ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ವೈಜ್ಞಾನಿಕ ಸಮಾಜವಾದ ಯೋಜನೆಗಳನ್ನು ಜನಸಮುದಾಯ ಅತಿ ಉತ್ಸಾಹದಿಂದ ಕೈಗೊಂಡು ಅವಧಿಗೆ ಮುಂಚೆಯೇ ಯೋಜನೆಗಳನ್ನು ಮುಗಿಸಿತ್ತು. ನಿರುದ್ಯೋಗ ಮತ್ತು ಶೋಷಣೆ ಕಣ್ಮರೆಯಾಗಿದ್ದವು. ಜನಸಮುದಾಯಕ್ಕೆ ಉತ್ತಮ ಆರ್ಥಿಕ ಮಟ್ಟವೂ ದೇಶಕ್ಕೆ ಸ್ವಯಂ ಸಂಪೂರ್ಣತೆಯೂ ಬಂದಿದ್ದಿತು ಬಂಡವಾಳ ವರ್ಗಗಳ ಅವಶೇಷಗಳು ಇಲ್ಲವಾಗಿ ವರ್ಗರಹಿತ ಸಮಾಜ ಗೊಂಡಿದ್ದಿತು. 3 ರೂಪ ಎರಡನೆಯದಾಗಿ, ರಷ್ಯಾದ ಸುಮಾರು 17 ವಿವಿಧ ಜನಾಂಗಗಳಿಗೆ ದೊರೆಕಿದ ಸ್ವಯಂ ನಿರ್ಣಯದ ಹಕ್ಕು, ಸಾಂಸ್ಕೃತಿಕ ರಕ್ಷಣೆ ಮತ್ತು ಪ್ರೋತ್ಸಾಹ ಅಲ್ಪ ಸಂಖ್ಯಾತ ಜನಾಂಗಗಳ ಸಮಸ್ಯೆಯನ್ನು ಬಗೆಹರಿಸಿ ದ್ದಿತು, ಅವರುಗಳೆಲ್ಲರೂ ಸಂತುಷ್ಟರಾಗಿ ಸೋವಿಯಟ್ ರಾಷ್ಟ್ರದ ಸರ್ವ ತೋಮುಖದ ಅಭಿವೃದ್ಧಿಗೆ ಬೆಂಬಲ ನೀಡಿದ್ದರು. ಹಿಂದುಳಿದ ಜನಾಂಗಗಳು ಅತಿ ಶೀಘ್ರದಲ್ಲೇ ಮುಂದುವರಿದ ಜನಾಂಗಗಳ ಸಮಕ್ಕೆ ಬರತೊಡಗಿದ್ದವು. 0 ಮೂರನೆಯದಾಗಿ, ದೇಶದ ಆರ್ಥಿಕಾಭಿವೃದ್ಧಿಯ ಜೊತೆಜೊತೆಯಲ್ಲೇ ಜನಸಮುದಾಯದ ಯೋಗಕ್ಷೇಮಕ್ಕೆ ಕೊಟ್ಟ ಹೆಚ್ಚಿಗೆ ಗಮನದಿಂದ ಅನಕ್ಷರ ಸ್ಥರು ಅಕ್ಷರಸ್ಥರಾಗಿದ್ದರು. ಔದ್ಯೋಗಿಕ ಶಿಕ್ಷಣವನ್ನು ಜನಸಮುದಾಯದಲ್ಲಿ ಹರಡಲೂ ಹೆಚ್ಚು ಹೆಚ್ಚು ಮಂದಿ ಜ್ಞಾನಾರ್ಜನೆಮಾಡಲೂ, ಕೈಗೊಂಡ ಕ್ರಮಗಳಿಂದ ಔದ್ಯೋಗಿಕ ಶಿಕ್ಷಣ ಕೇಂದ್ರಗಳೂ ವಿಶ್ವವಿದ್ಯಾನಿಲಯಗಳೂ ಅಧಿಕ ಪ್ರಮಾಣದಲ್ಲಿ ಸ್ಥಾಪಿತವಾಗಿದ್ದವು. ಜನರ ಆರೋಗ್ಯ ಭಾಗ್ಯವನ್ನು ಕಾಪಾಡಲು ವಿಶ್ರಾಂತಿ ಗೃಹಗಳು, ವೇತನವುಳ್ಳ ವಿರಾಮ ಮತ್ತು ವೈದ್ಯ ಕೀಯ ಸೌಲಭ್ಯ ಇವುಗಳನ್ನು ಹೇರಳವಾಗಿ ಒದಗಿಸಲಾಗಿದ್ದಿತು. ಸ್ತ್ರೀಯರ ಸ್ಥಾನಮಾನಗಳನ್ನು ರಕ್ಷಿಸಲು, ಅವರು ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಪುರುಷರಂತೆ ಸಮಾನ ಭಾಗಿಗಳಾಗಲು ಮತ್ತು ನಾಡಿನ ಸುಸಂಸ್ಕೃ ತಾಯಂದಿರಾಗಲು ಹೆಚ್ಚು ಗಮನ ಕೊಡಲಾಗಿತ್ತು. ಜನರು ನಿತ್ಯ ಬಳಕೆಯ ಸ್ವತ್ತುಗಳನ್ನು (Personal belongings) ಖಾಸಗಿಯಾಗಿ ಹೊಂದಿ ರಲು, ಬರುವ ವರಮಾನವನ್ನು ತಮಗೆ ಇಷ್ಟಬಂದಂತೆ ಖರ್ಚುಮಾಡಲು ಅಥವಾ ಕೂಡಿಡಲು, ಅಥವಾ ನಿತ್ಯ ಬಯಕೆಯ ಸ್ವತ್ತುಗಳನ್ನೂ ಕೂಡಿಟ್ಟ ಹಣವನ್ನೂ ಮಕ್ಕಳು ಮರಿಗೆ ಬಿಟ್ಟು ಹೋಗಲು ಶಾಸನದ ರಕ್ಷಣೆ ಕೊಡ ಲಾಗಿತ್ತು.