ಪುಟ:ಕವಿಯ ಸೋಲು.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕವಿಯ ಸೋಲು

ಎಮ್ಮ ಹೆಸರೆತ್ತಿ ಹೋಲಿಸಬಹುದೆ? ಶಿವ ಶಿವಾ!
ನಮಗಾದ ಅಪಮಾನ ಮತ್ತಾರಿಗೂ ಬೇಡ,
ಮಾಡಬಹುದೇನಯ್ಯ? ಇದು ಧರ್ಮವೇನಯ್ಯ?
“ ಚಿನ್ನ ದಾನಾಡಿನಲಿ" ಹುಟ್ಟಿ ಬೆಳೆದವರಾವು
"ಗಂಧದಾ ಗುಡಿಯಲ್ಲಿ" ಹೆಜ್ಜೆಗಲಿತವರಾವು
"ಬೀಣೆಯಾ ಬೆಡಗಿನಲಿ" ಒಡನಾಡಿದವರಾವು
ಬ್ರಾಹ್ಮಣಗೆ ಲಕ್ಷ್ಮಿಯಂ ಒಲಿಸಿಕೊಟ್ಟವರಾವ
ಕಶ್ಯಪನು ದಾವೋಯಂ ತಂದೆತಾಯಿಗಳೆಮಗೆ
ನೆಲಸಿತ್ತು ನಮ್ಮಲ್ಲಿ ಬುದ್ದಿಯುಂ ಸತ್ಯವುಂ
ಸಂಗೀತ ಸಾಹಿತ್ಯ ಚೌಷಷ್ಠಿ ಕಲೆಗಳುಂ
ಲೋಕದೊಳು ನಮ್ಮಂತೆ ಪಂಡಿತರು ಇಲ್ಲಯ್ಯ,
ನಾರದಗೆ ಸಂಗೀತ ವಿದ್ಯೆಯಂ ಬೋಧಿಸಿದ
ಗಾನಬಂಧುವು ಎಮ್ಮ ಕುಲಜನಾಗಿಹನಯ್ಯ,
ವಿಷ್ಣುಶರ್ಮನ ಕಧೆಯು ಪಂಚತಂತ್ರದ ಕಥೆಯು
ಎಮ್ಮಿಂದ ಬೆಳೆಯಿತ್ತು, ಅದರ ಕಳೆಯೇರಿತ್ತು.
ಸಂಗೀತ ಸಾಹಿತ್ಯ ನಿಪುಣರಲ್ಲದೆ, ರಾಜ
ನೀತಿಯಲ್ಲಿ ಮುಂಚಿದವರಾರುಂಟು ಹೇಳಯ್ಯ,
ಮಲಯಕೇತುವಿನಯ್ಯ ಪರ್ವತಾಧಿಪನ ಬಳಿ
ಎಮ್ಮ ಹೆಸರವನೊಬ್ಬ ಮಂತ್ರಿತನ ಮಾಡಿದನು
ಶತ್ರುಮಂಡಲಕೆಲ್ಲ ಕಗ್ಗ ಪ್ಪು ಕವಿಸಿದನು
ಸಚಿವರಲಿ ಆತನೇ ನಚ್ಚಿಕೆಗೆ ಮೆಚ್ಚಿಕೆಗೆ
ಹೆಸರಾಗಿ ಗುಹೆಗೆ ಕತ್ತಲೆಯಂತೆ ಮೆರೆದನಯ್ಯ,
ಮತ್ತೆ ನೀಂ ಕೇಳಯ್ಯ, ಇರುಳಲ್ಲಿ ನಿಮರ
ತೋಟಿಗಳು ತಳವಾರರಲ್ಲಲ್ಲಿ ತೂಕಡಿಸಿ
ನಿದ್ದೆಗೈಯುತ್ತಿರಲು, ಕಳ್ಳಬಂಟರು ಬಂದು

೯೦