾಧಾನ ಮಾಡ ತೊಡಗಿದನು.

ಆದರೆ ತನ್ನ ಪ್ರಯತ್ನವು ನಿಷ್ಪಲವಾದದ್ದೆಂದು ಕಂಡುಬಂದದ್ದರಿಂದ, ಹುಡುಗೆಯನ್ನು ತರುವದಕ್ಕಾಗಿ ಮರಳಿ ಹಿಂದಕ್ಕೆ ಹೊರಟನು. ಖ್ವಾಜಾ ಆಯಾಸನು ಆ ವೃಕ್ಷದ ಸವಿಾಪಕ್ಕೆ ಬಂದು, ಅಲ್ಲಿ ಸಂಭವಿಸಿದ ಸಂಗತಿಯನ್ನು ನೋಡಿ ಭೀತಿಯಿಂದ ತೀಠ ಭವಿಷ್ಟನಾದನು. ಒಂದು ದೊಡ್ಡ ಭಯಂಕರವಾದ ಕೃಷ್ಣ ಸರ್ಪವು ಆ ಹುಡುಗೆಯನ್ನು ಸುತ್ತು ಹಾಕಿ ಕೂತುಕೊಂಡದ್ದನ್ನು ನೋಡಿದ ಕೂಡಲೆ, ಆಯಾಸನ್ನು ಚಿಟ್ಟನೆ ಚೀರಿ, ಮಗಳನ್ನು ಉಳಿಸುವದಕ್ಕಾಗಿ ಮುಂದೆ ಧಾವಿಸಿದನು. ಅವನ ಧ್ವನಿಯನ್ನು ಕೇಳಿದ ಕೂಡಲೆ ಆ ಸರ್ಪವು ಭಯಭೀತವಾಗಿ ಹತ್ತಿರದಲ್ಲಿದ್ದ ಬಿಲವನ್ನು ಹೊಕ್ಕಿತು, ಖ್ವಾಜಾ ಆಯಾಸನು ಮುಂದಕ್ಕೆ ಹೋಗಿ ತನ್ನ ಕೂಸನ್ನು ಎತ್ತಿ ಅಮಚಿಕೊಂಡು, ಯಾವ ಸ್ಥಳದಲ್ಲಿ ತನ್ನ ಹೆಂಡತಿಯು ನಿಶ್ಲೇಷ್ಟಿತಳಾಗಿ ಬಿದ್ದಿದ್ದಳೋ ಅಲ್ಲಿಗೆ ಮರಳಿ ಬಂದನು. ಅವನ ಪತ್ನಿಯು ಎಚ್ಚತ್ತು ತನ್ನ ಕೂಸನ್ನು ಹತ್ತರ ತೆಗೆದುಕೊಂಡಳು; ಮತ್ತು ಸಂಭವಿಸಿದ ಸಂಗತಿಯ ವಿಷಯವಾಗಿ ಉಭಯತರು ಮಾತನಾಡಿ, ಇಂಥ ಅರ್ತರ್ಕ್ಯ ಪ್ರಕಾರದಿಂದ ತಮ್ಮ ಮಗಳ ರಕ್ಷಣವಾಯಿತೆಂದ ಮೇಲೆ ಅಪೂರ್ವವಾದ ಭಾಗ್ಯದಯವನ್ನು ಅವಳು ತನ್ನ ಮುಂದಿನ ಆಯುಷ್ಯದಲ್ಲಿ ನಿಶ್ಚಯವಾಗಿ ಕಾಣುವಳೆಂದು ಆ ದಂಪತಿಗಳು ಭಾವಿಸಿದರು.

ಅವಳು ಉಚ್ಚ ಪದವನ್ನೇರಬಾರದೆಂಬ ವಿಧಿಯ ಸಂಕಲ್ಪವಾಗಿದ್ದರೆ, ಇಂಥ ಗಂಡಾಂತರದ ಪ್ರಸಂಗದಿಂದ ಅವಳ ರಕ್ಷಣವೇ ಆಗುತ್ತಿದ್ದಿಲ್ಲ; ಆದರೆ ಮುಂದೆ ಅವಳಿಗೆ ಪ್ರಾಪ್ತವಾದ ಮಹಈ ಪದದ ಕಲ್ಪನೆಯು ಆ ಕಾಲಕ್ಕೆ ಆ ಉಭಯತರಿಗೆ ಆಗಲಿಲ್ಲೆಂಬದರಲ್ಲಿ ಆಶ್ಚರ್ಯವೇನು? ಅದು ಯಾರ ಕಲ್ಪನೆಯನ್ನಾದರೂ ಮೀರಿದ್ದಾಗಿತ್ತು. ತಮ್ಮ ಜನ್ಮಭೂಮಿಯಲ್ಲಿ ಹತಾಶರಾಗಿ, ಕೇವಲ ಉದರಪೋಷಣಕ್ಕಾಗಿ ಆಶ್ರಯಹೊಂದಿದ ಹಿಂದುಸ್ಥಾನದ ಬಾದಶಾಹೀ ಸಿಂಹಾಸನದ ಮೇಲೆ ತನ್ನ ಮಗಳು ಆರೂಢಳಾಗಿ, ತನ್ನ ಸೌಂದರ್ಯದಿಂದಲೂ ಕರ್ತೃತ್ವ ಶಕ್ತಿಯಿಂದಲೂ ಇಡೀ ಜಗತ್ತನ್ನು ಚಕಿತನಾಡುವಳೆ೦ಬ ಸಂಗತಿಯು ಅವರಿಗೆ ಸ್ವಪ್ನ ಸೃಷ್ಟಿಯಲ್ಲಿ ಸಹ ದೃಗ್ಗೋಚರವಾಗಿರಲಿಕ್ಕಿಲ್ಲ.

ಯಾವ ಕಾಲಕ್ಕೆ ಆ ಕೃಷ್ಣ ಸರ್ಪವು ಹುಡಗೆಯನ್ನು ಬಿಟ್ಟು ಬಿಲವನ್ನು ಪ್ರವೇಶಮಾಡಿತೋ ಅದು ಅವರ ಭಾಗ್ಯದಿನದ ಪ್ರಭಾತಕಾಲವೆಂದು ಕಲ್ಪಿಸಿದರೂ ಅಡ್ಡಿಯಿಲ್ಲ. ಸೂರ್ಯಪ್ರಕಾಶವಾಗಲು ಕತ್ತಲೆಯು ಗಿರಿಗನ್ನತಗಳಲ್ಲಿ ಅಡಗಿಕೊಳ್ಳುವಂತೆ, ಅವರ ಕೃಷ್ಣ ಸರ್ಪರೂಪೀ ದುರ್ದೈವವು ಇಲ್ಲದಂತಾಯಿತು. ಕಾಲವು ಅನುಕೂಲವಾಯಿತೆಂದರೆ, ಅನಪೇಕ್ಷಿತವಾದ ಮಾರ್ಗದಿಂದ ದೈವಯೋಗವು ಕೂಡಿಬರುತ್ತದೆ. ಆ ಸ್ಥಳದಲ್ಲಿ ಉಭಯತರು ಹುಡುಗಿಯನ್ನು ಕರೆದುಕೊಂಡು ಕುಳಿತಾಗ ಕೆಲವು ಮುಸಲ್ಮಾನ ಪ್ರವಾಸಿಗಳು ಅವರಿಗೆ ಭೆಟ್ಟಿಯಾದರು. ಅವರ ಹತ್ತರ ಪ್ರವಾಸಕ್ಕೆ ಬೇಕಾಗುವ ಸಾಮಗ್ರಿಯು ವಿಪುಲವಾಗಿತ್ತು. ಅವರು ಈ ಸಂಕಟ ಸಮಯದಲ್ಲಿ ಇವರಿಗೆ ಸಹಾಯ ಮಾಡಿ ಇವರನ್ನು ಲಾಹೋರಕ್ಕೆ ಮುಟ್ಟಿಸಿದರು. ಆ ಕಾಲಕ್ಕೆ ಅಕಬರ ಬಾದಶಹನ ಸ್ವಾರಿಯು ಅಲ್ಲಿಯೇ ಇತ್ತು. ಬಾದಶಹನ ದರಬಾರದೊಳಗಿನ ಒಬ್ಬ ಗೃಹಸ್ಥನು ತನಗೆ ದೂರಿನ ಆಪ್ತನಾಗಬೇಕೆಂದು ಆಯಾಸ ನಿಗೆ ತಿಳಿದ ಕೂಡಲೆ ಅವನಿಗೆ ಅತ್ಯಾನಂದವಾಯಿತು. ಈ ಗೃಹಸ್ಥನು ದೊಡ್ಡ ಅಧಿಕಾರಿಯಾಗಿದ್ದು, ಬಾದಶಹನ ಹತ್ತರ ಅವನ ವರ್ಚಸ್ವವಾದರೂ ಒಳಿತಾಗಿತ್ತು. ಆಯಾಸನಿಗೆ ಆಪ್ತನಾಗಿದ್ದ ಈ ಗೃಹಸ್ಥನ ಸಹಾಯದಿಂದ ಅವನ ಊರ್ಜಿತ ಕಾಲವು ಪ್ರಾರಂಭವಾಯಿತು. ಉತ್ತರೋತ್ತರ ಆಯಾಸನ ಅಭ್ಯುದಯವಾಗಹತ್ತಿ, ದರಬಾರದಲ್ಲಿ ಮಾನಮರ್ಯಾದೆಯನ್ನು ಹೊಂದಿದನು. ತನ್ನ ಯೋಗ್ಯತೆ ಮತ್ತು ಪರಿಶ್ರಮ ಇವುಗಳಿಂದ ಆವನು ಸಾವಿರ ಸರದಾರರ ಮೇಲೆ ಅಧಿಕಾರಿಯಾದನು. ಅವನು ಭಾಗ್ಯಶಾಲಿಯಾದಂತೆ ಬುದ್ಧಿವಂತನಾದರೂ ಇದ್ದರಿಂದ ಉಚ್ಚುಚ್ಚ ಪದವಿಯನ್ನೇರುತ್ತೇರುತ್ತ ಸ್ವಲ್ಪ ದಿವಸಗಳಲ್ಲಿಯೇ ಬಾದಶಾಹೀ ಖಜೀನದಾರಿಯ ಅತ್ಯುಚ್ಚ ಪದಕ್ಕೇರಿದನು. ಈ ಪ್ರಕಾರ ಕೆಲವು ವರ್ಷಗಳ ಪೂರ್ವದಲ್ಲಿ ತನ್ನ ಹೆಂಡತಿ ಮತ್ತು ಮಗಳ ಸಹಿತವಾಗಿ ಒಂದು ನಿರ್ಜನವಾದ ಅರಣ್ಯದಲ್ಲಿ ಮರಣೋನ್ಮುಖ ಸ್ಥಿತಿಯಲ್ಲಿದ್ದವನು, ತನ್ನ ಭಾಗ್ಯದ ಮತ್ತು ಗುಣಗಳ ಬಲದಿಂದ ಸಂಪೂರ್ಣ ರಾಜ್ಯದಲ್ಲಿ ಮೊದಲನೆಯ ಪ್ರತಿಯ ಸರದಾರ ಮತ್ತು ಮುತ್ಸದ್ದಿಯಾಗಿ ಕುಳಿತನು. ಲಾಹೋರಕ್ಕೆ ಬಂದು ಕೆಲವು ದಿವಸಗಳು ಗತಿಸಿದ ಬಳಿಕ, ಅರಣ್ಯದಲ್ಲಿ ಭಯಂಕರವಾದ ಗಂಡಾಂತರದಲ್ಲಿ ಸಿಕ್ಕಿದ್ದ ಹುಡುಗೆಯ ಸ್ವರೂಪಮಾಧುರ್ಯದ ಖ್ಯಾತಿಯು ಸರ್ವತ್ರ ಹಬ್ಬಿ ಅವಳಿಗೆ "ಮೆಹೆರ ಉನ್ನಿಸಾ” ಅಂದರೆ ಸ್ತ್ರೀ ತಾರಾಂಗಣದೊಳಗಿನ ಚಂದ್ರವೆಂಬ ಹೆಸರು ಪ್ರಾಪ್ತವಾಯಿತು. ಹುಣ್ಣಿವೆಯ ಚಂದ್ರನನ್ನು ನಾಚಿಸುವ "ಮೆಹೆರ ಉನ್ನಿಸಾ" ಇವಳು ಹದಿನೈದು ವರ್ಷದವಳಾದಾಗಂತೂ ನನ್ನ ನಿಷ್ಕಲಂಕವಾದ ತೇಜದಿಂದ ಎಲ್ಲರ ನೇತ್ರಗಳಲ್ಲಿ ತನ್ನ ಸೌಂದರ್ಯದ ಅಮೃತವೃಷ್ಟಿಯನ್ನು ಮಾಡಹತ್ತಿದಳು. ಅವಳಿಗೆ ಸಮಾನಳಾದ ಸುಂದರ ಸ್ತ್ರೀಯು ಇಡೀ ಖಂಡದಲ್ಲಿ ಇದ್ದಿದ್ದಿಲ್ಲ. ತಾಯಿಯ ರೂಪಸಂಪತ್ತು ಮತ್ತು ತಂದೆಯ ಬುದ್ಧಿ ವೈಭವ ಇವುಗಳ ಸಮ್ಮೇಲನದಿಂದ ಅವಳ ಅಂತರ್ಬಾಹ್ಯ ತೇಜದ ಕಿರಣಗಳು ದಿನದಿನಕ್ಕೆ ವಿಕಾಸ ಹೊಂದಹತ್ತಿದವು. ಇದ್ದ ಲಿಯ ರಾಶಿಯಲ್ಲಿ ರತ್ನವು ಮತ್ತು ಶೈವಾಲದಲ್ಲಿ ಕಮಲದ ಶೋಭೆಯು ಲುಪ್ತವಾಗುವದು ಹ್ಯಾಗೆ ಅಸಂಭವವೋ ಹಾಗೆ ಈ ಸ್ತ್ರೀರತ್ನವು ದಾರಿದ್ರ್ಯ ಪಂಕದಲ್ಲಿ ಪರಿವೇಷ್ಟಿತವಾಗಿ ಉಳಿದಿದ್ದರೂ ಅದು ತನ್ನ ಕಡೆಗೆ ಜಗತ್ತಿನ ದೃಷ್ಟಿಯನ್ನು ಆಕರ್ಷಿತ ಮಾಡಿಕೊಳ್ಳದೆ ಇರುತ್ತಿದ್ದಿಲ್ಲ; ಅಂದ ಸರಓಪನ ಮೇಲೆ ಸಂಪತ್ತು, ಬುದ್ಧಿ ಮತ್ತು ಕೀರ್ತಿ ಈ ಮೂರೂ ಸಾಧನ:೪೦ದ ದೊಡ್ಡ ಪದವಿಯನ್ನು ಮಟ್ಟದ ಆಯಾಸನಂಥ ಉದುರರಾಯನ ( ಅಪತ್ಯ ಪದವಿ ”ಯನ್ನು ಹೊಂದಿದ ಈ ತರುಣಿಯ ಮಹಿಮೆಯನ್ನು ಎಷ್ಟೊಂದು ವರ್ಣಿಸಬೇಕು ! ಆಕೆಯಲ್ಲಿದ್ದ ಅನೇಕ ಗುಣಗುರುತ್ವದ ಆಕರ್ಷಣದಲ್ಲಿ ಸಿಕ್ಕ ದೊಡ್ಡ ದೊಡ್ಡ ಮನೆತನದ ಉಮರರಾದರೂ, ನಮಾಂಕಿತ ಯೋದ್ಧರೂ ಅವಳನ್ನು ತಮ್ಮ ಪತ್ನಿ ಪದದ ಮೇಲೆ ಸ್ಥಾಪಿಸಿ ಅವಳ ಚರಣದಲ್ಲಿ ತಮ್ಮ ಸರ್ವಸ್ವವನ್ನು ಅರ್ಪಣ ಮಾಡುವದಕ್ಕೆ ಸಿದ್ಧರಾದರು. ಆದರೆ ಯಾವನ ಶೌರ್ಯ ಮತ್ತು ಹೃದಯಸೌಂದರ್ಯ ಇವು ಅಪ್ರತಿಮವಾಗಿ ದ್ದವೋ ಅಂಥ ಒಬ್ಬ ಸರದಾರನ ಮೇಲೆ ಆಯಾಸನ ಮನಸು ಹೋಗಿ ಜೀವ ನನ್ನು ಅಳಿಯನಾಗಿ ಮಾಡಿಕೊಳ್ಳಬೇಕೆಂದು ಅವನು ಮನಸಿನಲ್ಲಿ ನಿಶ್ಚಯಿಸಿ ದ್ದನು. ಆ ಭಾಗ್ಯಶಾಲಿಯು ಯಾವವೆಂದರೆ, ಈ ಶೇರಅಫಗನ್ ಖ ಹೆಸರಿನ ಒಬ್ಬ ಪರ್ಶಿಯನ್ ಸರದಾರನು. ಬಂಗಾಲದಲ್ಲಿ ಇವನಿಗೆ ಒಂದು ದೊಡ್ಡ ಜಹಗೀರಿ ಇತ್ತು. ಮತ್ತು ಆತಬರನ ದರಬಾದದಲ್ಲಿ ಇವನಿಗೆ ಸಮಾನನಾದ ಗುಣಸಂಪನ್ನ ಮತ್ತು ಬಲೆ: ಥ್ಯ ಸರದಾರನು ಯಾವನೂ ಎ೦ಬ ಆದರೆ, ತಂದೆಯ ಈ ಇಚ್ಛೆ ಮತ್ತು ಯೋಜನೆ ಇವುಗಳ ಸಂಬಂಧ ವಾಗಿ ಮೆಹೆರಉನ್ನಿಸಾ ಇವಳು ಪೂರ್ಣ ಒಜ್ಞಾತಳಿದ್ದಳು. ಅವಳ ಸ್ವಂತದ ಇಚ್ಛೆಯು ಬೇರೆಯಾಗಿತ್ತು. ಅನಳ ಸತ್ವಾಕಾಂಕ್ಷೆಯುಳ್ಳ ಮನಸು ಶಹಾಜದಾ 'ಸ್ಲೀಮ'ನ ಪ್ರೇಮವನ್ನು ಸಂಪಾದಿಸಬೇಕೆಂಬದಾಗಿತ್ತು. ಒಮ್ಮೆ ಅವನಿಗೆ ತನ್ನ ದರ್ಶನವಾಯಿತೆಂದರೆ, ಅವನು ತನ್ನ ಸೌಂದರ್ಯಕ್ಕೆ ಸಹಜವಾಗಿ ಮೋಹಿತನಾಗುವನೆಂತು ಅವಳ ತಿಳುವಳಿಕೆಯಾದ್ದರಿಂದ ಅವಳು ಅ೦ಥ ಸಮಯದ ಮಾರ್ಗ ನಿರೀಕ್ಷಣೆ ಯನ್ನು ಮಾಡುತ್ತಿದ್ದಳ; ಮತ್ತು ಅಂತ ಸಂಧಿಯಾದ ಕೂಡಲೆ ಪ್ರಾಪ್ತವಾಯಿ: ರಹಾಜಾದನು ಒಂದು ದಿವಸ ಅವಳ ತಂದೆಯ ಭೆಟ್ಟಿಗಾಗಿ ಅವಳ ಮನೆಗೆ ಬಂದನು, ದರಬಾರವು ಮು' ದ ಬಳಿಕ ಮುಖ್ಯ ಮುಖ್ಯ ಅತಿಧಿಗಳ ಹೊರತು ಎಲ್ಲ ಜನರು ನನ್ನ ತಮ್ಮ ಜಾನೆಗೆ ಹೋದರು. ತುಂಬಿದ ಮದ್ಯದ ಸೀಲೆಗಳು ದಿವಾನಖಾನೆಯಲ್ಲಿ ಬಂದ ಬಳಿಕ ಜನನಖಾನೆಯೊಳಗಿನ ಪ್ರಮುಖ ಸ್ತ್ರೀಯರು ಬರಕೀ ಸಹಿತವಾಗಿ ಹೊರಗೆ ಬಂದರು. ಇದೇ ಸಂಧಿಯು ಆ ಲೋಕೋತ್ತರ ತರುಣಿಗೆ ತನ್ನ ಮೋಹಿನಿಯ ಪ್ರಭಾವವನ್ನು ನೋಡುವದಕ್ಕೆ ಅನಾಯಾಸವಾಗಿ ದೊರೆಯಿತು. ಅವಳ ಮಧುರ ಗಾಯನವನ್ನು ಕೇಳಿ ಶಹಾಜಾದನಿಗೆ ಆಲ್ಹಾದವಾಯಿತು, ಅವಳ ನೃತ್ಯದಿಂದ ಅವನು ಮೋಹಿತನಾದನು. ಅವಳ ಮೈಕಟ್ಟು ಆಕೃತಿ ಮತ್ತು ನಡಿಗೆಯ ಸೊಬಗು ಇವುಗಳ ಅವಲೋಕನದಿಂದ ಅವಳ ಅಪ್ರತಿಮವಾದ ಸೌಂದರ್ಯದ ಕಲ್ಪನೆಯು ಶಹಾಜಾದನ ಮನಸಿನಲ್ಲಿ ಮರ್ಶಿಮಂತವಾಗಿ ನಿಂತಿತು. ಅವಳ ಅವಯವಗಳ ಮೇಲೆ ನಿಶ್ಚಲವಾಗಿದ್ದ ಅವನ ನೇತ್ರಗಳು ಅವಳ ಸೌಂದರ್ಯರಸದ ಪಾನವನ್ನು ಮನ ಸೋಕ್ತವಾಗಿ ಮಾಡಹತ್ತಿದವು. ಈ ರೀತಿಯಾಗಿ ಶಹಾಜಾದನು ಅವಳ ಕಡೆಗೆ ಏಕಾಗ್ರ ದೃಷ್ಟಿಯಿಂದ ನೋಡುತ್ತಿರುವಾಗ, ಆಕಸ್ಮಿಕವಾಗಿ ಬೀಳುವಂತೆ ಅವಳ ಮೋರೆಯ ಮೇಲಿನ ಬುರಿಕೆಯು ಕೆಳಗೆ ಬಿದ್ದಿತು; ಮತ್ತು ಅವಳ ಲಾವಣ್ಯ ಸಭೆಯು ಸೇಲೀಮನ ಅತ್ಯಂತ ಆತುರವಾದ ನೇತ್ರಗಳಲ್ಲಿ ಪೂರ್ಣವಾಗಿ ನೆಟ್ಟಿತು. ಆ ಕಾಲಕ್ಕೆ ಅವಳಿಂದ ಆತಿ ಮೋಹಕ ತನದಿಂದ ಪ್ರದರ್ಶಿ ಮಾಡಲ್ಪಟ್ಟ ಸಂಭ್ರಮದಿಂದ ಅವಳ ಮುಖಚಂದ್ರವು ಅತಿಶಯವಾಗಿ ಪ್ರಫುಲ್ಲಿತವಾಯಿತು ಆ ಮೃಗಾಕ್ಷಿಯ ಭಯಚಂಚಲವಾದ ದೃಷ್ಟಿಯಿಂದ ಹೊರಟ ಮದನಬಾಣವು ನಿಮಿಷಾರ್ಧದಲ್ಲಿ ಶಹಾಜಾದನ ಅಂತಃಕರಣವನ್ನು ಪ್ರವೇಶ ಮಾಡಿತು. ತನ್ನ ಲಾವಣ್ಯದ ಪ್ರಭೆಯಿಂದ, ಉದ್ದೀಪ್ತನಾದ ಸೇಲೀಮನನ್ನು, ಚಾತುರ್ಯದಿಂದ ತನ್ನ ಮೋಹಜಾಲದಲ್ಲಿ ತೊಡಕಿಸುವ ಪ್ರಯತ್ನವನ್ನು ಅವಳು ಮಾಡುತ್ತಿರಲು, ಸೇಲೀನನಾದರೂ ಸಾಯಂಕಾಲದ ಸಮಯವನ್ನು ಅಲ್ಲಿಯೇ ಸ್ವಸ್ಥವಾಗಿ ಕುಳಿತು ಕಳೆದನು.

ಈ ರೀತಿಯಾಗಿ ತನ್ನ ಮೋಹಜಾಲದ ಪ್ರಭಾವದ ಪ್ರತೀತಿಯನ್ನು ತೆಗೆದುಕೊಳ್ಳುತ್ತಿರುವಾಗ, ತನ್ನ ಮಹತ್ವಾಕಾಂಕ್ಷೆಯಿಂದ ಮುಂದೆ ತನ್ನ ಮೇಲೆ ಮತ್ತು ಇತರ ಜನರ ಮೇಲೆ ಯಾವ ಪ್ರಸಂಗಗಳು ಬಂದೊದಗುವ ಎಂಬದರ ಕಲ್ಪನೆ ಯಾದರೂ ಮೆಹೆರಉನ್ನಿ ಸಾಗೆ ಇದ್ದಿದ್ದಿಲ್ಲ. ಸೇಲೀಮನ ಅಂತಃಕರಣವನ್ನಾದರೂ ಅವಳು ಗೆದ್ದಳು, ಮತ್ತು ಅವನು ಬಾದಶಹನಾದ ಮೇಲೆ ವಿವಾಹವಿಧಿಪೂರ್ವಕ ಅವನ ಅರ್ಧಾಂಗಿಯಾಗಿ ಬಾದಶಾಹಿ ಸಿಂಹಾಸನದ ಅರ್ಧ ಯಜಮಾನತಿಯಾದರೂ ಆದಳೆಂಬ ಮಾತು ನಿಜ; ಆದರೆ ಅವಳಿಂದ ಪ್ರಕಟ ಮಾಡಲ್ಪಟ್ಟ ಈ ಪ್ರೇಮವು, ಮತ್ತು ಶಹಾಜಾದನಿಗೆ ಹಿಡಿದ ಅವಳ ಸೌಂದರ್ಯದ ಹುಚ್ಚು, ಇವುಗಳ ಮೊಟ್ಟ ಮೊದಲಿನ ಪರಿಣಾಮವು ಬಹಳೇ ವಿಪರೀತವಾಯಿತು. ಶಹಾಜಾದಾ ಸೇಲೀಮನ ಮತ್ತು ತನ್ನ ಮಗಳ ಮನೋಗತಗಳು ಆಯಾಸನಿಗೆ ತಿಳಿದ ಕೂಡಲೆ, ಅವನು ವಿಳಂಬ ಮಾಡದೆ, ಈರ ಅಫಗನನ ಸಂಬಂಧವಾಗಿ ತಾನು ಮಾಡಿದ ವಾಗ್ ನಿಶ್ಚಯವನ್ನು ಪ್ರಸಿದ್ಧ ಪಡಿಸಿದನು, ಮೇಹೆಗಉನ್ನಿ ಸಾನ ಕಿವಿಗೆ ಈ ವರ್ತಮಾನವು ಬಿದ್ದ ಕೂಡಲೆ ಅವಳು ಕ್ರೋಧಾವಿಷ್ಟಳಾಗಿ ಅತ್ಯಂತ ದುಃಖಪಟ್ಟಳು ಮತ್ತು ತಂದೆಯ ಯೋಚನೆಯನ್ನು ತಿರುಗಿಸುವದಕ್ಕಾಗಿ ಅನೇಕ ರೀತಿಯಂದ ಅವನಿಗೆ ಬೇಡಿಕೊಂಡಳು. ಆದರೆ ಅದರ ಉಪಯೋಗವು ಎಳ್ಳಷ್ಟಾದರೂ ಆಗಲಿಲ್ಲ. ಇತ್ತ ತನ್ನ ವತಿಯಿಂದ ಬಾದಶಹನು ಮಧ್ಯಸ್ಥಿಯನ್ನು ಮಾಡಬೇಕೆಂದು ಸೇಲೀಮನು ಅಕಬರನಿಗೆ ಬಹಳ ಸರಿಯಿಂದ ಹೇಳಿಕೊಂಡನು. ಈ ಪ್ರಕಾರದ ಅನ್ಯಾಯವು ತನ್ನ ಮಗನ ಸಲುವಾಗಿ ಸಹ ತನ್ನಿಂದಾಗದೆಂದು ಆಕಬರನು ಸ್ಪಷ್ಟವಾಗಿ ಹೇಳಿದನು. ಸೇಲೀಮನಿಗೆ ಲಜ್ಜೆಯಿಂದ ಸ್ವಚ್ಛವಾಗಿರಬೇಕಾಯಿತು. ಇನ್ನು ತನ್ನ ಪ್ರಯತ್ನವು ನಿಷ್ಪಲವಾಗುವದೆಂದು ಯೋಚಿಸಿ, ತಂದೆಯು ನಿಶ್ಚಯಿಸಿದಂತೆ ಮೆಹೆರಉನ್ನಿಸಾ ಇವಳು ಶೇರಆನಗನನ ಅರ್ಧಾಂಗಿಯಾದಳು. ಅವಳ ಮಹತ್ವಾಕಾಂಕ್ಷೆಯ ಪ್ರಶ್ನವನ್ನು ಒಂದು ಬದಿಗಿಟ್ಟರೆ, ತಂದೆಯಿಂದ ಅವಳ ಸಲುವಾಗಿ ಯೋಚಿಸಲ್ಪಟ್ಟ ಪತಿಯು ಅವಳಿಗೆ ಸೇರುತ್ತಿದ್ದಿಲ್ಲ, ಹೀಗೇನಲ್ಲ.

ಸೇಲೀಮನ ವಿನಂತಿಗನುಸರಿಸಿ ವಾಗ್ನಿಶ್ಚಯವನ್ನು ಮುರಿಯುವದಕ್ಕೆ ಶೇರಅಫಗನನು ಒಪ್ಪಿಕೊಳ್ಳಲಿಲ್ಲಾದ್ದರಿಂದ ದರಬಾರದಲ್ಲಿ ಅವನ ವರ್ಚಸ್ವವು ದಿನದಿನಕ್ಕೆ ಕಡಿಮೆಯಾಗಹತ್ತಿತು. ಬಾದಶಹನ ಭೀತಿಯ ಮೂಲಕವಾಗಿ ಸೇಲೀಮನು ಬಹಿರಂಗದಲ್ಲಿ ತನ್ನ ವೈರವನ್ನು ಪ್ರಕಟಮಾಡಲಿಲ್ಲ; ಆದರೂ ದರಬಾರದ ಮತವನ್ನು ಅವನ ವಿರುದ್ದವಾಗಿ ಕಲುಷಿ ಶಮಾಡುವದಕ್ಕೆ ಅವನು ಹಿಂದೆಮುಂದೆ ನೋಡಲಿಲ್ಲ. ಕೊನೆಗೆ ಅಫಗನನು ಬೇಸತ್ತು ಬಂಗಾಲದಲ್ಲಿದ್ದ ತನ್ನ ಜಾಹಗೀರಿಯ ಮೇಲೆ ಹೊರಟು ಹೋದನು; ಮತ್ತು ಅಲ್ಲಿಯ ಸಭೆಬಾರನಿಂದ ಬರದ್ವಾನದ ರಾಜ್ಯ ಕಾರಭಾರವನ್ನು ತನ್ನ ಕಡೆಗೆ ತೆಗೆದುಕೊಂಡನು. ಅಕಬರನ ಮರಣದವರೆಗೆ ಅವನು ಅಲ್ಲಿಯೇ ಇದ್ದನು. ಅಲ್ಲಿ ge ಸಂಪೂರ್ಣ+ಕಥೆಗಳು ಅವನ ಸಂಸಾರವು ಒಳ್ಳೇ ಸುಖಮಯವಾಗಿ ನಡೆದಿತ್ತು. ತನ್ನ ಶರ ಮತ್ತು ಗುಣಸಂಪನ್ನ ಪತಿಯ ವಿಷಯವಾಗಿ ಮೆಹೆರಉನ್ನಿ ಸಾ ಇವಳಿಗೆ ಒಳ್ಳೆ ಅಭಿಮಾನವೆನಿಸುತ್ತಿತ್ತು. ಇ ಸಿ ೧೬೦ ನೇ ವರ್ಷದಲ್ಲಿ ಆಕಬರ ಬಾದಶಹನು ಮರಣ ಹೊಂದಿದನು, ಜಹಾಂಗೀರ ೬೦ದರೆ ಜಗಜೇತಾ ಎಂಬ ಭವ್ಯವಾದ ಹೆಸ ಬೆನ್ನು ಧಾರಣ ಮಾಡಿ ಸೇವನ: ಬಾದಶ ಸಿಂಹಾಸನದ ಮೇಲೆ ಆರೂಢ - ನಾದನು; ಮತ್ತು ಸೂರ್ಯನು ಕ್ಷಿತಿ ಜನರಿಬರುವ ಮಂಗಲಮುಹೂರ್ತ ದಲ್ಲಿ ಅವನು ತನ್ನ ಭಾಗದಲ್ಲಿ ಗಜಮುಕುಟವನ್ನು ಇಟ್ಟು ಕೊಂಡನು. ರಾಜ್ಯಾಭಿಷೇಕವಾದ ಬಳಿಕ ನಾಲ್ವತ್ತು ದಿವಸಗಳ ವರೆಗೆ ಒಂದೇ ಸಮನ ಉತ್ಸವವು ನಡೆದಿತ್ತು. ಈ ಅಪೂರ್ವವಾದ ಉತ್ಸವಕ್ಕೆ ಸರಿಯಾದ ಮತ್ತೊಂದು ಉದಾಹರಣವು ಈ ಖಂಡದ ಇತಿಹಾಸದಲ್ಲಿ ದೊರೆಯುವ ದಿಲ್ಲೆಂದರೆ, ಅದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಈ ಉತ್ಸವವು ಮುಗಿದ ಬಾದಶಹನ ಅಕ್ಷವು ಮೆಸರನ್ನಿ ಸಾನ ಕಡೆಗೆ ಹೋಯಿತು. ಅಕಬರನು ಜೀವಂತನಿರುವಾಗ ಅವನ ಭೀತಿಯಿಂದ ಬಚ್ಚಿಡಲ್ಪಟ್ಟ ಸೇಲೀಮನ ಪ್ರೇಮ: ಯು ಈಗ್ಗೆ ಹೊತ್ತ ಹತ್ತಿತು. ಹಿಂದುಸ್ಥಾನದ ಸರ್ವಸಾಧಾರಿ ಬೇಗ ಬಾದಶಹನು ತಾನು ಇರುವದರಿಂದ, ವೇ: ಹೆರಉನ್ನಿಸಾ ಇವಳು ಹೆರವರ ವಿವಾಹಿತ ಸತ್ನಿ ಯಾಗಿದ್ದರು. ಅವಳನ್ನು ತನ್ನ ಸ್ವಾಧೀನ ಮಾಡಿ ಕೊಳ್ಳುವ ಅಧಿಕಾರವು ತನಗೆ ಪೂರ್ಣವಾಗಿರುತ್ತದೆಂದು ಅವನು ತಿಳಿದು ಕೊಂಡಿದ್ದನು. ಸ್ತ್ರೀ 'ಮೇತನಾಗಿ ದಿಲ್ಲಿಗೆ ಬಂದು ದರಬಾರಕ್ಕೆ ಹಾಜರನಾಗ ಬೇಕೆಂಬ ಹುಳುವನ್ನು ಬಾದರಸನು ಶೇ ಅಫಗನನಿಗೆ ಕಳಿಸಿದನು. ಹುಕುಮಿಗೆ ಅನುಸರಿಸಿ ಆ ಸರದಾರನು ಶಾಜರನಾದ ಬಳಿಕ ಬಾದಶಹನು, ಬಹಿಳcri ಇಲ್ಲಿ ಪ್ರೇಮವನ್ನು ತೋರಿಸಿ ಆತನಿಗೆ ಹೊಸ ಹೊಸ ಮಾನ ಮರ್ಯಾದೆಗಳನ್ನು ಕೊಟ್ಟನು, ಶೇದಆಫಗನನು ನಿಸರ್ಗತಃ ನಿಷ್ಕಪಟನೂ, ಉದಾರನೂ ಇದ್ದದರಿಂದ ಬಾದಶಹನ ಮನಸ್ಸಿನಲ್ಲಿ ತನ್ನ ವಿಷಯಕವಾಗಿ ವಿಷವು ತುಂಬಿದೆಂಬ ಶಂಕೆ ಯಾದರೂ ಅವನಿಗೆ ಬರಲಿಲ್ಲ. ಇನ್ನು ಕಾಲವು ಗತಿಸಿಹೋಗಿದೆಂದ ಮೇಲೆ ಬಾದಶಹನು ಇತರ ಸ್ತ್ರೀಯರಲ್ಲಿ ಲಂಪಟನಾಗಿ, ಪೂರ್ವ ಸಂಗತಿಗಳ ಏಸ್ಮರಣೆ ಯಾದರೂ ಅವನಿಗೆ ಆಗಿರಬಹುದೆಂಬ ತಿಳುವಳಿಕೆಯಿಂದ ಶೇಹರಅಫಗನನು ದಿಲ್ಲಿಗೆ ಹೋಗಿದ್ದನು; ಆದರೆ, ತನ್ನ ತಿಳುವಳಿಕೆಯು ತಪ್ಪಿನದೆಂದು ಅವನಿಗೆ ಮುಂದೆ ಕಂಡುಬಂದಿತು.

ತನ್ನ ಪ್ರತಿಸ್ಪರ್ಧಿಯನ್ನು ನಾಶಪಡಿಸಿ ತನ್ನ ಮನೋಗತವಾದ ಸ್ತ್ರೀಯನ್ನು ಕೈವಶ ಮಾಡಿಕೊಳ್ಳುವ ನಿಶ್ಚಯವನ್ನು ಬಾದಶಹನು ಮಾಡಿದ್ದನು. ಅವನ ಮನಸಿಗೆ ಅವಳ ವಿಸ್ಮರಣೆಯು ಎಂದೂ ಆಗಿದ್ದಿಲ್ಲ ಮತ್ತು ಅವಳನ್ನು ತನ್ನಾ ಕೆಯನ್ನಾಗಿ ಮಾಡಿಕೊಳ್ಳುವ ಆಶೆಯಾದರೂ ಅವನ ಮನಸಿನೊಳಗಿಂದ ಎಂದೂ ಹೋಗಿದ್ದಿಲ್ಲ. ತನ್ನ ಮನೋಗತವನ್ನು ಸಾಧಿಸಿಕೊಳ್ಳುವದಕ್ಕಾಗಿ ಅವನು ಯೋಚಿಸಿದ ಮಾರ್ಗವು ಮಾತ್ರ ಅವನ ಯೋಗ್ಯತೆಗೆ ಕುಂದು ತರುವಂಥದಾಗಿತ್ತು.

ಹುಲಿಯ ಬೇಟೆಯಲ್ಲಿ ಶೇರ ಅಫಗನನನ್ನು ಗಂಡಾಂತರದ ಪ್ರಸಂಗದಲ್ಲಿ ಚಾಚಿ ಅವನನ್ನು ನಾಶಮಾಡುವ ಮೊದಲನೆಯ ಯುಕ್ತಿಯನ್ನು ಬಾದಶಹನು ಯೋಚಿಸಿದನು. ನಿಡರಬರಿಯ ಅರಣ್ಯದಲ್ಲಿ ಒಂದು ಭಯಂಕರವಾದ ಹುಲಿಯು ಬಂದಿರುವ ಸುದ್ದಿ ಯು ಬಂದೊದಗಿತು ಈ ಹುಲಿಯು ಹಳ್ಳಿಕೊಳ್ಳೆಯೊಳಗಿನ ಅನೇಕ ದನಕರುಗಳನ್ನು ನಾಶಮಾಡಿತ್ತು, ಮೇಲಾಗಿ ಕೆಲವು ಜನರನ್ನಾದರೂ ಕೊಂದು ತಿಂದಿತ್ತು. ಈ ಹುಲಿಯ ಬೇಟೆಯ ಸಲುವಾಗಿ ಬಾದಶಹನು ಸ್ವತಃ ಹೊರಟನು. ಆವನ ಮುಖ್ಯ ಮುಖ್ಯ ಸರದಾರರೂ, ಶೇರಅಫಗನನೂ ಅವನನ್ನು ಹಿಂಬಾಲಿಸಿದರು. ಆ ಕಾಲದ ಬೇಟೆಯ ಪದ್ಧತಿಗನುಸರಿಸಿ ಎಷ್ಟೋ ಮೈಲುಗಳ ವರೆಗೆ ನಾಲ್ಕೂ ದಿಕ್ಕಿನಿಂದ ಸುತ್ತುಗಟ್ಟುತ್ತ ಬೇಟೆಗಾರರು ಆಡವಿಯನ್ನು ಹೊಕ್ಕರು, ಹುಲಿಯು ತನ್ನ ಸ್ಥಾನವನ್ನು ಬಿಟ್ಟು ಗುಡುಗುಹಾಕುತ್ತ ಮುಂದೆ ಬರಹತ್ತಿತು. ಹುಲಿಯ ಗುಡುಗು ಸ್ಪಷ್ಟವಾಗಿ ಕೇಳಬರಹತ್ತಿದ ಕೂಡಲೆ, ಬಾದಶಹನ ಜನರು ಧಾವಿಸಹತ್ತಿದರು. ಎಲ್ಲ ಸರದಾರರು ಏಕತ್ರ ಮಿಲಿತರಾದ ಬಳಿಕ, ಹುಲಿಯ ಮೈ ಮೇಲೆ ಒಬ್ಬನೇ ಸಾಗಿ ಹೋಗಿ ಅದರ ಮೇಲೆ ಹಲ್ಲೆ ಮಾಡುವ ಸಮರ್ಥನು ನಿಮ್ಮೊಳಗೆ ಯಾವನಿರುವನೆಂದು ಬಾದಶಹನು ಪ್ರಶ್ನೆ ಮಾಡಿದನು. ಈ ಪ್ರಶ್ನೆಯನ್ನು ಕೇಳಿದ ಕೂಡಲೆ, ಮವರು ಸರದಾರರು ಮುಂದೆ ಬಂದು ಹುಲಿಯ ಮೇಲೆ ಸಾಗಿ ಹೋಗುವದಕ್ಕೆ ಅಪ್ಪಣೆಯನ್ನು ಬೇಡಿಕೊಂಡರು. ಇದು ನಡೆದಿರು ವಷ್ಟರಲ್ಲಿ, ಬಾದಶಹನು ಮನಸ್ಸಿನಲ್ಲಿ ಯೋಚಿಸಿದಂತೆ, ಶೇರಅಫಗನಿಗೆ ಸ್ಪುರಣವು ತುಂಬಿ, ಇವತ್ತಿನ ವರೆಗೆ ಸಂಪಾದಿಸಿದ ಕೀರ್ತಿಯನ್ನು ಈ ಕಾಲಕ್ಕೆ ಹೋಗಗೊಡಬಾರದೆಂಬ ವಿಚಾರದಿಂದ ಆವನು ಮುಂದೆ ಬಂದು ಅಂದದ್ದೆನಂದರೆ, "ಶಸ್ತ್ರಪಾಣಿಯಾಗಿ ಪಶುಗಳ ಮೇಲೆ ಹಲ್ಲೆ ಮಾಡುವದು ವಿಶೇಷ ಪುರುಷಾರ್ಥದ್ದಾಗಿರದೆ ಅನ್ಯಾಯದ್ದಾಗಿದೆ. ಈಶ್ವರನು ಹುಲಿಗಳಿಗೆ ಅವಯವಗಳನ್ನು ಕೊಟ್ಟಂತೆ ಮನುಷ್ಯನಿಗಾದರೂ ಕೊಟ್ಟಿದ್ದಾನೆ. ಮೇಲಾಗಿ ತನ್ನ ಶಕ್ತಿಯ ಉಪಯೋಗವನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದರ ವಿಷಯಕವಾಗಿ ಮನುಷ್ಯನು ಈಶ್ವರನಿಂದ ವಿಚಾರಶಕ್ತಿಯನ್ನು ಪಡೆದಿದ್ದಾನೆ.”

ಈ ವಿಧಾನಕ್ಕೆ ಉಳಿದ ಸರದಾರರು ಆಕ್ಷೇಪವನ್ನು ತೆಗೆದು ಅಂದದ್ದೇನಂದರೆ, "ಹುಲಿಯ ಶಕ್ತಿಯಕಿಂತ ಮನುಷ್ಯನ ಶಕ್ತಿಯು ಸ್ವಾಭಾವಿಕ ವಾಗಿಯೇ ಕಡಿಮೆ ಇರುವದು; ಅದಕ್ಕಾಗಿ ಅದರ ನಾಶವನ್ನು ಶಸ್ತ್ರದಿಂದಲೇ ಮಾಡತಕ್ಕದ್ದು."

"ಈ ಮಾತು ನಿಜವಾದದ್ದಲ್ಲವೆಂದು ನಿಮಗೆ ಈಗಲೇ ತಿಳಿದು ಬರುವದು” ಹೀಗೆ ಶೇರಆಫಗನನು ನುಡಿದು, ತನ್ನ ಕೈಯೊಳಗಿನ ಕತ್ತಿ ಢಾಲನ್ನು ಬದಿಗೆ ಒಗೆದು ಬರಿಗೈಯಿಂದ ಹುಲಿಯ ಮೇಲೆ ಸಾಗಿಹೋಗುವದಕ್ಕೆ ಸಿದ್ಧನಾದನು. ಪರಿಣಾಮದಲ್ಲಿ ಘಾತಕವಾಗಿ ತೋರುವ ಈ ಅವಿಚಾರದ ಕೃತ್ಯದಿಂದ ಅವನನ್ನು ಪರಾಲ್ಮುಖಮಾಡುವ ಪ್ರಯತ್ನವನ್ನು ಬಾದಶಹನು ಬಹಿರಂಗವಾಗಿ ಮಾಡಿದರೂ ಅಲ್ಲಿ ನಡೆದ ಸಂಗತಿಯಿಂದ ತನ್ನ ಮನಸ್ಸಿನಲ್ಲಿ ಆನಂದಪಡುತ್ತಿದ್ದನು. ಅವನ ಧೈರ್ಯದ ಸ್ತುತಿಮಾಡಬೇಕೋ ಅಥವಾ ಅವನ ಮುರ್ಖತನದ, ನಿಷೇಧಮಾಡಬೇಕೋ ಎಂಬ ಸಂಶಯದಲ್ಲಿ ಬಾದಶಹನು ಮುಳುಗಿಹೋದನು. ಶೇರಅಫಗನನಿಗೂ ಮತ್ತು ಹುಲಿಗೂ ದ್ವಂದಯುದ್ಧವು ಪ್ರಾರಂಭವಾಯಿತು. ಬಹಳ ಹೊತ್ತಿನ ವರೆಗೆ ಅತ್ಯಂತ ಭಯಂಕರವಾದ ಕುಸ್ತಿಯಾಗಿ ಕೊನೆಗೆ ಆ ಹಿಂಸ್ರ ಪಶುವು ತನ್ನ ಪ್ರಾಣವನ್ನು ಬಿಟ್ಟಿತು. ಅರ್ಥಾತ್ ಶೇರಅಫಗನನಿಗೆ ಜಯವು ಪ್ರಾಪ್ತವಾಯಿತು. ಅನೇಕ ಸ್ಥಳಗಳಲ್ಲಿ ಗಾಯಗಳಾಗಿ ಅವುಗಳೊಳಗಿಂದ ವಿಶೇಷವಾಗಿ ರಕ್ತ ಸ್ರಾವವಾದ್ದರಿಂದ ಸರದಾರ ಶೇರಅಫಗನನು ತೀರ ದಣಿದುಹೋಗಿದ್ದನು. ಬಾದಶಹನು ಅವನನ್ನು ಅವನ ಮಂದಿರಕ್ಕೆ ಮುಟ್ಟಿಸಿದನು. ಮಹೆರಉನ್ನಿಸಾನ ಶುಶ್ರೂಷೆಯಿಂದ ಕೆಲವು ದಿವಸಗಳಲ್ಲಿ ಅವನ ಗಾಯಗಳು ತುಂಬಿಬಂದು ಪ್ರಕೃತಿಯು ಮೊದಲಿನಂತಾಯಿತು, ಈ ಅಲೌಕಿಕ ಧೈರ್ಯದ ಕೃತ್ಯವನ್ನು ಸಾವಿರಾರು ಜನರು ನೋಡಿದ್ದರಿಂದ ಶೇರಅಫಗನನ ಶೌರ್ಯದ ಕೀರ್ತಿಯು ನಾಲ್ಕೂ ಕಡೆಗೆ ಹಬ್ಬಿತು. ತನ್ನ ಉದ್ದೇಶವು ಸಫಲವಾಗಲಿಲ್ಲೆಂದು ಬಾದಶಹನಿಗೆ ಮಾತ್ರ ಅತ್ಯಂತ ಖೇದವೆನಿಸಿತು. ಆದರೆ ಅವನ ನಿಶ್ಚಯವು ಸ್ಥಿರವಾಗಿ ಉಳಿದು, ನಿರಾಶೆ ಮತ್ತು ಫಜೀತಿ ಇವುಗಳ ಯೋಗದಿಂದ ಅವನ ಇಚ್ಛೆಯು ಮಾತ್ರ ದ್ವಿಗುಣಿತವಾಯಿತು.

ಯಾವ ಪ್ರಯತ್ನದಿಂದಾದರೂ ಮೇಹರಉನ್ನಿಸಾ ಇವಳನ್ನು ತನ್ನ ಹಸ್ತಗತಮಾಡಿಕೊಳ್ಳುವ ಉದ್ದೇಶದಿಂದ ಜಹಾಂಗೀರನು ಮತ್ತೊಂದು ಉಪಾಯವನ್ನು ಯೋಚಿಸಿದನು. ತನ್ನ ಪ್ರಕೃತಿಯು ಮೊದಲಿನಂತಾದ ಕೂಡಲೆ, ಶೇರಅಫಗನನು ಬಾದಶಹನ ದರ್ಶನಕ್ಕಾಗಿ ಹೋದನು. ಬಾದಶಹನು ಅವನ ಮೇಲೆ ಸ್ತುತಿಯ ದೃಷ್ಟಿಯನ್ನು ಮಾಡಿ ತನ್ನ ಪ್ರೇಮವನ್ನು ವ್ಯಕ್ತಪಡಿಸಿದನು. ಶೇರಆನಗನನಿಗೆ ಬಾದಶಹನ ಕಾಪಟ್ಯವು ಕಂಡುಬರಲಿಲ್ಲ. ಅವನನ್ನು ಹಾಗೆ ಕೊಲ್ಲಬೇಕೆಂಬ ಯುಕ್ತಿಯನ್ನು ಬಾದಶಹನು ಮೊದಲೇ ರಚಿಸಿಟ್ಟಿದ್ದನು. ಶೇರಅಫಗನನಿಗೆ ಒಂದು ಚಿಕ್ಕ ಸಂದಿಯಲ್ಲಿ ಎದುರಾಗಿ, ಜನರಿಗೆ ಕೇವಲ ಆಪಘಾತದಂತೆ ತೋರುವ ಹಾಗೆ ಅವನ ಮೇಲೆ ಒಂದು ದೊಡ್ಡ ಮದೋನ್ಮತ್ತ ಆನೆಯನ್ನು ಹಾಕಿ, ಅವನ ಪ್ರಾಣವನ್ನು ತೆಗೆದುಕೊಳ್ಳುವದಕ್ಕೆ ಬಾದಶಹನು ಒಬ್ಬ ಮಾವುತನಿಗೆ ಹೇಳಿದ್ದನು

ಪಾಲಿಕೆಯಲ್ಲಿ ಕುಳಿತು ಆ ಶೂರ ಸರದಾರನು ತನ್ನ ಮಂದಿರಕ್ಕೆ ಮರಳಿ ಹೋಗುತ್ತಿರುವಾಗ, ಒಂದು ಸಂದಿಯ ಕೊನೆಗೆ ಒಂದು ಆನೆಯು ನಿಂತಿದ್ದು ಮಾರ್ಗವು ಪ್ರತಿಬಂಧಿತವಾಗಿದೆಂದು ಕಂಡಕೂಡಲೆ, ಆನೆಯನ್ನು ಬದಿಗೆ ಮಾಡುವದರ ಸಲುವಾಗಿ ಅವನು ತನ್ನ ಸೇವಕರಿಗೆ ಅಪ್ಪಣೆಯನ್ನು ಮಾಡಿದನು. ಆದರೆ ಆ ಸೇವಕರು ಭಯಭೀತರಾಗಿ ತಮ್ಮ ಒಡೆಯನ ಆಪ್ಪಣೆಯನ್ನು ಲಕ್ಷಕ್ಕೆ ತಾರದೆ, ಅವನು ಕೂತಿದ್ದ ಪಾಲಿಕೆಯನ್ನು ನೆಲಕ್ಕೆ ಚಲ್ಲಿ ಓಡಿಹೋದರು. ಸೇವಕ ಜನರ ಈ ಹೇಡಿತನದ ಕೃತ್ಯವನ್ನು ನೋಡಿ, ಶೇರಅಫಗನನು ಚಟ್ಟನೆ ಎದ್ದು ಒಂದು, ತೀಕ್ಷ್ಮವಾದ ಕತ್ತಿಯನ್ನು ಒರೆಯೊಳಗಿಂದ ಹೊರಗೆ ತೆಗೆದು ಆನೆಯ ಸೊಂಡೆಯ ಮೇಲೆ ಭ೦ದು ಬಲವಾದ ಆಘಾತವನ್ನು ಮಾಡಲು, ಆ ಕ್ಷಣವೇ ಆದು ಕತ್ತರಿಸಿ ನೆಲಕ್ಕೆ ಬಿದ್ದಿತು. ವೇದನೆಯನ್ನು ಸಹಿಸಲಾರದೆ ಆನೆಯು ಚೀರಾಡಹತ್ತಿ, ನೆಲಕ್ಕೆ ಬಿದ್ದು ತತ್ ಕ್ಷಣವೇ ಪ್ರಾಣವನ್ನು ಬಿಟ್ಟಿತು. ಅಲ್ಲಿ ನಡೆಯತಕ್ಕ ಸಂಗತಿಗಳು ತನ್ನ ದೃಷ್ಟಿಗೋಚರವಾಗಬೇಕೆಂಬ ಯೋಜನೆಯಿಂದ ಒಂದು ಬದಿಗೆ ನಿಂತಿದ್ದ ಬಾದಶಹನು ಶೇರಆನಗನನ ಪರಾಕ್ರಮವನ್ನು ನೋಡಿ ಚಕಿತನಾಗಿ, ಲಟ್ಟೆಯಿಂದ ತನ್ನ ಅರಮನೆಗೆ ಹೊರಟುಹೋದನು. ಆ ನಿಷ್ಕಪಟಯಾದ ಸರದಾರನು, ಪುನಃ ಬಾದಶಹನ ಭೆಟ್ಟಿಯಾದಾಗ್ಗೆ ನಡೆದ ಸಂಗತಿಗಳನ್ನೆಲ್ಲ ನಿವೇದನೆ ಮಾಡಿದನು. ಬಾದಶಹನು ಅವನ ಸಾಮರ್ಥ್ಯದ ಮತ್ತು ಶೌರ್ಯದ ಸ್ತುತಿಯನ್ನು ಯಥೇಚ್ಛವಾಗಿ ಮಾಡಿ, ತಾನು ರಚಿಸಿದ ವ್ಯೂಹದೊಳಗಿಂದ ಅವನು ಪಾರಾದ ಬಗ್ಗೆ ಮನಸಿನೊಳಗೆ ಒಂದೇ ಸಮನೆ ತಳಮಳಿಸಹತ್ತಿದನು.

ಜೀವದ ಮೇಲೆ ಬಂದೊದಗಿದ ಈ ಪ್ರಸಂಗಗಳಲ್ಲಿ ಬಾದಶಹನ ಅ೦ಗವಿರುವದೆಂದು ಆ ಸರಸ್ವಭಾವದ ಶೇರಅಫಗನಿಗೆ ಸಂಶಯವಾದರೂ ಬರಲಿಲ್ಲ. ಆದರೆ ಧೂರ್ತಳಾದ ಅವನ ಹೆಂಡತಿಯ ಲಕ್ಷ್ಯಕ್ಕೆ ಇದರ ಮರ್ಮವು ತೋಚಿ, ತ್ವರಿತವಾಗಿ ಬಂಗಾಲಕ್ಕೆ ಹೋಗುವದಕ್ಕಾಗಿ ತನ್ನ ಗಂಡನಿಗೆ ಬೇಡಿಕೊಂಡಳು. ಅತ್ತ ಹೋದರೆ ತಮ್ಮ ವೈರಿಯ ಖಂಗಿನ ಕೃತಿಗಳಿಂದ ತನ್ನ ಪತಿಯ ರಕ್ಷಣವಾಗುವ ಸಂಭವವಾದರೂ ವಿಶೇಷವಾಗಿರುವದೆಂದು ಅವಳು ವಿಚಾರಿಸಿದಳು, ಮುಂದೆ ಆರು ತಿಂಗಳುಗಳ ವರೆಗೆ ಯಾವದಾದರ ವಿಶೇಷವಾದ ಸಂಗತಿಯು ಸಂಭವಿಸಲಿಲ್ಲ; ಅದರಿಂದ ಬಾದಶಹನು ತನ್ನ ಮೇಲಿನ ಲೋಭವನ್ನು ಬಿಟ್ಟಿರಬಹುದು, ಅಥವಾ ಅವನಿಗೆ ಕೃತಕರ್ಮದ ಪಶ್ಚಾತ್ತಾಪವಾಗಿ ಇನ್ನು ಮುಂದೆ ಇವರ ಗೊಡವಿಗೆ ಹೋಗಬಾರದೆಂದು ನಿಶ್ಚಯ ಮಾಡಿರಬಹುದಾಗಿ ಅವಳು ಯೋಚಿಸಿದಳು.

ಬಂಗಾಲದ ಸುಭೇದಾರನಾದ ಕುತುಬಶಹನು ಬಾದಶಹನಿಗೆ ಬಾಲ್ಯದಲ್ಲಿ ಸ್ತನಪಾನ ಮಾಡಿಸಿದವಳ ಮಗನಾಗಿದ್ದನು. ಅವನಿಂದ ಜಹಾಂಗಿರನ ದುಷ್ಟ ಬುದ್ಧಿಯು ಪುನಃ ಜಾಗೃತವಾಗಹತ್ತಿತು. ಶೇರಆಫಗನನ ಕೊಲೆಯ ಸಲುವಾಗಿ ಕುತುಬಶಹನು ನಾಲ್ವತ್ತು ಜನ ಕೊಲೆಗಾರರನ್ನು ಸಿದ್ಧಪಡಿಸಿ ಯೋಗ್ಯವಾದ ಸಂಧಿಯನ್ನು ನಿರೀಕ್ಷಣ ಮಾಡುತ್ತ ಕುಳಿತಿದ್ದನು. ಒಂದು ನಂಜಸನ ಇವನು ಒಬ್ಬನು, ರಾತ್ರಿ ಆ ಸರದರನ ಸೇವಕರು ಮೈಮರೆತು ನಿಶ್ಚಿಂತರಾಗಿ ಕುಳಿತಿರುವ ಸಂಧಿಯನ್ನು ಸಾಧಿಸಿ, ಈ ನಾಲ್ವತ್ತು ಜನ ಕೊಲೆಗಾರರು ಅವನ ಶಯನ ಮಂದಿರವನ್ನು ಹೊಕ್ಕರು. ಇನ್ನು ಶೇರಅಫಗನನ ಎದೆಯಲ್ಲಿ ಕಠಾರಿಯು ನಡುವದು, ಅಷ್ಟರಲ್ಲಿ ಕೊಲೆಗಾರರಲ್ಲಿ ಒಬ್ಬನಿಗೆ ಪಶ್ಚಾತ್ತಾಪವಾಗಿ ಅವನು ತನ್ನ ಜತೆಗಾರರಿಗೆ ಗಟ್ಟಿಯಾಗಿ ಅಂದದ್ದೇನೆಂದರೆ, “ ಜಾ! ನಿಲ್ಲಿಸಿ, ಇವ ನನ್ನು ಕೊಲ್ಲುವದಕ್ಕಾಗಿ ನಮಗೆ ಬಾದಶಹನ ಹುಕುವಾಗಿದ್ದರೂ ನಾವು ನಮ್ಮ ಪೌರುಷ್ಯಕ್ಕೆ ಶೋಭಿಸುವಂತೆ ವರ್ತಿಸಬೇಕು. ಮೇಲಾಗಿ ನಿದ್ರಿಸ್ಟನು; ಇಂಥ ಸ್ಥಿತಿಯಲ್ಲಿ ನಾವು ನಾಲ್ವತ್ತು ಜನರು ಇವನ ಮೇಲೆ ಕಡಿದುಬೀಳುವದು ತೀರ ಅನಯವಾದದ್ದು.” ಇವನ ಆವೇಶಯುಕ್ತವಾದ ಭಾಷಣದಿಂದ ಎಚ್ಚೆತ್ತ ಶೇರಅಫಗನನು 24 ಭಾಪುರೆ, ಶರಾ, ಸರಿಯಾಗಿ ನೋಡಿದೆ, ಎಂದು ಮಾತಾಡಿ ಹಾಸಿಗೆ ಕೆಳಗಿದ್ದ ಕತ್ತಿಯನ್ನು ಕೈಯಲ್ಲಿ ತೆಗೆದು ಕೊಂಡು, ತನ್ನ ಶರೀರದ ಮೇಲಾ ಗುವ ಶಸ್ತ್ರಾಘಾತಗಳನ್ನು ನಿವಾರಿಸುವದಕ್ಕಾಗಿ ಒಂದು ಮೂಲೆಯಲ್ಲಿ ನಿಂತು ಕೊಂಡನು. ತುಸುಹೊತ್ತಿನಲ್ಲಿಯೇ ಅಧಾ೯ಧಿಕ ಕೊಲೆಗಾರರು ಅವನ ಕತ್ತಿಗೆ ಬಲಿಯಾದರು, ಕೆಲವರು ಗಾಯಪಟ್ಟರು ಮತ್ತು ಉಳಿದವರು ಓಡಿ ಹೋದರು. ತನ್ನ ಗಟ್ಟಿಯಾದ ಭಾಷಣಗಳಿ೦ದ ಶೇರಆಫಗನನ್ನು ಎಚ್ಚರಿ ಪಡಿಸಿದ ಮುದುಕನೊಬ್ಬನೇ ಅಲ್ಲಿ ನಿಂತನು. ತನ್ನ ಮೇಲೆ ಉಪಕಾರ ಮಾಡಿದ ಮುದುಕನ ಕೈಯಲ್ಲಿ ಕೈಯನ್ಸ್ ಕೊಟ್ಟು ಒಳ್ಳೆ ಪ್ರೇಮದಿಂದ ಶೇರಅಫಗನನು ಅವನ ಸಂಗಡ ಮಾತ ದತೊಡ `ದನು ಈ ನೀಚ ಮತ್ತು ನಿರ್ಲಜ್ಜತನದ ಕೃತ್ಯದ ವಿಷಯಕವಾಗಿ ಅತಿ ಮುಖದಿಂದ ಎಲ್ಲ ಸಂಗತಿ ಗಳನ್ನು ತಿಳಿದುಕೊಂಡು, ಅವನಿಗೆ ವಸಳ ದಣಗಳಿಂದ ಸಂತೋಷಪಡಿಸಿ, ಈ ಸುದ್ದಿ ಯು ಜನರಲ್ಲಿ ಹಬ್ಬ ಬೇಕೆಂದು ಶಿಕ ೨ ಫಗನನು ಅವನನ್ನು ಮುಕ್ತ ಮಾಡಿದನು ಈ ರಾತ್ರಿಯಲ್ಲಿ ಸಂಭವಿಸಿದ ಸಂಗತಿಗಳು ಜನರೊಳಗೆ ಹಬ್ಬ ಹತ್ತಿದ ಕೂಡಲೆ, ಅವನ ಶೌರ್ಯದ ಕೀರ್ತಿಯು ಸರ್ವೆ ತ್ರದಲ್ಲಿ ಹಬ್ಬಿ ಅವನು ಹೋದ ಹೊದತ್ತ ಸಕೌತುಕವಾಗಿ ನೋಡುವ ಜನರ ದಟ್ಟಣೆ ಯ: ಅವನ ಸುತ್ತ ಅತಿ ಶಯವಾಗಿ ಆಗಹತ್ತಿದ್ದರಿಂದ, ಅವನಿಗೆ ಮನೆಬಿಟ್ಟು ಹೊರಗೆ ಹೋಗುವದು ಸಹ ಕಠಿಣವಾಗಹತ್ತಿತು.

ಆ ಬಳಿಕ ಶೇರಅಫಗನನು ತನ್ನ ಪತ್ನಿಸಮೇತನಾಗಿ ಬಂಗಲದ ರಾಜಧಾನಿಯನ್ನು ಬಿಟ್ಟು ನಾನು ಮೊದಲು ಇರುತ್ತಿದ್ದ ಬರವ್ವಾನ ಪಂತದಲ್ಲಿ ಇರಹತ್ತಿದನು. ಅಲ್ಲಿಯಾದರೂ ಒಂದು ಕಡೆಗೆ ಇರುವದರಿಂದ ತಾನು ಸುರಕ್ಷಿತವಾಗಿ ಉಳಿಯುವೆನೆಂದು ಅವನು ಯೋಚಿಸಿದ್ದನು. ಆದರೆ, ಈ ಆಶೆಯಾದರೂ ನಿರರ್ಥಕವಾಯಿತು. ಸ್ವಲ್ಪು ದಿವಸಗಳಲ್ಲಿಯೇ ಬಂಗಾಲದ ಸುಭೇದಾರನು ಮಿತ್ರತ್ವದ ಸಂಬಂಧವನ್ನು ಹಚ್ಚಿ ಅವನ ಬೆಟ್ಟಗಾಗಿ ಬಂದನು. ಪ್ರಾಂತದ ಸುಭೇದಾರನು ತನ್ನ ಬೆನ್ನಿಗೆ ಬರುತ್ತಾನೆಂದು ತಿಳಿದ ಕೂಡಲೆ, ಶೇರಅಫಗನನು ಕುದುರೆಯ ಮೇಲೆ ಸವಾರನಾಗಿ, ಸಂಗಡ ಇಬ್ಬರೇ ಸೇವಕರನ್ನು ತೆಗೆದುಕೊಂಡು ಅವನಿಗೆ ಸನ್ಮಾನಪೂರ್ವಕವಾಗಿ ಎದುರಾದನು. ಪರಸ್ಪರರ ದರ್ಶನವಾದ ಕಡಲೆ, ಪರಸ್ಪರರಿಗೆ ಅತ್ಯಂತ ಆನಂದವಾದಂತೆ ಕಂಡುಬಂದಿಕು. ಕೆಲವು ಹೊತ್ತಿನವರಿಗೆ ಪರಸ್ಪರರ ಸಂಭಾಷಣವಾದ ಬಳಿಕ, ಕುತುಬಶಹನು ತನ್ನ ದರಬಾರದ ಆನೆಯನ್ನು ತರುವದಕ್ಕೆ ಅಪ್ಪಣೆ ಯನ್ನು ಮಾಡಿದನು ; ಮತ್ತು ಅದು ಅಲ್ಲಿಗೆ ಬಂದ ಕೂಡಲೆ, ಅದರ ಮೇಲೆ ಹತ್ತು ವದಕ್ಕೆ ಸಿದ್ಧನಾದನು. ಈ ರೀತಿಯಾಗಿ ಕುತುಬಶಹನು ಗಜಾರೂಢನಾಗುತ್ತಿರುವಾಗ ಶೇರಅಫಗನನು ಶಿಷ್ಟಾಚಾರಕ್ಕನುಸರಿಸಿ ವಿನಯಪೂರ್ವಕವಾಗಿ, ತಾನು ಕೂತಿದ್ದ ಕುದುರೆಯನ್ನು ಬಂದು ಬದಿಗೆ ಮಾಡಿದನು. ಇಷ್ಟರಲ್ಲಿ ಒಬ್ಬ ಜವಾನನು ಅವನ ಕುದುರೆಯ ಮೇಲೆ ಕತ್ತಿಯ ಆಘಾತವನ್ನು ಮಾಡಿದನು. ಇದನ್ನು ನೋಡಿದ ಕೂಡಲೆ ಮುಂದೆ ಸಂಭವಿಸುವ ಎಲ್ಲ ಸಂಗತಿಗಳು ಅವನ ಮುಂದೆ ಮೂರ್ತಿ ಮಂತ್ರವಾಗಿ ನಿಂತವು ಕಡಲೆ ಕುತುಬನ ಸಂಗಡದಲ್ಲಿ ಜವಾನರು ತಮ್ಮ ಕತ್ತಿಗೆಳನ್ನು ಹಿರಿದರು. ತ್ವರಿತವಾಗಿ ಯಾವುದಾದರೊಂದು ಯೋಚನೆಯನ್ನು ಯೋಚಿಸಿದ ಹೊರತು ತನ್ನ ಪ್ರಾಣರಕ್ಷಣವಾಗುವದು ದುರ್ಲಭವಾದದ್ದೆಂದು ತಿಳಿದು ಶೇರಆಫರನನು ತನ್ನ ಕುದುರೆಯನ್ನು ಮುಂದಕ್ಕೆ ದಬ್ಬಿದನು; ಮತ್ತು ಕ್ಷಣಾರ್ಧದಲ್ಲಿ ಆನೆಯ ಹತ್ತಿರ ಬಂದು ತನ್ನ ಅಸ್ತ್ರದ ಒಂದೇ ಆಘಾತದಿಂದ ಆನೆಯ ಮೇಲಿನ ಅಂಬಾರಿಯನ್ನು ನೆಲಕ್ಕೆ ಕೆಡವಿ, ಅದರಲ್ಲಿ ಕುಳಿತಿದ್ದ ಕುತುಬನನ್ನು ಎರಡು ತುಂಡು ಮಾಡಿದನು. ಬಾದಶಹನಿಗೆ ಪ್ರಿಯವಾದದ್ದನ್ನು ಮಾಡುವದರ ಸಲುವಾಗಿ ಯೋಚಿಸಿದ ಯುಕ್ತಿಯನ್ನು ಕಡೆಗಣಿಸುವದರಲ್ಲಿ ಕುತುಬನು ತನ್ನ ಜೀವಕ್ಕೆ ಎರವಾದನು, ಮತ್ತು ವಿಶ್ವಾಸಘಾತಕ ತನದ ಯೋಗ್ಯವಾದ ಪ್ರಾಯಶ್ಚಿತ್ತವು ಅವನಿಗೆ ದೊರೆಯಿತು.

ಈ ರೀತಿಯಾಗಿ ಕುತುಬಶಹನ ಪರಿಸಮಾಪ್ತಿಯಾದ ಬಳಿಕ, ಶೇರಆಫಗನನು ತನ್ನ ಸುತ್ತ ಸುಂದರವಾಗಿ ನಿಂತಿದ್ದ ಜವಾನರ ಕಡೆಗೆ ದೃಷ್ಟಿಯನ್ನು ಹೊಳ್ಳಿಸಿದನು. ಕೆಲ ಹೊತ್ತು ಚಕಮಕಿ ಹಾರಿದ ಬಳಿಕ ಕುತುಬನ ಸಂಗಡದಲ್ಲಿದ್ದ ನಾಲ್ಕು ಜನ ಸರದಾರರು ಗತಪ್ರಾಣರಾದರು. ಉಳಿದ ಸರದಾರರೂ ಶಿಖಾಯರೂ ಭಯಚಕಿತರಾಗಿ ಓಡಿ ಹೋಗಿ ದೂರದಲ್ಲಿ ನಿಂತುಕೊಂಡು, ಶೇರಆಫಗನನ ಮೇಲೆ ಗುಂಡು ಮತ್ತು ಬಾಣಗಳ ವೃಷ್ಟಿಯನ್ನು ಮಾಡಹತ್ತಿದರು ಶೇರಅಫಗನನ ಕುದುರೆಗೆ ಒಂದು ಗುಂಡು ತಗಲಿ ಅದು ಸತ್ತು ನೆಲಕ್ಕೆ ಬಿದ್ದಿತು. ಮುಂದೆ ಯಾವ ಉಪಾಯವೂ ಉಳಿಯಲಿಲ್ಲೆಂಬದನ್ನು ಕಂಡು ಶೂರನಾದ ಶೇರಅಫಗನನಿಗೆ ಬಹಳ ವಿಷಾದವೆನಿಸಹತ್ತಿತು. ಅವನು ಆ ಅಸಂಖ್ಯ ಶಿಪಾಯರ ಹೇಡಿತನಕ್ಕಾಗಿ ಅವರ ನಿರ್ಭತ್ಸನೆಯನ್ನು ಮಾಡಿದನು. “ನೀವು ಒಬ್ಬೊಬ್ಬರೇ ನನಗೆ ಎದುರಾಗಿ ಶಣರರಿಗೆ ಉಚಿತವಾಗಿರುವ ಮಾರ್ಗದಿಂದ ಕ್ಷಾತ್ರಧರ್ಮದ ಆಚರಣೆಯನ್ನು ಮಾಡಿರಿ" ಮುಂತಾದ ಅನೇಕ ಮಾತುಗಳನ್ನು ಆಡಿದರೂ ಆ ದುಷ್ಟರು ಅವನ ವಿನಂತಿಯನ್ನು ಮಾನ್ಯ ಮಾಡಲಿಲ್ಲ. ಇನ್ನು ಮೇಲೆ ನಿಶ್ಚಿತವಾಗಿ ಮರಣದ ಹೊರತು ಗತ್ಯಂತರವಿಲ್ಲೆಂದು ಯೋಚಿಸಿ, ತನ್ನ ಕೈಯೊಳಗಿನ ಖಡ್ಗವನ್ನು ನೆಲಕ್ಕೆ ಚೆಲ್ಲಿ ಮಕ್ಕೆಯ ದಿಕ್ಕಿಗೆ ಸಮ್ಮುಖನಾಗಿ, ಅಲ್ಲಿ ಅವನಿಗೆ ಆ ಕಾಲಕ್ಕೆ ನೀರು ಸಹ ದೊರೆಯದ್ದರಿಂದ, ಮೃತ್ತಿಕೆಯ ಸ್ನಾನವನ್ನು ಮಾಡಿ ಪರಮೇಶ್ವರನನ್ನು ಪ್ರಾರ್ಥಿಸಿ, ಆ ಬಳಿಕ ಶಾಂತನಾಗಿ ನಿಂತುಕೊಂಡನು. ಆದರೂ ಅವನ ಹತ್ತಿರ ಹೋಗುವದಕ್ಕೆ ಶತ್ರುಗಳು ಧೈರ್ಯಪಡಲಿಲ್ಲ. ಬಂದೂಕಿನ ಆರು ಗುಂಡುಗಳು ಅವನ ಮೈಯಲ್ಲಿ ನಟ್ಟವು. ಅದರಿಂದ ಅವನು ವಿಹ್ವಲನಾಗಿ ಮೃತ್ಯುಲೋಕವನ್ನು ಬಿಟ್ಟು ಹೋದನು. ಅವನು ಗತಪ್ರಾಣನಾಗಿ ನೆಲದ ಮೇಲೆ ಬಿದ್ದ ಬಳಿಕ ಸಹ ಶತ್ರುಗಳು ಅವನ ಮೇಲೆ ಭೀತಿಯಿಂದ ಗುಂಡುಗಳನ್ನು ಹಾಕುತ್ತಿದ್ದರು. ಶತ್ರು ಪಕ್ಷದವರು ಸಹ ಅವನ ಶೌರ್ಯದ ವರ್ಣನೆಯನ್ನು ಮಾಡಿದರು. ಆದರೆ ಅವರು ಅವನ ಕೀರ್ತಿಯನ್ನು ಹಚ್ಚಿ ಸಂಪೂರ್ಣ-ಕಥೆಗಳು ಸುವದರಲ್ಲಿ ತಮ್ಮ ಆಸಕೀರ್ತಿಯನ್ನು ದಿಗಂತರ ಮಾಡಿಕೊಂಡರೆಂದು ಒಬ್ಬ ಇತಿಹಾಸಜ್ಞನು ಅಂದದ್ದು ಅಕ್ಷರಶಃ ನಿಜವಾಗಿದೆ. ಈ ರೀತಿಯಾಗಿ ತೀರ 'ನನಗ ಅಂತ ವಾಯಿತು, ಅವನಿಗೆ ಸರಿ ಯಾದ ನಿಷ್ಕಪಟಿಯ, ಉದಾ , ದಯಾವಂತನೂ, ಶೂರನೂ ಆ ಕಾಲಕ್ಕೆ ದೊರೆಯುತ್ತಿಲ್ಲ. ಇ೦ ಶ್ರೀ ನರತ್ನವು ಮಣ್ಣು ಪಾಲಾಗಿ ಹೋಗುವದಕ್ಕೆ ಒಬ್ಬ ಸ್ತ್ರೀಯು ಜತ ಸೌಂದಯ೯ನೇ ಕಾರಣವಾಯಿತು. ಕುತುಬನ ಮಗಣ ಸೊ೦ಡಿದ ಬಳಿಕ ಅವನ ಹದಕ್ಕೆ ಬಂದ ಸರದಾ ರನು ಬೀರ ಆಥಗ ನನ ಮರಣದ ನಿಶ್ಚಿತವಾದ ಸುದ್ದಿಯನ್ನು ತಿಳಿದು, ನೆಹೆರ ಉನ್ನಿಸಾ ಇವಳಿಗೆ ಮುಂದೆ ಏನು ಮಾಡಬೇಕೆಂಬ ವಿಚಾರವನ್ನಾದರೂ ಮಾಡುವದಕ್ಕೆ ಅವಧಿ ಯನ್ನು ಸ ಕೊಡದೆ, ಅವಳು ಇರುತ್ತಿದ್ದ ಮಂದಿರಕ್ಕೆ ಮುತ್ತಿಗೆಯನ್ನು ಹಾಕಿ, ಅವಳನ್ನು ಕೈಸೆರೆ ಹಿಡಿದು ದಿಲ್ಲಿಗೆ ಕಳಿಸಿಕೊಟ್ಟನು. ಮಹೆರಉನ್ನಿ ಸಾ ಇವಳು ದಿಲ್ಲಿಗೆ ಮುಟ್ಟಿದ ಕೂಡಲೆ, ಅನಪೇಕ್ಷಿತವಾದ ಸಂಗತಿಗಳು ಸಂಭವಿಸಿದವು. ಬಾಬರ ವರ್ತನದಲ್ಲಿ ಅವಳ ವಿಷಯಕ ವಾಗಿ ಅತ್ಯಂತ ನಿಷ್ಟುರತೆ ಮತ್ತು ದುರ್ಲಕ್ಷವು ಕಂಡುಬರಹತ್ತಿತು. ರಾಜ ಮಂದಿರದೊಳಗಿನ ಒಂದು ಕೀ೪ ಪ್ರತಿ ಯ ಚಿಕ್ಕ ಮನೆಯಲ್ಲಿ ಅವಳು ಇರ ಬೇಕೆಂತಲೂ, ಉದರನಿರ್ವಾಹಕ್ಕೆ ತೀರ ಮರ್ಯಾದಿತವಾದ ಸಂಬಳವು ದೊರೆಯಬೇಕೆಂತಲೂ ಗೊತ್ತುಮಾಡಲ್ಪಟ್ಟಿತು. ಮುಂದೆ ಆರು ವರ್ಷಗಳ ವರೆಗೆ ಅವಳಿಗೆ ಬಾದಶಹನ ದರ್ಶನ ಸಹ ಆಗಲಿಲ್ಲ. ಶೇರಅಫಗನನ ಘಾತವಾದ ಬಳಿಕ ಮರ ಉನ್ನಿಸಾ ಇವಳು ದಿಲ್ಲಿ ಯೊಳಗಿನ ರಾಜಮಂದಿರಕ್ಕೆ ತರಲ್ಪಟ್ಟ ಕೂಡ, ಅವಳ ವಿಷಯಕವಾಗಿ ಆತುರನಾಗಿದ್ದ ಬಾದಶಹನು ಆವಳಿಗೆ ಭೇಟಿ ಯಾದನು, ಶೇರಅಫಗನನ ಗುಣಗಳಿಗೆ ಅವಳು ಲುಬ್ಧಳಾಗಿದ್ದ ಕಾರಣ, ಅವನ ಕೊಲೆಯನ್ನು ಮಾಡಿ ಸಿದ ಜಹಾಂಗೀರ ಬ ದಶಹನ ದರ್ಶನವಾದ ಕೂಡಲೆ, ಆ ಅತ್ಯಂತ ಮಾನೀ ಸ್ತ್ರೀಯಳಿಗೆ ಪರಮಾವಧಿಯ ಕೋಪ ಹುಟ್ಟಿ, ಅವನನ್ನು ಅತ್ಯಂತ ನಿರ್ಭತ್ಸ್ರನಾ ಪೂರ್ವಕವಾಗಿ ಧಿಕ್ಕರಿಸಿದಳು. ಈ ಮಹಾ ನಿಯಿ೦ದ ಬಾದಶಹನ ಕ್ರೋಧಾಗ್ನಿ ಯು ಪ್ರದೀಪ್ತವಾಗಿ, ಅವನು ಇಂದಿನವರೆಗೆ ತನ್ನ ಹೃದಯ ದಲ್ಲಿ ಅವಳ ವಿಷಯಕವಾಗಿ ಪೋಷಣ ಮಾಡಿದ ಪ್ರೇಮಾಗ್ನಿ ಯು ಕಮರಿ ಹೋಯಿತು. ಬಾದಶಹನು ಮೆಹೆರಉನ್ನಿಸಾ ಇವಳನ್ನು ತನ್ನ ಸಮ್ಮುಖದಿಂದ ಹೊರಗೆ ಹೋಗುವದಕ್ಕಾಗಿ ಅಪ್ಪಣೆಯನ್ನು ಮಾಡಿ, ತನ್ನ ತಾಯಿಯ ಹತ್ತರ ಅವಳು ತೊತ್ತಾಗಿರಬೇಕೆಂದು ಗೊತ್ತು ಪಡಿಸಿ, ಅವಳಿಗೆ ಪ್ರತಿ ತಿಂಗಳಿಗೆ ಅರವತ್ತು ರೂಪಾಯಿಗಳನ್ನು ಮಾತ್ರ ಕೊಡ ಬೇಕೆಂದು ಆಜ್ಞೆ ಮಾಡಿದನು. ಆ ಬಳಿಕ ಆವನು ಅವಳ ಉಸಾಬರಿ ತುನ್ನೇ ಬಿಟ್ಟು ಕೊಟ್ಟನು.

ಈ ರೀತಿಯಾಗಿ ಕೆಲವು ಕಾಲವು ಗತಿಸಲು, ಮೆಹೆರಉನ್ನಿಸಾಳ ಸೌಂದರ್ಯ ಮತ್ತು ಗುಣಗಳ ಕೀರ್ತಿಯ ಪರಿಮಳವು ಜನರಲ್ಲಿ ಹಬ್ಬ ಹತ್ತಿದ್ದರಿಂದ ಜಹಾಂಗೀರ ಬಾದಶಹನಿಗೆ ಅವಳ ದರ್ಶನದ ಲಾಲಸೆಯು ಮತ್ತೆ ಉಂಟಾಯಿತು. ಬಾದಶಹನು ತನ್ನ ಮನೋಗತ ಉದ್ದೇಶದ ಪರಿಸ್ಫೋಟವನ್ನು ಮಾಡದೆ ಆಕಸ್ಮಿಕವಾಗಿ ಅವಳ ಮುಂದೆ ಹೋಗಿ ನಿಲ್ಲುವ ಯೋಚನೆಯನ್ನು ಮಾಡಿದನು. ಬಾದಶಹನು ಅವಳ ಮಹಾಲಿನಲ್ಲಿ ಕಾಲಿಟ್ಟ ಕೂಡಲೆ, ಅಲ್ಲಿಯ ಶೋಭೆ ಹಾಗೂ ಅವರ್ಣನೀಯವಾದ ಸುವ್ಯವಸ್ಥೆಯನ್ನು ನೋಡಿ ಆಶ್ಚರ್ಯಚಕಿತನಾದನು. ಅಲ್ಲಿದ್ದ ಎಲ್ಲ ಪದಾರ್ಥಗಳು ಅತ್ಯಂತ ಮನೋಹರವಾಗಿದ್ದವು. ಅಲ್ಲಿಯ ಒಡೆಯಳಾದ ನೂರಮಹಾಲಳು ಸರ್ವಸಾಧಾರಣವಾದ ಶುಭ, ಉಡಿಗೆಯನ್ನು ಧಾರಣಮಾಡಿ, ಚಿತ್ರ ವಿಚಿತ್ರವಾದ ಮಂಚದ ಮೇಲೆ ಒಂದು ಕೈಯನ್ನು ಊರಿ ನಿಂತುಕೊಂಡಿದ್ದಳು. ಅವಳ ಸುತ್ತಲೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾದ ದಾಸೀ ಜನರ ಪರಿವಾರವಿತ್ತು. ಅವರೆಲ್ಲರ ಮೈ ಮೇಲೆ ಉಚ್ಚ ಉಚ್ಚ ವಸ್ತ್ರಾಭರಣಗಳಿದ್ದವು, ಬಹಳ ವರ್ಷಗಳಿ೦ದ ಬಾದಶಹನ ಮುಖವು ದೃಷ್ಟಿಗೆ ಬೀಳದ್ದರಿಂದ, ಮತ್ತು ಬಾದಶಹನು ಅಲ್ಲಿ ಅವಚಿತವಾಗಿ ಬಂದು ನಿಂತಿದ್ದರಿಂದ ಮೊದಲು ಅವಳು ತುಸು ಗೊಂದಲದಲ್ಲಿ ಬಿದ್ದಳು. ಸ್ವಾಗತ ಸರಶಬ್ದ ಗಳು ಸಹ ಅವಳ ಮುಖದೊಳಗಿಂದ ಹೊರಬೀಳಲಿಲ್ಲ. ಆದರೆ, ತನ್ನ ಕೋಮಲವಾದ ಕರಗಳಿಂದ ತನ್ನ ಮನೋಹರವಾದ ಹಣೆಯನ್ನು ಮುಟ್ಟಿ ನಮ್ರವಾಗಿ ಬಾದಶಹನಿಗೆ ಸಲಾಮು ಮಾಡಿ, ಮಂಚದ ಮೇಲೆ ವಿಶ್ರಮಿಸಿಕೊಳ್ಳುವದಕ್ಕಾಗಿ ಸಂಜ್ಞೆಯನ್ನು ಮಾಡಿದಳು. ಆ ಮಹಾಲಿನಲ್ಲಿ ಅವಳು ಆರು ವರ್ಷಗಳನ್ನು ಕಳೆದಿದ್ದರೂ ಅವಳ ಲಾವಣ್ಯವು ಎಳ್ಳಷ್ಟಾದರೂ ಕುಂದುಪಡದೆ, ಮೊದಲಿನಕಿಂತ ವಿಶೇಷವಾಗಿ ಶೋಭಿಸುತ್ತಿತ್ತು. ಅವಳ ಮುಖಕಮಲವನ್ನು ನೋಡಿ ಬಾದಶಹನು ಸಂತೊಸ ಭರಿತನಾಗಿ ಕಂಬದಂತೆ ನಿಂತುಕೊಂಡನು.

ಸ್ವಲ್ಪ ಹೊತ್ತಿನಮೇಲೆ ಬಾದಶಹನ ಚಿತ್ರವು ಸ್ಥಿರವಾದ ಬಳಿಕ ಮಂಚದಮೇಲೆ ಕುಳಿತುಕೊಂಡನು; ಮತ್ತು ನೂರಮಹಾಲಳಿಗಾದರೂ ವಿಶ್ರಮಿಸಿಕೊಳ್ಳುವದಕ್ಕಾಗಿ ಹೇಳಿದನು. ಬಳಿಕ ಬಾದಶಹನು ನೂರಮಹಾಲಳಿಗೆ ಉದ್ದೇಶಿಸಿ : "ನಿಮ್ಮ ದಾಸೀಜನರೆಲ್ಲರೂ ಪರಿಪರಿಯ ವಸ್ತ್ರಾಲಂಕಾರ ಭೂಷಣಗಳಿಂದ ಭೂಷಿತರಾಗಿರಲು ಅವರ ಸ್ವಾಮಿನಿಯರಾದ ತಾವು ಮಾತ್ರ ತೀರ ಸಾಧಾರಣಪ್ರತಿಯ ವೇಷವನ್ನು ಧರಿಸುವದೆಂದರೆ, ಆಶ್ಚರ್ಯವೇ ಸರಿ.”

ಆಗ್ಗೆ ಚತುರಳಾದ ಆ ಸ್ತ್ರೀಯು ಉತ್ತರವನ್ನು ಕೊಟ್ಟಿದ್ದೇನಂದರೆ, "ಈ ದಾಸೀಜನರು ನನ್ನ ಸೇವಕರು, ನನ್ನ ಇಚ್ಛೆಗನುಸರಿಸಿ ನಾನು ಇವರಿಗೆ ವಸ್ವಾಭೂಷಣಗಳನ್ನು ಕೊಡುತ್ತೇನೆ; ಮತ್ತು ನನ್ನ ತಿಳುವಳಿಕೆಯ ಪ್ರಕಾರ ಇವರ ಹೀನಸ್ಥಿತಿಯನ್ನು ದೂರಮಾಡಲು ಪ್ರಯತ್ನಿಸುತ್ತೇನೆ. ನಾನು ಅವರ ಸ್ವಾಮಿನಿಯಾಗಿರುವದರಿಂದ ನನ್ನ ಇಚ್ಛೆಯ ಪ್ರಕಾರ ಅವರಿಗೆ ನಡೆದು ಕೊಳ್ಳಬೇಕಾಗುತ್ತದೆ. ಆದರೆ ಶಹಾನಶಹನೇ, ನಾನು ಈ ನಮ್ಮ ಚರಣ ಕಮಲಗಳ ದಾಸಿಯಾಗಿರುವದರಿಂದ ನನ್ನ ವೇಷವ ತಮ್ಮ ಮನೋದಯಾನು ರೂಪವಾಗಿಯೇ ಇರಬೇಕು. ಬಾದಶಹರ ಇಚ್ಛೆಯು ನನಗೆ ತಿಳಿಯ ಬಂತೆಂದರೆ ಅದಕ್ಕನುಸಾರವಾಗಿ ನಾನು ನಡೆದುಕೊಳ್ಳುವೆನು."

ಆರು ವರ್ಷಗಳ ಏಕಾಂತವಾಸದಿಂದ ನೂರಮಹಾಲಳ ಚಿತ್ತವು ಚಂಚಲವಾಗಿತ್ತು; ಮತ್ತು ಬಾದಶಹನೇ ತನ್ನ ಪತಿಯ ಮರಣಕ್ಕೆ ಕಾರಣನಾಗಿದ್ದನೆಂಬ ಸಂಗತಿಯ ವಿಸ್ಮರಣನವು ಅವಳಿಗೆ ಆಗಹತ್ತಿತ್ತು. ಅವಳ ಕೂಡ ಸಂಭಾಷಣೆಯು ನಡೆದಾಗ ಬಾದಶಹನ ಪೂರ್ವದ ಪ್ರೇಮವು ಜಾಗೃತವಾಗಿ ಪ್ರೀತಿ ಪೂರ್ಣ ಅಂತಃಕರಣದಿಂದ ಅವಳನ್ನು ಆಲಿಂಗಿಸಿ, ನಡೆದು ಹೋದ ಸಂಗತಿಗಳನ್ನು ಮರೆತುಬಿಡುವದಕ್ಕಾಗಿ ಅವಳಿಗೆ ಹೇಳಿಕೊಂಡನು. ಮತ್ತು ತತ್ಕ್ಷಣವೇ ದೊಡ್ಡ ಆಕಾರಗಳುಳ್ಳ ನಾಲ್ವತ್ತು ಮುತ್ತುಗಳ ಒಂದು ಅಮೌಲ್ಯವಾದ ಮುಕ್ತಾಹಾರವನ್ನು ತನ್ನ ಸ್ವಹಸ್ತದಿಂದ ಅವಳ ಕಂಠದಲ್ಲಿ ಹಾಕಿ "ನಾನು ನಿನ್ನನ್ನು ನನ್ನ ಸಿಂಹಾಸದ ಸ್ವಾಮಿಯನ್ನು ಮಾಡುವೆನೆಂಬ' ಮಧುರ ವಾಕ್ಯವನ್ನು ಅವಳ ಕಿವಿಯಲ್ಲಿ ನುಡಿದನು. ಕೂಡಲೆ ಅವಳನ್ನು ಆ ನಿಗ್ರಹದ ಸ್ಥಳದಿಂದ ಮುಕ್ತಮಾಡಿ, ವಿಶಾಲವಾದ ರಮ್ಯ ರಾಜಮಂದಿರಗಳನ್ನು ಅವಳ ವಶಕ್ಕೆ ಕೊಟ್ಟನು. ಅವಳ ಸೌಂದರ್ಯಕ್ಕೂ ಪರಸ್ಪರ ಪ್ರೀತಿಗೂ ಒಪ್ಪುವಂತೆ ಅವರ ವಿವಾಹವು ಒಳ್ಳೇ ಸಡಗರದಿಂದ ಆಯಿತು. ಬಾದಶಹನು ಅತ್ಯುತ್ಕಟ ಪ್ರೇಮದಿಂದ ಅವಳಿಗೆ "ನೂರಜಹಾನ” ಎಂದು ನಾಮಾಭಿಧಾನವನ್ನು ಮಾಡಿ ಅವಳ ಹೆಸರಿನ ಸುವರ್ಣದ ನಾಣ್ಯಗಳನ್ನು ಮುದ್ರಿಸುವದಕ್ಕಾಗಿ ಅಪ್ಪಣೆಯನ್ನು ಮಾಡಿದನು.

ಬಾದಶಹನು ನೂರಜಹಾನಳ ತಂದೆಯನ್ನು ಮುಖ್ಯ ಪ್ರಧಾನನನ್ನಾಗಿ ಮಾಡಿರಿಂದ ಅವಳ ಅಮರ್ಯಾದಿತ ಸತ್ತೆಯು ಒಳಿತಾಗಿ ದೃಢವಾಯಿತು. ಅವಳ ತಮ್ಮನಾದ ಆಸಫಖಾನನನ್ನು ಜಹಂಗೀರನು ತನ್ನ ದರಬಾರದಲ್ಲಿ ಮೊದಲನೆಯ ಪ್ರತಿಯ ಉಮರಾವನನ್ನಾಗಿ ಮಾಡಿದನು. ಈ ಆಸಫಖಾನನ ಮಗಳಕೂಡ ಬಾದಶಹನ ಪುತ್ರನಾದ ಶಹಜಹಾನ ಇವನ ಲಗ್ನವಾಯಿತು. ಶೇರಆಫಗನನಿಂದ ನೂರಜಹಾನಳಿಗೆ ಹುಟ್ಟಿದ ಮಗಳ ಕೂಡ ಬಾದಶಹನ ಎರಡನೇ ಮಗನಾದ ಶಹಾಜಹಾನನು ಮದುವೆಯಾದನು. ಭಯಾನಕ ಮತ್ತು ನಿರ್ಜನವಾದ ಪ್ರದೇಶದಲ್ಲಿ ಒಂದು ಕಾಲಕ್ಕೆ ನಾಮಶೇಷವಾಗಿ ಹೋಗುವ ಪ್ರಸಂಗವು ಬಂದೊದಗಿದ ಕುಟುಂಬವು ಈ ರೀತಿಯಾಗಿ ಭಾಗ್ಯಸೂರ್ಯನ ತೇಜದಿಂದ ಇಡೀ ದೇಶದ ತುಂಬ ಪ್ರಕಾಶಿತವಾಗಹತ್ತಿತು.

