ಪುಟ:Banashankari.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾತ್ರ ಅಮ್ಮಿಯ ಚಂದ್ರನಿಗೆ ಗ್ರಹಣ ಹಿಡಿಯಿತು. ಈಗಲಾದರೋ, ಸದಾಕಾಲವೂ ನೆಲೆ ನಿ೦ತಿರುವ ಕತ್ರಲೆ. ಇತರ ಸೇವೆಯೇ ಜೀವನದ ತಿರುಮಂತ್ರ ಅಮ್ಮಿಗೆ. ಆಕೆಯೊಂದು ಉಸಿರಾಡುವ ಯಂತ್ರ, ತನಗರಿಯದಂತೆಯೇ ದುಡಿಯುವ ಚೈತನ್ಯವಿತ್ತು ಅವಳಲ್ಲಿ. ...ಆ ಪಲ್ಯ ಸಾರು ಅನ್ನ.

–"ಕೈಕಾಲು ತೊಳ್ಕೊತೀರಾ ಮಾವ ? –" 

"ನಾಣಿ, ರಂಗಾ, ಊಟಕ್ಕೆ ಎದ್ದೇಳಿ."

-"ಅತ್ತೆ, ಒಂದು ತುತ್ತು ಬಿಸಿ ಸಾರನ್ನ..."
ಆತ ಮಾತ್ರ ಇನ್ನಿಲ್ಲ. ಎಲ್ಲರ ಊಟವಾದ ಮೇಲೆ ಈಗ ಉಣುವವಳು ಆಕೆ ಯೊಬ್ಬಳೇ. ಅದೂ ಎಂತಹ ಊಟ ರುಚಿಯಲ್ಲಿನ ತರತಮವನ್ನು ಅಮ್ಮಿ ಮರೆತು ಬಹಳ ದಿನಗಳಾಗಿದ್ದುವು...

ಅದು ಮಾನವಯೋಗ್ಯ ಬದುಕು ಹೌದೋ ಅಲ್ಲವೋ ಅಮ್ಮಿಗೆ ತಿಳಿಯದು– ಆ ಮುಗ್ದೆಗೆ ಅದು ತಿಳಿಯದು.

3, ಗಂಡ ಸತ್ತ ಆರು ತಿಂಗಳಲ್ಲೆ ಅಮ್ಮಿ ಮೈನೆರೆದಳು. ತನಗಿಂತಲೂ ಬಲಶಾಲಿಯಾದುದು ಯಾವುದೋ ತನ್ನನ್ನು ಅವಮಾನಿಸಿದಂತಾಯಿತು ಅಮ್ಮಿಗೆ, ಅವಳ ಎಳೆಯ ಹೃದಯ ಘಾಸಿಗೊಂಡಿತು. ಆರು ತಿಂಗಳಿಗೆ ಹಿಂದೆ ಆಕೆ ಋತುಮತಿಯಾಗಿದ್ದರೆ ಆ ಮನೆಯಲ್ಲಿ ಎಂತಹ ಸಂಭ್ರಮ ವಿರುತ್ತಿತು! ಆದರೆ ಈಗ? ಬಾಡಿದ ಮಖಗಳು ಮತ್ತಷ್ಟು ಕಪ್ಪಿಟುವು. ಅಮ್ಮಿಯ ಕೈ ಹಿಡಿದವನು ಬದುಕಿ ಉಳಿದಿದ್ದರೆ! ಹಾಗೆ ಯೋಚಿಸುವುದರಲ್ಲಿ ಅರ್ಥವಿರಲಿಲ್ಲ: ಆದರೆ ಆ ಅತ್ತೆ ಮಾವ ಅರ್ಥವಿಲ್ಲದ ಆ ಕೆಲಸವನ್ನೇ ಮಾಡಿದರು. ಅಮ್ಮಿ ಮೆಲ್ಲಮೆಲ್ಲನೆ ತಿಳಿದುಕೊಂಡಳು: ತನ್ನ ಬಾಳು ಹೋಳಾಯಿತು ಹಾಗಾದರೆ; ತನ್ನ ಬಾಳು ಹಾಳಾಯಿತು. ದುಃಖಿನಿಯಾದ ಅತ್ತೆಯನ್ನು ಬೇಡ ಬೇಡವೆಂದರೂ ಬಾಲ್ಯದ ನೆವಪು ಕಾಡುತ್ತಿತ್ತು.ಆಕೆ ತಾಯ್ಥನೆಯಲ್ಲಿ ಮೈನೆರೆದಾಗಿನ ಸಮಾರ೦ಭ. ಆ ಬಳಿಕ ಕ್ಐ ಹಿಡಿದವರ ಆಗಮನ, ಶೋಭನ ಪ್ರಸ್ತ...ಮೊದಲ ರಾತ್ರಿ...ಆಗಿನ ನೂರು ಬಯಕೆಗಳು.....ಹತ್ತು ದೇವರಿಗೆ ಹೊತ್ತ ಕಾಯಿ ಹರಕೆ...ರಾಮಚಂದ್ರನನ್ನು ಹೊತ್ತು ಹೆತ್ತದು. ಆ ರಾಮಚಂದ್ರ ಈಗ ಇಲ್ಲ, ಅಮ್ಮಿ ಸೌಭಾಗ್ಯವತಿಯಲ್ಲ, ಚಿರಸುಮಂಗಲೆಯಾಗೆಂಬ ಆಶಿವಾ‍೯ದವಿಲ್ಲ. ಮನೆ ತುಂಬ ಮಕ್ಕಳಾಗಲೆಂಬ ಹಾರೈಕೆ ಇಲ್ಲ. ...ದಿನ ಕಳೆಯಿತು. ಬಲು ದೀರ್ಘವಾಗಿ ಕಂಡ ದಿನಗಳು.