ಪುಟ:ಯಶೋಧರ ಚರಿತೆ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೧೭

ವಿನಯಾದಿತ್ಯನೆ ಹೊಯ್ಸಳ
ಜನಪತಿಗಳ ಕೀರ್ತಿಪುಂಡರೀಕಿನಿಗುನ್ಮೀ-
ಲನಮನೊಡರ್ಚಿದನೆಳೆಯಂ-
ಗ ನೃಪಾಲನ ತಂದೆ ಬಿಟ್ಟಿದೇವಂಗಜ್ಜಂ ೧೦

ಅರಸಾದಂ ಸಂವರಣೆಗೆ
ಪರರಾಷ್ಟಂ ಗಂಗವಾಡಿ ತೊಂಬತ್ತರು ಸಾ-
ಸಿರಮಂ ಬ್ರಹ್ಮಣದತ್ತಿಗೆ
ವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ ೧೧

ಈವಿರುವ ಕಾವ ಗುಣದಿಂ-
ದಾವಿಷ್ಣುವಿನೊರೆಗೆ ದೊರೆಗೆವರಲುಳು ದ ಧರಿ-
ತ್ರೀವಲ್ಲಭರೇನೇಚಲ
ದೇವಿಗಮೆರೆಯಂಗ ನೃಪತಿಗಂ ಪುಟ್ಟಿದರೇ ೧೨



೧೦. ವಿನಯಾದಿತ್ಯನು ಹೊಯ್ಸಳ ರಾಜರ ಕೀರ್ತಿಯೆಂಬ ಕಮಲ ಸರೋವರವನ್ನು
ಅರಳಿಸಿದನು. ಈತನು ಎರೆಯಂಗ ಎಂಬ ರಾಜನ ತಂದೆ, ಬಿಟ್ಟಿದೇವನಿಗೆ
ಈತನು ಅಜ್ಜ. ೧೧. ಮುಂದೆ ವಿಷ್ಣು ನೃಪಾಲ :[ಬಿಟ್ಟಿದೇವ]ನು ರಾಜನಾದನು.
ಪರರಾಷ್ಟ್ರವಾದ ಗಂಗವಾಡಿ ತೊಂಬತ್ತಾರು ಸಾವಿರವು ಅವನ
ಅಂಕೆಗೊಳಗಾಯಿತು. ಬಹು ಪ್ರದೇಶವನ್ನು ಬ್ರಾಹ್ಮಣ ದತ್ತಿಗೆ ವಿನಿಯೋಗಿಸಿದ
ಆತನು ಹೊಯ್ಸಳರಲ್ಲಿ ಏಳನೆಯ ಚಕ್ರವರ್ತಿಯಾಗಿದ್ದನು. ೧೨. ದಾನಕೊಡುವ
ಹೋರಾಡುವ ಹಾಗೂ ರಕ್ಷಿಸುವ ಗುಣದಿಂದ ಆ ವಿಷ್ಣುವಿನ ಸಮಕ್ಕೆ ಬರಲು
ಉಳಿದ ಯಾವ ಭೂಪತಿಗಳಿಗೂ ಸಾಧ್ಯವಾಗಲಿಲ್ಲ. ಉಳಿದವರೇನು ಏಚಲ
ದೇವಿಗೂ ಎರೆಯಂಗ ಭೂಪತಿಗೂ ಮಕ್ಕಳಾಗಿದ್ದರೆ ? ೧೩. ಧೀರನಿಧಿಯಾದ