ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯೂನಿಕ್

ವಿಕಿಸೋರ್ಸ್ದಿಂದ

ಮ್ಯೂನಿಕ್ ಪಶ್ಚಿಮ ಜರ್ಮನಿಯ ಮಹಾನಗರಗಳ ಪೈಕಿ ಮೂರನೆಯದು. ಬವೇರಿಯ ಪ್ರಾಂತದ ರಾಜಧಾನಿ. ಬರ್ಲಿನ್ನಿನ ನೈಋತ್ಯಕ್ಕೆ 499 ಕಿಮೀ ದೂರದಲ್ಲಿದೆ. ಜನರ ಜನಸಂಖ್ಯೆ 12,77,000 (1984). ಮ್ಯೂನಿಕ್‍ನ ಜರ್ಮನ್ ಹೆಸರು ಮ್ಯೂನ್‍ಷೆನ್. ಅಂದರೆ `ಸನ್ಯಾಸಿಗಳ ತಾಣ` ಎಂದು. 1918ರಲ್ಲಿ ರಚನೆಯಾದ ನಾಜಿû ಪಕ್ಷದಿಂದಾಗಿ ಮ್ಯೂನಿಕ್ ಎಲ್ಲರ ನೆನಪಿನಲ್ಲಿ ಉಳಿಯುವಂತಾಯಿತು. ನಗರದಲ್ಲಿ ಐಸರ್ ನದಿ ಹರಿಯುತ್ತದೆ. ಈ ನದಿಯ ಉದ್ದಕ್ಕೂ ಸಣ್ಣ ಸಣ್ಣ ಜಲಪಾತಗಳೂ ಚಿಕ್ಕ ಚಿಕ್ಕ ತೊರೆಗಳೂ ಸುಂದರ ಸರೋವರಗಳೂ ಉದ್ಯಾನಗಳೂ ಇದ್ದು, ನಗರ ಸೌಂದರ್ಯ ಹೆಚ್ಚಿದೆ.

1158ರಲ್ಲಿ ಡ್ಯೂಕ್ ಹೆನ್ರಿ ಎಂಬಾತನಿಂದ ಮ್ಯೂನಿಕ್ ಅಸ್ತಿತ್ವಕ್ಕೆ ಬಂತು. 1181ರಲ್ಲಿ ಸಾಮ್ರಾಟ ಫ್ರೆಡರಿಕ್ ಬಾರ್ಬರೋಸ್ಸ ಎಂಬಾತ ರಾಜಕುಮಾರ ಹೆನ್ರಿಯನ್ನು ಪದಚ್ಯುತಗೊಳಿಸಿ, ಮ್ಯೂನಿಕ್ ಆಡಳಿತವನ್ನು ಹೌಸ್ ಆಫ್ ವಿಟ್ಟಲ್ಸ್ ಬಕ್‍ನ ರಾಜಕುಮಾರನಿಗೆ ವಹಿಸಿದ. ವಿಟ್ಟಲ್ಸ್‍ಬಕ್ ರಾಜಸಂತತಿಯವರು ಮ್ಯೂನಿಕ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಒಂದನೆಯ ಮಹಾಯುದ್ಧದ ತನಕ ಸತತವಾಗಿ ಆಳಿದರು. 1919ರಿಂದ ಎರಡನೆಯ ಮಹಾಯುದ್ಧ ಕೊನೆಗೊಳ್ಳುವ ಅವಧಿಯ ತನಕದ ಮ್ಯೂನಿಕ್ಕಿನ ಇತಿಹಾಸವೆಂದರೆ, ನಾಜಿû ಪಕ್ಷ ರಚನೆಯಾಗಿ ಅದು ಅಧಿಕಾರಕ್ಕೆ ಬಂದು ಸಾರ್ವಭೌಮತ್ವ ಸ್ಥಾಪಿಸಿದುದೇ ಆಗಿದೆ. ಎರಡನೆಯ ಮಹಾಯುದ್ಧದ ಬಳಿಕ, ನಗರ ತ್ವರಿತಗತಿಯಲ್ಲಿ ಬೆಳೆಯಿತು.

ಚರ್ಚ್ ಕಿಟಕಿಗಳಿಗಾಗಿ ಬಳಸುವ ವಿವಿಧ ಬಣ್ಣಗಳ ಗಾಜಿನ ಉತ್ಪಾದನೆಗೆ ಮ್ಯೂನಿಕ್ ನಗರ ಪ್ರಸಿದ್ಧ. ಚರ್ಚಿನಲ್ಲಿ ಬಳಸುವ ಲೋಹಗಂಟೆಗಳೂ ಇಲ್ಲಿ ತಯಾರಾಗುತ್ತವೆ. ಇವಕ್ಕೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚು. ಆದುದರಿಂದ ನಗರದಲ್ಲಿ ಅನೇಕ ಲೋಹ ಎರಕಹೊಯ್ಯುವ ಕಾರ್ಖಾನೆಗಳೂ ಇವೆ. ಇಲ್ಲಿಯ ಶಿಲಾಮುದ್ರಣದ ಕುಸುರಿ, ಕೆತ್ತೆನಯ ಕೆಲಸದ ವಸ್ತುಗಳು, ಪಿಂಗಾಣಿ ಸಾಮಾನುಗಳು, ಕನ್ನಡಕಗಳಿಗೆ ಬೇಕಾಗುವ ಗಾಜು ತಯಾರಿಕೆ ಮತ್ತು ಎಂಜಿನಿಯರಿಂಗ್ ನಕ್ಷೆಗಳನ್ನು ಸಿದ್ಧಪಡಿಸಲು ನೆರವಾಗುವ ಉಪಕರಣಗಳು ವಿದೇಶಿಯರ ಗಮನ ಸೆಳೆದಿವೆ. ಬೀರ್ ಪಾನೀಯ ಇಲ್ಲಿಯ ಪ್ರಮುಖ ರಫ್ತು.

