ಪುಟ:Ekaan'gini.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೨ ಏಕಾಂಗಿನಿ ಯೋಜನೆ ಕಾರ್ಯಗತವಾಗದೆ ಹಾಗೆಯೇ ಉಳಿದಿತ್ತು. ಸುನಂದಾ ನಿರೀಕ್ಷಿ ಸಿದ್ದಂತೆಯೇ ಅದರ ಪ್ರಸ್ತಾಪವನ್ನೊಂದು ದಿನ ಅವರು ಮಾಡಿದರು. ತನ್ನ ಒಪ್ಪಿಗೆ ಕೇಳಿದ ತಂದೆಯನ್ನು ಕುರಿತು ಮಗಳೆಂದಳು: “ನಿನಗೆ ಮಗ-ಮಗಳು ಎಲ್ಲಾ ನಾನೇ ಅಂತ ಹೇಳಿದ್ದೆ ಅಲ್ವಾ ಅಪ್ಪಾ ?" ಉತ್ತರಕೊಡದೆ ಕೃಷ್ಣಪ್ಪನವರು ಸುನಂದೆಯನೇ ನೋಡಿದರು. ತಂದೆ ಸುಮ್ಮನಿದ್ದನೆಂದು ಅಧೀರಳಾಗದೆ ಸುನಂದಾ ಮು೦ದುವರಿದಳು: “ನಿನ್ನನ್ನು ಸಾಕೋ ಜವಾಬ್ದಾರಿ ನನಗೆ ಬಿಟ್ಟಿಡು.” “ಹ್ಯಾಗೆ ಸಾಕ್ತೀಯಮ್ಮ?”

  • ದುಡಿದು ಸಂಪಾದಿನ್ತೀನಿ."

“ದುಡಿಯೋದು ಅಂದರೆ?” “ಏನಾದರೂ ಕೆಲಸ ಮಾಡ್ತೀನಿ. ನಿನಗೆ ಯಾಕೆ?”

  • ಸಾಕು ಸುಮ್ನಿರು!”

ಹಾಗೆ ರೋಸಿದ ಮನಸಿನಿಂದಲೆ ಕೋಟು ತೊಟ್ಟು, ಟೊಪ್ಪಿಗೆ ಇಟ್ಟು, ಚಪ್ಪಲಿ ಮೆಟ್ಟಿ ಕೃಷ್ಣಪ್ಪನವರು ಹೊರಬಿದ್ದರು.ಮುಖ ಗಂಟಿಕ್ಕಿಕೊಂಡೇ ಇತ್ತು. ಮಯಸ್ಸಿಗೆ ಮೀರಿದ ವೇಗದಿಂದಲೆ ಅವರು ನಡೆದರು. ಎತ್ತ ಹೋಗು ತಿದ್ದೇನೆ—ಎಂದು ಸರಿಯಾಗಿ ವಿವೇಚಿಸುವಷ್ಟರಲ್ಲೆ ಮೆಜಸ್ಟಿಕ್ ತಲಪಿದರು. ಹೋಗುವುದು ಸರಿಯೆ? ತಪ್ಪೆ?-ಎಂಬ ಯೋಚನೆಯನ್ನೂ ಮಾಡದೆ ಮುಂದೆ ಸಾಗಿ ಪುಟ್ಟಣ್ಣ ಕೆಲಸ ಮಾದುವ ಆಫೀಸಿನೆದುರು ನಿಂತರು. ಬೀದಿಯಲ್ಲಿ ಜನ ಸಂಚಾರ ಹೆಚ್ಚುತ್ತಲೇ ಇತ್ತು. ಎದುರುಬದುರಾಗಿದ್ದ ಕಟ್ಟಡಗಳು ಖಾಲಿಯಾಗಿ, ಹೆಚ್ಚು ಜನ ಸಾಲು ಕಟ್ಟಿ. ಬೀದಿಯ ಪ್ರವಾಹ ವನ್ನು ಸೇರುತಿದ್ದರು. ಅದೇ ಬಾಗಿಲು. ಅದೇ ಹೊರಗೇಟು. ಎಂದಿನ ರೀವಿಯೇ. ಮುಖಮುದ್ರೆ, ಒಂಟಿಯಾದ ತೋಳ, ಪುಟ್ಟಣ್ಣ. ಆತನನ್ನು ನೋಡಿದೊಡನೆಯೆ ಅಧೈರ್ಯ ಕೃಷ್ಣಪ್ಪನವರನ್ನು ಕಾಡಿತು. ಆತನ ಕಣ್ಣಿಗೆ ಇಲ್ಲಿ ತಾನು ಬೀಳುವುದು ಎಂತಹ ಅವವಾನ! ಯಾಕಾದರೂ ಬಂದೆ ಇಲ್ಲಿಗೆ? ಈಗ ತಪ್ಪಿಸಿಕೊ ಳ್ಳುವ ಬಗೆಯಾದರೂ ಯಾವುದು? ಆತ ನೋಡಿದರೆ-