ಪುಟ:Mysore-University-Encyclopaedia-Vol-1-Part-1.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೪

       ಅಂತಾರಾಷ್ಟ್ರೀಯತೆ-ಅಂತಾರಾಷ್ಟ್ರೀಯ ದಿನಾಂಕ ರೇಖೆ

ಹಂಚುವ ವ್ಯವಸ್ಥೆಯನ್ನು ಮಾಡಿತು.ಹೀಗೆ ಕೊಡಬೇಕಾದ ಹಣ ಒದಗಿಸಿಕೊಳ್ಳಲು ಜರ್ಮನಿ ಎತ್ತಿದ ಅಂತಾರಾಷ್ಟ್ರೀಯ ಹಾಗೂ ಧರ್ಮದರ್ಶಿಯಾಗಿ ವರ್ತಿಸಿತು.ಅಲ್ಲದೆ ಈ ವ್ಯವಹಾರಗಳಿಂದ ಉದ್ಭವಿಸಿದ ವರ್ಗಾವಣೆಯ ಸಮಸ್ಯೆಗಳನ್ನು ಎದುರಿಸಲು ಅವಶ್ಯಕವಾದ ಅನೇಕ ಕ್ರಮಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ಬ್ಯಾಂಕು ಯುರೋಪಿನ ಹಿರಿಯ ಆರ್ಥಿಕ ಸಮಸ್ಯೆಯನ್ನು ಬಿಡಿಸುವುದರಲ್ಲಿ ನೆರವಾಯಿತು.

೧೯೩೧ರಲ್ಲಿ ಪ್ರಾಪ್ತವಾದ ಹಣಕಾಸಿನ ಮುಗ್ಗಿಟ್ಟಿನ ಪರಿಸ್ಥಿತಿಯನ್ನು ಸುಧಾರಿಸಲು ಯುರೋಪಿನ ರಾಷ್ಟ್ರಗಳು ಮಾಡಿದ ಪ್ರಯತ್ನಗಳಲ್ಲಿ ಬ್ಯಾಂಕು ಮುಖ್ಯ ಪಾತ್ರ ವಹಿಸಿತು.೧೯೩೩ರಲ್ಲಿ ಜರುಗಿದ ಪ್ರಪಂಚ ಹಣಕಾಸು ಹಾಗೂ ಆರ್ಥಿಕ ಸಮ್ಮೇಳನ ಕೇಂದ್ರ ಬ್ಯಾಂಕುಗಳೊಳಗೆ ಬೆಳೆಯಬೇಕಾದ ಸಹಕಾರದ ಅವಶ್ಯಕತೆಯನ್ನು ಒತ್ತಿ ಹೇಳಿದುದೇ ಅಲ್ಲದೆ,ಈ ವಿಷಯದಲ್ಲಿ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಪ್ರಮುಖ ಪಾತ್ರವಹಿಸುವ ಸಾಧನವಾಗಿ ಇಟ್ಟುಕೊಳ್ಳಬೇಕೆಂಬ ಶಿಫಾರಸ್ಸನ್ನು ಮಾಡಿತು.ಆದರೆ ೧೯೩೦ನೆಯ ದಶಕದ ವಾತಾವರಣದಲ್ಲಿ ಬ್ಯಾಂಕು ಈ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಸಾಧನೆ ಮಾಡಲಾಗಲಿಲ್ಲ.