ಲಗ್ನದಿವಸದಾರಭ್ಯ ಒಂದೇ ಸಮನೆ ಇಪ್ಪತ್ತು ವರ್ಷಗಳವರೆಗೆ ಬಾದಶಹನ ಮೇಲೂ, ಹಿಂದುಸ್ಥಾನದ ವಿಸ್ತೀರ್ಣವಾದ ರಾಜ್ಯದ ಮೇಲೂ ನೂರಜಹಾನಳು ತನ್ನ ಅನಿಯಂತ್ರಿತವಾದ ಅಧಿಕಾರವನ್ನು ನಡೆಸಿದಳು. ಇಚ್ಛೆಯ ವಿರುದ್ಧವಾಗಿ ರಾಜ್ಯದಲ್ಲಿ ಯಾರಿಗೂ ಯಾವ ಪ್ರಕಾರದ ಅಧಿಕಾರವು ದೊರೆಯುತ್ತಿದ್ದಿಲ್ಲ. ಪರರಾಷ್ಟ್ರಗಳ ಕೂಡ ಆಗುತ್ತಿದ್ದ ಒಪ್ಪಂದಗಳು ಸಹ ಅವಳ ಸಮ್ಮತಿಯ ಕೊರತು ಆಗದಂತಾದವು. ಈ ರೀತಿಯಾಗಿ ಕೆಲವು ವರ್ಷಗಳವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು; ಆದರೆ ಜಹಾಂಗೀರ ಬಾದಶಹನ ತರುವಾಯ ಪಟ್ಟವು ಯಾರಿಗೆ ದೊರೆಯಬೇಕೆಂಬ ಪ್ರಶ್ನೆಯು ಉದ್ಭವಿಸಿದ್ದರಿಂದ ಬಡಿದಾಟಕ್ಕೆ ಪ್ರಾರಂಭವಾಯಿತು. ಜಹಾಂಗೀರ ಮತ್ತು ನೂರಜಹಾನ ಇವರ ನಡುವೆ ಕೊನೆಯ ವರೆಗೆ ಯಾವ ಪ್ರಕಾರದ ಏತುಷ್ಟವೂ ಉಂಟಾಗಲಿಲ್ಲ. ಉತ್ಪನ್ನ ಅವಳ ವಾದ ಬಡಿದಾಟವು ಮಕ್ಕಳಲ್ಲಿ ನಡೆಯಿತು. ತಂದೆಯ ಹಿಂದೆ ಬೆಟ್ಟದ ಮೇಲೆ ಕೂಡುವ ಅಧಿಕಾರವು ಶಹಾಜಹಾನನದೆಂದು ಸರ್ವಸಾಧಾರಣ ತಿಳುವಳಿಕೆ ಯಾಗಿತ್ತು; ಆದರೆ ಕೆಲವರ ಮನೋದಯವು ನೂರಜಹಾನಳ ಅಳಿಯನಾದ ಶಜಾರಿಆರನಿಗೆ ಪಟ್ಟವು-ದೊರೆಯಬೇಕೆಂದಿತ್ತು. ಶಹಾಜಹಾನನು ಬಂಡಾಯವನ್ನು ಮಾಡಿದನು; ಆದರೆ ಆದರಲ್ಲಿ ಅವನ ಪರಾಜಯವಾಗಿ ತಂದೆಯ ಕ್ಷಮೆಯನ್ನು ಅವನು ಬೇಡಿಕೊಳ್ಳಬೇಕಾಯಿತು ಎತ್ತು ತಂದೆಯಾದರೂ ಅವನಿಗೆ ಕ್ಷಮೆಯನ್ನು ನೀಡಿದನು, ಶಹಾಜಹಾನನ ಬಂಡಾಯವು ಮುರಿದು ಶಾಂತತೆಯು ನೆಲೆಗೊಳ್ಳುವಷ್ಟರಲ್ಲಿ ಮೋಹಬತಖೆ ನನೆಂಬ ಒಬ್ಬ ಬಲಿಷ್ಠ ಮತ್ತು ಸುಪ್ರಸಿದ್ಧ ಸರದಾರನು ಬಂಡಾಯವನ್ನು ಆರಂಭಿಸಿದನು. ಬಂಡಾಯದಲ್ಲಿ ನೂರಜಹಾನಳು ಒಳ್ಳೆ ಧೈರ್ಯವನ್ನು ತೋರಿಸಿದಳು ಮೋಹಬತಖಾನನಿಗೆ ಸರಿಯಾದ ವಿಜಯಶಾಲೀ ಸರದಾರನು ಆ ಕಾಲಕ್ಕೆ ಮತ್ತೊಬ್ಬನಿದ್ದಿಲ್ಲ. ರಾಜ್ಯದ ಸಂರಕ್ಷಣೆಗಾಗಲೀ ಅಥವಾ ರಾಜ್ಯ ಕಾರಸ್ಥಾನದ ಸಿಧ್ಯರ್ಥನಾಗಲೀ ಅವನು ಕತ್ತಿಯನ್ನು ಹಿರಿದುಕೊಂಡು ನಿಂತರೆ, ಅವನ ಸುತ್ತಲೂ ಸಾವಿರಾರು ನುರಿತ ವೀರರು ವಿಲಂಬ ಹತ್ತದೆ ಮಿಲಿತವಾಗುವಂತೆ ಅವನ ಕೀರ್ತಿಯು ತುಂಬಿಕೊಂಡಿತ್ತು. ಈ ಸರದಾರನು ಬಂಗಾಲದ ಸುಭೇದಾರನಾಗಿದ್ದನು. ಇವನ ರಾಜ್ಯ ಕಾರಭಾರದಲ್ಲಿ ದ್ರವ್ಯದ ದುರ್ವಿನಿಯೋಗವಾಗಿದೆಂಬ ಸಂಗತಿಯ ವಿಚಾರಣೆಯು ದರಬಾರದಲ್ಲಿ ನಡೆದಿತ್ತು. ಆದ್ದರಿಂದ ಕೂಡಲೆ ದರಬಾರದಲ್ಲಿ ಬಂದು ಹಾಜರಾಗುವದಕ್ಕೆ ಅವನಿಗೆ ಅಪ್ಪಣೆಯಾಗಿತ್ತು. ತನ್ನ ಮೇಲೆ ಮಿಥ್ಯಾರೋಪ ಬಂದಿರುತ್ತದೆಂದು ಜಾಹೀರಪಡಿಸಿ ದರಬರಕ್ಕೆ ಹೋಗುವದನ್ನು ಅವನು ಶಸ್ಪಿ ಸಹ ದನು, ಆದರೆ ದರಬಾರಕ್ಕೆ ಬರಲೇಬೇಕೆಂದು ವಿಶೇಷವಾದ ಆಗ್ರಹವಾಗಲು, ಅವನಿಗೆ ದಿಲ್ಲಿಗೆ ಹೊಗುವದು ಅಗತ್ಯವಾಯಿತು, ದಿಲ್ಲಿಗೆ ಹೋಗುವ ಕಾಲಕ್ಕೆ ಐದು ಸಾವಿರ ರಜಪೂತ ವೀರರು ಅವನ ಸಂಗಡದಲ್ಲಿದ್ದರು.

ಜಹಾಂಗೀರ ಬಾದಶಹನು ಕಾಬೂಲದ ಮೇಲೆ ದಂಡೆತ್ತಿ ಹೋಗುವ ತಯಾರಿಯಲ್ಲಿದ್ದನು. ಬಾದಶಾಹೀ ಸೈನ್ಯದ ತಳವು ತುಸು ಅ೦ತರದ ಮೇಲಿದದ್ದನ್ನು ಕಂಡು, ವಾದಗ್ರಸ್ತವಾದ ಏಷಯದ ನಿರ್ಣಯವನ್ನು ಮಾಡುವದಕ್ಕಾಗಿ ಮೊಹಬತಖಾನನು ತನ್ನ ಅಳಿಯನನ್ನು ಮುಂದೆ ಕಳಿಸಿದನು; ಮತ್ತು ಬಾದಶಹನ ಇಂಗಿತವನ್ನು ತಿಳಿದುಕೊಂಡು ಅವನ ದರ್ಶನಕ್ಕೆ ಹೋಗಬೇಕೆಂದು ಯೋಚಿಸಿದ್ದನು. ಇವನಿಂದ ಕಳಿಸಲ್ಪಟ್ಟ ದೂತನಿಗೆ ಬಾದಶಹ ಅಪ್ಪಣೆಯ ಮೇರೆಗೆ ಚಟಕದ ಸಂಭಾವನೆಯು ದೊರೆದು ಅವನು ಹೊರಗೆ ಹಾಕಲ್ಪಟ್ಟನು. ಈ ಮೇರೆಗೆ ಆದ ತನ್ನ ದೂತನ ಮಾನಖಂಡನೆಯನ್ನು ನೋಡಿ, ಮೋಹ ಬತಖಾನನಿಗೆ ಅತ್ಯಂತ ವಿಷಾದವೆನಿಸಿ ಕೊಧಭರಿತನಾದನು. ಆದರೆ, ತನ್ನ ಕೋಪವನ್ನು ದಬ್ಬಿಟ್ಟು ಅಪಮಾನದ ಸೇಡು ತೀರಿಸವ ಸಂಧಿಯನ್ನು ನಿರೀಕ್ಷಿಸಹತ್ತಿದನು.

ಝೇಲಮ ನದಿಯ ದಂಡೆಯ ಮೇಲೆ ಬಾದಶಹನ ಸೈನ್ಯವು ತಳ ಊರಿಕೊಂಡಿತ್ತು ಮರುದಿವಸ ಪ್ರಾತಃಕಾಲಕ್ಕೆ ಸೈನ್ಯದ ಮುಖ್ಯ ಭಾಗವು ಪೂಲಿನ ಮೇಲಿಂದ ನದೀ ಪಾರಾಗಿ ಹೋಯಿತು, ಹಿಂದಿನಿಂದ ಬಾದಶಹನ ಸವಾರಿಯ ಪರಿವಾರವು ಹೋಗತಕ್ಕದ್ದಿತ್ತು. ಸೈನ್ಯದ ಮುಖ್ಯ ಭಾಗವು ಮುಂದೆ ಹೋಗಲು, ತನಗೆ ಬೇಕಾಗಿದ್ದ ಸಂಥಿಯು ಪ್ರಾಪ್ತವಾಯಿತೆಂದು ಮೋಹಬಖಾನನು ಯೋಚಿಸಿ, ಕೂಡಲೆ ತನ್ನ ಜನರನ್ನು ಮುಂದೆ ಮಾಡಿ ಪೂಲಿಗೆ ಬೆಂಕಿ ಹಚ್ಚಿದನು. ಅನಂತರ ಬಾದಶಹನ ಡೇರೆಯ ಕಡೆಗೆ ಸಾಗಿ, ಒಳ ಹೊಕ್ಕು ಬಾದಶಹನ ಮುಂದೆ ನಿಂತನು. ತನ್ನ ಸಂರಕ್ಷಣೆಗಾಗಿ ಈ ಕೃತ್ಯವನ್ನು ಮಾಡಬೇಕಾಯಿತೆಂದು ಬಾದಶಹನಿಗೆ ನಿವೇದನ ಮಾಡಿ ಆವನನ್ನು ಒಂದು ಆನೆಯ ಮೇಲೆ ಕುಳ್ಳಿರಿಸಿ ತನ್ನ ಬಿಡಾರಕ್ಕೆ ಒಯ್ದನು. ಅಲ್ಲಿ ಹೋದ ಬಳಿಕ, "ಬಾದಶಹರು ನಿಶ್ಚಿಂತರಾಗಿರಬೇಕು; ಬಾದಶಹರ ಸುರಕ್ಷಿತ ತನಕ್ಕೆ ಯಾವ ಕೊರತೆಯ ಬೀಳಲಿಕ್ಕಿಲ್ಲ; ನಾನು ಈ ಕೃತ್ಯವನ್ನು ಕೇವಲ ನನ್ನ ರಕ್ಷಣೆಗಾಗಿ ಮಾಡಿದೆನು, ಯಾಕೆಂದರೆ, ನನಗಾದರೂ ನನ್ನ ರಕ್ಷಣೆಯನ್ನು ಮಾಡಿ ಕೊಳ್ಳಬೇಕಾಗಿದೆ ” ಎಂದು ಖಾನನು ನುಡಿದನು.

ಇತ್ತ ನೂರಜಹಾನಳು ಜನಾನಖಾನೆಯೊಳಗಿನ ಒಂದು ಡೇರೆಯಲ್ಲಿದ್ದಳು; ಮತ್ತು ನಡೆದ ಎಲ್ಲ ಸಂಗತಿಗಳು ಅವಳ ಕಣ್ಣಿಗೆ ಬಿದ್ದಿದ್ದವು. ಆದರೂ ಅವಳ ಧೈರ್ಯವು ಕುಗ್ಗದೆ ಆದಷ್ಟು ತೀವ್ರ ನದಿಯನ್ನು ದಾಟಿ ಸೈನ್ಯವನ್ನು ಕೂಡಿಕೊಳ್ಳಬೇಕು, ಮತ್ತು ಬೇಕಾದಷ್ಟು ಸೈನ್ಯವನ್ನು ಸಂಗಡ ತೆಗೆದುಕೊಂಡು ಬಂದು ಮೋಹಬತಖಾನನ ಮೇಲೆ ಹಲ್ಲೆಯನ್ನು ಮಾಡಿ ಬಾದಶಹ ನನ್ನು ಬಂಧಮುಕ್ತ ಮಾಡಬೇಕೆಂದು ಯೋಚಿಸಿ, ಕೂಡಲೆ ವೇಷಾಂತರವನ್ನು ಮಾಡಿ ಹೊರಬಿದ್ದಳು. ಮತ್ತು ಪಾಲಿಕೆಯನ್ನೇರಿ ಸೈನ್ಯವನ್ನು ಕೂಡಿಕೊಂಡಳು. ತನ್ನ ತಮ್ಮನಿಗೂ, ಮುಖ್ಯ ಮುಖ್ಯ ಸರದಾರರಿಗೂ ತನ್ನೆದುರಿಗೆ ಕರೆ ತರಿಸಿ, ಬಾದಶಹನು ಈ ರೀತಿಯಾಗಿ ಗಂಡಾಂತರದಲ್ಲಿ ಬೀಳುವಷ್ಟು ದುರ್ಲಕ್ಷವು ಅವರಿಂದ ಹ್ಯಾಗೆ ಸಂಭವಿಸಿತೆಂದು ಅವರ ನಿರ್ಭತ್ಸನೆಯನ್ನು ಮಾಡಿದಳು.

ಬಾದಶಹನ ಮುಕ್ತತೆಗಾಗಿ ಎಲ್ಲ ಸೈನ್ಯವು ಮರುದಿವಸ ಹೊರಬೀಳಬೇಕೆಂದು ಆ ಕ್ಷಣೆಯನ್ನು ಮಾಡಿ, ಸೈನ್ಯದ ಆಧಿಪತ್ಯವನ್ನು ತನ್ನ ಕಡೆಗೆ ತೆಗೆದುಕೊಂಡ ಒಂದು ಬಲಾಢವಾದ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತುಕೊಂಡ. ಸೈನ್ಯಕ್ಕೆ ಅಪ್ಪಣೆ ಮಾಡಹತ್ತಿದಳು; ಆದರೆ ನದಿಯು ಪಾತ್ರವು ಬಹಳ ದೊಡ್ಡದಿದ್ದದರಿಂದ, ಮತ್ತು ಅದರ ಮೇಲಿನ ಪೂಲು ಸುಟ್ಟು ಹೋದ್ದರಿಂದ ಅವಳ ಪ್ರಯತ್ನವು ನಿಷ್ಪಲವಾಗಹತ್ತಿತು. ಇತ್ತ ಮೋಹಬತಖಾನನ ಸೈನ್ಯದವರು ಒಳ್ಳೆ ರಭಸದಿಂದ ಹೋರಾಡಿ ನೂರ ಜಹಾನಳ ಸೈನ್ಯವನ್ನು ಸೋಲಿಸಿ ಓಡಿಸಿಬಿಟ್ಟರು.

ಪರಾಭೂತಳಾದ ರಾಣಿಯನ್ನು ಹಿಡಿಯುವದರ ಸಲುವಾಗಿ ಮೋಹ ಬರಖಾನನು ವಿತಿಮಿಾರಿ ಪ್ರಯತ್ನ ಪಟ್ಟನು; ಆದರೆ ಅವಳಿಲಿ ಒಳ್ಳೇ ಧೂರ್ತತೆಯಿಂದ ಜನನ ಕೈಯೊಳಗಿಂದ ಪಾರಾಗಿ ಲಾಹೋರಕ್ಕೆ ಹೋದಳು. ಅದರಿಂದ ಮೇ ಜಬತಖಾನನ ಎಲ್ಲ ಪ್ರಯತ್ನಗಳು ನಿಷ್ಪಲವಾದವು. ಕೊನೆಗೆ ಆವನು ಬಾದಶಹನ ಕಡಿಂದ " ಎಲ್ಲ ಸಂಗತಿಗಳ ನಿರ್ಣಯವು ಅನುಕೂಲವಾಗಿದೆ; ಇನ್ನು ಮೇಲೆ ಬಾದಶಹನನ್ನು ಬಂದು ಕೂಡುವದಕ್ಕೆ ಯಾವ ಪ್ರಕಾರದ ಭೀತಿಯೂ ಇಲ್ಲ”ವೆಂದು ಬಲಾತ್ಕಾರದಿಂದ ಅವಳಿಗೆ ಪತ್ರಗಳನ್ನು ಬರೆಸಿದನು. ಈ ಪತ್ರಗಳನ್ನು ನೋಡಿ ಅವಳ ಮನಸಿನೊಳಗಿನ ಎಲ್ಲ ಸಂಶಯವು ನಷ್ಟವಾಯಿತು; ಬಾದಶಹನ ಬಿಡಾರಕ್ಕೆ ಹೋಗುವದರ ಸಲುವಾಗಿ ಅವಳು ಲಗುಬಗೆಯಿಂದ ಹೊರಟಳು. ಬಿಡಾರದ ಸಮಾಪಕ್ಕೆ ಬಂದ ಕೂಡಲೆ, ಖಾನನ ಸೈನ್ಯದವರು ಅವಳನ್ನು ಸುತ್ತು ಹಾಕಿ, ಸೆರೆಹಿಡಿದು ಬಾದಶಹನ ಮುಂದೆ ತಂದು ನಿಲ್ಲಿಸಿದರು. ತನ್ನ ಅಳಿಯನಾದ ಶಹಾರಿಯಾರನನ್ನು, ಪಟ್ಟದ ಮೇಲೆ ಕೂಡಿ ಸುವದಕ್ಕಾಗಿ ಇವಳ ಪ್ರಯತ್ನಗಳು ನಡೆದದ್ದರಿಂದ ಇವಳು ರಾಜದ್ರೋಹವನ್ನು ಮಾಡಿದಂತಾಯಿತು; ಮತ್ತು ಇದಕ್ಕಾಗಿ ಇವ ಳಿಗೆ ದೇಹಾಂತ ಪ್ರಾಯಶ್ಚಿತ್ತವೇ ಯೋಗ್ಯವಾದದ್ದೆಂದು ಖಾನನು ಬಾದಶಹನಿಗೆ ಹೇಳಿದನು. ಬಾದಶಹರ ಯೋಗ್ಯತೆಯು ದೇವರ ಯೋಗ್ಯತೆಗೆ ಸಮಾನವಾದದ್ದೆಂದು ನಾವೆಲ್ಲರೂ ತಿಳಿಯುತ್ತಿರುವಾಗ, ಇವರು ಉಚ್ಚರು ಇವರು ನೀಚರು ಎಂಬ ಪಕ್ಷಪಾತದಿಂದ ಬಾದಶಹರ ಕೈಯಿಂದ ಅನ್ಯಾಯವಾದರೆ, ಲೌಕಿಕಕ್ಕೆ ಹಾನಿಯುಂಟಾಗುವದೆಂದು ಖಾನನು ಬಾದಶಹನಿಗೆ ನಿಕ್ಷಿಸಿ ಹೇಳಿದನು.

ಭಯಂಕರ ಸಂಕಟದಲ್ಲಿ ತೊಳಲಾಡುತ್ತಿದ್ದ ನನ್ನ ಪ್ರೀತಿಯ ರಾಣಿಯು ಯೋಗ್ಯತೆಯನ್ನಾಗಲೀ, ಅಥವಾ ಶೌರ್ಯ ಎನ್ನಾಗಲೀ ಲಕ್ಷಕ್ಕೆ ತಾರದೆ, ನೂರಜಹಾನಳಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ಒಂದು ಕಾಗದದ ಮೇಲೆ ಬಾದಶಹನು ತನ್ನ ಸಹಿಯನ್ನು ಮಾಡಿದನು, ಜಹಾಂಗೀರನ ಈ ನೀಚತನದ ನಿಷೇಧವನ್ನು ಎಷ್ಟು ಮಾಡಿದರೂ ಆದು ಅಲ್ಪವೇ ಈ ಸಮಯದಲ್ಲಾದರೂ ಅವಳು ತುಸು ಸಹ ಗಾಬರಿಯಾಗದೆ ಬಾದಶಹನ ಹುಕುಮನ್ನು ಶಾಂತಚಿತ್ತದಿಂದ ಕೇಳಿಕೊಂಡಳು. ಮರಣದ ಪೂರ್ವದಲ್ಲಿ ಬಾದಶಹನದೂ ತನ್ನದೂ ಒಮ್ಮೆ ಭೆಟ್ಟಿಯಾಗಬೇಕೆಂಬ ವಿನಂತಿಯನ್ನು ಮಾತ್ರ ಮಾಡಿಕೊಂಡಳು. " ರಾಜರು ಅಥವಾ ಬಾದಶಹರು ಒಮ್ಮೆ ***(ಜೈಲಲ್ಲಿ) ಬಿದ್ದರೆಂದರೆ, ಸ್ವಾತಂತ್ರ್ಯದ ಕೂಡ ಅವರ ಜೀವಿತವಾದರೂ ನಷ್ಟವಾಗುತ್ತದೆಂಬ ನಿಯಮ ಉಂಟು. ಶಹನ ಭೆಟ್ಟಿಯೂ ನನಗೆ ಒಮ್ಮೆ ಆಗುವಂತೆ ಮಾಡಿರಿ. ನನ್ನ ದೇಹಾಂತಶಿಕ್ಷೆಯ ಹುಕುಮಿನ ಕಾಗದದ ಮೇಲೆ ಸಹಿ ಮಾಡಿದ ಕೈಯನ್ನು ನನ್ನ ಅಶ್ರುಜಲದಿಂದ ತೊಳೆಯುವದರ ಹೊರತ: ಬೇರೊಂದು ಬೇಡಿಕೊಳ್ಳಲಿಕ್ಕಿಲ್ಲ"

ಮೋಹಬತಖಾನನು ಈ ವಿನಂತಿಯನ್ನು ಮಾನ್ಯ ಮಾಡಿದನು, ನೂರಜಹಾನಳು ಬಾದಶಹನ ಕಡೆಗೆ ನೋಡಿದಳು; ಅವಳ ಮುಖದೊಳಗಿಂದ ಒಂದು ಶಬ್ದ ವು ಸಹ ಹೊರ ಬೀಳಲಿಲ್ಲ ಅವಳ ಆ ಮುದ್ರೆಯನ್ನು ನೋಡಿ ಬಾದಶಹನು ಸದ್ಗದಿತ ಅಂತಃಕರಣವುಳ್ಳವನಾಗಿ, ಖಾನನಿಗೆ ಅಂದದ್ದು:"ಮೋಹಬತ, ಈಸ್ತ್ರೀಯಳನ್ನು ಯಾಕೆ ಬದುಕಿಸಿಕೊಳ್ಳುವದಿಲ್ಲ ? ನೋಡು, ಅವಳ ನೇತ್ರಗಳೊಳಗಿಂದ ಅಶ್ರುಧಾರೆಗಳು ಹಾಗೆ ನಡೆದವೆ ! ” ಮಾತುಗಳಿಂದ ಆ ಉದಾರ ಸರದಾರನ ಅಂತಃಕರಣವು ದಯಯಿಂದ ಕರಗಿ ಹೋಯಿತು; ಮತ್ತು 'ಬಾದಶಹರ ಅಪ್ಪಣೆಯು ಹ್ಯಾಗೆ ನಿರರ್ಥಕವಾದೀತೆಂ"ದು ಉತ್ತರವನ್ನು ಕೊಟ್ಟು, ಕೂಡಲೇ ರಾಣಿಯನ್ನು ಮುಕ್ತ ಮಾಡಿದನು.

ಮುಂದೆ ಕೆಲವು ತಿಂಗಳುಗಳ ವರೆಗೆ ಬಾದಶಹ ಮತ್ತು ನೂರಜಹಾನ ಈ ಉಭಯತರ ಮೋಹಬತಖಾನನ ನಜರಕೈದಿನಲ್ಲಿದ್ದರು, ಕೊನೆಗೆ ಬಾದಶಹನು ಪೂರ್ಣ: ಮೆತ್ತಗಾಗಿದ್ದಾನೆಂತಲೂ ತನ್ನ ಮನೆ ಖಂಡಸರು ಪೂರ್ಣವಾಗಿ ತುಂಬಿಬಂದಿತೆಂತಲೂ ಭಾಏಸಿ ಮೋಹಬತಖಾನನು ಆ ಉಭಯತನ್ನು ವಕ್ಷ ಮಾಡಿದನು. ನೋಡಬತಖಾನನ ಪ್ರತಿಬಂಷಕೊದೂಳಗಿಂದ ಮುಕ್ತನಾದ ಕೂಡಲೆ, ಬಾದಶಹನು ನೂರಜಹಾನಳ ಕೇಳುವಿಕೆಯ ಮೇಲಿಂದ ಹಬತಖಾನನ್ನು ರಾಜದ್ರೋಹಿ ಎಂದು ಗೊತ್ತು ಪರಿಸಿ, ಅವನನ್ನು ಕೊಲ್ಲುವವರಿಗೆ ಬಕ್ಷೀಸು ಕೊಡುವೆನೆಂದು ಸಾರಿದನು. ಆದರೆ, ಮೊರಬತಖಾನನ ಯುದ್ಧ ಚಾತುರ್ಯವು ಎಷ್ಟು ಮಹತ್ವವುಳ್ಳದ್ದಾಗಿದೆ೦ಬದನ್ನು ಆ ಸಫಲಾನನು ನೂರಜಹಾನಳಿಗೆ ತಿಳಿಸಿಹೇಳಿ ಅವಳ ರೋಷನ್ನು ಶಾಂತಪಡಿಸಿದನು. ಬಾದಶಹನು ಮೊಸಬತಖಾನನನ್ನು ಕ್ಷಮಿಸಿ, ದಕ್ಷಿಣದಲ್ಲಿದ್ದ ಸೈನ್ಯದ ಮೇಲೆ ಅವನನ್ನು ಮುಖ್ಯಸ್ಥನನ್ನಾಗಿ ನೇಮಿಸಿ, ಅಲ್ಲಿಯ ಸುಭೇದಾರಿಯನ್ನು ಅವನಿಗೆ ಕೊಟ್ಟನು. ಈ ಪ್ರಕಾರ ಬಾದಶಹಾ ಮತ್ತು ಮೋಹಬತಖಾನ ಇವರೊಳಗಿನ ವಿರೋಧವು ನಷ್ಟವಾಗಿ, ಒಡೆಯನ ಮೇಲೆ ಸೇವಕನು ವಿಜಯವನ್ನು ದೊರಕಿಸಿದನು

ಮುಂದೆ ಕೆಲವು ವರ್ಷಗಳ ವರೆಗೆ ನೂರಜಹಾನಳ ಸಾಮ್ರಾಜ್ಯವು ಪೂರ್ವವತ್ ನಡೆಯಿತು. ಆದರೆ ಇಸ್ವಿ ಸನ್ನ ೧೬೨೮ನೇ ವರ್ಷ ಜಹಾಂಗಿರನ ಮರಣದ ಕೂಡ ನೂರಜಹಾನಳ ಸತ್ತೆಯಾದ ರೂ ನಷ್ಟವಾಯಿತು, ಪತಿಯ ಮರಣದ ನಂತರ ೧೮ ವರ್ಷಗಳ ಮೇಲೆ ಅವಳು ಮರಣ ಹೊಂದಿದಳು. ಅವಳಿಗೆ ಪ್ರತಿವರ್ಷ ೨೫ ಲಕ್ಷ ರೂಪಾಯದ ನೇಮಣೂಕವಿತ್ತು. ಅವಳು ಅತ್ಯಂತ ಮಾನೀಸ್ವಭಾವದವಳಿದ್ದದರಿಂದ ಸತ್ತಾ ಹೀನ ಸ್ಥಿತಿಯಲ್ಲಿ ರಾಜಕಾರಣದ ಎಲ್ಲ ವಿಚಾರವನ್ನು ಬಿಟ್ಟು ಕೊಟ್ಟು ಲಾಹೋರದ ಸುಖನಿವಾಸದಲ್ಲಿ ತನ್ನ ಉಳಿದ ಆಯುಷ್ಯವನ್ನು ಕಳೆದಳು.


ಶಿಕಂದರ ಬಾದಶಹ

ಕ್ರಿಸ್ತಶಕದ ಪ್ರಾರಂಭಕ್ಕೆ ಮುಂಚಿತವಾಗಿ ನಾಲೈದು ನೂರು ವರ್ಷಗಳಿ೦ದ ಯುರೋಪದಲ್ಲಿ ಅತಿ ಘನತೆಗೇರಿದ ಜನಾಂಗವೆಂದರೆ ಗ್ರೀಕರದು. ಆ ಗ್ರೀಸದೇಶವೆಲ್ಲ ಕೂಡಿದರೆ ಒಂದು ಅಂಗೈಯಷ್ಟು ಪ್ರಾಂತನಾಗಿದ್ದರೂ ಆ ಕಾಲದಲ್ಲಿ ಅದರ ಮಹಿಮೆಯನ್ನು ಹಿಡಿದವರಿದ್ದಿಲ್ಲ. ಜಗತ್ತಿಗೆ ಮಾರಿದ ವೀರರೆಂದರೆ ಆ ಗ್ರೀಕರೇ ; ಲೋಕೋತ್ತರರಾದ ತತ್ವಜ್ಞಾನಿಗಳೆಂದರೆ ಅವರೇ. ಗಣಿತ, ಜ್ಯೋತಿಷ, ಪದಾರ್ಥವಿಜ್ಞಾನ ಮುಂತಾದ ಉಪಯುಕ್ತ ಶಾಸ್ತ್ರಗಳ ಸಂಸ್ಥಾಪಕರಾರೆಂದು ಕೇಳಿದರೆ ಅವರನ್ನೇ ತೋರಿಸಬೇಕಾಗಿತ್ತು. ನಾವೆಗಳನ್ನು ಕಟ್ಟಿ ಭೀತಿಯಿಲ್ಲದೆ ದ್ವೀಪ ದ್ವಿಪಾಂತರಗಳಿಗೆ ಕಡಲುಪಯಣ ವನ್ನು ಮಾಡಿದ ಸಾಹಸಿಗಳಲ್ಲಿ ಗ್ರೀಸದವರೇ ಅಗ್ರಗಣ್ಯರು. ವಕತ್ವ ಶಕ್ತಿಯುಳ್ಳ ರಾ - ನೀತಿಜ್ಞರೆಂದರೆ ಗ್ರೀಕರಲ್ಲದೆ ಮತ್ತೊಬ್ಬರಿಲ್ಲ. ಅಸಾಧಾರಣರಾದ ಕವಿಗಳವರು ; ನಿಷ್ಣಾತರಾದ ಶಿಲ್ಪಿಗಳು, ಇತಿಹಾಸಲೇಖನವು ಅವರಿಂದಲೇ ಮೊದಲು ಹುಟ್ಟಿತು. ಆದರೂ, ಆ ಗ್ರಿಸ ದೇಶದಲ್ಲಿ ಸ್ವತಂತ್ರ ಸ್ವತಂತ್ರವಾದ ಅನೇಕ ಸಂಸ್ಥಾನಗಳು. ಸ್ಪಾರ್ಟಾ, ಅಥೆನ್ಸ, ಥೀಬ್ಸ, ಮಾಸಿಡೋನಿಯಾ, ಇಲ್ಲೀರಿಯಾ ಮುಂತಾದ ಜನಾಂಗದವರೆಲ್ಲ ಗ್ರೀಕರೇ ಆಗಿದ್ದರೂ ಅವರಲ್ಲಿ ಒಬ್ಬರ ನೆರಳು ಒಬ್ಬರಿಗೆ ಸರಿಬರುತ್ತಿದ್ದಿಲ್ಲ. ಇಂದು ಸ್ಪಾರ್ಟಾದ ವೀರರು ಪ್ರಬಲರಾಗಿ ಉಳಿದ ಗ್ರೀಕರನ್ನು ತನ್ನ ಅಂಕಯಲ್ಲಿಟ್ಟು ಕೊಂಡಿದ್ದರೆ, ನಾಳೆ ಅಥೆನ್ಸದವರು ತಮ್ಮ ಯುಕ್ತಿವಾದ, ರಾಜ ನೀತಿ, ಕೌಟಿಲ್ಯ, ವಕ್ರತ್ವ, ಪರಾಕ್ರಮಾದಿಗಳ ಬಲದಿಂದ ಉಳಿದವರ ತಲೆ ಯಮೇಲೆ ಕೈ ಆಡಿಸಿದರು. ಒಮ್ಮೆ ಥೀಬ್ಬದವರು ಪ್ರಬಲರಾದರೆ, ಮತ್ತೊಮ್ಮೆ ಮಾಸಿಡೋನಿಯಾದ ಹಿಂದುಳಿದ ಜನಾಂಗವು ಜಿಗಿದು ಮುಂದಕ್ಕೆ ಬಂದು ತನ್ನ ವಿಲಕ್ಷಣವಾದ ತೇಜಸ್ಸಿನಿಂದ ಲೋಕವನ್ನು ಬೆರಗು ಮಾಡಿಕೊಟ್ಟಿತು.

ಈಗಿನ ಸರ್ನಿಯಾ ಹಾಗೂ ಬಲ್ಗೇರಿಯಾದ ಪಶ್ಚಿಮದ ಅರ್ಧಭಾಗ ಕೂಡಿ ಆಗುವ ಪ್ರಾಂತಕ್ಕೆ ಪೂರ್ವಕಾಲದಲ್ಲಿ ಮಾಸಿಡೋನಿಯಾ ಎಂಬ ಹೆಸರು. ಸ್ಪಾರ್ಟಾ ಅಥೆನ್ಸ ಮುಂತಾದ ಸಂಸ್ಥಾನಗಳು ಅತ್ಯುಚ್ಛಿತವಾಗಿ ಮೆರೆಯುವ ಕಾಲಕ್ಕೆ ಮಾಸಿಡೋನಿಯಾ ಪಾ೦ತವು ಬಹು ಹೀನವಾದ ಸ್ಥಿತಿಯಲ್ಲಿತ್ತು. ಅಲ್ಲಿಯ ಜನರಲ್ಲಿ ಶೌರ್ಯವಿದ್ದಿಲ್ಲ. ವಿದ್ಯೆಯಿದ್ದಿಲ್ಲ, ಕಲಾ ಕೌಶಲ್ಯಗಳಿಲ್ಲ. ಇಂಥ ದೇಶವನ್ನೇ ಬೆಳಿಸಿ ಬಲಿಸಿ ಮುಂದಕ್ಕೆ ತಂದವರೆಂದರೆ ನಮ್ಮ ಚರಿತ್ರ ನಾಯಕನಾದ ಶಿಕಂದರಬಾದಶಹನೂ ಅವನ ತಂದೆಯಾದ ಫಿಲ್ಲಿಪರಾಜನು. ತಂದೆಮಕ್ಕಳೀರ್ವರೂ ಅಸಾಧಾರಣರಾದ ಪುರುಷಸಿಂಹರು. ಅವರಲ್ಲಿ ಹೆಚ್ಚಿನವನಾವ ಕಡಿಮೆಯವನಾವನೆಂಬದನ್ನು ಹೇಳಲಿಕ್ಕಾಗದು. ಫಿಲ್ಲಿಪರಾಜನ ತಂದೆಯಾದ ಆಮಂತರಾಜನ ಕಾಲಕ್ಕೆ ಥೀಬ್ಸ ಜನಾಂಗದವರು ಬಹು ಪ್ರಬಲರಾಗಿ ಮರೆಯುತ್ತಿದ್ದರು. ಅಮಂತರಾಜನ ತರುವಾಯದಲ್ಲಿ ಫಿಲ್ಲಿಪನ ಅಣ್ಣನಾದ ಪರ್ದಿಕನು ರಾಜನಾಗಿರುವಾಗ ಮಾಸಿಡೋನಿಯಾದವರಿಗೂ ಥೀಬ್ಸದವರಿಗೂ ಯುದ್ಧವಾಗಿ ಫಿಲ್ಲಿಪನು ಸೋತು ಥೀಬ್ಸದ ಸೇನಾಪತಿಯಾದ ಓಲಾಪೀಡನ ಬಂದಿಯಾಗಿ ಹೋದನು (ಕ್ರಿಪೂರ್ವದಲ್ಲಿ ೩೬೦). ಫಿಲ್ಲಿಪನ ಪೂರ್ವಜನ್ಮದ ಸುಕೃತವೇ ಬಂದಿವಾಸದಿಂದ ಅವನಿಗೆ ವಾ೦ಛಿತಾರ್ಥವನ್ನೀಯುವದಾಯಿತು.

ಆ ಕಾಲಕ್ಕೆ ಥೀಬ್ಸ ಸಂಸ್ಥಾನವೇ ಶೌರ್ಯ ಧೈರ್ಯ ವಿದ್ಯೆ ಬುದ್ಧಿ ಕಲಾಕೌಶಲ್ಯ ಮುಂತಾದ ಉಚ್ಛ್ರಿತವಾದ ಗುಣಗಳಿಗೆ ತವರ್ಮನೆಯಾಗಿತ್ತು. ಅಥೆನ್ಸವ ಪಂಡಿತರೂ ಸ್ಪಾರ್ಟಾದ ಕಡುಗಲಿಗಳ ಈಜಿಪ್ತ ಆಯೋನಿಯಾಗಳಲ್ಲಿಯ ಸಾಹಸಿಗಳಾದ ವರ್ತಕರೂ ಅಲ್ಲಿ ತಮ್ಮ ಪ್ರಸ್ಥಗಳನ್ನು ಬೆಳೆಸಿಕೊಂಡಿದ್ದರು. ಅಂಥ ಸುಸಮಯದಲ್ಲಿ ಫಿಲ್ಲಿಪನು ಅಲ್ಲಗೆಗೆ ರಾಜಕೀಯ ಬಂದಿಯಾಗಿ ಬಂದನು. ಇಪ್ಪತ್ತು-ಇಪ್ಪತ್ತೆರಡು ವರ್ಷದ ನವತರುಣನಾದ ರಾಜಕುಮಾರನವನು. ಬುದ್ಧಿಶಾಲಿಯೂ ಉತ್ಸಾಹಯುತನೂ ಮಹತ್ವಾಕಾಂಕ್ಷಿಯೂ ಆಗಿದ್ದ ಫಿಲ್ಲಿಪನು ಥೀಬ್ಸದಲ್ಲಿ ಸಿಕ್ಕಬಹುದಾದ ವಿದ್ಯೆ ಕಲೆಗಳನ್ನೆಲ್ಲ ಎರಡೂ ಕೈಗಳಿಂದ ಬಳಿಬಳಿದು ಕಟ್ಟಿಕೊಳ್ಳಲಾರಂಭಿಸಿದನು. ಸ್ವಯಂ ವ್ಯಕ್ತಿ ವೀರನಾದ ಆ ರಾಜಕುಮಾರನು ಸಾಮಾನ್ಯನಾದ ಸೈನಿಕನಂತೆ ಹಗಲಿರುಳು ದುಡಿದು ಯುದ್ಧಕಲೆಯ ಶಿಕ್ಷಣವನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡನು. ಥೇಚ್ಛದ ಭೀಷ್ಮನಾದ ಇಸಾಮಿನಂದನೆಂಬವನು ಸೇನೆಯಲ್ಲಿಯೂ ರಾಜ್ಯ ದಾಡಳಿತದಲ್ಲಿಯ ಮಾಡಿದ ಸುವ್ಯವಸ್ಥೆಗಳನ್ನು ನಿಲ್ಲಿಸನು ಲಕ್ಷಪೂರ್ವಕವಾಗಿ ನೋಡಿಕೊಂಡನು. ಪಂಡಿತರಾದ ವಕ್ತಾಜನರ ಶಿಕಂದರ ಬಾದಶಹ

ಶಿಷ್ಯತ್ವವನ್ನು ವಹಿಸಿ ಅವನು ಶೋತೃಗಳ ಮನಸ್ಸುಗಳನ್ನು ತನ್ನೆಡೆ ಅಕ ಷಿಸಿಕೊಳ್ಳುವಂಥ ವಾಶ್ಚಾಪಲ್ಯವನ್ನು ಗಳಿಸಿಕೊಂಡನು. ವಿನಯಾನ್ವಿತನ, ಸುಂದರನೂ, ಪ್ರಸನ್ನ ವದನನ ಆಗಿದ್ದ ಫಿಲ್ಲಿಪನ ಬಯಕೆಯನ್ನು ಪೂರೈಸ ದಿದ್ದ ಜನರೇ ಇರಲಿಲ್ಲ, ಸಾಧುವಾಗಿ ತೋರುವ ತನ್ನ ಬಹಿರಂಗದ ಆಡಂ ಬರಕ್ಕೆ ಬೆನ್ನಾ ಸರವೆಂದು ನೆನೆದು ಅವನು ಪ್ರಸಂಗಬಂದಾಗ ಕುಟಲನೀತಿಯ ಆಶ್ರಯವನ್ನಾದರೂ ಮಾಡಿಕೊಳ್ಳುವದರಲ್ಲಿ ಹಿಂದು ಮುಂದು ನೋಡಿದವ. ನಲ್ಲ. ಆRIA BYTAuಳಗೆ ಕೆಜಿಗೆ 1 ಈg fkaraai., ಎಂದು ನಿಂದಾ ವ್ಯಂಜಕವಾದ ನುಡಿಗಳನ್ನಾಡುವವರಾದ ನಾವು ಆರ್ಯಜನರು ಕೆಟ್ಟು ಹೋದೆವು. ಫಿಲ್ಲಿಪರಾಜನು ಮುಂದಕ್ಕಾದವನು ಆಗಿಹೋಗಿ ಅಜರಾಮರ ಬಾದ ಕೀರ್ತಿಯನ್ನು ಪಡೆದನು. ಹೀಗೆ ವಿದ್ಯಾ ಸಂಪನ್ನ ನಾದ ಫಿಲ್ಲಿನ ರಾಜಕುಮಾರ ಥೀಬ್ಬದಿಂದ ಬಿಡುಗಡೆಯನ್ನು ಹೊಂದಿ ತನ್ನ ದೇಶವಾದ ನಾಸಿಡೊನಿಯಾಕ್ಕೆ ಬರುವಷ್ಟ ರಲ್ಲಿ ತೆರವಾಗಿದ್ದ ಸಿಂಹಾಸನವು ಆವನ ಮಾರ್ಗ ಪ್ರತೀಕ್ಷೆ ಮಾಡುತ್ತಲಿತ್ತು, ಅವನ ಅಣ್ಣನಾದೆ ಪರ್ದಿಕರಾಜನು ಪರರಾಯರೊಡನೆ ಯುದ್ಧ ಮಾಡುವಾಗ ಮಡಿದುಹೋಗಿದ್ದನು, ಪ್ರಜರೆಲ್ಲರೂ ಫಿಲ್ಲಿಪನನ್ನು ಆದರದಿಂದ ಸಿ೦ಹಾ ಸನದ ಮೇಲೆ ಕುಳ್ಳಿರಿಸಿದರು. ಅನಲ ಸನಾದ ಆ ರಾಜನು ಇಡಮಾಡದೆ ತನ್ನ ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಂಟುಮಾಡಿ ಪ್ರಜರಲ್ಲಿ ವಿದ್ಯಾ ಪ್ರಸಾರ ವಾಗುವಂತೆ ಮಾಡಿದನು. ದೊಡ್ಡದೊಂದು ಸೇನೆಯನ್ನು ಕೂಡಿಸಿ ಅದಕ್ಕೆ ಯುದ್ಧ ಕಲೆಯನ್ನು ಚೆನ್ನಾಗಿ ಕಲಿಸಿದನು. ಚುಚ್ಚು ಗೋಲಿನ (ಬರ್ಚಿದು) ಭಟ ಇದೊಂದು ಚಮತ್ಕಾರವಾದ ವ್ಯೂಹವನ್ನು ( ಫ್ಯಾಲಾಕ್ಷ ಇವನೇ ನಿರ್ಮಿಸಿದವನು. ಫಿಲ್ಲಿಪನ ಕೈ ಕೆಳಗೆ ವಿನೂತನವಾದ ಯುದ್ಧ ಕಲೆಯನ್ನು ಕಲಿತುಕೊಂಡ ಅವನ ಸೇನೆಯು ಸಮಗ್ರವಾದ ಗ್ರೀಸದೇಶಕ್ಕೆ ಮಾರಿದ್ದಾ ಯಿತು, ಮಾಸಿಡೋನಿಯಾದ ಪೂರ್ವಕ್ಕಿದ್ದ ಫೋಸ (ಬಲ್ಗರಿಯಾದ ಪೂರ್ವ ಭಾಗ+ ಈಗಿನ ಯುರೋಪದ ತುರ್ಕ ಸ್ಥಾನ) ದೇಶವನ್ನೂ ಪಶ್ಚಿಮಕ್ಕಿದ್ದ ಇತ್ತೀರಿಯಾ ದೇಶವನ್ನೂ ದಕ್ಷಿಣಕ್ಕೆ ಥೀಬ್, ಅಥೆನ್ಸ ಮುಂತಾದ ಸಂಸ್ಥಾನ ಗಳನ್ನೂ ಫಿಲ್ಲಿಪನು ಹೊಡೆದು ಕೆಡವಿ ಮಣಿಸಿದನು. ಕುದ್ರವಾದದ್ದೆನ್ನಿಸಿ ಕೊಳ್ಳುತ್ತಿದ್ದ ಮಾಸಿಡೋನಿಯಾ ಸಂಸ್ಥಾನವು ಫಿಲ್ಲಿಪನ ಆಳಿಕೆಯಲ್ಲಿ ಗ್ರೀಸದ ಅಗ್ರೇಸರವಾದ ಸಂಸ್ಥಾನವಾಗಿ ಮೆರೆಯಲಾರಂಭಿಸಿತು.

ಸಕಲ ಗ್ರಹಗಳು ಉಚ್ಚ ಸ್ಥಾನದಲ್ಲಿರುವಾಗ ಫಿಲ್ಲಿಸ ರಾಜನಿಗೆ ಪುತ್ರೋತ್ಸವವಾಯಿತು. ಆ ಸುಪುತ್ರನೇ ಜಗದ್ವಿಖ್ಯಾತನಾದ ಅಲೆಕ್ ಝಾಂಡರನು (ಶಿಕಂದರ ಬಾದಶಹನು). ಶಿಕಂದರನ ತಾಯಿಯಾದ ಆಲಿಂಪಿಯಾ ರಾಣಿಯ ಎಪೀರ ಎಂಬ ಪುರಾತನವಾದ ರಾಜವಂಶದಲ್ಲಿ ಹುಟ್ಟಿದವಳು; ತಂದೆಯಂತೂ ಚಂಡವಿಕ್ರಮನಾದ ಫಿಲ್ಲಿಪರಾಜನು. ಅಂಥ ತಾಯಿ-ತಂದೆಗಳ ಹೊಟ್ಟೆಯಲ್ಲಿ ಹುಟ್ಟಿದವನಾದ ಶಿಕಂದರನು ಲೋಕೋತ್ತರನಾದ ವೀರನಾದನೆಂಬದು ಸಹಜವೇ. ಶಿಕಂದರ ರಾಜಕುಮಾರನ ಶಿಕ್ಷಣ ಪೋಷಣಗಳ ಕ್ರಮವು ಒಳ್ಳೆ ಆಸ್ಥೆಯಿಂದಲೂ ವ್ಯವಸ್ಥೆಯಿಂದಲೂ ನಡೆಯಿತೆಂದು ಹೇಳಬೇಕಾಗಿಲ್ಲ. ಮಗನ ಶಿಕ್ಷಣದ ವಿಷಯದಲ್ಲಿ ಫಿಲ್ಲಿಪರಾಜನಿಗೆ ಹೆಚ್ಚಾದ ಆಸ್ಥೆಯಿರುವದು ಆಶ್ಚರ್ಯವಲ್ಲ. ಆದರೆ ಕ್ಷಾತ್ರಧರ್ಮಾಭಿಮಾನಿನಿಯಾದ ಅವನ ತಾಯಿಯು, ತನ್ನ ಮಗನು ಲೋಕೈಕವೀರನಾಗಬೇಕೆಂದೆಣಿಸಿ ಬಹು ಸಾಹಸಪಡುತ್ತಿದ್ದಳು. ಅದಕ್ಕಾಗಿ ಆಲಿಂಪಿಯಾ ರಾಣಿಯು ಶಿಕಂದರನ ಶಿಕ್ಷಣದ ಮೇಲ್ವಿಚಾರಣೆಯ ಕೆಲಸವನ್ನು ತನ್ನ ಆಪ್ತನಾದ ಲಿಯೋನೀನನೆಂಬ ವೀರನಿಗೆ ಒಪ್ಪಿಸಿದ್ದಳು ಹದಿಮೂರು ವರ್ಷದವನಾಗುವಷ್ಟರಲ್ಲಿ ಶಿಕ೦ದರನು ದೃಢಾಂಗನ, ಶಸ್ತ್ರಾಸ್ತ್ರಗಳ ಪ್ರಯೋಗದಲ್ಲಿ ಅತಿತನೂ, ಧೈರ್ಯಶಾಲಿಯೂ ಆಗಿ ತೋರಿದನು. ಮುಂದೆ ಅವನ ಮಾನಸಿಕ ಶಿಕ್ಷಣದ ಕೆಲಸವು ಜತದ್ವಿಖ್ಯಾತ ತ್ವಜ್ಞಾನಿಯಾದ ಅರಿಸ್ಟಾಟಲನ ಕಡೆಗೆ ಬಂದಿತು. ಬಂಗಾರಕ್ಕೆ ಕುಂದಣವನ್ನಿಟ್ಟ ಹಾಗಾಯಿತು. ಹದಿನಾರು ವರ್ಷದ ನವತರುಣನಾದ ಕಂದರ ಯುವರಾಜನು ಸೇನಾಧುರಂಧರನಾದ ವೀರನೂ ಉದಾತ್ತ ಪಿಚಾರದ ರಾಜಕುಮಾರನೂ ಆಗಿ, ಎಲ್ಲರ ಆದರಕ್ಕೂ ಪ್ರೀತಿಗೂ ಪಾತ್ರನಾದನು, ಫಿಲ್ಲಿಪರಾಜನ ಉಚ್ಛಯವನು ಸಹಿಸದವರಾದ ಅಥೆನ್ ಹಾಗು ಫೀ ಸಂಸ್ಥಾನಗಳವರು ಪ್ರಬಲವಾದ ಸೇನೆಯನ್ನು ಕಟ್ಟಿಕೊಂಡು ಮಾಸಿಡೋನಿಯಾದ ಮೇಲೆ ಸಾಗಿ ಬಂದಾಗ, ಹದಿನಾರು ವರುಷದ ಎಳೆಪ್ರಾಯದವನಾದ ಶಿಕಂದರ ರಾಜಕುಮಾರನು ತನ್ನ ತಂದೆಯ ಕೈ ಕೆಳಗೆ ಸೇನಾಪತಿಯಾಗಿ ಯುದ್ಧಮಾಡುತ್ತಿದ್ದನು. "ಚರೋನಿಯಾ ” ಎಂಬ ಸ್ಥಳದಲ್ಲಿ ಯುದ್ಧವು ನಡೆದಿರಲು, ಶಿಕಂದರನ ಶೌರ್ಯ ಸಾಹಸಗಳಿಂದಲೇ ಶತ್ರುಗಳು ಸಂಪೂರ್ಣವಾಗಿ ಸೋತು ಹೋದರು. ಹದಿನಾರು ವರ್ಷದ ಬಾಲಕನು ಕಂಡಿರಾ! ನಮ್ಮಲ್ಲಿ ಅಂಥವನನ್ನು ಮುಲಕೀಪರೀಕ್ಷೆಗೆ ಕೂಡ ಕರಕೊಳ್ಳಲಿಕ್ಕಿಲ್ಲ ! ಹದಿನಾರು ವರ್ಷದ ಬಾಲಕನೇ ಥೀಬ್ಬ ಅಥೆನ್ಸಗಳಂಥ ಎರಡು ಬಲಾಧ್ಯವಾದ ಸಂಸ್ಥಾನಗಳ ಸಂಯುಕ್ತ ವಾದ ಸೇನೆಯನ್ನು ಸ್ವಪರಾಕ್ರಮದಿಂದ ಸೋಲಿಸಿ ಮುರಿದು ಹಾಕಿದನು.

ಗ್ರೀಕ ಜನಾಂಗದವರೆಲ್ಲರ ಬಗ್ಗು ಬಡಿದ ಬಳಿಕ ಫಿಲ್ಲಿಪ ರಾಜನು ಏಸಿಯಾಖಂಡದ (ಭೂಮಧ್ಯ ಸಮುದ್ರದಿಂದ ಸಿಂಧು ನದವ ವರೆಗಿರುವ) ಸಾರ್ವಭೌಮನಾದ ದರಾಯಸ ಬಾದಶಹನ ಮೇಲೆ ದಂಡೆತ್ತಿ ಹೋಗಬೇಕೆಂದು ವಿಚಾರಮಾಡಿ ಒಳ್ಳೆ ಸಿದ್ದತೆಯನ್ನು ಮಾಡತೊಡಗಿದನು. ಸೇನೆಯನ್ನು ಅತಿಶಯವಾಗಿ ಬೆಳಿಸಿ ತಾನೇ ನಿಂತು ಅದಕ್ಕೆ ಯುದ್ಧ ಶಿಕ್ಷಣವನ್ನು ಕೊಡುತ್ತಿದ್ದನು. ಸಾಮೋಪಚಾರದಿಂದ ಗ್ರೀಕ ಸಂಸ್ಥಾನಿಕರೆಲ್ಲರ ಸಹಾನುಭೂತಿಯನ್ನು ಗಳಿಸಿಕೊಂಡನು. ವಿಖ್ಯಾತರಾದ ಸೇನಾನಾಯಕರೊಡನೆ ಸ್ನೇಹ ಸಂಬಂಧಗಳನ್ನು ಬೆಳಿಸಿದನು. ಇದೇ ಉದ್ದೇಶದಿಂದಲೇ ನಿಲ್ಲಿಸಲು ಅಟ್ಟಾಲನೆಂಬ ಸೇನಾಪತಿಯ ಮಗಳಾದ ಕ್ಲಿಯೋಪಾತ್ರಾ ಎಂಬ ಸುಂದರಿಯನ್ನು ಮದುವೆ ಮಾಡಿ ಕೊಂಡನು. ಆದರೆ ಈ ಮದುವೆ ಮಾತ್ರ ಫಿಲ್ಲಿಪ ರಾಜನ ಇತಿಶ್ರೀಯ ಕಾರಣವಾಯಿತು. ವಿವಾಹ ಸಮಾರಂಭವು ನಡೆದಾಗ ಫಿಲ್ಲಿಸನು ತನ್ನ ಆಪ್ತರಿಷ್ಟರದೊಂದು ದೊಡ್ಡ ಬಳಗವನ್ನು ಕೂಡಿಸಿಕೊಂಡು ಮಧುಮಾನೋತ್ಸವವನ್ನು ನಡೆಸಿದ್ದನು ಆ ಸಮಯದಲ್ಲಿ ಕ್ಲಿಯೋಪಾತ್ರೆಯ ತಂದೆಯಾದ ಅಟ್ಟಾಲನು ಕಿಂಚಿತ್ ಮದಿರೋನ್ಮತ್ತನಾಗಿ ತನ್ನ ಕೈಯಲ್ಲಿಯ ಚಷಕವನ್ನು (ಪಾನಪಾತ್ರವನ್ನು) ಮೇಲಕ್ಕೆತ್ತಿ ಹಿಡಿದು ಈ ನನ್ನ ಮಗಳ ಹೊಟ್ಟೆಯಲ್ಲಿ ಫಿಲ್ಲಿಪರಾಜನ ವಂಶಾಭಿವೃದ್ಧಿ ಕರನಾದ ಸುಪುತ್ರನು ಹುಟ್ಟಲಿ !” ಎಂದು ಆಶೀರ್ವದಿಸಿ, ಚಷಕದಲ್ಲಿಯ ಮಧುರಸವನ್ನು ಸೇವಿಸಿದನು. ಆ ವಚನವನ್ನು ಕೇಳಿ ಅಲ್ಲಿಯೇ ಕುಳಿತಿದ್ದ ಶಿಕಂದರನಿಗೆ ಅಸಾಧ್ಯವಾದ ಕೋಪ ಬಂದಿತು. ಅವನು ತನ್ನ ಕೈಯಲ್ಲಿರುವ ರತ್ನಖಚಿತವಾದ ಪಾನಪಾತ್ರವನ್ನು ಅಟ್ಟಾಲನೆ ಮೋತಿಗೆ ಒಳಿತಾಗಿ ಹೇರಿ “ದುರಾತ್ಮನೆ, ಫಿಲ್ಲಿಪರಾಜನ ಔರಸಪುತ್ರನಾದ ನಾನು ಇಲ್ಲಿ ಕುಳಿತಿರಲು ನೀನೇನು ಮಾತಾಡಿದೆ? ನಾನು ದಾಸೀಪುತ್ರನೆಂದು ತಿಳಿದಿರುವೆಯಾ?” ಎಂದು ಗದ್ದರಿಸಿ ಕೇಳಿದನು. ತನ್ನ ಹೊಸಮಾವನ ಅಪ್ರತಿಷ್ಠೆಯು ಹೀಗೆ ತನ್ನ ಸಮಕ್ಷದಲ್ಲಾಡದ್ದನ್ನು ಕ೦ಡು ಫಿಲ್ಲಿಪರಾಜನಿಗೆ ಅತಿಶಯವಾದ ಸಂತಾಪವಾಯಿತು. ಹಿಂದುಮುಂದು ನೋಡದೆ ಅವನು ತನ್ನ ಸಿಂಹಾಸನದಿಂದೆದ್ದು ಖಡ್ಗವನ್ನೆತ್ತಿ ಯುವರಾಜನನ್ನು ಅಲ್ಲಿಯೇ ಸಂಹರಿಸಬೇಕೆಂದು ಸಾಗಿಬರುವಷ್ಟರಲ್ಲಿ ಕಾಲು ಜಾರಿ ಧಡಮ್ಮನೆ ಬಿದ್ದು ಬಿಟ್ಟನು. ಆಗ ಶಿಕಂದರನು ತಂದೆಯ ಅಪಹಾಸಮಾಡಿ ನಕ್ಕು ನೋಡಿದಿರಾ, ಯುರೋಪದಿ೦ದ ಏಸಿಯಾದ ಮೇಲೆ ಸಾಗಿ ಹೋಗಿತಕ್ಕವನಾದ ಈ ಮನುಷ್ಯನು ತನ್ನ ಆಸನದಿಂದೆದ್ದು ಮೂರು ಹೆಜ್ಜೆ ಬರುವಷ್ಟರಲ್ಲಿ ಉರುಳಿಹೋದನು!" ಎಂದು ನುಡಿದವನೇ ನಿ೦ತಕಾಲಮೇಲೆ ತಂದೆಯ ರಾಜ್ಯವನ್ನು ಬಿಟ್ಟು ಹೊರಟಿದು ಹೋಗಿ ಇಲ್ಲೀರಿಯಾ ಸಂಸ್ಥಾನದಲ್ಲಿ ನಿಂತುಕೊಂಡನು. ಅಪಮಾನಸಂತಪ್ಪಳದ ಆಲಿಂಪಿಯಾ ರಾಣಿಯು ಕೂಡ ಗಂಡನ ರಾಜ್ಯವನ್ನು ಬಿಟ್ಟು ತನ್ನ ತಮ್ಮನ ರಾಜ್ಯಕ್ಕೆ ತೆರಳಿದಳು. ಈ ಸಂಗತಿಷದ ಸ್ವಲ್ಪ ದಿವಸಗಳಲ್ಲಿಯೇ ಪಾಸಾನಿಯನೆಂಬ ನೀಚನೊಬ್ಬನು ರಾಜಮಾರ್ಗದಲ್ಲಿ ಬರುವ ನಿಲ್ಲಿಸರಾಜನನ್ನು ಕಡಿದು ಕೊಂದುಹಾಕಿದನು. ಆ ಕೊಲೆ ಯನ್ನು ಆಲಿಂಪಿಯಾ ರಾಣಿಯೇ ಮಾಡಿಸಿದಳೆಂದು ತತ್ಕಾಲೀನರಾದ ಹಲವು ಜನ ಇತಿಹಾಸಕಾರರು ಅವಳ ಮೇಲೆ ಆರೋಪ ದೊರಿಸಿದ್ದಾರೆ. ಆದರೆ ಆ ಅನರ್ಥಕರವಾದ ಕೊಲೆಯಲ್ಲಿ ಶಿಕಂದರ ರಾಜಕುಮಾರನ ಅಂಗವು ಎಷ್ಟು ಮಾತ್ರವೂ ಇದ್ದಿಲ್ಲವೆಂಬದು ಎಲ್ಲ ಇತಿಹಾಸಕಾರರ ಏಕವಾಕ್ಯವಾದ ಅಭಿಪ್ರಾಯವು.

"ಗೂಳಿ ಬಿದ್ದ ಬಳಿಕ ಆಳಿಗೊಂದು ಕಲ್ಲು” ಎಂಬಂತೆ ಫಿಲ್ಲಿಪನ ಪಾದಾಕ್ರಾಂತರಾದ ಗ್ರೀಕ ಸಂಸ್ಥಾನಿಕರೆಲ್ಲರೂ, ದರ್ಪಹಗೆನಾದ ಆ ರಾಜನು ಆ ಸತ್ಯವನ್ನು ಹೊಂದಿದನೆಂಬ ವಾರ್ತೆಯನ್ನು ಕೇಳಿ ಸಂತೋಷದ ಉಬ್ಬಿನಿಂದ ಕೊಬ್ಬಿ, ಇನ್ನು ಮಾಸಿಡೋನಿಯಾದ ರಾಜ್ಯವನ್ನು ಮುರಿದು ಹರಗಿಬಿಡಬೇಕೆಂಬ ಹವಣಿಗೆ ಬಿದ್ದರು. ಡಿಮಾನಿಯೇ ಮುಂತಾದ ಅಥೆನ್ಸದ ವಾಚಾಲರು ಜಗಲಿ ಜಗಲಿಗಳನ್ನೇರಿಕೊಂಡು ಸ್ವದೇಶಾಭಿಮಾನೋ ತೇಜಕವಾದ ವ್ಯಾಖ್ಯಾನಗಳನ್ನು ಕೊಟ್ಟು ಫಿಲ್ಲಿಪನ ಮರಣದ ಸುಸಂಧಿ ಸಿಕಂದರ ಬಾದಶಹ KE ಯನ್ನು ಸಾಧಿಸಿ ಅವನ ರಾಜ್ಯದ ಮೇಲೆ ಅಭಿಯೋಗವನ್ನು ಮಾಡತಕ್ಕ ದ್ದೆಂದು ಬೋಧಿಸಿ ಜನರಲ್ಲಿ ಹುರುಪು ತುಂಬಲಾರಂಭಿಸಿದರು. ಸಂಸ್ಥಾನ ಸಂಸ್ಥಾನ ನಗಳ ನಡುವೆ ಅಖಂಡವಾಗಿ ಪತ್ರವ್ಯವಹಾರಗಳು ನಡೆದವು. ಪ್ರಬಲ ನದ ಫಿಲ್ಲಿಪನು ಸತ್ತು ಹೋದನು ; ಅವನ ಮಗನಾದ ಶಿಕಂದರನೆಂದರೆ ಆಪ್ರೌಢನ: ದ ಹೊಸ ತರುಣನು, ಫಿಲ್ಲಿಪನು ತಮ್ಮ ಕೊರಳಿನಲ್ಲಿ ಕಟ್ಟಿದ ಗುದ್ದಿ ಯನ್ನು ಬಿಚ್ಚಿ ಒಗೆಯಲು ಇದೇ ಸಮಯವೆಂದು ಥೀಬ್ಬದವರು ಆಸ್ಥೆ ತೊಟ್ಟರು. ಆ ಕಡೆ ಈರ್t ಇTT afಆಡೆ ಎಂಬಂತೆ ಫಿಲ್ಲಿಪನು ಸಕ್ಕರೆ ಶಿಕಂದರನ ತಂದೆಗೆ ಇಮ್ಮಡಿಯಾದ ಪ್ರತಾಪಶಾಲಿಯೆಂಬದನ್ನು ಆ ಜನರು ತಿಳಿಕೊಳ್ಳಲಿಲ್ಲ. ಈ ಸಂಸ್ಥಾನಿಕರೆಂದರೆ ಕಃಪದಾರ್ಥವೆಂದು ಶಿಕಂದರನು ಚರನಿ ಯಾದ ಕಾಳಗದಲ್ಲಿಯೇ ಕಂಡುಕೊಂಡುಬಿಟ್ಟಿದ್ದನು ಇವರ ಲಕ್ಷವು ಅವ ನಿಗೆಷ್ಟು ಮಾತ್ರವೂ ಇದ್ದಿಲ್ಲ. ಪರ್ಶಿಯಾದ ಸಾರ್ವಭೌಮನಾದ ವರಾಯ ಸನ ಕೈ ಒಡ್ಡು ಮುರಿದು ಅವನ ಹಿಡಿತದಲ್ಲಿರುವ ರಾಜ್ಯ ಸೂತ್ರವನ್ನು ಆಸ ಹರಿಸಿಕೊಳ್ಳುವದೇ ತಿಳಂದಳರಾಜನ ಮುಖ್ಯವಾದ ಧೈಯವಾಗಿತ್ತಾದ್ದರಿಂದ ಅವನು ಅನ್ಯ ವಿಷಯಗಳಲ್ಲಿ ಮನಸ್ಸು ಹಾಕದೆ ಮುಂದಿನ ಮಹಾಯುದ್ಧದ ಸಿದ್ಧತೆಯಲ್ಲಿಯೇ ಅವನು ತಕ್ಷರನಾಗಿದ್ದನು. ಗ್ರೀಕ ಸಂಸ್ಥಾನಿಕರೆಲ್ಲರೂ ತಮ್ಮ ತಮ್ಮ ಪತ್ರವ್ಯವಹಾರಗಳನ್ನು ಮುಗಿಸಿಕೊಂಡು ಒಕ್ಕಟ್ಟಾಗಿ ಕೂಡ ಬೇಕಾದರೆ ಎಷ್ಟೋ ಅವಕಾಶವಿರುವದ೦ಬದನ್ನು ಅರಿತವನಾದ ಶಿಕಂದರನು ಆಲಸ್ಯ ಮಾಡದೆ ಆ ಅವಧಿಯಲ್ಲಿ ಡಾನ್ಯೂಬ ನದೀತೀರವಾಸಿಗಳಾದ ಜನಾಂಗ ದವರನ್ನು ಮರ್ದಿಸಿ, ಅವರಿಂದ ಮುಂದೆ ತನಗಾವ ಬಗೆಯ ತೊಂದರೆಗಳಾಗ ದಂತೆ ಜಾಗ್ರತೆಯಿಂದ ಕೆಲಸ ನಡಿಸಿದನು. ಶಿಕಂದರನು ಈ ವ್ಯವಸಾಯ ದಲ್ಲಿ ತೊಡಗಿರುವನೆಂಬದನ್ನರಿಯದೆ ಅವನು ತಮ್ಮ ಭೀತಿಗಾಗಿ ಎಲ್ಲಿಗೋ ಓಡಿ ಹೋಗಿರುವನೆಂದು ಥಿಬ್ಬ, ಅಥೆನ್ಸ ಮುಂತಾದ ಗ್ರೀಕ ಜನಾಂಗದವರು ನಂಬಿ ಸಂತೋಷಭರಿತರಾಗಿ ತಮ್ಮ ಉದ್ಯೋಗಗಳಲ್ಲಿ ವಿಲಂಬವಾಡಲಾರಂಭಿಸಿದರು. ಇತ್ತ ಸಮಯ ಸಾಧಕನ ಸ್ವ ಕಾರ್ಯ ನಿರಶನ ಪರ ಕ್ರಮಶಾಲಿಯೂ ಆದ ಶಿಕಂದರನು ಡಾನ್ಯೂಬ ತೀರಸ್ಥರ ಪಾರಿಪತ್ಯವನ್ನು ಮಾಡಿದವನೇ ಮಾಯಾಮಂತ್ರಸಾಧಕನ ಇರದಿಂದ ಸಾಗಿ. C ಸಂಪೂರ್ಣ-ಕಥೆಗಳು ಬಂದು, ಥೋಸ ಇಲ್ಲೀರಿಯಾಗಳ ಜನಾಂಗಗಳನ್ನು ಒಡೆದು ಮಲೆಗೆ ಕೂಡಿಸಿ ಸೇನಾಸಮೇತನಾಗಿ ನೆಟ್ಟನೆ ಥೀಬ್ ಪ್ರಾಂತದಲ್ಲಿ ಒಳನುಗ್ಗಿ ಬ೦ವನು. ಧೂಮಕೇತುವಿನಂತೆ ಭೀಕರವಾಗಿ ಎದ್ದು ಕಾಣಿಸಿ ಬರುವ ಶಿಕಂದರನ ಧ್ವಜ ವನ್ನು ಕಾಣುತ್ತಲೆ ಥೀಬ್ಬ ದವರ ಕೈ ಕಾಲುಗಳು ತಣ್ಣಗಾದವು, ಅವರ ದೇಶ ದಲ್ಲೆಲ್ಲ ಹಾಹಾಕಾರವೆದ್ದಿತು. ಆ ಜನರ ದುರವಸೆಯನ್ನು ಕಂಡು ಶಿಕಂ ದರ ಬಾದಶಹನಿಗೆ ಕನಿಕರ ಬಂದಿತು. ಕ್ಷಮೆ ಬೇಡಿಕೊಂಡು ಆ ಜನರ ತಮ್ಮ ಮನೆಯಲ್ಲಿ ಸುಮ್ಮನೆ ಕುಳಿತರೆ ಕುಳ್ಳಿರಲೆಂದು ಅವನು ಅವರ ಮೈ ಮೇಲೇರಿ ಹೋಗದೆ ಕೆಲಹೊತ್ತು ಸುಮ್ಮನಿದ್ದನು. ಆದರೆ, ಅಥೆನ್ಸದವರು ಅವರನ್ನು ಸುಮ್ಮನಿರಗೆಡಲಿಲ್ಲ ಕೀರ್ತನೆ ಪುರಾಣಶ್ರವಣಜನ್ಯವಾದ ವೀರಾವೇಶವನ್ನಾಂತ ಡಿಮಾನಿಯೇ ಮುಂತಾ.? ವಕ್ತ್ಯೋಜಕ ರಾದ ರಾಮ ಭಟ್ಟ, ಹರಿಭಟ್ಟರು “ಥೆ: ಶ್ವಾನನಗಳನ್ನಿತ್ತು ಆ ಬಡ ಜನರ ಬಾಲ ಒಡ್ಡಮುರಿದು ಯುದ್ಧಕ್ಕೆ ನಿಲ್ಲಿಸಿದರು, ಶಿಕಂದರನಿಗೆ ಏಶಾಸನೊಡನೆ ಯುದ್ದ ಮಾಡುವ ಹವ್ಯಾಸವು. ಗ್ರೀಕ ಜನರೊಡನೆ ಆಟ ಆಡುತ್ತ ಕಾಲ ಕಳೆಯಲು ಅವನಿಗೆ ಅವಕಾಶವಿದ್ದಿಲ್ಲ. ದುದ್ರಾವತಾರವನ್ನು ತೊಟ್ಟು ಆ ಮಹಾವೀರನು ಥೀಬ್ಬದವರ ಮೇಲೆ ಹರಿಬಿದ್ದು ಒಂದೇ ಹೊಡೆತಕ್ಕೆ ಆ ಜನಾಂಗದ ಸೇನೆಯನ್ನು ಸಂಪೂರ್ಣವಾಗಿ ಮುರಿಬಡಿದು, ದಯಾ~ ಕ್ಷಮೆಗಳ ನ್ನೆಷ್ಟು ಮಾತ್ರವೂ ತೋರಿಸದೆ ಆ ದೇಶದಲ್ಲಿರುವ ಗಂಡುಪ್ರಾಣಿಯನ್ನೊಂದೂ ಉಳಿಸದಂತೆ ಕಡಿದುಹಾಕಿಸಿದನು ವಾಚಕರೇ, ಇಓ ಆನೀತಿಯೊಂದು ಹೇಳಿ ಶಿಕಂದರನನ್ನು ನಿಂದಿಸಬೇಡಿರಿ, ರಾಜಕಾರಣಏಶೇಷಗಳಲ್ಲಿ ಹೀಗೆ ಮಾಡಲೇ ಬೇಕಾಗುತ್ತದೆ. ಥೀಬ್ಬದವರು ದುರ್ಬುದ್ಧಿ ಪ್ರೇರಿತರಿ >ಗಿ ಮಾಸಿಡೋನಿಯಾದ ಮೇಲೆ ಸಾಗಿಬರುವ ಆಲೋಚನೆಯನ್ನು ಮಾಡಿದ್ದೊತ್ತಟ್ಟಿಗಿ:ಲಿ, ಶಿಕಂದ ರನು ಏಶಿಯಾದ ಮೇಲೆ ಸಾಗಿ ಹೋದಾಗ ಈ ದುಷ್ಟರು ಅವನ ಪಶ್ಚಾತ್ತ ದಲ್ಲಿ ವಾಸಿಡೋನಿಯಾಕ್ಕೆ ದಾಳಿಯನ್ನು ತರದೆ ಬಿಡುತ್ತಿದ್ದಿಲ್ಲವಷ್ಟೆ ? ಥೀಬ್ಬ ದವರಿಗಾದ ಪ್ರಾಯಶ್ಚಿತ್ತವನ್ನು ಕಂಡು ಉಳಿದ ಗ್ರೀಕ ಜನಾಂಗದವರೆಲ್ಲ ಹಲ್ಲು ಮುರಿದ ಹಾವುಗಳಂತೆ ರಜ್ಜು ಪ್ರಾಯರಾಗಿ ಬಿದ್ದು ಕೊಂಡರು. ಇಷ್ಟೆಲ್ಲ ಕುಚೇಷ್ಟೆಯನ್ನು ಮಾಡಿದ ಅಥೆನ್ಸದವರೇ ಅಭಿಮಾನಶೂನ್ಯರಾಗಿ ಶಿಕಂದರ ನಿಗೆ ಶರಣಾಗತರಾಗಿ ಬಂದು, 'ಪ್ರಭುವೆ, ನೀನೇ ಇಂದ್ರ, ನೀನೇ ಚಂದ್ರ' ಎಂದು ಹೊಗಳಿದರು.

ಹೀಗೆ ಗೃಹಕಲಹಗಳ ಜಂಜಡವೆಲ್ಲ ಬಯಲಾದ ಬಳಿಕ, ಪ್ರತಾಪಶಾಲಿಯಾದ ರಘುರಾಜನಂತಿರುವ ಶಿಕಂದರ ರಾಜನು ವಿಶ್ವಜಿತ್ತನ೦ಥದೇ ಒಂದು ದೊಡ್ಡ ಆಧ್ವರವನ್ನು ಮಾಡಿ, ಯೋಗಿ ತತ್ವಜ್ಞಾನಿಗಳನ್ನೂ, ಕವಿಜನ ಪಂಡಿತರನ್ನೂ, ಅತಿರಥ ಮಹಾರಥಿಗಳನ್ನೂ, ರಾಜಪುತ್ರ ಸರದಾರರನ್ನೂ ಬಹುಮಾನ ಪಾರಿತೋಷಕಾದಿಗಳಿಂದ ಸಂತೋಷಗೊಳಿಸಿದನು. ಆ ಧನಸಂತರ್ಪಣದಲ್ಲಿ ಶಿಕ೦ದರ ಮಹಾರಾಜನ ಭಾಂಡಾರದಲ್ಲಿದ್ದ ಮಣಿಮೌಕ್ತಿಕ ಧನಕನ ಕಾದಿಗಳ ಅಪರಿಮಿತವಾದ ರಾಶಿಗಳೆಲ್ಲ ನಿಃಶೇಷವಾಗಿ ಸವೆದುಹೋದವು. ಅವನ್ನು ಕಂಡು ಪರ್ದಿಕನೆಂಬ ಕೋಶಾಧಿಪತಿಯು ರಾಜನನ್ನು ಕುರಿತು "ಮಹಾರಾಜ, ಹೀಗೆ ಇದ್ದ ಸಂಪತ್ತೆಲ್ಲ ತೊಳೆದುಹೋದ ಬಳಿಕ ತಮ್ಮಗೇನು ಉಳಿಯುವದು? ” ಎಂದು ಕೇಳಲಾಗಿ, ಶಿಕಂದರನು ಆತ್ಮತುಷ್ಟಿಯಿಂದ ನಕ್ಕು "ಯಾಕೆ ಕೋಶಾಧಿಪರೆ, ಮುಂದಾಗುವ ಗಳಿಕೆಯೆಲ್ಲ ನನ್ನದೇ ಅಲ್ಲವೆ?” ಎಂದು ಕೇಳಿದನು.

ಬಳಿಕ ಜಗಜ್ಜಿಗೀಷುವಾದ ರಾಜನು ತನ್ನ ರಾಜ್ಯ ರಕ್ಷಣದ ಭಾರವನ್ನು ಅಂತ್ಯ ಪೇತರನೆಂಬ ಕಡುಗಲಿಯಾದ ಸೇನಾಪತಿಯೊಬ್ಬನ ಮೇಲೆ ಹೊರಿಸಿ ತಾನು ಅಪರಿಮಿತವಾದ ಸೇನೆಯನ್ನು ಕಟ್ಟಿಕೊಂಡು ಪರ್ಶಿಯಾದ ಮಾರ್ಗ ಹಿಡಿದು ನಡೆದನು (ಕ್ರಿ. ಪೂ. ೩೩೪). ವಿಜಯೋತ್ಸುಕವಾದ ಅವನ ಸೇನೆಯ ಅವನೂ ಭರದಿಂದ ಪಯಣದ ಮೇಲೆ ಪಯಣವನ್ನು ಮಾಡುತ್ತೆ ಹದಿನಾರೇ ದಿವಸಗಳಲ್ಲಿ ಮಾಸಿಡೋನಿಯಾದಿಂದ ಗ್ಯಾಲಿಪೋಲಿ ದ್ವೀಪಕಲ್ಪದಲ್ಲಿರುವ ಸೆಸ್ಟಾಸ ಎಂಬ ಪಟ್ಟಣಕ್ಕೆ ಬಂದು ಬಿಟ್ಟರು. ಆ ಪಟ್ಟಣದ ಸಮೀಪಲ್ಲಿಯೇ, ಯುರೋಪ, ಏಶಿಯಾಖಂಡಗಳ ಸೀಮೆಯಾಗಿದ್ದ ಹಲೆಸ್ಪಾಂಟವೆಂಬ ಸಾಮುದ್ರಮುನಿಯಿರುವದು. ಧರ್ಮಾರ್ಥ ಕಾಮಮೋಕ್ಷಾದಿಗಳನ್ನು ಸಾಧಿಸಿಕೊಳ್ಳಲಪೇಕ್ಷಿಸುವ ಜನರು ಮಹಾತೀರ್ಥಗಳ ಸನ್ನಿಧಾನದಲ್ಲಿ ಪಾರ್ವಣಶ್ರಾದ್ಧಗಳನ್ನು ಮಾಡುತ್ತಿರುವಂತೆ, ಶಿಕಂದರ ರಾಜನಾದರೂ ತಾನು ಕೈಕೊಂಡಿರುವ ಮಹತ್ಕಾರ್ಯದ ಸಿಧ್ಯರ್ಥವಾಗಿ ಹೆಲೆಸ್ಪಾಂಟನೆಂಬ ಆ ತೀರ್ಥರಾಜನ ಸನ್ನಿಧಾನದಲ್ಲಿ ಪಾರ್ವಣಶ್ರಾದ್ಧವನ್ನು ಮಾಡಿ, ರತ್ನಖಚಿತವಾದ ಸುವರ್ಣ ಕಲಶದಲ್ಲಿ ತುಂಬಿಟ್ಟ ಮದಿರಾ ರಸದಿಂದ ಸಂಪೂರ್ಣ+ಕಥೆಗಳು ದೇವತಾತರ್ಪಣವನ್ನು ಮಾಡಿದನು. LK ಸುರೆಯೇನು? ತರ್ಪಣವೇನು ? ಶಾಂತಂ ಪಾಪಂ ! ಶಾಂತಂ ಪಾಪಂ ! ” ಎಂದು ದೇಶಕಾಲಗಳ ಜಿ: 1 ಶಹಿತರಾದ ಆಧುನಿಕ ಭಟ್ಟ ಭಿಕ್ಷುಕರು ಕೂಗಿಕೊಳ್ಳಬಹುದು. 11 fastaH ೪at far ga (3?) TT 9ಕ ಪ್ರಶ್ನೆ ಕಾಯ' ಎಂದು ಕವಿಶ್ರೇಷ್ಠನು ಹೇಳಿ ದಂತೆ ಪ್ರತ್ಯಕ್ಷ ಚಂದ್ರನೇ ಸುಧೆಯಿಂದ ೯ ಮಧುರಸದಿಂದ ] ದೇವತಾಸಿತೃ ತರ್ಪಣವನ್ನು ಮಾಡುತ್ತಿರುವನು, ಮಧುರಸವೆಂದರೆ, ಮುದಿರೆಯೇ. {da gIFaTafsKTH೯೮ ], ಅಶಿಥಿಗಳು ಮನೆಗೆ ಬಂದಾಗ ನಾವು ಮಧುಪರ್ಕ ವನ್ನು ( ಮಧುಸಮರ್ಪಣವನ್ನು ) ಮಾಡುವ ಸಂಪ್ರದಾಯವಿರುವದು, ಈಗಿನ ಕಾಲದಲ್ಲಿ ನಾವು ಮಧುರಸವನ್ನು ಮುಟ್ಟಲಾರೆವು ; ಇತ್ಯ ಶಾಸ್ತ್ರ ವಿಹಿತವಾದ ಮಧುಪರ್ಕವಿಧಿಯನ್ನಾದರೂ ಬಿಡಲಾರೆವು. ಈ ವಿಧಿಯನ್ನು ನಾವೀಗ ಜೇನುತುಪ್ಪ ಮೊಸರಿನ ಮೇಲೆ ಸಾಗಿಸುತ್ತೇವೆ. ಮುತ್ತಿನ ಹತ್ತೊ೦ಟ ಇಲ್ಲದ್ದಕ್ಕಾಗಿ ನಾವು ಸಮಾವರ್ತನೆಯ ಕಾಲದಲ್ಲಿ ಮಕ್ಕಳ ಕವಿಗಳಲ್ಲಿ ಕಣಕದ ಕೊಡ ಬಳೆಗಳನ್ನು ಮಾಡಿ ಸುತ್ತುತ್ತವೆ. ಈ ಕೋಡ ಬಳೆಯು ಹತ್ತೊಂಟಿಯಾಗಲಿಲ್ಲ ; ಮೊಸರು ಜೇನು ತುಪ್ಪಗಳಿಂದ ಮಧುಪರ್ಕ ವಾಗಲಿಲ್ಲ! ಆದರೆ, ಆಯಾ ಸುಲಾಭಕ್ಕರೆ, ನಾವು ಈ ಟೀಕೆಯ ಮುಖಾಂ ತರವಾಗಿ ನಿಮ್ಮ ಸುರನಾನಕ್ಕೆ ಅನುಮೋದನನ್ನಿ ತ್ತೆವೆಂದು ಮಾತ್ರ ಸರ್ವಥಾ ತಿಳಿಯಬೇಡಿರಿ. ಕ್ರಮಾನುಗತವಾದ ಪೂಜಾವಿಧಾನಗಳೂ ಭೋಜನಾದಿ ಸಮಾರಂಭ ಗಳೂ ತೀರಿದ ಬಳಿಕ ಶಿಕಂದರ ರಾಜನು ಸೇನಾಸಮೇತನಾಗಿ ಡಾರ್ಡಾನೆಲ್ಲ [ ಬೆಲೆಂಟ] ಸಾಮುದ್ರಮುನಿಯನ್ನು ಸುಖರೂಪವಾಗಿ ದಾಟಿ ಏಶಿಯಾದ ಸೀಮೆಯಲ್ಲಿ ಅನ್ನ ಬಲಗಾಲನ್ನಿಟ್ಟನು. ಕೂಡಲೆ ವಿಜಯ ಸೂಚಕಗಳಾದ ಕಹಳೆ ಕುತೂರಿ ನಗಾರಿ ನೌಬತ್ತು ಮುಂತಾದ ರಣವಾದ್ಯಗಳ ಘನತರವಾದ ನಿನಾದವೆಸಗಿತು, ಉದ್ರಿಕ್ತರಾದ ವೀರರೆಲ್ಲರೂ ಒಕ್ಕಟ್ಟಿನಿಂದ ಜಯಘೋಷ ಮಾಡಲು ಆ ಶಬ್ದ ಸಮುಚ್ಚಯದ ನಿತಾಂತವಾದ ಪ್ರಹಾರಕ್ಕೆ ಬುದ್ದುದು ಕಾರವಾಗಿ ತೋರುವ ನ್ಯೂಮಪಟಲವು ಘಟ್ಟನೆ ಒಡೆದುಹೋಗುವದೋ ಎಂಬಂತೆ ಕಂಡಿತು. ಬಳಿಕ ದೇವತಾರಾಧನ ಪ್ರಾರ್ಥನೆಗಳಾದ ಬಳಿಕ ಸೇನೆ ಯವರೆಲ್ಲರೂ ಆ ದಿವಸ ವಿಶ್ರಾಂತಿಯನ್ನು ಹೊಂದುವವರಾದರು, ಪ್ರಬಲವಾದ ಶತ್ರುಸೇನೆಯು ತನ್ನ ರಾಜ್ಯದಲ್ಲಿ ಬಂದಿಳಿಯುವ ವರೆಗೆ ದರಾಯಸ ರಾಜನ ಅಧಿಕಾರಿಗಳು ನಿಶ್ಚಿಂತರಾಗಿ ಕುಳಿತಿರುವ ಪ್ರಮಾದವನ್ನು ಕಂಡು, ನನಗಿನ್ನು ಅಪಜಯವೇ ಇಲ್ಲವೆಂದು ಖಂಡಿತವಾಗಿ ತಿಳಿದು ಶಿಕಂದರ ರಾಜನು ನಿರ್ಭಿತನಾಗಿ ಒಳದೇಶದಲ್ಲಿ ಜಾಗ್ರತೆಯಿಂದ ಪ್ರವೇಶ ಮಾಡಲಾರಂಭಿಸಿದನು. ಹೇಳದೆ ಕೇಳದೆ ತಮ್ಮ ದೇಶದಲ್ಲಿ ಆಗಂತುಕನಾಗಿ ಶಿಕಂದರನು ಸೇನೆಯನ್ನು ಕಟ್ಟಿಕೊಂಡು ಬಂದಿರುವನೆಂಬ ವಾರ್ತೆಯನ್ನು ಕೇಳಿ, ಲಿಡಿಯಾ ಆಯೋನಿಯಾ ಎಂಬ ಪ್ರಾಂತಗಳ ಕ್ಷತ್ರಪರು [ದರಾಮಸನ ಸುಭೇದಾರರು] ಎಚ್ಚತ್ತವರಾಗಿ ಶಿಕಂದರನ ಮಾರ್ಗನಿರೋಧ ಮಾಡಬೇಕೆಂದು ಸೇನೆಯನ್ನು ಕಟ್ಟಿಕೊಂಡು ಗ್ರಾನಿಕಾ ಎಂಬ ಹೊಳೆಯ ದಂಡೆಯ ಮೇಲಿರುವ ಝೇಲೇಯವೆಂಬ ಗ್ರಾಮದ ಸಮಾಜದಲ್ಲಿ ನಿಂತುಕೊಂಡಿದ್ದರು. ಅಲ್ಲಿ ಗ್ರಾನಿಕಾ ನದಿಯು ಕಾಲೊಳೆಯಾಗಿದ್ದಿಲ್ಲ. ಒತ್ತಟ್ಟಿಗೆ ಎದೆಮಟ, ಒಟ್ಟಿಗೆ ಕುತ್ತಿಗೆಮಟ, ಮತ್ತೊಟ್ಟಿಗೆ ಈಸಿಗೆಯಗಿರುವ ಆ ಹೊಳೆಯ ನೀರು ಒಳ್ಳೆ ಸೆಳವಿನಿಂದ ಹರಿಯುತ್ತಿತ್ತು. ಆಚೆಯ ದಂಡೆಯ ಮೇಲೆಯೇ ಶತ್ರುಸೇನೆಯ ಶಿಬಿರವು. ಅ೦ತಿರುವ ಪರಿಸ್ಥಿತಿಯನ್ನು ಕಂಡು ಶಿಕಂದರನ ಸೇನಾಪತಿಯಾದ ಪಾರ್ಮೆನಿಯೋನೆಂಬವನು ರಾಜನಿಗೆ ಅಂದದ್ದು “ಪ್ರಭುಗಳೆ, ಹೊಳೆ ದಾಟುವದನ್ನು ನಾಳಿಗೆ ನೋಡೋಣ; ಇದು ಹೊತ್ತಲ್ಲ.” ಆ ಮಾತು ಕೇಳಿ ರಾಜನು ನಕ್ಕು "ಏನು ಹೇಳುವಿರಿ ನಾಯಕರೆ ? ಸಮುದ್ರವನ್ನು ಸಹಜವಾಗಿ ಉಲ್ಲಂಘಿಸಿ ಬಂದವರಾದ ನಮಗೆ ಈ ಕ್ಷುದ್ರವಾದ ನದಿಯು ದುಸ್ತರವಾಯಿತೆ?" ಎಂದು ನುಡಿದು "ಭಟರೆ, ನೋಡುವಿರೇನು? ಶುಭಸ್ಯ ಶೀಘ್ರಂ" ಎಂದು ಸೈನ್ಯದವರನ್ನು ಹುರಿದುಂಬಿಸಿ ನಿಂತಕಾಲ ಮೇಲೆ ರಾವುತರ ಪಡೆಯನ್ನು ಹೊಳೆಗೆಡವಿದನು. ರಾವುತರು ನಡುಹೊಳೆಗೆ ಬಂದು ಅಲ್ಲಿ ಆಳವಾಗಿದ್ದ ನೀರಿಗೆ ಹೆದು ಹಿಂಜರಿಯಲಾರಂಭಿಸಿದರು. ಶಿಕಂದರ ರಾಜನು ತನ್ನ ಕುದುರೆಯನ್ನು ಆರ್ಭಟೆಯಿಂದ ಓಡಿಸಿಕೊಂಡು ಬಂದು 'ಧೈರ್ಯಂ ಸರ್ವತ್ರ ಸಾಧಕಂ' ಎಂದವನೇ ನೀರಿನ ಸೆಳವು ಈಸಿಗೆಗಳನ್ನು ಲಕ್ಷಿಸದೆ, ಹೊಳೆ ಬಿದ್ದು ಸಾಹಸದಿಂದ ದಾಟಿ, ಆಚೆಯ ದಂಡೆಗೆ ಹೋದನು. ರಾಜನ ಸಾಹಸವನ್ನು ಕಂಡು, ಪ್ರೋತ್ಸಾಹಿತರಾದ ರಾವುತರೆಲ್ಲರೂ ಧರ್ಮಜಯವೆಂದವರೇ ಆ ತಮ್ಮ ವೀರಾಗ್ರೇಸರನ ಬೆನ್ನು ಬಿಡದೆ "ಹುರ್ ! ಹುಯ್ !" ಎಂದು ಆರ್ಭಟಿಯಿಂದ ಕೂಗಾಡುತ್ತೆ ಹೊಳೆಯನ್ನು ದಾಟಿಯೇ ಬಿಟ್ಟರು. ಇವರು ಹೊಳೆ ದಾಟುವಷ್ಟರಲ್ಲಿಯೇ ಶತ್ರು ಸೇನೆಯು ಅಲ್ಲಿಗೆ ಬಂದಿತು. ಕೂಡಲೆ ಭಯಂಕರವಾದ ಕದನವೆಸಗಿತು. ಈ ಸಮಯದಲ್ಲಿ ತನ್ನ ಸೇನೆಯು ಹಿಂಜರಿದರೆ ಘಾತವೇ ಎಂದು ಕಂಡು ಕೊಂಡವನಾದ ಶಿಕಂದರ ರಾಜನು, ಹಿಂದೆ ಮುಂದೆ ನೋಡದೆ ಶತ್ರು ಸೇನೆಯ ಮಧ್ಯದಲ್ಲಿ ಹೊತ್ತು ವೀರಗರ್ಜನೆಯನ್ನು ಮಾಡುತ್ತೆ ಖಡ್ಗವನ್ನೆತ್ತಿ ಜಾರ-ಗಡಳದ ಕೊಲೆಯನ್ನೆಬ್ಬಿಸಿದನು. ಅವನಿಗೆ ಜೀವದ ಅಂಜಿಕೆಯಲ್ಲಿ! ರಾಜನ ಸಾಹಸವನ್ನು ಕಂಡು ಸೈನ್ಯದವರಲ್ಲೆಲ್ಲ ಮಿತಿಮೀರಿದ ಸ್ಫೂರ್ತಿ ತುಂಬಿತು. ಆ ಭಟರ ಶಸ್ತ್ರಗಳ ಭಯಂಕರವಾದ ಪ್ರಹಾರಗಳಿಗೆ ಶತ್ರು ಸೇನೆಯು ಈಡಾಗಲಿಲ್ಲ. ಹೊಡೆತವನ್ನು ತಾಳಲಾರದೆ ಅವರು ಹಿಂದಿರುಗಿ ಓಡಲಾರಂಭಿಸಿದರು. ಅಲ್ಲಿಂದೇನು ಕೇಳುವದು? ಮಾಸಿಡೋನಿಯಾದ ವೀರರು ಉದ್ರಿಕ್ತರಾಗಿ ಶತ್ರುಗಳ ಬೆನ್ನಟ್ಟಿ ಹೋಗಿ ಅವರನ್ನು ಜಡೆಜಡೆದು ಕಡಿದರು. ಯುದ್ಧವು ಮುಗಿಯಿತು. ವಿಜಯಲಕ್ಷ್ಮಿಯು ಬಹು ಪ್ರಿತಳಾಗಿ ಶಿಕಂದರ ಮಹಾರಾಜನ ಕೊರಳಿಗೆ ಮಾಲೆ ಹಾಕಿದಳು.

