ಪುಟ:Vimoochane.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಆಕೆ ಧೈರ್ಯವಂತೆ ರಾಧಾಕೃಷ್ಣ-ನನ್ನ ಹಾಗಲ್ಲ."

"ಅಲ್ಲವೆ?"

"ನೀವು ಇನ್ನೂ ನಾಲ್ಕು ದಿನ ಅವಕಾಶ ಸಿಕ್ಕಿದ್ದರೆ ಅನಾಹುತ ಮಾಡ್ಬಿಡ್ತಿದ್ರಿ.......ಪಾಪ! ನನೂ ನಿಮಗಾಗಿ ಸೈಂಟಿಸ್ಟ್ ಆಗೋ ದನ್ನೂ ಬಿಟ್ಕೊಟ್ಟಿದ್ದಳು...ನಿಮಗೆ ಹೃದಯವಿಲ್ಲ."

"ವನಜಾ ಹಾಗಂದಳೆ?"

"ಇನ್ನು ನಮ್ಮನ್ನು ನೀವು ಏಕವಚನದಲ್ಲಿ ಕರೀಬೇಡಿ. ನಿಮಗೆ ಆ ಅಧಿಕಾರವಿಲ್ಲ."

"ಹೂಂ"

"ಒಂದಲ್ಲ ಒಂದಿವ್ಸ ನಿಮ್ಗೆ ಸರಿಯಾದ ಶಾಸ್ತಿ ಆಗತ್ತೇಂತ ಹೇಳೂಂತಂದ್ಲು. ಮಾಧವರಾಯರಲ್ದೇ ಹೋಗಿದ್ರೆ, ನಮ್ತಂದೆ ನಿಮ್ಮನ್ನ ಜೈಲಿಗೆ ಕಳಿಸ್ತಿದ್ರು.

" ಪುಟ್ಟ ಹುಡುಗೀನ. ಹಾರಿಸ್ಕೊಂಡು ಹೋಗೋಕೆ ಯತ್ನಿಸ್ದೆ ಅಂತಲೋ?"

"ಅದೇನೋ ನಮ್ತಂದೆ ಸಾಮಾನ್ಯರಲ್ಲ ರಾಧಾಕೃಷ್ಣ....."

ಎಲ್ಲವೂ ಕಹಿಕಹಿಯಾಗಿ ತೋರುತ್ತಿತ್ತು-ಎಲ್ಲವೂ! ಆತನ ಮಾತುಗಳೇ ನನಗೆ ಕೇಳಿಸುತ್ತಿರಲ್ಲಿಲ್ಲ. ನಾನು ಕಿವುಡನಾಗುತ್ತಿದ್ದೆ ನೇನೂ-ಕುರುಡನಾಗುತಿದ್ದೆನೇನೊ.

"ನಾನು ಕೂಡ ಬರ್ತಾ ಇರ್ಲಿಲ್ಲ.ವನಜಾನೇ ನನ್ನ ಕಳಿಸಿ ಕೊಟ್ಟವಳು. ಇಷ್ಟು ಹೇಳ್ಬಿಟ್ಟು ಬಾ ಅಂತಂದ್ಲು."

"ಸರಿ ಇನ್ನು.ಹೇಳಿದ್ದಾಯ್ತು ತಾನೆ?"

"ಮಾತೇ ಹೊರಡ್ಪೆ ಸುಮ್ಮನಿದ್ದೀರಲ್ಲ!"

"ಏನು ಹೇಳೋದಕ್ಕೂ ಇಷ್ಟಪಡೋಲ್ಲ."

"ಅಷ್ಟೇನೊ?"

"ಅಷ್ಟೆ, ಮುರಲೀಧರ್......"

ನಾನೆದ್ದು ನಿಂತೆ.ತಲೆ ಗಿರ್ ಎನ್ನುತಿತ್ತು. ಆದರು ಔಡು ಕಚ್ಚಿ ಕೊಂಡು ಕೇಳಿದೆ;