        ಯುದ್ಧಕಾಲದಲ್ಲಿ ಬ್ಯಾಂಕು ಅದರ ಆರ್ಥಿಕ ಹಾಗೂ ನೈತಿಕ ಅಂತಸ್ತನ್ನು ಕಾಪಾಡಿಕೊಂಡು ಬಂದುದು ಮುಖ್ಯ ಸಾಧನೆಯೇ ಸರಿ.ಯುದ್ಧದಲ್ಲಿ ತೊಡಗಿದ್ದ ರಾಷ್ಟ್ರಗಳಿಗೆ ಸಂಬಂಧಪೆಟ್ಟ ಕಾರ್ಯಾಚರಣೆಗಳನ್ನು ಕೈಗೊಳ್ಳುವುದರಲ್ಲಿ ಯಾವ ವಿಧವಾದ ವಿವಾದಕ್ಕೂಅವಕಾಶಕೊಡದೆ ಜಾಗರೂಕತೆಯಿಂದ ವರ್ತಿಸಿ,ಯುದ್ಧಕಾಲದಲ್ಲಿ ಆದಷ್ಟೂ ಕಡಿಮೆ ವ್ಯವಹಾರಗಳನ್ನು ನಡೆಯಿಸಿತ್ತಾದರೂ ಎಲ್ಲಾ ಸದಸ್ಯ ರಾಷ್ಟ್ರಗಳ ಮಾನ್ಯತೆಯನ್ನು ಉಳಿಸಿಕೊಂಡು ಯುದ್ಧಕಾಲದಲ್ಲಿ ಯಶಸ್ವಿಯಾಗಿ ಹೊರಬಂದಿತು.
       ಯುದ್ಧಾನಂತರ ಪುನಾರಚನೆಯ ಭಾಗವಾಗಿ ಅಂತಾರಾಷ್ಟ್ರೀಯ ವಿನಿಮಯ ನಿಧಿ ಮತ್ತು ಪುನಾರಚನೆ ಹಾಗೂ ಅಭಿವೃದ್ಧಿಯ ಅಂತಾರಾಷ್ಟ್ರೀಯ ಬ್ಯಾಂಕು,ಈ ಎರಡೂ ಸಂಸ್ಥೆಗಳನ್ನು ಸ್ಥಾಪಿಸಿದ ಬ್ರೆಟನ್ ವುಡ್ಸ್ ಸಮ್ಮೇಳನ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕನ್ನು ಮುಚ್ಚುವಂತೆ ಶಿಫಾರಸ್ಸು ಮಾಡಿತ್ತು.ಆದರೆ ಸಹಜ ಸ್ಥಿತಿಗಳ ಪುನ್ಃಪರಿಶೀಲನೆಯ ಅನಂತರ ಈ ಸಂಸ್ಥೆಯನ್ನು ಮುಂದುವರಿಸುವುದು ಪ್ರಯೋಜನಕರವೆಂದು ತೀರ್ಮಾನಿಸಲಾಯಿತು.ಅದರಂತೆ ತೀರುವೆ ಬ್ಯಾಂಕು ಮತ್ತು ಅಂತಾರಾಷ್ಟ್ರೀಯ ವಿನಿಮಯ ನಿಧಿ,ಹಾಗೂ ವಿಶ್ವ ಬ್ಯಾಂಕು ಇವುಗಳೊಳಗೆ ವಿಶೇಷ ಬಾಂಧವ್ಯ ಕ್ರಮವಾಗಿ ಏರ್ಪಾಟಾಗಿದೆ.ತೀರುವೆ ಬ್ಯಾಂಕಿನ ವಾರ್ಷಿಕ ಸಭೆಗೆ ಉಳಿದೆರಡೂ ಸಂಸ್ಥೆಗಳು ಪ್ರತಿನಿಧಿಗಳನ್ನು ಕಳಿಸುವುವು.ಹಾಗೂ ಈ ಎರಡು ಸಂಸ್ಥೆಗಳ ವಾರ್ಷಿಕ ಸಭೆಗೆ ತೀರುವ ಬ್ಯಾಂಕು ಪ್ರತಿನಿಧಿಗಳನ್ನು ಕಳುಹಿಸುವುದು.
