ಪುಟ:Banashankari.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ನೀನಿನ್ನು ಇಲ್ಲೇ ಇಲ್ತಿಯಂತೆ, ಹೌದೆ?" " ఇರ್ತೀನಿ." "ಮೊನ್ನೆ ನಮ್ಮನೇಗೆ ಬಂದಿದ್ದಾಗ ಹಾಗೆ ಹೇಳಿದ್ನಂತೆ ನಿಮ್ಮಣ್ಣ." "ಹೌದು. ಅಲ್ಲಿ ಇನ್ನು ಯಾಕಿರ್ಬೇಕು ಹೇಳು?"

" ನೀನು ಇಲ್ಲೇ ಇರ್ತಿಂತ ಕೇಳಿ ನನಗೆಷ್ಟು ಖುಷಿಯಾಯ್ತೂಂತ!" 

ಅಮ್ಮಿ ಸ್ವಲ್ಪ ಹೊತ್ತು ಮೌನವಾಗಿದ್ದಳು ಆಗ. ಆಕೆಗೆ ಸ್ವತಃ ಖುಷಿಯಾಗಿತ್ತೊ ಇಲ್ಲವೋ. ಆದರೆ ಜೀವನ ಆ ಘಟ್ಟವನ್ನು ಬಂದು ಮುಟ್ಟಿತು. ಅಂಗಳ ಸಾರಿಸುತ್ತಿದಾಗ ಅಮ್ಮಿಗೆ ಒಂದೇ ಸಮನೆ ಅತ್ತೆಯ ಮನೆಯ ನೆನಪಾಯಿತು.

ಆಕೆ ರಂಗನನ್ನು ಕರೆದಳು.

"ರಂಗಣ್ಣ, ಇಲ್ಲಿ ಬಾ." ಅಜ್ಜಿಗೆ ಅಂಟಿ ಕುಳಿತಿದ್ದ ರಂಗ ಉತ್ತರವಿತ್ತ.

" ಊಹೂಂ ಬರಲ್ಲ." 

" ಅತ್ತಿಗೆ ಕರೆದರೆ ಒಲ್ಲೆ ಅನಾರದು ಮರೀ.. ಹೋಗೋ.." ಎಂದು ಅಜ್ಜಿಯೇ ರಂಗನನ್ನು ಒಳಗಿನಿಂದ ಕಳುಹಿಸಿದಳು. " ನಾಣೀನೂ ಬರ್ಬೆಕಾಗಿತ್ತು, ಅಲ್ವಾ?" ಎಂದಳು ಅಮ್ಮಿ. ರಂಗ ಅಲ್ಲೆ ಬಿದ್ದಿದ್ದ ಮರದ ಕೊರಡಿನ ಮೇಲೆ ಕುಳಿತು, "ಹೂಂ" ಎಂದ.

" ನಾನಿನ್ನು ಊರಿಗೆ ಬರಲ್ಲ, ರಂಗ." " 

ಯಾಕಮ್ಮೀ ? "

 ಸಲಿಗೆಯ ಆ ಸ್ವರದಲ್ಲಿದ್ದ ಕಾತರವನ್ನು ಅಮ್ಮಿ ಗುರುತಿಸಿಕೊಂಡಳು. ಅವಳಿಗೆ

ಸಮಾಧಾನವಾಯಿತು. " ನಾನು ಇಲ್ಲೇ ಇರ್ತಿನಿ." ರಂಗ ಉತ್ತರವೀಯಲಿಲ್ಲ. ಅವನ ಮುಖ ಬಾಡಿತು.

ಯಾಕಮ್ಮೀ  ? " 

ಅತ್ತಿಗೆ ಮನೆಗೆ ಬರೋವರ್ಗೂ ಅಣ್ಣ ಒಬ್ರೆ ಇರೋಕಾಗುತ್ತಾ? ಅಲ್ದೆ... ಆಮೇಲೂ ಅಷ್ಟೆ..ನಾನು ಅವರ್ಜತಲ್ಲಿ ಇರೋದು ಬೇಡ್ವಾ?" ರಂಗ ಮೌನವಾಗಿದ್ದ. ಅವನ ಯೋಚನೆ ಎಲ್ಲಿಂದೆಲ್ಲಿಗೋ ಹರಿಯುತ್ತಿತು. ಆತ ಹೇಳಿದ: "ನಿಮ್ಮಣ್ಣ ತುಂಬಾ ಒಳ್ಳೇವನು ಅಮ್ಮಿ." "ಹೂಂ ಎಂದಳು ಅಮ್ಮಿ ಅಭಿಮಾನದಿಂದ. " ನಮ್ಮಣ್ಣನ ಹಾಗೆ,ಅಲ್ವಾ ? " ಅಮ್ಮಿಯ ಕಣ್ಣಿನ ಕಟ್ಟೆಯೊಡೆಯಿತು. ಅಳಬಾರದೆಂದು ಮಾಡಿದ ನಿರ್ಧಾರ ಘಳಿಗೆ ಘಳಿಗೆಗೂ ಮಣ್ಣುಗೂಡುತ್ತಿತ್ತಲ್ಲ?

 ಪೊರಕೆಯನ್ನು ಝಾಡಿಸಿ, " ಥೂ ! ಕಸ! ಕಸ !" ಎನ್ನುತ್ತಾ ಆಮ್ಮಿ ಸೆರಗಿನ ತುದಿಯಿಂದ  ಕಣ್ಣೋರೆಸಿಕೊಂಡಳು.