ಜಯವು ವಿಜಯಿಗೆ ಸ್ಫೂರ್ತಿಯನ್ನೀಯುತ್ತಿತ್ತು. ಅಪಜಯವು ಶತ್ರುಗಳ ಸತ್ವವನ್ನೇ ಹರಣಮಾಡಿಕೊಂಡಿತು. ರಣರಂಗದಲ್ಲಿ ನಿಂತು ಶಸ್ತ್ರಾಸ್ತ್ರಗಳ ದರ್ಶಿಸಹವಾದ ಪ್ರಕಾರಗಳನ್ನು ಹೇಗಾದರೂ ಸಹಿಸಿಕೊಳ್ಳಬಹುದಾದರೂ, ಅಪಜಯದ ವಾರ್ತಾಮಾತ್ರದಿಂದಲೇ ಪರಬಲದ ತೇಜಸ್ಸೆಲ್ಲ ಅಡಗಿಹೋಗಿ ಅದು ಇದ್ದರೂ ಸತ್ತಂತೆಯೆ ಆಗುವದು. ವಿಜಯಿಯಾದ ಶಿಕಂದರನು ಮೇಲೇಯದಿಂದ ಮುಂದಕ್ಕೆ ಸಾಗಿಹೋಗಿ ಸಾರ್ದಿ ಎಂಬ ಕೋಟೆಗೆ ಸಾಗಿಬರುವೆನೆಂಬ ಸುದ್ದಿಯನ್ನು ಕೇಳಿದ ಮಾತ್ರದಿಂದಲೆ ಅಲ್ಲಿದ್ದ ಶತ್ರು ಸೇನೆಯು ಎದೆಯೊಡಕೊಂಡು ಕೋಟೆಯನ್ನು ಬಿಟ್ಟು ಓಡಿ ಹೋಗಿತ್ತು. ಮತ್ತೆ ಆ ಮಹಾವೀರರು ದಕ್ಷಿಣಕ್ಕೆ ಸಾಗಿ ಇಫೇಜವೆಂಬ ಕೋಟೆಗೆ ಬರುವಷ್ಟರಲ್ಲಿಯೇ ಅದೂ ಅವನ ಹಸ್ತಗತವಾಗಿಹೋಯಿತು. ಹೀಗೆ ಏಜಿಯನ್ ಸಮುದ್ರದಂಡೆಯಲ್ಲಿರುವ ಎಲ್ಲ ಪಟ್ಟಣಗಳು ಕೈಸನ್ನೆ ಮಾಡಿ ಶಿಕಂದರರಾಜನನ್ನು ಕರಕೊಂಡಂತೆ ಮಾಡಿದವು. "ಇನ್ನ೦ತೂ ನಮಗೆ ಶತ್ರುಗಳ ಹಡಗುಪಡೆಯ ಭೀತಿಯು ಇಲ್ಲದಾಯಿತೇ!” ಎಂದು ಉದ್ಗಾರ ತೆಗೆದವನೇ ಶಿಕಂದರನು ಪೂರ್ವೋತ್ತರವಾದ ದಿಶೆಯಿಂದ ತುರ್ಕಸ್ಥಾನದ ಹೊಟ್ಟೆ ಹೊಗಲಾರಂಭಿಸಿದನು. ಅಲ್ಲಿಯಾದರೂ ಯುದ್ಧವೆಲ್ಲಿ? ನಗರ ನಗರಿಗಳ ನಿವಾಸಿಗಳು ಊದಿಸುತ್ತ ಬಾರಿಸುತ್ತ ಶಿಕಂದರನನ್ನು ಎದಿರ್ಗೊಂಡ ತಮೂರಿಗೆ ಕರಕೊಂಡು ಹೋಗಲಾರಂಭಿಸಿದರು. ಒಂದು ಪಟ್ಟಣದರಂತೂ ರತ್ನಖಚಿತವಾದ ಕಿರೀಟವನ್ನು ಮಾಡಿಸಿ ಶಿಕಂದರರಾಜನ ಉತ್ತಮಾಂಗವನ್ನು ಅಲಂಕರಿಸಿದರು. ಏಸಿಯಾ ಖಂಡದ ನಿವಾಸಿಗಳವರು! ತಮ್ಮ ರಾಜನಾರೋ, ತಾವು ಸನ್ಮಾನವನ್ನು ತೋರಿಸುತ್ತಿರುವದಾಗೆ! ಅಭಿಮಾನವೆಲ್ಲಿ?

ಚಳಿಗಾಲವು ಬಂದಿತು. ದರಾಯಸನ ಪ್ರಜರಿಂದಂತೂ ಶಿಕಂದರನಿಗೆ ಎಷ್ಟು ಮಾತ್ರವೂ ತೊಂದರೆಯಿರಲಿಲ್ಲ; ಆದರವೇ ಕಂಡುಬಂದಿತು. ಇನ್ನು ಭಯವೆಂದರೆ ಶತ್ರುಸೇನೆಯ ಭಯವೇ ಭಯವು. ಆದರೂ ಚಳಿಗಾಲವು ನೀಗಿ ಹೋಗುವವರೆಗೆ ದರಾಯಸನು ಯುದ್ಧದ ಉಸಾಬರಿಯನ ಮಾಡುವಂತಿಲ್ಲ. ನೆಲ ಮೆತ್ತಗೆ ಕಂಡರೆ ಮೊಳಕೈಯಿಂದ ಅಗಿಯಬಹುದಂತೆ. ಶಿಕಂದರನು ತನ್ನ ಸೇನೆಯಲ್ಲಿರುವ ವಿವಾಹಿತರಾದ , ಭಟರೆಲ್ಲರು ಊರಿಗೆ ಹೋಗಿ ತಮ್ಮ ತಮ್ಮ ಹೆಂಡಿರ ಮೊರೆ ನೋಡಿ ಬರಲೆಂದು ಅವರೆಲ್ಲರಿಗೂ ಅಪ್ಪಣೆ ಕೊಟ್ಟು, ಉಳಿದಷ್ಟು ಸೇನೆಯೊಡನೆಯೇ ಮುಂದೆ ಮುಂದೆ ಹೆಜ್ಜೆಯನ್ನಿಕುತ್ತ ತುರ್ಕಸ್ಥಾನದ ನಡುಗರ್ಭದ ಕಡೆಗೆ ನಡೆದನು. ವಸಂತ ಕಾಲವು ಸಮೀಪಿಸುವಷ್ಟರಲ್ಲಿ ಅವರು ಫ್ರಿಜಿಯಾ ಎಂಬ ಪ್ರಾಂತದಲ್ಲಿ ಸೇರಿ ಅಲ್ಲಿಯ ಪ್ರಸಿದ್ಧವಾದ ಗಾರ್ಡಿಯಾ ಎಂಬ ಪಟ್ಟ ಣವನ್ನು ಹಿಡಕೊಂಡರು. ಆ ಪ್ರಾಚೀನವಾದ ಪಟ್ಟಣದಲ್ಲಿ ಪೂರ್ವಕಾಲದ ಪುಣ್ಯಾತ್ಮನಾದ ಒಬ್ಬ ರಾಜನ ರಥವಿದ್ದಿತು. ದೇವತಾಪುರುಷನ ಪವಿತ್ರವಾದ ರಥವೇ ಅದೆಂದು ಭಾವಿಸಿ ಅಲ್ಲಿಯ ಜನರು ಅದನೆಂದು ಮಂದಿರದಲ್ಲಿರಿಸಿ ಪೂಜಿಸುತ್ತಿದ್ದರು. ಆ ಬಂಡಿಯ ಉದ್ದಿಗೆಗೆ ನೊಗವನ್ನು ಹಗ್ಗದಿಂದ ಕಟ್ಟಿ, ಕಟ್ಟಿದ ಸ್ಥಳದಲ್ಲಿ ಬ್ರಹ್ಮಗಂಟಿನಂಥ ಗಂಟು ಹಾಕಿ, ಹಗ್ಗದ ತುದಿಯನ್ನು ಅಡಗಿಸಿಬಿಟ್ಟಿದ್ದರು. ಆ ಗಂಟು ಉಚ್ಚುವರಿ ಉಚ್ಚುವಂತೆಯೇ ಇದ್ದಿಲ್ಲ. ಗ್ರಂಥಿಛೇದನವನ್ನು ಮಾಡಿದ ಜಾಣನು ಸಮಗ್ರವಾದ ಆಸಿಯಾ ಖಂಡದ ಸಾರ್ವಭೌಮನಾಗತಕ್ಕವನೆಂಬದೊಂದು ಆಖ್ಯಾಯಿಕಯು ಇತ್ತು. ಜನರನ್ನು ಮರುಳುಗೊಳಿಸುವ ಸಮಯವಿದೇ ಎಂದು ತಿಳಿದು, ಶಿಕಂದರನು ನೆಟ್ಟಗೆ ರಥದ ಬಳಿಗೆ ಹೋಗಿ ತನ್ನ ಖಡ್ಗದಿಂದ ಆ ಗ್ರ೦ಥಿಯನ್ನು ಕಚ್ಚನೆ ಕಡಿದು ನೊಗವನ್ನು ಕಡೆಗೆ ಚಿಮ್ಮಿ ಬಿಟ್ಟನು. ಆ ಗಂಟನ್ನು ಉಚ್ಚಲಿ, ಕಡಿದುಹಾಕಲಿ, ಗ್ರಂಥಿಭೇದನವಾದದ್ದಂತೂ ಸರಿಯೇ. ಇಲ್ಲವೆಂದು ಹೇಳಲು ಆಸ್ಥಾನಪಂಡಿತರಿಗೆ ಹಳೆ ಹೊಸ ವ್ಯಾಕರಣಗಳ ಪ್ರಕರಣಗಳಲ್ಲಿ ಸಾಧಾರಗಳಲ್ಲಿಯೂ ಸಿಗದ್ದಕ್ಕಾಗಿ ಶಿಕಂದರನು ಗ್ರಂಥಿಛೇದನವನ್ನು ಮಾಡಿದನೆಂದು ಅವರು ಅನಿರ್ವಾಹಕ್ಕಾಗಿ ಒಪ್ಪಿಕೊಂಡರು. ಅಹಲ್ಯೆಯಯ ಮದುವೆಯ ಕಾಲಕ್ಕೆ ಗೌತಮನು ಈಯುತಿರುವ ಆಕಳಿಗೆ ಪ್ರದಕ್ಷಿಣೆಯನ್ನು ಹಾಕಿ ಭೂಪ್ರದಕ್ಷಿಣೆ ಮಾಡಿದ ಶ್ರೇಯಸ್ಸು ಪಡೆದ ಯುಕ್ತಿಯಂಥ ಯುಕ್ತಿಯನ್ನೆ ಶಿಕಂದರನು ಮಾಡಿದನು. ಇಂಥ ಚಮತ್ಕಾರವಾದ ಯುಕ್ತಿಗೆ ಇಂಗ್ಲಿಶ್ ಭಾಷೆಯಲ್ಲಿ ಗಾರ್ಡೀಯ ಗ್ರಂಥಿ ಛೇದನ (To cut the Gordian kitot ) ಎಂದು ಹೇಳುತ್ತಾರೆ. ಹೇಗೇ ಆಗಲಿ, ಆ ಗ್ರಲಥಿಛೇದನಕ್ಕಾಗಿ ಶಿಕಂದರನೇ ಮುಂದಾಗತಕ್ಕ ಚಕ್ರವರ್ತಿಯೆಂದು ಗಾರ್ಡಿಯಾ ಗ್ರಾಮದ ಸಾಧು ಸಂತರು ನುಡಿದರು. ಅವನು ಮಾಡಿದ ಗ್ರಂಥಿಭೇದನವು ಯಥೋಕ್ತವಾಗಲಿಲ್ಲವೆಂದು ಕೆಲವರು ಅಭಿಪ್ರಾಯಪಟ್ಟರೂ, ಶಿಕಂದರನು ಆ ಕೆಲಸವನ್ನು ಇನ್ನೊಬ್ಬರಿಗೆ ಉಳಿಸಲಿಲ್ಲವಾದ್ದರಿಂದ, [ಗ್ರಂಥಿಯೇ ಕಡಿದು ಹೋದ ಬಳಿಕ ಉಚ್ಚುವದಿನ್ನೇನು?] ಅವನೇ ಸಾರ್ವಭೌಮನೆಂದು ಆ ಜನರಾದರೂ ಒಪ್ಪಿಕೊಂಡರು. ಅರ್ಥಾತ್ ಆ ಪ್ರಾಂತದಲ್ಲ ದರಾಯಸನಿಗಿಂತಲೂ ಭಾವೀ ಸಾರ್ವಭೌಮನಾದ ಶಿಕಂದರನಿಗೆಯೇ ಹೆಚ್ಚಿನ ಮಾನಮರ್ಯಾದೆಗಳು ನಡೆದವು. ಸಂತತಿಯನ್ನು ಬಯಸಿದ ಸತಿಯರ ಸಮಾಧಾನಕ್ಕಾಗಿ, ಮನೆಗೆ ಹೋದ ಭಟರ ಮಾರ್ಗಪ್ರತೀಕ್ಷೆಗಾಗಿ ರಾಜನು ಗಾರ್ಡಿಯಾ ಪಟ್ಟಣದಲ್ಲಿಯೇ ಕೆಲಕಾಲ ತಳ ಊರಿಕೊಂಡು ಕುಳಿತನು.

ಆ ಭಟರು ಮರಳಿ ಬರುವಾಗ ತಮ್ಮೊಡನೆ ಇನ್ನೂ ಅನೇಕ ಸಹಸ್ರ ಸಂಖ್ಯಾತರಾದ ವೀರರನ್ನು ಕಟ್ಟಿಕೊಂಡು ರಾಜನ ಸನ್ನಿಧಾನಕ್ಕೆ ಬಂದ ಕೂಡಲೆ, ಮತ್ತೆ ಹೊಸ ಮಾರ್ಗಕ್ರಮಣಕ್ಕೆ ಪ್ರಾರಂಭವಾಯಿತು. ಆಪ್ರತಿ ರಥನಾದ ಶಿಕಂದರ ಮಹಾವೀರನು ದಿನಕ್ಕೊಂದು ಹೊಸ ಪ್ರದೇಶವನ್ನು ಗೆದ್ದು ಕೊಳ್ಳುತ್ತೆ ಪೂರ್ವಾಭಿಮುಖವಾಗಿ ಸಾಗಿಹೋಗಿ, ತುರ್ಕಸ್ಥಾನದ ಕೇಂದ್ರ ಸ್ಥಾನವಾದ ಅಂಕಿರಾ ಎಂಬ ನಗರಿಯನ್ನು ಆಕ್ರಮಿಸಿಕೊಂಡನು. ಗೆದ್ದ ಪ್ರಾಂತಗಳನ್ನೆಲ್ಲ ನುಂಗಿ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ತೇಗಿ ಸಮಾಧಾನವನ್ನು ತಳೆದ ಬಳಿಕ ಶಿಕಂದರನು ಮತ್ತೆ ದಕ್ಷಿಣಾಭಿಮುಖಸಾಗಿ ಹೊರಟು, ಅಬಾಧಿತನಾಗಿ ಸಿಲೀಸಿಯಾ ಎಂಬ ಪ್ರಾಂತವನ್ನು ಹೊಕ್ಕನು. ವೃಷಾಚಲ (ಟಾರಸ್)ವೆಂಬ ಪರ್ವತವನ್ನಿಳಿದು ಕೆಳಗಿನ ಮರುಭೂಮಿಯಲ್ಲಿ ಬಂದ ಕೂಡಲೆ, ಶಿಕಂದರನಿಗೆ ದೂಷಿತವಾದ ಜ್ವರದ ಭಾವನೆಯಾಗಿದ್ದರೆ ತಾರುಣ್ಯದ ಮದದಲ್ಲಿ ಅವನು ಅಲ್ಲಿರುವ ಕಾಯದನುವೆಂಬ ನದಿಯ ತಣ್ಣಗಿನ ನೀರಲ್ಲಿ ಹಾಕಿಕೊಂಡು ಈಜಾಡಿದ್ದರಿಂದ ಅವನಿಗೆ ಅಸಾಧ್ಯವಾದ ಜ್ವರ ಬಂದಿತು. ರಾಜನು ಬದುಕುವನೋ ಇಲ್ಲವೋ ಎಂಬ ದೊಡ್ಡ ಚಿ೦ತೆ ! ಪರಿವಾರದಲ್ಲಿರುವ ಚಿಕಿತ್ಸಕನಾದ ವೈದ್ಯನು ಶಿಕಂದರನಿಗೆ ಒಳ್ಳೇ ನಿದಾನ ಪೂರ್ವಕವಾಗಿ ಔಷಧೋಪಚಾರಗಳನ್ನು ನಡಿಸಿರಲು, ಕುಚೋದ್ಯಗಾರನೊಬ್ಬನು "ವೈದ್ಯನು ದರಾಯಸ ಬಾದಶಹನ ಸಂಚಿನಲ್ಲಿ ಸೇರಿ ರಾಜರಿಗೆ ವಿಷ ಪ್ರಯೋಗವನ್ನು ಈ ದಿವಸ ಮಾಡತಕ್ಕವನಿದ್ದಾನೆ” ಎಂದು ಪತ್ರ ಬರೆದಿದ್ದನ್ನು. ಆ ಪತ್ರಕ್ಕೆ ಲೇಖಕನ ಸಹಿಸೂತ್ತಾದಿಗಳಿದ್ದಿಲ್ಲ. ಶಿಕಂದರನಿಗೆ ಆ ಸತ್ಯದ ಆಶಯದಲ್ಲಿ ವಿಶ್ವಾಸವಾಗಲಿಲ್ಲ. ಕಷಾಯದ ಬಟ್ಟಲವನ್ನು ವೈದ್ಯನು ತಂದು ಕೊಡುತಲೆ ರಾಜನು ಅದನ್ನು ತನ್ನ ಬಾಯಿಗೆ ಹಚ್ಚಿ, ವೈದ್ಯನ ಮುಂದೆ ಆ ಪತ್ರವನ್ನು ಚೆಲ್ಲಿ ಕೊಟ್ಟನು. ಆ ಭಿಷಗ್ವರ್ಯನು ಅತ್ತ ಆ ಪತ್ರವನ್ನು ಓದುವಷ್ಟರಲ್ಲಿ ಇತ್ತ ಆ ನೃಪತ್ರೆನು ಕಷಾಯವನ್ನು ಕುಡಿದು ಬಟ್ಟಲನನ್ನು ಡಬ್ಬ ಹಾಕಿದನು. ರಾಜನ ಸವಿಶ್ವಾಸ ಕೃತಿಯನ್ನು ಕಂಡು ವೈದ್ಯನ ಕಣ್ಣುಗಳಲ್ಲಿ ಆನಂದಾಶ್ರುಗಳುದುರಿದವು. ರಾಜನಾದರೂ ಪ್ರಸನ್ನ ವದನನಾಗಿ ನಕ್ಕನು. ದೇವರು ಆ ವೈದ್ಯ ರೋಗಿಗಳ ಗುಣಕ್ಕೆ ಮೆಚ್ಚಿ, ಬೇಗನೆ ವ್ಯಾಧಿಯ ಪರಿಹಾರವನ್ನು ಮಾಡಿದನು. ಅಲ್ಲಿಂದವನು ಮುಂದಕ್ಕೆ ಸಾಗುವಷ್ಟರಲ್ಲಿ, ದರಾಯಸನು ದೊಡ್ಡ ಸೇನೆಯೊಂದಿಗೆ ಶಿಕಂದರನಿಗೆದಿರುಗಿ ಬರುತ್ತಿರುವನೆಂಬ ವಾರ್ತೆ ಬಂದಿತು. ಮಾವುತ ರಾವುತರೂ ಕಾಲಾಳುಗಳೂ ಕೂಡಿ ಆರು ಲಕ್ಷ ಜನ ಯುದ್ಧ ಮಾಡುವ ಭಟರು ಆ ಪಾರಸೀಕನಾದ ಸಾರ್ವಭೌಮನ ಸುತ್ತಲು ನೆರೆದಿದ್ದರು. ಆ ಜನರಲ್ಲದೆ ಕೂಲಿಕಾರ ರಥಕಾರರೂ, ಅಡಿಗೆ ನೀರಿನವರೂ, ಕಮಾರ ಶಿಕಲಿಗಾರರೂ, ಅಂಗಡಿಗಾರ ಸಿಂಪಿಗರೂ, ಆಟ ನೋಟದವರೂ, ಗಾಯಕ ವಾರಾಂಗನೆಯರೂ ಕೂಡಿ ಎಷ್ಟು ಜನವಿತ್ತೆಂದು ಹೇಳಲು ಲೆಕ್ಕವೆಲ್ಲಿ ಯುದ್ಧ ಮಾಡಲು ಅನುಕೂಲವಾದ ಸ್ಥಳವನ್ನು ದರಯಸನು ಹಿಡುಕೊಳ್ಳಬೇಕೆನ್ನುವಷ್ಟರಲ್ಲಿಯೇ ಶಿಕಂದರನು ಆ ಸ್ಥಳವನ್ನು ತಾನು ಜಾಗ್ರತೆಯಿಂದ ಹಿಡುಕೊಂಡು ನಿಂತನು. ಸಿರಿಯಾ ಪ್ರಾಂತದಲ್ಲಿ (ಭೂಮಧ್ಯ ಸಮುದ್ರದ ದಂಡೆಯ ಮೇಲೆ) ಇರುವ "ಯಶಸ್ ” ಎಂಬ ಗ್ರಾಮದ ಬಳಿಯಲ್ಲಿ ದೊಡ್ಡ ಯುದ್ಧವಾಯಿತು. ಈ ಯುದ್ಧದಲ್ಲಿ ಮತ್ತೆ ಶಿಕಂದರನು ಜೀವದ ಅಂಜಿಕೆಯನ್ನು ಬಿಟ್ಟು ಶತ್ರುಸೇನೆಯಲ್ಲಿ ಹೊಕ್ಕು. ಅಖಂಡವಾಗಿ ಆರಿಭಟರನ್ನು ಕಡಿಕಡಿದು ಹಾಕುತ್ತಿರುವದನ್ನು ಪ್ರತ್ಯಕ್ಷವಾಗಿ ನೋಡಿ ಸೈನಿಕರೆಲ್ಲರಲ್ಲಿಯೂ ವೀರಾವೇಶವು ತುಂಬಿತು. ಒಬ್ಬೊಬ್ಬನ ಮೈಯಲ್ಲಿ ಆನೆಯ ಬಲವು ಬಂದಂತಾಯಿತು. ನಲ, ನೀಲ, ಅಂಗದ, ಆಂಜನೇಯ ಮುಂತಾದ ವಜ್ರಕಾಯರಾದ ವೀರರು ಕಲ್ಲುದುಂಡೆ ಕೊಂಬೆಕೋಲುಗಳಿಂದ ಜಗದ್ದಲಣನಾದ ರಾವಣೇಶ್ವರನ ಅಕ್ಷೌಹಿಣೀ ಗಣ್ಯವಾದ ರಾಕ್ಷಸ ಸೇನೆಯನ್ನು ನುಗ್ಗು ನುಸಿಯಾಗಿ ಮಾಡಿಕೊಟ್ಟಿರಲು, ತತ್ಸಮಾನರಾದ ವೀರರು ಶಸ್ತ್ರಾಸ್ತ್ರಗಳ ಪ್ರಯೋಗನೈಪುಣ್ಯವನ್ನು ಸಂಪಾದಿಸಿ ಸ್ಫೂರ್ತಿಯಿಂದ ಕಾದುತ್ತಿರಲು, ಸುಖದ ಪಿಂಡದವರಾದ ಪಾರಸೀಕ ಸೈನಿಕರ ಪಾಡೇನು? ಫಿಲ್ಲಿಪರಾಜನ ಹೊಸ ಕ್ಲಪ್ತಿಯಾದ "ಫ್ಯಾಲ್ಯಾಂಕ್ಸ” ಎಂಬ ಚುಚ್ಚು ಗೋಲಿನ ಭಟರ ಚಮತ್ಕಾರವಾದ ವ್ಯೂಹವು ಸಂಚರಿಸುವ ಗಿರಿಯಂತೆ ಪಾರಸೀಕರ ಸೇನೆಯಲ್ಲಿ ಹೊಕ್ಕು, ತೀಕ್ಷ್ಯವಾದ ತ್ರಿಶೂಲಗಳ ಸಂತಾನದಿಂದ ಇರಿಯುತ್ತ ಬರಲಾಗಿ, ದರಾಯಸನ ಮಹಾಸೇನೆಯು ಸೋತು ಜರ್ಜರಿತವಾಗಿ ಹಿಂಜರಿಯಲಾರಂಭಿಸಿತು. ಇನ್ನೇನು, ಘಾತವಾಯಿತೆಂದು ನೆನೆದು ದರಾಯಸ ಮಹಾರಾಯನು ತನ್ನ ದಿವ್ಯವಾದ ರಥದಿಂದಿಳಿದು ಕುದುರೆಯನ್ನು ಏರಿಕೊಂಡವನೇ ಪಲಾಯನಕ್ಕಾರಂಭಿಸಿದನು. ಕೇಳುವದೇನು? ಯಥಾ ರಾಜಾ ತಥಾ ಪ್ರಜಾ! ರಾಜನನ್ನು ಕಂಡು ಸೇನೆಯ ಓಡಲಾರಂಭಿಸಿತು. ಓಡಿ ಹೋಗುವ ಹೇಡಿಗೆಕೇಡು ತಪ್ಪಿದ್ದುಂಟೆ ? ಶಿಕಂದರನ ಸೇನೆಯವರು ಆ ಕ್ಷುದ್ರ ಜೀವಿಗಳನ್ನು ಹಿಡಿಹಿಡಿದು ಕಡಿದುಹಾಕಿದರು. ಲಕ್ಷಾವಧಿ ಜನರ ಕೊಲೆಯಾಗಿಹೋಯಿತು. ಆ ದುರ್ದೈವಿಗಳೆಲ್ಲರೂ ರಣಾಂಗಣದಲ್ಲಿ ಗಟ್ಟಿಯಾಗಿ ನಿಂತುಕೊಂಡು ಕಾದಿ ಸತ್ತಿದ್ದರೆ ಇತಿಹಾಸದಲ್ಲೇನು ಹೆಚ್ಚು ಕಡಿಮೆ ಯಾಗುತ್ತಿತ್ತೆಂಬುದನ್ನು ಯಾರೇನು ಹೇಳಬಲ್ಲರು? ಸಾರಾಂಶ, ಶಿಕಂದರನು “ಯಶಸ್" ಕಾಳಗದಲ್ಲಿ ಯಶಸ್ವಿಯಾದನು (ಕಿ.ಪೂ.೩೩೩).

ದರಾಯಸನು ಅಪಜಯವನ್ನೂ ತನ್ನ ಪ್ರಾಣವನ್ನೂ ಸಂಗಡ ಕಟ್ಟಿಕೊಂಡು ಓಡಿಹೋದನಷ್ಟೇ, ಹೊರತಾಗಿ ತನ್ನ ರಾಜ್ಯಲಕ್ಷ್ಮಿ ಧನಲಕ್ಷ್ಮಿ ಗೃಹಲಕ್ಷ್ಮಿಯರೆಲ್ಲರನ್ನು ಶಿಕಂದರನ ಸ್ವಾಥೀನಕ್ಕೆ ಬಿಟ್ಟು ಕೊಟ್ಟು ನಡೆದನು. ಮುಖ್ಯ ದರಾಯಸನ ಪ್ರಿಯಪತ್ನಿ ಯಾದ ಅಷ್ಟತೀರೆಯೂ, ಅವನ ತಾಯಿಯಾದ ಸೇಸಿಗಾಂಬೆಯ ಶಿಕಂದರನ ಸೆರೆಯಾಳುಗಳಾದರು. ಅಂತಃಪುರದಲ್ಲಿಯ ಮುತ್ತು ರತ್ನಗಳ ಮೊಟ್ಟೆಗಳೂ, ರಾಜನ ಜಂಗಮ ಭಾಂಡಾರದಲ್ಲಿರುವ ಸುವರ್ಣ ನಾಣ್ಯಗಳ ಅನೇಕವಾದ ರಾಶಿಗಳೂ, ರೇಶಿಮೆ ಜರತಾರೆಯ ತ೦ಬು ಡೇರೆಗಳೂ, ಆನೆ ಕುದುರೆ ಬಂಡಿ ಎತ್ತುಗಳೂ ಶಿಕಂದರನ ಸ್ವಾಧೀನವಾದವು. "ಯಶೋ" ಕ್ಷೇತ್ರದಲ್ಲಾದ ವಿಜಯದ ಮೂಲಕವಾಗಿ ಮಾಸೊಪೊಟಾಮಿಯಾದ ಪಶ್ಚಿಮಕ್ಕಿರುವ ಸಮಗ್ರವಾದ ತುರ್ಕಸ್ಥಾನವು ಮಾಸಿಡೋನಿಯಾದ ರಾಜನ ಆಧಿಪತ್ಯಕ್ಕೊಳಗಾಗಿ ಹೋಯಿತು. ಕಾವಿನಲ್ಲಿ ಕಾವೆಂದು ತಿಳಿದು ಶಿಕಂದರನು ಭೂಮಧ್ಯ ಸಮುದ್ರದ ದಂಡೆಯ ಮೇಲಿರುವ ಕೋಟೆ, ಪಟ್ಟಣ, ಬಂದರಗಳನ್ನೆಲ್ಲ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಉದ್ಯೋಗವನ್ನು ನಡಿಸಿದನು. ಅವನು "ಉಫ್" ಎಂದು ಊದಿದ ಕೂಡಲೆ ಸಿದ್ಧನ ಎಂಬ ಕೋಟೆಯ ಭದ್ರವಾದ ಗೋಡೆಗಳು ಹಾರಿಹೋದವು. ತೀರಕ್ಕೆ ಸಮೀಪದಲ್ಲಿಯೇ ಚಿಕ್ಕದಾದ ನಡುಗಡ್ಡೆಯಲ್ಲಿರುವ "ತೈಯ್ಯಾರ” (Tyre)ಎಂಬ ಕೋಟೆಯು ರಾವಣನ ಲಂಕೆಯಂತೆ ಬಹು ಭದ್ರವಾಗಿತ್ತು. ಆದರೆ ಕೃಶಾಂತನಿಗೂ ನಿಶಾಂತವಿಕ್ರಮನಿಗೂ ಈ ಲೋಕದಲ್ಲಿ ಈಡಾಗದಿರುವ ವಸ್ತುವಾವದು ? ಅರ್ವಾಚೀನನಾದ ಆ ಶಿಕಂದರಾಖ್ಯನಾದ ರಾಮನು "ತೈಯ್ಯಾರ”ವೆಂಬ ಲಂಕೆಯ ವರೆಗೆ ಸೇತುಬಂಧನವನ್ನು ಮಾಡಿ ಆ ಕೋಟೆಯನ್ನು ಗೆದ್ದು ಕೊಂಡನು (೩೩೭). ಮುಂದೆ ಸಮುದ್ರ ತೀರದ ದಿಗ್ವಿಜಯವು ಸುಲಭವಾಗಿ ಸಾಗಿತು. ಗಾಝಾ, ಪೆಲೂಜೆಯ ಬಂದರಗಳನ್ನು ತೆಗೆದುಕೊಂಡರೆ ಬೇಡೆಂದು ಹೇಳುವಂಥ ಆಗಸೆಯವನು ಕೂಡ ಇದ್ದಿಲ್ಲ. ಆಮೇಲೆ ಹಸನ್ಮುಖಳಾದ ಮಿಶ್ರದೇಶದ ನೀಲಗಂಗೆಯು ಶಿಕಂದರ ರಾಜನಿಗೆ ಸ್ವಾಗತವನ್ನಿತ್ತಳು. ಆ ನದಿಯ ಮುಖದ ಬಳಿಯಲ್ಲಿಯೇ ಮೂಗುತಿ ಯಂತೊಪ್ಪುವ "ಅಲೆಕ್ಝಾಂಡ್ರಿಯಾ” ಎಂಬ ಪಟ್ಟಣವನ್ನು ಶಿಕಂದರನು ಕಟ್ಟಿಸಿದನು (ಕ್ರಿ. ಪೂ. ೩೭೭). ಆ ಪಟ್ಟಣವು ಈ ಕಾಲಲ್ಲಿ ಅನುಭವಿಸುತ್ತಿರುವಷ್ಟು ಘನತೆಗೇರುವದೆಂಬದನ್ನು ಶಿಕಂದರನು ಎಣಿಸಿದ್ದನೋ ಇಲ್ಲವೋ ಎಂಬದನ್ನು ಹೇಳಲಿಕ್ಕಾಗದಿದ್ದರೂ ತಾನು ಕಟ್ಟಿದ ಪಟ್ಟಣವು ವ್ಯಾಪಾರದ ದೊಡ್ಡದೊಂದು ಪಡಿಮೂಲೆಯಾಗುವದೆಂಬದನ್ನು ಆ ಚತುರನು ನಿಃಸಂದೇಹವಾಗಿ ನಂಬಿದ್ದನೆಂಬದರಲ್ಲಿ ಸಂದೇಹವಿಲ್ಲ.

ಶಿಕಂದರನು "ತಯ್ಯಾರ” ಕೋಟೆಗೆ ಲಗ್ಗೆಯನ್ನಿಕ್ಕಿದಾಗ ಹತಾಶನಾದ ದರಾಯಸ ಬಾದಶಹನು ಅವನೊಡನೆ ಸಾಮ ದಾನಗಳ ಸಂಧಾನವನ್ನು ನಡೆಸಿದನು. “ಸ್ವರ್ಗಾದಪಿ ಗರೀಯಸೀ,” ಸ್ವರ್ಗಾನಂದಕ್ಕಿಂತ ಹೆಚ್ಚಿನ ಆನಂದವನ್ನಿಳಿಯುವವಳಾದ ತಾಯಿಯ, ಹೊರಗಿನ ಪ್ರಾಣಿಗಳೇ ಆದ ಪ್ರಿಯ ಭಾರ್ಯೆಯೂ ಶತ್ರುವಿನ ಸೆರೆಯಲ್ಲಿರುವ ವ್ಯಸನವು ದರಾಯಸನ ಎದೆಯಲ್ಲಿ ಒಳಿತಾಗಿ ಕಳೆಯುತ್ತಿತ್ತು. ಮೇಲಾಗಿ ತನಗಿನ್ನು ಗೆಲವಿಲ್ಲವೆಂಬ ದುಗುಡವಾದರಾ ಆವನನ್ನು ಒಳಿತಾಗಿ ಬಾಧಿಸುತ್ತಿತ್ತು. “ಸರ್ವನಾಶ ಸಮುಪ್ಪನ್ನೇ ಅರ್ಥ೦ ತ್ಯಜತಿ ಪಂಡಿತಃ" ಎಂಬಂತೆ ಸರ್ವವೂ ಕೈ ಬಿಟ್ಟು ಹೋಗುವ ಕಾಲದಲ್ಲಿ ಬುದ್ಧಿವಂತನಾದವನು ತಾನಾಗಿ ಆರ್ಧವನ್ನು ಕೊಟ್ಟು ಆರ್ಧವನ್ನು ರಕ್ಷಿಸಿಕೊಳ್ಳತಕ್ಕದ್ದೆಂಬ ನ್ಯಾಯಕ್ಕನುಸಾರವಾಗಿ ಶಿಕಂದರನಿಗೆ ಅರ್ಧ ರಾಜ್ಯವನ್ನೂ, ತಾಯಿ ಹೆಂಡಿರನ್ನು ಬಿಟ್ಟುಕೊಡುವದಕ್ಕಾಗಿ ಇಪ್ಪತ್ತು ಲಕ್ಷ ತೊಲೆ ಬಂಗಾರವನ್ನೂ ಕೊಡುವದಲ್ಲದೆ, 'ವರ್ಷಣಾ' ಎಂಬ ತನ್ನ ದೂರಸಂಪನ್ನೆ ಯಾದ ಮಗಳನ್ನು ಕೊಡಲೊಪ್ಪಿ ಯುದ್ಧ ವನ್ನು ನಿಲ್ಲಿಸಬೇಕೆಂದು ಬೇಡಿಕೊಂಡನು. ಈ ಸಾಮ ದಾನಗಳ ಸಂಧಾನಗಳನ್ನು ಎಷ್ಟು ಮಾತ್ರವೂ ಆದರಿಸದೆ ಶಿಕಂದರನಂ ಅವುಗಳನ್ನು ಒಮ್ಮೆಲೆ ನಿರಾಕರಿಸಿ ಬಿಟ್ಟನು. ಆಗ ಪಾರ್ವನಿಯೋ ಸೇನಾಪತಿಯ ವಿಸ್ಮಯಪಟ್ಟು ನುಡಿದದ್ದು: “ನಾನೇ ಶಿಕಂದರ ರಾಜನಾಗಿದ್ದರೆ ದರಾಯಸನ ಸಂಧಾನಗಳನ್ನು ಮನ್ನಿಸುತ್ತಿದ್ದೆನು.” ಅದಕ್ಕೆ ಶಿಕಂದರನು ನಕ್ಕು ಪ್ರತ್ಯುತ್ತರವಾಗಿ," ನಾನು ಪಾರ್ಮೇನಿಯೋನಾಗಿದ್ದರೂ ದರಾಯಸನ ಸಂಧಾನಗಳನ್ನು ಮನ್ನಿಸದೆ ಇರುತ್ತಿದ್ದಿಲ್ಲ' ಎಂಬ ಅಪಹಾಸೋಕ್ತಿಯನ್ನಾಡಿದನು. ಎಲ್ಲವೂ ನಷ್ಟ ಪಾಗಿಹೋಗುವ ಕಾಲ ಬಂದಾಗ ಅರ್ಧವನ್ನು ಬಿಟ್ಟುಕೊಡುವದು ಜಾಣತಣವಾಗಿದ್ದರೂ ಎಲ್ಲವೂ ಕೈವಶವಾಗುವ ಕಾಲದಲ್ಲಿ ಅರ್ಧವನ್ನು ಬಿಟ್ಟು ಕೊಡುವದು ಮೂರ್ಖತನವೇ ಸರಿ.

ಶಿಕಂದರನು ಮಿಶ್ರ ದೇಶ (ಈಜಿಪ್ತ)ವನ್ನು ತನ್ನದಾಗಿ ಮಾಡಿಕೊಂಡು ಮರಳಿ ಜಲಮಾರ್ಗವಾಗಿ "ತೈಯ್ಯಾರ"ಕ್ಕೆ ಬಂದು, ಅಲ್ಲಿಂದ ಮೆರೆಯುತ್ತೆ ಮೆರೆಯುತ್ತೆ ಒಳದೇಶದಲ್ಲಿ ಸಾಗಿಬಂದನು. ಅಲ್ಲಿಯ ನಗರದೇವತೆಗಳು ಆ ವಿಜಯಿಯಾದ ರಾಜನಿಗೆ ಮೆಚ್ಚಿ ಕೈ ಸನ್ನೆ ಮಾಡಿ ಮಾಡಿ ಕರೆಯುತ್ತಿರುವಂತೆ ಕಂಡವು. ಪಾಲಸ್ತಾನದೊಳಗೆ ಹಾಯು ಅವನು ಇಫ್ರಾಯತೀ ನದೀತೀರದಲ್ಲಿರುವ ಶಾಹಶಾಕವೆಂಬ ಪಟ್ಟಣವನ್ನು ಕೈವಶ ಮಾಡಿಕೊಂಡು ಮಸಾ ಪಾದಾಮಿಯಾ ಪ್ರಾಂಶವನ್ನಾಕ್ರಮಿಸಿಕೊಂಡು ನದೀ ತೀರದಲ್ಲಿರುವ 'ನಿನವೇ' ಎಂಬ ಪುರಾಣಪ್ರಸಿದ್ಧವಾದ ಪಟ್ಟಣಕ್ಕೆ ಅಪ್ರತಿಹತವಾಗಿ ಬಿಜಯಂ ಮಾಡಿದನು. ಅಲ್ಲಿ ಬರುತ್ತಲೇ, ದರಾಯಸನು ಹಾಗೂ ಹೀಗೂ ಮಾಡಿ ಮತ್ತೊಂದು ಪ್ರಚಂಡವಾದ ಸೇನೆಯನ್ನು ನೆರವಿಕೊಂಡು 'ಗಾಗಾವಲಾ” ಎಂಬ ಸ್ಥಳದಲ್ಲಿ ಯುದ್ಧಕ್ಕೆ ಸನ್ನದ್ಧನಾಗಿರುವನೆಂಬ ವಾರ್ತೆಯನ್ನು ಶಿಕಂದರನು ಕೇಳಿದನು.

ಒಂದು ದಿನ ರಾತ್ರಿಯಲ್ಲಿ ಶಿಕಂದರ ರಾಜನು ತನ್ನ ತಂಬುವಿನಲ್ಲಿ ಸುಖವಾಗಿ ಮಲಗಿಕೊಂಡಿರುವಾಗ, ಸೇನಾಪತಿಯು ವ್ಯಗ್ರಚಿತ್ತನಾಗಿ ಬಂದು ರಾಜನನ್ನು ಲಗಬಗೆಯಿಂದ ಎಚ್ಚರಿಸಿದನು, ಏನು ಸಮಾಚಾರವೆಂದು ರಾಜನು ಎಚ್ಚತ್ತು ಕೇಳಲಾಗಿ “ಪ್ರಭೋ, ದರಾಯಸನ ಸೇನೆಯು ನಮ್ಮ ಶಿಬಿರದ ಕಡೆಗೆ ಸಾಗಿಬರುವಂತೆ ಕಾಣುತ್ತದೆ. ನೋಡಿದಿರಾ, ಲಕ್ಷಾವಧಿ ದೀವಟಿಗೆಗಳಿಂದ ಪ್ರಜ್ವಲಿತವಾದ ಭೂಪ್ರದೇಶವೇ ಇತ್ತ ಕಡೆ ನಡೆಸರುವಂತೆ ಭಾಸವಾಗುತ್ತದೆ” ಎಂದು ಸೇನಾಪತಿಯು ಬೆಸಗೊಂಡನು, ರಾಜನು ಮಂದಸ್ಮಿತನಾಗಿ "ಇದಕಿಷ್ಟೇಕೆ ಉದ್ವಿಗ್ನರಾದಂತೆ ತೋರುವಿರಿ? ವಿಜಯಶ್ರೀಯು ತಾನಾಗಿ ಬೆಳಕು ಮಾಡಿಕೊಂಡು ನಮ್ಮನ್ನು ಇದಿರುಗೊಳ್ಳಲಿಕ್ಕೆ ಬರುತ್ತಿರುವಳು. ದರಾಯಸಬಾದಶಹನು ತನ್ನ ಅಪರಿಮಿತವಾದ ಸೇನೆಯನ್ನು ಕಟ್ಟಿಕೊಂಡು ನಮ್ಮಿಂದ ದೂರದೂರವಾಗಿ ಸಂಚರಿಸುತ್ತೆ ಕಣ್ಣು ಮುಚ್ಚಣಿಕೆಯ ಆಟವನ್ನು ಹೂಡಿದ್ದರೆ ನಮಗೆಷ್ಟು ತೊಂದರೆಯಾಗುತ್ತಿತ್ತೆಂಬುದರ ಅರಿಕೆನಿವಂಗುಂಟೋ ? ಹೋಗಿರಿ, ಜಾಗರೂಕರಾಗಿ ಕಾದುಕೊಂಡಿದ್ದು ಪ್ರಾತಃ ಕಾಲದಲ್ಲಿಯೇ ನನ್ನನ್ನು ಎಬ್ಬಿಸಿರಿ. ಸೂರ್ಯೋದಯಕ್ಕೆ ಸರಿಯಾಗಿ ಯುದ್ಧವು ಪ್ರಾರಂಭವಾಗತಕ್ಕದ್ದು." ಎಂದು ಆಜ್ಞಾಪಿಸಿ, ಅಪಜಯದ ಭೀತಿಯ ತಿಲಾಂಶವನ್ನಾದರೂ ಕಾಣದವನಾದ ಆ ಸೇನಾನಿಯು ಸ್ವಸ್ಥ ಮನಸ್ಸಿನವನಾಗಿ ಮಲಗಿಕೊಂಡನು. ವಿಚಾರ, ಹಳವಂಡು, ಕನಸುಗಳ ವ್ಯವಧಾನವಿಲ್ಲದೆ ಅವನು ಬೇಗನೆ ನಿದ್ದೆ ಗೈದನು. ಜಗದ್ವಿಖ್ಯಾತರಾದ ವೀರ ಮನಃಪ್ರವೃತ್ತಿಗಳು ಯಾವ ಕಾಲದಲ್ಲಿಯಾಗಲಿ ಯಾವ ದೇಶಗಳಲ್ಲಿಯಾಗಲಿ ಏಕಪ್ರಕಾರವಾಗಿರುವವು. ನಪೊಲಿಯನ್, ಜೂಲಿಯಸ್ ಸೀಜರ, ರಾಮ, ಅರ್ಜುನರೇ ಮುಂತಾದವರು ತಮ್ಮ ತಮ್ಮ ಯುದ್ಧಗಳ ಪರಿಣಾಮದ ನಿಷಯವಾಗಿ ನಿ:ಸಂದೇಹವಾಗಿದ್ದದ್ದರಿಂದ ಅವರ ಚಿತ್ರಕ್ಕೆ ಚಾಂಚಲ್ಯದ ದೋಷವು ತಗಲಲೇ ಇಲ್ಲ.

ಪ್ರಾತಃಕಾಲದಲ್ಲಿಯೇ ಯುದ್ಧಕ್ಕೆ ಪ್ರಾರಂಭವಾಯಿತು, ದರಾಯಸನ ಸೇನೆಯಲ್ಲಿ ಹತ್ತು ಲಕ್ಷ ಜನ ಕಾಲಾಳುಗಳೂ ನಾಲ್ವತ್ತು ಸಾವಿರ ಜನರಾವುತರೂ ಇದ್ದಿರಬೇಕು. ಶಿಕಂದರನ ಕಾಲಾಳುಗಳೆಂದರೆ ನಾಲ್ವತ್ತೇ ಸಾವಿರ ಜನರು. ರಾವುತರು ಏಳುಸಾವಿರ ಜನ. ಇನ್ನೂರಕ್ಕೊಬ್ಬ ಕಾಲಾಳೂ ಆರಕೊಬ್ಬ ಕುದುರೆಯವನೂ ಇದ್ದಂತಾಯಿತು. ಹತ್ತೇ ಜನ ಹಾವಳಿಗಾರರು ಸಂತೆಗೆ ಸಂತೆಯನ್ನ ಬಡ ಕೊಂಡು ಹೋಗುವಂತೆ ಶಿಕಂದರನ ಚುಚ್ಚು ಗೋಲಿನ ವೀರರ ವ್ಯೂಹವು ಶತ್ರುಸೇನೆಯಲ್ಲಿ ನುಗ್ಗಿ ವಿಲಕ್ಷಣವಾದ ಕೊಲೆಯನ್ನು ಮಾಡಲಾರಂಭಿಸಲು, ದರಾಯ ಸನ ಸೇನೆಯು ಕಂಗೆಟ್ಟು ಸತ್ತೆ ಕೆಟ್ಟಿನೆಂದು ಎತ್ತೆತ್ತಲೋ ಓಡಲಾರಂಭಿಸಿತು. ಆದರೆ ಶಿಕಂಡರನ ಸೇನಾಪತಿಯಾದ ಪಾರ್ಮೆನಿಯೋನು ಕಾಡುತ್ತಿರುವ ತಾಣದಲ್ಲಿ ಶತ್ರು ಸೇನೆಯ ರಾವುತರು ಅಟ್ಟಿಬಂದು ಒಳ್ಳೆ ಶೌರ್ಯದಿಂದ ಕಾದಿ ಆ ಸೇನಾಪತಿಯನ್ನು ಮುತ್ತಿರಲಾಗಿ, ಅವನು ತನ್ನನ್ನೂ ತನ್ನ ಬಳಿಯಲ್ಲಿರುವ ಸಾಮಗ್ರಿ ಸಂಚಯವನ್ನೂ ಕಾಯಬೇಕಾಗಿ ಸಹಾಯವನ್ನು ಕಳಿಸಿರೆಂದು ಶಿಕಂದರನಿಗೆ ಹೇಳಿಕಳಿಸಿದನು. ಅದಕ್ಕೆ ಶಿಕಂದರನು ಪ್ರತ್ಯುತ್ತರವಾಗಿ ಹೇಳಿಕಳಿಸಿದ್ದೇನಂದರೆ "ಸಾಮಗ್ರಿಯು ಹೋಗುವದೆಂಬ ಚಿಂತೆ ಮಾಡಬೇಡಿರಿ. ನಿಮ್ಮ ಸಂರಕ್ಷಣವನ್ನೂ ನಿಮ್ಮ ಸೇನೆಪಡೆಯ ಸಂರಕ್ಷಣವನ್ನೂ ನೀವು ಮಾಡಿಕೊಳ್ಳುವಿರೆಂದು ನಾನು ನಿಶ್ಚಯವಾಗಿ ನಂಬಿದ್ದೇನೆ. ಸಾಮಗ್ರಿಯು ಹೋಗಲಿ; ಆದರ ಚಿಂತೆಯನ್ನು ಬಿಟ್ಟು ನೀವು ಯುದ್ಧ ಮಾಡಿರಿ. ಯುದ್ಧವು ಮುಗಿದ ಬಳಿಕ ಶತ್ರುಗಳ ಸರ್ವಸ್ವವನ್ನು ನಾವು ಸ್ವಾಧೀನ ಮಾಡಿಕೊಳ್ಳುವಾಗ ನಮ್ಮ ಸಾಮಗ್ರಿಯಾದರೂ ಕೊನೆಯಲ್ಲಿ ನಮ್ಮದೇ ಆಗುವದು.” ಹುರುಪು ಬಂದ ಹೊತ್ತಿನಲ್ಲಿ ವಿಶ್ರಾಂತಿಯ ಅಪೇಕ್ಷೆಯನ್ನು ಮಾಡದೆ ಶಿಕಂದರನು ಶತ್ರು ಸೇನಾ ಸಂಹಾರವನ್ನು ಮಾಡುತ್ತೆ ದರಾಯಸನಿರುವ ಸ್ಥಳದ ಸಮೀಪಕ್ಕೆ ಬಂದದ್ದನ್ನು ಕಂಡು, ಆ ದೈವಹತನಾದ ಸಾರ್ವಭೌಮನು ಮತ್ತೆ ಓಡಿದನು. ಸೈನ್ಯವೆಲ್ಲಾ ಓಡಿತು. ಓಡಿ ಹೋದರೆ ಶತ್ರುವು ಬಿಡುವನೆ ? ಕಾಲಧಾವತಿಯೋ ಕತ್ತೆಂಭಟ್ಟಾ. ಅಲ್ಪ ಕಾಲದಲ್ಲಿಯೇ ಆ ಓಡುತ್ತಿರುವ ಸೈನ್ಯದ ಇತಿಶ್ರೀಯಾಯಿತೆಂದು ಹೇಳಬೇಕಾಗಿಲ್ಲ. ಗಾಗಾಮೇಲಾದ ಯುದ್ಧದಲ್ಲಿ ದರಾಯಸನು ಸಂಪೂರ್ಣವಾಗಿ ಸೋತುಹೋದನು. ಪರಿಸ್ಥಿತಿಯು ಬುಡ ಮಳಾಗಿಹೋಯಿತು. ಕಳೆದುಹೋದ ಕ್ಷಣದಲ್ಲಿ ಸಾರ್ವಭೌಮನಾಗಿದ್ದ ದರಾಯಸ ಬಾದಶಹನು ಈ ಕ್ಷಣದಲ್ಲಿ ಗತಿಗೇಡಿಯಾಗಿ ಕುಳಿತು ವಿಶ್ರಾಂತಿಯನ್ನು ಹೊಂದಲು ಸ್ಥಳ ಕಾಣದೆಹೋದನು. ಅವನ ಪ್ರಜಗಳೇ ಅವನಿಗೆ ಕುಡಿಯಲು ನೀರು ಕೊಡದಾದರು.

ಗಾಗಾಮಲಾದ ವಿಜಯದ ಕೀರ್ತಿಯೇ ವಿದ್ಯುತ್ ಪ್ರವಾಹದ ವೇಗದಿಂದ ಎಣ್ದೆಸೆಗಳಲ್ಲಿ ಹರಡಿಕೊಂಡು, ಇನ್ನು ಮೇಲೆ ಶಿಕಂದರನೇ ಸಮಸ್ತವಾದ ಪೃಥ್ವಿಗೆ ನಾಥನಾದನೆಂದು ಸಾರಿತು. ಶಿಕಂದರನ ಆಜ್ಞಾಪತ್ರ ಶಾಸನಗಳ ಹಾದಿಯನ್ನು ನೋಡದೆ, ದೇಶದೇಶಗಳಲ್ಲಿಯ ಪ್ರಜಾಜನರು ಶಿಕಂದರನೇ ಸಾರ್ವಭೌಮನೆಂದು ಒಪ್ಪಿಕೊಂಡು, ಅವನಿಗೆ ಸತ್ಕಾರವನ್ನೀಯಲು ಸರ್ವರೂ ಸಿದ್ಧತೆಯನ್ನು ಮಾಡಿಟ್ಟು ಕೊಂಡಿದ್ದರು. ಆ ದಿವಸ ಶಿಕಂದರನಿಗೆ ಆತ್ಯಾನಂದವಾಗಿಹೋಯಿತು. ಸಿಂಧು ನದದಿಂದ ಭೂಮಧ್ಯ ಸ್ಪಮುದ್ರದವರೆಗೆ ಹಬ್ಬಿರುವ ಮಹಾಸಾಮ್ರಾಜ್ಯದ ಅಧಿಪತಿಯೇ ಅವನಾದನು. ಸೈನಿಕನೊಬ್ಬೊಬ್ಬನ ಪಾಲಿಗೆ ಬಂದ ಸುಲಿಗೆಯು ದೊಡ್ಡದೊಂದು ಐಶ್ವರ್ಯವೇ ಆಗಿತ್ತು. ಇನ್ನು ಮುಂದೆ ಯುದ್ಧದ ಚಿಂತೆ ಯಾರಿಗೂ ಇಲ್ಲ. ರಾಜ್ಯದಲೆಲ್ಲ ಮೆರೆಯುತ್ತ ಸಂಚರಿಸುವೆನೆಂಬ ಉಬ್ಬಿ ಉಬ್ಬು ಬಾಬಿಲೋನ ಎಂಬ ಪುರಾತನವಾದ ರಾಜಧಾನಿಗೆ ಶಿಕಂದರಬಾದಶಹನು ಬಿಜಯ ಮಾಡುವನೆಂಬ ವಾರ್ತೆಯನ್ನು ಕೇಳಿ, ಪುರವಾಸಿಗಳು ನಗರ ಶೃಂಗಾರವನ್ನು ಮಾಡಿ ಭಕ್ತಿಯಿಂದಲೂ, ಆನಂದದಿಂದಲೂ, ಉತ್ಸವದಿಂದಲೂ ಆ ನವೀನನಾದ ನರಾಧಿರನನ್ನು ಸತ್ಕರಿಸಿ ಸಾರ್ವಭೌಮನಿಗುಚಿತವಾದ ಸ್ವಾಗತವನ್ನೂ ಮಾನ ಮರ್ಯಾದೆಗಳನ್ನೂ ಕೊಟ್ಟರು. ಆ ಪುರವಾಸಿಗಳ ಸತ್ಕಾರದಿಂದ ಪರಮ ಸಂತುಷ್ಟನಾದ ಸಿಕಂದರ ಬಾದಶಹನು ಸಾಧುಸಂತರನ್ನೂ, ಪಂಡಿತಶಾಸ್ತ್ರಿಗಳನ್ನೂ, ವೃತ್ತಿ-ಸ್ವಾಸಿಗಳುಳ್ಳ ಮಹಾಜನರನ್ನೂ ಆದರದಂದ ಬೀಳ್ಕೊಂಡು ಅವರೆಲ್ಲರಿಗೆ ಧನಕನಕ ವಸ್ತ್ರಾಭರಣ ಬಿರುದಾವಳಿ ಮುಂತಾದವುಗಳನ್ನಿತ್ತು ಸಂಭವಿಸಿದನು. ಪೂರ್ವದ ಮಹಾ ಸಾರ್ವಭೌಮರ ರಾಜಧಾನಿಯಾಗಿದ್ದ ಆ ಬಾಬಿಲೋನ ನಗರವೇ ಅಂದಿನಿಂದ ತನ್ನ ರಾಜಧಾನಿಯಾಯಿತೆಂದು ಬಾದಶಹನು ಹೇಳಿದ ಕೂಡಲೆ, ಅಲ್ಲಿಯವರಿಗೆ ಪರಮಾವಧಿಯ ಸಂತೋಷವಾಯಿತು. ಗುಣಲೇಶವಾದರೂ ಇಲ್ಲದೆ ಕೇವಲ ಆಕಸ್ಮಿಕವಾದ ಜನ್ಮ ಮಾತ್ರದಿಂದಲೇ ರಾಜನಾಗಿರುವ ಕ್ಷುದ್ರನಾದ ಪ್ರಾಣಿಯು ಪರಪೀಡಾಕಾರಕನಾಗಿರುವನಲ್ಲದೆ, ಅವನಿಂದ ಲೋಕಕಲ್ಯಾಣದ ಕಲಸಗಳಾಗುವದಿಲ್ಲ. ದರಾಯಸನು ತಾನು ಸಾರ್ವಭೌಮ ಪದಕ್ಕೆ ಬಂದ ನಂತರ ಬಾಬಿಲೋನಿಯದ ಜನರ ಧರ್ಮವನ್ನು ಕೆಡಿಸಲಿಕ್ಕೆ ಪ್ರಯತ್ನ ಮಾಡಿದ್ದಲ್ಲದೆ, ಆರಾಧ್ಯ ದೇವತೆಯಾದ ಬೇಲಾನೆಂಬ ದೇವರ ಸಂಸ್ಥಾನಕ್ಕೆ ನಡೆದಿರುವ ವೃತ್ತಿಗಳನ್ನೆಲ್ಲ ಅಪ ಹರಿಸಿಕೊಂಡು ಅಲ್ಲಿಯವರ ಮನಸ್ಸುಗಳನ್ನು ಬಹುಪರಿಯಾಗಿ ನೋಯಿಸಿದ್ದನು. ಶಿಕಂದರ ಬಾದಶಹನು ಬಾಬಿಲೋನದ ಜನರ ಧರ್ಮದಲ್ಲಿ ತಾನು ಕೈಹಾಕುವದಿಲ್ಲವೆಂದೂ ಅವರ ಧರ್ಮಸಂಸ್ಥೆಗಳಿಗೆ ನಡೆಯುತ್ತಿರುವ ವೃತ್ತಿ ಸ್ವಾಸ್ತಿಗಳನ್ನು ಯಥಾಪ್ರಕಾರವಾಗಿ ನಡಿಸುವನೆಂದೂ ಆಶ್ವಾಸನವನ್ನಿತ್ತದ್ದನ್ನು ಕೇಳಿಯಂತೂ ಸಾಕ್ಷಾತ್ ಸ್ವರ್ಗಾಧಿಪತಿಯೇ ಅವತಾರ ತಾಳಿ ಶಿಕಂದರನ ರೂಪದಿಂದ ತಮ್ಮಲ್ಲಿಗೆ ಬಂದಿರುವನೆಂದು ಅಲ್ಲಿಯವರು ತಿಳಕೊಂಡು, ನವೀನನಾದ ಬಾದಶಹನನ್ನು ಮನಮುಟ್ಟ ಹರಸಿದರು, ಅಲ್ಲಿಂದ ಶಿಕಂದರನು ದರಾಯಸನ ರಾಜಧಾನಿಯಾಗಿದ್ದ ಸೂಸಾ ಪಟ್ಟಣಕ್ಕೆ ಆಗಮನ ಮಾಡಿ ಅಲ್ಲಿಯ ರಾಜಮಂದಿರದಲ್ಲಿ ಒಂದೆರಡು ದಿವಸ ಇದ್ದು, ಆ ಮೇಲೆ ಪರ್ಸಿಪಾಲಿ ಎಂಬ ಪಟ್ಟಣಕ್ಕೆ ಹೋಗಿ, ಅಲ್ಲಿ ತನ್ನ ಡಂಕೆಯನ್ನು ಹೊಡಿಸಿ ಮತ್ತೆ ಉತ್ತರಾಭಿಮುಖನಾಗಿ ಹೊರಟು ಬ್ಯಾಕ್ಟ್ರಿಯಾ ಪ್ರಾಂತಕ್ಕೆ ಬಂದನು.

ದರಾಯಸನ ಬೆನ್ನಟ್ಟಿ ಅವನನ್ನು ಬಂದಿಯಾಗಿ ಹಿಡತರಬೇಕೇನೆಂದು ಸೇನಾಪತಿಯು ಕೇಳಲಾಗಿ, ಶಿಕಂದರ ಬಾದಶಹನು ನಿರಾತಂಕವಾದ ಮನಸ್ಸಿನಿಂದ ಹೇಳಿದ್ದು: "ಯಾತಕ್ಕೆ? ದರಾಯಸನಲ್ಲೇನು ಉಳಿದದೆ? ಗಾಯವನ್ನು ತಾಳಿದ ಸರ್ಪವು ಅಡಗಿಕೊಂಡಲ್ಲಿಯೇ ಇರಿವೆಗಳ ಬಾಧೆಯಿಂದ ಸತ್ತು ಹೋಗುವಂತೆ ದರಾಯಸನು ವಿಶ್ರಾಂತಿಯ ಅಭಾವ, ಮನಸ್ತಾಪ, ಸುಖೋಪಭೋಗಗಳ ನ್ಯೂನತೆ ಮುಂತಾದ ಹಲವು ದುಃಖಗಳಿಂದ ಸಂಪೀಡಿತನಾಗಿ ತನ್ನಷ್ಟಕ್ಕೆ ತಾನೇ ಬೇಗನೆ ಮೃತ್ಯುವಶನಾಗುವದು ಗಟ್ಟಿ.” ಬಾದಶಹನ ತರ್ಕದಲ್ಲಿ ದೋಷವಿದ್ದಿಲ್ಲ. ಗತಿಹೀನನಾಗಿ ತಿರುಗುತ್ತಿದ್ದ ದರಾಯಸನ ಪರಿವಾರದವರು ಮೆಲ್ಲಮೆಲ್ಲನೆ ಕಾಲುದೆಗೆದರು. ಕೂಳಿಲ್ಲದ್ದಕ್ಕಾಗಿ ಸೈನ್ಯ ಜನರೆಲ್ಲ ಕಂಡ ದಾರಿಯನ್ನು ಹಿಡಿದು ಹೋಗಿಬಿಟ್ಟರು. ಕುಳ್ಳಿರುವೆನೆಂದರೆ ಹಗಲು ಗಿಡದ ನೆಳಲು ಕೂಡ ಅವನಿಗೆ ಸಿಕ್ಕದಂತಾಯಿತು. ರಾತ್ರಿಯಲ್ಲಿ ಮಲಗುವೆನೆಂದರೆ ಸಮವಾಗಿದ್ದ ನೆಲ ಸಿಕ್ಕರೆ ಅವನಿಗೆ ಸಾಕಾಗಿತ್ತು. ಅಲ್ಪ ನಾಗಿದ್ದವನನ್ನು ಮೇಲಕ್ಕೆತ್ತಿಕೊಂಡು ತನ್ನ ರಾಜ್ಯದಲ್ಲಿ ಅತಿ ದೊಡ್ಡದಾದ ಅಧಿಕಾರವನ್ನು ಕೊಟ್ಟು ಕಾಪಾಡಿದಂಥ ತನ್ನ ಪಟ್ಟಶಿಷ್ಯನ ಬಳಿಗೆ ಹೋಗಿ ಅವನಲ್ಲಿ ನಾಲ್ಕೊಪ್ಪತ್ತು ವಿಶ್ರಾಂತಿಯನ್ನಾದರೂ ಹೊಂದುವೆನೆಂದು ದರಾಯಸನು ಹೋಗಲಾಗಿ, ಆ ಅಧಮನು ಅವನನ್ನು ತನ್ನ ಅಂಗಳದಲ್ಲಿ ನಿಲ್ಲಗೊಡಲಿಲ್ಲ. ತನ್ನೊಡದೆ ಒಂದೇ ಜೀವನಾಗಿ ವರ್ತಿಸುತ್ತಿದ್ದ ಚೇಝಸನೆಂಬ ಕತ್ರನನ ಬಳಿಗೆ ಗತವೈಭವನಾದ ದರಾಯಸನು ಹೋಗಲಾಗಿ ಆ ದುರಾತ್ಮನು ಅವನನ್ನು ಬಂದಿವಾಸದಲ್ಲಿಟ್ಟು ಭಾರವಾದ ಬೇಡಿಗಳಿಂದ ಬಿಗಿದುಬಿಟ್ಟನು. "ಆಪ ಭಲಾ ತೊ ಜಗ ಭಲಾ! ” ಎಂಬಂತೆ ದರಾಯಸನ ದೈವಬಲವು ಪ್ರಬಲವಾಗಿದ್ದಾಗ ಎಲ್ಲರೂ ಅವನ ಆಜ್ಞೆಯೆಂದರೆ ದೊಡ್ಡದೊಂದು ಪ್ರಸಾದವೇ ಎಂದು ತಿಳಿದವರಂತೆ ನಟಿಸುತ್ತಿದ್ದರು; ಬಾದಶಹನ ಹಿತಕ್ಕಾಗಿಯೇ ತಾವು ಜೀವಿಸುತ್ತಿರುವೆವೆಂದು ತೋರಿಸುತ್ತಿದ್ದರು, ಸೂರ್ಯ ಚಂದ್ರರ, ಮೇಘಮಾರುತರೂ, ಭೂದೇವತೆ ವನದೇವತೆಯರೂ ಬಾದಶಹನ ಹಿತಮಾಡುವದರಲ್ಲಿಯೇ ಯಾವಾಗಲೂ ನಿರತರಾಗಿರುವರೆಂದು ಕವಿಗಳು ವರ್ಣಿಸಿದರು. ಪಾಪ! ವಿಪನ್ನಾವಸ್ಥನಾದ ದರಾಯಸನ ಆಜ್ಞೆಯನ್ನೇಕೆ, ಪ್ರಾರ್ಥನೆಯನ್ನಾದರೂ ಕಿವಿಮೇಲೆ ಹಾಕಿಕೊಳ್ಳುವವರಿಲ್ಲ. ಬಾದಶಹನ ಹಿತಕ್ಕಾಗಿ ಜೀವಿಸಿರುವೆನೆಂದು ಬೊಗಳುತ್ತಿರುವ ಶ್ವಾನಸಮಾನನಾದ. ನರಾಧಮನೊಬ್ಬನು ಆ ತನ್ನ ಅನ್ನದಾತನನ್ನು ಬಂದಿವಾಸದಲ್ಲಿರಿಸಿದನು. ಸೂರ್ಯನು ಅವನ ಮೋತಿಯನ್ನು ಸುಟ್ಟನು; ಚಂದ್ರನು ಅವನ ದೇಹದಲ್ಲಿ ಸುಂದು ಹುಟ್ಟುವಂತೆ ಮಾಡಿದನು; ವಾಯುವು ದರಾಯಸನ ಜಡೆಗಟ್ಟಿದ ಗಡ್ಡದಲ್ಲಿ ಮಣ್ಣು ತೂರಿದನು. ಲೋಕಕ್ಕೆ ಭೀಷಣನಾಗಿದ್ದ ಯಮದೇವನೊಬ್ಬನೇ ದರಾಯಸನಿಗೆ ಒಳ್ಳೆಯವನು. ಅವನೇ ಆ ದುರ್ದೈವಿಯ ದುಃಖಗಳ ಪರಿ ಮಾರ್ಜನವನ್ನು ಮಾಡತಕ್ಕವನು. ದರಾಯಸನಾದರೂ ನೀನೇ ಗತಿಯೆಂದು ಅವನಿಗೆ ಶರಣಾಗತನಾದನು. ಬಾದಶಹನ ಹಸ್ತಾಕ್ಷರ ರಾಜಮುದ್ರೆಗಳ ಉಪಯೋಗವನ್ನು ಮಾಡಿ, ಉಳಿದ ಕ್ಷತ್ರಪರಿಂದ ಏನಾದರೂ ಪ್ರಾಪ್ತಿಯನ್ನು ಮಾಡಿಕೊಳ್ಳಬೇಕೆ೦ತಲೂ ಶಿಕಂದರ ಬಾದಶಹನು ಕೇಳಿದಾಗ ಅವನನ್ನು (ದರಾಯಸವನ್ನು ) ಸ್ವಾಧೀನ ಮಾಡಿ ಏನಾದರೂ ಸಂಭಾವನೆಯನ್ನು ಪಡೆಯಬೇಕೆಂದೂ ಆಲೋಚಿಸಿ ಆ ಸ್ವಾಮಿದ್ರೋಹಿಯಾದ ಬೇರುಸ್ಸೆನು ದರಾಯಸನನ್ನು ಸೆರೆಯಲ್ಲಿ ಹಿಡಿದಿದ್ದನು. ದರಾಯಸನ ಬೇರುಸೃನೂ ಕೂಡಿ ಶಿಕಂದರನ ವಿರುದ್ಧವಾಗಿ ಬಂಡುಮಾಡುವರೆಂಬ ವಾರ್ತೆಯನ್ನು ಕೇಳಿ ಶಿಕಂದರನು ಬ್ಯಾಕ್ಟಿಯಾ ಪ್ರಾಂತಕ್ಕೆ ಬರಲಾಗಿ ಬೇರುಸನು ಬೆದರಿ ಓಡಿದನು. ಓಡುವಾಗ ದರಾಯಸನನ್ನು ಸಂಗಡ ಕಟ್ಟಿ ಕೊಂಡು ಹೋಗಬೇಕೆಂಬ ಯೋಚನೆಯನ್ನು ಮಾಡಲು ಅದಕ್ಕೆ ದರಾಯಸನು ಒಪ್ಪಲಿಲ್ಲಾರಿಂದ ಆ ಘಾತಕನು ದೈವಹಠನಾದ ಆ ಸಾರ್ವಭೌಮನನ್ನು ಖಡ್ಗದಿಂದಿರಿದು ತಾನು "ಗಚ್ಛ" ಮಾಡಿದನು. ಶಿಕಂದರಬಾದಶಹನು ದರಾಯಸನಿದ್ದಲ್ಲಿಗೆ ಬರುವಷ್ಟರಲ್ಲಿ ಆ ಗತವೈಭವನಾದ ರಾಜನು ಗತಪ್ರಾಣನಾಗಿ ಗತಿ ಇಲ್ಲದೆ ಬಿದ್ದು ಕೊಂಡಿದ್ದನು. ಆ ಹೃದಯದ್ರಾವಕವಾದ ನೋಟವನ್ನು ನೋಡಿ ಶಿಕಂದರನು ದುಃಖಾರ್ತನಾಗಿ ಕಣ್ಣೀರು ಸುರಿಸಿದನು ಅಸ್ತವ್ಯಸ್ತವಾಗಿ ಬಿದ್ದಿರುವ ಆ ಮಹಾರಾಯನ ಪ್ರೇತಕ್ಕ ಶಿಕಂದರ ಬಾದಶಹನು ತನ್ನ ಅನರ್ಘವಾದ ಉತ್ತರೀಯವನ್ನು ಹೊಚ್ಚಿ "ಬಂಧುವೆ, ನನಗೆ ಶರಣಾಗತನಾಗಿ ಬಂದಿದ್ದರೆ, ನಿನಗಿಂಥ ಶೋಚನೀಯವಾದ ಗತಿಯು ಸರ್ವಥಾ ಪ್ರಾಪ್ತವಾಗುತ್ತಿಲ್ಲ' ಎಂಬ ಉದ್ದಾರವನ್ನು ತೆಗೆದು, ಪ್ರೇತಕ್ಕೆ ಅಂತ್ಯ ವಿಧಿಯಾಗಿಲೆಂದು ತನ್ನ ಸೇನಾಪತಿಗೆ ಆಜ್ಞಾ ಪಿಸಿದನು, ಮಹಾರಾಜನಿಗುಚಿತವಾದ ಸ್ಮಶಾನಯಾತ್ರೆಯಾಯಿತು. ಸ್ವತಃ ಶಿಕಂದರನು ಸಕಲರಾದ ಅಧಿಕಾರಿ, ಶಿಕಂದರ ಬಾದಶಹ 2& ಗಳನ್ನು ಕೂಡಿಕೊಂಡು ಪ್ರೇತವನ್ನು ಸ್ಮಶಾನಕ್ಕೆ ಮುಟ್ಟಿಸಿದನು. ಉತ್ತರ ಕ್ರಿಯಾದಿಗಳು ದರಾಯಸನ ಧರ್ಮಾನುಸಾರವಾಗಿ ಒಳ್ಳೆ ವಿಧಾನಪೂರೈಕ ಬಾಗಿ ನಡೆದವು. ಆ ಕಾಲಕ್ಕಾದ ದಾನಧರ್ಮಗಳಿಗೆ ಅಳತೆಯಿಲ್ಲ. ಆ ಸುಸಂಧಿಯಲ್ಲಿ ಶರಣೆಂದು ಬಂದ ದರಾಯಸನ ಸರದಾರರಿಗೆಲ್ಲ ಕ್ಷಮೆ ದೊರ ಕಿತು, ಅವರವರ ವೃತ್ತಿ ಸ್ವಾಸ್ತಿಗಳೆಲ್ಲ ಅವರಿಗೆ ನಡೆದವು. ಆಜ್ಞಾನು ವರ್ತಿಗಳಾಗಿರುವೆನೆಂದು ಹೇಳಿಕೊಂಡವರಿಗೆ ಅವರವರ ಅಧಿಕಾರಗಳು ಕೂಡ ಲ್ಪಟ್ಟವು. ಲೋಕವೆಲ್ಲ ಶಿಕಂದರನನ್ನು ಹೊಗಳಿ ತು, ಕವಿಗಳು ಹಾಡಿದರು. PR Thafa farat antea laga ei annat gat: ay: 11 ದರಣಯಸನ ಅಂತ್ಯವಿಧಿಗಳಾದ ಬಳಿಕ ಶಿಕಂದರ ಬಾದಶಹನು ಕ್ಯಾಸ್ಪಿ ಯನ್ ಸಮುದ್ರದ ದಕ್ಷಿಣತೀರದಲ್ಲಿರುವ ಹಿಕ್ಕ್ಯಾನಿಯವೆಂಬ ಪ್ರಾಂತಕ್ಕೆ ಬಂದು ಅಲ್ಲಿಯ ಪ್ರಜಾಜನರನ್ನೊ ಡಂಬಡಿಸಿ, ಅಫಘಾನಿಸ್ಥಾನದ ಪಶ್ಚಿಮ ಸೀಮೆಯಲ್ಲಿರುವ ಆರ್ಶಕವನ ( ಈಗಿನ ಹೀರಾತ) ಎಂಬ ಪಟ್ಟಣಕ್ಕೆ ಬಿಜಯಮಾಡಿದನು. ಅಲ್ಲಿಯೂ ಪ್ರಜಾಜನರ ಸಂಪೂಜನವನ್ನು ಸ್ವೀಕರಿಸಿ ಕೊಂಚ ದಕ್ಷಿಣಕ್ಕೆ ಸಾಗಿಹೋಗಿ ಪ್ರೊಪದಾಸೀಯವೆಂಬ ಪಟ್ಟಣಕ್ಕೆ ಬಂದನು. ಆ ಪಟ್ಟಣದಲ್ಲಿ ಬಾದಶಹನಿರುವಾಗ ಒಂದು ಶೋಚನೀಯವಾದ ಸಂಗತಿಯು ಸಂಭವಿಸಿತು, ಶಿಕಂದರನು ಆಸಿಯಾಖಂಡದ ಸಾರ್ವಭೌಮನಾದೆದ್ದು ನಿರ್ವಿವಾದವಾದ ಸಂಗತಿಯಷ್ಟೆ ? ಅಲ್ಲಿಯ ಪ್ರಜಾಜನರನ್ನು ಒಡಂಬಡಿಸ. ತಂದಾಗಲಿ, ಪೂರ್ವದೇಶೀಯರಾದ ಪರ್ಶಿಯನ್ನರವೇಷಗಳು ಅಂದವಾಗಿಯ ಸೌಕರ್ಯವುಂಥವಾಗಿವೆಂದಾಗಲೀ ಐಶ್ವರ್ಯ ದ್ಯೋತಕವೆಂದಾಗಲಿ, ಆ ಬಾದಶಹನು ದರಾಯಸನಂಥ ವೇಷಾಲಂಕಾರಗಳನ್ನು ಧರಿಸುತ್ತಲಿದ್ದನು. ಮಾಸಿಡೋನಿಯದ ಕ್ಷುದ್ರರಾಜನಿಗಿಂತ ಅಧಿಕವಾದ ದರ್ಪವು ಸಾರ್ವಭೌಮ ನಾದ ಶಿಕಂದರನಲ್ಲಿ ವ್ಯಕ್ತವಾದದ್ದು ಆಶ್ಚರ್ಯವಲ್ಲ. ಬಾದಶಹನ ವೇಷಾ ಚರಣಗಳು , ಅವನ ಅನುಯಾಯಿಗಳಾದ ಗ್ರೀಕಜಾತಿಯ ( ಮಾಸಿಡೋನಿ, ಯಾದ ) ಅಧಿಕಾರಿಗಳಿಗೆ ಸರಿಬರಲಿಲ್ಲ. ಅವರು ಬಾದಶಹನ ಜೀವಕ್ಕೆ ಅಪಾಯವನ್ನು ಮಾಡತಕ್ಕದ್ದೆಂದು ಒಳಸಂಚು ನಡಿಸಿದರು. ಶಿಕಂದರನ. ಮುಖ್ಯ ಸೇನಾಪತಿಯಾದ ಪಾರ್ಮೆನಿಯೋನ ಮಗನಾದ ಫೀಟನೆಂಬ ಸರದಾರನೇ? ಆ ಸಂಚಿನ ಪ್ರವರ್ತಕನಾಗಿರುವದನ್ನು ಕಂಡು, ಬಾದಶಹನು, ಆ ದ್ರೋಹಿಯಾದ ತರುಣನಿಗೆ ದೇಹಾಂತ ಪ್ರಾಯಶ್ಚಿತ್ತವನ್ನು ವಿಧಿಸಿದನು. ಫೀಲೋಟನು ಶಿಕಂದರನ ಕೈಕೆಳಗಿನ ನಾಮಾಂಕಿತನಾದ ದಳವಾಯಿಯಾಗಿದ್ದನು. ವೀರರೆಲ್ಲರ ಮೇಲೆ ಆ ಬಾದಶಹನ ಪ್ರೇಮವಿರುವಂತೆಯೇ ಫೀಲೋಟನ ಮೇಲಾದರೂ ಇತ್ತು. ವಿಶೇಷವಾದ ಪ್ರೇಮವೂ ಇತ್ತು. "ಆತಿ ಪರಿಚಯಾದವಜ್ಞಾ" ಎಂಬಂತೆ ಫೀಲೋಟನು ಶಿಕಂದರನೊಡನೆ ಹೆಮ್ಮೆಯಿಂದ ವರ್ತಿಸುತ್ತಿದ್ದನು. "ಅಹಂಕಾರಕ್ಕೆ ಉದಾಸೀನತೆಯೇ ಮಟ್ಟು ” ಎಂಬದನ್ನರಿತು ಶಿಕಂದರನು ಫೀಲೋಟನ ಅಪ್ರಾಸಂಗಿಕವಾದ ಅಸಭ್ಯ ವರ್ತನೆಗಳನ್ನು ಲಕ್ಷಿಸದಿದ್ದದ್ದಕ್ಕಾಗಿ ಆ ಉನ್ಮತ್ತನಾದ ತರುಣನು ರಾಜನಿಗೆ ದ್ರೋಹವನ್ನು ಕಲ್ಪಿಸಬೇಕೆಂದು ಮಾಡಿದ ಅಪರಾಧಕ್ಕಾಗಿ ಅವನಿಗಾದ ಶಾಸನವು ಉಚಿತವಾದದ್ದೇ ಸರಿ. ಆದರೆ ಇದರಿಂದ ಒಂದು ಅನರ್ಥವುಂಟಾಯಿತು. ಮಗನಿಗೆ ದೇಹಾಂತ ಶಾಸನವಾದ ವರ್ತಮಾನವನ್ನು ಕೇಳಿ ತಂದೆಯಾದ ಪಾರ್ಮೆನಿಯೊ ಸೇನಾಪತಿಯು ಸಿಟ್ಟಾಗಿ ಬಂಡು ಮಾಡುವನೆಂಬುದನ್ನು ತರ್ಕಿಸಿ, ಶಿಕಂದರನ ಬಳಿಯಲ್ಲಿರುವ ಅಧಿಕಾರಿಗಳೆಲ್ಲರೂ ಕೂಡಿ ಪಾರ್ವನಿಯೋನಿಗಾದರೂ ದೇಹಾಂತ ಶಾಸನವೇ ಆಗ ತಕ್ಕದ್ದೆಂದು ನಿರ್ಣಯಿಸಿದರು. ಆಗಿನ ಪರಿಸ್ಥಿತಿಯಾದರೂ ಚಮತ್ಕಾರವಾದದ್ದಾಗಿತ್ತು. ಆದಾಗಲೇ ತಾನು ಗೆದ್ದು ಕೊಂಡಿರುವ ಹೊಸ ರಾಜ್ಯದಲ್ಲಿ ತನ್ನ ಸೇನಾಪತಿಯ ಬಂಡುಗಾರನಾಗಿ ನಿಂತುಕೊಂಡರೆ ಸೆರಗಿನಲ್ಲಿ ಬೆಂಕಿಯನ್ನೇ ಕಟ್ಟಿಕೊಂಡಂತಾಗುವದೆಂದು ನೆನೆದು, ಶಿಕಂದರನಾದರೂ ಅನಿರ್ವಾಹಕ್ಕಾಗಿ ಅಧಿಕಾರಿಗಳ ನಿರ್ಣಯಕ್ಕೆ ಅನುಮೋದನವನ್ನಿತ್ತನು. ಆ ಸಮಯದಲ್ಲಿ ಪಾರ್ವನಿಯೊ ಸೇನಾಪತಿಯು ರಾಜನ ಪ್ರತಿನಿಧಿಯಾಗಿ ಟೈಗ್ರಿಸ ನದೀತೀರದಲ್ಲಿರುವ ಎಕ್ಬಟಾನಾ ಪಟ್ಟಣದಲ್ಲಿದ್ದು ಕೊಂಡು ರಾಜ್ಯದ ವವ್ಯಸ್ಥಾ ನಿರೀಕ್ಷಣವನ್ನು ಮಾಡುತ್ತಿದ್ದನು, ಆ ವೃದ್ಧನಾದ ಮಹನೀಯನನ್ನು ಶಿಕಂದರನ ಕಡೆಯಿಂದ ಬಂದ ಅಧಿಕಾರಿಯೊಬ್ಬನು ಕೆಲವೊಂದು ವಿಷದಿಂದ ತಂಬುವಿನಿಂದ ಹೊರಗೆ ಕರೆದಾಕ್ಷಣವೇ ಕೊಲೆಗಡುಕರು ಅಲ್ಲಿಯೇ ಅವನನ್ನು ಕಡಿದುಹಾಕಿದರು (ಕ್ರಿ.ಪೂ.೩೩೦ ). ನಿಘೃರ್ಣವಾದ ರಾಜಕಾರಣವೆ, ನಿನಗೆ ತಲೆಯೊಡೆದವರೂ ಒಂದೇ, ಔಷಧೋಪಚಾರಗಳನ್ನು ಮಾಡಿದವರೂ ಒಂದೇ ಅಲ್ಲವೆ ? ಫಿಲ್ಲಿಪರಾಜನನ್ನೂ ಶಿಕಂದರನನ ಏಕನಿಷ್ಠೆಯಿಂದ ಸೇವಿಸಿದವನಾದ ಆ ಪಾರ್ಮೆನಿಯೋನಿಗೆ ಇಂಥ ಫಲಪ್ರಾಪ್ತಿಯೆ? ಪಾರ್ಮೆನಿಯೋನ ಕೊಲೆಯ ಕಲಂಕವು ಶಿಕಂದರ ಬಾದಶಹನ ಆತ್ಯುಜ್ವಲವಾದ ಕೀರ್ತಿಗೆ ದುರ್ನಿವಾರವಾಗಿ ತಗಲಿಕೊಂಡಿದ್ದು, ಆತನ ಇತಿಹಾಸವನ್ನು ಲೋಕವು ಮರೆಯುವವರೆಗೂ ಆ ಕಲಂಕವು ಜನರ ಕಣ್ಣುಗಳಿಗೆ ಕಟ್ಟಿದಂತಾಗಿ ಉಳಿಯುವದು.

ಅಲ್ಲಿಂದಲಾ ಬಾದಶಹನು ಸಮಗ್ರವಾದ ಅಫಗಾನಿಸ್ಥಾನದಲ್ಲಿ ಸಂಚರಿಸಿ ತಾರ್ತರೀ ದೇಶಕ್ಕೆ ಹೋದನು. ಅಲ್ಲಿಯಾದರೂ ಅವನಿಗೆ ವಿಶೇಷವಾದ ಆತಂಕವಾಗಲಿಲ್ಲ. ಹೋಗ್ಲಿಯಾನಾ ಎಂಬ ಕೋಟೆಯವರು ಮಾತ್ರ ಶಿಕಂದರನಿಗೆ ಬೇಗನೆ ಒಳಗಾಗಲಿಲ್ಲ. ಕೋಟೆಯು ಅಸಾಧ್ಯವಾದ ಪರ್ವತದ ಅತ್ಯುನ್ನತವಾದ ಶಿಖರದ ಮೇಲೆ ಕಟ್ಟಿದ್ದಾಗಿತ್ತು. ಒಳಗೆ ಯಥೇಷ್ಟವಾದ ನೀರಿನ ಸಂಚಯವೂ ವಿಪುಲವಾದ ಅನ್ನ ಸಾಮಗ್ರಿಯ ಕುಂಬಿರುವದರಿಂದ ತಮಗೆ ಶಿಕಂದರನಿಂದ ಭಯವಿಲ್ಲೆಂದು ಆ ಜನರು ದೃಢವಾಗಿ ನಂಬಿದ್ದರು, “ನನಗೆ ಶರಣು ಬನ್ನಿರಿ ಇಲ್ಲವಾದರೆ ನಿಮಗೆ ಪ್ರಾಯಶ್ಚಿತ್ತವನ್ನು ವಿಧಿಸದೆ ಬಡೆನೆ”೦ದ ಬಾದಶಹನು ಹೇಳಿ ಕಳಿಸಲಾಗಿ ಅಲ್ಲಿಯ ದುರ್ಗಾಧಿಪತಿಯು ಅಪಹಾಸಗೈದು ನಕ್ಕು “ ಶಿಕಂದರನಿಗೆ ಪಕ್ಕಗಳಿದ್ದರೆ ನಮ್ಮ ಕೋಟೆಗೆ ಹಾರಿಬರುವನಷ್ಟೆ?" ಎಂದು ಪ್ರತ್ಯುತ್ತರವನ್ನಿತ್ತನು. ಸುತ್ತಲಿನ ಪ್ರಾಂತವೆಲ್ಲ ತನ್ನದಾಗಿರಲು ಆ ಕೋಟೆಯವರ ಹೆಮ್ಮೆಯಷ್ಟ ರದೆಂದು ಶಿಕ೦ದರನು ನಂಬಿದ್ದರೂ ಆ ಅಲ್ಪ ಜನರು ತನಗೆ ಅಣಕಿಸಿದರೆಂಬ ಮುಳ್ ಬೇನೆಗಾಗಿ ಅವನು ಆ ಕೋಟೆಯನ್ನು ತೆಗೆದುಕೊಂಡೇ ಮುಂದಕ್ಕೆ ಸಾಗತಕ್ಕದ್ದೆಂಬ ಪ್ರತಿಜ್ಞೆ ಮಾಡಿದನು. ಸಂಗಡಲೇ ಅನೇಕ ಜನ ಸಾಹಸಿಗಳು ರಾತ್ರಿಯ ಕಗ್ಗತ್ತಲೆಯಲ್ಲಿ ಹೊರಟು ಆ ಪರ್ವತವನ್ನು ಸುತ್ತು ಹಾಕಿ ಕೋಡುಗಲ್ಲುಗಳ ಸಂದಿನಲ್ಲಿ ಕಬ್ಬಿಣದ ಗೂಟಗಳನ್ನು ಒಡೆದು ಹತ್ತುತ್ತಲೂ ಆಧಾರ ಕಂಡಲ್ಲಿ ನೂಲೇಣಿಗಳನ್ನು ತೊಡಕಿಸುತ್ತಲೂ ಆ ಗಿರಿಯ ಮಸ್ತಕವನ್ನೇರಿ ಕೋಟೆಯ ಗೋಡೆಗೆ ಬಂದುಬಿಟ್ಟರು, ಗಗನಚುಂಬಿತವಾದ ಆ ಗಿರಿಶೃಂಗವನ್ನೇರಿದವರಿಗೆ ಕೋಟೆಯ ಗೋಡೆಗಳ ಪಾಡೇನು? ಆ ವೀರರು ಹಾವುಗಳ೦ತೆ ಗೋಡೆಗಳನ್ನೇರಿ, ಅಲ್ಲಿ ಶಿಕಂದರಬಾದಶಹನ ಧ್ವಜಾರೋಹಣವನ್ನು ಮಾಡಿ ಹುಯ್ಲಿಟ್ಟು ಕೂಗಿದರು. ಆ ಅಮಾನುಷವಾದ ಕೃತ್ಯವನ್ನು ಕಂಡು ಕೋಟೆಯೊಳಗಿನವರು ಬೆರಗಾಗಿ ಬೆದರಿ ಶಿಕಂದರನಿಗೆ ಶರಣಾಗತರಾದರು, ಈ ಸಮಾಚಾರವನ್ನರಿತಬಳಿಕಂತೂ ಹೇಡಿಗಳೂ ಶೂರರೂ ಕೂಡಿಯೇ ವಿಸ್ಮಯಗೊಂಡು ಶಿಕಂದನು ನಿಜವಾಗಿ ದೇವಶಾಂಶನ ಅಜೇಯನೂ ಆದ ಮಹತ್ಮನೆಂದು ಖಂಡಿತವಾಗಿ ನಂಬಿದರು. ಮುಂದೇನು? ಮತ್ತೆ ಸಿಂಗರದ ಮೆರವಣಿಗೆಯೆ?. ಹಾಗೆ ಮರೆಯುತ್ತೆ ಮೆರೆಯುತ್ತೆ ಬಾದಶಹನು ಶಕೀಲಾ (ತಕ್ಷಶಿಲಾ) ಎಂಬ ಹಿಂದೂ ರಾಜನ ರಾಜಧಾನಿಗೆ ಬಂದನು. ಆ ರಾಜನು (ಅವನ ಹೆಸರು ಕಲ್ಯಾಣನು) ಹಿಂದಸ್ಥಾನದ ಫುರುರಾಜನ (ಪೋರಸನ) ತಮ್ಮನು. ಕಲ್ಯಾಣನು (ಕಲ್ಯಾನಸನು) ಪುರುರಾಜನಿಗೆ ಅಂಜಿ, ದರಾಯಸನ ಆಶ್ರಯದಲ್ಲಿದ್ದು ಶ್ರವೃತ್ತಿಯಿಂದ ಜೀವಿಸುತ್ತಿದ್ದನು. ಶಿಕಂದರನ ಆಗಮನವು ಆ ದ್ರೋಹಿಯಾದ ಕಲ್ಯಾಣನಿಗೆ ಇಷ್ಟವೇ ಆಯಿತು. ಅವನು ಆ ಪರದೇಶಸ್ಥನಾದ ಅಭಿಯೋಗಿಯನ್ನು ಆದರದಿಂದ ಸತ್ಕರಿಸಿ ಅವನ ಕೈಯಿಂದ ತನ್ನ ಅಣ್ಣನ ಪರಾಭವವನ್ನು ಮಾಡಿಸುವಂಥ ಕುಮಾರ್ಗವನ್ನವಲಂಬಿಸಿದನು. ಶಿಕಂದರನು ಕಲ್ಯಾಣನ ಸಹಾಯದಿಂದ ಆಟಕ ನದಿಯನ್ನು ದಾಟಿಬಂದು ಪಂಜಾಬದಲ್ಲಿ ಸೇರಿದನು. ವೀರಾಗ್ರೇಸರನಾದ ಪುರುರಾಯನು ಸರಬಂದ ನಿರೋಧವನ್ನು ಮಾಡಲಿಕ್ಕೆ ದೊಡ್ಡದೊಂದು ಸೇನೆಯನ್ನು ಕಟ್ಟಿಕೊಂಡು ಝಲಮ ( ಹಿಡಿಸ್ಸಿಸ್ ) ನದಿಯ ತೀರಕ್ಕೆ ಬರುವಷ್ಟರಲ್ಲಿ, ಶಿಕಂದರನ. ಕಲ್ಯಾಣನ ಸಹಾಯದಿಂದ ಆ ನದಿಯನ್ನು ಕೂಡ ದಾಟಬಂದಿದ್ದನು. ಅಲ್ಲಿ ವೀರರಿಬ್ಬರ ನಡುವೆ ತುಮುಲವಾದ ಯುದ್ಧವು ನಡೆಯಿತು. ಹಿಂದವೀರರ ಪರಾಕ್ರಮವು ಗ್ರೀಕವೀರರ ಪರಾಕ್ರಮಕ್ಕೆ ಸರಿಯಾದದ್ದಾಗಿತ್ತು, ಜಯಾಪ ಜಯಗಳು ಹೊಯ್ದಾಡಿ ಸ್ಥಿರತೆಯನ್ನು ಕಾಣದಾದವು, ಶಿಕಂದರನು ಪುರುರಾಜನ ಪರಾಕ್ರಮವನ್ನು ಕೊಂಡಾಡಿದನು, ಪುರುರಾಜನಾದರೂ ಶಿಕಂದರನ ಸಾಹಸಕ್ಕೆ ತಲೆದೂಗಿದನು. ಹೀಗೆ ಕೆಲಕಾಲ ಸ್ಫೂರ್ತಿದಾಯಕವಾದ. ಯುದ್ಧವು ನಡೆದಿರಲು ಪುರುರಾಜನ ಸೇನೆಯಲ್ಲಿದ್ದ ಆನೆಗಳು, ಒಂದರೊಂದರ ಸೊಗಡಿನಿಂದ ಮದೋದ್ರಿಕ್ತವಾಗಿ ಮಾವುತರಿಗೆ ಆಸಕೊಳ್ಳದೆ ರಣಭೂಮಿಯಲ್ಲಿ ದಿಕ್ಕೆಟ್ಟು ಓಡಾಡಲಾರಂಭಿಸಿ, ಪುರುರಾಯನಕಾಲಾಳು ರಾವುತರನ್ನ ತುಳಿದಾಡಿದ್ದರಿಂದ ಸೇನೆಯಲ್ಲಿ ಬೆದರಿ ಕಂಡಕಂಡ ಕಡೆಗೆ ಓಡಲಾರಂಭಿಸಿತ್ತು. ಪ್ರತ್ಯಕ್ಷ ಪುರುರಾಜನ ಆನೆಯೇ ಬೆದರಿಹೋಗಿದ್ದರಿಂದ ಆ ರಾಜನು ತನ್ನ ಅಂಬಾರಿಯಿಂದ ಕೆಳಕ್ಕೆ ಹಾರಿಕೊಂಡನು. ರಾಜನ ಅಂಬಾರಿಯು ಬರಿದಾಗಿರುವದನ್ನು ಕಂಡಂತೂ ಸೇನೆಯು ಎದೆಯೊಡಕೊಂಡು ರಣಾಂಗಣವನ್ನು ಬಿಟ್ಟು ಓಡಲಾರಂಭಿಸಿತು. ಆಯತ್ತವಾಗಿ ಪ್ರಾಪ್ತವಾಗಿರುವ ಇಂಥ ಸುಸಂಧಿಯನ್ನು ಶಿಕಂದರನು ಕಳಕೊಳ್ಳುವನೆ ? ಅವನ ರಾವುತರು ಪುರು ರಾಯನ ಸೇನೆಯ ಮೇಲೆ ಧಾವಿಸಿಬಂದರು; ಚುಚ್ಚು ಗೋಲಿನ ಭಟರವ್ಯೂಹವೂ ಆರ್ಭಟಿಯಿಂದ ಓಡುತ್ತ ಬಂದಿತು, ಆ ವೀರರ ಆದೇಶದ ಹೊಡೆತಕ್ಕೆ (ಮೊದಲಿಗೇ ಭಯಭೀತರಾಗಿದ್ದ ) ಪುರುರಾಜನ ಸೈನ್ಯದವರು ಮಚ್ಚು ನುಚ್ಚಾಗಿ ಹೋದರು. ಪುರುರಾಜನು ಶಿಕಂದರನ ಕೈಗೆ ಸಿಕ್ಕು ಹೋದನು. ಅಂದಿನವರೆಗೂ ಶಿಕಂದರನು ತನಗೆ ಸಮಾನನಾದ ವೀರನನ್ನು ಕಂಡಿದ್ದಿಲ್ಲ. ಪುರುರಾಜನ ಪರಾಕ್ರಮಕ್ಕೆ ಮೆಚ್ಚಿದವನಾದ ಆ ಸಾರ್ವಭೌಮನು ತನ್ನ ಎದುರಾಳಿಯನ್ನು ಕುರಿತು “ನಿಮ್ಮನ್ನು ಯಾವ ಪ್ರಕಾರದಿಂದ ಸತ್ಕರಿಸಬೇಕೆಂ"ದು ಕೇಳಲಾಗಿ "ಮಹಾರಾಜನಿಗುಚಿತವಾದ ರೀತಿಯಿಂದ" ಎಂದು ಆ ಶೂರನಾದ ನೃಪನು ಗಾಂಭೀರ್ಯದಿಂದ ಹೇಳಿದನು. ಶಿಕಂದರನು ಪುರುರಾಜನ ದರ್ಪವನ್ನೂ ಅವನ ವೀರಶ್ರೀರಂಜಿತವಾದ ಮುಖಕಾಂತಿಯನ್ನೂ ಕಂಡು ಬಹು ಪ್ರೀತನಾಗಿ ಆಕ್ಕರತೆಯಿಂದ ಅವನನ್ನು ಅಪ್ಪಿಕೊಂಡು ತನ್ನ ಅರ್ಧಾ ಸನದಲ್ಲಿ ಕುಳ್ಳಿರಿಸಿಕೊಂಡು ಸತ್ಕರಿಸಿದನು. ಪುರುರಾಜನ ರಾಜ್ಯವನ್ನು ಅವನಿಗೆ ಬಿಟ್ಟು ಕೊಟ್ಟು ಶಿಕಂದರನು ಅವನೊಡನೆ ಸ್ನೇಹವನ್ನು ಇಳಿಸಿಕೊಂಡನು.