       ಇತ್ತೀಚಿನ ಯುದ್ಧೋತ್ತರ ಕಾಲದಲ್ಲಿ ತೀರುವೆ ಬ್ಯಾಂಕು ಯುರೋಪಿನ ಪುನಾರಚನೆಗೆ ಸಂಬಂಧಿಸಿದ ಅನೇಕ ಅಂತಾರಾಷ್ಟ್ರೀಯ ಹಣಕಾಸಿನ ವ್ಯವಹಾರಗಳನ್ನು ಕೈಗೊಂಡಿದೆ.1948ರಲ್ಲಿ ಸ್ಥಾಪನೆಯಾದ ಯುರೋಪಿನ ಅರ್ಥಿಕ ಸಹಕಾರ ವ್ಯವಸ್ಥೆಯ (ಒ.ಇ.ಇ.ಸಿ) ಹಾಗೂ ಯುರೋಪಿನ ದೇಣೆ ಒಕ್ಕೂಟದ (ಇ.ಪಿ.ಯು) ನಿಯೋಗಿಯಾಗಿ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು ಹನಕಾಸು ಹಾಗೂ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದ ಅನೇಕ ಕಾರ್ಯಾಚರಣೆಗಳನ್ನು ನಡೆಸಿತು.ಯುರೋಪಿನ ಕಲ್ಲಿದ್ದಲು ಮತ್ತು ಉಕ್ಕಿನ ಸಮುದಾಯದ ಪರವಾಗಿಯೂ ಈಗ ರುಪುಗೊಳ್ಳುತ್ತಿರುವ ಪಾಶ್ಚ್ಯಾತ್ಯ ಯುರೋಪ್ ರಷ್ಟ್ರಗಳ ಆರ್ಥಿಕ ಸಂಘಗಳ ಪರವಾಗಿಯೂ ಅನೇಕ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದೆ.
      ಅಂತಾರಾಶ್ತ್ರೀಯ ತೀರುವೆ ಬ್ಯಂಕು ಹನಕಾಸು ಹಾಗೂ ಆರ್ತಿಕ ವಿಶಯಗಲ ಸಂಶೋಧನೆ ಮತ್ತು ಸಲಹಾ ಕೇಂದ್ರವೂ ಆಗಿದೆ.ಅದು ಪ್ರಕಟಿಸುವ ವಾರ್ಷಿಕ ವರದಿಗಳು ಯುರೋಪಿನ ಆಥಿಕತೆಯ ಬಗ್ಗೆ ಅನೇಕ ಉನ್ನತಮಟ್ಟದ ಲೇಖನಗಳನ್ನೂ ಉಪಯುಕ್ತ ಅಂಕಿ ಅಂಶಗಳನ್ನೂ ದೊರಕಿಸುತ್ತವೆ.ಕೇಂದ್ರ ಬ್ಯಾಂಕುಗಳ ಕೇಳಿಕೆಯ ಅನುಸಾರವಾಗಿ ಬ್ಯಾಂಕು ಅನೇಕ ವಿಶೇಷ ಅಧ್ಯಾಯನಗಳು ನಡೆಸಿ ಸಹಾಯ ನೀಡಿದೆ.ಈ ಎಲ್ಲಾ ಪ್ರಕಟಣೆಗಳು ಹಾಗೂ ಅಧ್ಯಾಯನಗಳು ಅಂತಾರಾಷ್ಟ್ರೀಯ ಹಣಕಾಸಿನ ಬಗ್ಗೆ ಇರುವ ಜಾನಭಂಡಾರಕ್ಕೆ ಉಪಯುಕ್ತ ಕೊಡುಗೆಗಳು.
