ಪುಟ:Vimoochane.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲ್ಲಿಂದೆದ್ದು, ಸಿಗರೇಟು ಸೇದುವ ಸ್ವಾತಂತ್ರವನ್ನಾದರೂ ಸಂಪಾದಿ ಸೋಣವೆಂದುಕೊಂಡೆ. ಆ ಮಬ್ಬು ಬೇಳಕಿನಲ್ಲಿ ಆತನ ಮುಖ ಮತ್ತಷ್ಟು ರಕ್ತ ಹೀನವಾಗಿ ಕಾಣುತಿತ್ತು ಸುಮ್ಮನಿರು ಎಂದು ಬೆದರಿಸಿ, ಅಲ್ಲೇ ಅಪನ ಜೇಬುಗಳನ್ನು ನಾನೂ ಶೋಧಿಸಿದ್ದರೂ ಆತ ಪ್ರತಿಭಟಿಸುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಅವನನ್ನು ಕಂಡು ನನಗೆ ತಿರಸ್ಕಾರ ಹುಟ್ಟಿತು. ಮನಸ್ಸಿನ ಬೇಸರವನ್ನು ಮತ್ತಷ್ಟು ಹುಟ್ಟಿ ಸುವ ನಿತ್ರಾಣ ಜೀವಿಗಳು !

"ಸಾರ್, ಒಂದುಪಕಾರ ಮಾಡ್ರೀರ?"

ಆತನ ಸ್ವರ, ಕೇಳಿಸದಷ್ಟು ಕ್ಷೀಣವಾಗಿತ್ತು.

"ಏನು? ಏನಾದರೂ ಬೇಕಿತ್ತೇನು?"

"ನೋಡಿ......ಇಲ್ಲಿ ಕೂತಿರೋಕೆ ಆಗಲ್ಲ, ವನಜ ಬರ್ತೀನಿ

ಅಂತಂದ್ಲು. ನಾನೇ ಬೇಡ ಅಂತ ಒಟ್ನೇ ಹೊರಟೆ... ಡ್ರೈವರ್ ಬರೋದು ಇನ್ನೂ ತಡ. ನಂಗೆ ಇಲ್ಲಿ ಈ ಗಾಳಿ ಈ ಕತ್ತಲೆ ಇದೆಲ್ಲಾ" '"ಮನೆಗೇ ಹೋಗ್ತಿರೇನು?" "ಹೌದು......ನಿಮ್ಗೆ ತೊಂದರೆ ಆಗ್ದೇ ಇದ್ರೆ ದಯವಿಟ್ಟ ಒಂದು ಟ್ಯಾಕ್ಸಿ-" ಅದಕ್ಕೇನಂತೆ...ಇಲ್ಲೇ ಕೂತಿರಿ. ಬಂದೆ.' ನಾನು ಫೆರೋಪಕಾರಿಯಾದ ಒಳ್ಳೆಯ ಮನುಷ್ಯನಾಗಿ ಟ್ಯಾಕ್ಸಿ ಹುಡುಕಿಕೊಂಡು ಹೊರಟೆ. ಅದೆಲ್ಲವೂ ದೊಡ್ಡ ತಮಾಷೆಯಾ ಗಿತ್ತು .. ಮೇಲಿನ ಬೀದಿಯಲ್ಲಿ ಎರಡು ಟ್ಯಾಕ್ಸಿಗಳು ಗಿರಾಕಿಗಳ ಹಾದಿ ನೋಡುತಿದ್ದುವು. ಒಂದರಲ್ಲಿ ಕುಳಿತು ಉದಾನದ ಬೀದಿಗೆ ಬಂದೆ. ನಾನು ಟ್ಯಾಕ್ಸಿಯಿಂದಿಳಿದು ಸಮಿಪಿಸುದ್ದಂತೆ ಆತ ಕೇಳಿದ: "ಟ್ಯಾಕ್ಸಿ ಸಿಗ್ತೆ?" "ಸಿಗ್ತು, ಬನ್ನಿ," ಇನ್ನೊಂದುಪಕಾರ ಮಾಡ್ರೀರ?................ದಯವಿಟ್ಟು ನೀವು ನಮ್ಮನೇತನಕ-" ಯೋಚನೆ ಮಾಡಲು ಅಲ್ಲಿ ಸಮಯವಿರಲಿಲ್ಲ. ನನಗಾಗಿ