ಮಹಾರಾಣಾ ಪ್ರತಾಪಸಿಂಹ,

efararfa faragha zarà Tågut

GRIEGA!

37T: Faturfa aga mat at t: falarna felfalda ll ಅಗ್ನಿಯ ಜ್ವಾಲೆಯನ್ನು ಬಲಾತ್ಕಾರದಿಂದ ಅಧೋಮುಖವಾಗಿ ಮಾಡ ಬೇಕೆಂದು ಎಷ್ಟು ಮಾಡಿದರೂ ಅದು ಉದಮ್ಮುಖವಾಗಿಯೇ 'ಪುಜ್ವಲಿಸು ವದು ; ಅದರಂತೆಯೇ ಧೈರ್ಯಶಾಲಿಯಾದ ಪುರುಷನು ಅನೇಕ ಸಂಕಟ ಗಳಿಂದ ಜರ್ಜರಿತನಾದರೂ ಅವನು ಅವುಗಳಿಗೆ ಈಡಾಗದೆ, ತನ್ನ ಶೀಲ ವನ್ನು ಕಾಯ್ದು ಕೊಳ್ಳುತ್ತಾನೆಂಬ ಅಭಿಪ್ರಾಯವು ಮೇಲಿನ ಪದ್ಯದಲ್ಲಿ ವ್ಯಕ್ತ ವಾಗಿದೆ, ಈ ಪದ್ಯಾರ್ಥದ ಸತ್ಯತೆ ಯನ್ನು ತೋರಿಸುವ ಅತ್ಯಂತ ಉಜ್ವಲಿತ ವಾದ ಉದಾಹರಣವೆಂದರೆ, ಮೇವಾಡದೇಶದ ರಾಣಾ ಪ್ರತಾಪಸಿಂಹನ ಚರಿತ್ರವು. ಸ್ವದೇಶಾಭಿಮಾನದ ಸಂಚಾರವು ಯಾವ ಬಗೆಯದಾಗಿರು ಇದೆ, ಪ್ರಬಲರಾದ ಶತ್ರುಗಳಿಂದ ದುರ್ದೈವದಿಂದಲೂ ಸುತ್ತು ಗಟ್ಟ ಲ್ಪಟ್ಟ ರೂ ಅವುಗಳನ್ನು ಗಣನೆಗೆ ತಾರದೆ, ಅವುಗಳ ಪೇಚಿನೊಳಗಿಂದ ನಿಶ್ಚಲವಾದ ಧೈರ್ಯದಿಂದಲೂ ದೃಢನಿಶ್ಚಯದಿಂದಲೂ ಪರಾಕ್ರಮಶಾಲಿ ಯಾದ ಪುರುಷನು ಹೇಗೆ ಪಾರಾಗುತ್ತಾನೆ, ನಾನಾವಿಧವಾದ ವಿಪತ್ತುಗಳೂ ಸಂಕಟಗಳೂ ಬೆನ್ನಟ್ಟಿದರೂ ಅವುಗಳಿಗೆ ಅಭಿಮುಖವಾಗಿ ನಿಂತು ಧೀರೋ ದಾತ್ತ ನಾದ ಪುರುಷನು ತನ್ನ ವ್ರತವನ್ನು ಹೇಗೆ ಪರಿಪಾಲಿಸುತ್ತಾನೆ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದ್ದರೆ ಮೇವಾಡದ ರಾಣಾ ಪ್ರತಾಪಸಿಂಹನ ಚರಿತ್ರವನ್ನು ಅವಲೋಕಿಸಬೇಕು. ಪ್ರತಾಪಸಿಂಹನು ಇ. ಸ. ೧೫೭೨ ನೇ ಇಸ್ವಿಯಲ್ಲಿ ಮೇವಾಡ ದೇಶದ ಪಟ್ಟದ ಮೇಲೆ ಕುಳಿತನು. ಆದರೆ { ಗಡೋವೆ ಗಡ ಚಿತೊಡಗಡ ) ಎಂದು ರಜಪೂತಸ್ಥಾನದಲ್ಲಿ ಪ್ರಸಿದ್ಧಿಯನ್ನು ಹೊಂದಿದ ಹಾಗೂ ರಜಪೂತರ ಅಭಿಮಾನಕ್ಕೆ ಅನೇಕ ಸಂಗತಿಗಳಿಂದ ಕಾರಣವಾಗಿದ್ದ ಚಿತೋಡಗಡದ ಪಟ್ಟ ವನ್ನು ಅವನು ಅಲಂಕರಿಸಲಿಲ್ಲ. ಪ್ರತಾಪಸಿಂಹನ ತಂದೆಯಾದ ಉದೇ ಸಿಂಗನು ಯಾವವನ್ನು ಸ್ವಾವಿಭಕ್ತಳಾದ ಪನ್ನಾ ತಾಯಿಯು ತನ್ನ ಹೊಟ್ಟೆಯ ಮಗನನ್ನು ಶತ್ರುವಿಗೆ ಬಲಿ ಕೊಟ್ಟು ಬದುಕಿಸಿದ್ದಳೊ? ಅವನು- ಈ ಚಿತೋಡಗಡ ವನ್ನು ೧೫೬೮ ನೇ ಇಸ್ವಿಯಲ್ಲಿ ಶತ್ರುಗಳ ಸ್ವಾಧೀನಮಾಡಿದ್ದನು. ಇವನಂಥ ನಿರ್ಬಲನ ಮಂದನೂ ಆದ ರಾಜನು ರಜಪುತಾನದಲ್ಲಿ ದೊರೆಯುವದು ದುರ್ಲಭವೇ ಸರಿ. ಉದೇಸಿoಗ ಹಾಗೂ ಅಕಬರ ಈ ಉಭಯತರು ಒಂದೇ ಕಾಲದಲ್ಲಿ ಜನ್ಮವನ್ನು ತಾಳಿದರು ; ಮತ್ತು ಉಭಯ ತರ ಬಾಲ್ಯವೂ ಅತ್ಯಂತ ಕಷ್ಟಮಯವಾದ ಸ್ಥಿತಿಯಲ್ಲಿ ಗತಿಸಿತು. ಆದರೆ, ಅವರಲ್ಲೊಬ್ಬನು ತನ್ನ ಪಿತ್ರಾರ್ಜಿತ ರಾಜ್ಯವನ್ನೂ ಕೀರ್ತಿಯನ್ನೂ ಕಳೆದುಕೊಂಡರೆ, ಮತ್ತೊಬ್ಬನು ಅತ್ಯಂತ ವಿಸ್ತ್ರತವಾದ ರಾಜ್ಯವನ್ನೂ ಕೀರ್ತಿಯನ್ನೂ ಸಂಪಾದಿಸಿದನು, ಚಿತೋಡಗಡವು ಶತ್ರುಗಳ ಕೈವಶವಾದಂದಿನಿಂದ ಮೇವಾಡ ದೇಶದ ರಜಪೂತರ ಶೂರತ್ವದ ಕೀರ್ತಿಯಾದರೂ ಅಳಿದು ಹೋಯಿತು. ಆದರೆ, ಅಕಬರನ ಕೈವಶವಾಗಿದ್ದ ಚಿತೋಡಗಡವನ್ನು ಪುನಃ ಸಂಪಾದಿಸಿ ಮೇವಾಡ ದೇಶದೊಳಗಿಂದ ಮೊಗಲರನ್ನು ಹೊರಗೆ ಹಾಕುವ ದೃಢನಿಶ್ಚಯವನ್ನು ಪ್ರತಾಪಸಿಂಹನು ಮಾಡಿದ್ದನು. ಆದರೆ ಪ್ರತಾಪಸಿಂಹನು ರಾಜ್ಯ ಸೂತ್ರವನ್ನು ಧರಿಸುವ ಪೂರ್ವದಲ್ಲಿಯೇ, ರಾಜಸ್ಥಾನದೊಳಗಿನ ರಾಜಮನೆತನದವರನ್ನು ಅಕಬರನು ತನ್ನ ಪರಾಕ್ರಮದಿಂದ ಬಹುತರವಾಗಿ ಪಾದಾಕಾ೦ತ ಮಾಡಿ, ಅವರನ್ನು ತನ್ನ ಉದಾರವಾದ ಸ್ವಭಾವದಿಂದಲೂ ಚಾತುರ್ಯದಿಂದಲೂ ಮೋಹಿಸಿಬಿಟ್ಟಿದ್ದನು. ಬರ ಬರುತ್ತೆ ಅಕಬರನ ಮೋಹಜಾಲಕ್ಕೆ ಒಳಗಾದ ಈ ಕ್ಷೇತ್ರನಿಷ್ಟುರರಾದ ರಜ ಪೂತರು ತಮ್ಮ ಹೆಣ್ಣು ಮಕ್ಕಳನ್ನು ಅಕಬರನಿಗೂ ಅವನ ಮಕ್ಕಳಿಗೂ ಕೊಟ್ಟು ಅವನ ಮನೆತನದ ಕೂಡ ಶರೀರ ಸಂಬಂಧವನ್ನು ಬೆಳೆಸಹತ್ತಿದರು. ಅಕಬರನ ಸಲುವಾಗಿ ಬೇಕಾದ ಪ್ರದೇಶಕ್ಕೆ ಹೋಗಿ ಶತ್ರುಗಳ ಕೂಡ ಆದಾಡಿ ಅವರನ್ನು ಅಕಬರನಿಗೆ ಅಂಕಿತರನ್ನಾಗಿ ಮಾಡಹತ್ತಿದರು. ಜಯಪೂರ, ಜೋಧಪೂರ, ಬಿಕಾನೇರ ಮುಂತಾದ ಪ್ರಾಂಶಗಳ ರಾಜರು ಅಕಬರನ ಸೇನಾನಾಯಕರೂ, ಸುಭೇದಾರರೂ, ಮನಸದಾರರ ಆದರು, ಪ್ರಥಮತಃ ಇವೆಲ್ಲ ಸಂಗತಿಗಳು ಪ್ರತಾಪಸಿಂಹನ ಲಕ್ಷಕ್ಕೆ ಬರ ಅಲ್ಲ, ಪೂರ್ವದ ಸಾಂಪ್ರದಾಯಕ್ಕನುಸಾರವಾಗಿ, ಮೇವಾಡದ ಅರಸನು ತುರ್ಕರ ಮೇಲೆ ಶಸ್ತ್ರವನ್ನೆತ್ತಿದರೆ ರಜಪೂತ ರಾಜರೆಲ್ಲರೂ ರಣಸ್ಪಂಭದ ಸುತ್ತಲೂ ನೆರೆದು ಶತ್ರುಗಳ ಕೂಡ ಯುದ್ಧವನ್ನು ಮಾಡುವರೆಂದು ಪ್ರತಾಪ ಸಿಂಹನು ತಿಳಿದುಕೊಂಡಿದ್ದನು. ಆದರೆ ಈ ತನ್ನ ತಿಳುವಳಿಕೆಯು ತಪ್ಪಿನದಾಗಿತ್ತೆಂದು ಮುಂದೆ ಅವನ ನಿದರ್ಶನಕ್ಕೆ ಬಂದಿತು. ಪ್ರತಾಪಸಿಂಹನು ಅಕಬರನೊಡನೆ ಬಹಿರಂಗವಾಗಿ ವೈರವನ್ನು ಆರಂಭಿಸಿದನು. ಆದರೆ ಯಾವ ರಜಪೂತ ಸಂಸ್ಥಾನಿಕನಾದರೂ ಪ್ರತಾಪನ ಪಕ್ಷವನ್ನು ಕಟ್ಟಲಿಲ್ಲ. ಇಷ್ಟೇ ಅಲ್ಲ, ಇದಕ್ಕೆ ಪ್ರತಿಯಾಗಿ, ರಾಜಾ ಮಾನಸಿಂಗ ಮುಂತಾದ ರಜಪೂತ ರಾಜರು ಅಕಬರನ ಸೈನ್ಯವನ್ನು ಸೇರಿ ಪ್ರತಾಪಸಿಂಹನ ಕೂಡ ಯುದ್ಧ ಮಾಡಲು ಸನ್ನದ್ಧರಾದರು. ಪ್ರತಾಪಸಿಂಹನ ಪ್ರತ್ಯಕ್ಷ ತಮ್ಮನಾದ ಸಾಗರಜೀ ಎಂಬವನೂ ಕೂಡ ಅಕಬರನಿಗೆ ಸಹಾಯಕನಾಗಿ, ಅವನಿಂದ 'ಚಿತೋಡದ ರಾಣಾ' ಎಂಬ ಬಿರುದನ್ನು ಸಂಪಾದಿಸಿದನು. ಅವನ ಮತ್ತೊಬ್ಬ ತಮ್ಮನಾದ ಸೂಕ್ತ ನೆಂಬವನು ಅಕಬರನ 'ಮನಸಬದಾರ'ನಾದನು. ಈ ರೀತಿಯಾಗಿ ಮೊಗಲರಂಥ ಪ್ರಚಂಡವಾದ ಬಾದಶಾಹೀ ಸತ್ತೆಯ ಕೂಡ ಹೂಡಿದ ಕದನದಲ್ಲಿ ಪ್ರತಾಪಸಿಂಹನಿಗೆ ತನ್ನ ಸ್ವಂತ ಪರಾಕ್ರಮದ ಹೊರತು ಅನ್ಯ ರಜಪೂತ ರಾಜರ ಸಹಾಯವು ಯಾವ ಬಗೆಯಿಂದಲೂ ದೊರೆಯಲಿಲ್ಲ. ತುರ್ಕರ ಮುಂದೆ ನಿಂತು, ನಮ್ರವಾಗಿ ತಲೆಯನ್ನು ಬಾಗಿಸಿ ತನ್ನ ದೇಶದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವದಕ್ಕಿಂತ ಸ್ವಾತಂತ್ರ್ಯದ ಸಲುವಾಗಿ ಹೋರಾಡಿ ಧಾರಾತೀರ್ಥದಲ್ಲಿ ಮರಣ ಹೊಂದುವದು ಲೇಸೆಂದು ಅವನ ಮನಸ್ಸಿನ ನಿಶ್ಚಯವಾಗಿತ್ತು. ಪ್ರತಾಪಸಿಂಹನು ಮೊಗಲರಿಗೆ ಎದುರಾಗಿ ನಿಲ್ಲುವದಕ್ಕೆ ತನ್ನ ಕೈಲಾದ ಮಟ್ಟಿಗೆ ಸೈನ್ಯದ ಸಿದ್ಧತೆಯನ್ನು ಮಾಡತೊಡಗಿದನು. ಮೊಟ್ಟಮೊದಲು ತನ್ನ ಪ್ರಜರನ್ನು ಆರವಲೀ ಪರ್ವತದ ಸುಸಂರಕ್ಷಿತವಾದ ಪ್ರದೇಶದಲ್ಲಿ ಒಯ್ದು, ಆ ಬಳಿಕ ಬಯಲು ಭೂಮಿಯೊಳಗಿನ ಪ್ರಾಂತವನ್ನೆಲ್ಲ ನಾಶ ಪಡಿಸಿ, ಸಮುದ್ರದ ತೆರೆಗಳಂತೆ ಏರಿ ಬರುವ ಮೊಗಲರ ಸೈನ್ಯವನ್ನು ವಿರೋಧಿಸುವದಕ್ಕಾಗಿ 'ಹಳದಿ ಘಾಟ'ದ ಗುಡ್ಡಗಾಡು ಪ್ರದೇಶದಲ್ಲಿ ಯುದ್ಧಾನುಕೂಲವಾದ ಸ್ಥಳಗಳನ್ನು ನೋಡಿ, ಪ್ರತಾಪಸಿಂಹನು ಅಲ್ಲಿ ತನ್ನ ಮೇವಾಡೀ ರಜಪೂತರನ್ನೂ ಭಿಲ್ಲರನ್ನೂ ನಿಲ್ಲಿಸಿದನು.

ಅಕಬರನು ತನ್ನ ಮಗನಾದ ಸೆಲೀಮನಿಗೆ ಮೊಗಲ ಸೈನ್ಯದ ಅಧಿಪತ್ಯವನ್ನು ಕೊಟ್ಟು ಯುದ್ಧಕ್ಕೆ ಕಳಿಸಿದ್ದನು. ಅಕಬರನ ಪ್ರಸಿದ್ದ ಸೇನಾ ನಾಯಕನಾದ ರಾಜಾ ಮಾನಸಿಂಗನೂ ತನ್ನ ಹೆಣ್ಣು ಮಕ್ಕಳನ್ನು ತುರ್ಕರಿಗೆ ಕೊಟ್ಟು ಅವರ ಕೂಡ ಸಂಬಂಧವನ್ನು ಮಾಡಿದ್ದಕ್ಕಾಗಿ ಪ್ರತಾಪನು ಅವನ ನಿರ್ಭತ್ಸನೆಯನ್ನು ಮಾಡಿದ್ದನು. ಇದರಿಂದ ಅವಮಾನಿತನಾದಂತಾದ ರಾಜಾ ಮನಸಿಂಗನು"ಪ್ರತಾಪನ ಗರ್ವವನ್ನು ಖಂಡಿಸದಿದ್ದರೆ ನಾನು ಮಾನಸಿಂಗನಲ್ಲ” ಎಂದು ಪ್ರತಿಜ್ಞೆ ಮಾಡಿದ್ದನು ಮೇವಾಡದ ಬಯಲು ಪ್ರದೇಶಕ್ಕೆ ಬರುವದರೊಳಗಾಗಿಯೇ ಆ ಪ್ರದೇಶವೆಲ್ಲ ನಿರ್ಜನವಾಗಿಹೋಗಿತ್ತು.

ಸೆಲೀಮನು ಪ್ರತಾಪಸಿಂಹನ ರಾಜಧಾನಿಯಾದ ಕವಳಮೇರದ ಮೇಲೆ ಹಳದೀಘಟ್ಟದ ಇಕ್ಕಟ್ಟಿನ ಮಾರ್ಗವಾಗಿ ಸಾಗಿವಡೆದನು. ಘಟ್ಟದ ಬಾಯಿಗೆ ಪ್ರತಾಪನು ತನ್ನ ಸೈನ್ಯ ಸಮೇತವಾಗಿ ನಿಂತಿದ್ದನು. ಪ್ರತಾಪಸಿಂಹನ ತಲೆಯಮೇಲೆ ಛತ್ರವಿದ್ದು, ಹತ್ತಿರದಲ್ಲಿಯೇ ಅವನ ಸುವರ್ಣಾದಿತ್ಯಾಂಕಿತವಾದ ರಕ್ತ ವರ್ಣದ ಧ್ವಜಸಟವು ಅಂತರಿಕ್ಷದಲ್ಲಿ ಸುಳಿದಾಡುತ್ತಿತ್ತು. ಘಟ್ಟದಲ್ಲಿ ಮೊಗಲರ ಪ್ರವೇಶವಾಗಲು, ರಜಪೂತರು ಅವರನ್ನು ಸುತ್ತು ಗಟ್ಟಿ ಯುದ್ಧವನ್ನು ಪ್ರಾರಂಭಿಸಿದರು, ಮಾನಸಿಂಗನನ್ನು ಬೆನ್ನಟ್ಟಿ ಅವನಿಗೆ ತನ್ನ ಶಸ್ತ್ರದ ಪ್ರತಾಪವನ್ನು ತೋರಿಸಿ ನಾಚಿ ಸಬೇಕೆಂದು ಪ್ರತಾಪಸಿಂಹನು ಅವನನ್ನು ಶೋಧಿಸಹತ್ತಿದನು. ಆದರೆ ಅವನು ಎಲ್ಲಿಯೂ ತಪ್ಪಿಸಿಕೊಂಡು ಶತ್ರುವಿಗೆ ಮೊರೆಯನ್ನ ತೋರಿಸಲಿಲ್ಲ. ಬಳಿಕ ಪ್ರತಾಪನು ಯಾವ ಸ್ಥಳದಲ್ಲಿ ಸೆಲೀಮನು ಆನೆಯನ್ನೇರಿಕೊಂಡು ತನ್ನ ಸೈನ್ಯದವರನ್ನು ಉತ್ತೇಜಿಸುತ್ತಿದ್ದನೋ ಆ ಸ್ಥಳಕ್ಕೆ ಹೋಗಬೇಕೆಂದು ಯೋಚಿಸಿ, ಶತ್ರು ಸೈನ್ಯದವರ ಸಾಲುಗಳನ್ನು ಮುರಿಯುತ್ತ ಮುರಿಯುತ್ತ ಸಲೀಮನ ಮುಂದೆ ಬಂದು ನಿಂತನು. ಸೆಲೀಮನ ಜೀವಕ್ಕೆ ಜೀವ ಕೊಡುವ ಸೈನಿಕರ ಶರತ್ವವು ಪ್ರತಾಪನ ಪರಾಕ್ರಮವನ್ನು ಕಟ್ಟಲು ಸಮರ್ಥವಾಗಲಿಲ್ಲ. ಪ್ರತಾಪನ ಕುದುರೆಯು ಸೆಲೀನನ ಆನೆಯ ಕಾಲ ಮೇಲೆ ತನ್ನ ಮುಂಗಾಲುಗಳನ್ನಿಟ್ಟುಕೊಂಡು ನಿಂತಿತು. ಕೂಡಲೆ ಪ್ರತಾಪನು ತನ್ನ ಭಾಲೆಯಿಂದ ಸಲೀಮನನ್ನು ಬಲವಾಗಿ ಇರಿದನು. ಈ ಇರಿತದಿಂದ ಸಲೀಮನು ಮೃತನಾಗಶಕ್ಕವನೇ ! ಆದರೆ ಅವನ ಅಂಬಾರಿಯು ಉಕ್ಕಿನ ದಪ್ಪಾದ ತಗಡುಗಳಿಂದ ಆಚ್ಛಾದಿತವಾದ್ದರಿಂದ ಭಾಲೆಯ ಅಲಗು ಮೊಂಡಾಗಿ, ಆ ಇರಿತವು ನಿಷ್ಪಲವಾಯಿತು. ಅಷ್ಟರಲ್ಲಿ ಆನೆಯ ಮಾವುತನು ಕೊಲ್ಲಲ್ಪಟ್ಟನು, ಆನೆಯು ಅನಾವರವಾಗಿ ಓಡಹತ್ತಿತು. ಆಗ್ಗೆ ಆ ಸ್ಥಳದಲ್ಲಿ ಒಳ್ಳೇ ತುಮುಲವಾದ ಯುದ್ಧವಾಯಿತು. ಸೆಲೀಮನ ರಕ್ಷಣೆಗಾಗಿ ಮೊಗಲರೂ, ಪ್ರತಾಪಸಿಂಹನ ಸಂರಕ್ಷಣೆಗಾಗಿ ರಜಪೂತರೂ, ಪರಸ್ಪರರ ಮೇಲೆ ಕಡಿದು ಬಿದ್ದ ರು. ಈ ಘನಘೋರವಾದ ಸಂಗ್ರಾಮದಲ್ಲಿ ಪ್ರತಾಪನಿಗೆ ಏಳು ಗಾಯಗಳು ತಗಲಿದವು ; ಆದರೂ ಅವನು ಸೆಲೀಮನ ಬೆನ್ನು ಬಿಡಲಿಲ್ಲ; ಹಾಗೂ ತನ್ನ ಛತ್ರವನ್ನೂ, ರಕ್ತ ವರ್ಣದ ಧ್ವಜವನ್ನು ದೂರ ಮಾಡಲಿಲ್ಲ. ಅದರಿಂದ ಪ್ರತಾಪನ ಧ್ವಜವು ಕಾಣಬರುತ್ತಿದ್ದ ಸ್ಥಳಕ್ಕೆ ಮೊಗಲರು ರಭಸದಿಂದ ಸಾಗಹತ್ತಿದರು. ಇದನ್ನು ಕಂಡು ಝಾಲಾದ ಠಾಕುರನಾದ ಮಾನಾ ಎಂಬವನು ಪ್ರತಾಪನ ಛತ್ರವನ್ನೂ ಧ್ವಜವನ್ನೂ ತನ್ನ ವಶಕ್ಕೆ ತೆಗೆದುಕೊಂಡು ಒಂದು ಬಿಕ್ಕಟ್ಟನ ಸ್ಥಳಕ್ಕೆ ಪ್ರತಾಪನ ಮೇಲಾಗುತ್ತಿದ್ದ ಹಲ್ಲೆಗಳನ್ನು ತನ್ನ ಮೈ ಮೇಲೆ ತೆಗೆದುಕೊಂಡನು. ಈ ರೀತಿಯಾಗಿ ಆ ಸ್ವಾಮಿಭಕ್ತ ಠಾಕುರನು ತನ್ನ ರಾಜನ ಮುಕ್ತತೆಯನ್ನು ಮಾಡಲು, ಉಳಿದ ರಜಪೂತ ಸರದಾರರು ಪ್ರತಾಪನನ್ನು ರಣಾಂಗಣದಿಂದ ಹೊರಗೆ ಕರೆದೊಯ್ದರು. ಇತ್ತ ಮಾನಾನು ತನ್ನ ಶೂರ ಸೈನಿಕರೊಂದಿಗೆ ಮರಣ ಹೊಂದಿದನು ; ಹಾಗೂ ತನ್ನ ಪ್ರಾಣವನ್ನು ಸ್ವಾಮಿ ಭಕ್ತಿಗಾಗಿ ವೆಚ್ಚ ಮಾಡಿದನು.

ಮೊಗಲರ ಅಸಂಖ್ಯವಾದ ತೋಫುಗಳ, ಸವಾರರ ಹಾಗೂ ಕಾಲಾಳುಗಳ ಮುಂದೆ ರಜಪೂತರು ತೋರಿಸಿದ ಪ್ರತಾ ಕ್ರಮವು ಎಷ್ಟೊತ್ತು ತಾಳುವದು? ಈ ಹಳದೀ ಘಟ್ಟದ ಯುದ್ಧದಲ್ಲಿ ಇಪ್ಪತ್ತೆರಡು ಸಾವಿರ ರಜಪೂತರು ಪ್ರತಾಪನ ಧ್ವಜದ ಸುತ್ತಲೂ ನೆರೆದಿದ್ದರು. ಇವರಲ್ಲಿ ಎಂಟು ಸಾವಿರ ಜನರು ಮಾತ್ರ ಜೀವದಿಂದುಳಿದರು: ಜಾಣತನದಿಂದಲೂ ಉತ್ಸಾಹದಿಂದಲೂ ತನ್ನ ಯಜಮಾನನ ಸೇವೆಯನ್ನು ಮಾಡಿದ 'ಚೇತಕ ' ಎಂಬ ಹೆಸರಿನ ಕೃಷ್ಣವರ್ಣದ ವಾಜಿಯು ಪ್ರತಾಪನ ರಕ್ಷಣಾರ್ಥವಾಗಿ ಹರಿಹಳ್ಳಗಳನ್ನು ಹಾರುತ್ತ ಹಾರುತ್ತ ತನ್ನ ಯಜಮಾನನ ರಕ್ಷಣೆಯನ್ನು ಮಾಡುತ್ತಲೇ ಇತ್ತು. ಆದರೆ ಇಷ್ಟರಲ್ಲಿ ಶತ್ರುಗಳು ತೀರ ಸಮಾಸಕ್ಕೆ ಬಂದರು. ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ಚೇತಕವು ಒಂದು ಅಗಲವಾದ ಹರಿಯನ್ನು ಜಾರಿ ತನ್ನ ಯಜಮಾನನನ್ನು ಆಚೆಯ ದಂಡೆಗೆ ಒಯ್ದು ಬಿಟ್ಟಿತು. ಆದರೆ ಪ್ರತಾಪನಂತೆ ಚೇತಕವಾದರೂ ಯುದ್ಧದಲ್ಲಿ ಗಾಯಪಟ್ಟಿತ್ತು. ಪ್ರತಾಪನನ್ನು ಬೆನ್ನಟ್ಟದ ಶತ್ರುಗಳು ತೀರ ಸಮೀಪಕ್ಕೆ ಬರಲು, ಅಷ್ಟರಲ್ಲಿ 'ಎಲೈ ಕಂಗುದುರೆಯ ಮೇಲಿನ ಸವಾರನೇ, ನಿಲ್ಲ!” ಎಂದು ಸ್ವಭಾಷೆ ಯಲ್ಲಿ ಪ್ರತಾಪನನ್ನುದ್ದೇಶಿಸಿ ಯಾರೋ ಕೂಗಿದಂತಾಯಿತು; ಹಿಂದುರಿಗಿ ನೋಡುತ್ತಾನೆ, ತನ್ನ ತಮ್ಮನಾದ ಸೂಕ್ತನು ಓಡಿಬರುತ್ತಲಿದ್ದಾನೆ. ಸೂಕ್ತನು 'ಫಿತೂರ'ನಾಗಿ ಆಕಬರನನ್ನು ಕೂಡಿದ್ದರೂ ಈಗ್ಗೆ ತನ್ನ ಅಣ್ಣನಾದ ಮೇವಾಡದ ಅರಸನು ಏಕಾಂಗಿಯಾಗಿ ಓಡುತ್ತಿರುವದನ್ನೂ ಇಬ್ಬರು ಪಠಾಣರು ಅವನ ಬೆನ್ನು ಹತ್ತಿರುವದನ್ನೂ ನೋಡಿ, ಅವನ ಮನಸ್ಸು ಪಶ್ಚಾತ್ತಾಪದಿಂದಲೂ, ಬಂಧುಪ್ರೇಮದಿಂದಲೂ ಕರಗಿತು. ಸೂಕ್ತನು ಆ ಇಬ್ಬರೂ ಪಠಾಣರನ್ನು ಛೇದಿಸಿ ತನ್ನ ಅಣ್ಣನನ್ನು ಉಳಿಸಿದನು. ಇಂಥ ಗಂಡಾಂತರದ ಸಮಯದಲ್ಲಿ ತನ್ನ ತಮ್ಮನ ತನ್ನ ರಕ್ಷಣೆಗಾಗಿ ಬಂದದ್ದನ್ನು ನೋಡಿ ಪ್ರತಾಪನು ಸದ್ದಿತನಾದನು. ಬಂಧುಪ್ರೇಮದಿಂದ ಪರಸ್ಪರರು ಪರಸ್ಪರರನ್ನು ಆಲಿಂಗಿಸಿದರು. ಅಷ್ಟರಲ್ಲಿ ಪ್ರತಾಪನ ಚೇತಕ ಕ್ಕೆ ಗಾಯಗಳ ವೇದನೆಯಿಂದ ಬವಳಿ ಬಂದಂತಾಗಿ ಅದು ನೆಲಕ್ಕೆ ಬಿದ್ದು ಪ್ರಾಣವನ್ನು ಬಿಟ್ಟಿತು. ಚೇತಕವು ಜೀವವನ್ನು ಬಿಟ್ಟ ಸ್ಥಳದಲ್ಲಿ ಪ್ರತಾಪನು ಅದರ ಸ್ಮರಣಾರ್ಥವಾಗಿ ಒಂದು ಛತ್ರವನ್ನು ಕಟ್ಟಿಸಿದ್ದಾನೆ. ಅದು 'ಚೇತಕ - ಚಬುತ್ತಾ' ಎಂಬ ಹೆಸರಿನಿಂದ ಮೇವಾಡದಲ್ಲಿ ಪ್ರಸಿದ್ಧವಿದೆ.

ಈ ಪ್ರಕಾರವಾಗಿ ಹಳದೀ ಘಟ್ಟವ ಯುದ್ಧವು ಮುಗಿಯಿತು. ಥರ್ಮಾಪಲಿಯ ಗಿರಿಕಂದರದ ಬಿಕ್ಕಟ್ಟಿನ ಮಾರ್ಗದಲ್ಲಿ ಸತ್ಯಪ್ರತಿಜ್ಞನಾಗಿದ್ದ 'ಲಿವೊ ನಿಡಾಸ'ನ ಸ್ಟಾರ್ಟನ್ ಜನರು ಯಾವ ಆಭಿಮಾನವನ್ನೂ ಕಾರ್ಯವನ್ನೂ ತೋರಿಸಿದರೆ ಅಥವಾ ಘೋಡಖಿಂಡಿಯಲ್ಲಿ ಬಾಜಿ ಪ್ರಭುವಿನ ಮಾವಳೇ ಜನರು ಯಾವ ಸ್ವಾಮಿನಿಷ್ಠೆಯನ್ನೂ ಶೌರ್ಯವನ್ನೂ ತೋರಿಸಿದರೋ ಅದೇ ಪ್ರಕಾರದ ದೇಶಾಭಿಮಾನವನ್ನೂ ಶೌರ್ಯವನ್ನೂ ಸ್ವಾಮಿನಿಷ್ಠೆಯನ್ನೂ ಮೇವಾಡದ ರಜಪೂತರು - ಹಳದೀಘಾಟ ” ದಲ್ಲಿ ಜಗತ್ತಿನ ನಿದರ್ಶನಕ್ಕೆ ತಂದುಕೊಟ್ಟರು. ಈ ಯುದ್ಧದಲ್ಲಿ ಪ್ರತಾಪನ ಐನೂರು ಜನ ಆಪ್ತರೂ ಝಾಲಾದ ಠಾಕೂರನೂ ಆವನ ಇನ್ನೂರೈವತ್ತು ಜನರ ಪತನ ಹೊಂದಿದರು. ಸೆಬೀಮನಿಗೆ ಜಯಪ್ರಾಪ್ತಿಯಾದರೂ ಮುಂದೆ ಯುದ್ಧವನ್ನು ನಡೆಸುವುದು ಅಸಾಧ್ಯವಾಗಿ, ಪ್ರಾಪ್ತವಾದ ಜಯದ ಪ್ರೌಢೆಯನ್ನು ಮೆರೆಸುತ್ತ ಅವನು ಸ್ವದೇಶಕ್ಕೆ ತೆರಳಿದನು. ಇದರಿಂದ ಪ್ರತಾಪನಿಗೂ ಅವನ ಅನುಯಾಯಿಗಳಿಗೂ ಅವಕಾಶ ದೊರೆಯಿತು. ಪ್ರತಾಪನು ಕವಳಮೇರದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಶತ್ರುಗಳು ಮರಳಿ ಬಂದರೆ ಯುದ್ಧಮಾಡಲು ಸಿದ್ಧತೆ ನಡೆಸಿದನು.

ಮಳೆಗಾಲವು ತೀರಲು ಮೊಗಲ ಸೈನ್ಯವು ಮತ್ತೆ ಸಾಗಿಬಂದು ಕಮಳ ಮೇರಕ್ಕೆ ಅನೇಕ ದಿವಸಗಳ ವರೆಗೆ ಮುತ್ತಿಗೆಯನ್ನು ಹಾಕಿಕೊಂಡು ಕುಳಿತಿತು. ಕಮಳಮೇರದಲ್ಲಿದ್ದ ಭಾವಿಗಳಲ್ಲಿಯ ನೀರು ಕೆಟ್ಟು ಅವುಗಳಲ್ಲಿ ಕ್ರಿಮಿಗಳಾಗಹತ್ತಿದ್ದರಿಂದ ಪ್ರತಾಪನಿಗೆ ತನ್ನ ರಾಜಧಾನಿಯನ್ನು ಬಿಟ್ಟು ಕೊಡಬೇಕಾಯಿತು. ಇದರಿಂದ ಕವಳಮೆರವು ಅನಾಯಾಸವಾಗಿಯೇ ಶತ್ರುಗಳ ಕೈವಶವಾಯಿತು, ಶತ್ರುಗಳು ಪ್ರತಾಪನ ಬೆನ್ನು ಹತ್ತಿದರು. ಪ್ರತಾಪನು ಅರವಳಿ ಪರ್ವತದೊಳಗಿನ ವನಪ್ರದೇಶವನ್ನು ಆಶ್ರಯಿಸಿಕೊಂಡನು. ಆದರೆ ಅಲ್ಲಿಯ ಶತ್ರುಗಳು ಅವನಿಗೆ ಗಂಟುಬಿದ್ದರು, ರೀತಿಯಾಗಿ ಪ್ರತಾಪನು ಈ ದಿವಸ ಒಂದು ವನದಲ್ಲಿದ್ದರೆ ಮಾರನೇ ದಿವಸ ಬೇರೊಂದು ಕಾಡಿನಲ್ಲಿ, ಈ ಕ್ಷಣದಲ್ಲಿ ಒಂದು ಗಿರಿಗವರದಲ್ಲಿದ್ದರೆ ಮತ್ತೊಂದು ಕ್ಷಣದಲ್ಲಿ ಬೇರೊಂದು ಗುಡ್ಡದಲ್ಲಿ, ಹೀಗೆ ಸ್ಥಳಾಂತರವನ್ನು ಮಾಡುತ್ತ ಮಾಡುತ್ತ ತನ್ನ ಹಾಗು ತನ್ನ ಕುಟುಂಬದವರ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದನು. ವನ್ಯ ಪದಾರ್ಥ, ಅಥವಾ ತೃಣಧಾನ್ಯಗಳ ಮೇಲೆ ಅವನು ಕಾಲಕಳೆಯುತ್ತಿದ್ದನು. ಮಳೆಗಾಲದಲ್ಲಿ ಅವನಿಗೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತಿತ್ತು. ಆದರೆ ಆ ಕಾಲವು ಗತಿ ಸಲು ಪುನಃ ಮೊಗಲರು ಬೇರೆ ಬೇರೆ ಮಾರ್ಗಗಳಿಂದ ಬಂದು ಪ್ರತಾಪನಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು, ಕಷ್ಟಾಪೇಷ್ಟೆಗಳನ್ನೂ ಸಂಕಟಗಳನ್ನೂ ಗಣನೆಗೆ ತಾರದೆ ಪ್ರತಾಪನು ಮೇಲಿಂದ ಮೇಲೆ ಶತ್ರುಗಳ ಮೇಲೆ ಹಲ್ಲೆಯನ್ನು ಮಾಡಿ ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿದ್ದನು. ಇದೇ ಕ್ರಮವು ವರ್ಷಾನುವರ್ಷ ನಡೆಯುತ್ತಿತ್ತು. ಪ್ರತಾಪನು ತನಗೆ ಶರಣಾಗತನಾಗಿ ತನ್ನ ನಿಷ್ಕಂಟಕವಾದ ರಾಜ್ಯವನ್ನು ತಾನೇ ಆಳಲಿ' ಎಂಬದಾಗಿ ಅಕಬರನ ಆಗ್ರಹವಿತ್ತು. ಆದರೆ ಪ್ರತಾಪನು ಎಂಥ ಸತ್ಯನಿಷ್ಠನಾದ ಸ್ವದೇಶಭಕ್ತನು ಹಾಗೂ ಅಭಿ ಮಾನಿಯಾದ ಪುರುಷನು ? 'ನಾನು ಬಾಪ್ಪಾ ರಾವಣನ ವಂಶಜನಿದ್ದು ನನ್ನ ದೇಶವನ್ನು ಶತ್ರುಗಳ ಕೈಯಲ್ಲಿ ಕೊಟ್ಟು ಅವರ ಮುಂದೆ ನನ್ನ ಶಿರವನ್ನು ಬಾಗಿಸಬೇಕೆ? ಎಂದೂ ಆಗದು.' ಇಂಥ ಸ್ವಾಭಿಮಾನ ಪೂರ್ಣನಾದ ರಾಜನು ವ್ಯಾಘ್ರಾದಿ ಹಿಂಸ್ರ ಪಶುಗಳಿಂದ ಆಶ್ರಿತವಾದ ಅರಣ್ಯಗಳಲ್ಲಿ ಅನೇಕ ವರ್ಷಗಳನ್ನು ಕಳೆದನೇ ಹೊರತು ಅಕಬರನಿಗೆ ಶರಣಾಗತನಾಗಲಿಲ್ಲ. ಶತ್ರುಗಳ ಅಂಕಿತವಾದ ಸ್ವದೇಶದ ಮುಕ್ತತೆಯನ್ನು ಮಾಡದ ಹೊರತು, ಬೆಳ್ಳಿ-ಬಂಗಾರದ ಪಾತ್ರೆಗಳಲ್ಲಿ ಭೋಜನವನ್ನು ಮಾಡದೆ ಪತ್ರಾವಲಿಯಲ್ಲಿ ಭುಂಜಿಸುವ, ರಾಜಮಂದಿರಗಳಲ್ಲಿ ವಾಸಿಸದೆ ಪರ್ಣಕುಟೀರದಲ್ಲಿಕಾಲಹರಣ ಮಾಡುವ, ಗಾದಿ ಶುಭಾಮ'ಗಳ ಮೇಲೆ ಶಯನವನ್ನು ಮಾಡದೆ ಹುಲ್ಲು ಚಾಪೆಯ ಮೇಲೆ ದೇಹವನ್ನು ಅವಶ್ಯವಾದ ವಿಶ್ರಾಂತಿಗಾಗಿ ಚಲ್ಲುವ ಪ್ರತಿಜ್ಞೆಯನ್ನು ಪ್ರತಾಪನು ಮಾಡಿದ್ದನು. ಈ ಪ್ರತಿಜ್ಞೆಯನ್ನು ಅವನು ಯಾವಜೀವ ಪರಿಪಾಲಿಸಿದನು. ಅವನ ರಾಣಿಯ ಸೊಸೆಯ ವನ್ಯ ತೃಣಧಾನ್ಯಗಳ ಹಿಟ್ಟಿನ ಭಕ್ಕರಿಗಳನ್ನು ತಿಂದು ಜೀವಿಸುತ್ತಿದ್ದರು, ಆದರೆ ಅವು ಕೂಡ ಒಮ್ಮೊಮ್ಮೆ ದೊರೆಯದೆ ಎರಡೆರಡು ದಿವಸಗಳ ವರೆಗೆ ಉಪವಾಸದಲ್ಲಿಯೇ ಅವರು ಕಾಲಕಳೆಯುತ್ತಿದ್ದರು.

ಈ ರೀತಿಯಾಗಿ ಕಾಲಕ್ರಮಣ ಮಾಡುತ್ತಿರಲು ಒಂದಾನೊಂದು ದಿವಸ ಚಿಕ್ಕ ಮಗಳು ಒಂದು ಭಕ್ಕರಿಯೊಳಗಿನ ಅರ್ಧ ಭಾಗವನ್ನು ಮಧ್ಯಾನದಲ್ಲಿ ತಿಂದು ಉಳಿದರ್ಧವನ್ನು ಸಂಜೆಗಾಗಿ ಮುಚ್ಚಿಡಲು, ಅಷ್ಟರಲ್ಲಿ ಜಪ್ಪಿಸಿಕೊಂಡು ಕುಳಿತಿದ್ದ ಒಂದು ಅಡವಿಯ ಬೆಕ್ಕು ಟಣ್ಣನೇ ಹಾರಿ ಆ ಬಕ್ಕರಿಯ ಚೂರನ್ನು ಕಚ್ಚಿ ಕೊಂಡು ಹೋಯಿತು. ಹುಡುಗಿಯು ಚಿಟ್ಟನೆ ಚೀರಿದಳು. ರಾಜನು ಶತ್ರುವಿನ ಮೇಲೆ ಹೇಗೆ ಕಡಿದು ಬೀಳಬೇಕೆಂಬ ವಿಚಾರದಲ್ಲಿ ಮಗ್ನನಾಗಿರಲು, ಮಗಳ ಆರ್ತಧ್ವನಿಯನ್ನು ಕೇಳಿ ಆವನ ಹೃದಯವು ಕಲ್ಲಿನಂತೆ ಕಠೋರವಾಗಿದ್ದರು ಆ ಪ್ರಸಂಗದಲ್ಲಿ ಕಳವಳಗೊಂಡಿತು. 'ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ' ಹೀಗೆ ಲೋಕೋತ್ತರ ಪುರುಷರ ಚಿತ್ರಗಳಿರುತ್ತವೆಂದು ಒಬ್ಬ ಕವಿಯು ವರ್ಣಿಸಿದ್ದು ತೀರ ಸತ್ಯವಿದೆ. ಪ್ರಾಣದ ಮೇಲೆ ಬಂದೊದಗಿದ ಅಸಂಖ್ಯಾತ ಸಂಕಟಗಳನ್ನೂ, ಕಾಡುಜನರಿಗೂ ಕೂಡ ಸಹಿಸಲು ಅಸಾಧ್ಯವಾದ ಕಷ್ಟಗಳನ್ನೂ ಲೆಕ್ಕಿಸದ ಧೈರ್ಯಶಾಲಿಯಾದ ರಾಜನ ಚಿತ್ತವು ಪ್ರೀತಿಯ ಮಗಳ ದುಃಖಾಕ್ರೋಶದಿಂದ ವೇಧಿಸಲ್ಪಟ್ಟು ಕ್ಷಣಹೊತ್ತು ಅವನು ಮೋಹಿತನಾದನು. 'ಈ ನಿರರ್ಥಕವಾದ ರಾಜ್ಯ ಪದದಲ್ಲಿ ಯಾವ ತಥ್ಯವಿದೆ? ನನ್ನ ಜೀವಿತದಕಿಂತ ವನವಾಸಿಗಳಾದ ಕಾಡುಜನರ ಜೀವಿತವೇ ಸುಖಕರವಾದದ್ದು. ಹೀಗೆ ವಿಚಾರಿಸಿ ದುಃಖಾವೇಶದಿಂದ ಅವನು ನನಗೆ ಸ್ವಲ್ಪ ಅವಕಾಶವನ್ನು ಕೊಡಬೇಕು' ಎಂಬ ಆಶಯದ ಪತ್ರವನ್ನು ಅಕಬರ ಬಾದಶಹನಿಗೆ ಬರೆದನು.

ಈ ಪತ್ರವು ಆಕಬರನ ಕೈಸೇರಲು ಅವನಿಗೆ ಅತ್ಯಂತ ಹರ್ಷವಾಗಿ, 'ಸ್ವಲ್ಪ ದಿವಸಗಳಲ್ಲಿಯೇ ಪ್ರತಾಪನು ದಿಲ್ಲಿಯ ಸಿಂಹಾಸನಕ್ಕೆ ಶರಣು ಬರುವನೆಂಬ ಅಭಿಪ್ರಾಯವನ್ನು ಈ ಪತ್ರವು ಸೂಚಿಸುವದೆಂದು ಅವನು ತನ್ನ ಸರದಾರರಿಗೆ ಒಳ್ಳೆ ಉಬ್ಬಿನಿಂದ ಹೇಳಿದನು, ಅಕಬರನ ಈ ಅಭಿಪ್ರಾಯವು ದರಬಾರದ ಮೊಗಲ ಹಾಗೂ ರಜಪೂತ ಸರದಾರರಿಗೆಲ್ಲ ಸರಿ ತೋರಿತು, ಆದರೆ ಇದರಿಂದ ಬಿಕಾನೇರದ ಪೃಥ್ವಿರಾಜ ರಾಠೋಡನಿಗೆ ಮಾತ್ರ ಅತ್ಯಂತ ಖೇದವಾಯಿತು. ಅವನು ಆಕಬರನಿಗೆ ಪ್ರಾರ್ಥಿಸಿದ್ದೆ೦ದರೆ : “ಗರಿಬ ನವಾಜ, ಕ್ಷಮೆಯಿರಲಿ, ನನಗೆ ಈ ಪತ್ರದ ಸಂಬಂಧವಾಗಿ ಸಂದೇಹವಿದೆ. ಈ ತರದ ಪತ್ರವನ್ನು ಪ್ರತಾಪನು ಕಳಿಸುವನೆಂಬ ನಂಬಿಕೆಯು ನನಗಾಗದು, ಈ ಪತ್ರವು ಕೃತ್ರಿಮವಾಗಿದ್ದು ಪ್ರತಾಪನ ಹೆಸರಿಗೆ ಕಳಂಕವನ್ನು ತರುವ ಉದ್ದೇಶದಿಂದ ಅವನ ವೈರಿಗಳಲ್ಲೊಬ್ಬನು ಈ ಪತ್ರವನ್ನು ಬರೆದಿರಬಹುದು. ಅದಕ್ಕಾಗಿ ದಿಲೀಶ್ವರರು ನನಗೆ ಅಪ್ಪಣೆಯನ್ನು ಕೊಟ್ಟರೆ ನಿಜವಾದ ಸಂಗತಿಯನ್ನು ಶೋಧಿಸಿ ಪ್ರಭುಗಳ ಚರಣಕ್ಕೆ ಅರಿಕೆ ಮಾಡುವನು.” ಅಕಬರನು ಈ ಅವನ ವಿನಂತಿಯನ್ನು ಮಾನ್ಯ ಮಾಡಿದನು. ಸೃಥ್ವಿರಾಜನು ಪ್ರತಾಪಸಿಂಹನಿಗೆ ಪದ್ಯರೂಪದಿಂದ ಒಂದು ಪತ್ರವನ್ನು ಬರೆದನು, ಅದರ ಭಾವಾರ್ಥವಂದರೆ:'ಎಲ್ಲಿ ಭಾರತ ಪುತ್ರರು ಆಶಾಪೂರ್ಣವಾದ ದೃಷ್ಟಿಯಿಂದ ಪ್ರತಾಪಸಿಂಹನನ್ನೇ ನೋಡುತ್ತಿದ್ದಾರೆ. ಉಳಿದ ರಜಪೂತರೆಲ್ಲ ತಮ್ಮ ಪರಾಕ್ರಮವನ್ನೂ ತಮ್ಮ ಸ್ತ್ರೀಯರ ಮರ್ಯಾದೆಯನ್ನೂ ಆಕಬರನಿಗೆ ಎಂದೋ ಮಾರಿಕೊಂಡಿದ್ದಾರೆ. ಸಂಪೂರ್ಣ ಸೃಷ್ಟಿಯಲ್ಲಿ ತನ್ನ ದೇಶಾಭಿಮಾನವನ್ನು ಬಿಡದೆ ಧೈರ್ಯದಿಂದಲೂ ಪರಾಕ್ರಮದಿಂದಲೂ ಕಾತ್ರತೇಜ ವನ್ನು ಪ್ರಕಟಿಸಿದ ಪುರುಷನೆಂದರೆ ಪ್ರತಾಪಸಿಂಹನೊಬ್ಬನೇ. ಅವನೊಬ್ಬನು ತನ್ನ ಶಿರವನ್ನು ತನ್ನು ಮಾಡಿದನೆಂದರೆ ಹಿಂದೂ ಮಾತ್ರ, ವಿಶೇಷತಃ ರಜಪೂತರ ಉಳಿದಿರುವ ಅಲ್ಪ ಸ್ವಲ್ಪ ಪ್ರತಿಷ್ಠೆಯ ಕೂಡ ಸಂಪೂರ್ಣವಾಗಿ ಇಲ್ಲದಂತಾಗುವದು. ಸಕಲ ಹಿಂದೂ ಜನರ ಉತ್ಸಾಹವು ಪ್ರತಾಪಸಿಂಹನನ್ನು ಅವಲಂಬಿಸಿರಲು ಆವನೇ ನಮ್ಮನ್ನು ಬಿಡುವನೆಂದು ಕೇಳುತ್ತೇವೆ. ಹೀಗೆ ತಾನು ವರ್ತಿಸುವ ಚಿತ್ರೀಡದ ರಾಣಾನಿಗೆ ಸರಿಯಾದದ್ದೆಂದು ತೋರುತ್ತದೆಯೋ ? ' ಈ ಆಶಯದ ಅತ್ಯಂತ ಉತ್ತೇಜನಜನಕವಾದ ಪತ್ರದನ್ನು ಅವನು ಪ್ರತಾಪನಿಗೆ ಕಳಿಸಿದನು. ಪತ್ರವು ಪ್ರತಾಪನಿಗೆ ಮುಟ್ಟಲು ಅವನಿಗೆ ಹತ್ತು ಸಾವಿರ ಜನರ ಸಹಾಯದಿಂದ ಬರುವಂಥ' ಬಲವು ಕೂಡ ಬಂದಿತು. ಇದೇ ಕಾಲಕ್ಕೆ ಮೇವಾಡದ ಆಕೆಯನ್ನು ಬಿಟ್ಟು, ಸಿಂಧಪ್ರಾಂಶದಲ್ಲಿ ಹೊಸದಾಗಿ ಸ್ವತಂತ್ರವಾದದ್ದೊಂದು ರಾಜ್ಯವನ್ನು ಸ್ಥಾಪಿಸಿ ತುರ್ಕರ ಕೈಯೊಳಗಿಂದ ಪಾರಾಗಬೇಕೆಂದು ಪ್ರತಾಪಸಿಂಹನು ಯೋಚಿಸಿದ್ದನು. ಆದರೆ ಈ ಪತ್ರವನ್ನೋದಿ ತತ್ಕ್ಷಣವೇ ಅವನು ಆ ಆಲೋಚನೆಯನ್ನು ಬಿಟ್ಟು ಕೊಟ್ಟನು. ಇದೇ ಕಾಲಕ್ಕೆ ರಾಣಾನ ವಂಶಪರಂಪರಾಗತ ದಿವಾಣನಾದ ಭಾಮಾಶಹಾ ಎಂಬವನು ಇಪ್ಪತ್ತೈದು ಸಹಸ್ರ ಸೈನಿಕರಿಗೆ ಹನ್ನೆರಡು ವರ್ಷಗಳ ವರೆಗೆ ಸಾಕಾಗುವಷ್ಟು ತನ್ನ ಪಿತ್ರಾರ್ಜಿತ ದ್ರವ್ಯವನ್ನೆಲ್ಲ ಪ್ರತಾಪಸಿಂಹನ ಚರಣಕ್ಕೆ ಅರ್ಪಿಸಿದನು. ಇದರಿಂದ ಪ್ರತಾಪನ ವಿಮನಸ್ಕಫೆಯು ಅಸ್ತ್ರವಾಗಿ ಅವನಿಗೆ ಧೈರ್ಯವು ಇಮ್ಮಡಿಯಾಗಿ ಬಂದಿತು. ಕೂಡಲೆ ಪ್ರತಾಪನು ದೇವೇರದ ಮೊಗಲರನ್ನು ಪೂರ್ಣವಾಗಿ ಪರಾಜಯಗೊಳಿಸಿ ಅಮೇಟದ ಠಾಣ್ಯವನ್ನು ತನ್ನ ಕೈವಶ ಮಾಡಿಕೊಂಡನು. ಆ ಬಳಿಕ ಕವಳಮೇರಕ್ಕೆ ಸಾಗಿ ಹೋಗಿ ಅಲ್ಲಿಯ ಸರದಾರನಾಗಿದ್ದ ಅಬದುಲ್ಲಾ ಹಾಗು ಅವನ ಕೈ ಕೆಳಗಿನ ಸೈನಿಕರನ್ನೆಲ್ಲ ಕೊಂದು ಅದನ್ನೂ ತನ್ನ ಹಸ್ತಗತ ಮಾಡಿಕೊಂಡನು, ಈ ಪ್ರಕಾರವಾಗಿ ಒಂದರ ಹಿಂದೆ ಒಂದು, 'ಹೀಗೆ ಮುವತ್ತೆರಡು ಕೋಟೆ ಕೊತ್ತಳಗಳನ್ನು ಸಂಪಾದಿಸಿದನು. ಚಿತೋಡಗಡ, ಅಜರ್ಮರ ಹಾಗು ಮಂಗಳಗದ ಈ ಮರು ಸ್ಥಳಗಳನ್ನು ಳಿದು ಮೇವಾಡ ಪ್ರಾಂತವೆಲ್ಲ ಪ್ರತಾಪನ ಸ್ವಾಧೀನವಾಯಿತು.”

ಪ್ರತಾಪಸಿಂಹನ ಈ ಮುಂದಿನ ಕಾಲವು ಸುಖಸಮಾಧಾನದಲ್ಲಿ ಸಾಗ ಹತ್ತಿತು. ಆದರೆ ಅವನಂಥ ದೇಶಾಭಿಮಾನಿಯಾದ ನೈಷ್ಠಿಕ ಕ್ಷತ್ರಿಯನಿಗೆ ಸುಖವು ಹೇಗೆ ಸೇರುವದು? ಚಿತೋಡಗಡವು ಇನ್ನೂ ಆವನ ಸ್ವಾಧೀನವಾಗಿದ್ದಿಲ್ಲ. ಪ್ರತಾಪಸಿಂಹನು ಉದೇಪುರದ ಎತ್ತರವಾದ ಪ್ರದೇಶದಲ್ಲಿ ನಿಂತು ಚಿದೊಡಗಡದ ಕೋಟೆಯ ಕಡೆಗೆ ನೋಡಲು ಆ ಕೋಟೆಯ ಗೋಡೆಗಳು ಅವನ ಕಣ್ಣುಗಳಲ್ಲಿ ಚುಚ್ಚಿದಂತಾಗುತ್ತಿದ್ದವು, ಯಾವ ಗಡದ ಸಂರಕ್ಷಣೆಗಾಗಿ ತನ್ನ ಪೂರ್ವಜರು ತಮ್ಮ ಮೈಯೊಳಗಿನ ರಕ್ತದ ಕಾಲಿನಗಳನ್ನು ಹರಿಸಿ ಪ್ರಾಣಿಗಳ ಆಹುತಿಗಳನ್ನು ಕೊಟ್ಟರೆ ಆ ಚಿತೋಡಗಡವು ಯಾವಾಗ್ಗೆ ತನ್ನ ಕೈವಶವಾಗುವದೆಂಬ ನಿದಿಧ್ಯಾಸವೇ ಅವನಿಗೆ ಅಹರ್ನಿಶವಾಗಿತ್ತು. ಕ್ಷಾತ್ರವ್ರತವನ್ನು ಕಾಯ್ದುಕೊಳ್ಳುವದಕ್ಕಾಗಿ ಈ ಸ್ವಾಭಿಮಾನಿಯಾದ ಪುರುಷನು ಎಷ್ಟೋ ಶ್ರಮಗಳನ್ನೂ ಸಾಹಸಗಳನ್ನೂ ಕಷ್ಟಗಳನ್ನೂ ಸಹಿಸಿ ತನ್ನ ಆಯುಷ್ಯದ ದಿವಸಗಳನ್ನು ಕಳೆದಿದ್ದನು. ಇದೆಲ್ಲದರ ಪರಿಣಾಮವು ಅವನ ಉಕ್ಕಿನಂಥ ಶರೀರದ ಮೇಲಾಗಿ ಅದು ದಿನೇ ದಿನೇ ಕ್ಷೀಣವಾಗ ಹತ್ತಿತು. ಅವನ ಪರಾಕ್ರಮಕ್ಕೆ ಮೆಚ್ಚಿ ರಾಜಸ್ಥಾನದ ವಿಜಯಲಕ್ಷ್ಮಿಯು ಅವನ ಕೊರಳಲ್ಲಿ ಮಾಲೆಯನ್ನು ಹಾಕಬೇಕೆನ್ನುವಷ್ಟರಲ್ಲಿಯೇ ಅವನು ಬೇನೆಬಿದ್ದು ನರಳಹತ್ತಿದನು. ಅಂತಕಾಲವು ಸವಿಾಪಿಸಿತು. ಪ್ರಾಣೋತ್ಕ್ರಮಣವಾಗಲೊಲ್ಲದು. ಅವನಿಗೆ ಚಿತೋಡದ ನಿದಿಧ್ಯಾಸವೇ, ಅವನ ಸುತ್ತಲೂ ನೆರೆದಿದ್ದ ಅವನ ಸ್ನೇಹಿತ ಸರದಾರರೂ ಅತ್ಯಂತ ಅಸ್ವಸ್ಥರಾದರು. ರಾಣಾನ ಈ ದುಃಸ್ಥಿತಿಯನ್ನು ನೋಡಿ ಸಾಳುಂಬ್ರಾದ ಠಾಕುರನು "ಯಾವ ಕಾರಣದ ಸಲುವಾಗಿ ನಿಮಗೆ ಇಂಥ ಕೇಶಗಳಾಗಹತ್ತಿವೆ ? ತಾವು ಸುಖದಿ೦ದಲೂ ಶಾ೦ತತೆಯಿಂದಲೂ ಯಾಕೆ ಪ್ರಯಾಣಮಾಡಿಲ್ಲಂ ? ”ಎಂಬದಾಗಿ ಕೇಳಿದನು. ಪ್ರತಾಪನು ತನ್ನ ಶಕ್ತಿಯನ್ನೆಲ್ಲ ಏಕೀಕಠಿಸಿ “ಚಿತೋಡದ ಕಡೆಗೆ ನೋಡಿರಿ. ನಾನಂತೂ ಈಗ ಹೋಗುತ್ತಲೇ ಇದ್ದೇನೆ. ನನ್ನ ಚಿರಂಜೀವನು ಹಾಗು ನೀವೆಲ್ಲ ಸರದಾರರು ಈ ಗುಡಿಸಿಲುಗಳಿದ್ದ ಸ್ಥಳದಲ್ಲಿ ವಿಶಾಲವಾದ ರಾಜಮಂದಿರಗಳನ್ನು ಕಟ್ಟಿಸಿ ಅವುಗಳಲ್ಲಿ ವಿಲಾಸದಿಂದ ಕಾಲವನ್ನು ಕಳೆಯುವಿರಿ. ಆದರೆ ಯಾವ ದೇಶದ ಸ್ವತಂತ್ರತೆಗಾಗಿ ನಾವೆಲ್ಲರೂ ಇಷ್ಟು ವರ್ಷಗಳ ವರೆಗೆ ಪ್ರಾಣಾಂತ್ಯ ಸಂಕಟಗಳನ್ನು ಸಹಿಸಿದೆವೋ ಹಾಗು ಪ್ರಸಂಗವಶಾತ್ ಪ್ರಾಣಗಳನ್ನಾದರೂ ಅರ್ಪಿಸಿದವೋ ಆ ಸ್ವದೇಶವನ್ನು ನೀವು ತುರ್ಕರ ಪಾಲು ಮಾಡುವಿರೆಂಬ ಸಂಗತಿಯು ನನ್ನನ್ನು ಅನೇಕಪರಿಯಿಂದ ಕ್ಲೇಶಪಡಿಸುತ್ತಲಿದೆ. ಆದರೆ ನಮ್ಮ ದೇಶವನ್ನು ತುರ್ಕರ ಸ್ವಾಧೀನ ಮಾಡಗೊಡಲಿಕ್ಕಿಲ್ಲೆಂದು ಯಾರಾದರೂ ನನಗೆ ಆಶ್ವಾಸನವನ್ನು ಕೊಟ್ಟರೆ ನಾನು ಸುಖಸಮಾಧಾನಗಳಿಂದ ನನ್ನ ಪ್ರಾಣವನ್ನು ಬಿಡುವೆನು." ಈ ಮಾತು ಕೇಳಿ ದುಃಖೋದ್ವೇಗದಿಂದ ಎಲ್ಲರ ಕುತ್ತಿಗೆಯ ಶಿಲೆಗಳು ಉಬ್ಬಿದವು. ಅವರು ಶಪಥ ಪೂರ್ವಕವಾಗಿ "ನಾವು ನಮ್ಮ ದೇಶದ ಸ್ವಾತಂತ್ರ್ಯವನ್ನು ಮರಳಿ ಸಂಪಾದಿಸುವವರೆಗೆ ಇಲ್ಲಿ ರಾಜಮಂದಿರಗಳನ್ನು ಕಟ್ಟಿ ವಿಲಾಸದಲ್ಲಿ ಕಾಲವನ್ನು ಕಳೆಯಲಿಕ್ಕಿಲ್ಲ. ಯುವರಾಜ ಅಮರಸಿಂಹರಾದರೂ ಇದೇ ವ್ರತವನ್ನು ಪಾಲಿಸುವರು. ಈ ವಿಷಯವಾಗಿ ತಾವು ಯತ್ಕಿಂಚಿತವಾದರೂ ಚಿಂತಿಸಕೂಡದು" ಎಂದು ಆಶ್ವಾಸನವನ್ನು ಕೊಟ್ಟರು. ಈ ಶಬ್ದಶ್ರವಣ ಮಾತ್ರದಿಂದಲೇ ಪ್ರತಾಪನಿಗೆ ಸಮಾಧಾನವಾಗಿ ಅವನು ಸುಖದಿಂದ ಪ್ರಾಣವನ್ನು ಬಿಟ್ಟನು.


ಕೊಡೆಯಾಳು ಭೂಪಾಲ

11 ಗHequLu - Whyagarahley" ETAPE: Ria Hafa Agai #1TET I ಹೊಳೆಯುವದೆಲ್ಲ ಒಳಿಶಾದದ್ದೆಂದು ಹೇಳಲಾಗದ ಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣಿ ಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು ; ರ್ಕಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಷಮವಾಗಿರುವದು, ಅದರಂತೆಯೇ ಮನುಷ್ಯರ ಗುಣಾವಗುಣ ಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು. ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ || ಮನದಣಿಯೆ ಬೊಗಳ್ಳು ದಲ್ಲದೆ | ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ | ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರ ಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯ ವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ, ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದು ರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತ ನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸ ಎಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು, ಮೃಗಯಾಸಕರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ ಪಾಲು ಮಾಡಿದ್ದು ನಾವು ಕೇಳಿದ ಮಾತು. ಕ್ರಿಸ್ತ ದಯಾನಿಧಿಯ ಅನುಯಾಯಿಗಳಾದ ಜರ್ಮನ್, ಆಸ್ಟ್ರಿಯನರು ಯುದ್ಧದ ನೆವದಿಂದ ಅಪರಿಮಿತ ಜನ ಬಡ ಪ್ರಾಣಿಗಳ ಜೀವಹಿಂಸೆ ಮಾಡಿದ್ದು ಕೇಳಿದರೆ ನಮ್ಮ ಜೀವ ಝುಲ್ಲೆನ್ನುತ್ತಲಿದೆ. ನಮ್ಮಲ್ಲಿಯ ಭಟನೋರ್ವನು ಸ್ವಸಂತೋಷದಿ೦ದಲೂ, ಉತ್ಸಾಹದಿಂದಲೂ ಓರಿಗೆಯವರಲ್ಲಿ ಅಹುದೆನ್ನಿಸಿಕೊಳ್ಳುವ ಉಬ್ಬಿನಿಂದಲೂ ಸ್ವಾಮಿಸೇವೆಯನ್ನು ಮಾಡುತ್ತಿರಲು, ಅವನನ್ನು ಯಜಮಾನನು ನಿರ್ದಯವಾಗಿ ನಡಿಸಿಕೊಳ್ಳುವನೆಂಬುವದು ತಪ್ಪಾದ ಮಾತೇ ಸರಿ. ಇಂಥ ಸೇವಾರತನನ್ನು ಒಡೆಯನು ತನ್ನ ಹೊಟ್ಟೆಯ ಮಗನಂತೆ ಪ್ರೀತಿಸಿ ಆವನೆ ಇಚ್ಛೆಯನ್ನು ಪೂರೈಸುವನು. ದೊರೆಯ ಕುದುರೆಯ ಮುಂದೆ ಹುಲಿಯ ಹಾಗೆ ಹಾರುತ್ತೆ ನನ್ನ ಮಗನು ಬಂದನೆಂದು ಆ ಸತ್ವಶಾಲಿಯ ಮಾತೆಯು ಗರ್ವದಿಂದ ನಗುತ್ತೆ ಅನ್ಯ ಸ್ತ್ರೀಯರ ಮುಂದೆ ಅವನ ಪ್ರಶಂಸೆ ಮಾಡುವಳು. ಅಳಿಯನಿದ್ದರೆ ಇಂಥವನೇ ಇರಬೇಕೆ೦ದು ಆ ಜಾತಿಯವರಾದ ಸ್ತ್ರೀಯರು (ಕನ್ನೆಯರ ತಾಯಂದಿರು) ಹೇಳುವರು, ಹುಡುಗನೆನ್ನ ಬೇಕು ಅವನಿಗೇ ಎಂದು ಅವನ ಓರಿಗೆಯ ಬಂಟರು ಕೊಂಡಾಡುವರು, ಹೀಗೆ ಜನರ ಸ್ತುತಿಗೆ ಪಾತ್ರನಾಗಿ ಆಸ್ಥೆಯಿಂದ ಕೆಲಸ ಮಾಡುತ್ತಿರುವವನು ಆ ಕೆಲಸವನ್ನು ಒತ್ತಾಯಕ್ಕೆ ಒಳಗಾಗಿ ಮಾಡುತ್ತಾ ನೆಂದು ಹೇಳುವವರು ನಮ್ಮ ನಾಡನಡಾವಳಿಗಳನ್ನು ಅರಿಯದೆ ಹೇಳುವರು ಇರಲಿ.

ಕೇರಳಾಧೀಶ್ವರನು ತನ್ನ ರಾಜ್ಯದಲ್ಲಿಯ ವ್ಯವಸ್ಥೆಯನ್ನು ಕಂಡುಕೊಂಡು ಬರಬೇಕೆಂದು ರಾಜಧಾನಿಯಿಂದ ಹೊರಟು ಬೇರೂರಿಗೆ ಹೋಗಿದನು. ಪುಂಡನಾದ ತನ್ನ ಕೊಡೆಯಾಳು ಓರ್ವನ ಮೈಗಾವಲಿಗೆ ಸಾಕೆಂದು ತಿಳಿದು ರಾಜನು ಅವನನ್ನೊಬ್ಬನನ್ನೇ ತನ್ನ ಸಂಗಡ ಕರಕೊಂಡು ತನ್ನ ಹಿರಿಯ ಕುದುರೆಯನ್ನೇರಿಕೊಂಡು ಹೋಗಿದ್ದನು. ಕುದುರೆಗೆ ಆ ಕೊಡೆಯಾಳು ಸಂಗದಲ್ಲಿದ್ದರೆಯೇ ಓಡಲಿಕ್ಕೆ ಹುರುಪು. ನನ್ನ ಎರಡು ಕಾಲುಗಳಲ್ಲಿದ್ದ ಚಾಪಲ್ಯವು ನಿನ್ನ ನಾಲ್ಕೂ ಕಾಲುಗಳಲ್ಲಿಲ್ಲ ಬಲ್ಲೆಯಾ ಕಡವನೆ, ನೀನೆಷ್ಟು ಓಡಿದರೂ ನನ್ನ ಹಿಂದೆಯೇ ಇರುವಿ ಎಂದು ಆ ಕೊಡೆಯಾಳು ಜಿದ್ದು ಕಟ್ಟಿ ಕುದುರೆಯ ಮುಂದೆ ಓಡುವಂತೆ ಕಾಣುತ್ತಿದ್ದನು. ಆ ಕುದುರೆ, ಆ ಕೊಡೆಯಾಳು, ಇಲ್ಲದಿದ್ದರೆ ರಾಜನಿಗೆ ಕುದುರೆಯ ಹತ್ತಾಟದಲ್ಲಿ ಸೊಗಸಿರಲಿಲ್ಲ ಮೂವರದೂ ಜೀವ ಒಂದಾಗಿತ್ತು.

ಈ ಸಡಗರದಿಂದ ಹತ್ತು ಹರದಾರಿ ಹೋಗಿ ರಾಜನು ತನ್ನ ಕೆಲಸ ತೀರಿಸಿಕೊಂಡು ಮರಳಿ ಹತ್ತು ಹರದಾರಿ ಬರಬೇಕೆಂದು ಯೋಚಿಸಿ "ಹೇಗೆ ಬಂಟನೆ, ಇಂದೆಯೇ ನಾವು ರಾಜಧಾನಿಗೆ ಹೋಗಬಹುದಷ್ಟೆ?” ಎಂದು ತನ್ನ ಕೊಡೆಯಾಳನ್ನು ಕೇಳಿದನು. "ದೇವರೂ, ಕುದುರೆಯು ದಣಿಯದೆ ಇದ್ದರೆ ನಾನೇಕೆ ಬೇಡೆನ್ನಲಿ? ನಡೆಯಿರಿ ” ಎಂದು ನುಡಿದು ಆ ಭಟನು ಮತ್ತೆ ಟೊಂಕಕಟ್ಟಿ ಸಿದ್ಧನಾಗಿ ನಿಂತನು. ಕುದುರೆಯಾದರೂ ಕಟ್ಟದಲ್ಲಿ ನಿಂದಿರಲಾರದೆ, ಪ್ರಯಾಣದ ಸಿದ್ಧತೆಯನ್ನು ಕಂಡು ರಭಸದಿಂದ ಹೇಂಕರಿಸಿತು. ಊರ ಕಡೆಗೆ ಹೊರಟ ಕುದುರೆಯ ವೇಗವು ಇಮ್ಮಡಿಯಾಗುವದೆಂದು ಕುದುರೆಗಳನ್ನು ಕಟ್ಟಿದವರು ಮನಗಂಡ ಮಾತು.

ಕೇರಳಾಧೀಶ್ವರನ ಕುದುರೆಯು ವಾಯುವೇಗದಿಂದ ಧಾವಿಸುತ್ತಿತ್ತು. "ನನ್ನ ಮುಂದೆ ನೀನೆಷ್ಟು ಓಡುವಿ ಕುದುರೆಯ ಮರಿಯೇ,” ಎಂದೆನ್ನುತ್ತ ಕಡುವೇಗದ ಹುಡುಗನಾದ ಆ ಕೊಡೆಯಾಳು ಕೇರಳಾಧೀಶ್ವರನ ಮೋರೆಗೆ ಬಿಸಿಲು ತಗಲದಂತೆ ಕೊಡೆಹಿಡಿದು ಹುಯ್ಯೆಂದು ಹಾರಿಕೆಗಾಲಿಕ್ಕುತ್ತೆ ಓಡುತ್ತಿದ್ದನು. ಜೂಜುಕಟ್ಟಿ ಓಡುತ್ತಿರುವ ಕುದುರೆ ಕೊಡೆಯಾಳುಗಳೀರ್ವರೂ ತಮ್ಮ ಚಾಪಲ್ಯದ ಇಯತ್ತೆಯನ್ನು ಮೀರಿದರು, ಕೊಡೆಯಾಳಿನ ಜಡೆಯಿಂದ ಬೆವರನಿಗಳು ಗಿರಿಶಿಖರದಿಂದ ಬೀಳುವ ಗಂಗಾತುಷಾರಗಳಂತೆ ಸುರಿಯುತ್ತಿದ್ದವು. ಸಮುದ್ರದೊಳಗಿಂದ ಈಗಲೆದ್ದು ಬಂದಿರುವ ಉಚ್ಚೆಶ್ರವಸ್ಸನು ಫೇನಾವೃತನಾಗಿ ಕಾಣುವಂತೆ ಆ ಆರಸುಗುದುರೆಯು ಬೆವರಿನ ಬುರಗನ್ನು ತೆಪ್ಪ ತೆಪ್ಪವಾಗಿ ಸುರಿಸುತ್ತೆ ನಡೆದಿತ್ತು. ಕುದುರೆ ಕಾಲಾಳುಗಳೀರ್ವರೂ ಓಡಿ ದಣಿದಿದ್ದರೂ ಗತಿಯನ್ನು ಶಿಥಿಲಿಸಿದರೆ ತಮ್ಮ ಕಲಿತನವು ಕಲುಷಿತವಾಗುವದೆಂಬ ಅಭಿಮಾನಕ್ಕೆ ಈಡಾಗಿ, ಆ ಜೊತೆಗಾರರು ರಾಜಧಾನಿಯ ಮಹಾದ್ವಾರದ ವರೆಗೆ ಓಡಿಯೇ ಓಡಿದರು. ಕೋಟೆಯ ಸಮೀಪಕ್ಕೆ ಬಂದಕೂಡಲೆ ಕುದುರೆಯು ಫಕ್ಕನೆ ಮುಗ್ಗಿತು. ಕೊಡೆಯಾಳುವೂ ಗಕ್ಕನೆ ನಿಂತನು. ಕುದುರೆಯು ಲಗಬಗೆಯಿಂದ ಕಾಲೂರಿ ನಿಂತು ರಾಜನನ್ನು ಕರಕೊಂಡು ಅರಮನೆ ಮುಂದೆ ನಿಂತಿತು. ಕಡೆಯಾಳು ಮಾತ್ರ ಹಿಂದುಳಿದನು.

ಶ್ರಮನಿರ್ವಿಣ್ಣನಾದ ರಾಜನನ್ನು ಕಂಡು ರಾಜವೈದ್ಯರು ಅವನಿಗೆ ಕೊಡತಾಳು ಭೂಪಾಲ ಉಚಿತವಾದ ಲೇಹ್ಯಪೇರುಗಳನ್ನು ಕೊಟ್ಟು ಸಮಾಧಾನಗೊಳಿಸಿ ಹೀಗೆ ನಿಷ್ಕಾರಣವಾಗಿ ಸಾಹಸವನ್ನು ಮಾಡಿದ್ದಕ್ಕಾಗಿ ಅವನಿಗೆ ಸಿಟ್ಟು ಮಾಡಿದes. ಅಷ್ಟರಲ್ಲಿ ರಾಯನ ಕುದುರೆಯು ನಿಂತನಿಂತಲ್ಲಿಯೇ ಪ್ರಾಣ ಬಿಟ್ಟಿತೆಂದು ಓರ್ವ ಸೇವಕನು ನಿವೇದಿಸಿದ್ದನ್ನು ಕೇಳಿ ಅರಸನು ವಿಸ್ಮಯಾಕುಲನಾಗಿ, ತನ್ನ ಕಡೆ ಯಾಳಿನ ಗತಿಯೇನಾಯಿತೋ ನೋಡಿರಿ ಎಂದು ವ್ಯಾಕುಲಚಿತ್ತನಾಗಿ ರಜ- ವೈದ್ಯರಿಗೆ ಹೇಳಿದನು. ಉಪಾಯವಿಲ್ಲ, ರಾಜಾಧಿರಾಜರೆ, ಕುದುರೆಗಾದ ಗತಿಯೇ ಕಡೆ ಯಾಳಿಗೆ ಆಗಿರುವದು ! ” ಎಂದು ರಾಜವೈದ್ಯರು ವಿಷಾದದಿಂದ ಹೇಳಿದರು, (ಏನೂ ಉಪಾಯವಿಲ್ಲವೆ ? ನೋಡಿರಿ, ಹೇಗಾದರೂ ಮಾಡಿ ಆ ನನ್ನ ಪ್ರಿಯ ನೃತ್ಯನನ್ನು ಬದುಕಿಸಿಕೊಳ್ಳಿರಿ. * 11 ಮಹಾರಾಜರ ಕೃಪಾಪಾತ್ರನಾದ ಆ ನೃತ್ಯನು ಓಡುವದನ್ನು ಬಿಟ್ಟು ನಿಂತಾಕ್ಷಣವೇ, ಅವನ ಹಣೆಯೊಡೆದು ರಕ್ತ ತೆಗೆದು ಅವನಿಗೆ ನನ್ ಗಡಲೆ ತಿನ್ನಲಿಕ್ಕೆ ಕೊಟ್ಟು, ಅವನನ್ನು ಕಾಲುಮೇಲಾಗಿ ಮಾಡಿ ಮುಗಿಸಿ ದ್ದರೆ ಬದುಕಬಹುದಾಗಿತ್ತು. ಇಷ್ಟು ಹೊತ್ತಾದ ಬಳಿಕ ಯಾವ ಉಪಾಯ ಗಳಿಂದಲೂ ಪ್ರಯೋಜನವಿಲ್ಲ.' ಅವನಿದ್ದೆಡೆಗೆ ಹೋಗಿ ನೋಡಿಯಾದರೂ ಬರೋಣ ಬನ್ನಿರಿ, ” ಎಂದು ಆ ಮಹಾರಾಜನು ರಾಜವೈದ್ಯನನ್ನು ಕರಕೊಂಡು ಕಡೆಯಾಳು ಇದ್ದ ಸ್ಥಳಕ್ಕೆ ಬಂದನು. ಅಲ್ಲಿ ಒಂದು ಚಮತ್ಕಾರವೇ ಆಗಿತ್ತು. ಈ qfa aga fagfa ಇd” ಎಂಬಂತೆ, ರಾಜವೈದ್ಯರು ಹೇಳಿದ ಉಪಚಾರಗಳೆಲ್ಲ ಆ ಕೊಡೆ ಯಾಳಿಗೆ ದೈವಯೋಗದಿಂದೆ ಸಲ್ಲಿದ್ದವು. ಆ ಸಾಹಸಿಯಾದ ಸೇವಕನು ತನಿ ಮಳಲಿನ ಆಸೆಗಾಗಿ ಬಳಿಯಲ್ಲಿಯೇ ಇರುವ ದುರ್ಗಾದೇವಿಯ ಗುಡಿಹೊಕ್ಕನು. ದೇವಾಲಯದ ಬಾಗಿಲದ ಹಣೆಪಟ್ಟಿ ಯು ಅವನ ಹಣೆಗೆ ಥಟ್ಟನೆ ಬಡಿದದ್ದ ರಿಂದ ಬಳಬಳನೆ ರಕ್ತ ಸುರಿದಿತ್ತು, `ಭಕ್ತ ಜನರು ದೇವಿಗೆ ಉಡಿತುಂಬಿದೆ ಸನಗಡಲೆಯ ಕಾಳುಗಳನ್ನು ಅವನು ಸಂಕಟಗರೆದು ತಿಂದಿದ್ದನು , ಮೂರು ಜೊಳ ಅಗಲವಾಗಿದ್ದ ಆ ಚಿಕ್ಕ ಗುಡಿಯಲ್ಲಿ ಅವನು ಮಲಗುವದು ಹೇಗೆ ? ಅರ್ಥಾತ್ ಕಾಲು ಮೇಲೆಮಾಡಿ ಗೋಡೆಗೆ ಆನಿಸಿ ಇಟ್ಟು ಕೊಂಡು ಅವನು od ಹೇಗೋ ಮಲಗಿದ್ದನು.

ತನ್ನ ಭೃತ್ಯನು ಸುಖರೂಪನಾಗಿರುವದನ್ನು ಕಂಡು ಕೇರಳಾಧೀಶ್ವರನಿಗೆ ಪರಮ ಸಂತೋಷವಾಯಿತು. ರಾಜನು ತನ್ನ ಆಳುಮಗನ ಬೆನ್ನು ಮೇಲೆ ಕೈಯಿಟ್ಟು "ಬಂಟನೆ, ನಾನೀ ಸಮಯದಲ್ಲಿ ಬಹು ಸಂತುಷ್ಟನಾಗಿರುವನು. ಈ ಸಮಯದಲ್ಲಿ ನಿನ್ನ ಅಪೇಕ್ಷೆ ಏನಿರುವದು ಹೇಳು; ನಿಶ್ಚಯವಾಗಿ ಪೂರೈಸುತ್ತೇನೆ ಎಂದು ಆಶ್ವಾಸನವನ್ನಿತ್ತನು, ಆ ಧೀರನು ಮಹಾರಾಜರ ಕಾಲುಗಳ ಮೇಲೆ ತನ್ನ ಹಣೆಯನ್ನಿಕ್ಕಿ "ಪ್ರಭುಗಳು ವಚನವನ್ನಿತ್ತ ಮಾತ್ರದಿಂದಲೇ ನನ್ನ ಮನೋರಥವು ಸಿದ್ಧವಾಯಿತೆಂಬದರಲ್ಲಿ ಸಂದೇಹವಿಲ್ಲ. ವಚನ ಪರಿಪಾಲನದಲ್ಲಿ ಮಹಾರಾಜರು ಶಿಬಿಚಕ್ರವರ್ತಿಗೆ ಸಮಾನರಾದವರು. ಕೋರಿಕೆಯನ್ನು ನಿವೇದಿಸಲು ಆಜ್ಞೆ ಇರಲಿ ” ಎಂದು ವಿಜ್ಞಾಪಿಸಿದನು.

"ಬೇಡು! ಬೇಡು! ನಿಃಶಕನಾಗಿ ಬೇಡು!” ಎಂದು ಮಹಾರಾಜರು ಮನಬಿಚ್ಚಿ ಹೇಳಿದರು.

"ಮಹಾರಾಜರ ಸಿಂಹಾಸನದ ಮೇಲೆ ಮೂರು ಮುಕ್ಕಾಲು ಗಳಿಗೆ ಕುಳಿತು ರಾಜ್ಯ ಮಾಡಬೇಕೆನ್ನುತ್ತೇನೆ” ಎಂದು ಆ ಸ್ವಾಮಿಭಕ್ತನು ಅಂಜುತ್ತೆ ಅಂಜುತ್ತೆ ನುಡಿದನು.

ಮಹಾರಾಜರು ಗಹಗಹಿಸಿ ನಕ್ಕು ಅಂದದ್ದು : "ಹುಚ್ಚನಿರುವಿ ನೀನು! ಮೂರು ಮುಕ್ಕಾಲು ಗಳಿಗೆ ಸಿಂಹಾಸನದ ಮೇಲೆ ಕುಳಿತರೆ ನಿನಗಾಗುವ ಲಾಭವೇನು? ಈ ಸಿಂಹಾಸನದ ಮೇಲೆ ಹತ್ತು ವರುಷ ಕುಳಿತನನಾದ ನನಗೆ ಇದರಿಂದ ಸುಖದೋರಲಿಲ್ಲ. ಈ ಸಮಯದಲ್ಲಿ ನೀನು ವಿಸ್ತಾರವಾದ ಭೂಸ್ವಾಸ್ಥಿಯನ್ನು ಬೇಡು. ನಿನ್ನಿಚ್ಛೆ ಇದ್ದರೆ ಅರ್ಧ ರಾಜ್ಯವನ್ನು ಬೇಡಿದರೂ ಚಿಂತೆಯಿಲ್ಲ."

"ದೇವರೂ, ಮಾತು ಆಡಿ ಹೋಯಿತು, ಮುತ್ತು ಒಡೆದು ಹೋಯಿತು. ಬೇಡಿದ್ದರಲ್ಲಿ ಹೆಚ್ಚು ಕಡಿಮೆ ಮಾಡಲಾರೆನು ” ಎಂದು ಏಕಮಾರ್ಗಿಯಾದ ಆ ಧೀರನು ಹೇಳಿದನು.

ಆ ಸಮಯದಲ್ಲಿ ಆ ಕೊಡೆಯಾಳಿನ ಮುಖದಲ್ಲಿ ತೋರಿದ ನಿಶ್ಚಯವನ್ನೂ, ಗ್ರಾಮ್ಯವಾದರೂ ಗಂಭೀರವಾಗಿರುವ ಅವನ ನಿಶ್ಚಯದ ನುಡಿಯನ್ನೂ ಕೇಳಿ ಕೇರಳಾಧೀಶ್ವರನಿಗೆ ಅತಿಶಯವಾದ ಆಶ್ಚಯವಾಯಿತು. "ನಿನ್ನಿಚ್ಛೆ. ಮಗನೆ, ನೀನೆಂದು ಸಿಂಹಾಸನವನ್ನೇರಬೇಕೆನ್ನುವಿ? " ಎಂದು ಆ ಸ್ವಾಮಿಶ್ರೇಷ್ಠನು ಕೇಳಿದನು.

“ನಾನೊಂದು ಒಳ್ಳೇ ದಿವಸವನ್ನು ಹುಡುಕಿ ಮಹಾರಾಜರ ಪಾದಕ್ಕೆ ಅರಿಕೆ ಮಾಡಿಕೊಳ್ಳುವೆನು."

ಮುಂದಾಗುವ ಈ ಅರ್ಧಪ್ರಹರದ ರಾಜನು ತನ್ನ ಪಟ್ಟಾಭಿಷೇಕಕ್ಕೆ ಮುಂಚಿತವಾಗಿ ಕೇರಳ ದೇಶದ ತುಂಬ ಸಂಚಾರ ಮಾಡಿದನು. ಗುಡಿ ಗುಂಡಾರಗಳನ್ನೂ, ಮಠಪಾಠಶಾಲೆಗಳನ್ನೂ ಅವನು ಪ್ರತ್ಯಕ್ಷವಾಗಿ ನೋಡಿದನು. ಗ್ರಾಮಗ್ರಾಮಗಳಲ್ಲಿರುವ ಸಾಧುಸಂತರನ್ನೂ, ವಿದ್ವಜ್ಜನರನ್ನೂ ಕಂಡು ಮಾತಾಡಿಸಿ ಅವರ ಸಮಾಚಾರಗಳನ್ನು ಅರಿತುಕೊಂಡನು. ಅವರೆಲ್ಲರಿಗೂ ಇಂತಿಷ್ಟು ಭೂಸ್ವಾಸ್ಥಿಯನ್ನು ಕೇರಳ ದೇಶಾಧಿಪತಿಗಳು ಕೊಡುವರೆಂದೂ ಆ ಜನರೆಲ್ಲರೂ ತಮ್ಮ ಇಚ್ಛೆಗೆ ಬಂದಲ್ಲಿ ಭೂಮಿಗಳನ್ನು ಕಂಡುಕೊಂಡು, ಆ ಬಗ್ಗೆ ನಮಗೆ ಸಿಕ್ಕ ತಕ್ಕ ಸನದುಗಳನ್ನು ತಾವು ಬರೆದಿಟ್ಟು ಕೊಂಡಿರಬೇಕೆಂತಲೂ, ಇಂಥದೊಂದು ಮುಹೂರ್ತದಲ್ಲಿ ಆ ಸನದುಗಳಿಗೆ ರಾಜಮುದ್ರೆಯಾಗುವದೆಂದೂ ಹೇಳುತ್ತ ನಡೆದಿದ್ದನು.

ಶುಭ ಮುಹೂರ್ತದಲ್ಲಿ ಕೊಡೆಯಾಳು ಭೂಪಾಲನ ಪಟ್ಟವೇರಿದನು ಭಾಗ್ಯಶಾಲಿಯಾದ ನೃಪನು ಪಟ್ಟವೇರಿದ ಕಾಲಕ್ಕೆ ಕೇರಳ ದೇಶವಾಸಿಗಳಾದ ಪಂಡಿತರೂ, ದಶಗ್ರಂಥಿಗಳಾದ ವಿಪ್ರೊತ್ತವರೂ, ತಪಸ್ವಿಗಳಾದ ಸಾಧುಸಂತರೂ ಪವಿತ್ರವಾದ ದೇವಾಲಯಗಳ ಅರ್ಚಕರ ದಯಮಾಡಿದ್ದರು, ರಾಜಧಾನಿಯಲ್ಲಿ ಎತ್ತ ನೋಡಿದತ್ತ ಜರದ ಶಾಲಿನವರೂ, ಕಾಷಾಯವಸನದವರೂ, ಜಡೆಲಂಗಟದವರೂ ಸಂತೆಗೆ ನೆರೆದಂತೆ ನೆರೆದಿದ್ದರು.

ಕೊಡೆಯಾಳು ಭೂಪಾಲನು ಪಟ್ಟವೇರುವಾಗ ವೇಷದ ಸೊಬಗಿನಲ್ಲಿಯಾಗಲಿ, ವಾದ್ಯ ವೈಭಗಳ ಮೆರವಣಿಗೆಯಲ್ಲಾಗಲಿ ಕಾಲಹಾನಿಯನ್ನು ಮಾಡದೆ ತಾನು ಧರಿಸಿರುವ ಕೀಳುತರದ ಉಡುಪಿನಿಂದಲೇ ಪಟ್ಟವೇರಿ ಒಮ್ಮೆಲೆ ಜನರು ತಂದಿರುವ ಸಸದುಗಳಿಗೆ ರಾಜಮುದ್ರೆಯನ್ನು ಎಡೆಬಿಡದೆ ಜಡೆಯಲಾರಂಭಿಸಿದನು. ಕ್ಷಣಹೊತ್ತು ಕಳೆದರೆ ಯಾವ ಬ್ರಾಹ್ಮಣನ ಸನದಿಗ ಮುದ್ರೆ ಇಲ್ಲದಂತಾಗುವದೋ ಎಂಬ ಯೋಚನೆಗಾಗಿ ಆ ಮಹಾತ್ಮನು ಮೈತುಂಬ ಕಣ್ಣುಳ್ಳವನಾಗಿ ತನ್ನ ಕೆಲಸವನ್ನು ನಡೆಸಿದ್ದನು. ತನಗಿದ ಆಧಿಕಾರದ ಅಲ್ಪಾವಧಿಯ ಕಾಲದಲ್ಲಿ ಧರ್ಮವರ್ತಿಯಾದ ಮಹಾತ್ಮನು ತುಸು ಕಡಿಮೆ ಎಲ್ಲ ಸನದುಗಳಿಗೆ ಮುದ್ರೆ ಬಡಿದುಬಿಟ್ಟನು.

"ಇನ್ನೂ ಕೆಲವು ಸನದುಗಳು ಮುದ್ರೆಯಾಗದೆ ಉಳಿಯುವವು; ಆವಕ್ಕೇನು ಮಾಡುವೆ? ” ಎಂದು ಕೇರಳಾಧೀಶ್ವರನು ಆ ಮರುಮುಕ್ಕಾಲು ಗಳಿಗೆಯ ರಾಜನನ್ನು ಕೇಳಿ ನಕ್ಕನು.

ಕೊಡೆಯಾಳು ಆ ಮಾತಿಗೆ ನಕ್ಕು "ಸದ್ಯಕ್ಕೆ ನಾನು ಸರ್ವಶಕ್ತನಾದ ರಾಜನಷ್ಟೆ? ನನ್ನ ತರುವಾಯದಲ್ಲಿ ಈ ಪಟ್ಟವನ್ನೇರುವ ರಾಜನಿಗೆ ಉಳಿದ ಸನದುಗಳಿಗೆ ಮುದ್ರೆ ಮಾಡಿ ಕೊಡಲು ಆಜ್ಞಾಪಿಸುತ್ತೇನೆ” ಎಂದು ನುಡಿದವನೇ ನಾಲ್ಕನೆಯ ಗಳಿಗೆಬಟ್ಟಲು ಮುಕ್ಕಾಲು ಪಾಲು ನೀರಲ್ಲಿ ಮುಳುಗಿದ್ದು ಕಂಡು ಸಿಂಹಾಸನದಿಂದಿಳಿದನು.

ಪಟ್ಟದಿಂದಿಳಿದ ತನ್ನ ಪರಮೋದಾರನಾದ ಭೃತ್ಯನನ್ನು ಕಂಡು ಕೇರ೪ಾಧೀಶ್ವರನು ಪರಮ ಸಂತುಷ್ಟನಾಗಿ ಅವನನ್ನು ಗಟ್ಟಿಯಾಗಿ ಆಲಿಂಗಿಸಿದನು. ಕಣ್ಣುಗಳಲ್ಲಿ ಆನಂದಾಶ್ರುಗಳನ್ನು ಸುರಿಸುತ್ತೆ ಆ ರಾಜಾಧಿರಾಜನು ತನ್ನ ಭೃತ್ಯರಾಜನನ್ನು ಕುರಿತು ನುಡಿದದ್ದು: "ಮಗನೆ, ನೀನು ಇಮ್ಮಡಿ ಕರ್ಣನು. ಮರುಮುಕ್ಕಾಲು ಗಳಿಗೆ ಈ ಸಿಂಹಾಸನವನ್ನೇರಿ ಅಜರಾಮರವಾದ ಕೀರ್ತಿಯನ್ನು ಪಡೆದಿ. ಹತ್ತು ವರ್ಷ ನಾನು ಇದೇ ಸಿಂಹಾಸನದ ಮೇಲೆ ವ್ಯರ್ಥವಾಗಿ ಕುಳಿತೆನು,.ನಿನ್ನ ಸಂಬಂಧದಿಂದ 'ಇಂಥ ಮಹಾತ್ಮನ ಯಜಮಾನನು' ಎಂಬ ಮಧ್ಯಮಪತಿಯ ಕೀರ್ತಿಯಾದರೂ ನನ್ನ ಪಾಲಿಗೆ ಬಂದಿತು. ಅಷ್ಟೇ ನನಗೆ ಸಾಕು. ನಾನಿನ್ನು ನಿನ್ನ ಹೇಳಿಕೆಯ ಮೇರಿಗೆ ಸನದುಗಳಿಗೆ ಮುದ್ರೆ ಮಾಡುತ್ತೇನೆ. ಇನ್ನೇನಾದರೂ ನಿನ್ನ ಇಚ್ಛೆ ಇದುವದೋ?"

