ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಝ

ವಿಕಿಸೋರ್ಸ್ದಿಂದ

ಝ- ಕನ್ನಡ ವರ್ಣಮಾಲೆಯಲ್ಲಿನ ಚವರ್ಗದ ನಾಲ್ಕನೆಯ ಅಕ್ಷರ, ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು. (ಎ.ವಿ.ಎನ್.)