ಪುಟ:Abhaya.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೯೪ ಅಭಯ

ತಾನು ಅಭಯಧಾನುಕ್ಕೆ ಹೋಗಿ ಆಸ್ಪತ್ರೆಗೆ ಬಂದೆನೆಂದು ಆತ

ಹೇಳಿದನಲ್ಲವೆ ? ಸರಿಯಿನ್ನು ಸರಸಮ್ಮನಿಗೆ ತಾನು ಹೇಳಲೇಬೇಕು.

ಅವರಾಗಿ ಕೇಳುವ ಮುಂಚೆಯೇ.......

"ದೊಡ್ಡಮ್ಮ ,ಇವತ್ತು ಇಲ್ಲಿಗೆ ಯಾರೋ ಬಂದಿದ್ದ ರಂತಲ್ಲ, ಅವರು

ಆಸ್ಪತ್ರೆಗೆ ಬಂದಿದ್ರು."

-ಯಾರೋ ತನಗೆ ಪರಿಚಯವೇ ಇಲ್ಲದ ದೂರದ ವ್ಯಕ್ತಿ ಎಂಬಂತೆ.

"ಯಾರು ಸೋಮರೇಖರ ತಾನೆ ?__ಸುಂದ್ರಮ್ನವರ ತಮ್ಮ ?"

"ಹೌದೊಂತ ಕಾಣುತ್ತೆ__ಅವರೇ !"

"ಏನಂದರು ?"

"ವಾರ್ಡ್ ಕೊನೇಲಿ ಕಿಟಿಕೀ ಹತ್ತಿರ ಲಲಿತಾಗೆ ಬೆಡ್ ಮಾಡಿಸಿ

ಕೊಟ್ರು. ನಾಳೆ ಬೆಳಿಗ್ಗೆ ಬದಲಾಯಿಸ್ತಾರೆ"

"ಒಳ್ಳೆಯವರು ಪಾಪ!"

.....ತುಂಗಮ್ಮ ರಾತ್ರೆಯ ಉಟ ಮುಗಿಸಿ ನಿದ್ದೆ ಹೋಗಲೆತ್ನಿಸಿದಳು.

ಸ್ವಲ್ಪ ಹೊತ್ತು ನಿದ್ದೆ ಬರದೆ ಕಾಡಿಸಿತು

ದೊಡ್ಡಮ್ಮ ಹಾಗೆ ಆತನನ್ನು ಹೊಗಳಬಾರದಿತ್ತು....

ಈಗ__ಕಣ್ಣ ಮುಂದೆಯೇ ಇದ್ದಂತಿದ್ದ ಆ ನಗು....

ಒಮ್ಮೆಲೆ ತುಂಗಮ್ಮನಿಗೆ ಭಯವಾಯಿತು. ಎಂಧೆಂಢ ಯೋಚನೆ

ಗಳನ್ನು ಮಾಡುತಿದ್ದಳು ಆಕೆ !

ತುಂಗಮ್ಮನೆಂದುಕೊಂಡಳು : 'ಏನೇ ಆಗಲಿ, ನಾಳೆ ನಾನು ಆಸ್ಪತ್ರೆಗೆ

ಹೋಗಬಾರದು.' .................

ಬೆಳೆಗ್ಗೆ ಎದ್ದ ಸರಸಮ್ಮ ಹಾಸಿಗೆಯ ಮೇಲೆಯೇ ಸ್ವಲ್ಪ ಹೊತ್ತು

ಕುಳಿತುಕೊಂಡರು. ರಾತ್ರೆ ಬಹಳ ಹೊತ್ತು ಯೋಚಿಸಿದ್ದರು ನಿಜ ಆದರೆ

ಸಮಸ್ಯೆ ಬಗೆ ಹರಿದಿರಲಿಲ್ಲ

ಬೆಳಗಾದಮೇಲೂ ಅದೇ ಯೋಚನೆ.

ಸುಂದರಮ್ಮ, ಆಡಳಿತ ಸಮಿತಿಯ ಪ್ರಮುಖ ಸದಸ್ಯೆಯಾಗಿದ್ದರು.

ಬಾಲ ಆಶ್ರಮದ ಯೋಜನೆಗೆ ಅವರ ಬೆಂಬಲವಿತ್ತು. ಅವರದು ಸಾಧಾರಣ