ಕೊಡೆಯಾಳು ಭೂಮಾಲನು ತನ್ನ ಒಡೆಯನ ಚರಣಗಳನ್ನು ಗಟ್ಟಿಯಾಗಿ ಹಿಡಿದು ಅವುಗಳನ್ನು ಕೃತಜ್ಞತಾಪೂರ್ವಕವಾಗಿ ಆನಂದಾಶ್ರುಗಳಿಂದ ಅಭಿಷೇಕಿಸಿ, ಪೂಜೆಗೈದು ನಮಸ್ಕರಿಸಿ “ಮಹಾಪ್ರಭೋ, ನಾನೆಷ್ಟರವನು! ನನ್ನ ಯೋಗ್ಯತೆ ಯಾತರದು! ಪ್ರಭುಗಳು ಸೇವಕನನ್ನು ಸಂಭಾವಿಸಿದ ಪುಣ್ಯ ಕಥೆಯೇ ಇದು. ದಾತೃಶಿರೋಮಣಿಗಳಾದ ಮಹಾರಾಜರ ಬಳಿಯಲ್ಲಿ ನಾನಿನ್ನನು ಕೇಳಿಕೊಳ್ಳಲಿ ? ಪುಣ್ಯಮಯವಾದ ಈ ಪಾದಗಳ ಸೇವೆಯು ನನಗೆ ಯಾವಜ್ಜೀವವೂ ತಪ್ಪಲಾಗದೆಂದೂ, ಮಹಾರಾಜರ ಮೇಲೆ ನಾನು ಹಿಡಿಯುತ್ತಿರುವ ಕಡೆಯು ಇನ್ನೊಬ್ಬರ ಕೈ ಸೇರಬಾರದೆಂದೂ ನಾನು ಬೇಡಿಕೊಳ್ಳುತ್ತೇನೆ' ಎಂದು ಕೇಳಿಕೊಂಡನು.

ಕೇರಳಾಧೀಶ್ವರನ, ಅವನ ಮಂತ್ರಿಗಳೂ, ನಾಗರಿಕರೂ, ವಿಪ್ರಮುನಿವರರೂ ಆ ಕೊಡೆಯಾಳ ಭೂಪಾಲನ ಮೇಲೆ ಪುಷ್ಪಾಕ್ಷತೆಗಳ ಮಳೆಗರೆದರು. ಈ ಪುಣ್ಯತಮವಾದ ಕಥೆಗೆ ಮಹಾತ್ಮರಾರ ಫಲಶ್ರುತಿಯನ್ನು ಬರೆಯಲಿಲ್ಲ. ಆದರೆ ಇದರ ಶ್ರುತಿಫಲವಿಲ್ಲವೆಂದು ಮಾತ್ರ ಯಾರೂ ನಂಬಲಾಗದು.

ಇದು ಕಟ್ಟು ಕಥೆಯಲ್ಲ. ನಿಜವಾದ ಇತಿಹಾಸವಿದು. ಕೊಡೆಯಾಳುಭೂಪಾಲನು ಹಾಕಿಕೊಟ್ಟ ಭೂಮಿಗಳ ಸೀಮೆಯ ಕಲ್ಲುಗಳ ಮೇಲೆ ಅಶ್ವಾ ರೂಢನಾದ ರಾಜನ ತಲೆಯ ಮೇಲೆ ಕೊಡೆ ಹಿಡಿದ ಬಂಟನ ಮೂರ್ತಿಗಳು ಇ೦ದಿಗಾದರೂ ಕಾಣುವವೆಂದು ಕೆಲಜನ ಪ್ರವಾಸಿಗಳು ಹೇಳುವುದುಂಟು.


ರಾಸಪುಟನ

"ವಿಷಮಪ್ಯಮೃತಂ ಕ್ವಚಿದ್ಭವೇದಮೃತಂ ವಾ ವಿಷಮೀಶ್ವರೇಚ್ಛಯಾ"- ಈಶ್ವರೇಚ್ಛೆಯಿಂದ ವಿಷವು ಒಮ್ಮೊಮ್ಮೆ ಅಮೃತವಾಗಿಯ ಅಮೃತವು ವಿಷವಾಗಿಯೂ ಪರಿಣಮಿಸುತ್ತದೆಂಬ ಭಾವಾರ್ಥದ ವಾಕ್ಯವನ್ನು ಕವಿಕುಲಶ್ರೇಷ್ಠನಾದ ಕಾಳಿದಾಸನು ಹೇಳಿ ಎರಡು ಸಾವಿರ ವರ್ಷಗಳಾಗಿ ಹೋಗಿದ್ದರೂ ಆ ವಾಕ್ಯದ ಸತ್ಯತೆಯು ಈಗಿನ ಮಹಾಯುದ್ಧದ ಕಾಲದಲ್ಲಿ ಜಗತ್ತಿಗೆಲ್ಲ ಸ್ಪಷ್ಟವಾಗಿ ಒಡೆದುತೋರಿದಂತೆ ಈ ಮುಂಚಿತವಾಗಿ ಎಂದೂ ತೋರಲಿಲ್ಲ. ಮೇಲಿನ ಉಕ್ತಿಯು ಕವಿಯ ಕಲ್ಪನೆಯೆಂದೆ ಈವರೆಗೆ ಅನೇಕರು ತಿಳಿದುಕೊಳ್ಳುತ್ತಿದ್ದರು. ಯುರೋಪದಲ್ಲಿ ಮಹಾಯುದ್ಧವು ಪ್ರಾರಂಭವಾದ ಬಳಿಕ ಅನೇಕವಾದ ಆಸಕ್ತಿಗಳಿಗೆ ಈ ಜಗತ್ತು ಈಡಾಯಿತು. ಲೆಕ್ಕವಿಲ್ಲದಷ್ಟು ರಕ್ತವು ಹರಿಯಿತು, ಸಮರಭೂಮಿಗಳಲ್ಲಿ ಹರಡಿಕೊಂಡಿರುವ ಎಲಬುಗಳ ರಾಶಿಯನ್ನು ಒಟ್ಟಿದರೆ, ಅದೊಂದು ಪರ್ವತಪ್ರಾಯವೇ ಆಗುವದು. ಯುದ್ಧಕ್ಕಾಗಿ ಪ್ರತಿನಿತ್ಯ ದಲ್ಲಿಯ ವೆಚ್ಚಾದ ಹಣವನ್ನು ಒಂದು ಸ್ಥಳದಲ್ಲಿ ಕೂಡಿ ಹಾಕಿದರೆ ಅದೊಂದು ಕನಕಗಿರಿಯೇ ಆಗುವದು. ಶಾಂತತಾ ಪ್ರಿಯರೂ ನಿರಪರಾಧಿಗಳೂ ಆದ ಅಸಂಖ್ಯಾತ ಜನರು ಧನಭ್ರಷ್ಟರೂ ದೇಶಭ್ರಷ್ಟರೂ ಆದರು. ಯುವತಿಯರ ಸರ್ವಸ್ವವಾದ ಮರ್ಯಾದೆಗೆ ಎಷ್ಟೋ ಎಡೆಗಳಲ್ಲಿ ಭಂಗವುಂಟಾಯಿತು. ಯುದ್ಧದ ಚಿತ್ರವು ಈ ರೀತಿಯಾಗಿ ಭಯಾನಕವಾಗಿದ್ದರೂ ಭವಿಷ್ಯತ್ಕಾದಲ್ಲಿ ಜಗತ್ತಿನ ತುಂಬೆಲ್ಲ ಬಂಧುಭಾವವನ್ನು ಹಬ್ಬಿಸಿ ಜಗತ್ತಿಗೆ ಸುಖಶಾಂತಿಗಳನ್ನಿಳಿಯುವ ಉದಾತ್ತವಾದದ್ದೊಂದು ತತ್ವವು ಯುದ್ಧ ಪ್ರಾರಂಭದಿಂದಲೇ ಕ್ರಮೇಣ ಅಡಿಗಳನ್ನಿಕ್ಕುತ್ತ ಮುಂದಕ್ಕೆ ಬರುತ್ತಿತ್ತು. ಅಥವಾ ಈ ತತ್ವದ ವಿಕಾಸಕ್ಕಾಗಿಯೇ ಈ ಯುದ್ಧವು ಪ್ರಾರಂಭವಾಯಿತೆಂದರೂ ಅದು ಅತಿಶಯೋಕ್ತಿಯಾಗಲಿಕ್ಕಿಲ್ಲ. ಮಿತ್ರಸಂಘದವರು ಜರ್ಮನಿಯ ಕ್ಷಾತ್ರಶಕ್ತಿಯ ಅಹಮ್ಮವ್ಯತೆಯ ವಿರುದ್ಧವಾಗಿ ಯುದ್ಧವನ್ನು ಸಾರಿ ರಣಭೇರಿಯನ್ನು ಹಾಡಿಸಿದಾಗ ನಿರ್ಬಲವಾದ ರಾಷ್ಟ್ರಗಳ ಸ್ವಾತಂತ್ರ್ಯ ರಕ್ಷಣವೇ ಅವರ ಉದ್ದೇಶವಾಗಿತ್ತು. ಆದರೆ, ಕಳೆದ ತಿಂಗಳಿನಲ್ಲಿ ಅಮೇರಿ ಕೆಯು ಮಿತ್ರ ಸಂಘದವರನ್ನು ಕೂಡಿಕೊಂಡು ಜರ್ಮನಿಯ ವಿರುದ್ಧವಾಗಿ ಯುದ್ಧವನ್ನು ಸಾರುವಾಗ, ಅಲ್ಲಿಯ ಪ್ರೆಸಿಡೆಂಟರಾದ ಮಿ. ಉಡ್ರೋ ವಿಲ್ಸನ್ ಇವರು, ಜಗತ್ತಿನೊಳಗಿನ ಏಕಮುಖಿಯಾದ ರಾಜಸತ್ತೆಯನ್ನು ಮರ್ಯಾದಿತ ಮಾಡಿ ಬಹುಮುಖಿಯಾದ ಲೋಕಸತ್ತೆಯನ್ನು ಪ್ರಸ್ಥಾಪಿಸ ಮಾಡುವದಕ್ಕಾಗಿಯೇ ಈ ಯುದ್ಧವು ಪ್ರಾರಂಭವಾಗಿದೆಂದು ಹೇಳಿ, ಸಾಮಾನ್ಯರಾದ ಜನರ ದೃಷ್ಟಿಗೆ ಅಗೋಚರವಾಗಿ ಬೆಳೆಯುತ್ತಿರುವ ಈ ತತ್ವದ ಸ್ವರೂಪವನ್ನು ತಿಳಿಸಿಕೊಟ್ಟರು. ರಶಿಯಾದಲ್ಲಿ ರಾಜ್ಯ ಕ್ರಾಂತಿಯಾಗಿ ರಶಿಯನ್ ರಾವಣನಾದ ರುವಾರನು ಪದಭ್ರಷ್ಟನಾಗಿ ಅಲ್ಲಿ ಲೋಕಸತ್ತಾತ್ಮಕ ರಾಜ್ಯ ಪದ್ಧತಿಯ ಉದಯವಾದಾಗ ಇಂಗ್ಲಂಡದ ಮುಖ್ಯ ಪ್ರಧಾನರಾದ ಲಾಯಿಡ್ ಜಾರ್ಜ ರವರು ರಶಿಯನ್ ಡೂಮಾರವರನ್ನು ಅಭಿನಂದಿಸುವ ಕಾಲಕ್ಕೆ ಈ ಮೇಲ್ಕಂಡ ತತ್ವದ ವಿಶ್ವ ವ್ಯಾಪಕತ್ವವನ್ನು ಜಗತ್ತಿಗೆ ತೋರಿಸಿದರು.

ಸದ್ಯಕ್ಕೆ ಈ ವಿಚಾರಕ್ಕೆ ಮಹತ್ವ ಬರಲು ಕಾರಣವಾದ ರಶಿಯನ್ ರಾಜ್ಯ ಕ್ರಾಂತಿಯಲ್ಲಿ ಮೊದಲನೆಯ ಆಹುತಿಯಾಗಿ ಬಿದ್ದ ರಾಸಪುಟವನ ಕುಟಿಲನೀತಿ ಆಚಾರ- ವಿಚಾರಗಳ ಇತಿವೃತ್ಯವನ್ನೇ ಹೇಳುವದು ನಮ್ಮ ಉದ್ದೇಶವಾಗಿರುವದರಿಂದ, ಏಕಸತ್ತಾತ್ಮಕವಾದ ರಾಜ್ಯ ಪದ್ಧತಿಗಿಂತಲೂ ಲೋಕ ನಿಯಂತ್ರಿತವಾದ ರಾಜ್ಯ ಪದ್ಧತಿಯು ಲೋಕಕ್ಕೆ ಏಕೆ ಹಿತಕರವಾದದ್ದೆಂಬದನ್ನು ಹೇಳುವ ಉದ್ಯೋಗಕ್ಕೆ ನಾವು ಇಲ್ಲಿ ಬೀಳುವದಿಲ್ಲ. ರಶಿಯಾದೊಳಗಿನ ಕ್ರಾಂತಿಕಾರಕ ಪಕ್ಷದವರು ತಮ್ಮ ಉದ್ದೇಶವು ಸಫಲವಾಗಬೇಕೆಂದು ಈಗ್ಗೆ ಎಷ್ಟೋ ವರ್ಷಗಳಿಂದ ಅವ್ಯಾಹತವಾಗಿ ಪ್ರಯತ್ನ ಪಡುತ್ತಿದ್ದರು. ಹೀಗೆ ಪ್ರಯತ್ನವನ್ನು ಮಾಡುತ್ತಿರುವವರಲ್ಲಿ ಸಾವಿರಾರು ಜನರು ಝಾರನ ಕೊಧಾಗ್ನಿಯಿಂದ ಮುಡಿದುಹೋದರು. ಲೋಕಹಿತವಾದಿಗಳಾದ ಈ ಜನರ ಹತ್ಯೆಯ ಪಾಪದ ಭಾರದಿಂದ ರಾರನ ಏಕಮುಖೀ ರಾಜ ಸತ್ತೆಯ ಮಂದಿರವು ವಿಶೃಲಿತವಾಗಿಹೋಗಿತ್ತು. ಪರರಾಷ್ಟ್ರಗಳ ಯುದ್ಧವನ್ನು ಮಾಡುವದರಲ್ಲಿ ರಾಜಸತ್ತೆಯು ತೊಡಗಿತೆಂದರೆ, ಕ್ರಾಂತಿಕಾರಕ ಜನರಿಗೆ ಅದೊಂದು ಸುಸಂಧಿಯು ಪ್ರಾಪ್ತವಾದಂತಾಗುತ್ತದೆ. ಇಂಥ ಸುಸಂಧಿಯಂ ರಶಿಯನ್ ಕ್ರಾಂತಿಕಾರರಿಗೆ ರುಸೋಜಪಾನಿ ಯುದ್ಧದಲ್ಲಿ ಮೊದಲನೆಯ ಸಾರೆ ದೊರೆಯಿತು. ಈ ಸುಸಂದಿಯ ಲಾಭವನ್ನು ಕ್ರಾಂತಿಕಾರಕ ಪಕ್ಷದವರು ತೆಗೆದು ಕೊಂಡಿದ್ದರಿಂದ, ಲೋಕಸತ್ತೆಯ ಜಯದ ಚಿಹ್ನವಾದ ಡ್ಯೂಮಾಸಭೆಯ ಸ್ಥಾಪನೆಯು ಆ ಕಾಲಕ್ಕಾಯಿತು. ಆದರೆ, ಡ್ರೈಮಾಸಭೆಗೆ ಝಾರನು ಯಾವದೇರೀತಿಯಾಗಿ ಮಯ್ಯಾದೆಯನ್ನು ತೋರಿಸದ್ದರಿಂದ ಪ್ರಚಲಿತ ಮಹಾಯುದ್ಧದ ಸಂಧಿಯನ್ನು ಸಾಧಿಸಿ, ಕ್ರಾಂತಿಕಾರಕ ಪಕ್ಷದವರು ಮತ್ತೆ ತಮ್ಮ ಧ್ವಜವನ್ನು ನಿಲ್ಲಿಸಿ, ಈ ಸಾರೆ ತಮಗೆ ಸಂಪೂರ್ಣವಾದ ಜಯವನ್ನು ಪ್ರಾಪ್ತ ಮಾಡಿಕೊಂಡರು. ಕ್ರಾಂತಿಕಾರಕ ಪಕ್ಷದವರಿಗೆ ಒಬ್ಬ ಝಾರನಿಂದಲೇ ಭೀತಿ ಇರದೆ, ಏಕಮುಖಿಯಾದ ಸತ್ತೆಯ ಮೂಲಕವಾಗಿ ಜನ್ಮ ಹೊಂದಿದ ಝಾರನ ಆನುಷಂಗಿಗಳಾದ ಡ್ಯೂಕರೇ ಮೊದಲಾದ ರಾಜವಂಶಸ್ಥರ ಭೀತಿಯಾದರೂ ಇದ್ದೆ ಇದ್ದಿತು. ಯಾಕೆಂದರೆ, ಇವರೆಲ್ಲರ ಏಕತಂತ್ರವಾದ ಸತ್ತೆಯ ಪ್ರತಿಬಿಂಬವಾಗಿದ್ದು, ಬಲಶಾಲಿಗಳೂ ಸತ್ತಾಧಿಕಾರಿಗಳೂ ಆಗಿದ್ದರು. ಆದರೆ ಈ ಜನರೆಲ್ಲ ಯುದ್ಧದಲ್ಲಿ ತೊಡಕಿ, ರಾಜಧಾನಿಯನ್ನು ಬಿಟ್ಟು, ಸಾವಿರಾರು ಮೈಲುಗಳ ಅಂತರದ ಮೇಲೆ ಹೋಗಿರುವದನ್ನು ಕಂಡು, ಕ್ರಾಂತಿಕಾರಕ ಪಕ್ಷದವರು ಈ ಸಂಧಿಯನ್ನು ಸಾಧಿಸಿದರು. ಝಾರನ ಹತ್ತಿರದಲ್ಲಿದ್ದ ಸೈನ್ಯವೆಲ್ಲ ಫಿತೂರಿ, ಕ್ರಾಂತಿಕಾರಕ ಪಕ್ಷದವರಿಗೆ ಬಲಾಡ್ಯ ಶತ್ರುವೂ ರಾಜಪಕ್ಷದವರಿಗೆ ದೊಡ್ಡ ಬೆಂಬಲನೂ ಝಾರ ಹಾಗೂ ಅವನ ಪತ್ನಿಯರಾದ ಝಾರೀನಾ ಇವರನ್ನು ಆರಂಭ ಮಾಡಿಕೊಂಡು, ಯಃಕಶ್ಚಿತನಾದ ಮನುಷ್ಯನ ವರೆಗೆ ತನ್ನ ಅಧಿಕಾರವನ್ನು ನಡಿಸಿದವನೂ ಆದ ಮಂಕರ ರಾಸಪುಟನ ಎಂಬವನ ಕೊಲೆಯನ್ನು ಕ್ರಾಂತಿಕಾರಕ ಪಕ್ಷದವರು ದಿಸೆ೦ಬರದ ಕೊನೆಯ ವಾರದಲ್ಲಿ ಮಾಡಿದರು. ರುಧಿರಪ್ರಿಯಳಾದ ಕ್ರಾಂತಿಯ ದೇವತೆಗೆ ಕೊಡಲ್ಪಟ್ಟ ಬಲಿಗಳಲ್ಲಿ ಇವನೇ ಮೊದಲನೆಯವನು, ಈ ವ್ಯಕ್ತಿಯ ಚರಿತ್ರವು ವಿಚಿತ್ರವಾಗಿರುವದರಿಂದ ಅದನ್ನು ಇಲ್ಲಿ ಅಲ್ಪಶಃ ಕೊಡುತ್ತೇವೆ.

ಸಾಯಬಿರಿಯಾ ಪ್ರಾಂತದಲ್ಲಿ ಟೇಬೋಲಸ್ಯದಲ್ಲಿ ರಾಸಪುಟನನ ಜನ್ಮವಾಯಿತು. ಆಯುಷ್ಯದ ಮೊದಲನೆಯ ಮೂವತ್ತು ವರ್ಷಗಳನ್ನು ಇವನು ಒಕ್ಕಲತನದ ವ್ಯವಸಾಯದಲ್ಲಿಯೇ ಕಳೆದನು. ರಾಸಪುಟನನು ಮಹತ್ವಾಕಾಂಕ್ಷಿಯ ಧೈರ್ಯಶಾಲಿಯ ಬುದ್ಧಿವಂತನೂ ಆಗಿದ್ದಂತೆಯೇ ವಿಷಯೋಪಭೋಗಿಯ ಲೋಭಿಯೂ ಆಗಿದ್ದನು. ಅಮಿತವಾದ ದ್ರವ್ಯವನ್ನು ಅಧಿಕಾರವನ್ನೂ ಸಂಪಾದಿಸುವ ಮಹತ್ವಾಕಾಂಕ್ಷೆಯು ಇವನಲ್ಲಿ ಅನಿವಾರ್ಯವಾಗಿತ್ತು. ಈ ಗುಣಗಳು ಅವನನ್ನು ಸುಮ್ಮನೆ ಕೂಡಗೊಡಲಿಲ್ಲ, ಸಾಧು ಸಂತರ ಅಥವಾ ಸನ್ಯಾಸಿಗಳ ವೇಷವನ್ನು ತೊಟ್ಟು, ಮೂಢಭಕ್ತರನ್ನು ಮೋಸಗೊಳಿಸುತ್ತ ಧರ್ಮಜಾಗೃತಿಯನ್ನು ಮಾಡುವ ವಿಷದಿಂದ ದೇಶ ಸಂಚಾರವನ್ನು ಮಾಡುತ್ತಿರುವ ಅನೇಕ ಜನರನ್ನು ನಮ್ಮಲ್ಲಿ ಈ ಜನರಂತೆಯೇ ರಾಸಪುಟವನಿಗಾದರೂ ವಿಷಯಗಳಲ್ಲಿ ವೈರಾಗ್ಯವುಂಟಾಗಿ ಧರ್ಮಜಾಗೃತಿಯನ್ನು ಮಾಡುವ ಬುದ್ಧಿಯುಂಟಾಯಿತು. ಮಠ-ಮಠಾಂತರಗಳಲ್ಲಿ ಸಂಚರಿಸುತ್ತ ಅಲ್ಲಿ ಪ್ರಚಲಿತವಾಗಿದ್ದ ಕ್ರಿಸ್ತಮತದ ಮೇಲೆ ಟೀಕೆಯನ್ನು ಮಾಡುವದೇ ಅವನ ಪ್ರಾರಂಭದ ಕಾರ್ಯವಾಗಿತ್ತು. ಇದೇ ಮಾರ್ಗದಿಂದಲೇ ಅವನು ಸರ್ವತ್ರದಲ್ಲಿ ತನ್ನ ವರ್ಚಸ್ಸನ್ನು ಸ್ಥಾಪಿಸಿದನು. ಬರುಬಬತ್ತೆ ರಾಸಪುತಿನನು ಧರ್ಮದ ರಾಜ್ಯದಲ್ಲಿ ಪ್ರಸಿದ್ಧನಾದ ವ್ಯಕ್ತಿಯೇ ಆಗಿ ಕುಳಿತನು.

ಸಾಯಬಿರಿಯಾ ಪ್ರಾಂತದ ಜನರು ಮೊದಲೇ ಸಶಕ್ತರು. ಅದರಲ್ಲಿಯೂ ರಾಸಪುಟಿನನು, ಹಗಲಿರುಳು ಹೊಲದಲ್ಲಿ ದುಡಿಯುವ ತಂದೆತಾಯಿಗಳ ಹೊಟ್ಟೆ ಯಲ್ಲಿ ಹುಟ್ಟಿದವನಾದ್ದರಿಂದ ಇವನು ಶರೀರದಿಂದ ಭವ್ಯನೂ ಸಶಕ್ತನೂ ಆಗಿದ್ದನು. ಸುಂದರವೂ ಚಿತ್ತಾಕರ್ಷಕವೂ ಇವನ ಮುಖಮುದ್ರೆ, ಉಚ್ಚವಾದ ಭಾಲ ಪ್ರದೇಶ, ತೇಜಃಪುಂಜವಾದ ನೇತ್ರಯುಗ್ಮ, ವಿಸ್ತಾರವಾದ ಹೃದಯ ಮುಂತಾದವುಗಳ ಪರಿಣಾಮವು ಅವನನ್ನು ನೋಡುವವರ ಮೇಲೆ ವಿಲಕ್ಷಣವಾಗಿ ಆಗುತ್ತಿತ್ತು. ಅವನ ಮಾತು ಕಥೆಗಳಲ್ಲಾದರೂ ಒಂದು ಪ್ರಕಾರದ ಮೋಹಕತನವಿತ್ತು. ಇಂಥ ಅನೇಕವಾದ ಗುಣಗಳ ಸಹಾಯವು ಅವನಿಗೆ ಇದ್ದ ದರಿಂದ ರಾಸಪುಟನನ ವರ್ಚಸ್ಸು ದಿನೇ ದಿನೇ ಬೆಳೆಯಹತ್ತಿತು. ಸ್ತ್ರೀಯರ ಮೇಲಂತೂ ಅವನ ಅಂಗ ಸೌಂದರ್ಯದ ಹಾಗೂ ಧಾರ್ಮಿಕ ಉಪದೇಶದ ಪರಿಣಾಮವು ಒಳಿತಾಗಿಯೇ ಆಗಹತ್ತಿತು. ಸಾಯಬಿಡಿಯಾದಿಂದ ಹೊರಟ ಆವನ ಧಾರ್ಮಿಕ ಮತದ ತೆರೆಗಳು ರಶಿಯಾದ ರಾಜಧಾನಿಯಾದ ಸೆಂಟಿಪಿಟರ್ಸಬರ್ಗದ ಬಾಗಿಲಕ್ಕೆ ಬಂದು ಅಪ್ಪಳಿಸ ಹತ್ತಿದವು. ತನ್ನ ಅಮೋಘವಾದ ವಕ್ತತ್ವದ ಬಲದಿಂದ ಸಾಯ ಬಿರಿಯಾದೊಳಗಿನ "ಪುರಾಣಮಿತ್ಯೇವ ಹಿ ಸಾಧು ಸರ್ವಂ" ಎಂದು ಪ್ರತಿಪಾದಿಸುವ ಕ್ರಿಸ್ತಿ ಮತಾಭಿಮಾನಿಗಳ ನಾಲಿಗೆಯನ್ನು ಕಟ್ಟಿದನು. ರಾಸಪುಟನನ ಈ ಧರ್ಮಸುಧಾರಣೆಯ ಪ್ರಯತ್ನಕ್ಕೆ ಅಲೌಕಿಕವಾದ ಬೇರೊಂದು ಶಕ್ತಿಯ ಬೆಂಬಲವಾಗಿತ್ತು. ಆ ಶಕ್ತಿಯೆಂದರೆ, ಹಿಪ್ಪಾಟಿಝಮ್ ಅಥವಾ ವಿದ್ಯುನ್ನಾನಸಶಾಸ್ತ್ರವು. ರಾಸಪುಟನನು ತನ್ನ ಕೇವಲವಾದ ಆಶೀರ್ವಾದದಿಂದಲೂ ದೃಷ್ಟಿ ಕ್ಷೇಪದಿಂದಲೂ ಅಸಾಧ್ಯವಾದ ರೋಗಗಳನ್ನು ವಾಸಿಮಾಡುತ್ತಾನೆಂಬ ವಿಶ್ವಾಸವು ಸರ್ವಸಾಧಾರಣರಾದ ಜನರಲ್ಲಿ ನೆಲೆಗೊಂಡಿತ್ತು. ಇಂಥ ಅನುಭವವಾದರೂ ಅನೇಕರಿಗೆ ಬಂದಿತ್ತು. ಕ್ರಮೇಣ, ರಾಸಪುಟಿನನೆಂದರೆ ದೈವೀಚಮತ್ಕಾರಗಳನ್ನು ಮಾಡುವ ಸಿದ್ಧ ಪುರುಷನೂ, ಹರಿಕಗಳನ್ನು ಹೊತ್ತರೆ ಪ್ರಸನ್ನನಾಗುವವನೂ ಎಂಬ ವಿಶ್ವಾಸವು ಧರ್ಮಸಂವಢರ ಜಡಮತಿಗಳೂ ಆದ ಅನಾಥರಿಂದ, ಧನಾಡ್ಯರೂ ಗರ್ಭಶ್ರೀಮಂತರೂ ಆದ ಸರದಾರರ ಕುಟುಂಬಗಳೊಳಗಿನ ಸ್ತ್ರೀಯರ ವರೆಗೆ ದೃಢವಾಗಿದ್ದರಿಂದ ತನ್ನ ಕೈ ಕಾಲುಗಳನ್ನು ಚಾಚಲು ಅವನಿಗೆ ಅವಕಾಶ ದೊರೆಯಿತು. ಇದರಿಂದ ರಾಸಪುಟಿನನ ಶಿಷ್ಯ ಸಂಪತ್ತು ಬೆಳೆಯಿತು;ಹತ್ತರದಲ್ಲಿ ದ್ರವ್ಯ ಸಂಚಯವಾಯಿತು; ಆವನ ಧರ್ಮಮತದ ಪ್ರಸಾರವನ್ನು ಮಾಡುವದಕ್ಕಾಗಿ ಸ್ಥಲ ಸ್ಥಲಾಂತರಗಳಲ್ಲಿ ಧರ್ಮಾಲಯಗಳು ಸ್ಥಾಪಿತವಾದವು ; ರಾಜಧಾನಿಯಾದ ಪೆಟ್ರೋಗ್ರಾಡದಲ್ಲಿ ಕೂಡ ಅವನ ಧರ್ಮಾಲಯದ ಕಾರ್ಯವು ಪ್ರಬಲವಾಗಿ ನಡೆಯಹತ್ತಿತು. ಕೊನೆಯಲ್ಲಿ ಇವನ ಕೀರ್ತಿಯು ಝಾರ ಹಾಗೂ ಝರೀನಾ ಇವರ ಕಿವಿಗಳಿಗೆ ಮುಟ್ಟಿತು.


ರಶಿಯಾದ ರಾಜದಂಪತಿಗಳಿಗೆ ಪುತ್ರ ಪ್ರಾಪ್ತಿಯಾಗದ್ದರಿಂದ ಅವರ ಅಂತಃಕರಣಗಳು ಬಹಳೇ ಖಿನ್ನವಾಗಿದ್ದವು. ಇಂಥ ಸ್ಥಿತಿಯಲ್ಲಿ ರಾಸಪುಟದ ಸಾಧುವಿನ ದೈವೀಚಮತ್ಕಾರದ ವೃತ್ತಾಂತವನ್ನು ಕೇಳಿದವರಾದ ಝರೀನಾ ಇವರ ಮನಸ್ಸಿನಲ್ಲಿ ಆಶಾ೦ಕುರವು ಹುಟ್ಟಿ, ಈ ಸಾಧುವಿನ ಪ್ರಸಾದದಿಂದಾದರೂ ತಮಗೆ ಪುತ್ರಲಾಭವಾಗಲೆಂದು ಅವರು ರಾಜಪುಟಿನನ ಅನುಯಾಯಿ ವರ್ಗವನ್ನು ಸೇರಿದರು. ರಾಣಿಯವರು ಭಕ್ತಿ ಭಾವದಿಂದ ರಾಸಪುಟವನ ದರ್ಶನಕ್ಕೆ ಮೇಲಿಂದ ಮೇಲೆ ಹೋಗಹತ್ತಿದರು. ಕರ್ಮಧರ್ಮಸಂಯೋಗದಿಂದ ಮುಂದೆ ಕೆಲವು ದಿವಸಗಳಲ್ಲಿ ರಾಣಿಯವರಿಗೆ ಮಗ ಹುಟ್ಟಿದನು. ರಾಣಿಯವರಿಗೆ ಈ ಮೊದಲು ನಾಲ್ಕು ಜನ ಹೆಣ್ಣು ಮಕ್ಕಳಾಗಿದ್ಧ ರೂ ವಂಶಾಭಿವೃದ್ಧಿಕರನಾದ ಮಗನು ಹುಟ್ಟಿದ್ದಿಲ್ಲ, ರಾಸಪುಟನನ ಆಶೀರ್ವಾದದಿಂದಲೂ ಪ್ರಸಾದದಿಂದಲೂ ತಮಗೆ ಇಂಥ ಮಗನು ಹುಟ್ಟಿದನೆಂಬ ಸಂಪೂರ್ಣವಾದ ಶ್ರದ್ಧೆಯು. ರಾಣಿಯವರಲ್ಲಿ ನೆಲೆಗೊಂಡಿದ್ದರಿಂದ ಇದರ ಪರಿಣಾಮವು ಝಾರರ ಮೇಲಾದರೂ ಒಳಿತಾಗಿಯೇ ಆಯಿತು. ಇದರಿಂದ ರಾಸಪುಟನನು ದರಬಾರದೊಳಗಿನ ಒಬ್ಬ ಪ್ರಮುಖನಾಡ ಗೃಹಸ್ಥನಾಗಿ ಅವನ ವರ್ಚಸ್ಸು ಝಾರರ ಮೇಲೆ ವಿಶೇಷವಾಗಿ ಬೆಳೆಯಿತು. ಝಾರರ ಯುವರಾಜನಾದ ರಾಗವಿಚ್ಚನು ವ್ಯಂಗನಾಗಿಯೇ ಹುಟ್ಟಿದ್ದರಿಂದ ಈ ವ್ಯಂಗವನ್ನು ಕಳೆಯುವದಕ್ಕಾಗಿ ಯುರೋಪದೊಳಗಿನ ಪ್ರಖ್ಯಾತರಾದ ಡಾಕ್ಟರರೆಲ್ಲರೂ ಪ್ರಯತ್ನ ಪಟ್ಟರೂ ಅವರ ಪ್ರಯತ್ನವು ಸಿದ್ಧಿಗೆ ಹೋಗಲಿಲ್ಲ. ಆಗ್ಗೆ ಝರೀನಾ ಇವರ ಆಗ್ರಹದ ಮೂಲಕವಾಗಿ ರಾಸಪುಟವನನ್ನು ಕರೆತಂದು ರಾಜಮಂದಿರದಲ್ಲಿಯೇ ಅವನಿಗೆ ಇರಹೇಳಿದರು. ಅವನ ಅದ್ಭುತವಾದ ಸಾಮರ್ಥ್ಯದಿಂದಲೇ ಸ್ವಲ್ಪಾವಕಾಶದಲ್ಲಿ ಝಾರವಿಚ್ಚನ ಕಾಲೊಳಗಿನ ವ್ಯಂಗವು ಇಲ್ಲದಂತಾಗಿ ಅವನು ನಡೆಯು ಹತ್ತಿದನು. ಝಾರವಿಚ್ಚನು ವಾಸಿಯಾದ ಬಳಿಕ ರಾಸಪುಟಿನನಿಂದ ಅವನು ಆಗಲಿಸಲ್ಪಟ್ಟನು. ಆದರೆ, ಚಮತ್ಕಾರದ ಸಂಗತಿಯೆಂದರೆ, ರಾರವಿಚ್ಚನ ದೇಹವು ಪೂರ್ವವತ್‌ ನಿರ್ಬಲವಾಯಿತು. ಅದಕ್ಕಾಗಿ ರಾಸಪುಟವನನ್ನು ಮತ್ತೆ ಕರತರಬೇಕಾಯಿತು. ಈ ರೀತಿಯಾಗಿ ರಾಸಪುಟನನು ಝಾರರ ಮನೆಯೊಳಗೆ ಅವಶ್ಯಕನಾದ ಗೃಹಸ್ಥನೊಬ್ಬನಾದ್ದರಿಂದಲೂ ಅವನ ಸಾಮರ್ಥ್ಯದ ವಿಷಯಕವಾಗಿ ರಾಜದಂಪತಿಯರ ವಿಶ್ವಾಸವಿದ್ದದರಿ೦ದಲೂ ಕಾಲಾನುಕ್ರಮವಾಗಿ ಝಾರನು ಪ್ರತಿಯೊಂದು ಸಂಗತಿಯಲ್ಲಿ ಅವನನ್ನು ವಿಚಾರಿಸಹತ್ತಿದನು. ಇದನ್ನು ಕಂಡು ಅಧಿಕಾರ೮ಾಲಸರಾದ ಅಧಿಕಾರೀ ವರ್ಗದವರೆಲ್ಲ ತಮಗೆ ಬೇಕಾದ ಸಂಗತಿಗಳನ್ನು ರಾಸಪುಟವನ ಮುಖಾಂತರವಾಗಿ ಮಾಡಿಸಿಕೊಳ್ಳಹತ್ತಿದರು. ಈ ರೀತಿಯಾಗಿ ರಾಸಪುಟನನು ಅಧಿಕಾರಿ ವರ್ಗಕ್ಕೆ ಪ್ರಿಯನಾಗಹತ್ತಿದಂತೆ, ಕ್ರಾಂತಿಕಾರಕ ಪಕ್ಷದವರಿಗೆ ಬಲಾಡ್ಯನಾದ ಶತ್ರುವಾಗಿ ಕುಳಿತನು.

“ಸಂಪೂರ್ಣವಾದ ರಶಿಯಾದ ಪವಿತ್ರ ನಾದ ಝಾರ"ನು ಈ ಗೃಹಸ್ಥನ ವಶನಾಗಿದ್ದರಿಂದ ಇವನು ತನ್ನ ಮನಸ್ಸಿಗೆ ಬಂದ ಕಾರಭಾರಗಳನ್ನು ಮಾಡಹತ್ತಿದನು. ಜನರ ಕಡೆಯಿಂದ ಅನ್ಯಾಯವಾಗಿ ದ್ರವ್ಯವನ್ನು ಸೆಳೆಯುವದೇ ಇವನ ಕೆಲಸವಾಗಿರದೆ, ತನ್ನ ಸ್ವಭಾವಕ್ಕನುಸರಿಸಿ, ಸುಂದರರು ಆದರೆ ಅನಾಥರಾದ ಸ್ತ್ರೀಯರ ಮೇಲೆ ಅನನ್ವಿತವಾದ ಜುಲುಮೆಗಳನ್ನು ಮಾಡಲಾರಂಭಿಸಿದನು. ನೂರಾರು ಸ್ತ್ರೀಯರನ್ನು ಅವನು ಭ್ರಷ್ಟ ಮಾಡಿದನು. ನೃಪಾಂಗಣಗತನಾದ ಈ ಖಲನು ಶಲ್ಯದಂತೆ ಸರ್ವರಿಗೂ ಶಾಪದಾಯಕನಾದನು. ಇವನನ್ನು ದೇಶಬಿಡಿಸಿ ಹೊರಗೆ ಹಾಕಬೇಕೆಂದು ಅನೇಕ ವಾದ ಪ್ರಯತ್ನಗಳು ಮಾಡಲ್ಪಟ್ಟವು ಪೆಟ್ರೋಗಾಡದ ಧರ್ಮಾಧಿಕಾರಿಗಳಾದರೂ ಪ್ರಯತ್ನ ಪಟ್ಟರು. ಆದರೆ, ಝಾರನ ಆರಭ್ಯ ಕನಿಷ್ಟ ಅಧಿಕಾರಿಯವರೆಗಿನ ಪ್ರತಿಯೊಬ್ಬ ಅಧಿಕಾರಿಯ ಬೆಂಬಲವು ಇವನಿಗಿದ್ದದರಿಂದ ಜನರ ಪ್ರಯತ್ನಗಳೆಲ್ಲ ವ್ಯರ್ಥವಾದವು. ಪ್ರಮುಖರಾದ ಸೇನಾಪತಿಗಳೂ ಮಧ್ಯಾಹ್ನ ಕೈ ಅಭಾವವಾದ ದರಿದ್ರರೂ ಕೂಡಿಯೇ ಇವರ ಧರ್ಮಾಲಯಕ್ಕೆ ಬರುತ್ತಿದ್ದರು. ರಾಜಧಾನಿಯೊಳಗಿನ ವಿಲಾಸಿನಿಯರು ಕೂಡ ಈ ಧರ್ಮಾಲಯವನ್ನೇ ತಮ್ಮ ವಿಶ್ರಾಂತಿ ಸ್ಥಾನವನ್ನಾಗಿ ಕಲ್ಪಿಸಿಕೊಂಡರು ರಾಸಪುಟನ ಧರ್ಮಾಲಯವು, ಶ್ರೀಮಂತರೂ ವಿಷಯಲೋಲುಪರೂ ದುಂದುಗಾರರೂ ಆದ ಜನರ ಕೇಲಿಸ್ಥಾನವಾದಂತೆ, ಅನಾಥ ಸ್ತ್ರೀಯರ ಮಾನಹಾನಿಯ ನರಕವಾಗಿತ್ತು. ಝಾರವಿಚ್ಚನ ವಿಷಯಕವಾಗಿ ಆದರೂ ಜನರ ಪ್ರವಾದಗಳು ಕೇಳಿಬರಹತ್ತಿದವು. ಇದಕ್ಕಾಗಿ ರಾಸಪುಟನನು ಹದ್ದು ಪಾರು ಮಾಡಲ್ಪಟ್ಟನು.

ಅಪಮಾನವನ್ನು ಸಹಿಸಿ ಹದ್ಧಸಾರನಾಗಿ ಇರುವದು ರಾಸಪುಟಿನನ ಸ್ವಭಾವವಾಗಿದ್ದಿಲ್ಲ. ರಾಜರಾಣಿಯರಿಗೆ ತನ್ನ ದೈವೀಸಾಮರ್ಥ್ಯದ ಹೆದರಿಕೆಯನ್ನು ತೋರಿಸಿ, ಅವರಿಗೆ ಕ್ಷಮೆಯನ್ನು ಪಡೆದು ಕೊಂಡು ೧೯೧೩ನೆಯ ಇಸ್ವಿಯ ಕೊನೆಯಲ್ಲಿ ಇವನು ಮತ್ತೆ ರಾಜಧಾನಿಗೆ ಬಂದನು ಇದೇ ಸುಮಾರಕ್ಕೆ ಮಾಸಭೆಯೊಳಗಿನ ಸಭಾಸದರು ಇವನನ್ನು ಬಹಿರಂಗವಾಗಿ ನಿಂದಿಸಿ, ರಾಜಧಾನಿಯಲ್ಲಿರಲು ಇವನು ಅಯೋಗ್ಯನಾದ ಪುರುಷನೆಂದು ಗೊತ್ತು ಪಡಿಸಿದರೂ ಇವನನ್ನು ಹೊರಗೆ ಹಾಕುವದು ಅಸಾಧ್ಯವಾಯಿತು. ಆದರೆ, ಪಾಪದ ಪ್ರಾಯಶ್ಚಿತ್ತವು ಒಂದಿಲ್ಲೊಂದು ವಾರದಿಂದ ದೊರೆಯುವದು ನಿಶ್ಚಯವಾದ ವಸತಿ ೧೯೧೪ನೆಯ ಇಸ್ವಿಯ ಜುಲೈ ತಿಂಗಳಿನಲ್ಲಿ ಜುಲಿಯಾ ಮ್ಯುಸೇವಾ ಎಂಬ ಸ್ತ್ರೀಯೋರ್ವಳು ಇವನನ್ನು ಕೊಲ್ಲುವ ಉದ್ದೇಶದಿಂದ ಇವನ ಮೇಲೆ ಶಸ್ತಾಘಾತವನ್ನು ಮಾಡಿದಳು. ಆದರೆ, ಆ ಕಾಲಕ್ಕೆ ಇವನು ಭಯಂಕರವಾದ ಗಾಯವನ್ನು ಹೊಂದಿದನೇ ಹೊರತಾಗಿ ಮರಣಹೊಂದಲಿಲ್ಲ, ಜುಲಿಯಾ ಇವಳು ಮಾಡಿದ ಸಾಹಸಕ್ಕಾಗಿ ಅವಳನ್ನು ನ್ಯಾಯಾಸನದ ಮುಂದೆ ನಿಲ್ಲಿಸಿದಾಗ ಇವಳು ಹೇಳಿದ್ದೇನಂದರೆ, “ರಾಸಪುಟಿನನು ಅನಾಥರಾದ ಆನೇಕ ಸ್ತ್ರೀಯರ ಪಾತಿವ್ರತ್ಯವನ್ನು ಭಂಗಮಾಡಿದ್ದರಿಂದ ಅವನಿಗೆ ದೇಹಾಂತ ಶಿಕ್ಷೆಯನ್ನು ಕೊಡುವದು ಯೋಗ್ಯವಾದದ್ದು. ಆದರೆ ಅನಾಮಯವಾದ ಈ ರಾಜ್ಯದಲ್ಲಿ ಅದು ಆಗುವದು ಶಕ್ಯವಿಲ್ಲದ್ದರಿಂದ ನಾನು ಅವನ ಕಲೆಯನ್ನು ಮಾಡುವ ಪ್ರಯತ್ನವನ್ನು ಮಾಡಿದೆನು."

ಮೇಲೆ ಹೇಳಿದ ಗಾಯದಿಂದಲೇ ಇವನು ಹಾಸಿಗೆಯನ್ನು ಹಿಡಿದಾಗ ರಶಿಯಾ ಝಾರನು ಜರ್ಮನಿಯ ವಿರುದ್ಧವಾಗಿ ಯುದ್ಧವನ್ನು ಸಾರಿದನು. ಜರ್ಮನಿಯ ಗುಪ್ತ ಚಾರರದೂ ಇವನದೂ ಸಂಬಂಧವಿತ್ತೆಂತಲೂ ಯುದ್ಧಾರಂಭದಲ್ಲಿ ಇವನು ದೃಢಾಂಗನಾಗಿದ್ದರೆ ಜರ್ಮನಿಯ ವಿರುದ್ಧವಾಗಿ ಯುದ್ಧ ಮಾಡಲು ಝಾರನನ್ನು ಪ್ರೋತ್ಸಾಹಿಸುತ್ತಿದ್ದಿಲ್ಲೆಂತಲೂ ಜನರು ಅನ್ನುತ್ತಾರೆ. ಮೇಲೆ ವರ್ಣಿತವಾದ ಕೊಲೆಯ ಪ್ರಯತ್ನವು ಯಶಸ್ವಿಯಾಗದ್ದರಿಂದಂತೂ ತನ್ನ ದೈವೀಸಾಮರ್ಥ್ಯದ ಪ್ರೌಢಿಯನ್ನು ಮೆರೆಯಿಸುವ ಅವಕಾಶವು ಇವನಿಗೆ ವಿಶೇಷವಾಗಿ ದೊರೆಯಿತು. ಮನುಷ್ಯನು ಒಮ್ಮೆ ನಾಚಿಕೆಯನ್ನು ಬಿಟ್ಟು ಕೊಟ್ಟನೆಂದರೆ, ಅವನ ಅವನತಿಗೆ ಮರ್ಯಾದೆಯೇ ಉಳಿಯುವದಿಲ್ಲ. ರಾಸಪುಟವನು ತನ್ನ ಆತ್ಮ ಸ್ತುತಿ ಮಾಡಿಕೊಳ್ಳುವಾಗ ಎರಡು ಮೂರುವರ್ಷಗಳ ಪೂರ್ವದಲ್ಲಿ ತಾನು ಎಷ್ಟು ಸ್ತ್ರೀಯರನ್ನು ಅಂಕಿತನಾಡಿಕೊಂಡಿದ್ದೆನೆಂಬ ವರ್ಣನೆಯನ್ನು ನಿರ್ಲಜ್ಜತೆಯಿಂದ “ನೋವ್ಹೆ ರ್ಹೇಮ್ಯ" ಎಂಬ ಪತ್ರದಲ್ಲಿ ಪ್ರಸಿದ್ಧ ಮಾಡಿದ್ದಾನೆ.

ಈ ರೀತಿಯಾಗಿ ಪ್ರಬಲನೂ ಸಾಮರ್ಥ್ಯವಾನನೂ ದೈವೀಗುಣದ ಮಿಥ್ಯಾಪ್ರದರ್ಶಕನೂ ಅನಾಥ ಸ್ತ್ರೀಯರ ಮಾನಹಾರಕನೂ ಆದ ಈ ಅಧವ್ಯನನ್ನು ಜಗತ್ತಿನಲ್ಲಿ ಇಲ್ಲದಂತೆ ಮಾಡುವದು ಕ್ರಾಂತಿಕಾರಕ ಪಕ್ಷದವರ ಆದು ಕರ್ತವ್ಯವಾಗಿತ್ತು. ರಶಿಯಾದೊಳಗಿನ ಸರದಾರರ ಮನೆತನಕ್ಕೆ ಹೊಂದಿದ ಆರು ಜನ ಗೃಹಸ್ಥರು ಈ ಕಾರ್ಯವನ್ನು ವಹಿಸಿಕೊಂಡರು. ಇವರಲ್ಲಿ ಪ್ರಿನ್ಸ್ ಫೆಲಿಕ್ಸಿಯುಸುಪೋವ ಎಂಬ ಸರದಾರನು ಇವನಿಗೆ ತನ್ನ ಮನೆಗೆ ಭೋಜನಕ್ಕಾಗಿ ಆಮಂತ್ರಣವನ್ನು ಕೊಟ್ಟನು. ಭೋಜನಸಮಾರಂಭವೆಲ್ಲ ಮುಗಿದು ಮದ್ಯಪ್ರಾಶನದ ವಿಧಿಯು ಕೂಡ ಸಾಂಗವಾದ ಬಳಿಕ ಈ ಆರು ಜನರಲ್ಲಿ ಒಬ್ಬನು ರಾಸಪುಟನನ ಕೈಯಲ್ಲಿ ರಿವಾಲ್ವರವನ್ನು ಕೊಟ್ಟು ತನ್ನ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಅವನಿಗೆ ಹೇಳಿದನು. ಈ ಅಪ್ಪಣೆಯನ್ನು ಕೊಡುವದಕ್ಕೆ ಮುಂಚಿತವಾಗಿ ರಾಸಪುಟಿನನ ಮಾಪಕೃತ್ಯಗಳ ಪ್ರವಚನಯಾಯಿತು. ಈ ಪಾಪರಾಶಿಯು ಸುಟ್ಟು ಹೋಗಬೇಕಾದರೆ ದೇಹವಿಸವಿರ್ಜನದ ಹೊರತು ಬೇರೆ ಮಾರ್ಗವಿಲ್ಲೆಂತಲೂ, ಪಾಪವರ್ತಿಯಾದ ಅವನನ್ನು ಕೊಂದು ತಮ್ಮ ಕೈಗಳನ್ನು ಅಪವಿತ್ರ ಮಾಡಿ ಕೊಳ್ಳಲು ತಮ್ಮಲ್ಲಿ ಯಾರೂ ಸಿದ್ಧರಿಲ್ಲಂತಲೂ ಅದಕ್ಕಾಗಿ ರಾಸಪುಟವನೇ ತನ್ನ ಆತ್ಮಹತ್ಯವನ್ನು ಮಾಡಿಕೊಳ್ಳತಕ್ಕದ್ದೆಂತಲೂ ಅವನಿಗೆ ಹೇಳಲ್ಪಟ್ಟಿತು.

ರಾಸಪುಟಿತನು ಇದಕ್ಕೆ ಪ್ರತ್ಯುತ್ತರವನ್ನು ಕೊಡದೆ, ರಿವಾಲ್ವರವನ್ನು ಕೈಯಲ್ಲಿ ತೆಗೆದುಕೊಂಡು ಈ ಆರು ಜನ ಗೃಹಸ್ಥರಲ್ಲಿ ಪ್ರಮುಖನಾಗಿದ್ದವನ ಮೇಲೆ ಅದನ್ನು ಹಾರಿಸಿದನು. ಆದರೆ ಆ ಗೃಹಸ್ಥನು ಪೂರ್ಣ ಎಚ್ಚರವುಳ್ಳವನಾದ್ದರಿಂದಲೂ ರಾಸಪುಟನನ ಸ್ವಭಾವವನ್ನು ಆಮೂಲಾಗ್ರವಾಗಿ ಬಲ್ಲವನಾದ್ದರಿಂದಲೂ ಆ ಗುರಿಯನ್ನು ತಪ್ಪಿಸಿಕೊಂಡನು. ತನ್ನ ಪ್ರಯತ್ನವು ನಿಷ್ಪಲವಾದದ್ದನ್ನು ಕಂಡು ರಾಸಪುಟನನು ಪಲಾಯನಹಿಡಿಸಿದನು. ಆದರೆ ಈ ಗೃಹಸ್ಥರು ಆವನನ್ನು ಬೆನ್ನಟ್ಟಿ ತಮ್ಮ ಕೈಯಲ್ಲಿರುವ ರಿವಾಲರಗಳಿಂದ ಅವನನ್ನು ಕೊಂದು, ಅವನ ಪ್ರೇಕವನ್ನು ನದಿಯಲ್ಲಿ ಚೆಲ್ಲಿದರು. ರಾಸಪುಟನನು ಈ ರೀತಿಯಾಗಿ ತಮ್ಮ ಪಾಪಕೃತ್ಯಗಳ ಫಲವನ್ನುಂಡನು.


ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು

ಒಂದಾನೊಂದು ಕ್ಷೇತ್ರದಲ್ಲಿಯ ಒಂದು ಶಾಂತವಾದ ಮಠದಲ್ಲಿ ಒಬ್ಬ ಬ್ರಹ್ಮಚಾರಿಯು ಇರುತ್ತಿದ್ದನು. ಬ್ರಾಹ್ಮ ಮುಹೂರ್ತದಲ್ಲಿ ತೀರ್ಥೋದಕದಲ್ಲಿ ಸ್ನಾನ, ಮಧ್ಯಾಹ್ನ ಕಾಲದಲ್ಲಿ ಮಧುಕರ ವೃತ್ತಿ, ಉಳಿದ ಕಾಲದಲ್ಲಿ ವೇದಾಧ್ಯಯನ, ಶಾಸ್ತ್ರಾಧ್ಯಯನ, ಕಾವ್ಯ ಪರಿಶೀಲನ, ಭಗವಚ್ಚಿಂತನ, ಮುಂತಾದ ಸತ್ಕರ್ಮಗಳಿಂದ ಆ ಬ್ರಹ್ಮಚಾರಿಯು ಸತ್ತುಲಕ್ಷೇಪವನ್ನು ಮಾಡುತ್ತಿದ್ದನು. ಅವನ ಮೈ ಕಟ್ಟು ಸುದೃಢವಾಗಿಯ. ಶರೀರಯಷ್ಟಿಯು ಉಚ್ಚವಾಗಿಯ ವರ್ಣವು ಗೌತವಾಗಿಯೂ ಮಗು ಸರಲವಾಗಿಯೂ ಕಣ್ಣುಗಳು ವಿಶಾಲವಾಗಿಯೂ ಇದ್ದು ಅವನ ಮುಖಕಾಂತಿಯು ಒಳ್ಳೇ ತೇಜಃಪುಂಜವಾದದ್ದಾಗಿತ್ತು. ಜನ್ಮದಾರಭ್ಯ ಅವನ ಆಚರಣವು ಶುದ್ಧವಾಗಿದ್ದು, ಮರಣಾಂತಿಕವಾದ ಸಂಕಟಗಳು ಬಂದೊದಗಿದರೂ ತನ್ನ ಆಚರಣಗಳಿಂದ ತಾನು ಭ್ರಷ್ಟನಾಗಕೂಡದೆಂದು ಅವನು ಮನಸಾ ನಿಶ್ಚಯ ಮಾಡಿದ್ದನು. ಅವನ ತಂದೆತಾಯಿಗಳು ಬಡವರಾಗಿದ್ದು ಅವನು ಚಿಕ್ಕವನಿರುವಾಗಲೇ ಮಡಿದುಹೋಗಿದ್ದರು. ಅದರಿಂದ ದಾರಿದ್ರವು ಅವನ ನಿಸರ್ಗಸಿದ್ಧವಾದ ಅವಸ್ಥೆಯೇ ಆಗಿತ್ತು. ಆದರೂ ಇದಕ್ಕಾಗಿ ಅವನು ಎಂದೂ ಖೇದಪಡುತ್ತಿದ್ದಿಲ್ಲ. ಅವನು ಯಾವಾಗಲೂ ಸಮಾಧಾನವುಳ್ಳವನಾಗಿದ್ದನು. ಅವನು ಪೂರ್ಣನಾದ ನಿರ್ಲೋಭಿಯ ದ್ರವ್ಯವೆಂದರೆ, ಅವನಿಗೆ ದ್ವೇಷವು ಹುಟ್ಟುತ್ತಿತ್ತು. ಈ ರೀತಿಯಾಗಿ ಅವನು ತನ್ನ ಆಯುಷ್ಯದ ಪೂರ್ವ ಭಾಗವನ್ನು ಸುಖದಲ್ಲಿಯೂ, ಸಮಾಧಾನದಲ್ಲಿಯೂ ಕಳೆಯುತ್ತಿರಲು, ಒಂದು ದಿನ ರಾತ್ರಿಯ ಕೊನೆಯ ಯಾಮದಲ್ಲಿ ಅವನಿಗೊಂದು ಸ್ವಪ್ನವು ಬಿದ್ದಿತು. ಸ್ವಪ್ನದಲ್ಲಿ ಯಾವನೋ ಒಬ್ಬ ಪುರುಷನು ಅವನ ಹತ್ತಿರ ಬಂದು ಅವನನ್ನುದ್ದೇಶಿಸಿ, "ಏಳು, ಮಲಗಿರುವೇನು ? ನಿನ್ನನ್ನು ನಾನು ಈಗ ಧನಿಕನನ್ನಾಗಿ ಮಾಡತಕ್ಕವನಿದ್ದೇನೆ. ” ಧರ್ಮಪರಾಯಣತೆಯಲ್ಲಿಯೂ, ಮಧುಕರ ವೃತ್ತಿಯಲ್ಲಿಯೂ ಬೆಳೆದ ಆ ಬ್ರಹ್ಮಚಾರಿಗೆ ಧನಿಕನಾಗುವ ಕಲ್ಪನೆಯು ಸ್ವಪ್ನದಲ್ಲಿ ಸಹ ರುಚಿಸಲಿಲ್ಲ. ಅವನು ಒಳ್ಳೆ ಆವೇಶದಿಂದ ಅಂದದ್ದು : "ಧನಿಕನಾಗಲು ನಾನು ಇಚ್ಚಿಸುವದಿಲ್ಲ.”

ಪುರುಷನು : ಅದೇಕೆ ?

ಬ್ರಹ್ಮಚಾರಿಯು : ಧನದಲ್ಲಿ ನನಗೆ ಪ್ರೀತಿಯಿಲ್ಲ.

ಪುರುಷನು : ರೂಢಿಯಿಂದ ಎಲ್ಲ ವಸ್ತುಗಳು ಪ್ರಿಯಕರವಾಗುತ್ತವೆ. ಈ ನಿನ್ನ ಮಧುಕರವೃತ್ತಿಯ ಬ್ರಹ್ಮಚರ್ಯಾಶ್ರಮವೂ ನಿನಗೆ ಪ್ರಿಯವಾಗಬೇಕಾದರೆ, ರೂಢಿಯಲ್ಲದೆ ಮತ್ಯಾವ ಕಾರಣವು ರೂಢಿಯ ಹೊರತು ಅನ್ಯವಾವದೂ ಅಲ್ಲ. ಬಿಕ್ಕೆಯನ್ನು ಬೇಡುವ ಹಾಗೂ ಸ್ತ್ರೀ ಸುಖಕ್ಕೆ ಎರವಾಗುವ ಸಂಗತಿಗಳು ಎಲ್ಲರಿಗೂ ದುಃಸಹವಾಗಿದ್ದರೂ ರೂಢಿಯು ನಿನಗೆ ಅವುಗಳಲ್ಲಿ ಇಷ್ಟು ಪ್ರೀತಿಯನ್ನುಂಟುಮಾಡಿದೆಂದ ಮೇಲೆ ವಿಪುಲವಾದ ಸಂಪತ್ತೂ, ಸುಂದರರಾದ ಸ್ತ್ರೀಯರೂ, ನಾನಾ ಪ್ರಕಾರದ ಸುಖೋಪಭೋಗಗಳ ರೂಢಿಯಿಂದ ನಿನಗೆ ಪ್ರಿಯಕರವಾಗಲಿಕ್ಕಿಲ್ಲೆಂಬ ಮಾತು ಎಂದಾದರೂ ಸಂಭವಿಸುವದೇ?

ಬ್ರಹ್ಮ: ರೂಢಿಯು ಮನುಷ್ಯನಿಂದ ಬೇಕಾದ ಕೆಲಸವನ್ನು ಮಾಡಿಸಬಲ್ಲದೆಂಬ ಸಂಗತಿಯನ್ನು ನಾನಾದರೂ ಒಪ್ಪಿಕೊಳ್ಳುತ್ತೇನೆ. ರೂಢಿಯು ವಿಷವನ್ನು ಮಧುರವಾಗಿಯೂ, ಅಮೃತವನ್ನು ಕಹಿಯಾಗಿಯೂ ಮಾಡಬಹುದು. ಆದರೆ, ವಿಚಾರವಂತನಾದವನು ,ಏಷವು ಮಧುರವಾದದ್ದೆಂದು ಮನ್ನಿಸುವ ರೂಢಿಯನ್ನು ಆದರಿಸಬೇಕೋ ಅನಾದರಿಸಬೇಕೋ ಎಂಬದೇ ಮುಖ್ಯವಾದ ಪ್ರಶ್ನವಾಗಿದೆ. ಶಾಂತ ಸಮಾಧಾನಾದಿ ಗುಣಗಳಿಂದ ಪೂರಿತವಾದ ಈ ವೈರಾಗ್ಯಾ ಮೃತವನ್ನು ಬಿಟ್ಟು ವಿಷಮಯವಾದ ಪ್ರಾಪಂಚಿಕ ಸುಖದ ವ್ಯಸನವನ್ನು ಹಚ್ಚಿಕೊಳ್ಳುವದಕ್ಕೆ ನಾನಂತೂ ಇಚ್ಛಿಸುವದಿಲ್ಲ.

ಪು : ನಾನಂತೂ ಇಚ್ಛಿಸುವದಿಲ್ಲ! 'ನಾನು' ಎಂಬುವದರಲ್ಲಿ ಅಭಿಮಾನವಾದರೂ ಎಷ್ಟು! ನಿನ್ನ ಇಚ್ಛೆಯನ್ನು ಕೇಳುವವರಾರು? ನಿನ್ನ ಇಚ್ಛೆಯಿಂದಲೇ ಈ ಜಗತ್ತು ನಡೆದಿರುವದೆಂದು ನೀನು ತಿಳಿದಿರುವಿಯಾ ? ಈ ರೀತಿಯಾಗಿ ಪ್ರತಿಯೊಬ್ಬನ ಇಚ್ಛೆಗನುಸಾರವಾಗಿ ಈ ಜಗತ್ತು ನಡೆಯ ಹತ್ತಿದರೆ, ಅದು ಕ್ಷಣಮಾತ್ರವಾದರೂ ನಡೆಯಲಾರದು.

ಬ್ರಹ್ಮ: ನಡೆಯದಿದ್ದರೆ ಇಲ್ಲ; ಅದರಿಂದ ನನ್ನದೇನು ಅಡ್ಡಗಾಣಿಸುವದು? ಬೇಕಾದರೆ ಈ ಜಗತ್ತು ಇಂದಿಗೇ ಲಯಹೊಂದಲಿ. ಇಂಥ ದುಃಖದಾಯಕವಾದ ಜಗತ್ತು ನಡೆಯುವದಕ್ಕಿಂತ ಅದು ನಿಂತುಹೋಗುವದೇ ಒಳಿತಾದದ್ದು. ಆದರೆ ಈ ಜಗತ್ತು ನಿಂತು ಬಿಡುವದು ಇಲ್ಲವೆ ನಡೆಯುವದು ಅದೇನು ನನ್ನ ಕೈಯೊಳಗಿನ ಮಾತಲ್ಲ. ಆದರೆ ನನ್ನ ಇಚ್ಛೆಯು ಮಾತ್ರ ಪೂರ್ಣವಾಗಿ ನನ್ನ ಕೈಯೊಳಗಿನ ಮಾತಾಗಿದೆ.

ಪು : ಇಲ್ಲ! ಅದಾದರೂ ನಿನ್ನ ಕೈಯೊಳಗಿನ ಮಾತಾಗಿಲ್ಲ. ಈಗಿನ ನಿನ್ನ ಇಚ್ಛೆಯು ನಿನ್ನ ಪೂರ್ವಜನ್ಮದ ಅನೇಕ ಇಚ್ಛೆಗಳಿಂದ ನಿಯಂತ್ರಿತವಾಗಿದೆ. ಹಾಗೂ ನಿನ್ನ ಭಾವೀ ಸಂಸತ್ತಿನ ಅವಸ್ಥೆಯಾದರೂ ನೀನು, ಪೂರ್ವ ಜನ್ಮದ ಕರ್ಮಗಳಿಂದ ನಿಶ್ಚಿತವಾಗಿದೆ. ಅದನ್ನು ನೀನು ತಪ್ಪಿಸಲರಿಯೆ. ಒಂದು ಜನ್ಮದಲ್ಲಿ ನೀನು ಅಸಂಖ್ಯಾತವಾದ ದ್ರವ್ಯವನ್ನು ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿರುವಿ, ಆ ಕರ್ಮವು ಈಗ್ಗೆ ಪರಿಪಕ್ವವಾಗಿ ಫಲೋನ್ಮುಖವಾಗಿದೆ. ಅದನ್ನು ಸ್ವೀಕರಿಸದ ಹೊರತು ನಿನಗೆ ಗತ್ಯಂತರವಿಲ್ಲ. ನೀನು ಧನಿಕನಾಗಲೇ ಬೇಕು, ಇಂಥ ಸ್ಥಿತಿಯು ಬಂದೊದಗಿದೆ.

ಬ್ರಹ್ಮ: ಈ ಪ್ರಸಂಗವು ನನ್ನ ಮೇಲೆ ಒದಗದಿದ್ದರೆ, ಬಹಳ ಒಳಿತಾಗುವದು. ಮೇಲಾಗಿ ನಾನು ಧನಿಕನಾಗುವದಕ್ಕೆ, ಒಂದು ಮಹತ್ವದ ಕಾರಣದ ಸಲುವಾಗಿ, ತೀರ ಅಯೋಗ್ಯನಿರುತ್ತೇನೆಂದು ನಿಮಗೆ ಅನಿಸುವದಿಲ್ಲವೋ ?

ಪು: ಅಂಥ ಕಾರಣವಾದರೂ ಯಾವದು ?

ಬ್ರಹ್ಮ: ಆ ಕಾರಣವೆಂದರೆ ನನ್ನಲ್ಲಿ ವಿದ್ವತ್ತೆಯು ನೆಲೆಗೊಂಡಿದೆ. ವೇದಾಧ್ಯಯನವನ್ನು ನಾನು ಪೂರ್ಣವಾಗಿ ಮುಗಿಸಿದ್ದೆ ಆನೆ. ಶಾಸ್ತ್ರದಲ್ಲಂತೂ ನನ್ನ ಗತಿಯು ಅಪ್ರತಿ ಶತವಾಗಿದ್ದು, ನನ್ನ ಕೈಯನ್ನು ಹಿಡಿಯುವವರು ಈ ಇಡೀ ಕ್ಷೇತ್ರದಲ್ಲಿ ಯಾರೂ ಇಲ್ಲ, ಕಾವ್ಯಾದಿಗಳ ಪರಿಶೀಲನದಿಂದಲೂ ವ್ಯವಹಾರದ ಪ್ರತ್ಯಕ್ಷವಾದ ಅನುಭವದಿಂದಲೂ ಅವಶ್ಯವಾದ ಜಾಣತನವು ನನ್ನಲ್ಲಿ ಬಂದಿದೆ. ಅಂದಮೇಲೆ ನಾನು ಧನಿಕನಾಗುವದು ಹೇಗೆ ? ಶ್ರೀಮಂತರಿಗೆ ಮುಖ್ಯವಾಗಿ ಬೇಕಾಗಿರುವ ಗುಣಗಳ ಅಭಾವವೇ ನನ್ನಲ್ಲಿದ್ದ ಬಳಿಕ, ನೀವು ನನ್ನನ್ನು ಜುಲುಮೆಯಿಂದ ಶ್ರೀಮಂತನನ್ನಾಗಿ ಮಾಡಿದರೂ ನನ್ನನ್ನು ಶ್ರೀಮಂತನೆಂದು ಕರೆಯುವವರಾರು ? ಈ ವಿದ್ಯೆಯ ತೊಂದರೆಗಳ ಮೂಲಕವಾಗಿ, ಶ್ರೀಮಂತರಲ್ಲಿರುವ ಗುಣಗಳ ಒಂದಾದರೂ ಲಕ್ಷಣವನ್ನು ತೋರಿ ಸಲು ನಾನು ಸಮರ್ಥವಾಗದಿದ್ದರೆ, ನಿಮ್ಮ ಪ್ರಯತ್ನವು ನಿಷ್ಪಲವಾಗುವದು. ಅದಕ್ಕಾಗಿ ನಾನು ಅನ್ನುವದೇನಂದರೆ, ಶ್ರೀಮಂತನನ್ನು ಮಾಡುವದಕ್ಕಾಗಿ ನೀವು ಬೇರೆ ಮತ್ಯಾವನನ್ನಾದರೂ ಶೋಧಿಸಿರಿ. ನಿರಪರಾಧಿಯ ಜ್ಞಾನಿಯೂ ಆದ ನನ್ನನ್ನು ನಿಷ್ಕಾರಣವಾಗಿ ಯೂಕೆ ಪೀಡಿಸುವಿರಿ ?

ಪು: ಯಾವನನ್ನು ಶ್ರೀಮಂತನನ್ನಾಗಿ ಮಾಡಬೇಕಾಗಿದೆ ಅವನು ಸ್ವಭಾವತಃ ಮರ್ಖನಾಗಿದ್ದರೆ ಒಳಿತಾದದ್ದೆಂಬ ಮಾತು ನಿಜವು; ಯಾಕೆಂದರೆ, ದೊಡ್ಡವರಾದ ಬಳಿಕ ಅವರಲ್ಲಿ ಪ್ರ ಸಂಗವು ಬಂದೊದಗಿದಾಗ, ಮೂರ್ಖತನದ ಗುಣಗಳನ್ನು ಹುಟ್ಟಿ ಸುವದು ಕಠಿಣವಾಗುತ್ತದೆ; ಇದಲ್ಲದೆ, ಮೂರ್ಖತನದಲ್ಲಿ ನಿಷ್ಣಾತರನ್ನಾಗಿ ಮಾಡುವ ಶಾಲೆಗಳನ್ನು ಇನ್ನೂ ಯಾರೂ ವಿಶೇಷವಾಗಿ ಸ್ಥಾಪಿಸಿಲ್ಲ. ಅಂದಮೇಲೆ ತಾರುಣ್ಯ, ಏಷಯೋಪಭೋಗದ ನಿಃಸೀಮವಾದ ಲಾಲಸೆ, ಕುಸಂಗತಿ ಮುಂತಾದ ಸಂಗತಿಗಳಿಂದ ಮನುಷ್ಯರಲ್ಲಿ ಹುಟ್ಟುವ ಆಲ್ಪಸ್ವಲ್ಪವಾದ ಮೂರ್ಖತನದಿಂದಲೇ ಸಂತೋಷವನ್ನು ಹೊಂದಿ ಸ್ವಸ್ಥವಾಗಿ ಕೂಡ ಬೇಕಾಗುತ್ತದೆ. ಆದರೂ ಈ ಸಂಗತಿಗಳಲ್ಲಿ ಸಂಪತ್ತೊಂದು ಕೂಡಿತೆಂದರೆ, ಧನಿಕರ ಬಡಿವಾರಕ್ಕೆ ಸಾಕಾಗುವಷ್ಟು ಮರ್ಖತನವು ಮನುಷ್ಯನಲ್ಲಿ ಹುಟ್ಟೇ ಹುಟ್ಟುತ್ತದೆ. ಮೇಲಾಗಿ ಶ್ರೀಮಂತನು ವಿದ್ಯಾವಂತನಾಗಿರಲೇಬಾರದೆಂದು ಯಾರೂ ನಿಯಮವನ್ನಾದರೂ ಹಾಕಿಕೊಟ್ಟಿಲ್ಲ. ಇಷ್ಟಾಗಿಯೂ ಎಲ್ಲ ನಿಯಮಗಳಿಗೂ ಅಪವಾದಗಳು ಉಂಟೇ ಉಂಟು, ಆಪ್ಪಿ ತಪ್ಪಿ ಒಬ್ಬ ವಿದ್ವಾಂಸನು ಶ್ರೀಮಂತನಾದರೆ, ಅದರಿಂದ ಹಾನಿಯಾದರೂ ಯಾವದು ? ನೀನು ಶ್ರೀಮಂತನಾಗಲು ಒಪ್ಪಿಕೊಳ್ಳು, ಅಂದರೆ ನೀನು ಮೂರ್ಖನಾದಿಯೆಂತಲೇ ತಿಳಿ, ವಿದ್ವತ್ತೆಯನ್ನೆಲ್ಲ ಮುಚ್ಚಿ ಬಿಡುವ ಲೋಕೋಕರವಾದ ಗುಣವು ಸಂಸತ್ತಿನಲ್ಲಿದೆ, ನೀನು ಒಪ್ಪಿಕೊಂಡರೆ ಸಾಕು.

ಬ್ರಹ: ಪ್ರಾಣ ಹೋದರೂ ಶ್ರೀಮಂತನಾಗಲಿಕ್ಕೆ ನಾನು ನನ್ನ ಒಪ್ಪಿಗೆಯನ್ನು ಕೊಡಲಾರೆನು, ನನ್ನನ್ನು ಮೋಸಗೊಳಿಸಿ ಇಲ್ಲವೆ ನನಗೆ ತಿಳಿಯದಂತೆ ನೀವು ನನ್ನನ್ನು ಶ್ರೀಮಂತನನ್ನಾಗಿ ಮಾಡಬಹುದೇ ಹೊರತು, ಶ್ರೀಮಂತನಾಗುವದಕ್ಕೆ ನಾನು ನನ್ನ ಒಪ್ಪಿಗೆಯನ್ನು ಸ್ವಸಂತೋಷದಿಂದ ಎಂದೂ ಕೊಡಲಾರೆನು. ಆದರೆ, ನೀವು ನನ್ನ ಮೇಲೆ ಬಲಾತ್ಕಾರವನ್ನಾದರೂ ಮಾಡುವದೇಕೆ ? ನಿಮಗೆ ನನ್ನ ವಿಷಯಕ್ಕೆ ದಯವು ಹುಟ್ಟುವದಿಲ್ಲವೆ?ಕರುಣಾಸಮುದ್ರನಾದ ದೇವರೇ, ನೀನಾದರೂ ನನ್ನನ್ನು ದರ್ಯಾರ್ದ್ರ ದೃಷ್ಟಿಯಿಂದ ನೋಡು, ನಾನು ೬೦ಥ ಯಾವ ಅಘೋರವಾದ ಪಾಶಕವನ್ನು ಮಾಡಿರುವೆನೆಂದು ನೀನು ನನಗೆ ಶ್ರೀಮಂತನಾಗುವ ಶಿಕ್ಷೆಯನ್ನು ವಿಧಿಸುವಿ? ನನಗೆ ತಿಳಿಯಹತ್ತಿದಂದಿನಿಂದ ನಾನು ಧರ್ಮಾಚರಣವನ್ನೇ ಮಾಡುತ್ತ ಬಂದೆನೆಂದು ನನಗೆ ಈ ಪ್ರಾಯಶ್ಚಿತ್ತವೆ?

ಹೀಗೆ ಮಾತಾಡುತ್ತ ಮಾತಾಡುತ್ತ ಆ ಬ್ರಹ್ಮಚಾರಿಯು ಸ್ವಪ್ನದಲ್ಲಿ ರೋದನ ಮಾಡಹತ್ತಿದನು. “ನಿಷ್ಕಾರಣವಾಗಿ ನನ್ನ ಮೇಲೆ ಸಂಪತ್ತಿನ ಬೆಟ್ಟವನ್ನು ಉರುಳಿಸುವ ನಿರ್ದಯ ಹಾಗೂ ಕಠೋರನಾದ ಪುರುಷನೆ, ನೀನು ಯಾರು?” ಹೀಗೆ ಅವನು ಅಳುತ್ತ ಅಳುತ್ತ ಅವನನ್ನು ಕೇಳಹತ್ತಿದನು. ಈ ಪ್ರಶ್ನಕ್ಕೆ, “ನಾನು ಕರ್ಮಾಧಿಕಾರಿಯು” ಎಂಬ ಅಸ್ಪಷ್ಟವಾದ ಉತ್ತರವನ್ನು ಕೊಟ್ಟು, ಆ ಪುರುಷಾಕೃತಿಯು ಮೆಲ್ಲಮೆಲ್ಲನೆ ಅಂತರ್ಧಾನವನ್ನು ಹೊಂದಿದ ಕೂಡಲೆ, ಬ್ರಹ್ಮಚಾರಿಯು ಕಳವಳಿಸಿ ಎಚ್ಚರಗೊಂಡನು ಪೂರ್ವ ದಿಕ್ಕಿಗೆ ನಕ್ಷತ್ರ ರಾಜನಾದ ಶುಕ್ರನು ಆಗಲೇ ಉದಯನಾಗಿ ಮೇಲಕ್ಕೆ ಹತ್ತಿದ್ದನು. ಅದನ್ನು ಕಂಡು ಅವನು ಪ್ರಸನ್ನ ಚಿತ್ತವುಳ್ಳವನಾಗಿ, ಸ್ವಪ್ನ ದೊಳಗಿನ ಸಂಗತಿಯನ್ನು ಮರೆತು ನಿತ್ಯದ ಕರ್ಮವನ್ನು ಸಾಧಿಸಲುದ್ಯುಕ್ತನಾದನು.

****

ಪ್ರಖ್ಯಾತಿಯನ್ನು ಹೊಂದಿದ ಒಂದು ಪಟ್ಟಣದಲ್ಲಿ ಒಬ್ಬ ವೃದ್ಧನಿರುತ್ತಿದ್ದನು. ಸಂತತಿಯ ಅಭಾವದ ಹೊರತು ಆವನ ಯಾವ ಸುಖಕ್ಕೂ ಕೊರತೆಯಿದ್ದಿಲ್ಲ. ಪುತ್ರ ಪ್ರಾಪ್ತಿಯ ಸಲುವಾಗಿ ಶಕ್ಯವಾಗಿದ್ದ ಎಲ್ಲ ಪ್ರಯತ್ನಗಳನ್ನು ಅವನು ಮಾಡಿದರೂ ದುರ್ದೈವದಿಂದ ಅವನಿಗೆ ಯಶವು ದೊರೆಯಲಿಲ್ಲ. ಮೂವರು ಪತ್ನಿಯರು ನಿಪುತ್ರಿಕರಾಗಿ ಮರಣಹೊಂದಿದ್ದರಿಂದ, ಐದಾರು ವರ್ಷಗಳ ಪೂರ್ವದಲ್ಲಿ ಅವನು ನಾಲ್ಕನೆಯವಳನ್ನು ಮದುವೆಯಾಗಿದ್ದನು. ಆದರೂ ಪುತ್ರ ಮುಖವನ್ನು ನೋಡುವ ಸುಯೋಗವು ಅವನಿಗೆ ಪ್ರಾಪ್ತವಾಗಲಿಲ್ಲ. ಹೆರವರ ಮಗನನ್ನು ದತ್ತಕ ತೆಗೆದುಕೊಳ್ಳದ ಹೊರತು ಅನ್ಯವಾದ ಮಾರ್ಗವು ಉಳಿಯಲಿಲ್ಲ. ಅವನ ವಂಶಕ್ಕೆ ಹೊಂದಿದವನು ಯಾವನಾದರೂ ಇದ್ದರೆ, ಅವನನ್ನು ಗೊತ್ತು ಹಚ್ಚ ಬೇಕೆಂದು, ಆ ವೃದ್ಧನ ಪುರೋಹಿತನು ಶೋಧ ಮಾಡುತ್ತ ಮಾಡುತ್ತೆ ಈ ಬ್ರಹ್ಮಚಾರಿಯು ವಾಸಮಾಡಿರುವ ಕ್ಷೇತ್ರಕ್ಕೆ ಬಂದನು. ವಿಚಾರ ಮಾಡುತ್ತಿರಲು, ಈ ಬ್ರಹ್ಮಚಾರಿಯು ಆ ವೃದ್ಧನ ವಂಶಕ್ಕೆ ಹೊಂದಿದ ದೂರಿನ ಆಪ್ತನಾಗಿದ್ದನು. ಕ್ಷೇತ್ರಪುರೋಹಿತರ ಹಸ್ತಕದಲ್ಲಿದ್ದ ವಂಶಾವಳಿಯ ಪುಸ್ತಕಗಳನ್ನು ಬ್ರಹ್ಮಚಾರಿಯ ಮುಂದೆ ಬಿಚ್ಚಿಟ್ಟು ಈ ಮಾತಿನ ಸತ್ಯತೆಯನ್ನು ಆ ವೃದ್ಧ ಪುರೋಹಿತನು ಅವನಿಗೆ ಸಿದ್ಧ ಮಾಡಿ ಕೊಟ್ಟನು. ದ ಕವಿಧಾನಕ್ಕೆ ಆ ಬ್ರಹ್ಮಚಾರಿಯ ಸಮ್ಮತಿಯನ್ನು ದೊರಕಿಸಲು ಪುರೋಹಿತನು ಪ್ರಯಸಹತ್ತಿದನು ಬ್ರಹ್ಮಚಾರಿಯ ಮನಸ್ಸಿನ ಪ್ರವೃತ್ತಿಯು ಮಧುಕರಿಯ ವೃತ್ತಿಯ ಕಡೆಗೆ ಪೂರ್ಣವಾಗಿದ್ದರೂ ಅವನು ಪುರೋಹಿತನ ಮಾತುಗಳನ್ನು ಲಕ್ಷ್ಮಗೊಟ್ಟು ಕೇಳುತಿದ್ದನು. ಬರಬರುತ್ತ, ಈ ಮಾತುಗಳ ಪರಿಣಾಮವು ಬ್ರಹ್ಮಚಾರಿಯ ಮನಸ್ಸಿನ ಮೇಲೆ ಆಗಹತ್ತಿದ ಚಿಹ್ನೆಗಳು ಅವನ ಮೋರೆಯ ಮೇಲೆ ಕಾಣಹತ್ತಿದವು. ಪುರೋಹಿತನು ತನ್ನ ಸಂಭಾಷಣದಲ್ಲಿ ಬ್ರಹ್ಮಚಾರಿಯ ಭಾವೀ ಸುಖಗಳ ಹಾಗೂ ವೈಭವದ ಚಿತ್ರಗಳನ್ನು ಒಳ್ಳೆ ಮೋಹಕವಾಗಿ ತೆಗೆಯುತ್ತಿದ್ದನು. ಒಂದು ಪ್ರಸಂಗದಲ್ಲಿ, ಅವನ ಮನಸ್ಸು ಒಳಿತಾಗಿ ಒಲಿದದ್ದನ್ನು ಕಂಡು, ಪುರೋಹಿತನು ಅವನನ್ನು ಈ ರೀತಿಯಾಗಿ ಸಂಬೋಧಿಸಿದನು : "ನಿಮ್ಮ ದತ್ತ ವಿಧಾನವಾಯಿತೆಂದರೆ, ನಿಮಗೆ ಯಾರ ಕೊರತೆ ? ಸ್ವಸ್ಥ ಕುಳಿತು ಐಶ್ವರ್ಯವನ್ನು ಉಪಭೋಗಿಸುವದೇ ನಿಮ್ಮ ಕೆಲಸ ದೇವಾಧಿದೇವತೆಗಳಿ೦ದ ಪ್ರಾರ್ಥಿಸಲ್ಪಟ್ಟ ಲಕ್ಷ್ಮಿಯು ತಾನಾಗಿ ನಡೆದು ನಿಮ್ಮ ಹತ್ತರ ಬಂದಿರಲು, ಅವಳನ್ನು ಧಿಕ್ಕರಿಸಿ ಮಧುಕರಿಯ ಜೋಳಿಗೆಯನ್ನು ಕೈಯಲ್ಲಿ ಹಾಕಿಕೊಳ್ಳುವದು ಎಲ್ಲಿಯ ನ್ಯಾಯವು ? ಸುಂದರಳೂ, ಚತುರಳೂ ಆದ ಕನ್ನಿಕೆಯ ಕೂಡ ನಾವು ನಿಮ್ಮ ವಿವಾಹವನ್ನು ಮಾಡುವವು. ವಿಪುಲವಾದ ಸಂಪತ್ತು ಹಾಗೂ ಮನೋಜ್ಞಳಾದ ಸ್ತ್ರೀಯು ದೊರಕುತ್ತಿದ್ದರೆ, ಉಪವಾಸ ವನವಾಸಪಟ್ಟು ಸ್ವರ್ಗವನ್ನಾದರೂ ಇಚ್ಛಿಸುವದ್ಯಾಕೆ ? ಧರ್ಮವನ್ನೇ ಆಚರಿಸುವದು ನಿಮ್ಮ ಇಚ್ಛೆಯಾಗಿದ್ದರೆ, ಶ್ರೀಮಂತರಾಗಿ ಗೃಹಸ್ಥಾಶ್ರಮದಲ್ಲಿದ್ದು ಧರ್ಮಾಚರಣವನ್ನು ಮಾಡುವದಕ್ಕೆ ನಿಮಗೆ ಯಾವ ಪ್ರತ್ಯನಾಯವು? ಮೇಲಾಗಿ ಈ ಬ್ರಹ್ಮಚರ್ಯವನ್ನು ಕಾಪಾಡುವದರಲ್ಲಿ ಇಲ್ಲವೆ, ಈ ಧರ್ಮಾಚರಣವನ್ನುಆಚರಿಸುವದರಲ್ಲಿ ಉದ್ದೇಶವಾದರೂ ಯಾವದು ? ಪುಣ್ಯ ಪ್ರಾಪ್ತಿಯ ಸಲು ವಾಗಿಯೇ ಹೌದಲ್ಲವೆ ? ಎಂದಮೇಲೆ ಪರೋಪಕಾರಕ್ಕೆ ಸರಿಯಾದ ಮತ್ತ್ಯಾವದಾದರೂ ಪುಣ್ಯವುಂಟೇ ? ನಿಮ್ಮ ಕುಲದಲ್ಲಿ ಜನ್ಮತಾಳಿದ ಒಬ್ಬ ವೃದ್ಧ ಮನುಷ್ಯನು ಮರಣೆಮ್ಮುಖನಾ ಪುತ್ರ ಪುತ್ರ ಎಂದು ಏಕ ಪ್ರಕಾರವಾಗಿ ದುಃಖಬಡುತ್ತಲಿದ್ದಾನೆ. ಔಂಸಪುತ್ರನ ಮುಖಾವಲೋಕನವನ್ನು ಮಾಡುವ ಸುಖವು ಅವನ ದೈವದಲ್ಲಿಲ್ಲ. ದತ್ತ ಕಪುತ್ರನಾದಲಭಿಸಿ ಅವನು ತನ್ನ ಮನೆತನದ ಹೆಸರು ನಡೆಸ ಬೇಕಂತಲಣ ತನ್ನ ಮರಣದ ನಂತರ ಅವನಿಂದ ಮಾಡಲ್ಪಡುವ ಪಿಂಡದಾನದಿಂದ ತಾನೂ ತನ್ನ ಪೂರ್ವಜರೂ ಉದ್ಧಾರರಾಬೇಕೆ೦ತಲೂ ಅವನ ಇಚ್ಛೆಯುಂಟು, ಇಂಥ ಮನುಷ್ಯನ ಮೇಲೆ ಉಪಕಾರವನ್ನು ಮಾಡುವ ಸಾಧನವು ನಿಮ್ಮ ಒಬ್ಬರ ಕೈಯಲ್ಲಿಯೇ ಇರುತ್ತದೆ. ಉಳಿದ ಉಪಕಾರಗಳು ಇಹಲೋಕದ ಮಟ್ಟಿಗೆ ಮಾತ್ರ ಇರುತ್ತವೆ. ಆದರೆ, ಈ ಉಪಕಾರದಿಂದ ನಿಮ್ಮ ಕೀರ್ತಿಯು ಪರಲೋಕಕ್ಕೆ ಮುಟ್ಟುವದು. ಈ ಎಲ್ಲ ಸಂಗತಿಗಳನ್ನು ನೀವು ನಿಮ್ಮ ಲಕ್ಷ್ಯದಲ್ಲಿ ತರಬೇಕು. ತಮಗೆ ಹಾನಿಯಾದರೂ ಚಿಂತೆಯಿಲ್ಲ, ಪರೋಪಕಾರವನ್ನು ಸಾಧಿಸುವ ಸುಸಂಧಿಯು ತಮಗೆ ಪ್ರಾಪ್ತವಾದರೆ ಸಾಕೆಂದು ಜನರು ಅಪೇಕ್ಷಿಸುತ್ತಾರೆ ; ಆದರೆ, ಹಾನಿಯ ಮಾತಂತೂ ಒಟ್ಟಗುಳಿದು, ನಿಮಗೆ ಲಾಭವನ್ನು ಮಾಡಿಕೊಡುವ ಈ ಪರೋಪಕಾರದ ಪ್ರಸಂಗವು ತಾನಾಗಿಯೇ ನಿಮ್ಮೆದುರು ಬಂದು ನಿಂತಿದೆ. ನೀವು ಇದರ ಅನಾದರವನ್ನು ಮಾಡಿದರೆ, ಯಾವ ಧರ್ಮಾಚರಣ ವನ್ನು ಸಾಧಿಸಿದಂತಾಗುವದು ? ಇ೦ಥ ಸುಪ್ರಸಂಗದಲ್ಲಿ ಕೂಡ ಪರೋಪಕಾರವನ್ನು ಮಾಡದವರು ವರ ಕಂ ಭಾಗಿಯಾಗುವನು. ಈ ನಿಮ್ಮ ನಿಷ್ಟುರತೆಯ ಸ್ವಭಾವಕ್ಕಾಗಿ ದೇವರು ನಿಮ್ಮನ್ನು ಕ್ಷಮಿಸುವನೆಂದು ನನಗೇನು ತೋರುವದಿಲ್ಲ. ಪಿತೃಲೋಕದಲ್ಲಿ ವಾಸಿಸುವ ನಿಮ್ಮ ಪೂರ್ವಜರು ನಿಮಗೇನನ್ನುವರು ? ಹಾಗೂ ಮುಂದೆ ಎಂದಾದರೂ ಎಲ್ಲಿಯಾದರೂ ಅವರು ನಿಮ್ಮನ್ನು ಕಂಡರೆ, ನಿಮ್ಮ ಸ್ವಾಗತವನ್ನು ಯಾವ ಬಗೆಯಿಂದ ಮಾಡುವರೆಂಬ ಕಲ್ಪನೆಗಳನ್ನು ನೀವು ನಿಮ್ಮ ತಲೆಯಲ್ಲಿ ತಂದು ವಿಚಾರ ಮಾಡಿರಿ. ಈಗಾದರೂ ಕದಾಚಿತ್-ಇಬೇ ಕಾಲದಲ್ಲಿ-ನಾನು ನಿಮ್ಮ ಸಂಗಡ ವಾತಾಡುತ್ತ ಕುಳಿತಿರುವ ಕಾಲದಲ್ಲಿ- ನಿಮ್ಮ ಪೂರ್ವಜರು ನೀವು ಏನು ಉತ್ತರವನ್ನು ಕೊಡುವಿರೆಂಬದನ್ನು ಕೇಳುವದಕ್ಕೆ ಉತ್ಕಂಠಿತರಾಗಿ, ಕದಾಚಿತ್ ಈ ಸ್ಥಳದಲ್ಲಿ - ಕದಾಚಿತ್ ಆ ಸ್ಥಳದಲ್ಲಿ-ಮೇಲೆ-ಕೆಳಗೆ- ಎಲ್ಲಿ ಎಂಬುದನ್ನು ಯಾರು ಹೇಳಬೇಕು ? -ಬಂದು ನಿಂತಿರಬಹುದು ! ಆವರನ್ನು ನೀವು ನಿರಾಶರನ್ನಾಗಿ ಮಾಡುವಿರಾ ? ಅವರ ಕೋಪಾಗ್ನಿಗೆ ನೀವು ಗುರಿಯಾಗುವಿರಾ ?

ಪುರೋಹಿತನ ಈ ಭಾಷಣವನ್ನು ಕೇಳಿ ಬ್ರಹ್ಮಚಾರಿಯು ತೀರ ಗಾಬರಿಗೊಂಡನು. ದಯೆ, ಭೀತಿ, ಪರೋಪಕಾರ ಮುಂತಾದ ಮನೋವಿಕಾರಗಳ ಜೊಂಜಾಟದಿಂದ ಅವನ ಹೃದಯವು ಕಲ್ಲೋಲವಾಯಿತು. ಹಿತನ ಮಾತಿಗೆ ಒಪ್ಪಿಗೆಯನ್ನು ಕೊಡದ ಹೊರತು ಅನ್ಯವಾದ ಮಾರ್ಗವು ಅವನಿಗೆ ತೋರದಂತಾಯಿತು. ಆಗ್ಗೆ, ನಿಮ್ಮ ಸಂಗಡ ನಾನು ನಿಮ್ಮ ಯಜಮಾನರ ಊರಿಗೆ ಬರುತ್ತೇನೆಂದು ಅವನು ಒಪ್ಪಿಕೊಂಡನು ; ಹಾಗೂ ಅದೇ ದಿವಸ ಸಾಯ೦ಕಾಲದಲ್ಲಿ ಆ ಉಭಯತರೂ ಆ ಕ್ಷೇತ್ರವನ್ನು ಬಿಟ್ಟು ತಮ್ಮ ಮುಂದಿನ ಮಾರ್ಗವನ್ನು ಆಕ್ರಮಿಸಹತ್ತಿದರು. ಅಷ್ಟರಲ್ಲಿ, ತಾನು ಸ್ವಪ್ನದಲ್ಲಿ ನೋಡಿದ ಪುರುಷನ ಆಕೃತಿಯೇ ತನಗೆ ಅಸ್ಪಷ್ಟವಾಗಿ ಕಾಣ ಹತ್ತಿದಂತೆ ಆ ಬ್ರಹ್ಮಚಾರಿಗೆ ಭಾಸವಾಯಿತು. ಆದರೆ ಅವನು ವಿಶೇಷವಾಗಿ ತನ್ನ ಲಕ್ಷವನ್ನು ಕೊಡಲಿಲ್ಲ.