ನಗರದಲ್ಲಿರುವ ಕವೇಡ್ರಲ್ ಅರಮನೆ ಮತ್ತು ವಸ್ತುಸಂಗ್ರಹಾಲಯ ಗಮನಾರ್ಹವಾದವು. ಪ್ರಪಂಚ ಖ್ಯಾತಿ ಪಡೆದಿರುವ ವಸ್ತುಸಂಗ್ರಹಾಲಯದಲ್ಲಿ ವಿe್ಞÁನ ಹಾಗೂ ಆಧುನಿಕ ತಂತ್ರe್ಞÁನಗಳಿಗೆ ಸಂಬಂಧಿಸಿದ ವಸ್ತು ವಿಶೇಷಗಳಿವೆ. ರಾಜ್ಯ ಗ್ರಂಥಾಲಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಗ್ರಂಥಗಳುಂಟು. ಐವತ್ತು ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಗ್ರಂಥಾಲಯದಲ್ಲಿ ಶೇಖರಿಸಿಡಲಾಗಿದೆ. ರಾಷ್ಟ್ರೀಯ ರಂಗಭೂಮಿ ದೇಶದಲ್ಲೇ ದೊಡ್ಡದೆನಿಸಿದ್ದು ಎರಡನೆಯ ಮಹಾಯುದ್ಧದ ಬಾಂಬ್‍ದಾಳಿಗೆ ತುತ್ತಾಗಿ ಸಂಪೂರ್ಣ ನಾಶವಾಯಿತು. ಐದು ವರ್ಷಗಳ ಸತತ ಶ್ರಮದಿಂದಾಗಿ ಹದಿನೈದು ಮಿಲಿಯನ್ ಡಾಲರ್ ವೆಚ್ಚದಲ್ಲಿ ರಂಗಭೂಮಿಯನ್ನು ಜೀರ್ಣೋದ್ಧಾರ ಮಾಡಲಾಯಿತು. ಇದನ್ನು 1963ರಲ್ಲಿ ಅಧಿಕೃತವಾಗಿ ಪುನರ್ ಆರಂಭಿಸಲಾಯಿತು.

ಪ್ರಾಚೀನ ಪಿನಾಕೊತೆಕ್, ನವ ಪಿನಾಕೊತೆಕ್ ಮತ್ತು ಗ್ಲಿಪ್ತೊತೆಕ್ ಎಂಬ ಮೂರು ಪ್ರಸಿದ್ಧ ವಸ್ತುಸಂಗ್ರಹಾಲಯಗಳು ಎರಡನೆಯ ಮಹಾಯುದ್ಧ ಕಾಲದಲ್ಲಿ ಬಾಂಬ್ ದಾಳಿಗೆ ತುತ್ತಾದವು. ಈ ವಸ್ತುಸಂಗ್ರಹಾಲಗಳು ದೇಶವಿದೇಶಗಳ ವಿದ್ವಾಂಸರಿಗೆ ಸಂಶೋಧಕರಿಗೆ ದೊಡ್ಡ e್ಞÁನಭಂಡಾರವೆನಿಸಿದ್ದುವು. ಯುದ್ಧ ತರುವಾಯ, ಈ ವಸ್ತುಸಂಗ್ರಹಾಲಯಗಳಲ್ಲಿದ್ದ ಕೆಲವು ಅಳಿದುಳಿದ ಅಪರೂಪವಾದ ವಸ್ತುಗಳನ್ನೂ ಬೆಲೆಬಾಳುವ ವಾಸ್ತುಶಿಲ್ಪ ಚಿತ್ರಕಲೆಗಳನ್ನೂ ಸಂಗ್ರಹಿಸಿಡಲಾಗಿದೆ.

1826ರಲ್ಲಿ ಲ್ಯಾಂಡ್‍ಶುಟ್‍ನಿಂದ ಮ್ಯೂನಿಕ್‍ಗೆ ಸ್ಥಳಾಂತರಗೊಂಡ ಲುಡ್ರವಿಗ್. ಮ್ಯಾಕ್ಸಿಮಿಲಿಯನ್ ವಿಶ್ವವಿದ್ಯಾಲಯ 1471ರಲ್ಲಿ ಸ್ಥಾಪನೆಯಾದದ್ದು. ಇದರಲ್ಲಿ ಸುಮಾರು ಇಪ್ಪತ್ತೈದು ಸಾವಿರ ವಿದ್ಯಾರ್ಥಿಗಳಿದ್ದಾರೆ. ವಿಶ್ವವಿದ್ಯಾಲಯದ ಗ್ರಂಥಭಂಡಾರದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ.

ಗ್ರೇಟ್‍ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ದೇಶಗಳು 1938ರಲ್ಲಿ ಸೆಪ್ಟೆಂಬರ್ 29 ರಂದು ಈ ಸ್ಥಳದಲ್ಲಿ ಮಾಡಿಕೊಂಡ ಒಪ್ಪಂದ ಮ್ಯೂನಿಕ್ ಒಪ್ಪಂದವೆಂದು ಪ್ರಸಿದ್ಧವಾಗಿದೆ. ಇದರಿಂದ ಜೆಕೊಸ್ಲೊವಾಕೀಯಾದ ಸೂಡೆನ್‍ಲ್ಯಾಂಡ್ ಜರ್ಮನಿಗೆ ಸೇರುವಂತಾಯಿತು. (ಆರ್.ಎಂ.ಕೆ.)