ಪುಟ:ಹಳ್ಳಿಯ ಚಿತ್ರಗಳು.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು

೫೧

ಮೇಲಕ್ಕೆದ್ದಿತು. ಅರ್ಧ ಗಂಟೆ ಮುಗಿಯುವುದರೊಳಗಾಗಿ ತರಗಿನ ರಾಸಿಯಿದ್ದ ಸ್ಥಳದಲ್ಲಿ ಒಂದು ಅಡಿ ಬೂದಿ ಮಾತ್ರ ಉಳಿಯಿತು. ಆ ಉರಿಯ ಆನಂದದಲ್ಲಿ ಇದುವರೆಗೆ ಪ್ರಪಂಚವನ್ನೇ ಮರೆತಿದ್ದ ಜೋಡಿದಾರನಿಗೆ ಉರಿಯು ಆರಿದಮೇಲೆ ಜ್ಞಾನೋದಯವಾಯಿತು. ತನ್ನ ಸ್ನೇಹಿತರು ತನ್ನನ್ನು ಸುಮ್ಮನೆ ಬಿಡುವುದಿಲ್ಲವೆಂದು ಅವನು ಚೆನ್ನಾಗಿ ತಿಳಿದಿದ್ದನು. ಅವರೆಲ್ಲರ ಕಷ್ಟದ ಫಲವನ್ನೂ ತಾನೊಬ್ಬನೇ ಅನುಭವಿಸಿದುದಕ್ಕಾಗಿ ತನಗುಂಟಾಗಬಹುದಾದ ಫಲವು ಅವನಿಗೆ ಗೊತ್ತಿದ್ದಿತು. ಅವರ ಕೈಗೆ ತಾನು ಸಿಕ್ಕಿದರೆ ಮೈಮೂಳೆ ಮುರಿಯುವವರೆಗೆ ಏಟು ಬೀಳುವುದೆ೦ದೂ, ಕೋಪದ ಮೊದಲಿನ ಆವೇಶದಲ್ಲಿ ಪ್ರಾಣಾಪಾಯವೇ ಉಂಟಾದರೂ ಉಂಟಾಗಬಹುದೆಂದೂ ಅವನು ಹೆದರಿದನು. “ಇದಕ್ಕೆ ಮುಖ್ಯ ಉಪಾಯವೆಂದರೆ, ಈ ದಿವಸವೆಲ್ಲಾ ಶತ್ರುಗಳ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುವುದು. ಕೋಪವು ಶಮನವಾದ ಮೇಲೆ ಏನೂ ಆಗುವುದಿಲ್ಲ. ನೋಡಿಕೊಳ್ಳೋಣ. ಸದ್ಯಕ್ಕೆ ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂದು ಯೋಚಿಸಿದನು. ಆದರೆ ಹೋಗುವುದೆಲ್ಲಿಗೆ? ಎಂಬುದು ತೋರಲಿಲ್ಲ. ಯಾರ ಮನೆಯಲ್ಲಿ ಅವಿತುಕೊಂಡರೂ ವಿಷಯವು ಹೊರಕ್ಕೆ ಬಿದ್ದ ಮೇಲೆ ತನ್ನನ್ನು ಅವರು ಮುಚ್ಚಿಡುವರೆಂಬ ನಂಬಿಕೆ ಇವನಿಗೆ ಇರಲಿಲ್ಲ. ತಮ್ಮ ಮನೆಗೆ ಹೋಗಲು ತಂದೆಯವರ ಭಯ. ಈ ಯೋಚನೆಯಲ್ಲಿಯೆ ರಾತ್ರಿ ೮ ಗಂಟೆಯಾಗಿ ಹೋಯಿತು. ಜೋಡಿದಾರನು ಏನು ಮಾಡೋಣವೆಂದು ಯೋಚಿಸುತ್ತಾ ನದಿಯ ದಡಕ್ಕೆ ಬಂದನು. ತೀರದ ದೇವಸ್ಥಾನವು ನಿಶ್ಯಬ್ದವಾಗಿತ್ತು. ಇರುಳ ಹೆಣ್ಣು ಕರಿಯ ತೊಡವೆಯನ್ನು ತೊಟ್ಟು ಸಿಂಗಾರವಾಗಿದ್ದಳು. ಅವಳ ಕಪ್ಪಾದ ಅರಮನೆಯಲ್ಲಿ ಎಷ್ಟು ಜನ ದಾರಿತಪ್ಪಿರುವರೋ ಎಂದು ಅವನು ಯೋಚಿಸಿದನು. ಹೊಳೆಯ ಮಧ್ಯದಲ್ಲಿ ಮಚ್ಚೆಯ ಕಲ್ಲು ಎಂಬುದಾಗಿ ಒಂದು ಬಂಡೆಯಿದೆ. ಅದರ ಸುತ್ತಲೂ ಒಂದು ಮಡುವಿದೆ. ಅಲ್ಲಿ ನೀರು ಬಹಳ ಆಳ. ನೀರಿನೊಳಗೆ ಚಿನ್ನದ ರಥವು ಮುಳುಗಿದೆ ಎಂದು ಹೇಳುತ್ತಾರೆ. ಇಲ್ಲಿ ನಮ್ಮೂರ ರಥೋತ್ಸವದ ಕಾಲದಲ್ಲಿ ತೆಪ್ಪೋತ್ಸವ ನಡೆಯುತ್ತದೆ. ಈ ಬಂಡೆಗೆ ಈಜಿಬಿಟ್ಟರೆ ಸದ್ಯಕ್ಕೆ ಈ ರಾತ್ರಿ ನನಗೆ ಭಯವಿಲ್ಲವೆಂದುಕೊಂಡು ನಮ್ಮ ಜೋಡಿದಾರನು ಬಟ್ಟೆಗಳನ್ನೆಲ್ಲಾ