****

ಕಮಲಾಪುರಕ್ಕೆ ಹೋಗಿ ಮುಟ್ಟಿದ ಬಳಿಕ, ಕೂಡಲೇ ದತ್ತಕವಿಧಾನದ ಸಮಾರಂಭವಾಯಿತು. ಬ್ರಹ್ಮಚಾರಿಯ ಸ್ವರೂಪವನ, ಜಾಣತನವನ್ನೂ, ಆಚರಣವನ್ನೂ ನೋಡಿ ದತ್ತಕ ಜನಕನಿಗೆ ಒಳಿತಾಗಿ ಸಮಾಧಾನವೆನಿಸಿತು. ಆದರೆ, ಮಗನನ್ನು ನೋಡಿ ನೋಡಿದಾಗ ಅವನು ದುಃಖದಿಂದ ಉಸುರ್ಗರೆಯುತ್ತಿದ್ದನು, ದತ್ತಕ ಮಗನ ಹೆಸರು - 'ಭೋಲಾನಾಥ' ಎಂದು ಇಡಲ್ಪಟ್ಟಿತು. ಮುಂದೆ ಸ್ವಲ್ಪ ದಿನಗಳಲ್ಲಿಯೇ ಸುಸ್ವರೂಪಿಯಾದ ಒಬ್ಬ ತರುಣಿಯ ಕೂಡ ಇವನ ವಿವಾಹವಾಯಿತು. ಇವನ ದತ್ತಕ ತಾಯಿಯೆಂದರೆ, ಇವನ ತೀರ್ಥರೂಪರ ನಾಲ್ಕನೆಯ ಲಗ್ನದ ಪತ್ನಿ ಯಾದರೂ ಒಳ್ಳೆ ಚಲುವೆಯಾಗಿ ತಾರುಣ್ಯದ ಭರದಲ್ಲಿದ್ದಳು. ಭೋಲಾನಾಥನನ್ನು ಅವಳು ನಿಸ್ಸಿಮವಾದ ಪುತ್ರ ಪ್ರೇಮದಿಂದ ಮನ್ನಿಸುತ್ತಿದ್ದಳು. ಭೋಲೆನಾಥನಾದರೂ ಆಕೆಯಲ್ಲಿ ಹಡೆದ ತಾಯಿಯಂತೆ ಪೂರ್ಣವಾದ ಮಾತೃಭಕ್ತಿಯ ನ್ನಿಟ್ಟು, ನಿಷ್ಕ ಪಟವಾದ ಭಾವದಿಂದ ಆಕೆ ಯ ಕೂಡ ನಡೆದುಕೊಳ್ಳುತ್ತಿ ದ್ದನು. ಆದರೆ, ಭೋಲಾನಾಥನ ಪತ್ನಿ ಯು ಬಾಹ್ಯ ಸ್ವರೂಪದಲ್ಲಿ ಸುಂದರ ೪ಾಗಿದ್ದಂತೆ ಆಕೆಯ ಅಂತರಂಗವು ಚನ್ನಾಗಿದ್ದಿದ್ದಿಲ್ಲ. ಅವಳು ಪ್ರತಿಯೊಂದು ಮಾತಿಗೆ ಸಂಶಯವನ್ನು ಸತುವ ಸ್ವಭಾವದವಳಾಗಿದ್ದಳು. ಅತ್ತೆಯು ಸೊಸೆಗಿಂತಲೂ ಎರಡೇ ವರ್ಷಗಳಿಂದ ಹಿರಿಯಳಾಗಿದ್ದಳು. ಇಬ್ಬರೂ ತರುಣಿಯ: ರು ಸಮಾನ ರೂಪವುಳ್ಳವರಾಗಿದ್ದರೂ ಅವರ ಸ್ವಭಾವವು ಭಿನ್ನ ವಾಗಿತ್ತು. ಈ ಸ್ಥಿತಿಯ ಮೂಲಕವಾಗಿ ಮತ್ತು ಪುತ್ರರ ಪರಸ್ಪರರ ವರ್ತನ ಇಲ್ಲಿಯ ಸರಲವಾದ ಹಾಗೂ ಸ್ವಾಭಾವಿಕವಾದ ಎಷ್ಟೋ ಸಂಗತಿಗಳ ಸಂಬಂಧವಾಗಿ ಭೋಲಾನಾಥನ ಪತ್ನಿಯ ಮನಸ್ಸಿನಲ್ಲಿ ಉತ್ಪನ್ನವಾದ ಇಲ್ಲದ ಕುತರ್ಕಗಳು ದೃಢವಾಗುತ್ತ ನಡೆದವು. ಭೋಲಾನಾಥನಿಗಾಗಲಿ, ಅವನ ತಾಯಿಗಾಗಲಿ ಇದರ ಕಲ್ಪನೆಯು ಕೂಡ ಇಲ್ಲದ್ದರಿಂದ, ಮಾತಾಪುತ್ರರಲ್ಲಿದ್ದ ಪ್ರೇಮದ ಮೂಲಕವಾಗಿ ಆ ಉಭಯ ತರು ಪರಸ್ಪರರನ್ನು ಸ್ನೇಹಿತರಂತೆ ಭಾವಿಸುತ್ತಿದ್ದರು. ಆದರೆ ಸಂಶಯದಿಂದ ಗ್ರಸ್ತಳಾದ ಗಿರಿಜಾಬಾಯಿಯ ದೃಷ್ಟಿಗೆ ಈ ಸಂಗತಿಗಳೆಲ್ಲ ಏಪರೀತವಾಗಿ ತೋರಹತ್ತಿದವು. ಗಿರಿಜಾ ಬಾಯಿಯ ಹೃದಯದಲ್ಲಿದ್ದ ಮರವೆಂಬ ರಾವುಗನ್ನಡಿಯಲ್ಲಿ ನಿಷ್ಕಪಟವು ಕಪಟವಾಗಿಯೂ ಮಾತೃಪ್ರೇಮವು ವಿಷಯಾಂಧತೆಯಾಗಿಯ ಸಹಜವಾದ ವೃತ್ತಿಯು ನಿರ್ಲಜ್ಜತೆಯಾಗಿಯ ಕಾಣಹತ್ತಿದವು. ಇರಲಿ,

****

ಭೋಲಾನಾಥನ ದತ್ತಕ ತಂದೆಯ ಹುಚ್ಚು ದಿವಸ ದಿವಸಕ್ಕೆ ಹೆಚ ಗುತ್ತ ನಡೆಯಿತು. ಇವನಂತೆಯೇ ಇವನ ತಂದೆ, ಅಜ್ಜ ಮುತ್ತಂದಿರು ಹುಚ್ಚರಾಗಿದ್ದರು, ಹಾಗೂ ಅದರಿಂದಲೇ ಅವರು ಮರಣವನ್ನು ಹೊಂದಿ ದ್ದರೆಂಬ ತನ್ನ ಮನೆತನದ ಈ ಪೂರ್ವೆತಿಹಾಸವು ಭೋಲಾನಾಥನಿಗೆ ಗೊತ್ತಾಗಿತ್ತು. ಅದರಿಂದ ಅವನ ಮನಸ್ಸಿನ ಮೇಲೆ ಈ ಪೂರ್ವ ಪರಂ ಪರೆಯ ಪರಿಣಾಮವು ಬಹು ವಿಲಕ್ಷಣವಾಗಿ ಆಗಹತ್ತಿತ್ತು. ಈ ಕುಟುಂಬಕ್ಕೆ ಹೊಂದಿದ್ದರಿಂದ ನಾನಾದರೂ ವೃದ್ಧಾಪ್ಯ ಕಾಲದಲ್ಲಿ ಹುಚ್ಚನಾಗುವನೋ ಏನೋ ' ಎಂಬ ಭೀತಿಯಿಂದ ಅವನು ತಾರುಣ್ಯದಲ್ಲಿಯೇ ಹುಚ್ಚು ಹಿಡಿದವ ನಂತೆ ಮಾಡ ಹತ್ತಿದ್ದನು. ಈ ಆನುವಂಶಿಕವಾದ ಹುಚ್ಚಿನ ಬಾಧೆಯು ಯಾಕೆ ಹಾಗೂ ಹೇಗೆ ಉತ್ಪನ್ನವಾಗುತ್ತದೆಂಬುದರ ಬಗ್ಗೆ ಅವನು ಬಹು ಪ್ರಯತ್ನ ಪೂರ್ವಕವಾಗಿ ಆಲೋಚಿಸಿದರು. ಆದರೆ, ಚತುರ್ಥ ಸಂಬಂಧದ ತಾಯಿಯನ್ನು ಹೊರತುಪಡಿಸಿ, ಮನೆತನದ ಸಂಗತಿಗಳನ್ನು ಬಲ್ಲ ಹಿರಿಯರು ಯಾರೂ ಇಲ್ಲದ್ದರಿಂದ ಅವನಿಗೆ ಈ ಕಾರಣಗಳ ಬಗ್ಗೆ ಏನೂ ಗೊತ್ತಾಗ ಇದರಿಂದ ಅವನು ಭವಿಷ್ಟನ ಹಾಗೆ ಆಚರಿಸಹತ್ತಿದನು. ಬರಬರುತ್ತ ತಂದೆ:ತು ಭ, ಮಿಷ್ಟ ತನವೂ ಹುಚ್ಚುತನವೂ ವಿಕೋಪಕ್ಕೆ ಹೋದವು ಇನ್ನು ಮೇಲೆ ತಾನು ಬಚ್ಚಳ ದಿವಸ ಬಾಳುವದಿಲ್ಲೆಂತಲೂ ತನ್ನ ಅಂತಕಾಲವು ಸವಿಾಪಿಸಿರುವಂತಲೂ ಭ>ವಿಸಿ ಆ ವೃದ್ಧಗೃಹಸ್ಥನು ಒಂದು ದಿನ ಮಧ್ಯರಾತ್ರಿಯಲ್ಲಿ ಎಲ್ಲಾ ಗಾಢವಾದ ನಿದ್ರೆಯಲ್ಲಿದ್ದಾಗ ಭೋಲಾನಾಥ ನನ್ನು ಮೆಲ್ಲ: ಎಬ್ಬಿಸಿದನು. ಅವನ ಕೈ ಹಿಡಿದು ಅವನ ಕೂಡ ಮಾತಾಡುತ್ತ ಮಾತಾಡುತ್ತ ತನ್ನ ವಿಸ್ತಾರವಾದ ಮನೆಯ ಹೊರ ಅಂಗಳದಲ್ಲಿ ಉತ್ತರ ದಿಕ್ಕಿನ ಕೊನೆಯ ಭಾಗದಲ್ಲಿದ್ದ ಒಂದು ಕಟ್ಟಡದ ಮಾರ್ಗವನ್ನು ಹಿಡಿದು ಅವನು ಹೊ?ಗುತ್ತಿದನು. "ಭೋಲಾನಾಥನೆ, ಇದೇ ಉತ್ತರ ದಿಕ್ಕು. ಎದುರಿನಲ್ಲಿ ಕಾಣುವ ಗಿಡದ ತಲೆಯ ಮೇಲೆ ಧ್ರುವನಕ್ಷತ್ರವಿರಬೇಕು. ಮೊದಲು ಅದು ನನಗೆ ಕಾಣುತ್ತಿತ್ತು; ಆದರೆ, ಇತ್ತಿತ್ತಲಾಗಿ ಅದು ನನಗೆ ಕಾಣದಂತಾಗಿದೆ. ಅದೇನೆ, ನನ್ನ ಮೂಗಿನ ತುದಿಯಾದರೂ ನನಗೆ ಈಗ ಕಾಣುವದಿಲ್ಲ. ರಾತ್ರಿಯಲ್ಲಿ ನನಗೆ ನಿದ್ದೆ ಯು ಹತ್ತು ವದಿಲ್ಲ. ಹತ್ತಿ ದರ ಭಯಂಕರವಾದ ಸ್ವಪ್ನಗಳು ಬಿದ್ದು, ಬೆದರಿ ಎದ್ದು ಕೂಡುತ್ತೆ?ನೆ. ಭಯಂಕರವಾದ ಧ್ವನಿಗಳು ಕೇಳಬರುತ್ತಿವೆ. ಚೀರಾಟದ ಸಪ್ಪಳವನ್ನು ಕೇಳಿ ಕಿಏಗಳು ಗಡು ಚುಹಾಕಿವೆ ಆಕಾಳವಿಕಾಳರಾದ ಯಮದೂತರು ನನ್ನ ಸುತ್ತಲೂ ಭಯಾನಕ ವಾವ ನರ್ತನವನ್ನು ಮಾಡುತ್ತಾರೆ; ಹಾಗೂ ತಮ್ಮ ಪಾಶದಿಂದ ನನ್ನನ್ನು ಬಿಗಿಯಲು ಪ್ರಯತ್ನಿಸುತ್ತಾರೆ. ಇಂಥ ಸ್ಥಿತಿ ಯಲ್ಲಿ ನಾನು ಬಹಳ ದಿನಗಳ ವರೆಗೆ ಬದುಕಿರುವೆನೆಂಬದು ಅಸಾಧ್ಯವು. ನನ್ನ ಹಿಂದೆ ನೀನು ಎಲ್ಲ ಸಂಗತಿಗಳನ್ನು ಚನ್ನಾಗಿ ನೋಡುತ್ತ ಹೋಗುವಿ ಎಂದು ನನಗೆ ಪೂರ್ಣ ವಾದ ನಂಬಿಗೆಯಿ: ದೆ ಆದರೆ, ನಿನ್ನ ಪ್ರಪಂಚಕ್ಕೆ ಬೇಕಾಗುವ ಹಣವು ನಿನಗೆ ಎಲ್ಲಿ ದೊರೆಯುವದೆಂಬ ಸ್ಥಳವನ್ನು ನಿನಗೆ ತೋರಿಸಬೇಕಾಗಿದೆ ಹಾಗೂ ಅದಕ್ಕಾಗಿಯೇ ನಿನ್ನನ್ನು ಆ ಕಟ್ಟಡದ ಕಡೆಗೆ

ಕರೆದುಕೊಂಡು ಹೋಗುತ್ತಲಿದ್ದೇನೆ. ನಿನಗೆ ಹಣವು ಬೇಕಾದರೆ ಅದು. ಹುಣ್ಣಿಮೆ ಅಮಾಸೆಗೆ ಮಾತ್ರ ದೊರೆಯುವದು."

ಹೀಗೆ ಮಾತಾಡುತ್ತ ವೃದ್ಧನು ಮುಂದೆ ಸಾಗಿದನು ಲಕ್ಷ ಕೊಟ್ಟು ಇದನ್ನೆಲ್ಲ ಕೇಳಿದ ಭೋಲಾನಾಥನು ಆಶ್ಚರ್ಯಚಕಿತನಾಗಿ ಒಂದು ಶಬ್ದ ವನ್ನಾದರೂ ಉಚ್ಚರಿಸದೆ ಆವನ ಬೆನ್ನು ಹತ್ತಿ ನಡೆದನು. ಮುದುಕನು .ಆ ಕಟ್ಟಡದ ಹೊರಗಿನ ಬಾಗಿಲವನ್ನು ತೆರೆದನು. ಒಳಗೆ ಹೋದ ಬಳಿಕ ನೆಲ ಮನೆಯು ಹತ್ತಿತು. ನೆಲಮನೆಯ ಕಲ್ಲಿನ ಗೋಡೆಯಲ್ಲಿ ಒಂದು ಗುಪ್ತ ದ್ವಾರವಿತ್ತು. ಮೊದಲೇ ಅಲ್ಲಿ ಸಿದ್ಧ ಮಾಡಿಡಲ್ಪಟ್ಟ ಯಾವದೋ ಒಂದು ಕೃತ್ರಿಮ ಸಾಧನದಿಂದ ೪ ದ್ವಾರವನ್ನು ಒಂದು ಮಗ್ಗಲಿಗೆ ಸರಿಸಿ ಉಭಯ ತರೂ ಒಳ ಹೊಕ್ಕರು ಅಲ್ಲಿದ್ದ ಕೆಲವು ಪಾವಟಣಿಗೆಗಳನ್ನು ಇಳಿದು ಹೋದ ಬಳಿಕ ಆ ಮುದಕನು ಮಿಣಿಮಿಣಿ ಉರಿಯುವ ಒಂದು ದೀಪವನ್ನು ಹಚ್ಚಿ ದನು, ಆ ದೀಪದ ಬೆಳಕಿನಲ್ಲಿ ಇಲ್ಲಿ ಕಾಣುತ್ತಿದ್ದ ಒಂದು ಕೋಣೆಯ ಬಾಗಿಲವನ್ನು ಆ ಮುದುಕನು ತೆರೆದನು. ಈ ಬಾಗಿಲವನ್ನು ತೆರೆಯುವಾಗ ಮುದುಕನ ಕೈ ಕಾಲುಗಳು ತೀರ ನಡುಗಹತ್ತಿದವು. ಅವನ ಕೈಯಲ್ಲಿದ್ದ ಕರ ದೀಪವು ನೆಲಕ್ಕೆ ಬೀಳುತ್ತಿತ್ತು; ಆದರೆ ಭೋಲಾನಾಥನು ಅದನ್ನು ಅವಸರ ಮಾಡಿ ತನ್ನ ಕೈಯಲ್ಲಿ ಹಿಡಿದನು, ಮುದುಕನು ತೀರ ಗಾಬರಿrಟ್ಟು ಹೋಗಿ, ದ್ದ ರೂ ಅಂಜಬೇಡ, ಗಾಬರಿಗೊಳ್ಳಬೇಡ ! 'ನಿನ್ನ ಮೈಯಲ್ಲಿ ಬೆವರು ಯಾಕೆ ಬಿಟ್ಟಿದೆ ? ಇಕೊ ಇಲ್ಲಿ ನೋಡು, ನಮ್ಮ ಸಂಪತ್ತೆಲ್ಲ ಈ ಸ್ಥಳದಲ್ಲಿ ಸಂಚಿತವಾಗಿದೆ," ಎಂದು ತನ್ನ ಮಗನಿಗೆ ಹೇಳುತ್ತಿದ್ದನು. ಈ ಶಬ್ದಗ ಳನ್ನು ಕೇಳುತ್ತಿರುವಾಗ ಭೋಲಾನಾಥನ ಲಕ್ಷ್ಯವು ಆಂಧವಾದ ದೀಪದ ಪ್ರಕಾಶದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆ ಕೋಣೆಯೊಳಗಿನ ಭಯಂಕರ ವಾದ ನೋಟದ ಕಡೆಗೆ ಹೋಯಿತು, ಆ ಕೋಣೆಯಲ್ಲಿ ಬಂಗಾರದ ಮೋಹರಗಳಿಂದ ತುಂಬಿದ ದೊಡ್ಡ ದೊಡ್ಡ ಹರಿವೆಗಳು ಅನೇಕವಿದ್ದವು. ಆದರೆ, ಆ ಹರಿವೆಗಳ ಕಡೆಗೆ ತನ್ನ ದೃಷ್ಟಿಯನ್ನು ಚಲ್ಲಲು ಭೋಲಾನಾಥನು ಅಲ್ಲಿ ಏನು ನೋಡಿದನು ? ಪ್ರತಿಯೊಂದು ಹರಿವೆಯ ಮೇಲೆ, ಭಯಾನಕ ವಾದ ಹಾಗೂ ಆಕಾಳ ವಿಕ್ರಾಳ ಸ್ವರೂಪವನ್ನು ಧಾರಣಮಾಡಿದ ಒಂದೊಂದು ಪಿಶಾಚಿಯನ್ನು ಅವನು ನೋಡಿದನು, ಈ ಪಿಶಾಚಿಗಳ ಸ್ವರೂಪಗಳಾದರೂ ನಾನಾವಿಧವಾಗಿದ್ದವು. ಎಲುಬಿನ ಹಂದರದಂತೆ ತೋರುವ ವೃದ್ಧ ಪುರುಷರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು ಕೆಲವು ಹರಿವೆಗಳ ಮೇಲೆ ಅಂಟಿಕೊಂಡು ಕುಳಿತಿದ್ದವು, ಅನಾಥರಾದ ವಿಧ ವೆಯರ ರೂಪಗಳನ್ನು ಧಾರಣ ಮಾಡಿದ ಪಿಶಾಚಿಗಳು ದೀನರಂತೆ ರೋದನ ಮಾಡುತ್ತ ತಮ್ಮ ಎದೆಗಳನ್ನು ಬಡೆದುಕೊಳ್ಳುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದವು. ನಿಷಪ್ರಯೋಗದಿಂದ ಕಾಡಿಗೆಯಂತೆ ಕಪ್ಪಾದ ಹಾಗೂ ಚೂರಿಯ ಗಾಯದ ರಕ್ತ ದಿಂದ ಮಲಿನವಾದ ಅರ್ಭಕರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು ದೊಡ್ಡ ಧ್ವನಿಯಿಂದ ಚೀರುತ್ತ ಕೆಲವು ಹರಿವೆಗಳ ಮೇಲೆ ಕುಳಿತಿದ್ದ ವು. ಆ ಭವ್ಯವಾದ ಕೋಣೆಯು ಭೂತಪ್ರೇತ ಪಿಶಾಚ್ಛಾದಿ ಗಳಿಂದ ದಟಿತವಾಗಿತ್ತು. ಮೈಮೇಲೆ ಗೇಣು ಗೇಣು ಉದ್ದ ಕೂದಲು ಬೆಳೆದ, ಕಣ್ಣುಗಳೊಳಗಿಂದ ಕಿಡಿಗಳನ್ನು ಉದುರಿಸುವ ಹಾಗೂ ಆನೆಯ ಸೊಂಡಿಲದಂತೆ ಪುಷ್ಟವಾದ ಮಹಾಭುಜಂಗಗಳು ತಮ್ಮ ಹೆಡೆಗಳನ್ನು ತೆಗೆದು ಪೂತ್ಕಾರಗಳನ್ನಿಕ್ಕುತ್ತ ಕೆಲವು ಹರಿವೆಗಳ ಮೇಲೆ ಸುರಳೆಯನ್ನು ಸುತ್ತಿಕೊಂಡು ಕುಳಿತಿದ್ದವು. ಕೆಲವು ಹರಿವೆಗಳಿಂದ ಅಗ್ನಿ ಯ ಜ್ವಾಲೆಗಳು ಹೊರಬೀಳುತ್ತಿದ್ದವು. ಕೆಲವು ಹರಿವೆಗಳೊಳಗಿನ ಮೋಹರಗಳು ಒಂದು ಕ್ಷಣಹೊತ್ತು ಭಂಗಾರದವಾಗಿ ತೋರಿದರೆ, ಮತ್ತೊಂದು ಕ್ಷಣದಲ್ಲಿ ಇದ್ದಲೆ ಯಂತೆ ತೋರುತ್ತಿದ್ದವು ಆ ಕಲ್ಲಿನ ಕೋಣೆಯ ಬಾಗಿಲನು ತೆರದ ಕೂಡಲೆ, `ಅಲ್ಲಿದ್ದ ಪಿಶಾಚಿಗಳೆಲ್ಲ ಈ ದುಷ್ಟರು ನಮ್ಮ ದ್ರವ್ಯವನ್ನು ಹರಣ ಮಾಡುವ ದಕ್ಕಾಗಿ ಬಂದರೆಂದು ಕೆಲವು ಚೀರಾಡಹತ್ತಿದವು; ಕೆಲವು ಭಯಂಕರವಾದ ಧ್ವನಿಯನ್ನು ತೆಗೆದು ಆಕ್ರೋಶಮಾಡಹತ್ತಿದವು; ಹಾಗೂ ಕೆಲವು ಹೊರಗಿ ನವರು ಒಳಗೆ ಬರಬಾರದೆಂದು ಮೈಮೇಲೆ ಎಚ್ಚರವಿಲ್ಲದಂತೆ ಓಡಿಬಂದು ಬಾಗಿಲವನ್ನು ಅಡ್ಡಗಟ್ಟಿದವು. ಮುದುಕನ ನಾಲಿಗೆಯು ಗಾಬರಿಯಿಂದ ತೊದಲಹತ್ತಿತು. ಅವನು ಅಸ್ಪಷ್ಟವಾದ ಶಬ್ದಗಳಿಂದ ತನ್ನ ಮಗನಿಗೆ ಅಂದದ್ದು : "ಹೂಂ ಮುಂದೆ ಆಗು ; ಯಾವದಾದ ಕೊಂದು ಕೊಪ್ಪರಿಗೆಯಲ್ಲಿ ಕೈ ಹಾಕಿ ನಿನ್ನ ಬೊಗಸೆ ತುಂಬ ಮೋಹರಗಳನ್ನು ತ್ವರಿತವಾಗಿ ತೆಗೆದುಕೊಂಡು ಈ ಪಿಶಾಚಿಗಳು ನಿನ್ನ ಮೈಮೇಲೆ ಬಂದರೆ, ನೀನು ಅವುಗಳಿಗೆ ಹೆದರಬೇಡ ; ಅವುಗಳ ಕಡೆ ಹೊಡೆದಾಡಿ ಬಡೆದಾಡಿ ಅವುಗಳನ್ನು ಒಂದು ಮಗ್ಗಲಿಗೆ ನೂಕಿ, ಕೊಪ್ಪರಿಗೆಯಲ್ಲಿಯ ದ್ರವ್ಯವನ್ನು ತೆಗೆದುಕೊಂಡು ಬಾ. ತಂದೆಯು ಹೀಗೆ ಹೇಳಿದರೂ ಮಗ ನಿಗೆ ಧೈರ್ಯವು ಸಾಲಲೊಲ್ಲದು. ಕಲ್ಲಿನಂತೆ ಸ್ತಬ್ಧವಾಗಿಯೂ ಪ್ರೇತದಂತೆ ತಣ್ಣಗಾಗಿಯೂ ನಿಂತಿದ್ದ ಮಗನನ್ನು. ನೋಡಿ ಕೊನೆಗೆ ಮುದುಕನೇ ಮುಂದಾಗಿ ಒಂದು ಕೊಪ್ಪರಿಗೆಯಲ್ಲಿ ಕೈ ಹಾಕಿದನು. ಕೂಡಲೆ, ಅಲ್ಲಿದ್ದ ಪಿಶಾಚಿಗಳೆಲ್ಲ ಮುದುಕನನ್ನು ಸುತ್ತು ಗಟ್ಟ ಆವನ ಕೈ ಕಾಲು ಚಂಡಿಕೆ ಗಳನ್ನು ಹಿಡಿದು ಅವನನ್ನು ದರದರ ಎಳೆಯಹತ್ತಿದವು. ಇದನ್ನು ನೋಡಿದ ಕೂಡಲೆ ಭೋಲಾನಾಥನು ತೀರ ಮೃತಪ್ರಾಯನಾದನು, ಆದರೆ, ಅವನು ಕೂಡಲೆ, ಎಚ್ಚರವನ್ನು ಹೊಂದಿ ತನ್ನ ತಂದೆಯನ್ನು ತನ್ನ ಕೈವಶ ಮಾಡಿ ಕೊಳ್ಳಲು ಪ್ರಯತ್ನಿಸಹತ್ತಿದನು. ಮುದುಕನ ಒಂದು ಕೈಯನ್ನು ಹಿಡಿದು ಪಿಶಾಚಿಗಳು ಅವನನ್ನು ಒಳಗೆ ಜಗ್ಗುತ್ತಿದ್ದವು ; ಮಗನು ಅವನ ಮತ್ತೊಂದು ಕೈಯನ್ನು ಹಿಡಿದು ಹೊರಗೆ ಜಗ್ಗುತ್ತಿದ್ದನು. ಈ ಜಗಳಾಟ ದಲ್ಲಿ ಮಗನು ಹಾಗೂ ಹೀಗೂ ಮಾಡಿ ತಂದೆಯನ್ನು ಕೋಣೆಯ ಹೊರಗೆ ಜಗ್ಗಿ ತಂದು, ಕೋಣೆಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿಕೊಂಡನು. ಕೆಲವು ಹೊತ್ತಿನ ಮೇಲೆ ತಂದೆಯು ಎಚ್ಚರಗೊಂಡು, ತಾನು ಎಷ್ಟು ಮೊಹರಗಳನ್ನು ತಂದಿರುವೆನೆಂಬದನ್ನು ಎಣಿಸಿ, ಅವುಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು, ಮಗನ ಹೆಗಲಮೇಲೆ ಕುತ್ತಿಗೆಯನ್ನು ಚೆಲ್ಲಿ ಬಂದ ಹಾದಿ ಯನ್ನು ಹಿಡಿದು ಹಿಂದಿರುಗಿದನು. ಮಗನು ತಂದೆಯನ್ನು ವಿಸ್ತರಿಸುತ್ತ ನಿಸ್ಕರಿಸುತ್ತ ಆ ಕಟ್ಟಡವನ್ನು ಬಿಟ್ಟು ಹೊರಬೀಳಲು, ತಾನು ಪೂರ್ವದಲ್ಲಿ ತನ್ನ ಸ್ವಪ್ನದಲ್ಲಿ ಕಂಡ ಪುರುಷಾಕೃತಿಯು ತನ್ನ ಎದುರಿನಲ್ಲಿ ನಿಂತು ತನ್ನನ್ನು ದಿಟ್ಟಿಸಿ ನೋಡುವದನ್ನು ಅವನು ಕಂಡನು.

ತಾಯಿಯು: ಈಗ ಇವರು ಬೇನೆ ಬಿದ್ದಂತೆ ಪ್ರತಿ ಅಮಾಸೆ ಹುಣ್ಣಿವಿಗೆ ಬೇನೆ ಬೀಳುತ್ತಿದ್ದರು, ಪ್ರತಿ ಅಮಾಸೆ ಹುಣ್ಣಿಮೆಯ ದಿವಸ ಮಧ್ಯ ರಾತ್ರಿಯಲ್ಲಿ ಎದ್ದು ಹೊರಗೆ ಹೋಗಿ ಮೋಹರಗಳನ್ನು ತೆಗೆದು ಕಂಡು ಬರುತ್ತಿದ್ದರು. ಆದರೆ, ಇವರು ಎಲ್ಲಿ ಹೋಗುತ್ತಾರೆಂಬ ಮೋಹರಗಳನ್ನು ಎಲ್ಲಿಂದ ತರುತ್ತಾರೆಂಬ ನನಗೆ ಗೊತ್ತಾಗುತ್ತಿದ್ದಿಲ್ಲ. ವಹರಗಳನ್ನು ತೆಗೆದುಕೊಂಡು ಬಂದರೆಂದರೆ, ಇವರ ಕೈ ಕಾಲುಗಳು ನಡುಗುತ್ತಿದ್ದವು, ಮೈಯೆಲ್ಲ ಬೆವರಿನಿಂದ ತಪತಪ ತೊಯ್ಯುತ್ತಿತ್ತು, ಹಾಗೂ ಆ ಬಳಿಕ ಮೈಯಲ್ಲಿ ಚಳಿ ತುಂಬಿ ಹಾಸಿಗೆಯನ್ನು ಹಿಡಿದು ಮಲಗು ಜ್ವರದ ಸಂತಾಪದಿಂದ ಬಡಬಡಿಸಹತ್ತಿದರೆಂದರೆ, ದೆಲ್ಲಿ ಭೂತ ಪಿಶಾಚಾದಿಗಳ ಸುದ್ದಿ ಈಗಿನ ವರೆಗೆ ನನಗೆ ಇದರ ಗೂಢ ರೇ ತಿಳಿದಿಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂ ಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾಗಿ ನನ್ನ ಅಕ್ಷದಲ್ಲಿ ಬಂದಿವೆ. ಭೋಲಾನಾಥ : ತಾಯಿಯ ಭಯಂಕರವಾದ ಸುದ್ದಿ ಯೆ೦ದು ಏನು ಹೇಳಲಿ! ಪಿಕಾಚಿರೂಪಗಳನ್ನು ಧರಿಸಿದ ಮನುಷ್ಯರು ಸತ್ತು ಹೋಗಿ ರೂ ಆವಗ ವಾಸನೆಗಳು ಜೀವಂತವಾಗಿವೆ. ಸುಟ್ಟು ಬೂದಿಯಾದ ಶರೀರಿಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು ಹೊಂದಿವೆ. ಇಂಥ ನಟ ವನ್ನು ಯಾರೂ ನೋಡಿರಲಿಕ್ಕಿಲ್ಲೆಂದು ನನಗಂತೂ ತೋರುತ್ತದೆ. ಆದರ ಸ್ಮರಣವಾಗುವದೂ ಕೂಡ ನನಗೆ ಬೇಡ, ಇಡೀ ಜಗತ್ತಿನಲ್ಲಿ ಸಂಚಿತ ವಾಗಿರುವ ಪ್ರವ್ಯವನ್ನು ಕೊಡುವೆನೆಂದು ಯಾವನಾದರೂ ನನಗೆ ಹೇಳಿ ದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿಲ್ಲ. ಇಕೋ, ಎದುರಿನಲ್ಲಿ ಕಾಣು ತಿರುವ ಕಟ್ಟಡದಲ್ಲಿ ಪಿಶಾಚಿಗಳ ರೂಪಗಳನ್ನು ಧಾರಣ ಮಾಡಿಕೊಂಡು ಕೋಶಗಳನ್ನು ಪಡುತ್ತಿರುವವರ ದ್ರವ್ಯವನ್ನು, ನಮ್ಮ ಪೂರ್ವಜರಲ್ಲೊಬ್ಬನು ಅವರನ್ನು ಅನ್ಯಾಯದಿಂದ ಘಾತಿಸಿ, ಅವರಿ೦ವ ಸುಲಿದುಕೊಂಡಿರಲೇಬೇಕು. ದ್ರವ್ಯದ ಹಂಬಲವಾದರೂ ಎಷ್ಟು ? ಒಂದು ಕುಟುಂಬದವರ ಸಲುವಾಗಿ ಯಃಕಶ್ಚಿತನಾದ ಒಬ್ಬ ಮಾನವೀ ಪ್ರಾಣಿಯ ಕ್ಷಣಿಕ ಸುಖದ ಸಲುವಾಗಿ- ನೂರಾರು ಕುಟುಂಬದವರನ್ನು ದಾರಿದ್ರದ ಸಂಕದಲ್ಲಿ ಕೊಳೆಹಾಕಿ, ಬಂಗಾ ರದ ಮೊಹರಗಳಿಂದ ತುಂಬಿದ ಇಷ್ಟು ಕೊಪ್ಪರಿಗೆಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕುವದರಿಂದ ಲಾಭವಾದರೂ ಯಾವದು ? ತನ್ನ ಗೇಣು ಹೊಟ್ಟೆ ಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ ಅವರ ಪ್ರಾಣಗಳನ್ನು ಹಿಂಡಿ ಹಿಪ್ಪೆ ಮಾಡಿದವನ ವಂಶದಲ್ಲಿ ಮುಂದ ಔರಸ ಸಂತ ಶಿಯಂ ಹುಟ್ಟದಿದ್ದರೆ, ಅದರಲ್ಲಿ ಯಾವ ಆಶ್ಚರ್ಯವು ? ಅನೇಕರ ಗೋಣು ಗಳನ್ನು ಮುರಿದು ಅವರ ದ್ರವ್ಯವನ್ನೆಲ್ಲ ನಾನೊಬ್ಬನೇ ನನ್ನ ಕೊಪ್ಪರಿಗೆಯ ಲ್ಲಿಡುವೆನೆಂದು ಯಾವನಾದರೂ ಮಾತಾಡ ಹತ್ತಿದರೆ, ನ್ಯಾಯದ ತಕ್ಕಡಿಯನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದ ದೇವನಿಗೆ ಈ ಮಾತು ರುಚಿಸಬಲ್ಲದೆ? ಅನೇಕ ಪ್ರಾಣಿಗಳ ಮುಖಗಳೊಳಗಿಂದ ಹೊರಬೀಳುವ ಶಾಪಗಳು ವಜಾಘಾತದಂತೆ ಅವ್ಯಾಹತವಾಗಿ ಈ ನಮ್ಮ ವಂಶದವರ ತಲೆಗಳ ಮೇಲೆ ಬೀಳುತ್ತಿರಲು, ಈ ವಂಶದಲ್ಲಿ ಹುಟ್ಟಿದವರಿಗೆ ಸುಖಶಾಂತಿಗಳು ಎಂದ? ಈ ವಂಶದಲ್ಲಿ ಹುಟ್ಟಿದವರೆಲ್ಲರೂ ಹುಚ್ಚರಾದರೆ ಅದರಲ್ಲಿ ವಿಪರೀತವಾದದ್ದಾದಲೂ ರವದು? ಹಾಗೂ ಈ ವಂಶವು ನಷ್ಟಾಂಶವಾದರೂ ಯಾಕೆ ಆಗಲಿಕ್ಕಿಲ್ಲ? ಈ ವಂಶಕ್ಕೆ ಮೂಲಾಧಾರರಾದ ಪೂರ್ವಜರ ಕೈಯಿಂದ ಇ೦ಥ ಭಯಂಕರವಾದ ಪಾತಕಗಳು ಸಂಭವಿಸಿರಲು, ಆವರ ವಂಶಕ್ಕೆ ಹೊಂದಿದ ಸ್ತ್ರೀಯರ ಉದರದಲ್ಲಿದ್ದ ಗರ್ಭಗಳು ಕೂಡ ಪತನವಾಗಲೇಬೇಕು. ಒಂದು ಕಾಲಕ್ಕೆ, ಅವು ಪತನವಾಗದಿದ್ದರೂ ಪಾಶಕಗಳ ಕೆ೦ಡಗಳಿ೦ದ ಅವು ಗರ್ಭಾಶಯದಲ್ಲಿಯೇ ಸುಟ್ಟು ಭಸ್ಮವಾಗಿಹೊಗಬೇಕು.

ತಾಯಿಯು : ಭೋಲಾನಾಥ, ನಿಲ್ಲು ನಿಲ್ಲು, ಹಾಗೆ ಮಾತಾಡಬೇಡ. ಆವೇಶದ ಭರದಲ್ಲಿ ನಿನ್ನ ಬಾಯಿಯಿಂದ ಹೊರಬೀಳುವ ಶಾಪವಚನಗಳು ಯಾರಿಗೆ ಅಪಾಯವನ್ನು೦ಟುಮಾಡುವವೆಂಬ ಕಲ್ಪನೆಯು ನಿನಗೆ ಬಂದಂತೆ ತೋರುವದಿಲ್ಲ ನೀನು ನಿನ್ನ ತಾಯಿಯನ್ನು ಈ ರೀತಿಯಾಗಿ ಶಾಪಿಸಬೇಡ. ನೀನು ನಿನ್ನ ತಮ್ಮನನ್ನು ಕಠೋರವಾದ ಶಾಪದಿಂದ ಸುಟ್ಟು ಬೂದಿ ಮಾಡಬೇಡ. ನಾನು ಇಂದಿನ ವರೆಗೂ ಈ ಸಂಗತಿಯನ್ನು ಗುಪ್ತವಾಗಿಟ್ಟದ್ದೆನು. ಆದರೆ ಪುತ್ರಪ್ರೇಮವು ಬಹಳ ವಿಲಕ್ಷಣವಾದದ್ದು. ಅದಕ್ಕಾಗಿ ನಾನು ಈಗ್ಗೆ ಮಾತಾಡದೆ ಇರಲಾರೆನು, ಭೋಲಾನಾಥನೇ, ನೀನು ಹೀಗೆ ಬೆದರುವಿಯಾಕೆ ? ಹಾಗೂ ಈ ಸಂಗತಿಯನ್ನು ಕೇಳಿ ನಿನ್ನ ಹಣೆ ಯಾಕೆ ಗಂಟಿಕ್ಕಿರುವದು ? ನನಗೆ ಪುತ್ರೋತ್ಸವವಾದರೆ, ನಿನಗೆ ಈ ಮನೆಬಿಟ್ಟು ಹೊರಬೀಳಬೇಕಾಗುವದೆಂದು, ಇಲ್ಲವೆ, ನಿನ್ನ ಆರ್ಧ ಐಶ್ವರ್ಯಕ್ಕೆ ಅವನು ಪಾಲುಗಾರನಾಗುವನೆಂದು ನಿನಗೆ ಈ ಸಂಗತಿಯನ್ನು ಕೇಳಿ ಇಷ್ಟು ವಿಷಾದ ಎನಿಸಿತೆ ?

ಭೋಲಾನಾಥ : ಛೇ ಛೇ ! ಈ ವಿಚಾರವು ಕೂಡ ನನ್ನನ್ನು ಮುಟ್ಟಿಲ್ಲ ಎಂದು ನಿನ್ನ ಪಾದಸಾಕ್ಷಿಯಾಗಿ ಹೇಳುತ್ತೇನೆ. ಬಂಗಾರದ ನಾಣ್ಯಗಳಿಂದ ತುಂಬಿರುವ ನೂರಾರು ಹರಿವಾಣಗಳೊಳಗಿನ, ಇಲ್ಲವೆ, ಈ ಮನೆಯನ್ನು ವ್ಯಾಪಿಸಿಕೊಂಡಿರುವ ಐಶ್ವರ್ಯದೊಳಗಿನ ಒಂದು ಗುಂಜಿ ತೂಕವಾದ ಬರಗಾರವನ್ನು ಕೂಡ ನಾನು ಅಪೇಕ್ಷಿಸುವದಿಲ್ಲ. ನನ್ನನ್ನು ನಿಮ್ಮ ದತ್ತಕ ಪುತ್ರನನ್ನಾಗಿ ಮಾಡಿದ ಧರ್ಮಬಂಧನಗಳೂ, ಧರ್ಮ ಸಂಸ್ಕಾರಗಳೂ ಉಲ್ಲಂಘನೀಯವಾದವೆಂದು ಶಿಷ್ಟ ಸಮ್ಮತವಾದರೆ, ನಿಮ್ಮ ವಂಶದ ಕೂಡ ಸಂಲಗ್ನವಾಗಿರುವ ನನ್ನ ಸಂಬಂಧವನ್ನು ಕಡಿದುಕೊಳ್ಳುವದಕ್ಕೆ ನಾನು ಈಗಲೇ ಸಿದ್ಧನಿದ್ದೇನೆ, ಭಿಕ್ಷಾವೃತ್ತಿಯನ್ನವಲಂಬಿಸಿ ನಾನು ನನ್ನ ಹೊಟ್ಟೆಯನ್ನು ತುಂಬಿಕೊಳ್ಳುವೆನು, ಈ ಐಶ್ವರ್ಯವನ್ನೆಲ್ಲ ನಿನಗಾಗುವ ಮಗನು ತನ್ನ ಇಚ್ಛಾನುವರ್ತಿಯಾಗಿ ಉಪಭೋಗಿಸಲಿ.

ತಾಯಿಯು : ಬೇಡ, ಬೇಡ ! ನನ್ನ ಕಂದಮ್ಮನ ಮೇಲೆ ನೀನು ಈ ರೀತಿಯಾಗಿ ನಿಷ್ಟುರನಾಗಬೇಡ. ನಿನಗೆ ಕೂಡ ಸಹನಮಾಡಲು ಅಶಕ್ಯವಾಗಿರುವ ಭಾರವನ್ನು ಇನ್ನೂ ಭೂಸ್ಪರ್ಶವನ್ನಾದರೂ ಮಾಡದೇ ಇದ್ದ ಕೋಮಲವಾದ ಅರ್ಭಕನ ಮೇಲೆ ಹೇರಿ, ನೀನು ನಿನ್ನ ಅಂಗವನ್ನು ತೆಗೆದುಕೊಳ್ಳುವದು ಉಚಿತವಾದದ್ದಲ್ಲ. ಐಶ್ವರ್ಯದ ಆಶೆಗಾಗಿ ನೀನು ಪರಪುರುಷ ನನ್ನು ಕೂಡ ನಿನ್ನ ತಂದೆಯೆಂದು ಒಪ್ಪಿಕೊಂಡಿ; ಆದರೆ ಆ ಐಶ್ವರ್ಯದ ಮೇಲೆ ಭೂತ ಪಿಶಾಚಾದಿಗಳು ಕುಳಿತಿರುವನೆಂದು ನಿನಗೆ ತಿಳಿದ ಕೂಡಲೆ, ನನ್ನ ಹಸುಗೂಸನ್ನು ಮುಂದೆ ಮಾಡಲು ನೀನು ಉದ್ಯುಕ್ತನಾಗಿರುವಿ. ಇದು ನಿನ್ನ ಮಾತೃಭಕ್ತಿಯೋ, ಏನು ಬಂಧುಪ್ರೇಮವೋ ?

ಭೋಲಾನಾಥ : ಹಾಗಾದರೆ ನಾನು ಏನು ಮಾಡಬೇಕೆಂದು ನಿನ್ನ ಅಭಿಪ್ರಾಯವಿರುವದು?

ತಾಯಿಯು ; ನಮ್ಮ ಐಶ್ವರ್ಯದ ಮೇಲೆ ಕುಳಿತುಕೊಂಡಿರುವ ಪಿಶಾಚಾದಿಗಳಿಂದ ಉದ್ಭವಿಸುವ ಭಾವೀ ಸಂಕಟಗಳು ನನ್ನ ಕೂಸಿಗೆ ತಗಲುದಂತೆ ಯಾವದಾದರೊಂದು ಉಪಾಯವನ್ನು ಯೋಚಿಸು.

ಭೋಲಾನಾಥ : ಯಾಕಾಗಲೊಲ್ಲದು, ಪಿಶಾಚಾದಿಗಳಿಂದ ಉದ್ಭವಿಸುವ ಯಾತನೆಗಳನ್ನು ನಾನು ಸಹಿಸತಕ್ಕದೊ? ಅಥವಾ ಜನ್ಮವನ್ನು ತಾಳುವ ನನ್ನ ತಮ್ಮನು ಸಹಿಸತಕ್ಕದ್ದೋ ಎಂಬದೇ ಮುಖ್ಯವಾದ ಪ್ರಶ್ನವು. ನನ್ನ ದುಃಖವು ನಿನ್ನ ಅರ್ಭಕನ ಸುಖಕ್ಕೆ ಕಾರಣವಾಗುತ್ತಿದ್ದರೆ, ಪರೋಪ ಕಾರದ ಸಲುವಾಗಿ ನಾನು ಯಾವದೇ ಸಂಕಟವನ್ನು ಸಹಿಸಲು ಸಿದ್ಧನಿದ್ದೇನೆ.

ತಾಯಿಯು : ನೀನು ಒಳ್ಳೆ ಮಾತುಗಳನ್ನಾಡಿದೆ. ನನಗೆ ಮಗನು ಹುಟ್ಟಿದರೆ, ಅವನಿಗೆ ಈ ಭಯಂಕರವಾದ ಯಾತನೆಗಳನ್ನು ಅನುಭೋಗಿಸುವ ಪ್ರಸಂಗವು ಎಂದೂ ಬರಬಾರದೆಂಬದರ ಸಲುವಾಗಿ, ಈ ಆನುವಂಶಿಕ ದುಃಖದ ಭಾರವನ್ನು ನೀನು ನಿನ್ನ ತಲೆಯ ಮೇಲೆ ಹೊತ್ತು, ಅವನು ಈ ಕುಲಕ್ಕೆ ಹೊಂದಿದವನೆಂದು ಯಾವ ಪಿಶಾಚವೂ ಅರಿಯದಂತೆ ಅವನನ್ನು ಎಲ್ಲಾದರೂ ಒಂದು ಏಕಾ೦ತಸ್ಥಲದಲ್ಲಿ ಸುರಕ್ಷಿತವಾಗಿ ಇಡು. ನೀನು ಗೋಣು ಹಾಕುವದರಿಂದ ನನ್ನ ಸಮಾಧಾನವಾಗದು. ನನ್ನ ಶಬ್ದವನ್ನು ನಡೆಸುವೆನೆಂದು ನನಗೆ ವಚನವನ್ನು ಕೊಡು.

ಭೋಲಾನಾಥ : ತಾಯಿಯೆ, ಧನಲೋಭದಿಂದ ಪ್ರೇರಿತನಾಗಿ ತಮ್ಮನನ್ನು ಮುಳುಗಿಸುವ ಉದ್ದೇಶದಿಂದ ಅವನನ್ನು ಏಕಾಂತವಾದದೊಂದು ಪ್ರದೇಶದಲ್ಲಿಟ್ಟು ತಾನು ತನ್ನ ಮಾರ್ಗವನ್ನು ನಿಷ್ಕಂಟಕವುಳ್ಳದ್ದಾಗಿ ಮಾಡಿದನೆಂದು ಜನರು ನನ್ನನ್ನು ದೂಷಿಸುವರು; ಆದರೂ ನಿನ್ನ ಸಲುವಾಗಿ ಹಾಗೂ ಪರೋಪಕಾರದ ಸಲುವಾಗಿ ನಿನ್ನ ಮುಂದೆ ಮೊಣಕಾಲುಗಳನ್ನೂ, ನಿನ್ನ ಪಾದಸಾಕ್ಷಿಯಾಗಿ ಹೇಳುವದೇನಂದರೆ, ನಿನ್ನ ಇಚ್ಛಾನುಸಾರವಾಗಿ ನಾನು ಸುವ್ಯವಸ್ಥೆಯನ್ನು ಮಾಡುವೆನು. ಹುಣ್ಣಿಮೆ ಅಮಾಸೆಗಳ ಮಧ್ಯರಾತ್ರಿಗಳಲ್ಲಿ ಭೂತಗಳ ಕತಡ ಯುದ್ಧವನ್ನು ಮಾಡುವ ಹಾಗೂ ಹುಚ್ಚು ಹಿಡಿದು ಬಡಬಡಿಸುವ ಯಾತನೆಗಳಿಂದ ನಿನ್ನ ಮಗನನ್ನು ಮುಕ್ತ ಮಾಡುವೆನು.

ಶಾಯಿಯು : ದೇವರು ನಿನಗೆ ಕಲ್ಯಾಣವನ್ನೀಯಲಿ!

ನನ್ನ ಗಂಡನೂ, ಅತ್ತೆಯ ಏಕಾಂತಸ್ಥಳದಲ್ಲಿ ಕುಳಿತುಕೊಂಡು ನಡೆಸಿರುವ ಆಲೋಚನೆಯಾದರೂ ಯಾವದು ? ಇವರಿಗೆ ಮನಲಜ್ಜೆಯಿಲ್ಲದಿದ್ದರೂ ಜನಲಜ್ಜೆಯಾದರೂ ಇರಬಾರದೆ ? ಹೀಗೆ ತನ್ನಷ್ಟಕ್ಕೆ ತಾನೇ ಮಾತಾಡುತ್ತ ಮತ್ಸರದಿಂದ ಕಲುಷಿತಳಾದ ಗಿರಿಜಾಬಾಯಿಯು, ತಾಯಿಯ ಮಗನೂ ಏಕಾಂತದಲ್ಲಿ ಮಾತಾಡುತ್ತ ಕುಳಿತಿರುವ ಕೋಣೆಯ ಬಾಗಿಲ ಸಂದಿಯಲ್ಲಿ ನಿಂತು ನೋಡಹತ್ತಿದ್ದಳು. ಭೋಲಾನಾಥನು ತನ್ನ ತಾಯಿಯ ಮುಂದೆ ಮೊಣಕಾಲುಗಳನ್ನೂ ರಿಕೊಂಡು ಅವಳ ಪ್ರಾರ್ಥನೆಯನ್ನು ಮಾಡುವ ಸ್ಥಿತಿಯಲ್ಲಿ ಗಿರಿಜಾಬಾಯಿಯ ದೃಷ್ಟಿಗೆ ಬಿದ್ದನು. ಆಗಂತೂ ಅವಳ ಮತ್ಸರಾಗ್ನಿಯು ಅಮರ್ಯಾದಿತವಾಗಿ ಪ್ರದೀಪಿಸಿ ಅವಳು ಹೆಚ್ಚಿಗೆ ಸಂಶಯಗ್ರಸ್ತಳಾದಳು. ಇಷ್ಟರಲ್ಲಿ ಭೋಲಾನಾಥನು ಬಾಗಿಲವನ್ನು ತೆರೆದು ಹೊರಗೆ ಬಂದನು. ಬಾಗಿಲದ ಹತ್ತಿರ ನಿಂತುಕೊಂಡಿದ್ದ ತನ್ನ ಹೆಂಡತಿಯನ್ನು ಕಂಡು ಅವನಿಗೆ ಆಶ್ಚರ್ಯವೆನಿಸಿತು. ಆದರೆ, ಅವಳ ಬೆನ್ನು ಹಿಂದೆ ತುಸು ಅ೦ತರದ ಮೇಲೆ ಅವನಿಗೆ ಸ್ವಪ್ನದಲ್ಲಿ ದೃಗ್ಗೋಚರವಾಗಿದ್ದ ಪುರುಷನ ಅಸ್ಪಷ್ಟವಾದ ಆಕೃತಿಯನ್ನು ಆವನು ನೋಡಿದ ಕೂಡಲೆ, ಅವನಿಗಾದ ವಿಸ್ಮಯದ ಕಲ್ಪನೆಯನ್ನು ಮಾಡುವದು ಯಾರಿಗಾದರೂ ಅಶಕ್ಯವಾದದ್ದು. ಈ ಆಕೃತಿಯು ಆ ಕರ್ಮಾಧಿಕಾರಿಯದು. "ಇವನ್ಯಾರು ? ನಾನು ಹೋದಲ್ಲಿ ಬಂದಲ್ಲಿ ಇವನು ನನ್ನ ಬೆನ್ನು ಬಿಡುವಿದಿಲ್ಲ. ಇವನ ಉದ್ದೇಶವಾದರೂ ಏನು ? ಸ್ವಪ್ನದಲ್ಲಿ ತಾನು ಕರ್ಮಾಧಿಕಾರಿಯೆಂದು ನನಗೆ ಹೇಳಿದನು; ಇದರ ಅರ್ಥವಾದರೂ ಏನು? ” ಹೀಗೆ ಅನೇಕ ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಉದ್ಭವಿಸಿದವು. ಆದರೆ, ಅವನ ದತ್ತಕ ತಂದೆಯ ಪ್ರಕೃತಿಯು ತೀರ ಅಸ್ವಸ್ಥವಾದ್ದರಿಂದ ಹೆಚ್ಚಿಗೆ ವಿಚಾರಗಳನ್ನು ಮಾಡಲು ಅವನಿಗೆ ಅವಕಾಶವಿದ್ದಿಲ್ಲ.

ಭೋಲಾನಾಥನ ತಂದೆಯು ಮರಣ ಹೊಂದಿದ ಬಳಿಕ ಅವನ ಉತ್ತರಕ್ರಿಯಾದಿ ವಿಧಿಗಳು ಯಥಾಶಾಸ್ತ್ರವಾಗಿ ಮಾಡಲ್ಪಟ್ಟವು. ಅವನ ಅಸ್ಥಿಗಳನ್ನು ಯಾವದಾದರೊಂದು ತೀರ್ಥದಲ್ಲಿ ಒಗೆಯುವ ಕೆಲಸವಷ್ಟೇ ಉಳಿಯಿತು. ಇದರ ಹೊರತಾಗಿ ಉಳಿದ ಎಲ್ಲ ಕೆಲಸಗಳು ತೀರಿಹೋಗಿ ಮನೆಯಲ್ಲಿ ಹೇರಳವಾಗಿದ್ದ ದ್ರವ್ಯಕ್ಕೆ ಇವನೇ ಯಜಮಾನನಾದನು. ಆದರೆ, ಅದರ ಕೂಡ ಇವನಿಗೆ ಸುಖಸಮಾಧಾನಗಳು ಮಾತ್ರ ದೊರೆಯಲಿಲ್ಲ. ಮಧ್ಯಾಹ್ನ ರಾತ್ರಿಯಾಯಿತೆಂದರೆ, ಅವನ ಮೈ ತುಂಬ ಮುಳ್ಳು ಬರುತ್ತಿದ್ದವು. ಗತಿಸಿಹೋದ ಸಂಗತಿಗಳ ಸ್ಮರಣವಾಗಿ ಬೆವರಿನಿಂದ ಮೈಯು ತೊಯ್ಯುತ್ತಿತ್ತು. ತನ್ನ ಸುತ್ತಲಿನ ಜನರೆಲ್ಲ ಗಾಢವಾದ ಸುಖನಿದ್ರೆಯಲ್ಲಿದ್ದದ್ದನ್ನು ನೋಡಿ ಇವನಿಗೆ ಅವರ ವಿಷಯವಾಗಿ ಮತ್ಸರವೆನಿಸುತ್ತಿತ್ತು. 'ಇವರು ಎಂಥ ಭಾಗ್ಯಶಾಲಿಗಳು! ನಾನು ಧನಿಕನಾಗಿದ್ದರೂ ಭಾಗ್ಯಹೀನನೇ.' ಎಂದು ಅವನಿಗೆ ಅನಿಸುತ್ತಿತ್ತು. ಒಂದು ದಿವಸ ಬಿಕ್ಷೆ ಬೇಡುವವನೊಬ್ಬ ಮಾರ್ಗ ಹಿಡಿದು ಹೋಗುತ್ತಿದ್ದನು. ಇವನು ಭೋಲಾನಾಥನನ್ನು ನೋಡಿ, ಅವನ ವೈಭವದ ವಿಷಯವಾಗಿ ಅವನನ್ನು ಸ್ತುತಿಸಹತ್ತಿದನು. ಅದನ್ನು ಕೇಳಿ ಭೋಲಾನಾಥನ ಕಣ್ಣುಗಳೊಳಗಿಂದ ಅಶ್ರುಧಾರೆಗಳು ನಡೆದವು. ಅವನು ತನ್ನ ಮನಸಿನಲ್ಲಿ ಅಂದದ್ದು: ಈ ಬಿಕ್ಕ ಬೇಡುವವನ ಭಾಗ್ಯವನ್ನು ಎಷ್ಟೆ೦ಕು ಬಣ್ಣಿಸಲಿ? ಪಾಪ, ಈ ಬಡವನ ಹತ್ತಿರ ಬಂಗಾರದ ಒಂದಾದರೂ ಮೋಹರವಿರಲಿಕ್ಕಿಲ್ಲೆಂಬ ಮಾತು ನಿಜವಾಗಿದ್ದರೂ ಇವನಿಗೆ ಪಿಶಾಚಿಗಳ ಕೂಡ ಕದನವನ್ನು ಮಾಡುವ ಪ್ರಸಂಗವು ಎಂದೂ ಒದಗುತ್ತಿರಲಿಕ್ಕಿಲ್ಲ. ಇವನ ಭಿಕ್ಷಾಪಾತ್ರೆಯಲ್ಲಿ ತುಂಬಿದ ಸುಖವು ನನ್ನ ಬೆಳ್ಳಿ ಬಂಗಾರಗಳ ಪಾತ್ರೆಯಲ್ಲಿಲ್ಲ. ಇವನ ಮೈಮೇಲಿರುವ ಹರಕ ಬಟ್ಟೆಗಳಲ್ಲಿ ಸಂಚಿತವಾಗಿದ್ದ ಸಮಾಧಾನವು, ಬೆಲೆಬಾಳುವ ನನ್ನ ವಸ್ತ್ರಗಳಲ್ಲಿಲ್ಲ. ಶ್ರೀಮಂತಿಕೆಯ ಕಿ೦ತ ಬಡತನವು ಬಹು "ಲೇಸು. ಆದರೆ, ಹತಭಾಗ್ಯನಾದ ನನಗೆ ಅದು ದೊರೆಯುವದಾದರೂ ಹೇಗೆ? ಈ ಸಂಪತ್ತಿನ ಸಂಕಟಗಳಿಂದ ನನ್ನನ್ನು ಯಾರು ಮುಕ್ತ ಮಾಡುವರು ? ಪ್ರಕಾರದ ವಿಚಾರ ತರಂಗಗಳು ಅನೇಕ ಸಾರೆ ಅವನ ಮನಸ್ಸಿನಲ್ಲಿ ಬರುತ್ತಿದ್ದವು.

****

ಗಿರಿಜಾಬಾಯಿಯ ಸಂಶಯವು ದಿನದಿನಕ್ಕೆ ಹೆಚ್ಚಾಗಹತ್ತಿತು. ಭೋಲಾನಾಥನ ತಾಯಿಯು ಗರ್ಭಿಣಿಯಾಗಿರುವದನ್ನು ಅವಳು ತರ್ಕಿಸಿಸಿದಳು. ತನ್ನ ಮಗನಿಗೆ ಕೌಟುಂಬಿಕ ಕೇಶಗಳಾಗಬಾರದೆಂದು ಭೋಲಾನಾಥನ ತಾಯಿಯ ಗರ್ಭದ ಚಿನ್ನಗಳನ್ನು ತೋರಗೊಡುತ್ತಿದ್ದಿಲ್ಲ. ಮುಚ್ಚು ಮರೆಯನ್ನು ಕಂಡು, ತನ್ನ ಮನೋಗತವಾದ ಸಂಶಯಕ್ಕೆ ಹೆಚ್ಚಿನ ಪ್ರತ್ಯಂತರದ ಅವಶ್ಯಕತೆಯಿಲ್ಲೊಂದು ಗಿರಿಜಾಬಾಯಿಯು ಭಾವಿಸಿದಳು. ಆವಳು ತಾಯಿಮಕ್ಕಳ ಆಚರಣೆಗಳನ್ನು ವಿಶೇಷವಾಗಿ ಲಕ್ಷಗೊಟ್ಟು ನಿರೀಕ್ಷಿಸ ಹತ್ತಿದಳು. ಕೆಲವು ತಿಂಗಳಾದ ಬಳಿಕ ಪತಿ ನಿಧನದಿಂದ ವ್ಯಾಕುಳಾದ ಗಿರಿಜಾಬಾಯಿಯ ಅತ್ತೆಯು ತನ್ನ ತವರಮನೆಗೆ ಹೋದಳು. ಬೋಲಾನಾಥನಾದರೂ ಚಿಂತಾಗ ಸ್ವನಾದ್ದರಿಂದ ತಾರುಣ್ಯದಲ್ಲಿ ಕೂಡ ಅವನಿಗೆ ಸ್ತ್ರೀಸೌಖ್ಯವು ಸುಖಕರವಾಗಿ ಪರಿಣಮಿಸಲಿಲ್ಲ. ಭೋಲಾನಾಥನ ಪರಿಸ್ಥಿತಿಯ ಕಲ್ಪನೆಯು ಗಿರಿಜೆ ಬಾಯಿಗೆ ಇಲ್ಲದ್ದರಿಂದ ಅನ್ಯ ಪ್ರೇಮವೇ ತನ್ನ ವಿಷಯವಾಗಿ ತನ್ನ ಗಂಡನ ಉದಾಸೀನತೆಗೆ ಕಾರಣವೆಂದು ಅವಳು ತಿಳಿಯುತ್ತಿದ್ದಳು. ಇಂಥ ಗೃಹಸ್ಥಿತಿಯ ಮೂಲಕವಾಗಿ ಅವನು ಬೇಸತ್ತು ಕೆಲವು ದಿವಸಗಳ ವರೆಗೆ ಏಕಾ೦೭ವಾದ ಸ್ಥಳದಲ್ಲಿ ವಾಸ ಮಾಡಿಕೊಂಡಿರಬೇಕೆಂದು ಯೋಚಿಸಿದನು. ತನ್ನ ತಂದೆಯ ಅಸ್ಥಿಗಳನ್ನು ಯಾವುದಾದರೊಂದು ತೀರ್ಥದಲ್ಲಿ ಚಲ್ಲುವದರ ಸಲುವಾಗಿ ಅವನಿಗೆ ಒಮ್ಮಿಲ್ಲೊಮ್ಮೆ ಹೋಗಲೇಬೇಕಾಗಿತ್ತು. ಆಸ್ಥಿಗಳನ್ನು ತೆಗೆದುಕೊಂಡು ತಾನು ಪೂರ್ವದಲ್ಲಿ ಬ್ರಹ್ಮಚರ್ಯಾವಸ್ಥೆಯಲ್ಲಿರುವಾಗ ವಾಸ ಮಾಡಿಕೊಂಡಿದ್ದ ಕ್ಷೇತ್ರಕ್ಕೆ ಹೊರಟನು. ಆ ಕ್ಷೇತ್ರವು ಬಹಳ ಪವಿತ್ರವಾಗಿಯೂ, ಸಮಾಧಾನಕಾರಕವಾಗಿಯೂ ಇದ್ದದರಿ೦ದ, ಅಸ್ಥಿ ವಿಸರ್ಜನದ ವಿಧಿಯು ಮುಗಿದ ಬಳಿಕ ಮನಸ್ಸಿಗೆ ಸ್ವಲ್ಪ ವಿರಾಮವುಂಟಾಗಬೇಕೆಂದು ಆ ಕ್ಷೇತ್ರದಲ್ಲಿಯೇ ಅವನು ಅನೇಕ ದಿವಸಗಳವರೆಗೆ ಉಳಿದನು. ಬ್ರಹ್ಮಚರ್ಯಾಶ್ರಮದಲ್ಲಿ ವಾಸ ಮಾಡಿಕೊಂಡಿರುತ್ತಿದ್ದ ಮಠದಲ್ಲಿಯೇ ಈಗಲೂ ಅವನು ಇರಹತ್ತಿದನು, ಸ್ಥಲವನ್ನು ನೋಡಿ ಅವನಿಗೆ ಗತಕಾಲೀನ ಸುಖಸಮಾಧಾನಗಳ ಸ್ಮರಣವಾಗಿ ಅವನ ನೇತ್ರಗಳು ನೀರಿನಿಂದ ತುಂಬಿಕೊಂಡವು. ಮಠದಲ್ಲಿಯ ಒಂದು ಬಾಗಿಲವಾಡದಲ್ಲಿ, ಪುರೋಹಿತ ಕೂಡ ಈ ಸ್ಥಳವನ್ನು ಬಿಟ್ಟು ಹೋಗುವಾಗ ಆವನು ಇಟ್ಟಿದ್ದ ಅವನ ಪ್ರಥಮಾಶ್ರಮದ ಮಧುಕರಿಯ ಜೋಳಿಗೆಯ, ಕೌಪೀನವೂ ಅವನಿಗೆ ದೊರೆದವು, ಆವನ ಪೂರ್ವ ವೃತ್ತವು ಅವನ ನೆನಪಿಗೆ ಸ್ಪಷ್ಟವಾಗಿ ಬರುವದಕ್ಕೆ ಇವು ವಿಶೇಷವಾಗಿ ಕಾರಣಗಳಾದವು ನಾನು ಇಲ್ಲಿಯೇ ಇರುತ್ತಿದ್ದೆನು, ಇಲ್ಲಿಯೇ ಕುಳಿತುಕೊಳ್ಳುತ್ತಿದ್ದೆನು, ಎದುರಿನಲ್ಲಿ ಹರಿಯುವ ಇದೇ ಪ್ರವಾಹದಲ್ಲಿಯೇ ನಾನು ನಿತ್ಯದಲ್ಲಿಯೂ ಸ್ನಾನವನ್ನು ಮಾಡುತ್ತಿದ್ದೆನು, ಇದೇ ವೃಕ್ಷದ ಕೆಳಗೆ ಕುಳಿತುಕೊಂಡು ಸಂಧ್ಯಾವಂದನೆಯನ್ನೂ ವೇದಾಧ್ಯಯನವನ್ನೂ ಮಾಡುತ್ತಿದ್ದನು. ಆಗ್ಗೆ ನಾನು ಎಷ್ಟು ಸುಖಿಯಾಗಿದ್ದೆನು ? ಚಿಕ್ಕಂದಿನಲ್ಲಿಯ ನನ್ನ ಸುಖವನ್ನು ನನಗೆ ಯಾರು ತಂದು ಕೊಡುವರು? ಇಲ್ಲಿ ನಾನು ಸುಖಿಯಾಗಿದ್ದನು ; ಆದರೆ ನನ್ನ ದುರ್ದೈವವು ಬಂದೊದಗಿದ್ದರಿಂದ, ಆ ಉಪಾಧ್ಯಾಯನ ಮಾತಿಗೆ ಮರುಳಾಗಿ ಅವನ ಬೆನ್ನು ಹತ್ತಿ ಹೋದನು. ಈ ಶ್ರೀಮಂತಿಕೆಯ ಪ್ರಸಂಗವು ನನ್ನ ಮೇಲೆ ಬಂದೊದಗುವದೆಂದು ನನಗೆ ಮೊದಲೇ ವಿದಿತವಾಗಿತ್ತು. - ಇದೇ ಆ ಸ್ಥಲವು; ಇಲ್ಲಿಯೇ ನಾನು ಮಲಗಿಕೊಂಡಿದ್ದೆನು. ಇಲ್ಲಿಯೇ ಆ ಕರ್ಮಾಧಿ ಕಾರಿಯ ಆಕೃತಿಯು ನನ್ನ ಸ್ವಪ್ನದಲ್ಲಿ ಬಂದು ಈ ಶ್ರೀಮಂತಿಕೆಯನ್ನು ಒಪ್ಪಿಕೊಳ್ಳೆಂದು ನನಗೆ ಆಗ್ರಹ ಮಾಡುತ್ತಿತ್ತು. ಈ ವಿಚಾರಗಳು ಅವನ ಮನಸಿನಲ್ಲಿ ನಡೆದಿರುವಷ್ಟರಲ್ಲಿಯೇ ಆ ಕರ್ಮಾಧಿಕಾರಿಯ ಆಕೃತಿಯು ಅವನ ಮುಂದೆ ಮೂರ್ತಿಮಂತವಾಗಿ ನಿಂತಿತು. ಇದನ್ನು ನೋಡಿದಕೂಡಲೆ ಅವನು ಮೊಟ್ಟ ಮೊದಲು ಭಯಗ್ರಸ್ತನೇ ಆದನು. ಆದರೆ, ಹಿಂದಿನಿಂದ ಅವನ ಮನಸ್ಸಿನಲ್ಲಿ ಒಂದು ಆಶೆಯು ಹುಟ್ಟಿ ಅವನು ಅವನಿಗೆ ಅಂದದ್ದು:" ಎಲೈ, ಕರ್ಮಚಂಡಾಲನಾದ ಕರ್ಮಾಧಿಕಾರಿಯೇ ! ನೀನು ಈ ಸ್ಥಳದಲ್ಲಿ ನನಗೆ ಮೊಟ್ಟ ಮೊದಲು ಶ್ರೀಮಂತಿಕೆಯ ಸ್ವಪ್ನವನ್ನು ತೋರಿಸಿದಿ; ಆ ಶ್ರೀಮಂತಿಕೆಯು ನನಗೆ ಈಗ ಸಾಕಾಗಿದೆ ಈಗಾದರೂ ನಿನಗೆ ನನ್ನ ವಿಷಯವಾಗಿ ದಯೆ ಹುಟ್ಟಲಿ. ನಾನು ಮೊದಲಿನಂತೆ ಮರಳಿ ಇಲ್ಲೇ ಮಲಗಿಕೊಳ್ಳುವೆನು; ನೀನು ನನ್ನನ್ನು ಮೊದಲಿನಂತೆ ಬಡವನನ್ನಾಗಿಯೂ ಬ್ರಹ್ಮಚಾರಿಯನ್ನಾಗಿ ಮಾಡು. -ಆದರೆ ನಾನು ಇಲ್ಲಿ ಮಲಗಿದರೂ ಸ್ವಪ್ನ ಬೀಳುವಂಥ ನಿದ್ರೆಯು ನನಗೆ ಎಲ್ಲಿಂದ ಬರುವದು? ಯದಾ ಕದಾಚಿತ್ ನನಗೆ ನಿದ್ರೆಯು ಹತ್ತಿದರೆ, ಆ ನಿದ್ರೆಯಲ್ಲಿ ನೀನು ನನ್ನನ್ನು ಬಡವನನ್ನಾಗಿ ಮಾಡುವಿಯಾ ?” ಇದಕ್ಕೆ ಇಲ್ಲ ಇಲ್ಲವೆಂದು ಗೊಣುಹಾಕುತ್ತ ಆ ಪುರುಷಾಕೃತಿಯು ವಾತಾವರಣದಲ್ಲಿ ಅಸ್ಪಷ್ಟವಾಗುತ್ತಾಗುತ್ತಾ ಆಕೃತ್ಯವಾಯಿತು. ಈ ಸಂಕಟಗಳಿಂದ ವಿಮೋಚನವಾಗಲು ಮರಣದ ಹೊರತು ಅನ್ಯ ಉಪಾಯಗಳು ಭೋಲಾನಾಥನಿಗೆ ತೋಚಲಿಲ್ಲ. ಇರಲಿ. ಈ ಸ್ವಗತ ಪುರುಷನು ತನ್ನನ್ನು ಬಡವನನ್ನಾಗಿ ಮಾಡುವದಕ್ಕೆ ಒಪ್ಪದಿದ್ದರೂ ತಾನೇ ತನ್ನನ್ನು ಬಡವನನ್ನಾಗಿ ಮಾಡಿಕೊಳ್ಳುವದಕ್ಕಾಗಿ ಭೋಲಾನಾಥನು ತನ್ನ ಮೈ ಮೇಲಿನ ಬೆಲೆ ಬಾಳುವ ವಸ್ತ್ರಾಭರಣಗಳನ್ನು ಬಾಗಿಲ ಮಾಡದಲ್ಲಿಟ್ಟು, ತನ್ನ ಮೊದಲಿನ ಬಡತನದ ಚಿ೦ದಿಗಳನ್ನು ತನ್ನ ಮೈಮೇಲೆ ಹಾಕಿಕೊಂಡನು, ಪ್ರಾತಃಕಾಲದಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ, ಸಂಧ್ಯಾವಂದನ ವೇದಾಧ್ಯಯನಗಳನ್ನು ತೀರಿಸಿಕೊಂಡು ಮಧ್ಯಾಸ್ಟ ಕಾಲದಲ್ಲಿ ಜೋಳಿಗೆಯನ್ನು ತೆಗೆದುಕೊಂಡು ಮಧುಕರ ವೃತ್ತಿಯನ್ನಾಚರಿಸಿ ಕಾಲ ಕಳೆಯಹತ್ತಿದನು, ಸ್ಥಿತಿಯಲ್ಲಿ ಅವನ ದಿವಸಗಳು ಸರ್ವಸಾಧಾರಣವಾಗಿ ಸುಖದಲ್ಲಿ ಹೋಗ ಹತ್ತಿದವು. ಇಷ್ಟರಲ್ಲಿ ಅವನ ತಾಯಿಯು ತನ್ನ ತವರಮನೆಯಲ್ಲಿ ಪ್ರಸೂತಳಾಗಿ ಅವಳಿಗೆ ಪುತ್ರ ಪ್ರಾಪ್ತಿಯಾಯಿತು. ಮಾತಾಪುತ್ರರಲ್ಲಿ ಮೊದಲು ಗೊತ್ತಾದಂತೆ ಭೋಲಾನಾಥನು ಆ ಅರ್ಭಕನನ್ನು ಒಂದು ಸ್ಥಳದಲ್ಲಿ ಸುವ್ಯವಸ್ಥಿತವಾಗಿಟ್ಟು, ಈ ಸಂಗತಿಯನ್ನು ತನ್ನ ತಾಯಿಗೆ ತಿಳಿಸಿ, ತಾನು ಮತ್ತೆ ಮೊದಲು ಹೇಳಿದ ಕ್ರಮದಂತೆ ಆ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ಸುಖದಿಂದ ತನ್ನ ಕಾಲಹರಣ ಮಾಡಹತ್ತಿದನು.

ಕರ್ಮದ ಗತಿಯು ಗಹನವಾದದ್ದು. ಇವನು ಸುಖಸಮಾಧಾನದಿಂದಿರುವುದು ಅವನ ದೈವದಲ್ಲಿಯೇ ಇಲ್ಲದ ಮೇಲೆ ಅದು ಅವನಿಗೆ ಲಭಿಸುವದಾದರೂ ಹೇಗೆ ? ಪುರೋಹಿತನ ಮಾತಿಗೆ ಮರುಳಾಗಿ ಅವನು ಆ ಕ್ಷೇತ್ರವನ್ನು ಬಿಟ್ಟ ದಿವಸವೇ ಅವನ ಸುಖಶಾಂತಿಗಳಾದರೂ ಅವನನ್ನು ಬಿಟ್ಟವು. ದುರ್ದೈವವು ಆವನ ವಿರುದ್ಧ ವಾಗಿ ತನ್ನ ಸನ್ನಾಹವನ್ನು ಮಾಡೇ ಇಟ್ಟಿತ್ತು. ಗಿರಿಜಾಬಾಯಿಯು, ತನ್ನ ಮನಸ್ಸಿನಲ್ಲಿ ಹುಟ್ಟಿದ್ದ ನಿರಾಧಾರವಾದ ಸಂಶಯಗಳನ್ನು ನೆರೆಹೊರೆಯಲ್ಲಿದ್ದ ಹೆಂಗಸರ ಮುಂದೆ ತೋಡಿಕೊಂಡು ತೃಪ್ತಳಾಗಲಿಲ್ಲ; ಮತ್ಸರದಿಂದ ಆಂಧಳಾದ ಗಿಜಾಬಾಯಿಯು ತನ್ನ ಗಂಡನ ಕುಲದ ಮೇಲೂ ಅವನ ಕೀರ್ತಿಯ ಮೇಲೂ ಎಂಥೆಂಥ ಸಂಕಟಗಳನ್ನು ತಾನು ತರುವಳೆಂಬ ವಿಚಾರವು ಅವಳಿಗೆ ಉಳಿಯದೆ, ತನ್ನ ಗಂಡನ ದುರ್ವತ್ರನವನ್ನು ಸುಧಾರಿಸುವ ಉದ್ದೇಶದಿಂದ ತನಗೆ ಗೊತ್ತಿದ್ದ ಸಂಗತಿಗಳನ್ನೆಲ್ಲ ಸಾದ್ಯಂತವಾಗಿ ಆ ನಗರದ ರಾಜನಿಗೆ ವಿದಿಶ ಮಾಡಿದಳು.

ಭೋಲಾನಾಥನ ತಂದೆಯು ಜೀವಂತನಿರುವಾಗಲೇ ಅವನ ಹೆಂಡತಿಯು ಅವನಿಂದ ಗರ್ಭಧಾರಣ ಮಾಡಿದ್ದಳೆಂಬ ಸಂಗತಿಯು ನಿಜವಾದದ್ದು. ಆದರೆ, ಗಿರಿಜಾಬಾಯಿಗೆ ಇದು ಸತ್ಯವಾಗಿ ತೋರಲಿಲ್ಲ. ಪತಿಮರಣದ ನಂತರ ತನ್ನ ಗಂಡನ ಸಂಬಂಧದಿಂದಲೇ ಅವಳು ಗರ್ಭಧಾರಣ ಮಾಡಿದ ಇಂದು ಗಿರಿಜಾಬಾಯಿಯ ಕಲ್ಪನೆಯು, ಒಂಬತ್ತು ತಿಂಗಳಗಳು ತುಂಬಿದ ನಂತರವೇ ಅವಳು ಪ್ರಸೂತಳಾಗಿದ್ದಳು. ಆದರೆ, ಕಲ್ಪನೆಯು ಒಮ್ಮೆ ತಪ್ಪ ಹತ್ತಿತೆಂದರೆ, ಅದು ಎಲ್ಲಿ ನಿಲ್ಲುವದೆಂಬದನ್ನು ಯಾರೂ ಹೇಳಲರಿಯರು. ಈ ನಿಯಮಕ್ಕನುಸಾರವಾಗಿ ಗಿರಿಜಾಬಾಯಿಯು ಕಲ್ಪಿಸಿದ್ದೇನಂದರೆ, ತನ್ನ ಅತ್ತೆಯು ಒಂಬತ್ತು ತಿಂಗಳುಗಳು ತುಂಬುವದರೊಳಗಾಗಿಯೇ ಬಲಾತ್ಕಾರದಿಂದ ಗರ್ಭಪಾತವನ್ನು ಮಾಡಿ ಕೊಂಡಿರುವಳು, ತಾಯಿ ಮಕ್ಕಳ ಆಚಾರ ವಿಚಾರಗಳು ತನಗೆ ತಿಳಿಯಬರಬೇಕೆಂದು ಗಿರಿಜಾಬಾಯಿಯು ಗುಪ್ತರಾದಚಾರರನ್ನು ನಿಯೋಜಿಸಿದಳು. ಹುಟ್ಟಿದ ಕೂಸು ಎಲ್ಲಿಯೋ ಇಲ್ಲದಂತಾಗಿದ್ದು, ಭೋಲಾನಾಥನು ಭಿಕ್ಷುಕರ ವೇಷವನ್ನು ಧಾರಣ ಮಾಡಿಕೊಂಡು ಒಂದು ಕ್ಷೇತ್ರದಲ್ಲಿರುತ್ತಾನೆಂಬ ಸಂಗತಿಯು ಚಾರರ ಮುಖಾಂತರವಾಗಿ ಗಿರಿಜಾಬಾಯಿಗೆ ತಿಳಿಯಿತು. ಈ ಸುದ್ದಿಯು ತಿಳಿದ ಕೂಡಲೆ ಅವಳು ತನ್ನ ಪೂರ್ವದ ಕುಕಲ್ಪನೆಯ ಸಂವಿಧಾನವನ್ನು ಕೊನೆಯವರೆಗೆ ಸರಿಯಾಗಿ ಜೋಡಿಸಿದಳು. ಕೂಸು ಇಲ್ಲದಂತಾಗಿದೆ೦ದ ಮೇಲೆ ಅದನ್ನು ಕೊಂದಿರಲಿಕ್ಕೇ ಬೇಕು; ಭೋಲಾನಾಥನು ಭಿಕ್ಷುಕನ ವೇಷವನ್ನು ಧರಿಸಿ ಮಠದಲ್ಲಿ ಅಡಗಿಕೊಂಡು ಕೂಡುವದಕ್ಕೆ ಗರ್ಭಪಾತದ ಶಾಸನದ ಭೀತಿಯ ಹೊರತು ಅನ್ಯವಾದ ಕಾರಣವಾದರೂ ಯಾವದು ? ಹೀಗೆ ವಿಚಾರಿಸಿ ಮತ್ಸರದ ವರ್ತಿಯಾದ ಗಿರಿಜಾಬಾಯಿಯು, ತನ್ನ ಗಂಡನ ಅನೈಗಾಮಿಯಾದ ಪ್ರೇಮವು ರ್ದುಕಿಕದ ಭೀತಿಯಿಂದಲಾದರೂ ಮರಳಿ ತನ್ನ ಮೇಲೆ ಕೂಡಬೇಕೆಂಬ ಉದ್ದೇಶದಿಂದ ಈ ಸಂಗತಿಯನ್ನು ರಾಜದಾಚಾರಕ್ಕೆ ²ರಿಕೆ ಮಾಡಿಕೊಂಡಳು, ಪುರಾತನ ಕಾಲದ ದರಬಾರದು, ಇಷ್ಟು ಸೂಕ್ಷ್ಮವಾದ ನ್ಯಾಯ- ಅನ್ಯಾಯಗಳನ್ನು ಪರೀಕ್ಷಿಸುವವರಾರು ? ಸೂಳಿಯ ಪಾಪ ಸನ್ಯಾಸಿಕೆಂಬ ನಾಣ್ಣುಡಿಯು ಆಗಿನಿಂದಲೇ ಲೋಕದಲ್ಲಿ ರೂಢವಾಗಿದೆ.

****

ಪ್ರಾತಃಕಾಲದ ಸಮಯವು. ಆಕಾಶದಲ್ಲಿ ನಕ್ಷತ್ರಗಳು ವಿರಲವಾಗಿ ತೋರುತ್ತಿದ್ದವು. ಪೂರ್ವದಿಕೆಯು ಕಿಂಚಿತ್ರ ಆರಕ್ತವಾಗಿತ್ತು. ವೃಕ್ಷಗಳ ಸಮುದಾಯದೊಳಗಿಂದ ಪಕ್ಷಿಗಳ ಮಂಜುಲವಾದ ಧ್ವನಿಯು ಕೇಳಬರುತ್ತಿತ್ತು. ಮುಂಜಾವಿನ ತಂಗಾಳಿಯು ಮಂದಮಂದವಾಗಿ ಬೀಸುತ್ತಿತ್ತು. ಅನೇಕ ದಿವಸಗಳವರೆಗೆ ಕತ್ತಲೆಕೋಣೆಯೊಳಗಿನ ನೆಲಮನೆಯಲ್ಲಿದ್ದ ಭೋಲಾನಾಥನಿಗೆ ಅವಚಿತವಾಗಿ ಇಂಥ ವಿಶ್ವಸೌಂದರ್ಯ ದರ್ಶನವಾದ್ದರಿಂದ ಅವನ ಮನಸ್ಸು ಎಷ್ಟು ಉಲ್ಲಾಸಿತವಾಯಿತೆಂಬದರ ಕಲ್ಪನೆಯನ್ನು ಮಾಡುವದು ಕಠಿಣವಾದ ಕೆಲಸವಲ್ಲ. ಅವನು ಇರುತ್ತಿದ್ದ ಕ್ಷೇತ್ರದಲ್ಲಿಯ ನದಿಯು, ಹತ್ತಿರದಲ್ಲಿದ್ದ ಉಚ್ಚವಾದದ್ದೊಂದು ಪರ್ವತದಲ್ಲಿ ಉಗಮವನ್ನು ಹೊಂದಿತ್ತು. ಇದೇ ಪರ್ವತದ ಶಿಖರದ ಮೇಲೊಂದು ವಿಸ್ತಿರ್ಣವಾದ ದುರ್ಗವಿತ್ತು. ಈ ದುರ್ಗಕ್ಕೆ ಸೇರಿದ ಒಂದು ಕತ್ತಲಕೋಣೆಯಲ್ಲಿ ತನಗಾದ ದೇಹಾಂತ ಶಿಕ್ಷೆಯ ಮರಣದ ದಿವಸವನ್ನು ಪ್ರತೀಕ್ಷಿಸುತ್ತ ಭೋಲಾನಾಥನು ಎಷ್ಟೋ ದಿವಸಗಳ ವರೆಗೆ ಕೊಳೆಯುತ್ತ ಬಿದ್ದಿದ್ದನು. ಕೊನೆಗೆ ಆ ದಿವಸವು ಬಂದೊದಗಿತು. ಕಾವಲುಗಾರರು ಆ ಕತ್ತಲೆ ಕೋಣೆಗೆ ಹಾಕಿದ ಬೀಗವನ್ನು ತೆಗೆದು, ಬಾಗಿಲಗಳನ್ನು ತೆರೆದರು; ಕಾಲುಗಳೊಳಗಿನ ಶೃಂಖಲೆಗಳ ಸಪ್ಪಳವು ಹೃದಯದ್ರಾವಕವಾಗಿ ಕೇಳಬರಹತ್ತಿತ್ತು. ಆ ಹತ ಭಾಗ್ಯನಾದ ಪ್ರಾಣಿಯು ಬೇಡಿಗಳ ಭಾರವನ್ನು ಸಹಿಸಲಾರದೆ, ಮಂದಮಂದವಾಗಿ ಹೆಜ್ಜೆಗಳನ್ನಿಕ್ಕುತ್ತ ತನ್ನ ವಧಸ್ಥಾನವಾಗಿದ್ದ ಪರ್ವತದ ಶಿಖರದ ಕಡೆಗೆ ನಡೆದನು.

ಒಂದು ಎತ್ತರವಾದ ಪರ್ವತದ ತುದಿಯ ಮೇಲಿಂದ ಕೆಳಗೆ ನೂಕಿ ಇವನ ಪ್ರಾಣವನ್ನು ತೆಗೆದುಕೊಳ್ಳಬೇಕೆಂಬ ಶಿಕ್ಷೆಯು ಭೋಲಾನಾಥನಿಗೆವಿಧಿಸಲ್ಪಟ್ಟಿತ್ತು. ಆ ಪ್ರಕಾರ ಭೋಲೆನಾಥನು ಆ ಪರ್ವತದ ಶಿಖರದ ಮೇಲೆ ಬಂದು ನಿಂತನು. ಮೇಲಿಂದ ಕೆಳಗೆ ನೋಡುವವರಿಗೆ ಭೂಮಿಯು ಕಾಣದಷ್ಟು ಆ ಪರ್ವತವು ಎತ್ತರವಾಗಿತ್ತು, ಆಕಾಶದಲ್ಲಿ ಹಾರುವದಕ್ಕೆ ಜಾಣನೆಂದು ಹೆಸರು ಪಡೆದ ಪಕ್ಷಿಗಳು ಕೂಡ ನೆಲದ ಮೇಲಿಂದ ಹಾರಿದವೆಂದರೆ, ಪರ್ವತದ ತುದಿಯನ್ನು ಮುಟ್ಟುವದು ಅವುಗಳಿಗೆ ಅಸಾಧ್ಯವಾಗಿ ಮಧ್ಯದಲ್ಲಿಯೇ ವಿಶ್ರಾಂತಿಗಾಗಿ ಎಲ್ಲಿಯಾದರೂ ಕುಳಿತುಕೊಳ್ಳುತ್ತಿದ್ದವು. ಈ ಪಕ್ಷಿಗಳಲ್ಲಿ ರಣಹದ್ದುಗಳ ಗದ್ದಲವೇ ವಿಶೇಷವಾಗಿತ್ತು. ಈ ಪರ್ವತಕ್ಕೆ ಎದುರಾಗಿ ಸ್ವಲ್ಪ ಅಂತರದ ಮೇಲೆ ಮತ್ತೊಂದು ಪರ್ವತವಿತ್ತು. ಶೃಂಖಲೆಗಳಿಂದ ಬದ್ಧನಾದ ಬಂದಿಯು, ಕಾವಲುಗಾರರೂ ಅಧಿಕಾರಸ್ಥರೂ ತನ್ನನ್ನು ನೂಕುವದಕ್ಕೆ ಸಿದ್ಧರಾಗುವ ವರೆಗೆ, ಈ ಎದುರಿನಲ್ಲಿದ್ದ ಪರ್ವತದ ಕಡೆಗೆ ನೋಡುತ್ತ ತಟಸ್ಥನಾಗಿ ನಿಂತಿದ್ದವು. ಆದರೆ, ಅವನ ಮನಸ್ಸಿನಲ್ಲಿ ವಿಚಾರಗಳ ತುಮುಲ ಯುದ್ಧವು ನಡೆದಿತ್ತು. ಮರಣದ ಸಮಯದಲ್ಲಿ ಮನುಷ್ಯನಿಗೆ ಅವನ ಪೂರ್ವವೃತ್ತಗಳೆಲ್ಲ ಕಾಣುತ್ತವೆಂದೆನ್ನುತ್ತಾರೆ. ಈ ಸಮಯದಲ್ಲಿ ಅವನ ಅವಸ್ಥೆಯಾದರೂ ಹೀಗೇ ಆಗಿತ್ತು. ಅವನ ವಿಚಿತ್ರ ಪೂರ್ಣವಾದ ಚರಿತ್ರವು ಅವನ ಕಣ್ಣುಗಳ ಮುಂದೆ ಬಂದು ನಿಂತಿತು. ಆಗ್ಗೆ ಅವನು ತನ್ನ ಮನಸ್ಸಿನಲ್ಲಿ ಅಂದದ್ದು : "ಸ್ವಲ್ಪಾವಕಾಶದಲ್ಲಿಯೇ ನಾನು ಸಾಯುವೆನೆಂಬ ಸಂಗತಿಯು ನನಗೆ ಆನಂದದಾಯಕವಾಗಿದೆ. ನನ್ನನ್ನು ಸಂಕಟದೊಳಗಿಂದ ಮುಕ್ತ ಮಾಡಲು ಬರುತ್ತಿರುವ ಮರಣವನ್ನು ನಾನು ಮಿತ್ರಭಾವದಿಂದ ಸ್ವಾಗತಿಸುತ್ತೇನೆ. ಆದರೆ, ಈ ಸಂಕಟಗಳಾದರೂ ನನ್ನ ಮೇಲೆ ಯಾಕೆ ಒದಗಬೇಕು ? ಯಾವ ಅಪರಾಧಗಳನ್ನು ಮಾಡಿರುವೆನೆಂದು ಈ ಯಾತನೆಗಳಿಗೆ ನಾನು ಪಾತ್ರನಾಗಿರುವೆನು ? ಆಜನ್ಮ ಧರ್ಮಾಚರಣೆಯನ್ನು ಮಾಡಿದೆನು. ಲೋಕೋಪಕಾರಕ್ಕಾಗಿ ಸ್ವಂತ ಸುಖಕ್ಕೆ ತಿಲಾಂಜಲಿಯನ್ನು ಕೊಟ್ಟೆನು. ಹೀಗಿರಲು ನನ್ನ ಮೇಲೆ ನಿಷ್ಕಾರಣವಾಗಿ ಈ ಸಂಕಟಗಳು ಯಾಕೆ ? ನನ್ನ ವಾಣಿಯು ಉಚ್ಚರಿಸುವದಕ್ಕೆ ಕೂಡ ಹೇಸುವ ಅಘೋರಿವಾದ ಪಾತಕಗಳನ್ನು ನಾನು ಮಾಡಿದೆನೆಂಬ ದೋಷಾರೋಪವು ನನ್ನ ಮೇಲೆ ಯಾಕೆ ? ಹಾಗೂ ನನಗೆ ದೇಹಾಂತ ಶಾಸನವಾದರೂ ಯಾಕೆ ನಿಧಿ ಸಲ್ಪಡಬೇಕು ? ಇದು ಹೀಗೆ ಯಾಕಾಗುತ್ತಿರುವದು ? ಹಾಗೂ ಇದನ್ನು ಮಾಡುವವನಾದರೂ ಯಾರಿರಬಹುದು ?

ಈ ವಿಚಾರಗಳು ಇವನ ಮನಸ್ಸಿನಲ್ಲಿ ನಡೆದಿರಲು, ಎದುರಿನಲ್ಲಿದ್ದ ಪರ್ವತದ ತುದಿಯ ಮೇಲೆ, ಇವನು ಪೂರ್ವದಲ್ಲಿ ಎಷ್ಟೋ ಸಾರೆ ನೋಡಿದ್ದ ಕರ್ಮಾಧಿಕಾರಿಯ ಮೂರ್ತಿಯು ಇವನಿಗೆ ಕಾಣಹತ್ತಿತು. ಪರ್ವತದ ಶಿಖರದಿಂದ ಆಕಾಶದ ವರೆಗಿನ ವಿಸ್ತೀರ್ಣವಾದ ಅವಕಾಶಭಾಗವನ್ನೆಲ್ಲ ಆ ಆಕೃತಿಯು ವ್ಯಾಪಿಸಿಕೊಂಡಿತು. ಇಂಥ ಭವ್ಯವಾದ ಹಾಗೂ ವಿರಾಟ ಸ್ವರೂಪಿಯಾದ ಕರ್ಮಾಧಿಕಾರಿಯ ಆಕೃತಿಯನ್ನು ಕಂಡು, ಭೋಲಾನಾಥನು ತೀರ ವಿಸ್ಮಿತನೂ, ಕುದ್ಧನೂ ಆಗಿ ಅವನನ್ನು ನೋಡಿ ಅಂದದ್ದು : "ಎಲೈ ಕರ್ಮಾಧಿಕಾರಿಯೇ, ಈ ಕಾಲಕ್ಕಾದರೂ ನೀನು ಇಲ್ಲಿ ಇದ್ದೇ ಇರುವಿಯಾ ? ನನ್ನ ಬೆನ್ನು ಬಿಡದೆ ನನ್ನನ್ನು ಯಾಕೆ ಹಿಂಬಾಲಿಸುವಿ ? ನೀನು ಯಾರು ? ನಿನ್ನ ಅಧಿಕಾರವೇನು? ನನ್ನ ಮೇಲೆ ಸಂಕಟಗಳು ಬಂದೊದಗಿದಾಗ ನನ್ನನ್ನು ಹೀಯಾಳಿಸಲು ವೈರಿಯಂತೆ ನೀನು ಯಾವಾಗಲೂ ಸಿದ್ಧನೇ."

"ನಾನು ಕರ್ಮಾಧಿಕಾರಿಯೆಂದು ನಿನಗೆ ಈ ಮೊದಲೇ ಹೇಳಿಲ್ಲವೆ ? ಪ್ರತಿಯೊಬ್ಬನ ಕರ್ಮಗಳಿಗನುಸಾರವಾಗಿ ಅವನಿಗೆ ಫಲಗಳನ್ನು ಕೊಡುವದು ನನ್ನ ಅಧಿಕಾರವಾಗಿದೆ. ನಾನು ನಿನ್ನ ಕರ್ಮಮರ್ತಿಯು, ಹಾಗೆಯೇ ಆ ಪುರೋಹಿತನು, ಆ ನಿನ್ನ ದತ್ತಕ ತಂದೆಯು, ದತ್ತಕ ತಾಯಿಯು, ನಿನ್ನ ಹೆಂಡತಿಯು, ನಿನ್ನ ಹೊಸ ತಮ್ಮನು ಇವರೆಲ್ಲರೂ ಅಂಶತಃ ನಿನ್ನ ಕರ್ಮದ ಫಲಗಳಾಗಿದ್ದಾರೆ. ಪೂರ್ವ ಸಂಚಿತದಂತೆ ಆಷ್ಟರು ಸುಖದುಃಖಗಳಿಗೆ ಕಾರಣರಾಗುತ್ತಾರೆ. ಇದೆಲ್ಲ ನಿನ್ನ ಕರ್ಮದ ಆಟವು !.

