ಪುಟ:Mysore-University-Encyclopaedia-Vol-1-Part-1.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೈಸೂರು ವಿಶ್ವವಿದ್ಯಾನಿಲಯ ಕನ್ನಡ ವಿಶ್ವಕೋಶ ಸಂಪುಟ ಒಂದು


ಗಂಗ. ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಆಕಾರದ ಅತ್ಯಂತ ಹಳೆಯ ರೂಪವನ್ನು ಪ್ರಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮಲಿಪಿಯಿಂದ ಆಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು. ಅಶೋಕನ ಬ್ರಾಹ್ಮಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಅಶೋಕ ಪ್ರ.ಶ.ಪೂ. ಕಾಣುತ್ತದೆ. ಪ್ರ.ಶ.2ನೆಯ ಶತಮಾನದ 3ನೆಯ ಶತಮಾನ ಸಾತವಾಹನರ ಬ್ರಾಹ್ಮಲಿಪಿಯಲ್ಲಿ ಕಂಡುಬರುವ ಸಾತವಾಹನ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ 2ನೆಯ ಶತಮಾನ ಕೆಳತುದಿಗಳು ಬಾಗುತ್ತವೆ. ಮೇಲ್ಬಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರಶ. 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. 6ನೆಯ ಶತಮಾನ ಮುಂದಿನ ಶತಮಾನದ ಬಾದಾಮಿಚಳುಕ್ಯರ ಬಾದಾಮಿಗಳು ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ 6ನೆಯ ಶತಮಾನ ದಾರಿಮಾಡಿಕೊಡುತ್ತದೆ. ಪ್ರಶ.9ನೆಯ ಶತಮಾನದ ರಾಷ್ಟ್ರಕೂಟ 6ನೆಯ ಶತಮಾನ ರಾಷ್ಟ್ರಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ಕಲ್ಯಾಣಿಚಾಳುಕ್ಯ 11ನೆಯ ಶತಮಾನ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ. ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ e- ( ಹೊಯ್ಸಳ 13ನೆಯ ಶತಮಾನ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ! ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ವಿಜಯನಗರ ರೂಪವನ್ನು ಪ್ರಶ 18ನೆಯ ಶತಮಾನದಲ್ಲಿ 15ನೆಯ ಶತಮಾನ 1 ತಾಳುತ್ತದೆ. (ಎ.ವಿ.ಎನ್.) ಮೈಸೂರು ಅರಸರು 18ನೆಯ ಶತಮಾನ | ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಪ್ರಸ್ವ ಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಆಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ-ಮಧ್ಯ ಆಗೋಲ ಸ್ವರ. ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ ಅವಳು ನನ್ನ ಅತ್ತೆ; ದುಃಖದಿಂದ ನಾನು ಅತ್ತೆ'), ತಂದೆ (ಅವರು ನನ್ನ ತಂದೆ'; ಅಂಗಡಿಯಿಂದ 'ತಂದೆ') ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು. (ಎಚ್.ಎಂ.ಎನ್.) ಅಂಕಗಣಿತ :1. ನಾಗರಿಕತೆಯ ಬೆಳೆವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂರ್ವಿಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು. ಅಂಕಗಣಿತದ ತಳಹದಿಯಾಗಿ, ಪದಾರ್ಥಗಳನ್ನು ಎಣಿಸುವ ವಿಧಾನವಾಗಿ, ಸಂಖ್ಯೆಗಳು ಬೆಳೆದು ಬಂದು ಅವುಗಳನ್ನು ಕೂಡುವ, ಕಳೆಯುವ, ಗುಣಿಸುವ ಇತ್ಯಾದಿ ಪರಿಕರ್ಮಗಳು ಹುಟ್ಟಿಕೊಂಡವು. ಈಗ ವಿದ್ಯಾಭ್ಯಾಸದ ಆರಂಭದಲ್ಲಿಯೇ ಪ್ರಾಥಮಿಕ ಶಾಲೆಗೆ ಹೋಗುವ ಬಾಲಕ ಬಾಲಿಕೆಯರು ಇವನ್ನೆಲ್ಲಾ ಕಲಿಯುವುದರಿಂದ ಈ ಶಾಸ್ತ್ರವು ಕೇವಲ ಸ್ವಾಭಾವಿಕವೆಂದು ಸುಲಭವೆಂದು ಭಾವನೆ ಬರಬಹುದು. ಆದರೆ ಪ್ರಾಚೀನ ಕಾಲದಲ್ಲಿ ಸೂಕ್ತವಾದ ಒಂದು ಸಂಖ್ಯಾಕ್ರಮವಿಲ್ಲದೆ ಅನೇಕ ಜನಾಂಗಗಳು ಬಹಳ ಕಷ್ಟಪಟ್ಟುವು ಎಂಬುದು ಚಾರಿತ್ರಿಕ ವಿಷಯ. ಪ್ರಾಚೀನ ಗ್ರೀಕರು I, II, III, IV, V,......X, L, C ಮುಂತಾದ ಚಿಹ್ನೆಗಳಿಂದಲೇ ಸಂಕಲನ ಗುಣಾಕಾರಗಳನ್ನು ಮಾಡುತ್ತಿದ್ದರು ಎಂದೂ ಅದರ ದೆಸೆಯಿಂದ ಅವರು ಕೆಲವು ಗಣಿತ ಶಾಖೆಗಳಲ್ಲಿ ಬಹಳ ಹಿಂದೆ ಬಿದ್ದಿದ್ದರು ಎಂದೂ ತಿಳಿದುಬಂದಿದೆ. ಸೊನ್ನೆಯ ಕಲ್ಪನೆಯೂ ಅದರ ಚಿಹ್ನೆಯೂ ಅದರ ಉಪಯೋಗವೂ ಸ್ವಲ್ಪ ತಡವಾಗಿಯೇ ಬಂದವು. ಈಗ ಎಲ್ಲೆಲ್ಲಿಯೂ ಬಳಕೆಯಲ್ಲಿರುವ ಸಂಖ್ಯಾಕ್ರಮಕ್ಕೆ ದಾಶಮಿಕ ಸಂಖ್ಯಾಕ್ರಮ ಎಂದು ಹೆಸರು. ಯಾವ ಪೂರ್ಣಾಂಕ ಸಂಖ್ಯೆಯನ್ನೇ ಆಗಲಿ ಹತ್ತು ಚಿಹ್ನೆಗಳಿಂದ ಸ್ಪಷ್ಟ ಪಡಿಸಲಾಗುತ್ತದೆ. ಸೊನ್ನೆ, ಒಂದು, ಎರಡು, . . . .ಒಂಬತ್ತು ಎಂಬ ಹೆಸರುಗಳುಳ್ಳ ಈ ಚಿಹ್ನೆಗಳು ಇದೇ ಹೆಸರಿನ ಸಂಖ್ಯೆಗಳನ್ನು ಸೂಚಿಸುತ್ತವೆ. ಒಂದೇ ಚಿಹ್ನೆಯು ಅದರ ಸ್ಥಾನಕ್ಕನುಗುಣವಾಗಿ ಬೆಲೆಯಲ್ಲಿ ಮಾರ್ಪಾಡು ಹೊಂದುವುದೇ ಈ ಕ್ರಮದಲ್ಲಿರುವ ತಮ್ಮ 9999 ಎಂಬ ಸಂಖ್ಯೆಯಲ್ಲಿ 9 ಎಂಬ ಚಿಹ್ನೆಯು ಬಲದಿಂದ ಎಡಕ್ಕೆ ಕ್ರಮವಾಗಿ T-J-J !