      ಹಣಬಲದ ಗಾತ್ರ ವಿವರವಾದ ಕಾನೂನಿನ ಕಟ್ಟುನಿಟ್ಟುಗಳು ಇವಕ್ಕಿಂತಲೂ ಒಂದು ಸಾರ್ವತ್ರಿಕ ಧ್ಯೇಯಕ್ಕೆ ಪಣತೊಟ್ಟು ನಿಂತಿರುವ ವ್ಯಕ್ತಿಗಳೊಳಗೆ ಇರುವ ಪರಸ್ಪರ ಸೌಹಾರ್ದ,ಯಾವ ಒಂದು ಅಂತಾರಾಷ್ಟ್ರೀಯ ಕಾರ್ಯಾಸಾಧನೆಗೂ ಅತಿ ಮುಖ್ಯ ಎಂಬುದಕ್ಕೆ ಬ್ಯಾಂಕಿನ ಈ ಹಲವಾರು ದಶಕಗಳ ಚರಿತ್ರಿಯೇ ನಿದರ್ಶನ.ಅಲ್ಲದೆ ಇಂದು ರೂಪುಗೊಳ್ಳುತ್ತಿರುವ ಕಾರ್ಯಸಾಧನೆಗೂ ಅತಿ ಮುಖ್ಯ ಎಂಬುದಕ್ಕೆ ಬ್ಯಾಂಕಿನ ಈ ಹಲವಾರು ದಶಕಗಳ ಚರಿತ್ರಯೇ ನಿದರ್ಶನ.ಅಲ್ಲದೆ ಇಂದು ರೂಪುಗೊಳ್ಳುತ್ತಿರುವ ಯುರೋಪಿನ ರಾಷ್ಟ್ರಾಗಳ ಆರ್ಥಿಕ ಸಂಘಟನೆ ಹಾಗೂ ಅಂತಾರಾಷ್ಟ್ರೀಯ ಆರ್ಥಿಕ ಸಹಕಾರ - ಇವುಗಳಿಗೆ ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು ಸಹಾಯಕವಾಗಿದೆ.
      ಅಂತಾರಾಷ್ಟ್ರೀಯತೆ: ಅಂತಾರಾಷ್ಟ್ರೀಯತಾಭಾವನೆ ಉಗ್ರ ರಾಷ್ಟ್ರೀಯತೆಯಿಂದ ಒದಗಿರುವ ದುಷ್ಟರಿಣಾಮಗಳನ್ನು ನಿವಾರಿಸಿ ಇಡೀ ವಿಶ್ವವೇ ಒಂದು ಕುಟುಂಬ,ಅದರಲ್ಲಿನ ಪ್ರತಿಯೊಬ್ಬನೂ ವಿಶ್ವಮಾನವ ಎಂಬ ಸೌಹಾರ್ದಮಯ ಸಹಜೀವನತತ್ತ್ವವನ್ನು ಪ್ರತಿಪಾದಿಸುವ ಶಕ್ತಿಯಾಗಿದೆ.ರಾಷ್ಟ್ರೀಯತೆಯ ಭಾವನೆ ಇರುವುದು ತಪ್ಪೀನಲ್ಲ.ಆದರೆ ದಾರಿತಪ್ಪಿದಲ್ಲಿ ಆದರಿಂದ ಆಗುವ ಅನರ್ಥಗಳು ಅಪಾರ.ಯುರೋಪಿನಲ್ಲಿ 1700 ರ ಹೊತ್ತಿಗಾಗಲೆ ರಾಷ್ಟ್ರೀಯತೆ ಉಗ್ರರೂಪವನ್ನು ತಾಳಿದ್ದು 1800ರ ಸುಮಾರಿನಲ್ಲಿ ವಿದೇಶ ವ್ಯವಹಾರಗಳ ತಳಹದಿಯಾಗಿರುವುದು ಕಂಡುಬಂದಿದೆ.ಫ್ರಾಂಕೋ-ಪರ್ಷಿಯ ಯುದ್ಧ,ಕ್ರಿಮಿಯ ಯುದ್ಧ ಈ ಮೊದಲಾದ ಅನೇಕ ಯುದ್ಧಗಳಿಗೆ ತೀವ್ರ ರಾಷ್ಟ್ರೀಯತಾ ಭಾವನೆಯೇ ಕಾರಣವಾಗಿದೆ.ಒಂದನೆಯ ಮಹಾಯುದ್ಧಕ್ಕೂ ಇದೇ ಮೂಲವನ್ನುವವರೂ ಇದ್ದಾರೆ.ಫ್ಯಾಸಿಸಂ ಮತ್ತು ನ್ಯಾಜ಼ಿಸಂ ಗಳು ಬೆಳೆತದಂತಲ್ಲಾ ಹಲವು ರಾಷ್ಟ್ರಗಳು ನೀತಿ ನಿರ್ಭಂಧಗಳನ್ನು ತೊರೆದು ದ್ವೇಷಾಸೂಯೆಗಳ ವಿಷಬೀಜವನ್ನು ಬಿತ್ತಲು ಮೊದಲು ಮಾಡಿದವು.ಅವುಗಳ ಪರಿಣಾಮವೇ ಎರಡನೆಯ ಮಹಾಯುದ್ಧ.
