ಪುಟ:Abhaya.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲಲಿತಾ ಒಂದೇ ಹಾಸಿಗೆಯಮೇಲೆ ಮಲಗಿದ್ದರು, ಒಬ್ಬರನ್ನೂಬ್ಬರು ಅಪ್ಪಿಕೊಂಡು. ಅವರು ಎಚ್ಚರದ ಲೋಕದಲ್ಲೇ ಇರಲಿಲ್ಲ ಕಾಲಮೂಲೆಯಲ್ಲೆ ಮುದುಡಿ ಬದ್ದಿತ್ತು ಹೊದಿಕೆ-ತನ್ನನ್ನು ಕೇಳುವವರಿಲ್ಲವೆಂದು ಗೋಳಿಡುತ್ತ.

ಸರಸಮ್ಮ ಸದ್ದಾಗದಂತೆ ಬಮದು , ಆಹುಡುಗಿಯರಿಬ್ಬರಿಗೂ ಹೊದಿ

ಸಿದರು. ಹಾಗೆಯೆ ಹೊರ ಹೋಗುತ್ತ ದಿಪವಾರಿಸಿದರು.

ಆಮೇಲೆ, ಕಿಟಕಿಯ ಎಡಯಿಂದ ಬೆಳಕು ಮೆಲ್ಲಮೆಲ್ಲನೆ ತೂರಿ ಒಳಕ್ಕೆ

ಬರತೊಡಗಿತು.

ಆ ಬೆಳಗ್ಗೆ ಸರಸಮ್ಮ ಘಂಟೆ ಬಾರಿಸಲಿಲ್ಲ ತುಂಗು ಆದಷ್ಟು ಹೆಚ್ಚು

ಹೊತ್ತು ಮಲಗಿರಲೆಂದು ಅವೇಕ್ಷಿಸಿದ ಅವರು, ತಾವೇ ಹುಡುಗಿಯರು ಮಲಗಿದ್ದೆಡೆಗೆ ಹೋಗಿ ಗದ್ದಲನಾಗದಣತೆ ಅವರನ್ನೆಬ್ಬಿಸಿದರು.

ಸಾವಿತ್ರಿ ಕಣ್ಣು ಹೊಸಕಿಕೊಂಡು ಎದ್ದು ಕುಳಿತಳು.

"ಹೆರಿಗೆಯಾಯ್ತೆ ದೊಡ್ಡಮ್ಮ?

-ಎಂದಾಕೆ ಸರಸಮ್ಮನನ್ನು ಕೇಲಳಿದಳು.

ಇಲ್ಲವೆಂದರು ಸರಸಮ್ಮ ಮುಖಚರ್ಯಯ ಸನ್ನೆಯಿಂದಲೆ. ತನ

ಗರಿಯದೆಯೇ, ತಾನು ನಿದ್ದೆ ಹೋಗಿದ್ದಾಗಲೇ, ಹೆರಿಗೆಯಾಗಿರಬಹುದೆಂದು ಶಂಕಿಸಿದ್ದ ಸಾವಿತ್ರಿಗೆ ಸಮಾಧಾನವೆನಿಸಿತು

ಕುರುಡಿ ಸುಂದ್ರಾ, ದೊಡ್ಡಮ್ಮ ತನ್ನ ಬಳಿಗೆ ಬರುವರೆಂದು ಕಾಯುತ್ತ

ಕುಳಿತಿದ್ದಳು ಚಾಪೆಯ ಮೇಲೆಯ. ಸರಸಮ್ಮ ತನ್ನತ್ತ ಬಂದುದನ್ನು ಕಾಲ ಸಪ್ಪಳದಿಂದಲೆ ತಿಳಿದುಕೊಂಡ ಸುಂದ್ರಾ ಕೇಳಿದಳು:

ಎರಿಗೆ ಆಯಿತ್ರಾ ದೊಡ್ಡಮ್ಮ?

ಇಲ್ಲ ಸುಂದ್ರಾ....

ಬಚ್ಚಲುಮನೆಗೆ ಹೋಗುತ್ತ ಸರಸಮ್ಮನಿಗೆ ಹೃದಯ ಭಾರವಾಯಿತು.

ಎಂತಹ ವಿಚಿತ್ರ ಸಂಸಾರ ತಮ್ಮದ! ಸಹಾಯಕ ಮುಖ್ಯಸ್ಢೆಯಾಗಿ ಅಭಯಧಾಮಕ್ಕೆ ಅವರು ಬಂದಿದ್ದರು ಹಿಂದೆ ಮುಖ್ಯಸ್ಧೆ ಆ ಕೆಲಸ ಬಿಟ್ಟು ಹೋದ ಮೇಲೆ ತಾವೇ ಆ ಸ್ಧಾನಕ್ಕೆ ಬಂದರು ಅಂದಿನಿಂದ ಈವರೆಗೆ-ಇಷ್ಟು ವರ್ಷಗಳಕಾಲ-ಎಷ್ಟೊಂದು ವಿಚಿತ್ರವಾಗಿ ಸಾಗಿತ್ತು ಅವರ ಬದುಕು.

.... ನೀರು ಮುಖದ ಮೇಲಿದ್ದಂತೆಯೆ ಸರಸಮ್ಮ ತಮ್ಮ ಕೊಠಡಿಗೆ