ಪುಟ:ಯಶೋಧರ ಚರಿತೆ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೧೫



ಗಣಧರರೋ ಸ್ವಾಮಿಗಳೋ
ಗುಣದಿಂದಾಮರೆಯೆಮೆರಗಿ ಶುಭ್ರರೆಮೆಮ್ಮಂ
ತಣಿಪುಗೆ ಸಮಂತಭದ್ರರ
ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್

ಕ್ಷಿತಿಯೋಳ್ ಸಂಸ್ಕೃತದಿಂ ಪ್ರಾ-
ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂ
ಕೃತಿಮಾಡಿದರವರ್ಗಳ ಸನ್
ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್

ನಾಂದಿಯಿನನಂತರಂ ಕವಿ
ವೃಂದಾರಕವಾಸವಂಗೆ ಕವಿಕಲ್ಪಲತಾ
ಮಂದಾರಂಗೇಂ ಪ್ರಸ್ತುತ
ಮೆಂದೊಡೆ ಬಲ್ಲಾಳದೇವನನ್ವಯಕಥನಂ



ಮಹಿಮೆಯನ್ನು ಸರಿಯಾಗಿ ಉಂಟುಮಾಡಲಿ. ೪. ಅವರು ಗಣಧರರಾಗಿರಲಿ,
ಸ್ವಾಮಿಗಳಾಗಿರಲಿ, ಅವರಗುಣಗಳನ್ನು ನಾವು ತಿಳಿದುಕೊಂಡಿಲ್ಲ. ಆದರೆ ಅವರಿಗೆ
ನಮಸ್ಕರಿಸಿ ನಾವು ಪುನೀತರಾಗುವುದಂತೂ ನಿಶ್ಚಯ. ಅಂತಹ ಸಮಂತಭದ್ರರ,
ಗುಣಭದ್ರರ ಪೂಜ್ಯಪಾದರ ಅಖ್ಯಾನ (ಕತೆ)ಗಳು ನಮ್ಮನ್ನು ತಣಿಸಲಿ. ೫.
ಸಂಸ್ಕೃತದಲ್ಲಿ ಪ್ರಾಕೃತದಲ್ಲಿ ಕನ್ನಡದಲ್ಲಿ ಈ ಕೃತಿಯನ್ನು ಈ ಲೋಕದಲ್ಲಿ ಯಾರು
ಈ ಮೊದಲು ರಚಿಸಿದರೋ ಅವರ ಸನ್ಮತಿ ನಮಗೆ ಸರಸ ಪದಪ್ರಯೋಗ
ಪದ್ದತಿಯಲ್ಲಿ ನೆರವನ್ನೀಯಲಿ. ಅವರ ಸತ್ಕೃತಿಗಳಿಂದ ರಸವತ್ಪ್ರಯೋಗ ಸಿದ್ದಿಗೊಳ್ಳಲಿ.
೬. ನಾಂದಿಯಾಯಿತು. ಇನ್ನು ಮೇಲೆ ದೇವತಾ ಸ್ವರೂಪಿಗಳಾದ ಕವಿವೃಂದದಲ್ಲಿ
ದೇವೇಂದ್ರನಂತಿರುವ ಹಾಗೂ ಕಲ್ಪಲತೆಗಳಂತಿರುವ ಕವಿಗಳಲ್ಲಿ ಮಂದಾರದಂತೆ
ಮೇಲೆ ಪಡೆದ ನಾನು ಕೈಕೊಳ್ಳಬೇಕಾದ ಕಾರ್ಯವೆಂದರೆ ಬಲ್ಲಾಳದೇವನ