     ಒಟ್ಟಿನಲ್ಲಿ ಅಂತಾರಾಷ್ಟ್ರೀಯತೆ ವಿಶ್ವಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಅಂತಾರಾಷ್ಟೀಯ ನ್ಯಾಯ ಮತ್ತು ಸಹಕಾರವನ್ನು ಸಮಾನವಾಗಿ ಕಲ್ಪಿಸಿ ವಿಶ್ವಶಾಂತಿಯನ್ನು ಎಲ್ಲಾ ರಾಷ್ಟ್ರಗಳ ಸ್ನೇಹದಿಂದ ಸ್ಥಾಪಿಸುವ,ಒಂದು ಸಿದ್ಧಾಂತ ಅಥವಾ ಒಂದು ನಂಬಿಕೆಯಾಗಿ ಬಹು ಜನಪ್ರಿಯವಾಗಿದೆ(ನೋಡಿ-ವಿಶ್ವಸಂಸ್ಥೆ).
     ಅಂತಾರಾಷ್ಟ್ರೀಯ ದಿನಾಂಕ ರೇಖೆ:180ͦ  ರೇಖಾಂಶದ ಮದ್ಯಾಹ್ನ ರೇಖೆಗೆ ಈ ಹೆಸರಿದೆ.(ಇಂಟರ್ ನ್ಯಾಷನಲ್ ಡೇಟ್ ಲೈನ್)ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಇದು ಹಾದುಹೋಗುತ್ತದೆ.ಹೀಗೆ ಸಾಗುವಾಗ ಎದುರಾಗುವ ಒಂದೆರಡು ದ್ವೀಪಗಳನ್ನು ಬಳಸಿಕೊಂಡು ಹೋಗುವಂತೆ ಈ ರೇಖೆಯನ್ನು ಎಳೆಯಲಾಗಿದೆ.

ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಆವರ್ತಿಸುತ್ತಿರುವುದರಿಂದ ಯಾವುದೇ ಒಂದು ಸ್ಥಾನದಲ್ಲಿ ಸೂರ್ಯನ ಉದಯಾಸ್ತಗಳು(ಆದ್ದರಿಂದ ಸಮಯ)ಅದಕ್ಕಿಂತ ಪೂರ್ವಕ್ಕೆ ಇರುವ ಸ್ಥಳದ ಉದಯಾಸ್ತಗಳಿಂದ(ಸಮಯಕ್ಕಿಂದ) ಹಿಂದೆಯೂ ಪಶ್ಚಿಮಕ್ಕೆ ಇರುವ ಸ್ಥಳದ ಉದಯಾಸ್ತಗಳಿಂದ(ಸಮಯಕ್ಕಿಂದ)ಮುಂದೆಯೂ ಇರುವುವು.ಆದ್ದರಿಂದ ದಿನಾಂಕ ರೇಖೆಯ ಪೂರ್ವಕ್ಕೆ 12 ಗಂಟೆ ಆಗಿರುವಾಗ ಪಶ್ಚಿಮಕ್ಕೆ ಅದೇ ಗಳಿಗೆಯಲ್ಲಿ 12 ಗಂಟೆ ಆಗಿರುತ್ತದೆ.ಒಬ್ಬ ಪ್ರಯಾಣಿಕ ಗ್ರೀನಿಚ್ ನಿಂದ (ಅಂದರೆ ಸೊನ್ನೆ ಕಾಲವಲಯದಿಂದ).