ಪುಟ:Abhaya.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾರಾಯಣ ಮೂರ್ತಿ ಬಂದಿರುವ ವಿಷಯವನ್ನು ತಂದೆಗೆ ಹೇಗೆ ತಿಳಿಸಬೇಕೆಂಬುದೇ ಆಕೆಯ ಪಾಲಿಗೆ ಬಗೆಹರಿಯುವ ಸಮಸ್ಯೆಯಾಯಿತು.

ಮನೆಗೆ ಬಂದ ತಂದೆ, ಪ್ರಸನ್ನಳಾಗಿದ್ದ ಮಗಳನ್ನು ನೋಡುತ್ತಾ

ಕೇಳಿದರು :

"ಏನೆ ಖುಷೀಲಿದೀಯಾ ? ಯಾರಾದರು ಗೆಳತೀರು ಬಂದಿದ್ದ

ರೇನು ?"

"ಯಾರು ಇಲ್ಲಪ್ಪ ಗೆಳತೀರು ಇಲ್ಲಿಗೆ ಬರದೆ ಒಂದು ವರ್ಷ

ವಾಯ್ತೋ ಏನೋ."

ಅದೇ ಸಂದರ್ಭದಲ್ಲಿ, ನಾರಾಯಣ ಮೂರ್ತಿ ಬಂದಿದ್ದ ವಿಷಯ

ಹೇಳುವುದು ಸಾಧ್ಯವಿದ್ದರೂ ತುಂಗಮ್ಮ ತಡವರಿಸಿದಳು.

ಊಟಕ್ಕೆ ಕುಳಿತಾಗ ಬಲುಪ್ರಯಾಸಪಟ್ಟು ಆಕೆ ಆ ವಿಷಯವನ್ನೆತ್ತ

ಬೇಕಾಯಿತು

"ಒಂದು ವಿಚಾರ ಹೇಳೋಕೆ ಮರ್ತೇ ಬಿಟ್ಟೆ ಅಣ್ಣ"

"ಏನೆ ಅದು'"

"ವದ್ದಕ್ಕನ ಮದುವೆಗೆ ಬಂದಿದ್ರೂಂತ ನೀನು ಹೇಳಿರ್ಲಿಲ್ವೆ ಆ

ದಿನ ?"

ತಂದೆ, ಮುಂದೇನು ಎನ್ನುವಂತೆ ಮಗಳ ಮುಖನೋಡಿದರು.

"ನಾರಾಯಣ ಮೂರ್ತೀಂತಲೋ ಏನೋ."

"ಹೂಂ. ಹೌದು"

"ಅವರು ಬಂದಿದ್ರು ಸಾಯಂಕಾಲ "

"ನಾರಾಯಣ ಮೂರ್ತೀನೇ ? ಇಲ್ಲಿಗೆ ಹ್ಯಾಂಗ್ಬಂದ ?"

"ಇಲ್ಲೇ ಇದಾರಂತಲ್ಲ ಈಗ. ಕೆಲಸ ಸಿಕ್ಕಿದ್ಯಂತೆ .."

"ನಂಗೊತ್ತೇ ಇರ್ಲಿಲ್ವೆ !"

ನಾರಾಯಣಮೂರ್ತಿ ಹೇಳಿದುದನ್ನು ಮಗಳು ತಂದೆಗೆ

ವರದಿಯೊಪ್ಪಿ ಸಿದಳು.

ಆ ತಂದೆಯ ಮನಸ್ಸಿನಲ್ಲಿ ಒಮ್ಮೆ ಕಮರಿ ಹೋಗಿದ್ದ ಆಸೆ ಮತ್ತೆ

ಚಿಗುರಿಕೊಂಡಿತು.