ಪ್ರಶ್ನ : ಇಂಥ ಭಯಂಕರವಾದ ಫಲಗಳನ್ನು ಪಭೋಗಿಸಲು ನಾನು ಮಾಡಿದ ಅಂಥ ಭಯಂಕರವಾದ ಕರ್ಮಗಳಾದರೂ ಯಾವವು ? ನಾನು ಯಾರ ದ್ರವ್ಯಾಪಹಾರವನ್ನು ಮಾಡಿದ್ದೇನೆಂದು ಈ ಭಯಂಕರವಾದ ಪಿಶಾಚಿಗಳು ನನ್ನನ್ನು ಕಾಡುತ್ತಿರುವವು ? ಹಾಗೂ ನಾನು ಯರ ಪ್ರಾಣಘಾತವನ್ನು ಮಾಡಿದ್ದೆನೆಂದು ಈ ಕೋರವಾದ ಮಣದ ಶಿಕ್ಷೆಯು ನನಗೆ ವಿಧಿಸಲ್ಪಟ್ಟಿರುವದು ?

ಉತ್ತರ : ಈ ಯಾತನೆಗಳಿಗೆ ಪಾತ್ರನಾಗುವಂತೆ ನೀನು ಜನ್ಮಾಂತರದಲ್ಲಿ ಕರ್ಮಗಳನ್ನಾರಿಸಿರುವಿ.

ಪ್ರಶ್ನೆ: ಈ ಮಾತಿನ ತಿಳುವಳಿಕೆಯಾಗುವದು ಕಠಿಣವಾದದ್ದು. ನನ್ನ ಇಹಜನ್ಮದ ಆ ಚರಣದ ಮೇಲಿಂದಲೂ ಮನಃಪ್ರವೃತ್ತಿಯ ಮೇಲಿಂದಲೂ ಇಂಥ ಕೃತ್ಯಗಳನ್ನು ನಾನು ಮಾಡಿದ್ದೆಂದು ನಿಶ್ಚಯಪೂರ್ವಕವಾಗಿ ಹೇಳಬಲ್ಲೆನು. ಆದರೆ, ಪೂರ್ವಜನ್ಮದಲ್ಲಿ ನಾನು ಆಂಥ ಆಘೋರವಾದ ಪಾತಕಗಳನ್ನು ಮಾಡಿದ್ದರೆ, ಹಾಗೂ ಅವುಗಳ ಪ್ರಾಯಶ್ಚಿತ್ತವನ್ನು ನಾನು ಈ ಜನ್ಮದಲ್ಲಿ ಭೋಗಿಸುವದಾಗಿದ್ದರೆ, ನನ್ನ ಪೂರ್ವಪಾತಕಗಳನ್ನು ನನ್ನ ನೆನಪಿಗೆ ತಂದುಕೊಡುವದು ನ್ಯಾಯವಾದ ಮಾತಲ್ಲವೆ? ನೀನು ಇಂಥಿಂಥ ಕರ್ಮಗಳನ್ನು ಮಾಡಿರುವದಕ್ಕಾಗಿ ನಿನಗೆ ಇಂಥ ಶಿಕ್ಷೆಯು ವಿಧಿಸಲ್ಪಟ್ಟಿದೆಯೆಂದು ನ್ಯಾಯಾಧೀಶರಾದರೂ ಹೇಳುವ ರೂಢಿಯುಂಟು. ಈಗಿನ ನನ್ನ ಸುಖ ದುಃಖಗಳಿಗೆ ನನ್ನ ಪೂರ್ವಜನ್ಮದ ಸುಕರ್ಮ ಅಥವಾ ದುಷ್ಕರ್ಮಿಗಳು ಕಾರಣವಾಗಿವೆಂದು ನೀನು ಹೇಳುತ್ತಿರುವಿ. ಆದರೆ, ನನ್ನ ಪೂರ್ವಜನ್ಮದಲ್ಲಿ ನನಗೆ ದುಷ್ಕರ್ಮಮಾಡುವ ಬುದ್ಧಿ ಯಾದರೂ ಯಾಕೆ ಹುಟ್ಟಬೇಕು ? ಅದಕ್ಕೆ ಅದರ ಪೂರ್ವಜನ್ಮದ ಕರ್ಮಗಳು ಕಾರಣವೆಂದು ನಿನ್ನ ಉತ್ತರವು. ಈ ಪೂರ್ವಜನ್ಮದ ಪರಂಪರೆಯನ್ನಾದರೂ ಎಲ್ಲಿಯ ವರೆಗೆ ಒಯ್ಯತಕದ್ದು? ಒಳ್ಳೇದು, ನನ್ನ ಮೊಟ್ಟ ಮೊದಲನೆಯ 'ಜನ್ಮದಲ್ಲಿ ಕರ್ಮವು ಎಲ್ಲಿಂದ ಇಂದಿತು ? ಮುಂದಿನ ಜನ್ಮದಲ್ಲಿ ದುಃಖಗಳು ಪ್ರಾಪ್ತವಾಗುವಂಥ ಕುಕರ್ಮಗಳು ಆ ಜನ್ಮದಲ್ಲಿ ನನ್ನಿಂದ ಯಾಕೆ ಘಟಿಸಿದವು? ಈ ಪ್ರಶ್ನೆಗೆ ಸಮಾಧಾನ ಕಾರಕವಾದ ಉತ್ತರವನ್ನು ನೀನು ಕೊಟ್ಟರೆ, ನೀನು ವಿಧಿಸುವ ಅನಂತಾನಂತ ಶಿಕ್ಷೆಗಳನ್ನು ನಾನು ಆನಂದದಿಂದ ಉಪಭೋಗಿಸುವೆನು.

ಉತ್ತರ: ಕರ್ಮವು ಅನಾದಿಯಾದದ್ದೆಂದು ಮಾತ್ರ ನಾನು ಹೇಳಿ ಬಲ್ಲೆನು. ಇದಕ್ಕೂ ಹೆಚ್ಚಿನ ಸಮಾಧಾನಕಾರಕವಾದ ಉತ್ತರವು ನನ್ನ ಹತ್ತರವಿಲ್ಲ. ಸುಖಗಳನ್ನು ಉಪಭೋಗಿಸುವಾಗ ಈ ಸುಖವು ಯಾವ ಜನ್ಮದಲ್ಲಿಯ ಸುಕರ್ಮದ ಫಲವೆಂದು ಮನುಷ್ಯನು ವಿಚಾರಿಸುವದಿಲ್ಲ. ಅಂದ ಮೇಲೆ ದುಃಖಗಳನ್ನು ಉಪಭೋಗಿಸುವಾಗ ಮಾತ್ರ ಅವನು ಈ ಆಕ್ಷೇಪವನ್ನು ಯಾಕೆ ತೆಗೆಯಬೇಕು ?

ಇಷ್ಟು ಮಾತಾಡಿ ಆ ಕರ್ಮಾಧಿಕಾರಿಯು ಅದೃಶ್ಯನಾದನು. ಇದನ್ನು ಕಂಡು ಭೋಲಾನಾಥನು 'ನಿಷ್ಠುರನು, ನಿಷ್ಠುರನು' ಎಂದು ಕರ್ಮಾಧಿಕಾರಿಯನ್ನುದ್ದೇಶಿಸಿ ಅವನನ್ನು ಧಿಕ್ಕರಿಸುವಷ್ಟರಲ್ಲಿ, ಕಾವಲುಗಾರರು ಅವನನ್ನು ಸರ್ವತದ ಶಿಖರದಿಂದ ಕೆಳಗೆ ನೂಕಿದರು !


ಪೇರೂ ಹಾಗೂ ಪಿಝಾರೋ

ಅಮೇರಿಕಾ ಖಂಡದ ಶೋಧವನ್ನು ಕೋಲಂಬಸನು ಹಚ್ಚಿದನು; ಯುರೋಪಿಯನ್ ರಾಷ್ಟ್ರದವರು ಅಮೇರಿಕೆಗೆ ಹೊಗುವದರ ಪೂರ್ವದಲ್ಲಿ, ಅಲ್ಲಿ 'ರೆಡ್- ಇಂಡಿಯನ್' ಅಥವಾ ತಾಮ್ರವರ್ಣದ ಕಾಡಜನರು ವಾಸಮಾಡಿಕೊಂಡಿದ್ದರು; ಹೊಸದಾಗಿ ಪಸಹಾಯವನ್ನು ಮಾಡಿದ ಯುರೋಪಿಯನ್ ಜನರ ಮುಂದೆ ಇವರ ಆಟ ಸಾಗದೆ, ಅವರು ಯುರೋಪಿಯನ್ನರ ಅಂಕಿತಕ್ಕೆ ಪೂರ್ಣ ಒಳಗಾದರು; ಇಷ್ಟು ಸಂಗತಿಗಳನ್ನು ಮಾರಿ ಅಮೇರಿಕೆಯೊಳಗಿನ ಅನೇಕ ದೇಶಗಳ ಪೂರ್ವವೃತ್ತಾಂತವು ನಮ್ಮ ಜನರಿಗೆ ಗೊತ್ತಿಲ್ಲ. ಅಮೇರಿಕೆಯು ಒಂದು ಖಂಡವಾಗಿದೆ. ಇ೦ಗ್ರಜ ಜನರ ಸಂಬಂಧವು ಉತ್ತರ ಅಮೆರಿಕೆಯಲ್ಲಿರುವ 'ಕಾನಡಾ' ಹಾಗೂ 'ಯುನಾಯಟೆಡ್ ಸ್ಟೇಟ್ಸ' ಎಂಬ ಹೆಸರುಗಳಿಂದ ಪ್ರಸಿದ್ಧವಾಗಿರುವ ಪ್ರದೇಶಗಳ ಕೂಡ ವಿಶೇಷವಾಗಿರುವದರಿಂದ, ಇ೦ಗ್ರಜೀ ಇತಿಹಾಸಗಳ ದ್ವಾರಾ ಈ ಪ್ರದೇಶಗಳ ವಿಷಯವಾಗಿ ಅಲ್ಪಸ್ವಲ್ಪ ಜ್ಞಾನವು ಸರ್ವಸಾಧಾರಣವಾಗಿ ಸುಶಿಕ್ಷಿತ ಜನರಿಗಿರುತ್ತದೆ, ಆದರೆ ಉತ್ತರ ಅಮೇರಿಕೆಯಲ್ಲಿರುವ ಪ್ರದೇಶದಷ್ಟೇ ಪ್ರದೇಶವು ದಕ್ಷಿಣ ಅಮೇರಿಕೆಯಲ್ಲಿರುತ್ತದೆ. ಆದರೆ ದಕ್ಷಿಣ ಅಮೇರಿಕೆಯೊಳಗಿನ ಬಾಝಿಲ, ಪೇರೂ ಮುಂತಾದ ದೊಡ್ಡ ದೊಡ್ಡ ಪ್ರದೇಶಗಳನ್ನು, ಇ೦ಗ್ರಜೇತರ ಯುರೋಪಿಯನ್ ರಾಷ್ಟ್ರದವರೇ ಪೂರ್ವದಾರಭ್ಯ ತಮ್ಮ ಸ್ವಾಧೀನ ಮಾಡಿಕೊಂಡಿರುವದರಿಂದ ಅವುಗಳ ಪೂರ್ವೇತಿಹಾಸವು ನಮ್ಮಲ್ಲಿಯ ಸುಶಿಕ್ಷಿತರಿಗೂ ಕೂಡ ಗೊತ್ತಿರುವದಿಲ್ಲ. ಮೇಳಾಗಿ ಯುರೋಪಿಯನರು ಆಮರಿಕೆಗೆ ಹೋಗುವದರ ಪೂರ್ವದಲ್ಲಿ, ಅಮೇರಿಕೆಯಲ್ಲಿಯ ಮೂಲನಿವಾಸಿಗಳೆಲ್ಲರೂ ಕಾಡುಸ್ಥಿತಿಯಲ್ಲಿದ್ದರು, ಅಥವಾ ನರಮಾಂಸ ಭಕ್ಷಕರಾಗಿದ್ದರೆಂಬ ಸರ್ವಸಾಧಾರಣವಾಗಿರುವ ಕಲ್ಪನೆಯಾದರೂ ತಪ್ಪಿ ನದಾಗಿದೆ. 'ಮೆಕ್ಸಿಕೋ'ದೊಳಗಿನ ಆಝುಟೇಕ ಜನರೂ, ಪೇದೊಳಗಿನ ಇಂಕಾಜನರೂ ತಕ್ಕಮಟ್ಟಿಗೆ ಸುಸಂಸ್ಕೃತರಾದ ಜನರಾಗಿದ್ದರು. ಈ ಜನರ ರಾಜ್ಯಗಳನ್ನು ಸ್ಪಾನೀಆರ್ಡರು ಹೇಗೆ ಪಾದಾ ಕ್ರಾಂತ ಮಾಡಿದರೆಂಬ ಇತಿಹಾಸವು ಬಹಳ ಮನೋವೇಧಕವಾಗಿದೆ. ಅದಕ್ಕಾಗಿ 'ಹೈಸ್ಕಾಟ' ಎಂಬ ಗ್ರಂಥಕಾರನು ಬರೆದಿಟ್ಟಿರುವ ಪ್ರದೇ ಇತಿಹಾಸದ ಮೇಲಿಂದ, ಆ ದೇಶದ ಪ್ರಾಚೀನ ನಿವಾಸಸ್ಥರನ್ನು ಸ್ಪಾನಿ ಆರ್ಡರು ಯಾವ ಬಗೆಯಿಂದ ಪಾದಾಕ್ರಾಂತ ಮಾಡಿದರೆಂಬದರ ಸಂಗತಿಯನ್ನು ಅಲ್ಪಶಃ ನಮ್ಮ ವಾಚಕರ ಸಲುವಾಗಿ ಕೊಡುತ್ತೇವೆ.

ಪೇರೂ ದೇಶವು ಅಮೇರಿಕೆಯಲ್ಲಿ ಒಂದು ದೊಡ್ಡದಾದ ಪ್ರದೇಶವಾಗಿದೆ. ಈ ದೇಶದ ದಕ್ಷಿಣೋತ್ತರ ಉದ್ದಳತೆಯ ೨೭೦೦ ಮೈಲವಾಗಿದ್ದು ಆಗಲಳತೆಯು ಇನ್ನೂರರಿಂದ ನಾನೂರು ಮೈಲವಾಗಿದೆ. ಪೇರೂದೇಶದ ಪಶ್ಚಿಮಕ್ಕೆ ಸಾಸಿಫಿಕ ಮಹಾಸಾಗರವಿದ್ದು, ಪೂರ್ವಕ್ಕೆ ಅತ್ಯುಚ್ಚವಾದ ಆ೦ಡಿಜ ಪರ್ವತವು ಹಬ್ಬಿಕೊಂಡಿದೆ. ಈ ಪರ್ವತದ ಹಲಕೆಲವು ಶಿಖರಗಳು ೨೫೦೦೦ ಘೋಟುಗಳ ವರೆಗೆ ಎತ್ತರವಾಗಿವೆ. ಅಂದರೆ, ಹಿಮಾಲಯ ಪರ್ವತವನ್ನು ಬಿಟ್ಟು ಕೊಟ್ಟರೆ, ಇದೇ ಪರ್ವತವು ಸೃಷ್ಟಿಯ ಮೇಲೆ ಉಚ್ಚವಾದದ್ದು. ಆಂಡಿ ಜಪರ್ವತ ಹಾಗೂ ಪಾಸಿಫಿಕ ಮಹಾಸಾಗರಗಳ ನಡುವೆ ಈ ಪ್ರದೇಶವು ಹಬ್ಬಿಕೊಂಡಿದೆ. ಈ ದೇಶದೊಳಗಿನ ಮೂಲನಿವಾಸಸ್ಥರಿಗೆ 'ಪೇರವ್ಹಿಯನ' ಜನರೆಂಬ ಸಂಜ್ಞೆಯನ್ನು ಯುರೋಪಿಯನ್ನರು ಕೊಡುತ್ತಾರೆ. ಆದರೆ, ಈ ದೇಶದೊಳಗಿನ ಉಚ್ಚ ವರ್ಣದ ಜನರಿಗೂ ರಾಜಮನೆತನದವರಿಗೆ 'ಇಂಕಾ' ಎಂಬ ಸಂಜ್ಞೆ ಇತ್ತು. ಅದಕ್ಕಾಗಿ ಸೇದ ದೇಶದೊಳಗಿನ ಜನರಿಗೆ ಇಂಕಾ ಎಂಬ ಸಂಜ್ಞೆಯೇ ಇತಿಹಾಸದಲ್ಲಿ ಸರ್ವಸಾಧಾರಣವಾಗಿ ಕೊಡಲ್ಪಟ್ಟಿದೆ. ಕೊಲಂಬಸನು ಅಮೇರಿಕೆಯನತ್ನಿ ಶೋಧಿಸಿದನು; ಆದರೆ ಈ ವಿಸ್ತೀರ್ಣವಾದ ಹೊಸ ಖಂಡದೊಳಗಿನ ಭಿನ್ನ ಭಿನ್ನ ದೇಶಗಳ ಜ್ಞಾನವನ್ನು ಸಂಪಾದಿಸುವದಕ್ಕೂ ಮೆಕ್ಸಿಕೊದೊಳಗಿನ 'ಆರುಟೀಕ ಜನರ ಸಾಮ್ರಾಜ್ಯದ ಮೇಲೂ ಪೇರದೊಳಗಿನ ಇಂಕಜನರ ವಿಸ್ತೀರ್ಣವಾದ ಪ್ರದೇಶದ ಮೇಲೂ ಸ್ಪೇನದ ಧ್ವಜಪಟವನ್ನು ಊರುಬೇಕಾದರೆ, ಕೋರ್ಟಿನ್ ಹಾಗೂ ಪಿಝಾರೋರ೦ಥ ಸಾಹಸಿಗಳಾದ ಎದೆಗಾರರಿಗೆ ಅನೇಕ ವರ್ಷಗಳ ವರೆಗೆ ಜೀವಖಾರಿ ಪ್ರಯತ್ನಗಳನ್ನೂ, ಕಷ್ಟಗಳನ್ನ ಪಡ ಬೇಕಾಯಿತು. ೧೫ನೇ ಶತಕದ ಕೊನೆಯಲ್ಲಿ ಪನಾಮಾ ಸಂಯೋಗಭೂಮಿಯ ಮೇಲೆ ಸ್ಟಾನಿಶ ಜನರ ವಸಹಾತಿಗಳು ಸ್ಥಾಪಿತವಾಗಿದ್ದರೂ ಪಾಸಿಫಿಕ ಮಹಾಸಾಗರದ ದಕ್ಷಿಣಭಾಗದ ದಂಡೆಯ ಮೇಲೆ ಯಾವ ಜನರು ವಾಸಿಸಿರುವರೆಂಬದೂ, ಅವರ ರಾಜ್ಯವ್ಯವಸ್ಥೆಯು ಯಾವ ಬಗೆಯದಾಗಿತ್ತ೦ಬದ ಸ್ಪಾನಿಳರ್ಡರಿಗೆ ಗೊತ್ತಾಗಿದ್ದಿಲ್ಲ. ಸ್ಪಾನಿ ಆರ್ಡರಿಗೆ ಬಂಗಾರದ ಹುಚ್ಚು ಒಳಿತಾಗಿತ್ತು. ಹೊಸ ಹೊಸ ದೇಶಗಳು. ದೊರೆದ ಕೂಡಲೆ, ಅಲ್ಲಿ ಬಂಗಾರವು ಅಪಾರವಾಗಿ ದೊರೆಯುತ್ತದೇನೆಂಬದರ ವಿಷಯವಾಗಿ ಅವರು ವಿಚಕ್ಷಣೆಯನ್ನು ಮಾಡುತ್ತಿದ್ದರು. ಸ. ೧೫೧೧ನೇ ಇಸ್ವಿಯಲ್ಲಿ ವ್ಯಾಸೋ-ನನೇರ-ಡೀ-ಬಲ್ಬೋ ಆ ಎಂಬ ಸ್ಪಾನಿಶ ಗೃಹಸ್ಥನು ತದೇಶೀಯ ಅಮೇರಿಕನ ಜನರಿಂದ ಸಂಪಾದಿಸಿದ ಬಂಗಾರವನ್ನುತೂಗುತ್ತಿದ್ದನು. ಈ ಬಂಗಾರವು ೮-೧೦ ಶೇರುಗಳ ಕಿಂತ ಹೆಚ್ಚಿಗಿದ್ದಿದ್ದಿಲ್ಲ. ಆದರೆ, ಅವನು ಅದನ್ನು ತೂಗುವಾಗ ಗುಂಜಿಯಷ್ಟು ಕೂಡ ಹೆಚ್ಚು ಕಡಿಮೆಯಾಗದಂತೆ ಎಚ್ಚರಪಡುತ್ತಿದ್ದನು. ಆಗ್ಗೆ ಇದನ್ನೆಲ್ಲ ನೋಡುತ್ತ ಅಲ್ಲಿ ಕುಳಿದ್ದ ಒಬ್ಬ ತದ್ದೇಶೀಯ ಗೃಹಸ್ಥನು ಬಲ್ಲೋರೆನ ತಕ್ಕಡಿಯ ಮೇಲೆ ಕೈ ದೊಡೆದು ಅವನಿಗೆ ಅಂದದ್ದು: ಇಷ್ಟು ಬಂಗಾರದ ತೂಕವನ್ನಾದರೂ ಜೀನತನದಿಂದ ಮಾಡುವದು ? ಈ ಸಮುದ್ರದ ದಂಡಿಯ ದಕ್ಷಿಣಭಾಗದಲ್ಲಿ ಬಂಗಾಪ ರಾಶಿಗಳುಳ್ಳ ದೇಶಗಳಿರುವವು. ನಿಮಗೆ ಕಬ್ಬಿಣದ ಬೆಲೆಯಿದ್ದಷ್ಟು ಅವರಿಗೆ ಬಂಗಾರದ ಬೆಲೆಯಿರುವದು, ” ತದೇಶೀಯ ಸರದಾರನ ಈ ಭಾಷಣವು ಬಳ್ಳೋಳನಿಗೆ ಮೊಟ್ಟ ಮೊದಲು ಅತಿಶಯೋಕ್ತಿಯುಳ್ಳದ್ದಾಗಿ ತೋರಿತು. ಆದರೆ, ಕಬ್ಬಿಣದ ಬೆಲೆಯಿಂದ ಬಂಗಾರವು ಮಾರುತ್ತಿರುವ ಪ್ರದೇಶವು ಇದ್ದದ್ದಾಗಿದ್ದರೆ, ಅದರ ಶೋಧವನ್ನು ಹಚ್ಚಬೇಕೆಂಬ ಮನೀಷೆಯು ಸ್ಪಾನಿಶ ಜನರ ಮನಸ್ಸಿನಲ್ಲಿ ಸ್ವಾಭಾವಿಕವಾಗಿಯೆ ಹುಟ್ಟಿತು. ೧೫೨೨ನೇ ಇಸ್ವಿಯಲ್ಲಿ ಸ್ಪಾನಿಶ ಅಧಿಕಾರಿಗಳು ಪಾಸೂ ಆ೭-ಡೀ-ಆ೦ದಾಗೋಯಾ ಎಂಬವನ ಸಂಗಡ ಕೆಲವು ಹಡಗಗಳನ್ನೂ ಕೆಲವು ಜನರನ್ನೂ ಕೊಟ್ಟು ಪಾಸಿಫಿಕ ಮಹಾಸಾಗರದ ದಕ್ಷಿಣ ದಂಡೆಯ ಶೋಧಹಚ್ಚ ವದಕ್ಕೆ ಅವನನ್ನು ಕಳಿಸಿಕೊಟ್ಟರು. ಆದರೆ ಅಂದಾಗೋಯಾನ ಪರ್ಯಟನದಿಂದ ವಿಶೇಷವಾದ ಕಾರ್ಯ ನಿಷ್ಪತ್ತಿಯಾಗಲಿಲ್ಲ. ಯಾಕಂದರೆ, ಸಮುದ್ರದ ಮೇಲಿನ ಭಯಂಕರನಾದ ಬಿರುಗಾಳಿಯಿಂದಲೂ ದಂಡೆಯ ಮೇಲಿನ ರೋಗೋತ್ಪಾದಕ ಹವೆಯಿಂದಲೂ ಅಂದಾಗೋಯಾನು ಜರ್ಜರಿತನಾದ್ದರಿಂದ ಅವನು ಹತಾಶನಾಗಿ ಬರಿಗೈ ಬೀಸಾಡುತ್ತ ಪಾನಾಮಕ್ಕೆ ಮರಳಿ ಒ೦ದನು.

ಫ್ರಾನ್ಸಿಸ್ಕೋ ಪಿಝಾರೋ

ಅಂದಾಗೋಯಾನು ಅಪಯಶವನ್ನು ಹೊಂದಿ ಮರಳಿ ಬಂದರೂ ಪೇರೂದಂಥ ಸುವರ್ಣಭೂಮಿಯ ಶೋಧಹಚ್ಚುವ ಕೆಲಸದಿಂದ ಪಾಙ್ಮುಖವಾಗುವಂಥ ಹೇಡಿಗಳು ಸ್ಪಾನಿಆರ್ಡರು ಆಗಿದ್ದಿಲ್ಲ. ಪಾಸಿಫಿಕ ಮಹಾಸಾಗರದಲ್ಲಿ ಪರ್ಯಟನವನ್ನು ಮಾಡುವದಕ್ಕಾಗಿ ಮತ್ತೊಂದು ಹಡಗವನ್ನು ಕಳಿಸತಕ್ಕದ್ದೆಂದು ಸ. ೧೫೨೪ರಲ್ಲಿ ಗೊತ್ತು ಮಾಡಲ್ಪಟ್ಟಿತು. ಶೂರನೂ, ಸಾಹಸಿಯ, ದೃಢನಿಶ್ಚಯೂ, ಸಂಕಟಕ್ಕೆ ಅಭಿಮುಖವಾಗಿ ನಿಲ್ಲುವವನೂ ಎಂದು ಪ್ರಸಿದ್ಧಿಯನ್ನು ಹೊಂದಿದ್ದ ಪಿಝಾರೋ ಎಂಬ ಸರದಾರನು ಈ ಹಡಗದ ಕ್ಯಾಪ್ಟನನಾಗಿ ನೇಮಿಸಲ್ಪಟ್ಟನು. ಒತ್ತಾರೆನು ಈ ಕಾಲಕ್ಕೆ ೫೨-೫೩ ವರ್ಷ ವಯಸ್ಸುಳ್ಳವನಾಗಿದ್ದರೂ ೩೦-೩೫ ವರ್ಷದ ತಾರುಣ್ಯದ ಭರದಲ್ಲಿರುವ ವೀರಪುರುಷನ ಉತ್ಸಾಹವು ಅವನಲ್ಲಿ ತುಂಬಿತುಳುಕುತ್ತಿತ್ತು. ಪಿಝಾರೋನು ತನ್ನ ತಂದೆ ತಾಯಿಗಳ ಔರ ಸಪುತ್ರನಾಗಿರದೆ, ಕಾನೀನ ಪುತ್ರನಾಗಿದ್ದನು. ಚಿಕ್ಕಂದಿನಲ್ಲಿ ಅವನಿಗೆ ಶಿಕ್ಷಣದ ಗಂಧವಾದರೂ ಇದ್ದಿದಿಲ್ಲ. ತಂದೆತಾಯಿಗಳಿಂದ ತ್ಯಜಿಸಲ್ಪಟ್ಟಂಥ ಅನಾಥ ಬಾಲಕರ ಸಲುವಾಗಿ ಸ್ಥಾಪಿಸಲ್ಪಟ್ಟದ್ದೊಂದು ಆಶ್ರಮದಲ್ಲಿ ಅವನು ದೊಡ್ಡವನಾಗಿದ್ದನು. ಅವನು ಹತ್ತು ಹದಿನೈದು ವರ್ಷದವನಾದಂದಿನಿಂದ ಎಷ್ಟೋ ವರ್ಷಗಳ ವರೆಗೆ ಕುರಿಗಳನ್ನು ಕಾಯುವ ಕೆಲಸವನ್ನು ಮಾಡುತ್ತಿದ್ದನು. ಮುಂದೆ, ಅಮೇರಿಕಾ ಖಂಡದೊಳಗಿನ ಹೊಸ ಹೊಸ ಪ್ರದೇಶಗಳ ವರ್ಣನೆಗಳು ಸ್ಪೇನದಲ್ಲಿ ಹಬ್ಬಿಕೊಳ್ಳಹತ್ತಿದವು ಧೈರ್ಯವಂತರಿಗೂ ಸಾಹಸಗಾರರಿಗೂ ದ್ರವ್ಯ ಸಂಚಯವನ್ನು ಮಾಡುವದಕ್ಕೆ ಅಮೇರಿಕೆಯಲ್ಲಿರುವಂಥ ಸುಸಂಧಿಯು ಅನ್ಯತ್ರ ದೊರೆಯಲಾರದೆ೦ತಲೂ ಬಂಗಾರವೆಂದರೆ ಅಲ್ಲಿ ಕಃಪದಾರ್ಥವೆಂತಲೂ ಬಂಗಾರದ ರಾಶಿಗಳನ್ನು ಬೇಕಾದವರು ಎತ್ತಿಕೊಂಡು ಒಯ್ಯಬಹುದೆಂತಲೂ ಮುಂತಾದ ಸತ್ಯಾ ಸತ್ಯದ ಸುದ್ದಿಗಳು ಹೊಸ ಖಂಡದೊಳಗಿನ ಸಂಪತ್ತಿಯ ವಿಷಯವಾಗಿ ಹುಟ್ಟ ಹತ್ತಿದವು. ಪಿರಾರೋನ ಕಿವಿಗೆ ಈ ಸುದ್ದಿಗಳು ಬಿದ್ದ ಕೂಡಲೆ ಅವನು ಕುರಿಗಳನ್ನು ಕಾಯುವ ಕ್ಷುಲ್ಲಕ ಕಾರ್ಯವನ್ನು ಬಿಟ್ಟು ಕೊಟ್ಟು ತನ್ನ ವಯಸ್ಸಿನ ೨೫-೩೦ನೇ ವರ್ಷದ ಸುಮಾರಕ್ಕೆ ಸ್ಪೇನ ದೇಶಕ್ಕೆ ಶರಹೊಡೆದು ಅಮೇರಿಕೆಗೆ ಸಾಗಿದನು. ಪಾನಾಮಾ ಎಂಬ ಸ್ಪಾನಿಶ ವಸಹಾತಿಯಲ್ಲಿದ್ದ ಗವರ್ನರನ ಕೈಕೆಳಗೆ ಸೈನ್ಯದೊಳಗಿನ ಸಿಪಾಯಿಯ ಕೆಲಸವನ್ನು ಮಾಡಿ ಒಳ್ಳೆ ಹೆಸರು ಪಡೆದನು. ಮುಂದೆ ೧೫೨೪ನೇ ವರ್ಷದಲ್ಲಿ ಪೇರೂ ದೇಶದ ಪರ್ಯಟನೆಗೆ ಹೊರಟ ಹಡಗದ ಮೇಲೆ ಇವನೊಬ್ಬ ಅಧಿಕಾರಿಯಾಗಿ ನಿಯುಕ್ತನಾದನು. ಈ ಹಡಗದ ಮೇಲೆ ಅಲ್ಮಾಗ್ರೋ ಹಾಗೂ ಲ್ಯೂಕ ಎಂಬಿಬ್ಬರು ಬೇರೆ ಅಧಿಕಾರಿಗಳಾದರೂ ಇದ್ದರು. ಎರಡು ಹಡಗಗಳನ್ನೂ ಹಾಗೂ ಹೀಗೂ ಮಾಡಿ ನೂರು ನಾವಿಕರನ್ನೂ ಕೂಡಿಹಾಕಿ ಪಿಝಾರೋನು ಸೇರ ದೇಶದ ಶೋಧಾರ್ಥವಾಗಿ ಪ್ರಯಾಣ ಮಾಡಿದನು. ಈ ಮೊದಲನೆಯ ಪರ್ಯಟನದಲ್ಲಿ ಏರುನ ಮಜಲು ಪೇರೂ ದೇಶದ ಸೀಮೆಯನ್ನು ಕೂಡ ಮುಟ್ಟಲಿಲ್ಲ. ಪೇರೂ ದೇಶದ ಸೀಮೆಯು ಹತ್ತುವದರಕಿಂತ ಮುಂಚಿತವಾಗಿ, ಪನಾಮಾ ಸಂಯೋಗಭೂಮಿಯ ದಕ್ಷಿಣದಿಕ್ಕಿನಲ್ಲಿ, ನೂರಾರು ಮೈಲುಗಳ ವರೆಗಿನ ಸಾಸಿಫಿಕ ಮಹಾಸಾಗರದ ದಂಡೆಯು ಅರಣ್ಯಗಳಿಂದಲೂ, ಜವಳು ಪ್ರದೇಶದಿಂದ ವ್ಯಾಪ್ತವಾಗಿದೆ. ಈ ಪ್ರದೇಶದೊಳಗಿನ ಜನರಾದರೂ ತೀರ ಕಾಡು ಸ್ಥಿತಿಯಲ್ಲಿರುತ್ತಾರೆ. ಹಾಗೂ ಈ ದಂಡೆಯ ಹತ್ತರದಲ್ಲಿರುವ ಸಮುದ್ರದೊಳಗಿನ ಚಿಕ್ಕ ಚಿಕ್ಕ ನಡುಗಡ್ಡೆಗಳೊಳಗಿನ ಹವೆಯಾದರೂ ದಂಡೆಯ ಮೇಲಿನ ಹವೆಯಂತೆ ರೋಗೋತ್ಪಾದಕವಾಗಿರುವದಲ್ಲದೆ ವಿಷಮಯವಾಗಿದೆ. ಪಿಝಾರೋನು ಈ ದಂಡೆಯ ಹತ್ತರ ತನ್ನ ಹಡಗವನ್ನು ನಿಲ್ಲಿಸಿ, ಕೈ ಕೆಳಗಿನ ಕೆಲವು ಜನರನ್ನು ತನ್ನ ಜೊತೆಯಲ್ಲಿ ತೆಗೆದುಕೊಂಡು, ಮನುಷ್ಯರ ವಸ್ತಿಯು ಎಲ್ಲಿಯಾದರೂ ಇರುವದೇನೆಂಬದರ ಶೋಧವನ್ನು ಮಾಡಹತ್ತಿದನು; ಆದರೆ ಆ ಪ್ರಾಂತದೊಳಗಿನ ಜನರು ಕಾಡು ಹಾಗೂ ಅಡ್ಡಾಡಿಗಳಾಗಿರುವದಲ್ಲದೆ ನರಮಾಂಸ ಭಕ್ಷಕರಾಗಿರುವರೆಂದು ಅವನು ಕಂಡುಕೊಂಡನು. ಈ ಪ್ರಾಂತದೊಳಗಿನ ರೋಗೋತ್ಪಾದಕ ಹಾಗೂ ಏಷಮಯವಾದ ಹವೆಯಿಂದ, ಅವನ ಸಂಗಡಿಗರು ತೀರ ಹಣ್ಣಿಗೆ ಬಂದು, ಪೇರ ದೇಶದ ಶೋಧದ ಉಸಾಬರಿಯನ್ನು ಬಿಟ್ಟು ಕೊಟ್ಟು ಬಂದ ಹಾದಿಯಿಂದ ಮರಳಿ ಪಾನಾಮಕ್ಕೆ ಹೋಗಬೇಕೆಂದು ಪ್ರತಿಯೊಬ್ಬನೂ ಹಟ ಹಿಡಿಯಹತ್ತಿದನು. ಯಾವ ಕಾರ್ಯವನ್ನು ಸಾಧ್ಯ ಮಾಡಿಕೊಳ್ಳದೆ ಹಿಂದಿರುಗಿ ಹೋಗಿ ಎಲ್ಲರ ಛೀ ಥೂಗಳಿಗೆ ಗುರಿಯಾಗುವದಕ್ಕಿಂತ ಕ್ಷುಧೆ ತೃಷೆಗಳಿಂದ ಸಮುದ್ರದಲ್ಲಿ ಸಾಯುವದು ಲೇಸಾದದ್ದೆಂದು ಪಿಝಾರೋನ ಸಂಕಲ್ಪವಾಗಿದ್ದರಿಂದ, ಮರಳಿ ಹೋಗುವದಕ್ಕೆ ಒಪ್ಪಿಕೊಳ್ಳದೆ ಅವನು ಎಷ್ಟೋ ತಿಂಗಳಗಳ ವರೆಗೆ ಒಂದು ನಡುಗಡ್ಡೆಯಲ್ಲಿ ತಳವನ್ನೂರಿಕೊಂಡು ನಿಂತನು. ತನ್ನ ಸಂಗಡಿಗರಲ್ಲಿ ತೀರ ಅಸಂತುಷ್ಟರಾಗಿದ್ದ ಕೆಲವರನ್ನು ಅವನು ಪನಾಮಾಕ್ಕೆ ಹೋಗದೊಟ್ಟನು. ಗಟ್ಟಿಯಾದದ್ದೊಂದು ಹೊಸ ಹಡಗವನ್ನೂ ಕೆಲವು ನಾವಿಕರನ್ನೂ ತನ್ನ ಸಹಾಯಕ್ಕಾಗಿ ಕಳಿಸಿಕೊಡುವದಕ್ಕೆ ತನ್ನ ಸಹಾಣ್ಮಕನಾದ ಆಲ್ಮಾಗೊನಿಗೆ ಅವನು ವಿನಂತಿಯನ್ನು ಮಾಡಿಕೊಂಡನು. ಈ ನಡುಗಡ್ಡೆಯಲ್ಲಿ ಏರುತಾರೋನು ಆರು ತಿಂಗಳ ವರೆಗೆ ಇದ್ದನು. ಅವನ ಹತ್ತಿರದಲ್ಲಿದ್ದ ಜನರೆಲ್ಲರೂ ತೀರ ಜರ್ಜರಿತರಾಗಿದ್ದರು. ಆಲ್ಮಾಗ್ರೋನು ಸಹಾಯ್ಯಕನಾಗಿ ಬಂದಾಗ ಪಿಝಾರೋನ ಅನುಯಾಯಿಗಳಲ್ಲಿ ಎಷ್ಟೋ ಜನರು ಮರಳಿ ಹೋಗಲು ಉದ್ಯುಕ್ತರಾದರು. ಯಾಕಂದರೆ, ಪಿಝಾರೋನ ಬೆನ್ನು ಹತ್ತಿ ನಿಷ್ಕಾರಣವಾಗಿ ಕಷ್ಟ ಪಡುವ, ಕಾಡಜನರ ಕೂಡ ನಿರರ್ಥಕವಾಗಿ ಹೋರಾಡುವ, ಹಾಗೂ ಕೊನೆಯಲ್ಲಿ ಯಾವದಾದರೊಂದು ಭಯಾನಕವಾದ ನಿರ್ಜನ ನಡುಗಡ್ಡೆಯಲ್ಲಾಗಲಿ, ಸಮುದ್ರ ದಂಡೆಯ ಮೇಲಿನ ಘೋರವಾದ ಅರಣ್ಯದಲ್ಲಾಗಲಿ, ಚಳಿಜ್ವರಕ್ಕೆ ಬಲಿಯಾಗಿ ಜೀವಕ್ಕೆ ಎರವಾಗುವ ಮಾರ್ಗವು ಯಾರಿಗೂ ಮಾನ್ಯವಾಗಿದ್ದಿಲ್ಲ. ಆದರೆ, ಪಿಝಾರೋನು ದೃಢನಿಶ್ಚಯಿಯೂ, ಹಟವಾದಿಯ ಆದ್ದರಿಂದ ಮರಳಿ ಹೋಗುವದಕ್ಕೆ ಅವನು ಒಪ್ಪಿಕೊಳ್ಳಲಿಲ್ಲ. ಅವನು ತಳವೂರಿಕೊಂಡು ನಿಂತಿದ್ದ ಪ್ರದೇಶದೊಳಗಿನ ಕಾಡು ಇಂಡಿಯನ್ ಜನರಿಂದ, ದಕ್ಷಿಣದಿಕ್ಕಿಗೆ ದೂರ ಅಂತರದಲ್ಲಿ ಬಲಾಢವಾದದ್ದೊಂದು ಸಮೃದ್ಧಿ ಮಯವಾದ ರಾಜ್ಯ ವಿರುವದೆಂದು ಕೇಳಿಕೊಂಡಿದ್ದನು. ಸುಮಾರು ಸಾವಿರ ಮೈಲಗಳ ಅಂತರದ ಮೇಲಿರುವ ಈ ರಾಜ್ಯದ ಶೋಧವಾಗಿ ಅಲ್ಲಿಯ ಸಂಪತ್ತಿಯು ತನ್ನ ಹಸ್ತಗತವಾಗುವ ವರೆಗೆ ತನ್ನ ಪರ್ಯಟನದ ಸಾರ್ಥಕವಾದಂತಾಗುವದಿಲ್ಲೆಂದು ಸಿರುತ್ತಾರೋನು ತಿಳಿದಿದ್ದನು. ಅವನು ತನ್ನ ಕೈಯ್ಯಲ್ಲಿದ್ದ ಖಡ್ಗದಿಂದ ಭೂಮಿಯ ಮೇಲೆ ಒಂದು ಗೆರೆಯನ್ನು ಕೊರೆದು, ಈ ಗೆರೆಯ ಉತ್ತರ ದಿಕ್ಕಿನಲ್ಲಿ ಸುಖವೂ, ಸನಾಧನವೂ, ಸ್ವಾಸ್ಥ್ಯವೂ ಆದರೆ ಸರ್ವಸಾಧಾರಣವಾದ ಬಡತನವಿರುವವೆಂತಲ ದಕ್ಷಿಣ ದಿಕ್ಕಿನಲ್ಲಿ ದುಃಖವೂ, ಕಷ್ಟವೂ, ಭೀತಿಯೂ ಇದ್ದಾಗ್ಯೂ ಕೆಲವು ಕಾಲವನ್ನು ಸಂಕಟಗಳಲ್ಲಿ ಕಳೆದರೆ, ಪೇರೂ ದೇಶದೊಳಗಿನ ಆಪರಂಪಾರವಾದ ಸಂಪತ್ತಿಯು ತಮ್ಮ ಕೈವಶವಾಗುವದಲ್ಲದೆ, ಕದಾಚಿತ್ ತಮಗೆ ಶಕ್ಯವಾಗಬಹುದೆಂತಲೂ ವರ್ಣಿಸಿ, ಅಲ್ಲಿ ರಾಜ್ಯವನ್ನು ಕೂಡ ಸ್ಥಾಪಿಸುವದು ತಾನಂತೂ ತನ್ನ ಜೀವದಲ್ಲಿ ಜೀವವಿರುವವರೆಗೆ ಪೇರೂ ದೇಶವನ್ನು ಗೊತ್ತು ಹಚ್ಚದ ಹೊರತು ಒಂದು ಹೆಜ್ಜೆಯನ್ನಾದರೂ ಹಿಂದೆ ಇಡಲಿಕ್ಕಿಲೆಂದು ಹೇಳಿ, ಆ ಗೆರೆಯ ದಕ್ಷಿಣ ದಿಕ್ಕಿಗೆ ಹಾರಿ, ಹುಟ್ಟಿ, ಗಂಡಸರಾದವರು ತನ್ನ ಮಾರ್ಗವನ್ನು ಅವಲಂಬಿಸುವರು, ಕೈಯಲ್ಲಿ ಬಳೆಗಳನ್ನಿಕ್ಕಿದವರು ಉತ್ತರ ದಿಕ್ಕಿಗೆ ಹೋಗಿ ಕೋಳಿಗಳಂತೆ ಗೂಡು ಸೇರುವರೆಂದು ಪಿರಾರೋನು ಗಟ್ಟಿಸಿ ಒದರಿದ ಕೂಡಲೆ, ಅವನ ಅನುಯಾಯಿಗಳೊಳಗಿನ ದಷ್ಟಪುಷ್ಟರೂ ತರುಣರೂ ಆಗಿದ್ದ ನಾವಿಕರು ಅವನನ್ನು ಹಿಂಬಾಲಿಸಿದರು. ನಿನ್ನ ಉಸಾ ಬರಿಯು ಬೇಡೆಂದು ನೆಲಹಿಡಿದು ಕೂತ ೫೦-೬೦ ನಾವಿಕರಲ್ಲಿ ಕೆಲವರಿಗೆ ಅಲ್ಲಿಯೇ ಒಂದು ನಡುಗಡ್ಡೆಯಲ್ಲಿ ಇರಹೇಳಿ ಉಳಿದವರನ್ನು ನಾನಾಮಾಕ್ಕೆ ಅಟ್ಟಿ ಕೊಟ್ಟನು. ಗೊರ್ಗೊನಾ ನಡುಗಡ್ಡೆಯಲ್ಲಿ, ತನ್ನ ಮುಂದಿನ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ಸಿರುಾರೋನು ತನ್ನ ಹಡಗವನ್ನು ದಕ್ಷಿಣ ದಿಶಾಭಿಮುಖವಾಗಿ ಸಾಗಿಸಿದನು. ಈ ಸಾರೆ ಬಿರುಗಾಳಿಯ ತೊಂದರೆಯಿಲ್ಲದರಿಂದ ಇಪ್ಪತ್ತನೇ ದಿವಸ ಈ ಹಡಗವು ಪೇರೂ ದೇಶದೊಳಗಿನ ಗ್ವಾಯಕೀಲ ಎಂಬ ಆಖಾತವನ್ನು ಸೇರಿತು. ಮುಂದೆ ಸ್ವಲ್ಪಾವಧಿಯಲ್ಲಿಯೇ ಏರುತಾರೋನ ಹಡಗವು ಟುಂಬೇರು ಎಂಬ ಬಂದರದಲ್ಲಿ ಬ ದು ನಿಂತಿತು. ಟುಂಬೇರುವು ಜನರಿ೦ದ ಒಳಿತಾಗಿ ತುಂಬಿದ ಪಟ್ಟಣವಾಗಿತ್ತು. ಅದರ ಸಾ೦ಪತ್ರಿಕಸ್ಥಿತಿಯಾದರೂ ಸಮಾಧಾನಕಾರಕವುಳ್ಳದ್ದಾಗಿತ್ತು. ಈ ಪಟ್ಟಣವನ್ನು ನೋಡಿದ ಕೂಡಲೆ ಪಿಝಾರೋನಿಗೆ ಅತ್ಯಂತ ಆನಂದವಾಗಿ, ಪೇರೂ ದೇಶದ ಸುವಲ್ಲ ಭೂಮಿಯಲ್ಲಿ ತನ್ನನ್ನು ತಂದದ್ದಕ್ಕಾಗಿ ಈಶ್ವರನ ಕೃಪೆಯನ್ನು ಕೊಂಡಾಡಿದನು. ಸ್ವಾನಿಆರ್ಡ ಜನರ ಹಡಗಗಳಂಥ ಹಡಗಗಳನ್ನು ಪೇರೂವಿನ ಜನರು ಮೊದಲು ಎಂದೂ ನೋಡಿದ್ದಿಲ್ಲ. ಸಿರುತ್ತಾರೋನ ಹಡಗವು ಬಂದರದಲ್ಲಿ ಬಂದ ಕಡಲೆ, ಬಾಲಾ' ಎಂಬ ಚಿಕ್ಕ ಚಿಕ್ಕ ಡೋಣಿಗಳಲ್ಲಿ ಕುಳಿತುಕೊಂಡು ಆ ಜನರು ಆ ದೊಡ್ಡ ಹಡಗದ ಸುತ್ತು ಗುಂಪಾದರು. ಟುಂಬೇರುದ ಸುತ್ತಲಿನ ಪ್ರಾಂತದ ಮೇಲೆ ಕುರಾಕಾ' ಎಂಬವನೊಬ್ಬ ಇಂಕಾರಾಜನ ಅಧಿಕಾರಿಯಿದ್ದನು, ಸ್ಪಾನಿಆರ್ಡರ ಹಡಗವನ್ನು ನೋಡಿ ಇದೊಂದು ನೀರಿನ ಮೇಲೆ ತೇಲುವ ಕಿಲ್ಲೆ ಯಂತಲೇ ಅವನಿಗೆ ಜ್ಞಾನವಾಗಿ, ಇ೦ಥ ದೊಡ್ಡದಾದ ತೇಲುವ ಕಿಲ್ಲೆಯನ್ನು ತೆಗೆದುಕೊಂಡು, ಈ ಆಮರ್ಯಾದಿತವಾದ ಮಹಾಸಾಗರ ದೊಳಗಿಂದ ನಮ್ಮ ದೇಶಕ್ಕೆ ಈ ಜನರು ಬಂದರೆಂದಮೇಲೆ, ಇವರು ನಿಸ್ಸಂಶಯವಾಗಿ ದೇವ, ಯಕ್ಷ, ಗಂಧರ್ವ, ಕಿನ್ನರರಂಥ ಉಚ್ಚಕೋಟಯವರಾಗಿರಬೇಕೆಂದು ಆವನು ತರ್ಕಿಸಿ, ಅನೇಕ ಪ್ರಕಾರದ ಹಣ್ಣು ಹಂಪಲುಗಳ ಬುಟ್ಟಿಗಳನ್ನು ಕಾಣಿಕೆಗಾಗಿ ಡೋಣಿಯಲ್ಲಿ ತುಂಬಿಕೊಂಡು, ಸ್ಪ್ಯಾನಿಕ ಹಡಗದಲ್ಲಿದ್ದ ಪಿರುತಾರೋನ ದರ್ಶನಕ್ಕೆ ಹೋದನು. ಲಾಮಾ ಎಂಬ ಹೆಸರಿನ ದೊಡ್ಡ ಜಾತಿಯ ಟಗರುಗಳು ಆ ದೇಶದಲ್ಲಿ ದೊರೆಯುತ್ತವೆ. ಈ ಜಾತಿಯದೊಂದು ಟಗರನ್ನಾದರೂ ಅವನು ಒರು ಕಾಲೋನಿಗೆ ಕಾಣಿಕೆಯಾಗಿ ಕೊಟ್ಟನು. ಸಿರುಾರೋನು ತದೇಶೀಯರಲ್ಲಿ ಒಬ್ಬಿಬ್ಬರನ್ನು ಹಿಡಿದು ತನ್ನ ಸಂಗಡ ತಂದಿದ್ದನು, ಪಿರಾರೋನು ಹಿಂದಕ್ಕೊಮ್ಮೆ ನಿರುಪಾಯವುಳ್ಳವನಾಗಿ ಆರು ಏಳು ತಿಂಗಳಗಳವರೆಗೆ ಒಂದು ನಡುಗಡ್ಡೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಸಂಗತಿಯು ವಾಚಕರಿಗೆ ಗೊತ್ತೇ ಉಂಟು. ಆ ನಡುಗಡ್ಡೆಯ ಸುತ್ತಲಿನ ಪ್ರದೇಶದಲ್ಲಿ ವಾಸಮಾಡಿಕೊಂಡಿದ್ದ ಇಂಡಿಯನ ಕುಲಕ್ಕೆ ಈ ಉಭಯರೂ ಸೇರಿದವರಾಗಿದ್ದರು. ಇವರಲ್ಲಿ ಒಬ್ಬನಿಗೆ ಸೇರದೊಳಗಿನ ಇಂಕಾ ಕ್ಷತ್ರಿಯರ ಭಾಷೆಯು ತಿಳಿಯುತ್ತಿತ್ತು. ಈ ದ್ವಿಭಾಷಿಯ ದ್ವಾರದಿಂದ ಪಿರು ಸಾರೋ ಹಾಗೂ ಹೇಗೂ ಜನರ ಅಧಿಕಾರಿಯಾದ ಕುರಕಾ ಇವರ ಸಂಭಾಷಣಕ್ಕೆ ಪ್ರಾರಂಭವಾಯಿತು, ಕುರಾಕಾ ಸಿರುತ್ತಾರೋನಿಗೆ "ನೀವು ಯಾರು, ಎಲ್ಲಿಯವರು, ಯಾವ ಕಾರ್ಯಾರ್ಥ ಇಲ್ಲಿಗೆ ಬಂದಿರುವಿರಿ ” ಮುಂತಾದ ಪ್ರಶ್ನೆಗಳನ್ನು ಕೇಳಿದನು. ನಾವು ಇಲ್ಲಿಂದ ಬಹಳ ದೂರದಲ್ಲಿರುವ ಸ್ಪೇನ ದೇಶದ ನಿವಾಸಿಗಳಾಗಿದ್ದು, ನಿಮ್ಮ ದೇಶದ ಜನರ ಪರಿಚಯವನ್ನು ಮಾಡಿಕೊಳ್ಳುವದಕ್ಕಾಗಿಯೂ ನಿಮ್ಮ ಕೂಡ ಸ್ನೇಹಸಂಬಂಧವನ್ನು ಬೆಳೆಸುವದಕ್ಕಾಗಿಯ ಇಷ್ಟು ಕಷ್ಟಾಪೇಷ್ಟೆಗಳನ್ನು ಸಹಿಸಿ ಇಲ್ಲಿಗೆ ಬಂದಿರುವನೆ?೦ದು ಏರುತಾರೋನು ಅವನಿಗೆ ತಿಳಿಸಿದನು, ಹೊಸದಾಗಿ ಬಂದಿರುವ ಈ ದೂರದೇಶದ ಅತಿಥಿಗಳು ಬಹಳೇ ಸಂಭಾವಿತರಾಗಿರುವರೆಂದು ಪಾಪ, ಆ ಬಡ ಭೋಳಿ ಕುರಾಕಾನ ತಿಳುವಳಿಕೆಯಾಯಿತು. ಇದೇ ಕಾಲಕ್ಕೆ ಇಂಕಾ ಕ್ಷಾತ್ರ ಕುಲಕ್ಕೆ ಹೊಂದಿದ ಒಬ್ಬ ಸರದಾರನಾದರೂ ಸಹಜವಾಗಿ ಟುಂಬೇರುಪಟ್ಟಣಕ್ಕೆ ಬಂದಿದ್ದನು. ಇವನಾದರೂ ತಿರುವಾನ ಭೆಟ್ಟಿಗೆ ಹೋದನು. ಆಗ್ಗೆ ಪಿರಾರೋನು ಸ್ವಲ್ಪ ಸ್ಪಷ್ಟವಾಗಿಯೇ ಮಾತಾಡಿ ಇವನಿಗೆ ತಿಳಿಸಿದ್ದೇನಂದರೆ, “ ನಿಮ್ಮ ದೇಶದ ಮೇಲೆ ನಮ್ಮ ದೇಶದ ವರ್ಚಸ್ವವನ್ನು ಸ್ಥಾಪಿಸುವದಕ್ಕಾಗಿಯೂ, ನಿಮ್ಮ ಧರ್ಮದ ಮೇಲೆ ನಮ್ಮ ಧರ್ಮದ ವರ್ಚಸ್ವವನ್ನು ಸ್ಥಾಪಿಸುವದಕ್ಕಾಗಿ ನಾವು ಇಷ್ಟು ದೂರ ಬಂದಿರುತ್ತೇವೆ." ಪಿಝಾರೋನ ಈ ಭಾಷಣವನ್ನು ಕೇಳಿ ಈ ಇಂಕನಿಗೆ ಆಶ್ಚರ್ಯವೆನಿಸಿತು ಯಾಕೆಂದರೆ, ನೆರುವಾರನ ಸಂಗಡ ನೂರು ನೂರಾಐವತ್ತು ಜನರೇ ಇದ್ದರು ಅಂದ ಮೇಲೆ ಇಂಕಾನ ಮೇಲೆ ವರ್ಚಸ್ವವನ್ನು ಕೂಡಿಸುವಪಿಝಾರೋನ ಮನೀಷೆಯು ಕೇವಲ ಮೂರ್ಖತನದ್ದೆಂದು ಆ ಇಂಕಾನಿಗೆ ತೋರಿತು. ಮೇಲಾಗಿ ಇಂಕಾ ಜನರು ಸೂರ್ಯೋಪಾಸಕರಾಗಿದ್ದು ಸೂರ್ಯನಿಗಿಂತ ಹೆಚ್ಚಿನ ದೇವರಿದುವದು ಶಕ್ಯವಿಲ್ಲ; ಆ೦ದಮೇಲೆ ಇ೦ಕಾನ ಪ್ರಜದ ಮೇಲೆ ಈ ಹೊಸ ಧರ್ಮದ ವರ್ಚಸ್ವವು ಕೂಡುವದು ಆಶಕ್ಯವಾದದ್ದೆಂದು ಅವನು ಯೋಚಿಸಿದನು. ಆದರೆ, ಇವನು ಕಿರುತಾರೋನಿಗೆ ಯಾವ ಮಾತನ್ನೂ ಸ್ಪಷ್ಟವಾಗಿ ಮಾತಾಡಿ ತೋರಿಸಲಿಲ್ಲ. ಹಡಗದ ಮೇಲೆ ಬಂದಿದ್ದ ಈ ಜಿಂಕಾನಿಗೆ ಸಿರುತ್ತಾರೆಯೇನು ಆತಿಥ್ಯವನ್ನು ಮಾಡಿದನು. ಪಿಝಾರೋನಿಂದ ಕೊಡಲ್ಪಟ್ಟ ಯುರೋಪಿಯನ್ ಮಾದರಿಯ ಮದ್ಯವು ತನಗೆ ವಿಶೇಷವಾಗಿ ರುಚಿಸಿತೆಂದು ಇ೦ಕಾನು ಹೇಳಿದನು. ಇಂಕನು ಬಂದರದ ಮೇಲಿಂದ ಮರಳಿ ಹೋಗುವಾಗ ಕಿರುತಾರೋನು ಅವನಿಗೊಂದು ಉಕ್ಕಿನ ಕೊಡಲಿಯನ್ನು ಕಾಣಿಕೆಯಾಗಿ ಕೊಟ್ಟನು. ಇಂಕಾ ಜನರ ದೇಶದಲ್ಲಿ ಬಂಗಾರವು ಅಪರಂಪಾರವಾಗಿತ್ತು. ಆದರೆ ಅವರಿಗೆ ಕಬ್ಬಿಣವೆಂದರೇನೆಂಬದು ಕೂಡ ಗೊತ್ತಿದ್ದಿದ್ದಿಲ್ಲ. ಟುಂಬೇರು ಪಟ್ಟಣದ ಪರಿಸ್ಥಿತಿಯನ್ನು ಅವಲೋಕಿಸುವದಕ್ಕೆ ಪಿಝಾರೋನು ತನ್ನ ಸಂಗಡಿಗರಾದ ಮಾಲಿನೊ ಎಂಬವನಿಗೆ ಹೇಳಿ ಅವನನ್ನು ಆ ಪಟ್ಟಣಕ್ಕೆ ಕಳುಹಿಕೊಟ್ಟನು ಮಾಲಿನೋನು ಇಡಿಯ ಊರುತುಂಬ ತಿರುಗಾಡಿ, ಊರೊಳಗಿನ ದೇವಾಲಯಗಳನ್ನೂ ಕುರಾಕಾ ಆಧಿಕಾರಿಯು ಇರುತ್ತಿದ್ದ ಬಂಗಲೆಯನ್ನೂ ನೋಡಿದನು; ಹಾಗೂ ಇಂಕಾನು ಇಳಿದು ಕೊಂಡಿದ್ದ ತೊಟಪ ಕೂಡ ಅವನು ಪ್ರವೇಶಿಸಿದನು. ಕುರಾಕಾನಂಥ ಸಣ್ಣ ಅಧಿಕಾರಿಯ ಮನೆಯೊಳಗಿನ ತಿನ್ನುಣ್ಣುವ ಹಾಗೂ ನೀರು ಕುಡಿಯುವ ಪಾತ್ರೆಗಳೆಲ್ಲ ಬೆಳ್ಳಿ-ಬಂಗಾರಗಳಿಂದ ಮಾಡಲ್ಪಟ್ಟಿದ್ದವು, ದೇವಾಲಯಗಳಲ್ಲಿ ನೋಡಿದ ಬಂಗಾರದ ಹೊರತು ಅವನಿಗೆ ಏನೂ ಕಾಣಲೇ ಇಲ್ಲ. ಇಂಕಾನ ತೋಟವಂತೂ ಕೇಳುವದೇನು? ಅಲ್ಲಿ ನಿಜವಾದ ಹಣ್ಣು ಹಂಪಲಗಳ ನೆರೆಯಲ್ಲಿ ಬೆಳ್ಳಿ ಬಂಗಾರದ ಕೃತ್ರಿಮ ಫಲಗಳು ತೂಗಾಡುತ್ತಿದ್ದವು. ಮಾಲಿನೋನು ಮರಳಿ ಬಂದು, ತಾನು ನೋಡಿದ ಸಂಗತಿಗಳನ್ನೆಲ್ಲ ಹಡಗದ ಮೇಲಿದ್ದ ಪಿಝಾರೋನಿಗೆ ವಿದಿತ ಮಾಡಿದನು. ತಾನು ಮಾಡಿದ ಅನುಮಾನದಕಿಂತ ಸ್ವಲ್ಪ ಹೆಚ್ಚು ಬೆಳ್ಳಿ ಬಂಗಾರವು ಮಾಲಿನೋನ ದೃಷ್ಟಿಗೆ ಬಿದ್ದಿರುವದರಿಂದ ಅವನ ಕಣ್ಣು ತಿರುಗಿ ನೋಡಿದ ಸಂಗತಿಗಳ ವರ್ಣನೆಯನ್ನು ಅವನು ಆತಿಶಯೋಕ್ತಿಯಿಂದ ಮಾಡುತ್ತಿರಬಹುದೆಂದು ಪಿಝಾರೋನಿಗೆ ಸಂಶಯ ಹುಟ್ಟಿ, ಅವನು ತನ್ನ ಸಂಗಡದಲ್ಲಿದ್ದ ಬೇರೊಬ್ಬ ಶಾಂತಲೆಯ ಗೃಹಸ್ಥನಿಗೆ ಪಟ್ಟಣದಲ್ಲಿ ಸಂಚರಿಸಿ ಬರುವದಕ್ಕೆ ಹೇಳಿದನು. ಈ ಗೃಹಸ್ಥನಾದರೂ, ಮೊದಲನೆಯವನಂತೆ, ನೋಡಿದ ಸಂಗತಿಗಳ ವರ್ಣನೆಯನ್ನು ವಿಲಕ್ಷಣವಾಗಿ ಮಾಡಹತ್ತಿದನು. ದೇವಾಲಯದ ಚತ್ತಂತೂ ಬಂಗಾರದ ದಪ್ಪಾದ ತಗಡುಗಳಿಂದ ಆಚ್ಛಾದಿತ ಮಾಡಲ್ಪಟ್ಟದೆಂದು ಅವನು ಹೇಳಹತ್ತಿದನು. ಆಗಂತ ತಾವು ನಿಜವಾದ ರಾವಣನ ಲ೦ಕಿಗೆ ಬಂದಿವೆವೆಂದು ಸಿರುಾರೋನಿಗೆ ಎನಿಸಹತ್ತಿತು. ಟು೦ಬೇಝದಲ್ಲಿಯ ಇಂಕನಿಗೂ ಇತರ ಜನರಿಗೂ 'ಬಂದೂಕ ' ಮೊದಲಾದ ಆಯುಧಗಳ ವಿಷಯವಾಗಿ ಏನೂ ಜ್ಞಾನವಿದ್ದಿಲ್ಲ. ಕುದುರೆಯನ್ನ೦ತೂ ಅವರು ಎಂದೂ ನೋಡಿದ್ದಿಲ್ಲ. ಏರುತಾರೋನ ಹಡಗದಲ್ಲಿ ಕೆಲವು ಕುದುರೆಗಳಿದ್ದವು. ಕುದುರೆಯ ಮೇಲೆ ಕುಳಿತುಕೊಂಡ ಮನುಷ್ಯನು ಭರದಿಂದ ಹೋಗುವದನ್ನು ನೋಡಿದಾಗಂತೂ ಕುದುರೆ ಹಾಗೂ ಕುದುರೆಯ ಸವಾರನು ಒತ್ತಟ್ಟಿಗೆ ಕೂಡಿದ ಇದೊಂದು ವಿಲಕ್ಷಣವಾದ ಪ್ರಾಣಿಯಂತಲೇ ಅವರ ತಿಳುವಳಿಕೆಯಾಯಿತು ! ಕುದುರೆ ಬೇರೆ, ಕುದುರೆಯ ಮೇಲಿನ ಸವಾರನು ಬೇರೆ ಎಂಬ ಕಲ್ಪನೆಯಾದರೂ ಅವರಿಗೆ ಆಗಲಿಲ್ಲ! ಬಂದೂಕಿನ ಮದ್ದೆಂದರೇನೆಂಬದು ಯಾರಿಗೆ ಗೊತ್ತಿಲ್ಲ, ಹಾಗೂ ಕುದುರೆಯ ಮೇಲೆ ಕೂಡುವ ಕಲೆಯು ಯಾರ ಸ್ವಪ್ನದಲ್ಲಿ ಕೂಡ ಇಲ್ಲ, ಇಂಥ ಪೇರುವಿನ ಜನರನ್ನು ಕ್ಷಣಾವಕಾಶದಲ್ಲಿ ಗೆಲ್ಲಬಹುದೆಂದು ಪಿಝಝಾರೋನ ಮನವರಿಕೆಯಾಗಿ, ಕಟ್ಟಿಗೆಯಂತೆ ಬಂಗಾರವು ಏಪುಲವಾಗಿದ್ದ ದೇಶವು ಸ್ವಲ್ಪ ಪ್ರಯಾಸದಿಂದ ತಮ್ಮ ಕೈವಶವಾಗುವದೆಂಬ ಕಲ್ಪನಾತರಂಗಗಳ ಆನಂದದಲ್ಲಿ ಅವನು ಕ್ಷಣಮಾತ್ರ ಈ ಸಾಡಹತ್ತಿ ದನು. ಆದರೆ, ಈ ಮೊದಲನೆಯ ಪರ್ಯಟನದಲ್ಲಿ ಅವನ ಹತ್ತರ ನೂರು ನೂರೈವತ್ತು ಜನರೇ ಇದ್ದರು, ಇಂಕಾನ ಸಾಮ್ರಾಜ್ಯವು ಎರಡುಸಾವಿರದ ಐನೂರು ಮೈಲುಗಳ ವರೆಗೆ ಉದ್ದವಾದ ಹಾಗೂ ಮೂರು ನೂರೈವತ್ತು ಮೈಲುಗಳ ವರೆಗೆ ಆಗಲವಾದ ವಿಸ್ತಿರ್ಣ ಪ್ರದೇಶದ ಮೇಲೆ ಹಚ್ಚಿದ್ದು ಅದರ ಜನಸಂಖ್ಯೆಯು ಕೋಟ್ಯಾಂತರವಾಗಿತ್ತು. ಬಂದೂಕುಗಳನ್ನು ಅವರು ಅರಿಯವವರಾಗಿದ್ದರೂ ಇಂಕನ ಹರ ಬಲಾಢ ಸೈನ್ಯವಿದ್ದು ಅವನ ಪಟ್ಟಣಗಳು ಕೋಟೆಯ ಗೋಡೆಗಳಿ೦ದ ಪರಿವೇಷ್ಟಿತವಾಗಿದ್ದೇವೆ. ಈ ಸಂಗತಿಯು ಪಿಝಾರೋನ ಲಕ್ಷ್ಯಕ್ಕೆ ಬಂದದರಿಂದ, ಯುದ್ಧವನ್ನು ಮಾಡಿ ದೇಶವನ್ನು ಗೆದೆಯುವ ತನ್ನ ಉದ್ದೇಶವು ಹೊರ ಬೀಳ ಕೂಡದೆಂಬ ವಿಚಾರಮಾಡಿ, ಅವನು ತನ್ನ ಕೈ ಕೆಳಿಗಿನ ಜನರ ಸುವರ್ಣತೃಷ್ಠೆಯನ್ನು ತತ್ಕಾಲದ ಮಟ್ಟಿಗೆದಬ್ಬಿಟ್ಟು, ಮುಂದೆ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಂಡು ಬಲಾಡ್ಯವಾದ ಸೈನ್ಯವನ್ನು ತನ್ನ ಸಂಗಡ ತೆಗೆದುಕೊಂಡು ಬಂದು, ಆ ಬಳಿಕ ಈ ಸುವರ್ಣ ಭೂಮಿಯಲ್ಲಿರುವ ಜನರ ಮೇಲೆ ತನ್ನ ವರ್ಚಸ್ವವನ್ನು ಪ್ರಸ್ಥಾಪಿತ ಮಾಡುವ ನಿಶ್ಚಯವನ್ನು ಮಾಡಿ, ಪಿಝಾರೋನು ಈ ಸಾರೆ ಹಿಂದಿರುಗಿದನು, ಮುರಳಿ ಹೋಗುವಾಗ ಆವನು ತನ್ನ ಸಂಗಡ ಆ ದೇಶದೊಳಗಿನ ಹಲಕಲವು ಬಂಗಾರದ ಬೇರೆ ಬೇರೆ ಮಾದರಿಯ ಪಾತ್ರೆಗಳನ ಲಾಮಾ ಜಾತಿಯ ಕೆಲವು ಕುರಿಗಳನ್ನೂ ತೆಗೆದುಕೊಂಡು ಹೋದನು

ಸನ್ ೧೫೨೮ರಿ೦ದ ೧೫೩ ರ ವರೆಗೆ ಪಿಝಾರೋನು ಸ್ಪೇನದಲ್ಲಿದ್ದನು. ಹೊಸದಾಗಿ ಶೋಧಿಸಿದ ದೇಶದ ವರ್ಣನೆಯನ, ಅಲ್ಲಿಯ ಅಪಾರವಾದ ಸಂಪತ್ತಿಯ ವೃತ್ತಾಂತವನ್ನೂ ಪಿಝಾರೋನು ಆ ಕಾಲದ ಸೈನದ ಅರಸನಾಗಿದ್ದ ಐದನೇ ಚಾರ್ಲ ಸನಿಗೆ ಹೇಳಿದನು. ಹರ್ನಾಂಡೊ ಕೊರ್ಟೆಸನು ಮೆಕ್ಸಿಕೊ ದೇಶವನ್ನು ಆ೦ಕಿತ ಮಾಡಿಕೊಂಡು, ಅದನ್ನು ಸ್ಪೇನದ ರಾಜ್ಯಕ್ಕೆ ಸೇರಿಸಿದಂತೆ, ತನಗಾದರೂ ಸರಕಾರದಿಂದ ಸ್ವಲ್ಪ ಸಹಾಯವುದೆರೆದರೆ, ಮೆಕ್ಸಿಕೊದಕಿಂತ ಹೆಚ್ಚು ಸಂಪನ್ನವಾದ ಹಾಗೂ ಹೆಚ್ಚು ವಿಸ್ತಿರ್ಣವಾದ ಪೇರೂ ದೇಶವನ್ನೂ ಇಂಕಾ ಎಂಬ ಸೂರ್ಯವಂಶೀ ಜನರ ಸಾಮ್ರಾಜ್ಯವನ್ನೂ ಸ್ಪೇನದ ರಾಜಮನೆತನದ ಚರಣಕ್ಕೆ ಅರ್ಪಿಸುವೆನೆಂಬ ಪ್ರತಿಜ್ಞೆಯನ್ನು ಅವನು ಅರಸನ ಮುಂದೆ ಮಾಡಿದನು, ಪಿಝಾರೋನ ಈ ಮಾತು ಕೇಳಿ ಯಾವದೇ ದೇಶದ ಅರಸನ ಬಾಯಿಗೆ ನೀರುಬಿಡುವದು ಸ್ವಾಭಾವಿಕವಾದದ್ದು. ಚಾರ್ಲಸ ರಾಜನು ಪಿಝಾನೋನನ್ನು ಪೇರೂ ದೇಶದ ಗವರ್ನರ ಹಾಗೂ ಕ್ಯಾಪ್ಟನ್ ಜನರಲ್‌ನನ್ನಾಗಿ ನೇಮಿಸಿದನು ಪಿಝಾರೋನ ಸಂಗಡಿಗನಾದ ಅಲ್ಮಾಗ್ರೋನು ಟುಂಬೇಝದ ಕಮಾಂಡರನಾಗಿ ನೇಮಿಸಲ್ಪಟ್ಟನು. ಪಿಝಾರೋನು ಎರಡುನೂರಾ ಐವತ್ತು ಶಿಪಾಯರ ಪಲಟಣವನ್ನು ಸಿದ್ಧ ಮಾಡತಕ್ಕದ್ದು ; ಪಲಟಣಿಗೆ ಬೇಕಾಗುವ ತೋಪುಗಳ ಹಾಗೂ ಮದ್ದುಗುಂಡುಗಳ ಸಹಾಯವನ್ನು ಸ್ಪೇನ ಸರಕಾರದವರು ಮಾಡತಕ್ಕದ್ದು; ಹಾಗೂ ಪಾಸಾಮಾಕ್ಕೆ ಹೋಗಿ ಮುಟ್ಟಿದ ಬಳಿಕ ಆದ ತಿಂಗಳಗಳಲ್ಲಿಯೇ ಪಿಝಾರೋನು ಪೇರೂ ದೇಶದ ಮೇಲೆ ಅವಶ್ಯವಾಗಿ ದಂಡೆತ್ತಿ ಹೋಗಬೇಕು; ಮು೦ತಾದ ಕರಾರಗಳಾದವು. ಎರಡುನೂರೈವತ್ತು ಶಿಪಾಯವಿರದೊಂದು ಪಲಟಣಿಯ ಸಹಾಯ್ಯದಿಂದ ಪೆರೂದಂಥ ವಿಸ್ತೀರ್ಣವಾದದ್ದೊಂದು ಪ್ರದೇಶವನ್ನು ಅಂಕಿತ ಮಾಡಿಕೊಳ್ಳಲು ಪುರುಷನೊಬ್ಬನು ಸಿದ್ಧನಾಗಬೇಕೆಂಬ ಮಾತು ಕೇಳುವದಕ್ಕೆ ಕೂಡ ವಿಸ್ಮಯಕಾರಕವಾದದ್ದು. ಆದರೆ, ಈಶ್ವರೇಚ್ಛೆಯ ಅಘಟಿತ ಲೀಲೆಗಳಿಗನುಸರಿಸಿ ಹಲಕೆಲವು ಸಂಗತಿಗಳು ಸಂಭವಿಸಿ ಬರತಕ್ಕವಾಗಿರುವದರಿಂದ, ಅಪ್ರಯೋಜಕಗಳೆಂದು ಕಂಡುಬರುವ ಸಾಧನಗಳಿಂದ ಅದ್ಭುತ ಸಂಗತಿಗಳು ಸಂಭವಿಸುತ್ತವೆಂದೆನ್ನಲಾರದೆ ಇರಲಾಗದು.

ಸ್ಪೇನ ದೇಶದ ರಾಜನಿಂದ ಪಿರಾರೋನು ಅಪ್ಪಣೆಯನ್ನು ಪಡೆದುಕೊಂಡು ಪಾನಾಮಾಕ್ಕೆ ಮರಳಿ ಬಂದನು; ಸನ್ ೧೫೩೧ನೇ ಇಸ್ವಿಯ ಜಾನೇವಾರಿಯಲ್ಲಿ ಪೇರೂ ದೇಶವನ್ನು ಅಂಕಿತ ಮಾಡಿಕೊಳ್ಳುವ ಉದ್ದೇಶದಿಂದ ದಂಡೆತ್ತಿ ಹೊರಟನು. ಟುಂಬೇಝ ಪಟ್ಟಣವನ್ನು ಮುಟ್ಟುವದರ ಪೂರ್ವದಲ್ಲಿಯೇ ಅವನು ತನ್ನ ಜನರನ್ನು ಕೋಕ ಎಂಬ ಪ್ರಾಂತದಲ್ಲಿ ಇಳಿಸಿದನು. ಪಿಝಾರೋನ ಸಂಗಡ ಈ ಸಾರೆ ೬೦-೭೦ ಕುದುರೆಗಳ ಸವಾಠರಿದ್ದರು. ಈ ಸವಾರರ ಭೀತಿಗಾಗಿ ಸಣ್ಣ ಪುಟ್ಟ ಹಳ್ಳಿಗಳೊಳಗಿನ ಜನರು ಓಡಹತ್ತಿದರು. ಹಳ್ಳಿಗಳು ತೆರವಾದಕೂಡಲೆ ಅವುಗಳನ್ನು ಅವನು ಸುಲಿದನು. ಈ ಸುಲಿಗೆಯಲ್ಲಿ ಹೇರಳವಾಗಿ ಬೆಳ್ಳಿ ಬಂಗಾರವೂ, ಪೂಗಿಫಲದಷ್ಟು ದೊಡ್ಡ ದೊಡ್ಡ ರತ್ನಗಳೂ ಅವನಿಗೆ ದೊರೆತವು. ಈ ಸುಲಿಗೆಯೊಳ Cha ಸಂಪೂರ್ಣ+ಕಥೆಗಳು ಗಿನ ಒಂದು ಪಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇರೆ ತೆಗೆಯ ೭ಟ್ಟು, ಉಳಿದ ದ್ರವ್ಯವು ಸಿರುಾರೋನ ಕೈ ಕೆಳಗಿನವರಲ್ಲಿ ಹಂಚಲ್ಪಟ್ಟಿತು. ಈ ಪ್ರಕಾರ ಪ್ರಥಮಾರಂಭದಲ್ಲಿಯೇ ತನ್ನ ಸೈನಿಕರನ್ನು ಬೆಳ್ಳಿ ಬಂಗಾರದಿಂದ ಸಂತೋಷಪಡಿಸಿ ಬೇರೂ ದೇಶದ ಮೇಲೆ ಸಾಮ್ರಾಜ್ಯ ಸತ್ತೆಯನ್ನು ನಡೆಸು ೩. ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ ರಾಜಧಾನಿಯಾಗಿದ್ದ ಕುರೋ ಪಟ್ಟಣದ ಮೇಲೆ ಹಲ್ಲಾ ಮಾಡುವ ವಿಚಾರವನ್ನು ಸಿರುಾರೋನು ಮಾಡಿದನು. ಈ ರಾಜಧಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರ ದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೆ: ಅಂತರದ ಮೇಲಿತ್ತು. ಟುಂಬೇರದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋ ಗ್ಯಕರವಾದ ಪ್ರದೇಶದಲ್ಲಿ ತನ್ನ ಠಾಣ್ಯವನ್ನೂರಿ ಅವನು ಅದಕ್ಕೆ ಸಾನ ಮಿಏಲ ( ಸೇಂಟ ಮಾಯಕೇಲ ) ಎಂಬ ಬ್ರಿಸ್ತಿ ಸಾಧ: ಪುರುಷನ ಹೆಸರು ಕೊಟ್ಟನು. ಈ ಸ್ಥಳದಿಂದ ಸ ೧೩೫೨ ನೇ ಇಸ್ವಿಯ ಸವ್ವ೦ಬರ ತಿ೦ಗಳದ ೨೪ನೇ ತಾರೀಖಿನ ದಿವಸ ಪಿರುಾರೋನು ತನ್ನ ಸಂಗಡ ೨೦೦ ಶಿಪಾಯವನ್ನು ತೆಗೆದುಕೊಂಡು ಇಂಕಾನ ಬಲಾಢವಾದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೊರಟನು. ಪಿರುತಾರೋನ ಈ ಮುಂದಿನ ವೃತ್ತಾಂತವನ್ನು ಕೊಡುವದರ ಮುಂಚಿ ತವಾಗಿ ಅವನು ಯಾವ ದೇಶದ ಮೇಲೆ ಸಾಗಿಹೋಗಬೇಕೆಂದು ಮಾಡಿ ದ್ದನೋ ಆ ದೇಶದ, ಅಲ್ಲಿಯ ಲೋಕ ಸ್ಥಿತಿಯ ಹಾಗೂ ಅಲ್ಲಿಯ ಸಾಮ ರ್ಥ್ಯದ ಇಲ್ಲವೆ ಬಲಾಬಲದ ದಿಗ್ದರ್ಶನವನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಞಾನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದರು. ಅವರಿಗೆ ಲೇಖನ ಕಲೆಯು ಅವಗತ ನಿದ್ದಿಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ, ಹಾಗೂ ಭಿನ್ನ ಭಿನ್ನ ಬಣ್ಣಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳ ನ್ನಾಗಲಿ, ಪದಾರ್ಥಗಳನ್ನಾಗಲಿ ತೋರಿಸತಕ್ಕದ್ದೆಂಬ ಪ್ರಕಾರದ ಪದ್ಧತಿ ಯನ್ನು ನಿಶ್ಚಯಿಸಿ, ಅವರು ಗಣಿತವನ್ನು ಮಾಡುತ್ತಿದ್ದರು. ಈ ಭಿನ್ನ ಭಿನ್ನ ಬಣ್ಣದದಾರಗಳ ಹೆಣಿಕೆಯಿಂದ ಅವರ ಪತ್ರವ್ಯವಹಾರವೂ ಪರಸ್ಪರರ ವಿಚಾರ ವಿನಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ ' ಕ್ವಿಪ್ಪ” ಎಂಬ ಸಂಜ್ಞೆಯಿತ್ತು. ಸರಕಾರ ದರಬಾರದ ದಪ್ತರವಲ್ಲ ಈ 'ಕ್ವಿಪ್ಸ' ಪದ್ಧತಿಯಿಂದಲೇ ಇಡಲ್ಪಡುತ್ತಿತ್ತು. ಬೇರೆ ಬೇರೆ ಬಣ್ಣಗಳ ದಾರಗಳಿಂದ ತಮ್ಮ ವಿಚಾರಗಳನ್ನು ಗ್ರಥಿತ ಮಾಡುವ ಪದ್ಧತಿಯು ಲೇಖನ ಕಲೆಯರಿಗಿಂತ ಅಸಂಸ್ಕೃತವಾದದ್ದೆಂಬ ಮಾತು ನಿಜವು. ಆದರೆ, ಇಂಕಾನ ರಾಜ್ಯದ ವ್ಯವಹಾರವೆಲ್ಲ ಇದೇ ಪದ್ಧತಿಯಿಂದ ಚನ್ನಾಗಿ ನಡೆಯುತ್ತಿತ್ತೆಂದು ಸ್ಪಾನಿಆರ್ಡರು ಸರಟಿಫಿಕೇಟ ಕೊಟ್ಟಿದ್ದಾರೆ. ಅಂದಮೇಲೆ : 'ಕ್ವಿಪ್ಸ" ಪದ್ಧತಿಯು ಸರ್ವತೋಪರಿ ಶ್ಯಾಜ್ಯವಾಗಿತ್ತೆಂದು ಅನ್ನುವ ಧಾರ್ಷ್ಟ್ಯ ವನ್ನು ಯುರೋಪಿಯನ್ ಇತಿಹಾಸಕಾರರೂ ಕೂಡ ಮಾಡುವದಿಲ್ಲ ಲೇಖನ ವಾಚನಗಳ ಕಲೆಗಳಲ್ಲಿ ಪೇರೂ ಜನರು ಹಿಂದುಳಿದಿದ್ದರೂ ಉಳಿದ ಸಂಗತಿಗಳಲ್ಲಿ ಅವರ ಪ್ರಗತಿಯು ಚನ್ನಾಗಿತ್ತು. ಒಕ್ಕಲತನದಲ್ಲಿ ಅವರು ಒಳಿತಾಗಿ ಪಾರಂಗತವನ್ನು ಹೊಂದಿದ್ದರು. ರೋಮನ್ ಜನರು ಪ್ರಾಚೀನ ಕಾಲದಲ್ಲಿ ಕಟ್ಟಿದಂಥ ದೊಡ್ಡ ದೊಡ್ಡ ಮಾರ್ಗಗಳು' ಪೇರ ದೇಶದಲ್ಲಿದ್ದವು ಸೇರೂ ದೇಶವು ಅಂಡೀಜ ಪರ್ವತದ ಅತ್ಯುಚ್ಚ ಶಿಖರಗಳಿಂದ ಇಳಿಯುತ್ತಿಳಿಯುತ್ತ ಪಾಸಿಫಿಕ್ ಮಹಾಸಾಗರದ ದಂಡೆಯ ವರೆಗೆ ಹಬ್ಬಿಕೊಂಡಿದೆ. ಇದರಿಂದ ಹೇರೂ ದೇಶದಲ್ಲಿ ಮಾರ್ಗ ನಡೆಯುವದು ವಸ್ತುತಃ ಬಹಳ ಕಠಿಣವಾಗಿರಬೇಕು. ಆದರೂ ಪರ್ವತದ ಹೊದರುಗಳೊಳಗಿಂದ ಶಿಖರದ ವರೆಗೆ ದೊಡ್ಡ ದೊಡ್ಡ ಮಾರ್ಗಗಳನ್ನು ಇಂಕಾ ಜನರು ಕಟ್ಟಿದ್ದಾರೆ. ಒಕ್ಕಲತನದ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಕಾಲುವೆಗಳನ್ನು ಕಟ್ಟುವ ಕಲೆ ಯಾದರೂ ಅವರಿಗೆ ವಿಶೇಷವಾಗಿ ಗೊತ್ತಿತ್ತು, ಇಂಕಾ ಜನರು ಸೇರಿ ದೇಶದಲ್ಲಿ ಕಟ್ಟಿದ ಕಾಲುವೆಗಳು ಭೂಮಿಯ ಮೇಲೆ ಹರಿಯದೆ, ಭೂಮಿಯ ಸೃಷ್ಣ ಭಾಗದ ಕೆಳಗಿಂದ ಹರಿಯುತ್ತವೆ. ಈ ಕಾಲುವೆಯೊಳಗಿನ ನೀರು ಒಕ್ಕಲಿಗರಿಗೆ ತೊಂದರೆಯಿಲ್ಲದಂತೆ ದೊರೆಯುತ್ತಿತ್ತು. ಪೇರೂ ದೇಶದಲ್ಲಿ ಆನೆ, ಕುದುರೆ, ಒಂಟೆ ಮುಂತಾದ ಪಶುಗಳು ದೊರೆಯುತ್ತಿದ್ದಿಲ್ಲ; ಆದರೂ ಲಾಮಾ ಎಂಬ ಹೆಸರಿನದೊಂದು ಪಶುವಿತ್ತು. ಅದಕ್ಕೆ ಕುರಿಯನ್ನ ಬೇಕೋ ಒಂಟೆಯನ್ನಬೇಕೋ ಎಂಬುದರ ಬಗ್ಗೆ ಸ್ಪಾನಿಶ ಜನರ ಮನಸ್ಸಿನಲ್ಲಿ ಸಂದೇಹ ಉತ್ಪನ್ನವಾಯಿತು. ಈ ಲಾಮಾ ಪಶುವಿನ ಮೈ ಮೇಲೆ ಮೃದುವಾದ ಹಾಗೂ ಬೆಚ್ಚಗಾದ ಉಣ್ಣೆಯು ದೊರೆಯುತ್ತದೆ. ಒಂಟೆಯಂತೆ ಎಂಟೆಂಟು ದಿವಸಗಳ ವರೆಗೆ ಕೂಳು ನೀರಿಲ್ಲದೆ ಈ ಲಾವಾ ಪ್ರಾಣಿಯು ಗುಡ್ಡಗಾಡ ಪ್ರದೇಶದಲ್ಲಿ ಪ್ರವಾಸವನ್ನು ಮಾಡುತ್ತದೆ. ಅದಕ್ಕಾಗಿ ಸ್ಪಾನಿಆರ್ಡರು ಇದಕ್ಕೆ 'ಚಿಕ್ಕ ಒಂಟೆ ' ಎಂಬ ಹೆಸರು ಕೊಟ್ಟಿದ್ದಾರೆ. ಈ ಲಾಮಾ ಪಶುಗಳ ದೊಡ್ಡ ದೊಡ್ಡ ಹಿಂಡುಗಳು ಸೇರೂ ದೇಶದಲ್ಲಿ ದೊರೆಯುತ್ತವೆ. ಲಾಮಾ ಪ್ರಾಣಿಯ ಮೈಮೇಲಿರುವ ಉಣ್ಣೆಯಿಂದ ಬೆಚ್ಚಗಿನೆ ಹಾಗೂ ನೋಟಕ್ಕೆ ಸುಂದರವಾದ ಬಟ್ಟೆಗಳಾಗುತ್ತವೆ. ಇಂಕಾ ಕ್ಷತ್ರಿಯರು ಇವೇ ವಸ್ತ್ರಗಳನ್ನು ಉಪಯೋಗಿ ಸುತ್ತಿದ್ದರು. ಇಂಕಾ ಕ್ಷತ್ರಿಯರು ತಾವು ಸೂರ್ಯ ವಂಶಿಗಳೆಂದು ಮನ್ನಿಸು ತ್ತಿದ್ದರು, ಹಾಗೂ ಸೂರ್ಯನು ಅವರ ಆರಾಧ್ಯ ದೈವಕನಾಗಿದ್ದನು. ಇಂಕನ ವಿಸ್ತೀರ್ಣವಾದ ಸಾಮ್ರಾಜ್ಯದಲ್ಲಿ ಸೂರ್ಯೋಪಾಸನೆಯ ಸಲು ಅನೇಕ ದೇವಾಲಯಗಳು ಕಟ್ಟಿಸಲ್ಪಟ್ಟಿದ್ದವು. ಸೂರ್ಯನಂತೆ ಚಂದ್ರ, ಶುಕ್ರ ಮುಂತಾದ ಗ್ರಹಗಳನ್ನಾದರೂ ದೇವತೆಗಳೆಂದು ಅವರು ಪೂಜಿಸುತ್ತಿದ್ದರು ವಿ೦ಚು ಹಾಗೂ ಇಂದ್ರಧನುಷ್ಯಗಳಾದರೂ ದೈವೀ ಶಕ್ತಿಯ ಸೂಚಕಗಳೆಂದು ಅವು ಅವರಿಗೆ ಪೂಜ್ಯವಾಗಿದ್ದವು. ಫಲ, ಪುಪ್ಪ, ಧಾನ್ಯ, ಸುಗಂಧಿ ಪದಾರ್ಥಗಳು ಪೂಜಾದ್ರವ್ಯಗಳೆಂದು ತಿಳಿಯಲ್ಪಡುತ್ತಿ ದ್ದವು. ಕೆಲವು ಪ್ರಸಂಗಗಳಲ್ಲಿ ದೇವಾಲಯದಲ್ಲಿ ಪಶುಬಲಿಯನ್ನಾದರೂ ಅವರು ಕೊಡುತ್ತಿದ್ದರು; ಕ್ವಚಿತ ಪ್ರಸಂಗಗಳಲ್ಲಿ ಸುಂದರಳದ ಕುಮಾರಿ ಯನ್ನಾಗಲಿ, ಅರ್ಭಕವನ್ನಾಗಲಿ ಬಲಿಯೆಂದು ದೇವರಿಗೆ ಅರ್ಪಿಸುತ್ತಿದ್ದರು. ಆದರೆ, ಇದು ಎಂದಾದರೊಮ್ಮೆ ಅಪ್ಪಿ ತಪ್ಪಿ ಸಂಭವಿಸುತ್ತಿತ್ತು. ಸೂರ್ಯೊ ಪಾಸನೆಯ ಮಹತ್ವವು ಇಂಕಾನ ರಾಜ್ಯದಲ್ಲಿ ಅತಿಶಯವಾಗಿತ್ತು, ಕುರೋ ರಾಜಧಾನಿಯೊಳಗಿನ ಸೂರ್ಯನ ದೇವಾಲಯವೆಂವರೆ, ಅದೊಂದು ಸುವರ್ಣ ರತ್ನಖಚಿತವಾದ ಮಂದಿರವಾಗಿತ್ತು. ಇಂಕಾನ ರಾಜ್ಯದಲ್ಲಿ ದೇವಾ ಲಯಗಳನ್ನೂ, ಮಂದಿರಗಳನ್ನೂ ಸುಶೋಭಿತ ಮಾಡುವದರಲ್ಲಿ ಬಂಗಾರದ ಉಪಯೋಗವಾಗುತ್ತಿತ್ತು. ಇಂಕಾ ಎಂಬ ಕ್ಷತ್ರಿಯ ಜಾತಿಯ ಮನೆತನದ ವರಲ್ಲೆಲ್ಲ ಬಂಗಾರದ ಪಾತ್ರೆಗಳ ಹೊರತು ಆನ್ಯವಾದ ಪಾತ್ರೆಗಳು ಇರು ದ್ವಿಲ್ಲ. ಸೂರ್ಯನ ಪೂಜೆಗಾಗಿ ' ಸೂರ್ಯ ಕನ್ಯಕಾ ' ಎಂಬ ಕುಮಾರಿಕೆ ಯರಿರುತ್ತಿದ್ದರು. ರಾಜಧಾನಿಯಲ್ಲಿದ್ದ ಮುಖ್ಯವಾದ ಸೂರ್ಯಮಂದಿರದಲ್ಲಿ ೧೫೦೦ - ಕುಮಾರಿಯರು ಸೂರ್ಯೋಪಾಸಿಕೆಯರೆಂದು ಇಡಲ್ಪಟ್ಟಿದ್ದರು. ಉಚ್ಚ ಉಚ್ಚ ಮನೆತನದೊಳಗಿನ ಕುಮಾರಿಕೆಯರು ಚಿಕ್ಕಂದಿನಿಂದ ಈ ದೇವಾಲಯದಲ್ಲಿ ವೃದ್ಧ ಸ್ತ್ರೀಯರ ಕೈಕೆಳಗೆ ಕೆಲಸಗಳನ್ನು ಮಾಡುತ್ತಿದ್ಧರು. ಆದರೆ, ಅವರೆಲ್ಲರೂ ಆಮರಣ ಅವಿವಾಹಿತರಾಗಿಯೇ ಉಳಿಯತಕ್ಕದ್ದೆಂಬ ನಿಯಮವಿದ್ದಿಲ್ಲ. ಯಾಕೆಂದರೆ, ಈ ಸೂರ್ಯೋಪಾಸಿಗೆಯರಲ್ಲಿ ಎಷ್ಟೋ? ಕುಮಾರಿಕೆಯರು ಇಂಕಾ ರಾಜನ ಕೂಡ ವಿವಾಹಿತರಾಗಿದ್ದರು. ಸರದಾರ ಮನೆತನಗಳೊಳಗಿನ ಇಂಕಾ ಪುರುಷರಾದರೂ ತಮ್ಮ ಅಂತಃಪುರದ ಸಲುವಾಗಿ ಸೂರ್ಯಮಂದಿರದೊಳಗಿನ ಸುಂದರರಾದ ಕುಮಾರಿಕೆಯರನ್ನ ಆರಿಸಿ ಒಯ್ಯುತ್ತಿದ್ದರು, ಇಂಕಾ ರಾಜನಿಗೂ ಅವನ ಸರದಾರರಿಗೂ ಏಕಕಾಲಕ್ಕೆ ಅನೇಕ ಹೆಂಡಂದಿರನ್ನು- ಪ್ರಸಂಗವಶಾತ್‌ ನೂರಾರು ಅಥವಾ ಸಾವಿರಾರು ಹೆಂಡಂದಿರನ್ನು-ಲಗ್ನ ಮಾಡಿಕೊಳ್ಳುವದಕ್ಕೆ ಪ್ರತಿಬಂಧವಿದ್ದಿದ್ದಿಲ್ಲ. ಆದರೆ, ಸರ್ವ ಸಾಧಾರಣ ಜನರಲ್ಲಿ ಒಂದೇ ಲಗ್ನ ಮಾಡಿಕೊಳ್ಳುವ ಪರಿಪಾಠವಿತ್ತು. ಪುರುಷರು ಇಪ್ಪತ್ತು ನಾಲ್ಕು ವರ್ಷದವರಾಗುವವರೆಗೂ, ಸ್ತ್ರೀಯರು ಇಪ್ಪತ್ತು ವರ್ಷದವರಾಗುವ ವರೆಗೂ ವಿವಾಹವನ್ನು ಮಾಡಿಕೊಳ್ಳ ಕೂಡದೆಂದು ನಿರ್ಬಂಧವಿತ್ತು. ವಿವಾಹಕ್ಕೆ ವಧು ವರರ ತಂದೆತಾಯಿಗಳ ಆನುಮತಿಯು ಅವಶ್ಯವಾಗಿ ಬೇಕಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ವಧು ವರರಲ್ಲಿ ಲಗ್ನಗಳಾಗುತ್ತಿಲ್ಲ. ಲಗ್ನ ದ ಮುಹೂರ್ತವು ಇಡಿಯ ವರ್ಷದಲ್ಲಿ ಒಂದೇ ದಿವಸವಿರುತ್ತಿತ್ತು. ಮನುಷ್ಯನು ಸತ್ತನೆಂದರೆ ಅವನನ್ನು ಅವನ ಆಲಂಕಾರಗಳ ಸಹಿತವಾಗಿ ಹುಗಿಯುತ್ತಿದ್ದರು. ದೊಡ್ಡ ದೊಡ್ಡ ರಾಜರ ಹಾಗೂ ಸರದಾರರ ನೂರಾರು ಹೆಂಡಂದಿಗು ಗಂಡನ ಮರಣದನಂತರ ಸಹಗಮನ ಮಾಡಿ ಒಮ್ಮೊಮ್ಮೆ ಸತಿಯಾದರೂ ಹೋಗುತ್ತಿದ್ದರು.

