ಪುಟ:ಕವಿಯ ಸೋಲು.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕವಿಯ ಸೋಲು


ಮಗುವನ್ನು ಎತ್ತುತ ತನ್ನೆದೆಗಪ್ಪುತ
ಚುಂಬಿಸಿ ಮುಖವನ್ನು ನೋಡುತ್ತ !
ನಗುವನು ಬೀರುತ ದೇವಗೆ ತೋರುತ
ಕುಂಬಿಸಿ ನಡೆದಳು ಮನೆಯತ್ತ.

“ಅಯ್ಯೋ ದೇವರೆ !" ಎನ್ನುತ ನಿಂದನು
ಎಂತೀ ಮಗುವನು ಸಲಹುವೆನು |
ಹುಯ್ಯಲು ಇಡುವಾ ಸಾಧ್ವಿಯ ಮಕ್ಕಳ
ಪಂತದಿ ಬೆಳೆಯಿಸಿ ನಡೆಸುವೆನು.

ಸೆರಗಿನ ಕೊನೆಯಲ್ಲಿ ಕಣ್ಣೀರೊರಸುತ
ಮತ್ತೊಬ್ಬಳು ಸಾಧ್ವೀಮಣಿಯು
ಕಿರುಬಾಗಿಲ ಬಳಿ ನಡುಗುತ ಬಂದಳು
ಕುತ್ತಿಗೆ ಹಿಡಿಯಿತು ದುಃಖವದು.

ನುಡಿಯಲು ಆರಳು, ನಿಲ್ಲಲು ಆರಳು
ಬಾಗಿಲ ಮೆಲ್ಲನೆ ನೆಮ್ಮಿದಳು |
ಇಡಿದಾ ದುಃಖದಿ “ದೇವರೆ !” ಎಂದಳು
ಸಾಗವು ಮುಂದಿನ ಮಾತುಗಳು.

ಮಾತಿಗೆ ಮೀರಿದ ದುಃಖವನೆಂತೋ
ತಡೆಯುತ ಸಾಧ್ವಿಯು ಸೆರಗಿನಲಿ |
ದಾತಗೆ ದೇವಗೆ ತುಂಬಿದ ಕಣ್ಣಲಿ
ನುಡಿದಳು ಮೆಲ್ಲನೆ ಬಿಕ್ಕುತಲಿ.

೫೫