ಇಂಕಾ ರಾಜರು ಪ್ರಜರ ಸುಖಕ್ಕಾಗಿಯೂ, ಸೌಕರ್ಯಕ್ಕಾಗಿಯೂ ಅನೇಕ ಯೋಜನೆಗಳನ್ನು ಮಾಡಿದ್ದರು. ದೇಶದೊಳಗಿನ ಧಾನ್ಯವೆಲ್ಲ ಹಳ್ಳಿ ಹಳ್ಳಿಗಳಲ್ಲಿದ್ದ ಸರಕಾರೀ ಧಾನ್ಯಾಗಾರಗಳಲ್ಲಿ ಸಂಚಯಿಸಲ್ಪಡುತ್ತಿತ್ತು. ಲಾಮಾ ಕುರಿಗಳ ಉಣ್ಣಿಯನ್ನಾದರೂ ಇದೇ ರೀತಿಯಿಂದ ಸಂಚಯಿಸಿಡುವ ಪ್ರಘಾತವಿತ್ತು, ಧಾನ್ಯ ಹಾಗೂ ಇತರ ಪದಾರ್ಥಗಳನ್ನೆಲ್ಲ ಸರಕಾರೀ ಅಧಿಕಾರಿಗಳೇ ಜನರಿಗೆ ಹಂಚಿಕೊಡುತ್ತಿದ್ದರು. ಇದರಿಂದ, ಸರದಾರರ ಮನೆತನಗಳನ್ನಷ್ಟು ಬಿಟ್ಟು ಉಳಿದ ಪ್ರಜಾಜನರಲ್ಲಿ, ಇವನು ಶ್ರೀಮಂತನು, ಇವನು ಬಡವನು ಎಂಬ ಭೇದವೇ ಪೇರೂ ದೇಶದಲ್ಲಿದ್ದಿದ್ದಿಲ್ಲ. ಜನರಿಗೆ ಸುದ್ದಿ ಮುಂತಾದವುಗಳನ್ನು ಮುಚ್ಚಿ ಸುವದಕ್ಕಾಗಿ ಟಪಾಲಿನ ವ್ಯವಸ್ಥೆಯಾದರೂ ಇತ್ತು. ಯಾವ ಮಾರ್ಗಗಳಿಗೆ ಹಂಬೋಲ್ಕನಂಥ ವಿಖ್ಯಾತನಾದ ಜರ್ಮನ ಪ್ರವಾಸಿಯು, 'Most stupendous and useful (ಅತ್ಯಂತ ಅದ್ಭುತ ಹಾಗೂ ಅತ್ಯಂತ ಲೋಕೋಪಯೋಗಿ)' ಎಂಬ ಸಂಜ್ಞೆಯನ್ನು ಕೊಟ್ಟಿರುವನೋ, ಅಂಥ ಸುಂದರವಾದ ಮಾರ್ಗಗಳಿಂದ ಪ್ರತಿನಿತ್ಯ ಒಂದು ನೂರೈವತ್ತು ಮೈಲುಗಳ ವೇಗದಿಂದ ಟಪಾಲಿನ ವ್ಯವಹಾರವು ನಡೆಯುತ್ತಿತ್ತು. ಊರೂರಿಗೆ ಶಿಕ್ಷಣದ ವ್ಯವಸ್ಥೆಯಾದರೂ ಮಾಡಲ್ಪಟ್ಟಿತ್ತು. ನ್ಯಾಯದ ಪದ್ಧತಿಯಾದರೂ ಉತ್ತಮವಾಗಿತ್ತು. ಹಳ್ಳಿಗಳೊಳಗಿನ ಸಣ್ಣ ಸಣ್ಣ ಅಪರಾಧಗಳ ವಿಚಾರಣೆ ಯನ್ನು ಮಾಡುವದಕ್ಕಾಗಿ ಮ್ಯಾಜಿಸ್ಟ್ರೇಟರಿರುತ್ತಿದ್ದರು. ಹೆಚ್ಚಿನ ಅಪರಾಧಗಳ ವಿಚಾರಣೆಯು ನ್ಯಾಯಾಧೀಶರ ಮುಂದೆ ನಡೆಯುತ್ತಿತ್ತು. ಆಸೀಲಿನ ಪದ್ಧತಿಯು ಪ್ರಚಾರದಲ್ಲಿದ್ದಿದ್ದಿಲ್ಲ. ನ್ಯಾಯಾಧೀಶರನ್ನು ನೇಮಿಸುವ ಇಲ್ಲವೆ ಅವರನ್ನು ಪದಭ್ರಷ್ಟ ಮಾಡುವ ಅಧಿಕಾರವು ಬಾದಶಹನದು. ಹತ್ತು ಸಾವಿರ ಜನಸಂಖ್ಯೆಯುಳ್ಳ ಪ್ರಾಂತದ ಮೇಲೆ ಇಂಕಾ ಚಾತಿಯ ಸುಭೇದಾರನಿರುತ್ತಿದ್ದನು. ಅವನ ಕೈ ಕೆಳಗೆ ಕುರಾಕಾ ಎಂಬ ಚಿಕ್ಕ ಅಧಿಕಾರಿಯಿರುತ್ತಿದ್ದನು. 'ಫಿರ್ಯಾದಿ' ಬಂದ ಐದು ದಿವಸಗಳಲ್ಲಿ ನ್ಯಾಯಾಧೀಶನು ಅದರ ನಿರ್ಣಯವನ್ನು ಮಾಡಲೇಬೇಕೆಂಬ ನಿಯಮವಿತ್ತು.

ಇಂಕಾ ರಾಜನ ಸೈನ್ಯವು ಎರಡು ಲಕ್ಷವಾಗಿತ್ತು. ಬಂದೂಕಿನ ಮುದ್ದಿನ ಉಪಯೋಗವು ಇಂಕಾ ಜನರಿಗೆ ಗೊತ್ತಿದ್ದಿಲ್ಲ; ಬಿಲ್ಲು ಬರ್ಚಿ, ಬಾಣ, ಖಡ್ಗ, ಪರಶು, ಗದಾ, ಕವಣಿ ಮುಂತಾದವುಗಳೇ ಅವರ ಶಸ್ತ್ರಾಸ್ತ್ರಗಳಾಗಿದ್ದವು. ಕಬ್ಬಿಣವೆಂದರೇನೆಂಬುದನ್ನು ಅವರು ಸ್ವಪ್ನದಲ್ಲಿ ಕೂಡ ಆರಿಯರು. ಅವರ ಶಸ್ತ್ರಾಸ್ತ್ರಗಳೆಲ್ಲ ತಾಂಬ್ರದಿಂದಲೇ ಮಾಡಲ್ಪಟ್ಟಿದ್ದವು. ಸೈನ್ಯದೊಳಗಿನ ಜನರ ತಲೆಗಳಿಗೆ ಬೇರೆ ಬೇರೆ ಬಣ್ಣದ ಪಟ್ಟಿಗಳುಳ್ಳ ಮುಂಡಾಸಗಳೂ, ಮೈಯಲ್ಲಿ ದಪ್ಪಾದ ಅರಿವೆಯ ಗಿಡ್ಡ ಅಂಗಿಗಳೂ ಇರುತ್ತಿದ್ದವು. ಸರದಾರರ ಪೋಷಾಕ'ಕ್ಕೆ ಬಂಗಾರದ ಹಾಗೂ ವಜ್ರಮಾಣಿಕ್ಯಗಳ ಅಲಂಕಾರಗಳು ಹಚ್ಚಲ್ಪಡುತ್ತಿದ್ದವು. ಅವರ ಶಿರಸ್ತ್ರಾಣದ ಮೇಲೆ ಪಕ್ಷಿಗಳ ಸುಂದರವಾದ ಪುಚ್ಚಗಳಿಂದ ಮಾಡಲ್ಪಟ್ಟ ತುರಾಯಿಗಳಿರುತ್ತಿದ್ದವು. ಪ್ರತಿಯೊಂದು ಪಲಟಣದ ಮುಂದೊಂದು ಬಾವಟಿ ಇಲ್ಲವೆ ನಿಶಾನಿ ಇರುತ್ತಿತ್ತು. ಅದರ ಮೇಲಿನ ಇಂದ್ರಧನುಷ್ಯದ ಆಕೃತಿಯು ಬಂಗಾರದ ತಂತಿಗಳಿಂದ ಮಾಡಲ್ಪಡುತ್ತಿತ್ತು.

ಈ ಪ್ರಕಾರ ಕೆಲವಂಶಗಳಿಂದ ಸುಧಾರಿಸಿದ ಆದರೆ ಅನೇಕಾಂಶಗಳಿಂದ ಹಿಂದುಳಿದ ಜನರ ಮೇಲೆ, ಪಿಝಾರೋನು ತಾನು ದಂಡೆತ್ತಿ ಹೋದಾಗ, ಅಟಾಹುಲಪ್ಪಾ ಎಂಬ ಹೆಸರಿನ ರಾಜನು ರಾಜ್ಯವನ್ನಾಳುತ್ತಿದ್ದನು. ಪಿಝಾರೋನು ಪೇರೂ ದೇಶಕ್ಕೆ ಹೋಗುವದರ ಪೂರ್ವದಲ್ಲಿ ಸ್ವಲ್ಪ ವರ್ಷಗಳಿಂದ ಅಟಾಹುಲಪ್ಪಾ ಹಾಗೂ ಅವನ ಮಲ ಅಣ್ಣನಾದ ಹೌಸಕಾರ ಈ ಉಭಯತರ ನಡುವೆ ಭಯಂಕರವಾದ ಯಾದವಿಯು-ಗೃಹಕಲಹವು- ಹಬ್ಬಿಕೊಂಡಿತ್ತು. ಅಟಾಹುಲಪ್ಪಾ ಹಾಗೂ ಹೌಸಕಾರ ಈ ಉಭಯತರೂ ಹುಯನಾಗೇಪಾಕನ ಮಕ್ಕಳು. ಹುಯನಾ ಕೇಪಾಕನು ಒಳ್ಳೇ ಪರಾಕ್ರಮಿಯಾದ ರಾಜನು. ಆವನು ಕ್ವಿಟೋ ಹಾಗೂ ಚಿಲೀ ಪ್ರಾಂತಗಳ ಮೇಲೆ ಇಂಕಾರಾಜರ ಅಧಿಕಾರವನ್ನು ಸ್ಥಾಪಿಸಿದ್ದನು; ಪೇರೂ ದೇಶದ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದಿಂದ ಕ್ವಿಟೋ ಪಟ್ಟಣದ ವರೆಗೆ ದೊಡ್ಡ ಮಾರ್ಗವನ್ನು ಕಟ್ಟಿದ್ದನು. ಇಂಕಾ ಜನರ 'ಕ್ವಿಚುಆ' ಭಾಷೆಯ ಪ್ರಸಾರವು ತನ್ನ ರಾಜ್ಯದ ತುಂಬ ಆಗಬೇಕಂಬದಾಗಿ ಅವನು ನಾನಾವಿಧ ಪ್ರಯತ್ನ ವನ್ನು ಮಾಡಿದನು. ಈ ರಾಜನು ರಾಜ್ಯವನ್ನಾಳುತ್ತಿದ್ದಾಗ ಇಂಕಾ ಜನರ ಸಾಮರ್ಥ್ಯ-ವೈಭವಗಳು ಪರಮಾವಧಿಯನ್ನು ಮುಟ್ಟಿದ್ದ ವೆಂದು ಆ ಪ್ರಾಂತದೊಳಗಿನ ಜನರ ಮತವಿದೆ. ಕ್ವಿಟೋ ಪ್ರಾಂತದ ಮೇಲೆ ಸ್ವತಂತ್ರವಾಗಿ ರಾಜ್ಯವನ್ನಾಳುತ್ತಿದ್ದ ರಾಜನ ಪರಾಭವವನ್ನು ಮಾಡಿ, ಅವನ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿ, ಹುಯನಾ ಕೇಪಾಕನು ಪರಾಭೂತನಾಗಿದ್ದ ರಾಜನ ಸುಂದರಳಾದ ಕನ್ನೆಯನ್ನು ಮದುವೆಯಾಗಿದ್ದನು. ಈ ಮೊದಲು ಹುಯನಾಕೇಪಾಕನಿಗೆ ಇಂಕಾ ಕುಲದೊಳಗಿನ ಅನೇಕ ರಾಣಿಗಳಿದ್ದರು. ಇವರಲ್ಲೊಬ್ಬಳಿಗೆ ಹೌಸಕಾರನೆಂಬ ಮಗನಿದ್ದನು, ಇವನೇ ಯುವರಾಜನೆಂದು ಗೊತ್ತು ಮಾಡಲ್ಪಟ್ಟಿತ್ತು. ಕ್ವಿಟೋದ ರಾಜನ ಕನ್ನಿಕೆಯು ಕೂಡ ವಿವಾಹವಾದ ಬಳಿಕ, ಕೇಪಾಕನು ಅವಳ ಮೇಲೆ ಅತ್ಯಂತ ಪ್ರೇಮ ಮಾಡಹತ್ತಿದನು. ಮುಂದೆ ಅವಳಿಗೆ ಅಟಾಹುಲಪ್ಪಾ ಎಂಬ ಮಗನು ಹುಟ್ಟಿದನು. ಈ ಮಗನಿಗಾದರೂ ರಾಜ್ಯದ ಕೆಲವು ಭಾಗವು ದೊರೆಯಬೇಕೆಂದು ರಾಜನು ವ್ಯವಸ್ಥೆಯನ್ನು ಮಾಡಹತ್ತಿದನು. ಇಂಕಾ ರಾಜಮನೆತನದ ಪದ್ಧತಿಯಂತೆ, ಕೇಪಾಕನು ಕ್ವಿಟೋ ರಾಜಕನ್ನಿಕೆಯರಿ ಕೂಡ ಮಾಡಿಕೊಂಡ ವಿವಾಹವು ಆಶಾಸ್ತ್ರವಾಗಿತ್ತು. ಇ೦ಕಾಕುಲದ ಅಭಿಮಾನಿಗಳೆಲ್ಲ ಅಟಾಹುಲಪ್ಪಾನು ದಾಸೀಪುತ್ರನೆಂದು ತಿಳಿಯುತ್ತಿದ್ದರು. ಆದರೆ, ಕೇಪಾಕನು ಬಲಾಧ್ಯನೂ, ಅನಿಯಂತ್ರಿತ ೮ಾಜಪುರುಷನೂ ಆಗಿದ್ದರಿಂದ ಅವನು ಮಾಡಿದ್ದೆ ಕಾರಣವು, ಕಟ್ಟಿದ್ದೇ ತೋರಣವು ಎಂಬ ಶಕ್ತಿಯು ಅವನಲ್ಲಿತ್ತು. ಮರಣ ಸಮಯದಲ್ಲಿ ರಾಜನು ತನ್ನ ರಾಜ್ಯದಲ್ಲಿ ಎರಡು ವಿಭಾಗಗಳನ್ನು ಮಾಡಿ, ಹೌಸಕಾರನ ಕುಝ್ಕೋ ಪಟ್ಟಣದಲ್ಲಿದ್ದು ದಕ್ಷಿಣ ಸೀಮೆಯ ರಾಜ್ಯವನ್ನಾಳಬೇಕೆಂತಲೂ ತಾನು ಹೊಸದಾಗಿ ಗೆದ್ದ ಕ್ವಿಟಿ ಪ್ರಾಂತದ ಮೇಲೂ ಉರ ಸೀಮೆಯ ಪ್ರದೇಶದ ಮೇಲೂ ಅಟಾಹುಲಪ್ಪಾನ ರಾಜ್ಯವನ್ನು ಮಾಡಬೇಕೆಂತಲೂ ಇವನು ನಿರ್ಣಯಿಸಿದನು. ಈ ಪಾಕನ ಮರಣದ ನಂತರ ಐದು ವರ್ಷಗಳವರೆಗೆ ಈ ಉಭಯ ಬಂಧುಗಳು ತಮ್ಮ ತಮ್ಮ ರಾಜ್ಯವನ್ನು ಚನ್ನಾಗಿ ಆಳುತ್ತಿದ್ದನು. ಆದರೆ, ಮಹತ್ವಾಕಾಂಕ್ಷಿಯ ಕರ್ತೃತ್ವಶಾಲಿಯ ಆದ ಟಾಪಲಪ್ಪಾನು ತನ್ನ ಪ್ರಾಂತದ ಸೀಮಾಂತರದ ಮೇಲಿದ್ದ ಜನರ ಮೇಲೆ ದಂಡೆತ್ತಿ ಹೋಗಿ ಅವರ ಮೇಲೆ ತನ್ನ ಅಧಿಕಾರವನ್ನು ನಡಿಸಹತ್ತಿದನು, ಹೌಸಕಾರನ ಪ್ರಾಂತದ ಮೇಲೆ ಅವನೇನು ದಂಡೆತ್ತಿ ಹೋಗಿದ್ದಿಲ್ಲ. ಆದರೆ, ಅಟಾಹುಲಪ್ಪಾನು ದಾಸೀಪುತ್ರನ ತನಗಿಂತಲೂ ಚಿಕ್ಕವನೂ ಆಗಿರಲು, ತನಗಿಂತ ಹೆಚ್ಚು ಬಲಾಡ್ಯನಾಗಬೇಕೆ೦ಬ ಮಾತು ಹೌಸಕಾರನಿಗೆ ರುಚಿಸಲಿಲ್ಲ. ಈ ನಿಮಿತ್ತದಿಂದ ಆ ಉಭಯ ಬಂಧುಗಳಲ್ಲಿ ವಿತುಷ್ಟವುಂಟಾಗಿ ಕೊನೆಗೆ ಅದು ವಿಕೋಪವನ್ನು ಹೊಂದಿ ಬಂಧುಬಂಧುಗಳಲ್ಲಿ ಯುದ್ಧವು ಪ್ರಾರಂಭವಾಯಿತು. ಈ ಯುದ್ಧದಲ್ಲಿ ಹೌಸಕಾರನ ಪರಾಜಯವಾಗಿ, ಅವನು ತನ್ನ ತಮ್ಮನ ಬಂದಿವಾನನಾದನು, ಆಚಾಹುಲಪ್ಪಾನು ತನ್ನ ಅಣ್ಣನ ಇಂಕಾ ಸರದಾರರನ್ನೂ, ಅವರ ಕುಟುಂಬದೊಳಗಿನ ಜನರನ್ನೂ, ಹೌಸಕಾರನ ಅಂತಃಪುರದೊಳಗಿನ ಸ್ತ್ರೀಯರನ್ನೂ, ಬಾಲಕರನ್ನೂ ಕೂಡ ಕೊಂದುಹಾಕಿದನು, ಹಿಂದೆ ಮುಂದೆ ಹೌಸಕಾರನ ವತಿಯಿಂದ ರಾಜ್ಯಕ್ಕೆ ಯಾರಾದರೂ ತಾವು ಬಾಧ್ಯಸ್ಥರೆಂದು ಬಂದಾರೆಂಬ ಸಂಶಯದಿಂದ ಅಟಾಹುಲಫ್ಘಾನು ತನ್ನ ತಂದೆಯ ಹಾಗೂ ಅಣ್ಣನ ವಂಶಗಳನ್ನು ನಿರ್ಮಲವಾಗಿ ಛೇದಿಸಿ ತನ್ನ ಮಾರ್ಗವನ್ನು ನಿಷ್ಕಂಟಕವಾಗಿ ಮಾಡಿಕೊಂಡನೆಂದು ಸ್ಪಾನಿಶ ಇತಿಹಾಸಕಾರರು ಹೇಳುತ್ತಾರೆ. ಈ ರೀತಿಯಾಗಿ ತನ್ನ ಅಣ್ಣನನ್ನು ಪಾದಾ ಕ್ರಾಂತ ಮಾಡಿ, ಅವನ ರಾಜ್ಯವನ್ನು ಅಪಹರಿಸಿ, ಅಟಾಹುಲಪ್ಪಾನು ಸೇರೂದೇಶದ ಮೇಲೆ ತನ್ನ ಏಕಭ ಸಾಮ್ರಾಜ್ಯವನ್ನು ಸ್ಥಾಪಿಸುವಷ್ಟರಲ್ಲಿ ಪಿಝಾರೋನು ಸ್ಪಾನಿ ಸೈನ್ಯವನ್ನು ತೆಗೆದುಕೊಂಡು ಪೇರೂ ದೇಶದ ಮೇಲೆ ಸಾಗಿ ಹೋದನು. ಪೇರೂ ದೇಶದಲ್ಲಿ ಆಶುಭಸೂಚಕವಾದ ಅನೇಕ ಅಪಶಕುನಗಳಾಗಹತ್ತಿದವೆಂದು ಜನರು ಭಯಗ್ರಸ್ತರಾಗಿದ್ದರು. ವಿದ್ಯುತ್ ಶಕ್ತಿಗೆ ಸಮಾನವಾದ ಬಂದೂಕುಗಳೆಂಬ ವಿಲಕ್ಷಣವಾದ ಶಸ್ತ್ರಾಸ್ತ್ರಗಳನ್ನು ಧರಿಸಿದ ಅಶ್ವಾರೂಢರ ಸಮೇತನಾಗಿ ಪಿಝಾರೋನು ಟು೦ಬೇಝದಿಂದ ಹೊರಟು ಕುರ ಪಟ್ಟಣಾಭಿಮುಖವಾಗಿ ಬರುತ್ತಲಿದ್ದಾನೆಂಬ ಸುದ್ದಿಯು ಅಟಾಹುಲಪ್ಪಾನಿಗೆ ಮುಟ್ಟಿತು. ಆದರೆ, ಪಿಝಾರೋನಿಗೆ ಪ್ರತಿಬಂಧ ಮಾಡುವ ಯಾವ ಉಪಾಯವನ್ನೂ ಅವನು ಯೋಜಿಸಲಿಲ್ಲ. ಕಾಕ್ಸಮರ್ಕಾ ಹಾಗೂ ಪಿಝಾರೊ ಇವುಗಳ ಮಧ್ಯದಲ್ಲಿ ಅಂಡೀಜ ಪರ್ವತದ ಕೆಲವು ಸಾಲುಗಳಿದ್ದವು. ಈ ಪರ್ವತದ ಸಾಲುಗಳನ್ನು ಏರಿಳಿದು ಸಿರುತ್ತಾರೋನು ಕಾಕ್ಸಮುರ್ಕಾ ಸ್ಥಲವನ್ನು ಮುಟ್ಟತಕ್ಕವನಿದ್ದನು. ಪಿಝಾರೋನು ಗುಡ್ಡದೊಳಗಿನ ಬಿಕ್ಕಟ್ಟಿನ ಘಟ್ಟವನ್ನೇರಿ ಬರುವಾಗ ಅಟಾಹುಲಪ್ಪಾನ ಸೈನ್ಯದವರು ಅವನನ್ನು ನಿರೋಧಿಸಿದ್ದರೆ, ಇನ್ನೂರು ಸ್ಪಾನಿಆರ್ಡ ಶಿಪಾಯರನ್ನು ಗುಡ್ಡದಲ್ಲಿಯೇ ಮುಚ್ಚಿಬಿಡುವದು ಇಂಕಾ ಸೈನ್ಯಕ್ಕೆ ಶಕ್ಯವಾಗಿತ್ತು ಹೀಗೇನಲ್ಲ. ಸ್ಪಾನಿಶ ಆಶಾ ರೂಢರ ಕೈಯಲ್ಲಿದ್ದ ಬಂದೂಕಗಳ ಭೀತಿಯಿಂದಲೂ ಮತ್ತ್ಯಾವ ಕಾರಣದಿಂದಲೋ ಅಟಾಹುಲಪ್ಪಾನು ಪರ್ವತದ ಬಿಕ್ಕಟ್ಟಿನ ಕಂದರದಲ್ಲಿ ಪಿಝಾರೋನನ್ನ ಹಿಡಿದುಹಾಕುವ ಸುಲಭವಾದ ಯುಕ್ತಿಯನ್ನು ಕೂಡ ಯೋಜಿಸಲಿಲ್ಲ. ಪಿಝಾರೋನು ತಾನು ಹಿಡಿದುತಂದಿದ್ದ ಎಷ್ಟೋ ಇಂಡಿಯನ್ ರಲ್ಲಿ ಒಬ್ಬೊಬ್ಬರಿಗೆ ಸ್ಪಾನಿಶ ಭಾಷೆಯನ್ನು ಕಲಿಸಿ, ಆವರನ್ನು ದ್ವಿಭಾಷಿಗಳನ್ನಾಗಿ ಮಾಡಿದ್ದನು. ಆಟಾಹುಲಪ್ಪಾನು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಕಾಕ್ಸಮರ್ಕಾದಲ್ಲಿ ಶತ್ರುಗಳ ಕೂಡ ಯುದ್ಧ ಮಾಡುವದಕ್ಕಾಗಿ ಸಿದ್ಧನಾಗಿದ್ದಾನೆಂಬ ಸುದ್ದಿ ಯು ಪಿಝಾರೋನಿಗೆ ತಿಳಿಯಿತು. ಎಷ್ಟೇ ಉತ್ಕೃಷ್ಟವಾದ ಶಸ್ತ್ರಾಸ್ತ್ರಗಳಿದ್ದರೂ ಇನ್ನೂರು ಶಿಪಾಯರು ಒಟಾ ಹುಲಪ್ಪಾನ ೨೫-೩೦ ಸಾವಿರ ಸೈನ್ಯದ ಮುಂದೆ ನಿಲ್ಲುವದು ಅಸಾಧ್ಯವೆಂಬ ಮಾತು ಪಿಝಾರೋನು ಅರಿತವನಾದ್ದರಿಂದ, ಅವನು ತನ್ನಲ್ಲಿದ್ದ ಒಬ್ಬ ದ್ವಿಭಾಷಿಯನ್ನು ರಾಜನ ಹತ್ತಿರ ಕಳಿಸಿ, "ಸ್ಪಾನಿಶ ಜನರಾದ ನಾವು ನಮ್ಮ ಸ್ಪಾನಿಶಬಾದಶಹರ ಆಜ್ಞಾನುಸಾರವಾಗಿ ನಿಮ್ಮ ಮಿತ್ರತ್ವವನ್ನು ಸಂಪಾದಿಸುವದಕ್ಕಾಗಿ ಬಂದಿದ್ದೇವೆ. ನಮಗೆ ಯುದ್ಧ ಕಲೆಯು ಚನ್ನಾಗಿ ಅವಗತವಾಗಿರುವದರಿಂದ, ರಾಜರು ನಮ್ಮ ಉಪಯೋಗವನ್ನು ಮಾಡಿಕೊಳ್ಳುವದಾಗಿದ್ದರೆ ಮಾಡಿಕೊಳ್ಳಬೇಕು. ರಾಜರಿಗೆ ಯಾರಾದರೂ ಶತ್ರುಗಳಿದ್ದರೆ ಅವರ ಕೂಡ ಯುದ್ಧ ಮಾಡಲು ನಾವು ಸಿದ್ಧರಿದ್ದೇವೆ.” ಈ ಅಭಿಪ್ರಾಯದ ಸಂದೇಶವನ್ನು ದ್ವಿಭಾಷಿಯ ಮುಖಾಂತರವಾಗಿ ಅಟಾಹುಲಪ್ಪಾನಿಗೆ ಕಳಿಸಿದನು. ಈ ಸಂದೇಶಕ್ಕೆ ಅಟಾಹುಲಪ್ಪಾ ಬಾದಶಹನಾದರೂ ತನ್ನ ವಕೀಲನ ಮುಖಾ೦ತರವಾಗಿ ಪಿಝಾರೋನಿಗೆ ಈ ಮುಂದಿನ ಉತ್ತರವನ್ನು ಕಳುಹಿಸಿಕೊಟ್ಟನು. "ಪರಸ್ಥರಾದ ನಿಮ್ಮ ಸ್ಪಾನಿಆರ್ಡ ಜನರ ಪರಾಕ್ರಮವನ್ನೂ, ಕೀರ್ತಿಯನ್ನೂ ಕೇಳಿ ನಾವು ಬಹಳ ಸಂತುಷ್ಟರಾಗಿರುತ್ತೇವೆ. ನೀವು ಕಾಮರ್ಕಕ್ಕೆ ಬಂದು ನಮಗೆ ಎಂದು ದರ್ಶನವನ್ನು ಕೊಡುವಿರೆಂಬದನ್ನು ತಿಳಿಸಬೇಕು. ನಿಮ್ಮ ದರ್ಶನದ ಉತ್ತು ಕತೆಯು ನಮಗೆ ಬಹಳವಾಗಿದೆ. ತನ್ನ ಮಾರ್ಗದಲ್ಲಿ ಯಾವ ಪ್ರತಿಬಂಧ ನನ್ನ ತರದೆ, ರಾಜನು ಸೈನ್ಯಸಮೇತನಾದ ತನ್ನನ್ನು ಕಾಕ್ಸಮಕಾ೯ಕ್ಕೆ ಕರೆಯುತ್ತಾನೆಂಬ ಸುದ್ದಿಯನ್ನು ಕೇಳಿ ಪಿಝಾರೋನು ತುಸು ಗೊಂದಲದಲ್ಲಿ ಬಿದ್ದನು. ತಮ್ಮ ಚಿಕ್ಕ ಸೈನ್ಯವು ಗುಡ್ಡವನ್ನೇರಿ ದಣಿದು ಕಾಕೃಮರ್ಕಾ ಮುಟ್ಟಿದ ಕೂಡಲೆ, ತಮ್ಮ ಮೇಲೆ ೨೫-೩೦ ಸಾವಿರ ಸೈನ್ಯವನ್ನು ತೆಗೆದುಕೊಂಡು ಹಲ್ಲಾ ಮಾಡುವ ವಿಚಾರವು ರಾಜನದಾಗಿರಬಹುದೆಂದು ಪಿಝಾರೋನಿಗೆ ಸಂಶಯ ಉತ್ಪನ್ನವಾಯಿತು. ಆದರೆ, ಪಿಝಾರೋನು ಒಳ್ಳೆ ಎದೆಗಾರನಾದ ವೀರನಾದ್ದರಿಂದ ಕಾಮಕಾfದವರೆಗೆ ಹೋಗುವ ವಿಚಾರವನ್ನು ಗಟ್ಟಿ ಮಾಡಿದನು. ಪರ್ವತದೊಳಗಿನ ಘಟ್ಟದ ಮಾರ್ಗವನ್ನು ಇಂಕಾ ರಾಜರು ಚನ್ನಾಗಿ ಕಟ್ಟಿದ್ದರೂ ಕೆಲಕೆಲವು ಸ್ಥಳಗಳಲ್ಲಿ ಒಬ್ಬ ಮನುಷ್ಯನು ಮಾತ್ರ ಹೋಗುವಷ್ಟು ದಾರಿಯಿತ್ತು. ಒಂದು ಬದಿಗೆ ಗೋಡೆ ಕಟ್ಟಿದಂತೆ ಆಕಾಶಪ್ರಾಯವಾದ ಉಚ್ಚ ಪರ್ವತವು, ಮತ್ತೊಂದು ಬದಿಗೆ ಸಾವಿರಾರು ಫೂಟು ಆಳವಾದ ಕೊನ್ನಾರವು ! ಕುದುರೆ ಸವಾರರಿಗಂತೂ ಈ ಘಟ್ಟವನ್ನೇರುವದು ತೀರ ಕಷ್ಟಪ್ರದವಾಯಿತು. ಆದರೂ ಇಂಥ ಬಿಕ್ಕಟ್ಟಿನ ಗುಡ್ಡಗಾಡ ಪ್ರದೇಶದೊಳಗಿಂದ ಪಾರಾಗಿ ಯಥಾಕಾಲದಲ್ಲಿ ಪಿಝಾರೋನು, ಕಾಕ್ಸಮರ್ಕಾಕ್ಕೆ ಬಂದು ಮುಟ್ಟಿದನು. ಪಟ್ಟಣದ ಆಚೆಯ ಮಗ್ಗಲಿಗೆ ಒಂದು ಹಳ್ಳದ ದಂಡೆಗುಂಟ ಎಷ್ಟೋ ಮೈಲಗಳ ವರೆಗೆ ಇಂಕಾ ಜನರ ಸೈನ್ಯವು ಹಬ್ಬಿ ಕೊಂಡಿತ್ತು. ಉತ್ತಮೋತ್ತಮವಾದ ಡೇರೆಗಳ ಸಾಲುಗಳೇ ಸ್ಪಾನಿ ಆರ್ಡರ ದೃಷ್ಟಿಗೆ ಬಿದ್ದವು. ಈ ಸೈನ್ಯದ ವ್ಯವಸ್ಥೆಯನ್ನು ನೋಡಿ, ಇಂಥ ದೊಡ್ಡದಾದ ಸೈನ್ಯವು ನಮ್ಮ ಮೇಲೆ ಕಡಿದುಬಿದ್ದರೆ, ನಾವು ನುಚ್ಚು ನುರಿಯಾಗುವೆವೆಂಬ ಭೀತಿಯಾದರೂ ಸ್ಪಾನಿಆರ್ಡರಿಗೆ ಹುಟ್ಟಿತು. ಆದರೆ, ಪಿಝಾರೋನ ಕುದುರೆ ಸವಾರರು ಕಾಕೃಮರ್ಕಾ ಪಟ್ಟಣವನ್ನು ಮುಟ್ಟಿದರೂ ಆವರಿಗೆ ಯಾರಿಂದಲೂ ಯಾವ ತೊಂದರೆಯು ಉಂಟಾಗಲಿಲ್ಲ, ಪಿಝಾರೋನ ತಮ್ಮನಾದ ಹರ್ನ್ಯಾಂಡೋನು ಇಬ್ಬರು ಸವಾರರನ್ನು ತೆಗೆದುಕೊಂಡು, ಅಟಾಹುಲಪ್ಪಾನು ಇಳಿದುಕೊಂಡಿದ್ದ ತೋಟದಲ್ಲಿ ಹೋಗಿ ರಾಜನ ಎದುರು ನಿಂತನು. "ಆಮರ್ಯಾದಿತವಾದ ಸಮುದ್ರದ ಆಚೆಕಡೆಗಿರುವ ಸ್ಪೇನ ದೇಶದ ನಿವಾಸಸ್ಥರು ನಾವಾಗಿದ್ದು, ರಾಜನ ಸೈನ್ಯದಲ್ಲಿ ಸೇವೆಯನ್ನು ಮಾಡುವದು ನಮ್ಮ ಉದ್ದೇಶವಾಗಿದೆ; ಹಾಗೂ ನಮ್ಮ ಸದ್ಧರ್ಮದ, ಅಂದರೆ ಖ್ರಿಶ್ಚನ್ ಧರ್ಮದ ಪ್ರಸಾರವನ್ನು ಇಂಕಾ ರಾಜ್ಯದಲ್ಲಿ ಮಾಡುವದು ನಮ್ಮ ವಿಚಾರವಾಗಿದೆ. ಅದಕ್ಕಾಗಿ ಅಟಾಹುಲಪ್ಪಾನು ನಮ್ಮ ಸ್ಪಾನಿಕರ್ಡರ ನಾಯಕನಾದ ಪಿಝಾರೋನ ಬೆಟ್ಟಗೆ ಅವನು ತನ್ನ ಸೈನ್ಯ ಸಮೇತನಾಗಿ ತಳ ಊರಿದ ಸ್ಥಳಕ್ಕೆ ಬರಬೇಕು. ” ಹರ್ನ್ಯಾಂಡೋನ ಈ ಭಾಷಣಕ್ಕೆ ಇ೦ಕಾ ರಾಜನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನ ಹತ್ತಿರದಲ್ಲಿದ್ದ ಸರದಾರನೊಬ್ಬನು "ಒಳ್ಳೆದು ” ಎಂದು ಉತ್ತರವನ್ನು ಕೊಟ್ಟನು. ಉತ್ತರದಿಂದ ಸಮಾಧಾನವನ್ನು ಹೊಂದದೆ, ಇದಕ್ಕೂ ಹೆಚ್ಚು ಸ್ಪಷ್ಟವಾದ ಉತ್ತರವು ಬೇಕೆಂಬ ವಿನಂತಿಯನ್ನು ಹರ್ದ್ಯಾಂಡೋನು ಮಾಡಿಕೊಂಡನು. "ಈ ಹೊತ್ತು ನನ್ನ ಉಪವಾಸದ ದಿವಸವಾಗಿದೆ; ನಾಳಿನ ದಿವಸ ನಿಮ್ಮ ಕಪ್ತಾನನ ಬೆಟ್ಟಗೆ ಬರುವವು; ಅಲ್ಲಿಯವರೆಗೆ ನೀವು ಕಾಕ್ಸಮರ್ಕಾ ಪಟ್ಟಣದೊಳಗಿನ ಸಾರ್ವಜನಿಕ ಮಂದಿರದಲ್ಲಿ ವಿಶ್ರಮಿಸಿಕೊಳ್ಳಬೇಕು.” ಇದನ್ನು ಕೇಳಿಕೊಂಡು ಹರ್ನ್ಯಾಂಡೋನು ತನ್ನ ಅಣ್ಣನ ಹತ್ತರ ಹೋದನು. ಅಟಾಹುಲಪ್ಪಾನು ತನ್ನ ಭೆಟ್ಟಿಗೆ ಬರುವನೆಂಬ ಸುದ್ದಿಯನ್ನು ಕೇಳಿ ಪಿಝಾರೋನಿಗೆ ಆನಂದವಾಯಿತು. ಅಟಾಹುಲಪ್ಪಾನು ಭೆಟ್ಟಿಗೆ ಬಂದ ಕೂಡಲೆ, ಅವನನ್ನು ಆಕಸ್ಮಿಕವಾಗಿ ಸೆರೆಯಲ್ಲಿ ಹಿಡಿಯತಕ್ಕದೆಂಬ ವಿಶ್ವಾಸಘಾತದ ಯೋಚನೆಯನ್ನು ಅವನು ಯೋಜಿಸಿದನು. ಮೆಕ್ಸಿಕೋದೊಳಗಿನ ಆರುಟೆಕ್ಕೆ ಜನರ ರಾಜನನ್ನು ತನ್ನ ದೇಶಬಾಂಧವನಾದ ಕೋರ್ಟೇರುನು ಹೀಗೆಯೇ ಸೆರೆಯಲ್ಲಿ ಹಿಡಿದು ಮೆಕ್ಸಿಕೊದ ರಾಜ್ಯವನ್ನು ಸಂಪಾದಿಸಿದ ಸಂಗತಿಯು ಪಿಝಾರೋನ ಧ್ಯಾನದಲ್ಲಿತ್ತು. ತನ್ನ ಯೋಚನೆಯನ್ನು ತನ್ನ ತಮ್ಮನಿಗೂ, ಮುಖ್ಯ ಮುಖ್ಯರಾದ ಸೇನಾನಿಗಳಿಗೂ ಅವನು ತಿಳಿಸಿದನು, ಅಟಾಹುಲಪ್ಪಾನು ತೀರ ಸ್ವಲ್ಪ ಸರದಾರರೊಂದಿಗೆ ತಮ್ಮ ಶಿಬಿರಕ್ಕೆ ಬರುವಂತೆ ಮಾಡಿ, ತಮ್ಮ ಸವಾರರನ್ನೂ ಸೈನ್ಯವನ್ನೂ ಶಿಬಿರದ ಸುತ್ತಲಿನ ಮಂದಿರದಲ್ಲಿ ಮುಚ್ಚಿಡತಕ್ಕದ್ದು; ಶಿಷ್ಟಾಚಾರದಂತೆ ಆಗತ ಸ್ವಾಗತ ಮಾಡುವದರಲ್ಲಿ ತಾನು ತೊಡಗಿದಾಗ, ವಿಶಿಷ್ಟ ಪ್ರಕಾರದ ಸೂಚನೆಯಾದ ಕೂಡಲೆ, ಕುದುರೆ ಸವಾರರು ಮುತ್ತಿಗೆಯನ್ನು ಹಾಕಿ ರಾಜನನ್ನು ಸೆರೆಯಲ್ಲಿ ಹಿಡಿಯುತಕ್ಕದ್ದೆಂಬ ಹಂಚಿಕೆಯನ್ನು ಪಿಝಾರೋನು ಹಾಕಿದನು. ವಿಶ್ವಾಸಘಾತವಾದೀತೆಂಬ ಸಂಶಯವು ಅಟಾಹುಲಪ್ಪಾನಿಗೆ ಬಂದಿತ್ತೆಂದು ತೋರುವದಿಲ್ಲ. ಯಾಕೆಂದರೆ, ಮೊದಲು ಗೊತ್ತಾದಂತೆ, ಮಾರನೆಯ ದಿವಸ ಅವನು ಒಂದು ಪಾಲಿಕೆಯಲ್ಲಿ ಕುಳಿತುಕೊಂಡು ಪಿಝಾರೋನ ಶಿಬಿರಕ್ಕೆ ಬಂದನು. ಅವನ ಸಂಗಡ ಅನೇಕ ಸರದಾರದರೂ ಇದ್ದರು. ಆವನ ಸೈನ್ಯವು ತುಸು ಅ೦ತರದ ಮೇಲೆ ಬೀದಿಬೀದಿಗಳಲ್ಲಿ ನಿಂತಿತ್ತು. ಅಟಾಹುಲಪ್ಪಾನ ಪಾಲಿಕೆಯು ಶಿಬಿರದಲ್ಲಿ ಬಂದಕೂಡಲೆ? ಪಿರುಾರೋನ ಸೈನ್ಯದ ಕೂಡ ಬಂದಿದ್ದ ಪ್ರಾಯರ ನಾಲವರ್ದ ಎಂಬ ಪಾದ್ರಿಯು ಮುಂದಾಗಿ, "ನಾವು, ಪೃಥ್ವಿಯ ಮೇಲೆ ಪರಮೇಶ್ವರನ ಪ್ರತಿನಿಧಿಯಾದ ಪೋರನ ಹಾಗೂ ಸ್ಪೇನದ ಬಾದಶಹನಾದ ಐದನೇ ಚಾರ್ಲಸನ ದೂತರಾಗಿದ್ದೇವೆ. ಪೋಪನ ಧರ್ಮವಾಗಿದ್ದ ಬ್ರಿಶ್ಚಾನಿಟಿಯನ್ನೂ, ಸ್ಪೇನದ ಸಾರ್ವಭೌಮ ಚಾರ್ಲಸನ ವರ್ಚಸ್ವವನ್ನೂ ನೀವು ಒಪ್ಪಿಕೊಳ್ಳತಕ್ಕದ್ದೆ"೦ದು ದ್ವಿಭಾಷಿಯ ಮುಖಾಂತರವಾಗಿ ನಿವೇದಿಸಿದ ಉದ್ದಾಮತನದ ವಿನಂತಿಯನ್ನು ಕೇಳಿಕೊಂಡು, ರಾಜನ ಮುದ್ರೆಯು ಕ್ರೋಧದಿಂದಲೂ, ಸಂತಾಪದಿಂದಲೂ ಆರಕ್ತವಾಯಿತು. ನಮ್ಮ ದೇಶದ ಧರ್ಮವು ನಮಗೆ ವಂದನೀಯವಾಗಿದೆ, ನಮ್ಮ ಪರಮೇಶ್ವರನಾದ ಸೂರ್ಯನಿಗೂ, ಶ್ರೇಷ್ಠನಾದ ಮತ್ತೊಬ್ಬ ದೇವರು ಇರುವನೆಂದು ನಾವು ಮನ್ನಿಸುವದಿಲ್ಲ. ನಾನು ಪೇರೂ ದೇಶದ ಬಲಾಡ್ಯನಾದ ಸಾರ್ವಭೌಮನಿದ್ದು, ಸ್ಪೇನದ ರಾಜನ ವರ್ಚಸ್ಸನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ” ರಾಜನು ಈ ಅರ್ಥದ ಉತ್ತರವನ್ನು ದ್ವಿಭಾಷಿಯ ಮುಖಾಂತರವಾಗಿ ಪಾದ್ರಿಗೆ ಕೊಟ್ಟನು. ನಿಮ್ಮ ಪೋಪನ ಧರ್ಮವು ಶ್ರೇಷ್ಠವಾಗಿದೆಂಬುದಕ್ಕೆ ಯಾವ ಪ್ರಮಾಣವೆಂದು ರಾಜನು ವಾಲವರ್ದನಿಗೆ ಪ್ರಶ್ನವನ್ನು ಮಾಡಿದನು. ಆಗ್ಗೆ ಫಾಯರನ ಬಾಯಬಲದ ಗ್ರಂಥವನ್ನು ಮುಂದೆಮಾಡಿದನು. ಬಾಯಬಲದ ಈ ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡು ಅಟಾಹುಲಪ್ಪಾನು ಅದನ್ನು ಬಿರಕಾಸಿ ಒಗೆದನು. “ಪರಸ್ಟರಾದ ನೀವು ನನ್ನ ದೇಶದಲ್ಲಿ ಬಂದು, ಇಲ್ಲದ ಕಾರಭಾರವನ್ನು ನಡೆಸಿರುವಿರಿ, ಇದರ ವಿಚಾರಣೆಯನ್ನು ಮಾಡುವದರ ಸಲುವಾಗಿ ನಾನು ಬಂದಿದ್ದೇನೆ.” ಇದನ್ನು ಕೇಳಿ ಫ್ರಾಯರ ನಾಲವರ್ದನು ರೇಗಿಸಿದ್ದು, ಪಿಝಾರೋನನ್ನುದ್ದೇಶಿಸಿ ಅಂದದ್ದು, "ಈ ಉದ್ದಾಮ ರಾಜನು ನಮ್ಮ ಧರ್ಮ ಪುಸ್ತಕವನ್ನು ಭೂಮಿಯ ಮೇಲೆ ಬರಕಾಸಿ ಒಗೆದು, ನಮ್ಮ ಧರ್ಮದ ಆಪಮಾನವನ್ನು ಮಾಡಿದ್ದಾನೆ. ಇವನ ಸಮಾಚಾರವನ್ನು ನೀವು ಈಗಲೇ ತೆಗೆದುಕೊಳ್ಳಬೇಕೆಂದು, ನಿಮ್ಮ ಧರ್ಮ ಗುರುವಾದ ನಾನು ನಿಮಗೆ ಆಜ್ಞಾಪಿಸುತ್ತೇನೆ.” ಫ್ರಾಯರನ ಈ ಉದ್ಗಾರಗಳನ್ನು ಕೇಳಿದ ಕೂಡಲೆ, ಪಿಝಾರೋರೆನು ತನ್ನ ಕೈಯಲ್ಲಿದ್ದ ನಿಶಾನಿಯಿಂದ ಸಂಜ್ಞೆಯನ್ನು ಮಾಡಿದನು. ಸಂಕೇತವಾದ ಕೂಡಲೆ, ಶಿಬಿರದ ಸುತ್ತಲೂ ಗುಪ್ತವಾಗಿದ್ದ ಸೈನ್ಯವು ಕೂಡಲೆ ಓಡಿಬಂದು ರಾಜನ ಪಾಲಕಿಗೆ ಮುತ್ತಿಗೆ ಹಾಕಿತು, ಪತ್ರದಲ್ಲಿದ್ದ ಪೇರೂವ್ಹಿಯನ ಜನರ ಮೇಲೆ ಕುಡುರೆಗಳನ್ನು ಹಾಕಿ ಬರ್ಚಿಗಳಿಂದ ಚುಚ್ಚಿ ಅವರನ್ನು ದೂರ ಓಡಿಸಿತು. ತಮ್ಮ ರಾಜನನ್ನು ತಮ್ಮ ಸಮಕ್ಷದಲ್ಲಿ ಸೆರೆಹಿಡಿಯುವದನ್ನು ನೋಡಲಾರದೆ ಇಂಕಾ ಸೈನ್ಯದವರು ಧಾವಿಸಿ ಬರಲು ಸ್ಪಾನಿಶರು ಅವರ ಮೇಲೆ ಗುಂಡುಗಳ ಮಳೆಯನ್ನು ಸುರುವಿ ಸಾವಿರಾರು ಜನರನ್ನು ನೆಲಕ್ಕೆ ಉರುಳಿಸಿದರು. ಅಟಾಹುಲಪ್ಪಾನನ್ನಾದರೂ ಯಮಸದನಕ್ಕೆ ಕಳಿಸಬೇಕೆಂದು ಕೆಲವು ಸ್ಪಾನಿಆರ್ಡರು ಯೋಚಿಸಿದರು. ಆದರೆ, ಅವನನ್ನು ಕೊಲ್ಲುವದರಕಿಂತ ಜೀವಂತ ಹಿಡಿದು ಸೆರೆಯಲ್ಲಿಚುವದೇ ವಿಶೇಷವಾಗಿ ಲಾಭದಾಯಕವಾದದ್ದೆಂದು ಪಿಝಾರೋನು ಹೇಳಲು, ಆವನ ಅನುಯಾಯಿಗಳು ರಾಜನನ್ನು ಬಂಧಿಸಿ ಒಂದು ಕೊಠಡಿಯಲ್ಲಿ ಇಟ್ಟರು. ಶಿಬಿರದ ಸುತ್ತಲೂ ನೆರೆದ ಇಂಕಾ ಜನರ ಮೇಲೆ ಸಶಸ್ತ್ರ ಪ್ರಾಣಿಗಳಾದ ಸ್ವಾಸಿಆರ್ಡರು ಸಾಗಿಹೋಗಿ ಅವರಲ್ಲಿ ಕೆಲವರನ್ನು ಕಡಿದು ತುಂಡರಿಸಿದರು; ಉಳಿದವರನ್ನು ಅವರ ಮೇಲೆ ಕುದುರೆಗಳನ್ನು ಹಾಕಿ ಓಡಿಸಿದರು, ಈ ರೀತಿಯಾಗಿ ಏರುತಾರೋನ ಯೋಚನೆಯು ಕೈಗೂಡಿತು. ಇಂಕಜನರ ಸಾರ್ವಭೌಮನಾದ ಅಟಾಹುಲಪ್ಪಾನು ದನಗಳನ್ನು ಕಾಯುವ ಅಕ್ಷರಶತ್ರುವಾದ, ಆದರೆ ಸಾಹಸಿಯಾದ ಸ್ಥಾನಿಆರ್ಡ ಮನುಷ್ಯನ ಬಂದಿವಾನನಾದನು. ! ಅಟಾಹುಲಪ್ಪಾನನ್ನು ಸೆರೆಹಿಡಿಯುವ ಗೊಂದಲದಲ್ಲಿ ನಾಲೈದು ಸಾವಿರ ತದ್ದೇಶೀಯರು ಕೊಲ್ಲಲ್ಪಟ್ಟರು. ಉಳಿದ ಸೈನ್ಯವು ಹೆದರಿ ಪಲಾಯನ ಸೂತ್ರವನ್ನು ಹೇಳಿತು, ಹಲವರನ್ನು ಸ್ಪಾನಿಆರ್ಡರು ಸೆರೆಯಲ್ಲಿ ಹಿಡಿದು ಅವರನ್ನು ತಮ್ಮ ದಾಸರನ್ನಾಗಿ ಮಾಡಿದರು. ಇಂಕಾನ ಸೈನ್ಯವು ಓಡಿಹೋದ ಬಳಿಕ, ಪಿಝಾರೋನು ತನ್ನ ಸೈನ್ಯದೊಳಗಿನ ಮನಸ್ಸು ಸವಾರರನ್ನು ಅಟಾಹುಲಪ್ಪಾನು ಇಳಿದುಕೊಂಡಿದ್ದ ತೋಟದೊಳಗಿನ ಬಂಗಲೆಯನ್ನು ಸುಲಿದುಕೊಂಡು ಬರುವದಕ್ಕಾಗಿ ಕಳುಹಿಕೊಟ್ಟನು. ಈ ಸುಲಿಗೆಯಲ್ಲಿ ತಮ್ಮ ಕೈವಶವಾದ ಬೆಳ್ಳಿ ಬಂಗಾರದ ದೊಡ್ಡ ದೊಡ್ಡ ಪಾತ್ರೆಗಳನ್ನು ನೋಡಿ, ಸ್ಪ್ಯಾನಿಆರ್ಡರು ಬೆರಗಾದರು. ದೊಡ ದೊಡ್ಡ ಆಕಾರದ ಪಕ್ಷಗಳಾದರೂ ಈ ಸುಲಿಗೆಯಲ್ಲಿ ಸ್ನಾನಿಆರ್ಡರಿಗೆ ದೊರೆದವು. ಸಲಿಗೆಯಲ್ಲಿ ದೊರೆತ ಬಂಗಾರವನ್ನು ಪಿಝಾರೋನ ಅವನ ಅನುಯಾಯಿಗಳೂ ಮೇಲಿಂದ ಮೇಲೆ ತೂಕ ಮಾಡಿ ನೋಡುವದನ್ನು ಆಟಾಹುಪ್ಪಾನು ಕಂಡು, ಪರಸ್ಥರಾದ ಈ ಆರ್ಡರ ಮಲದೇಶವು ದರಿದ್ರವಾಗಿರಬಹುದೆಂತಲೂ ಈ ಜನರು ಬಂಗಾರವನ್ನು ನೋಡಿರಬಹುದಾಗಿಲ್ಲೆಂತಲೂ ಅವನು ತರ್ಕಿಸಿದನು. ಅಪರಿಮಿತವಾದ ಬಂಗಾರದ ಆಮಿಷವನ್ನು ಇವರಿಗೆ ತೋರಿಸಿದರೆ, ಇವರು ತನ್ನ ಮುಕ್ತತೆಯನ್ನು ಮಾಡಬಹುದೆಂಬ ಅನುಮಾನವನ್ನು ಮಾಡಿ, ಅವನು ಪಿಝಾರೋನ ಹತ್ತಿರ ಹೋಗಿ ಅ೦ದದ್ದು : "ಸಲಿಗೆಯಲ್ಲಿ ದೊರೆತ ಅಲ್ಪ ಬಂಗಾರದಿಂದಲೇ ನೀವು ಆಶ್ಚರ್ಯಚಕಿತರಾದದ್ದನ್ನು ನೋಡಿ, ನನಗೆ ಚಮತ್ಕಾರವೆನಿಸುತ್ತದೆ. ನಾವು ಕುಳಿತಿರುವ ಕೋಣೆಯ ತುಂಬ ಬಂಗಾರವನ್ನು ಕ್ಷಣಾರ್ಧದಲ್ಲಿ ನಾನು ನಿಮಗೆ ತಂದುಕೊಡುತ್ತೇನೆ ” ಈ ಸಂಗತಿಯು ಮೊಟ್ಟಮೊದಲು ಪಿಝಾರೋನಿಗೆ ನಿಜವಾದದ್ದೆಂದು ತೋರಲಿಲ್ಲ. ಅಟಾಹುಲಪ್ಪಾನು ಇಲ್ಲದ್ದೊಂದು ಹರಟೆಯನ್ನು ಕೊಚ್ಚುತ್ತಾನೆಂದು ಅವನು ಭಾವಿಸಿದನು. “ನೀವು ನನ್ನನ್ನು ಬಂಧ ಮುಕ್ತನನ್ನಾಗಿ ಮಾಡಿದರೆ, ಈ ಕೋಣೆಯ ತುಂಬ ಬಂಗಾರವನ್ನು ನಾನು ನಿಮಗೆ ತಂದುಕೊಡುವೆನೆ "೦ದು ಅಟಾಹುಲಪ್ಪಾನು ಆಗ್ರಹಪೂರ್ವಕವಾಗಿ ಮೇಲಿಂದಮೇಲೆ ಪಿಝಾರೋನಿಗೆ ಹೇಳಹತ್ತಿದನು. ಕೊನೆಗೆ ಅಟಾಹುಲ ಪ್ಲಾನು ೨೨ ಪೂಟು ಉದ್ದವಾದ ೧೭ ಫೂಟು ಅಗಲವಾದ ಹಾಗೂ ೯ ಫೂಟು ಎತ್ತರವಾದ ಕೋಣೆಯನ್ನು ಬಂಗಾರದಿಂದ ತುಂಬಿ, ಬಂಗಾರವನ್ನು ಪಿಝಾರೋನಿಗೆ ಅರ್ಪಣ ಮಾಡಿದರೆ ಪಿಝಾರೋನು ಅವನನ್ನು ಬಂಧಮುಕ್ತ ಮಾಡಬೇಕೆಂದು ಗೊತ್ತಾಯಿತು. ಈ ಬಂಗಾರದ ಹೊರತು ಇಷ್ಟೇ ಬೆಳ್ಳಿಯನ್ನಾದರೂ ತಂದುಕೊಡುವೆನೆಂದು ಅಟಾಹುಲಪ್ಪಾನು ತಾನಾಗಿಯೇ ಸ್ವಸಂತೋಷದಿಂದ ಪಿಝಾರೋನಿಗೆ ಹೇಳಿದನು. ಅಟಾಹುಲಪ್ಪಾನು ಎರಡು ತಿಂಗಳದ ಅವಧಿಯಲ್ಲಿ ತನ್ನ ವಚನವನ್ನು ಪೂರ್ಣ ಮಾಡತಕ್ಕದ್ದೆಂದು ಮಾತಾದರೂ ಗೊತ್ತಾಗಿತ್ತು.

ಪರಕೀಯರಾದ ಸ್ಪಾನಿಆರ್ಡರು ಅಟಾಹುಲಪ್ಪಾ ನನ್ನು ಸೆರೆಹಿಡಿದಿದ್ದಾರೆಂಬ ವರ್ತಮಾನವು ಪರಾಭೂತನಾಗಿ ಪ್ರತಿ ಬಂಧದಲ್ಲಿದ್ದ ಹೌಸಕಾರನಿಗೆ ವಿದಿತವಾಯಿತು. ಆಗ್ಗೆ ಅವನು ಪಿಝಾರೋನಿಗೆ ಹೇಳಿ ಕಳಿಸಿದ್ದೇನಂದರೆ, “ನನ್ನ ಹಾಗೂ ನನ್ನ ತಮ್ಮನ ನಡುವೆ ರಾಜ್ಯದ ಸಂಬಂಧವಾಗಿ ವಿರೋಧವಿದೆ. ತಮ್ಮಂಥ ಬಲಾಡ್ಯರಾದ ಸರಸ್ಥರು ಅದರ ನಿರ್ಣಯವನ್ನು ಮಾಡಬೇಕು.” ಅಟಾಹುಲಪ್ಪಾನ ಮಲಅಣ್ಣನ ಈ ವಿನಂತಿಯು ಪಿಝಾರೋನಿಗೆ ಒಳ್ಳೆ ಹಿತಕರವಾಗಿ ಪರಿಣಮಿಸಿತು. ಯಾಕಂದರೆ, ಪೇರೂದ ಸಾಮ್ರಾಜ್ಯದ ಸ್ವಾಮಿತ್ವದ ಸಂಬಂಧವಾಗಿ ಉದ್ಭವಿಸಿದ ವಾದದ ನಿರ್ಣಯವನ್ನು ಮಾಡುವ ಕೆಲಸವೇ ತನ್ನ ಕಡೆಗೆ ಬಂದರೆ, ತನಗೆ ಅನುಕೂಲವಾದ ಹಸ್ತಕನೇ ಪಟ್ಟದ ಮೇಲೆ ಕುಳಿತು, ಪೇರೂದ ರಾಜ್ಯವು ಅನಾಯಾಸವಾಗಿಯೇ ಸ್ಪೇನದೇಶದ ಮಾಂಡಲಿಕ ಸಂಸ್ಥಾನನವಾಗುವದೆಂದು ಅವನು ಯೋಚಿಸಿದನು. ಹೌಸಕಾರ ಹಾಗೂ ಅಟಾಹುಲಪ್ಪಾ ಈ ಉಭಯ ರಾಜಪುರುಷರೂ ಆತ್ಮಘಾತಕರಾಗಿಯೂ, ರಾಜಕಾರಣದಲ್ಲಿ ತೀರ ಹೊಸಬರಾಗಿಯ ತೋರುತ್ತಾರೆ. ಅಟಾಹುಲಪ್ಪಾ ನು ಬಂಧಮುಕ್ತನಾಗುವದಕ್ಕಾಗಿ ಒಂದು ಕೋಣೆಯ ತುಂಬ ಬಂಗಾರವನ್ನು ಮಾತ್ರ ಕೊಡಲಿಕ್ಕೆ ಒಪ್ಪಿಕೊಂಡಿದ್ದಾನೆಂಬ ಸಂಗಶಿಯು ಹೌಸಕಾರನಿಗೆ ತಿಳಿದ ಕೂಡಲೆ, "ಕುಝ್ಕೋ ರಾಜಧಾನಿಯಲ್ಲಿ ಇಂಥ ಸಾವಿರಾರು ಕೋಣೆಗಳು ತುಂಬಿ ಉಳಿಯುವಷ್ಟು ಬಂಗಾರವಿದೆ. ನೀವು ನನ್ನನ್ನು ನನ್ನ ತಮ್ಮನ ಪ್ರತಿಬಂಧದಿಂದ ಮುಕ್ತ ಮಾಡಿ ಪೇರೂದ ಕಟ್ಟದ ಮೇಲೆ ಕೂಡಿಸಿದರೆ, ಅಟಾಹುಲಪ್ಪಾನು ಕೊಡಮಾಡಿದ ಬಂಗಾರದ ಹತ್ತು ಮಡಿಯಷ್ಟು ಬಂಗಾರವನ್ನು ನಾನು ಕೊಡುತ್ತೇನೆ ” ೦ದು ಹೌಸಕಾರನು ತನ್ನ ಚಾರರ ಮುಖಾತರವಾಗಿ ಸಿರು ಕಾರೋನಿಗೆ ತಿಳಿಸಿದನು. ಆಟಾಹುಲಪ್ಪಾನು ಪಿಝಾರೋನ ಶಿಬಿರದಲ್ಲಿ ಬಂದಿವಾನನಾಗಿದ್ದರೂ ದೊಡ್ಡ ದೊಡ್ಡ ಇಂಕಾ ಸರದಾರರಿಗೆ ಅವನ ಬೆಟ್ಟಗಾಗಿ ಬರುವದಕ್ಕೆ ಪ್ರತಿಬಂಧವಿದ್ದಿದ್ದಿಲ್ಲ. ಮೇಲಾಗಿ ಕೋಣೆತುಂಬ ಬಂಗಾರವನ್ನು ಕೊಡತಕ್ಕದ್ದು, ಅದಕ್ಕಾಗಿ ಯೋಗ್ಯ ಸ್ಥಳದಲ್ಲಿ ಚಾರರನ್ನು ಕಳಿಸಕತ್ಯವೆಂಬ ನೆವದಿಂದ ಅಟಾಹುಲಪ್ಪಾನು ತನ್ನ ಸೇವಕರನ್ನು ಮೇಲಿಂದ ಮೇಲೆ ತನ್ನ ಕಡೆಗೆ ಕರೆಸಿಕೊಳ್ಳುತ್ತಿದ್ದನು. ಇವರ ಮುಖಾಂತರವಾಗಿ ತನ್ನ ಮಲಅಣ್ಣನಾವ ಹೌಸಕಾರನು ಏರುತಾರೋನ ಕೂಡ ನಡಿಸಿದ ಗುಪ್ತ ಕಾರಸ್ಥಾನವು ಅಟಾಹುಲಪ್ಪಾನಿಗೆ ತಿಳಿದುಬಂದಿತ್ತು. ಪಿಝಾರೋ ನುಸುವರ್ಣದ ಆಶೆಗಾಗಿ ಹೌಸಕಾರನ ಪಕ್ಷವನ್ನು ಕಟ್ಟಿದರೆ, ತನಗೆ ಆಮರಣ ಬಂದಿವಾಸದಲ್ಲಿಯ ಇರಬೇಕಾಗುವದೆಂಬ ಭೀತಿಯು ಅಟಾಹುಲಸ್ಥಾನಿಗೆ ಹುಟ್ಟ ಹತ್ತಿತು. ಪಿಝಾರೋನಿಗೆ ಕೊಡಮಾಡಿದ ಸುವರ್ಣವನ್ನು ತರುವದಕ್ಕಾಗಿ ಕಳಿಸಿದ ಸೇವಕರ ಮುಖಾಂತರವಾಗಿ, ಅವನು ಕೆಲವು ಸಾಂಕೇತಿಕವಾದ ಸ೦ದೇಶಗಳನ್ನು ಕಳಿಸಿ, ತನ್ನ ಸಾಪತ್ನ ಅಣ್ಣನ ಕೊಲೆಮಾಡಿಸಿದನು. ಹೌಸಕಾರನನ್ನು ತಣ್ಣಗಿನ ನೀರಿನ ಸರೋವರದಲ್ಲಿ ಬಲಾತ್ಕಾರದಿಂದ ಮುಣುಗಿಸಿ, ಅಟಾಹುಲಪ್ಪಾನ ಪಕ್ಷದವರು ಅವನನ್ನು ಕೊಂದರು. “ ನೀರಿನಲ್ಲಿ ಮುಣುಗಿಸಿ ನನ್ನ ಶ್ವಾಸಗಳನ್ನು ನಿರೋಧಿಸಿ, ನನ್ನ ಪ್ರಾಣಗಳನ್ನು ತೆಗೆದುಕೊಳ್ಳುತ್ತಿರುವ ಕೂರಸಾದ, ನಿರ್ದಯನಾದ, ಬ೦ಧುಘಾತಕಿಯಾದ, ನರಪಶು ವಾದ ಅಟಾಹುಲಪ್ಪಾನ ಜೀವವನ್ನು ಪರಮಾವಧಿಯ ನಿರ್ದಯತನದಿಂದ ಪರಕೀಯರಾದ ಸ್ಪ್ಯಾನಿಆರ್ಡರ ತೆಗೆದುಕೊಳ್ಳದೆ ಇರಲಾರರೆ”೦ದು ನೀರಿನಲ್ಲಿ ಮುಣುಗಿ ಸಾಯುವದರ ಪೂರ್ವದಲ್ಲಿ ಹೌಸಕಾರನು ತನ್ನ ತಮ್ಮನನ್ನು ಶಾಪಿಸಿದನು, ರಾಜಮಂದಿರದೊಳಗಿನ ಸರೋವರದಲ್ಲಿ ಈ ಸುತ್ತಿರುವಾಗ ಕೈ ಸೋತು ಹೌಸಕಾರನು `ಆಕಸ್ಮಿಕವಾಗಿ ನೀರಿನಲ್ಲಿ ಮುಣುಗಿ ಸತ್ತನೆಂದು ಅಟಾಹುಲಪ್ಪಾನ ಸೇವಕ ಸುದ್ದಿಯನ್ನು ಹುಟ್ಟಿಸಿದರು. ಆದರೆ, ನಿಜವಾದ ಸಂಗತಿಯು ಪಿಝಾರೋನಿಗೆ ತಿಳಿದುಬಂದಿತು. ಪ್ರತಿ ಬಂಧದಲ್ಲಿರುವಾಗ, ಇಂಥ ಕೃಷ್ಣ ಕಾರಸ್ಥಾನಗಳನ್ನು ಮಾಡಿ ನಿಮ್ಮ ಅಣ್ಣನ ಕೊಲೆಯನ್ನು ಮಾಡಿಸಿದನೆಂಬ ಸಂಗತಿಯು ಅತ್ಯಂತ ನೀಚಶನದೂ, ರಾಕ್ಷಸವೃತ್ತಿಯ ಮನುಷ್ಯನಿಗೆ ಮಾತ್ರ ಶೋಭಿಸುವಂಥದೂ ಆಗಿದೆ"೦ದು ಪಿಝಾರೋನು ಅಟಾಹುಲಪ್ಪಾನ ನಿರ್ಭತೃನೆಯನ್ನು ಮಾಡಿದನು. ' ನಾನು ಇಲ್ಲಿ ನಿಮ್ಮ ಪ್ರತಿಬಂಧದಲ್ಲಿದ್ದೇನೆ. ನನ್ನ ಪಕ್ಷದಲ್ಲಿಬೇರೆ ಯಾರೋ ನನ್ನ ಅಪ್ಪಣೆಯ ಹೊರತು ಈ ಕಾವ್ಯವನ್ನು ಮಾಡಿದ್ದಾರೆ. ನನ್ನ ಅಣ್ಣನ ಕೊಲೆಯಲ್ಲಿ ನನ್ನ ಅಂಗವು ಯತ್ ಕಿಂಚಿತವಾದರೂ ಇಲ್ಲ” ಮುಂತಾದ ಕಾರಣ ಪರಂಪರೆಯನ್ನು ಅಟಾಹುಲಪ್ಪಾನು ಮುಂದೆ ಮಾಡಿದನು.

ಇಷ್ಟರಲ್ಲಿ ಅಟಾಹುಲಪ್ಪಾ ನು ಕೊಡಮಾಡಿದ ಬಂಗಾರವು ದೂರದೂರ ಸ್ಥಳಗಳಿಂದ ಬರಹತ್ತಿತು. ಇಂಕಾನ ರಾಜಮಂದಿರದಲ್ಲಿಯ ದೇವಾಲಯದಲ್ಲಿಯೂ ಉಪಕರಣಿಯ ಪಾತ್ರಗಳೂ, ಕೂಡುವ ಮಣೆಗಳೂ, ದೀಪಗಳನ್ನು ಹಚ್ಚುವ ಸಮೆಗಳೂ ಬಂಗಾದವಾಗಿದ್ದವು. ಇದಲ್ಲದೆ ಎಷ್ಟೋ ದೇವಾಲಯಗಳ ಗೋಡೆಗಳೂ, ನೆಲವೂ ಬ೦ಗಾರದ ದಪ್ಪಾದ ತಗಡುಗಳಿ೦ದ ಆಚ್ಛಾದಿತವಾಗಿದ್ದವು. ಬಂಗಾರದ ಇಂಥ ಅಪರಂಪಾರವಾದ ಸಂಚಯವು ಪೇರಾ ದೇಶದಲ್ಲಿದ್ದದ್ದರಿಂದ ಅಟಾಹುಲಪ್ಪಾನು ಕೊಡಮಾಡಿದ ಒಂದು ಕೋಣೆಯ ತುಂಬ ಬಂಗಾರವು ಆಗಲೇ ಕೂಡಿತು. ಅವನು ಸ್ವಸಂತೋಷದಿಂದ ತಾನಾಗಿಯೇ ಕೊಡುತ್ತೇನೆಂದು ಹೇಳಿದ ಬೆಳ್ಳಿಯಾದರೂ ಪಿಝಾರೋನ ವಶಕ್ಕೆ ಬಂದಿತು. ಗೊತ್ತು ಮಾಡಿದಂತೆ ನಿಮ್ಮ ಕಡಿಂದ ಬೆಳ್ಳಿ ಬಂಗಾರವು ಬಂದು ನನಗೆ ಮುಟ್ಟಿತೆಂದು ಪಿಝಾರೋನು ಅಟಾಹುಲಪ್ಪಾನಿಗೆ ಪಾವತಿ 'ಯ ನ್ನಾದರೂ ಕೊಟ್ಟನು. ಇನ್ನು ಮೇಲೆ ಪಿಝಾರೋನು ತನ್ನನ್ನು ಬಿಟ್ಟು ಕೊಡುವನೆಂದು ವಿಚಾರಮಥನಾದ ಅಟಾಹುಲಪ್ಪಾನು ಯೋಚಿಸಹತ್ತಿದನು. ಆದರೆ, ಸಿರುತಾರೋನು ಇಲ್ಲದ್ದೊಂದು ಹೊಸ ಹೊಸ ನೆವಗಳನ್ನು ಹೇಳಿ ಇಂದು ನಾಳೆ ಎನ್ನ ಹತ್ತಿದನು. ನಿಮ್ಮ ಬಂಗಾರದ ತೂಕವೇ ಆಗಿಲ್ಲೆಂದು ಕೆಲವು ದಿವಸಗಳು ಹೋದವು, ಕಡೆಗೆ ಬಂಗಾರದ ತೂಕವಾಗಿ ಅದನ್ನು ಕರಗಿಸಿ, ಅದರ ಇಟ್ಟಂಗೆಗಳು ಮಾಡಲ್ಪಟ್ಟವು. ಈ ಬಂಗಾರದ ಬೆಲೆಯು ೩೫ ಲಕ್ಷ ಗಿನಿಯಾಯಿತು. ೫| ಕೋಟಿ ರೂಪಾಯದ ಬಂಗಾರವನ್ನು ಪಿರುಲಾರೆನು ಎರಡು ತಿಂಗಳುಗಳಲ್ಲಿ ಸಂಪಾದಿಸಿದನು, ಪಿಝಾರೋನ ಸೈನ್ಯದಲ್ಲಿ ಎರಡು ಸಾವಿರ ಸ್ವಾನಿಆರ್ಡರು ಮಾತ್ರ ಇದ್ದರು. ಪ್ರತಿಯೊಬ್ಬ ಸ್ಪಾನಿಳರ್ಡನ ಪಾಲಿಗೆ ೨|| ಲಕ್ಷ ಬೆಲೆಯ ಬಂಗಾರವು ಬರಬಹುದಾಗಿತ್ತು. ಇಷ್ಟು ದ್ರವ್ಯ ದೊರೆದರೂ ಪಿಝಾರೋನು ಅಟಾಹುಲಪ್ಪಾನನ್ನು ಮುಕ್ತ ಮಾಡಲಿಲ್ಲ. "ನೀನು ನಿನ್ನ ಅಣ್ಣನ ಕೊಲೆಯನ್ನು ಮಾಡಿಸಿರುವಿ, ಸ್ಪಾನಿಶ ಜನರ ವಿರುದ್ಧವಾಗಿ ಬಂಡಾಯವನ್ನು ಮಾಡುವದಕ್ಕೆ ನೀನು ನಿನ್ನ ಪ್ರಜರನ್ನು ಉತ್ತೇಜಿಸುತ್ತಿರುವಿ, ಸಹಸ್ರಾವಧಿ ಸ್ತ್ರೀಯರನ್ನು ಮದುವೆ ಮಾಡಿಕೊಂಡು ವ್ಯಭಿಚಾರದಂಥ ಘೋರವಾದ ಪಾತಕಗಳನ್ನು ಮಾಡಿರುವಿ; ಈ ಎಲ್ಲ ಕಾರಣಗಳ ಸಲುವಾಗಿ ನಿನ್ನ ವಿಚಾರಣೆಯಾಗುವದು ಅಗತ್ಯವಿದೆ;' ಈ ಪ್ರಕಾರವಾಗಿ ಪಿಝಾರೋನೂ ಅವನ ಸೈನ್ಯದವರೂ ಅಟಾಹುಲಪ್ಪಾನನ್ನು ಅಪರಾಧಿಯನ್ನಾಗಿ ಎಣಿಸಹತ್ತಿದರು.

ಅಟಾಹುಲಪ್ಪಾನಿಗೆ ದೇಹಾಂತ ಶಿಕ್ಷೆಯು

ಅಟಾಹುಲಪ್ಪಾನು ತಂದುಕೊಟ್ಟ, ಬೆಳ್ಳಿ ಬಂಗಾರದ ವಿಭಾಗಣಿಯಲ್ಲಿ ಸ್ಪೇನದ ಅರಸನ ಭಾಗವೆಂದು ಒಂದು ಪಂಚಮಾಂಶವು ಒಂದು ಕಡೆಯಲ್ಲಿ ತೆಗೆದಿಡಲ್ಪಟ್ಟಿತು, ಪಿಝಾರೋ, ಅವನ ತಮ್ಮನಾದ ಹರ್ನಾಂಡೊ ಹಾಗೂ ಡಿ. ಸೋಟೂ ಈ ತ್ರಿವರ್ಗರು ಮುಖ್ಯರಾದ ಸೇನಾನಿಗಳೆಂದು ಅರ್ಧ ಭಾಗವನ್ನು ಎತ್ತಿದರು. ಇಂಕಾ ರಾಜಸ ಬಂಗಾರದ ಸಿಂಹಾಸನವು ಪಿಝಾರೋನಿಗೆ 'ಸ್ಪೆಶಲ್' ಪಾರಿತೋಷಕವೆಂದು ಕೊಡಲ್ಪಟ್ಟಿತು. ಸೈನ್ಯದೊಳಗಿನ ಪ್ರತಿಯೊಬ್ಬ ಶಿಪಾಯಿಗೆ ಇಪ್ಪತ್ತೈದರಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ದೊರೆದವು. ಅಟಾಹುಲಪ್ಪಾ ನಿಂದ ದೊರೆದ ದ್ರವ್ಯದ ವ್ಯವಸ್ಥೆಯು ಈ ರೀತಿಯಾಗಿ ಆದಬಳಿಕ, ಅಟಾಹುಲಪ್ಪಾನ ವ್ಯವಸ್ಥೆಯನ್ನು ಹೇಗೆ ಹಚ್ಚ ಬೇಕೆಂಬ ಏವಂಚನೆಯಲ್ಲಿ ಸ್ಪಾನಿಶ ಸೈನ್ಯವು ಬಿದ್ದಿತು. ಪೇರೂವ್ಹಿಯನ ರಾಷ್ಟ್ರದೊಳಗಿನ ಅಸಂಖ್ಯಾತರಾದ ಜನರು ಅವನ ಮುಕ್ತತೆಗಾಗಿ ತಮ್ಮ ಚಿಕ್ಕ ಸೈನ್ಯದ ಮೇಲೆ ಸಾಗಿ ಬಂದರೆ, ಅಟಾಹುಲಪ್ಪಾನು ತಮ್ಮ ಕೈಯೊಳಗಿಂದ ಪಾರಾಗುವದಲ್ಲದೆ, ಅನಾಯಾಸವಾಗಿ ದೊರೆದ ಬಂಗಾರವಾದರೂ ತಮ್ಮ ಕೈ ಬಿಟ್ಟು ಹೋಗಿ ನಿರರ್ಥಕವಾಗಿ ತಮ್ಮ ಜೀವಕ್ಕಾದರೂ ಅಪಾಯವಾದೀತೆಂಬ ಭೀತಿಯು ಸಿರು ಶಾರೋನ ಸೈನ್ಯಕ್ಕೆ ಹುಟ್ಟಹತ್ತಿ, ಆಟಾಹುಲಪ್ಪಾನ ವಿಷಯವಾಗಿ ನಮ್ಮನ್ನು ನಿರ್ಭಿತರನ್ನಾಗಿ ಮಾಡುವದಕ್ಕೆ ಯಾವದಾದರೊಂದು ಉಪಾಯವನ್ನು ಯೋಚಿಸಬೇಕೆಂದು ಸೈನ್ಯದವರು ಪಿಝಾರೋನ ಬೆನ್ನು ಹತ್ತಿದರು. ತನ್ನ ಬಂಗಾರವನ್ನು ಎತ್ತಿ ಹಾಕಿಯೂ ತನ್ನನ್ನು ಬಂಧಮುಕ್ತನನ್ನಾಗಿ ಮಾಡುವದಕ್ಕೆ ಒರು ಪಿಝಾರೋನು ಹಿಂದೆಮುಂದೆ ನೋಡುತ್ತಾನೆಂಬದನ್ನು ಕಂಡು ಅಟಾಹುಲಪ್ಪಾನು ತೀರ ಸಂತಾಪಗೊಂಡನು, ಆದರೆ, ಬಂದಿವಾಸದಲ್ಲಿ ಬಿದ್ದು ತೀರ ಬಲಹೀನನಾದ ರಾಜನ ಸಂತಾಪವನ್ನು ಕೇಳು ವವರಾರು ? "ನನ್ನ ಮುಕ್ತತೆಯು ಎಂದಾಗುವದು ? ವಿಶ್ವಾಸಘಾತವನ್ನು ಮಾಡಿ ನನ್ನನ್ನು ಆಮರಣ ಪ್ರತಿಬಂಧದಲ್ಲಿಯೇ ಇಡುವ ವಿಚಾರವನ್ನು ನೀವು ಮಾಡಿರುವಿರೇನು ?” ಮುಂತಾದ ಪ್ರಶ್ನೆಗಳ ಸೃಷ್ಟಿಯನ್ನೇ ಇಂಕಾ ರಾಜನು ಪಿಝಾರೋನ ಮೇಲೆ ಪ್ರತಿನಿತ್ಯ ಮಾಡಹತ್ತಲು, ಆವನ ಮುಕ್ತತೆಯಾಗುವದು ಒತ್ತಟ್ಟಿಗುಳಿದು ಅವನ ಕೈಕಾಲುಗಳು ಮಾತ್ರ ಶೃಂಖಲೆಗಳಿಂದ ಬದ್ಧವಾದವು. ಅಟಾಹುಲಪ್ಪಾನನ್ನು ವಿಲಂಬಮಾಡದೆ ಕೊಂದು ಹಾಕಬೇಕು; ಇಲ್ಲದಿದ್ದರೆ ಲಕ್ಷಾವಧಿ ಜನರು ನನ್ನ ಮೈ ಮೇಲೆ ಬಿದ್ದು ಸಂಪೂರ್ಣವಾಗಿ ನಮ್ಮ ನಾಶವನ್ನು ಮಾಡುವರೆಂದು ಒರು ಕಾರೋನ ಸೈನ್ಯದವರು ಅನ್ನಹತ್ತಿದರು. ಆಗ್ಗೆ ಅಟಾಹುಲಪ್ಪಾನ ಮೇಲೆ ಹನ್ನೆರಡು ಅಪರಾಧಗಳನ್ನು ಮಾಡಿದ ದೋಷವು ಹೊರಿಸಲ್ಪಟ್ಟು ಕೋರ್ಟಮಾರ್ಶಲ್ಲದ ಮುಂದೆ ಅವನ ವಿಚಾರಣೆ ಯಾಗತಕ್ಕದ್ದೆಂದು ಗೊತ್ತಾಯಿತು. ೧ ತನ್ನ ಅಣ್ಣನ ಕೊಲೆಮಾಡೋಣ, ೨. ಮೂರ್ತಿ ಪೂಜೆಯಂಥ ಪಾಪಕರ್ಮವನ್ನು ಆಚರಿಸೋಣ, ೩. ಅನೇಕ ಸ್ತ್ರೀಯರನ್ನು ವಿವಾಹ ಮಾಡಿಕೊಳ್ಳೋಣ, ಹಾಗೂ ವ್ಯಭಿಚಾರ ಮಾಡೋಣ, ೪ ತನ್ನ ಅಣ್ಣನನ್ನು ನಾಶಗೊಳಿಸುವದಕ್ಕಾಗಿ ಪೇರೂ ರಾಜ್ಯದೊಳಗಿನ ಸಂಪತ್ತಿಯ ದುರುಪಯೋಗ ಮಾಡಿ ರಾಷ್ಟ್ರದ ಹಣವನ್ನು ಹಾಳು ಮಾಡೋಣ, ೫. ಪಿರಾರೋನ ವಿರುದ್ಧ ವಾಗಿ ತನ್ನ ಜನರಿಗೆ ಉತ್ತೇಜನವನ್ನು ಕೊಡೋಣ ಇವೇ ಮುಂತಾದವು ಹನ್ನೆರಡು ದೊಷಗಳಲ್ಲಿ ಮುಖ್ಯ ಮುಖ್ಯವಾದ ದೋಷಗಳಾಗಿದ್ದವು. ಇವುಗಳಿಗೆ ಅಟಾಹುಲಪ್ಪಾನು ಕೊಟ್ಟ ಉತ್ತರವೆಂದರೆ, “ ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳುವದೂ, ಮೂರ್ತಿ ಪೂಜೆಯನ್ನು ಮಾಡುವದೂ ನನ್ನ ಧರ್ಮಕ್ಕೆ ಮಾನ್ಯವಾಗಿದೆ. ಆದರೆ ನ್ಯಾಯಾನ್ಯಾಯ ಮಾಡುವದಕ್ಕೆ ಪರಸ್ಥರಾದ ನಿಮಗೆ ಆಧಿಕಾರವಿಲ್ಲ. ನನ್ನ ಅಣ್ಣನ ಕೂಡ ನಾನು ಯುದ್ಧವನ್ನು ಮಾಡಿರಬಹುದು, ಇಲ್ಲವೆ ಪೇರೂ ದೇಶದೊಳಗಿನ ಸಂಪತ್ತಿಯನ್ನು ನಾನು ನನ್ನ ಮನಸ್ಸಿಗೆ ಬಂದತೆ ಹಾಳುಮಾಡಿರಬಹುದು, ಆದರೆ ಆ ಸಂಗತಿಗಳು ನನ್ನ ಅಧಿಕಾರಕ್ಕೆ ಒಳಪಟ್ಟಿದ್ದವು ಅದರ ಸಲುವಾಗಿ ನಾನು ನಿಮಗೆ ಉತ್ತರವನ್ನು ಕೊಡಬೇಕೆಂದು ನನಗೆ ಅವಶ್ಯ ತೋರುವದಿಲ್ಲ. ನಿಮ್ಮ ವಿರುದ್ಧವಾಗಿ ಬಂಡಾಯವನ್ನು ಎಬ್ಬಿಸುವದಕ್ಕೆ ನಾನು ನನ್ನ ಪ್ರಜರನ್ನು ಉತ್ತೇಜಿಸಿದನೆಂಬ ಮಾತು ಅಸಂಭವನೀಯವಾದದ್ದು ; ಯಾಕೆಂದರೆ, ನಾನು ನಿಮ್ಮ ಪ್ರತಿಬಂಧದಲ್ಲಿದ್ದು, ನನ್ನ ಕಡೆಗೆ ಬರುವ ನನ್ನ ಸರದಾರರ ಭಟ್ಟಿಯನ್ನು ನಾನು ನಿಮ್ಮ ದ್ವಿಭಾಷಿಯ ಸಮಕ್ಷದಲ್ಲಿ ತೆಗೆದುಕೊಳ್ಳುತ್ತಿರುವುದರಿಂದ, ಬಂಡಾಯ ಮಾಡುವದಕ್ಕೆ ಪ್ರೋತ್ಸಾಹಕವಾದ ಸಂದೇಶಗಳನ್ನು ನನ್ನ ಪ್ರಜರಿಗೆ ಕಳಿಸುವದು ನನಗೆ ಶಕ್ಯವಾದ ಮಾತಲ್ಲ.” ಅಟಾಹುಲಪ್ಪಾನ ಈ ಉತ್ತರವು ಸರಲವಾದದ್ದೂ, ಸ್ಪಷ್ಟವಾದದ್ದೂ ಇತ್ತು. ಆದರೆ, ನ್ಯಾಯದ ಸೋಗು ಮಾಡಿ, ಇಂಕಾ ದಾಜನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ನಿಶ್ಚಯವು ಸ್ಪಾನಿಶ ಲಷ್ಕರದಲ್ಲಿ ಮೊದಲೇ ಮಾಡಲ್ಪಟ್ಟಿದ್ದರಿಂದ, ಕೊರ್ಟಮಾರ್ಶಲವು ಆಟಾಹುಲಪ್ಪಾನು ದೋಷಿಯಂದು ನಿರ್ಣಯಿಸಿ, ಅವನನ್ನು ಕಂಬಕ್ಕೆ ಕಟ್ಟಿ, ಅವನ ಸುತ್ತಲೂ ಕಟ್ಟಿಗೆಯ ರಾಶಿಯನ್ನು ರಚಿಸಿ ಅದಕ್ಕೆ ಬೆಂಕಿಯನ್ನು ಹಚ್ಚಿ, ಅವನನ್ನು ಜೀವಂತ ಸುಟ್ಟು ಬಿಡಬೇಕೆಂಬ ಅಮಾನುಷವಾದ ಶಿಕ್ಷೆಯನ್ನು ವಿಧಿಸಿತು, ಸ್ಪಾನಿಶ್ ಸೈನ್ಯದಲ್ಲಿ ನ್ಯಾಯಪ್ರಿಯರೂ, ಸಹೃದಯ ಅಂತಃಕರಣದವರೂ ಆಗಿದ್ದ ಅಲ್ಪ ಸ್ವಲ್ಪ ಜನರು ಅಟಾಹುಲಪ್ಪಾನನ್ನು ಈ ರೀತಿಯಾಗಿ ನಿರ್ದಯತನದಿಂದಲೂ, ಅನ್ಯಾಯದಿಂದಲೂ ಸುಡುವದು ಅಯೋಗ್ಯವಾದದ್ದೆಂದು ಕೋರ್ಟ ಮಾರ್ಶಲಕ್ಕೆ ತಮ್ಮ ಲೇಖನ ವನ್ನು ಸಾದರಿಸಿದರು. ಆದರೆ, ಇಂಥ ನ್ಯಾಯಪ್ರಿಯರಾದ ಜನರು ಹತ್ತರದಲ್ಲಿ ಒಬ್ಬರಂತೆ ಅಲ್ಪರಾಗಿದ್ದರಿಂದ ಅವರ ಪ್ರತಿಪಾದನೆಯ ಉಪಯೋಗವು ತುಸುಮಟ್ಟಿಗಾದರೂ ಆಗಲಿಲ್ಲ. ಲಷ್ಕರೀ ಕೋರ್ಟು ತನ್ನ ನಿರ್ಣಯವನ್ನು ಹೇಳಿದ ದಿವಸವೇ ಸೂರ್ಯಾಸ್ತವಾದ ಬಳಿಕ ರಾತ್ರಿಯಲ್ಲಿ ಅಟಾಹುಲಪ್ಪಾನಿಗೆ ಅಗ್ನಿ ಸಂಸ್ಕಾರವನ್ನು ಮಾಡಬೇಕೆಂದಾದರೂ ವಿಧಿಸಿತ್ತು. ಆ ದಿವಸವೆಂದರೆ, ೨೯ನೇ ಆಗಸ್ಟ ಸನ್ ೧೫೩೩ನೇ ಇಸ್ವಿಯು, ಆ ದಿವಸ ರಾತ್ರಿಯಲ್ಲಿ ಅಟಾಹುಲಪ್ಪಾನು ಕಬ್ಬಿಣದ ಸರಪಣಿಯಿಂದ ವಧಸ್ತಂಭಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟನು; ಅವನ ಸುತ್ತಲೂ ಕಟ್ಟಿಗೆಯ ತುಂಡುಗಳು ರಚಿಸಲ್ಪಟ್ಟವು. ನಿನ್ನ ಮರಣಕಾಲದಲ್ಲಾದರೂ ನೀನು ಕ್ರಿಸ್ತಿ ಧರ್ಮದ ಬಾಸ್ತಿ ಸ್ಮಾ ತೆಗೆದುಕೊಂಡು ಆ ಧರ್ಮವನ್ನು ಸ್ವೀಕರಿಸೆಂದು ಫ್ರಾಯರವಾಲವರ್ದನು ಅವನಿಗೆ ಉಪದೇಶ ಮಾಡಹತ್ತಿದನು, ಕ್ರಿಸ್ತಿಯಾದರೆ, ನಿನ್ನನ್ನು ಸುಡುವದರ ಬದಲಾಗಿ, ಗಲಪಾಶದಿಂದ ನಿನ್ನ ಪ್ರಾಣವನ್ನು ತೆಗೆದು ಕೊಳ್ಳುವೆವೆಂಬ ಆಶ್ವಾಸನವಾದರೂ ಅವನಿಗೆ ಕೊಡಲ್ಪಟ್ಟಿತು. ಈ ಆಶ್ವಾಸನ ವಾದರೂ ನಿಜವಾದದ್ದೇನೆಂದು ದೈನ್ಯಬಟ್ಟು ಅವನು ಪಿಝಾರೋನಿಗೆ ಪ್ರಶ್ನವನ್ನು ಮಾಡಿದನು. ಅವನಿಂದ ಆಶ್ವಾಸನ ದೊರೆತ ಬಳಿಕ, ಅಗ್ನಿ ಯಿಂದ ಸುಟ್ಟು ಒದ್ದಾಡಿ ಭಸ್ಮಿಭೂತವಾಗುವದಕ್ಕಿಂತ ಗಲಪಾಶದಿಂದ ಪ್ರಾಣವನ್ನು ಬಿಡುವದು ಒಳಿತಾದದ್ದೆಂದು ಯೋಚಿಸಿ, ಆಟಾಹುಲಪ್ಪಾನು ತನ್ನ ಧರ್ಮವನ್ನು ಬಿಟ್ಟು ವಾಲವರ್ದನ ಹಸ್ತದಿಂದ ಬಾಪ್ತಿಸ್ಮೆಯನ್ನು ತೆಗೆದುಕೊಂಡನು. ಬಳಿಕ 'ಗರೋಟ' ಎಂಬ ಗಲಪಾಶದಿಂದ ಅವನ ಪ್ರಾಣವು ತೆಗೆದುಕೊಳ್ಳಲ್ಪಟ್ಟಿತು.

ಈ ರೀತಿಯಾಗಿ ಅಟಾಹುಲಪ್ಪಾನು ಗತಪ್ರಾಣನಾದ ಬಳಿಕ ಪಿಝಾರೋನು ಮುಂದೆ ಸನ್ ೧೫೩೩ನೇ ಇಸ್ವಿಯ ನವೆಂಬರ ತಿಂಗಳಿನ ೧೫ನೇ ತಾರೀಖಿನ ದಿವಸ ಕುರೋ ರಾಜಧಾನಿಯ ಮೇಲೆ ಸಾಗಹೊಗಿ ಆ ಪಟ್ಟಣವನ್ನು ಹಸ್ತಗತ ಮಾಡಿಕೊಂಡನು. ಆ ಕಾಲಕ್ಕೆ ಪೇರುವ್ಹಿಯಿನ ಜನರು ಸ್ಪಾನಿಆರ್ಡರಿಗೆ ಸ್ವಲ್ಪ ಪ್ರತಿಬಂಧವನ್ನು ಮಾಡಿದರು, ಆದರೆ, ಸಿಂಹನ ಉಡ್ಡಾಣಕ್ಕೆ ಕುರಿಗಳು ಪ್ರತಿಬಂಧ ಮಾಡಿದಂತೆ ಪೇರುವ್ಹಿಯನ್ ಜನರ ಈ ಪ್ರತಿಬಂಧವು ಹಾಸ್ಯಾಸ್ಪದವಾಯಿತು. ಈ ರಾಜಧಾನಿಯ ಜನಸಂಖ್ಯೆಯು ಎರಡು ಲಕ್ಷ ವಿದ್ದು, ಅಲ್ಲಿಯ ಸೂರ್ಯಮಂದಿರದೊಳಗಿನ ವೈಭವದ ವರ್ಣನೆಯನ್ನು ಓದಿದಂತೆ, ರಾಮಾಯಣದೊಳಗಿನ ರಾವಣನ ಲಂಕೆಯ ವರ್ಣನೆಯನ್ನು ಓದಿದಂತಾಗುತ್ತದೆ. ಇಂಥ ದುರ್ಬಲರಾದ ಜನರ ಕೈಯಲ್ಲಿ ಇಂಥ ವೈಭವ ಪೂರ್ಣವಾದ ದೇಶದ ಸ್ವಾಮಿತ್ವವನ್ನು ಕೊಡುವದರಲ್ಲಿ ಈಶ್ವರೀ ಸಂಕೇತವಾದರೂ ಯಾವದಾಗಿತ್ತೆಂಬದು ಆಶ್ಚರ್ಯಕಾರಕವಾಗಿದೆ, ಪೇರೂ ರಾಜ್ಯದ ಮೇಲೆ ಸ್ಪಾನಿಆರ್ಡರು ಮ್ಯಾಂಕೋ ಎಂಬ ಒಬ್ಬ ಇಂಕಾನನ್ನು ಸ್ಥಾಪಿಸಿ, ಸರ್ವಸತ್ತೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ಪರಸ್ಥರಾದ ಇನ್ನೂರು ಜನರು ಸಾವಿರಾರು ಮೈಲುಗಳ ಮೇಲಿಂದ ಬಂದು ಆರು ತಿಂಗಳಗಳಲ್ಲಿಯೇ ಪೇರೂದಂಥ ವಿಸ್ತಿರ್ಣ ರಾಜ್ಯದ ಸ್ವಾಮಿತ್ವವನ್ನು ಸಂಪಾದಿಸಿದ ಉದಾಹರಣವು ಜಗತ್ತಿನ ಇತಿಹಾಸದಲ್ಲಿ ಅನ್ಯತ್ರ ದೊರೆಯುವದು ದುರ್ಲಭವು.