ಪುಟ:Mysore-University-Encyclopaedia-Vol-1-Part-1.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಯಗತಿಯಂತೆ ಏರ್ಪಡುವ ಗಣವ್ಯವಸ್ಥೆ, ಗಣಗಣಗಳಿಗೆ ಪರಸ್ಪರವಾಗಿ ಸಮಭಾರ- ಇವು ಅಂಶಗಣದ ಲಕ್ಷಣಗಳು. ಕೆಲವು ಸಂದರ್ಭಗಳಲ್ಲಿ ಅಕ್ಷರಗಳ ನ್ಯೂನಾಧಿಕ್ಯಗಳು ಒಂದು ಮಿತಿಗಿಂತ ಹೆಚ್ಚಾಗಿರುವುದುಂಟು, ಆಡುಮಾತು ಬರೆವಣಿಗೆಯಲ್ಲಿ ಬಗೆಬಗೆಯ ರೂಪವ್ಯತ್ಯಾಸಗಳನ್ನು ಪಡೆಯುವುದುಂಟು. ಆಗ ಗಣಗಳು ಗೊತ್ತಾದ ತಾಳಮಾನಕ್ಕೆ ಹೊಂದದೆ ಹೋಗುತ್ತವೆ, ನಿಷಿದ್ಧವಾದ ಅಕ್ಷರವಿನ್ಯಾಸ ಎದುರಾಗುತ್ತದೆ. ಆದರೆ ಅಂಶಛಂದಸ್ಸಿನಲ್ಲಿ ತಾಳಮಾನತೆಯಲ್ಲ. ಗೇಯಮಾನತೆಯೇ ಪ್ರಧಾನವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶುದ್ಧ ಅಂಶಲಯ ತಾಳದ ಕಟ್ಟು ಮೀರಿದ್ದು (ತಾಲವರ್ಜಿತಾ). ತ್ರಿಪದಿ ಸಾಂಗತ್ಯದಂಥ ಕನ್ನಡದ ಮೆಚ್ಚಿನ ಮಟ್ಟುಗಳನ್ನು ಬೇರೆ ಬೇರೆ ಧಾಟಿಗಳಲ್ಲಿ ಸ್ಥಾಯಿಗಳಲ್ಲಿ ಬೇಕಾದ ಕಡೆ ಸ್ವರದ ಏರಿಳಿತಗಳನ್ನೂ ಒತ್ತುಗಳನ್ನೂ ತಂದು ಹಾಡುವುದನ್ನು ಆಲಿಸಿದರೆ ಇದು ಎಷ್ಟೋ ಕಡೆಗಳಲ್ಲಿ ತಾಳಸಂಗೀತದ ಕಾಲಮಾತ್ರೆಯೂ ಆಲಾಪನೆಯೂ ಮೌನವೂ ಉಚ್ಚಾರಾಂಶಗಳನ್ನು ಹೊಂದಿಸಿಕೊಡುತ್ತವೆ. ಅಂಶಗಣವೇ ದ್ರಾವಿಡ ಲಯವನ್ನು ರೂಪಿಸುವ ಘಟಕ. ನಿಯಮಕ್ಕೆ ಒಳಗಾಗಿರುವಂತೆಯೇ ಅದನ್ನು ಮೀರಿರುವುದು ಕೂಡ ಅದರ ಸಹಜ ಲಕ್ಷಣ. ಇಲ್ಲಿ ಅಂಶಗಣರಚನೆಯ ಸಾಮಾನ್ಯ ಸ್ವರೂಪವನ್ನು ನಿದರ್ಶಿಸಲು ಮೂರು ಉದಾಹರಣೆಗಳನ್ನು ಕೊಡಲಾಗಿದೆ; ಅಂಶ ಛಂದಸ್ಸಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ತ್ರಿಪದಿಯಲ್ಲಿ ಒಟ್ಟು ೧೧ ಅಂಶಗಣಗಳಿದ್ದು, ೬ ಮತ್ತು ೧೦ ನೆಯವು ಬ್ರಹ್ಮಗಣಗಳೂ ಉಳಿದವು ವಿಷ್ಣುಗಣಗಳೂ ಆಗಿರುತ್ತವೆಯೆಂಬುದು ಸಾಮಾನ್ಯ ನಿಯಮ. ತೊŠಟ್ಟಿ‰ಲ‰ | ಹೊ‰ತು‰ಕೊŠಂಡು‰ | ತೌŠರ್Šಬಣ‰್ಣ | ಉ‰ಟು‰ಕೊ…Šಂಡು‰ ಅ…Šಪ‰್ಪ ಕೊ | ಟ್ಟೆŠಮ್ಮೆ‰ | ಹೊ‰q‰ÀಕೊŠಂಡು‰ | ತ‰ವ‰ರೂŠರ‰ | ತಿŠಟŠ್ಹತಿ‰್ತ | ತಿ‰ರು‰ಗಿ‰ | ನೋŠಡ್ಯಾŠಳ‰ || (ಜನಪದಗೀತೆ) ಅಂಶಛಂದಸ್ಸಿನ್ಲಲ್ಲಿ ತ್ರಿಪದಿಯಂತೆಯೇ ಜನಪ್ರಿಯವೂ ಹಾಡುಗಬ್ಬಗಳಿಗೆ ವಾಹಕವೂ ಆಗಿರುವ ಸಾಂಗತ್ಯದಲ್ಲಿ ಒಟ್ಟು ೧೪ ಅಂಶಗಣಗಳಿದ್ದು ೭ ಮತ್ತು ೧೪ ನೆಯವು ಬ್ರಹ್ಮಗಣಗಳೂ ಉಳಿದವು ವಿಷ್ಣುಗಣಗಳೂ ಆಗಿರುತ್ತವೆಯೆಂಬುದು ಸಾಮಾನ್ಯ ನಿಯಮ. ತ‰ನು‰ ಜಿ‰£‰À | ಗೃ‰ಹ‰ವೆಂŠದು‰ | ಮ‰£‰À ಸಿಂŠಹ‰ | ಪೀŠo‰ÀವೆಂŠ | z‰Àನು‰ಪ‰ ಮಾŠ | ತ್ಮ‰ನೆ‰ ಜಿ‰£‰À | ನೆಂದು | ನೆ‰£‰Àº‰ÀನೆŠ | ಲ್ಲ‰ª‰À ಬಿŠಟ್ಟು‰ | PŠÀಣ್ಮುŠಚಿ‰್ಚ | ನೋŠಳ್ಪಾŠU‰À | ಜಿ‰£‰ÀನಾŠಥ‰ | ತೋŠರು‰ವ‰ | ನೊ‰¼‰ÀU‰À || (ಭರತೇಶವೈಭವ) ತ್ರಿಪದಿ ಮತ್ತು ಸಾಂಗತ್ಯಗಳನ್ನು ಬಿಟ್ಟರೆ, ಚಂಪೂಕಾವ್ಯಗಳಲ್ಲಿ ಪ್ರಾತಿನಿಧಿಕವಾಗಿ ಬಳಕೆಯಾಗಿರುವ ಪಿರಿಯಕ್ಕರದಲ್ಲಿ ಪ್ರತಿಪಾದದಲ್ಲಿಯೂ ೧ ಬ್ರಹ್ಮ ೫ ವಿಷ್ಣು ೧ ರುದ್ರ ಹೀಗೆ ಅನುಕ್ರಮವಾಗಿ ಗಣಗಳು ಬರುತ್ತವೆ; ವಿಷ್ಣುಗಣಗಳ ಸ್ಥಾನದಲ್ಲಿ ಬ್ರಹ್ಮಗಣಗಳು ಬರುವುದು ಸಾಮಾನ್ಯ. ಈŠU‹Àಳ್Š | ನಿŠೀನಿŠರ್ದು‰ | ನೋŠನಿ‰¸‰ೆ | ನೊŠಂತು‰ ಮ‰ | ಹಾŠಬ‰ಳŠಂ | ಲ‰ಲಿ‰ತಾŠಂUŠÀಂ | ವŠಜ‰್ರಜಂŠಘŠಂ | ಭೊŠೀU‰À | ಭೂŠಮಿ‰ಜಂŠ | ಶ್ರೀŠzs‰Àg‰À | ದೇŠವಂŠ | ಸು‰ವಿ‰ಧಿ‰ £‰À | ರಾŠದಿ‰üಪ‰ | £ŠÀಚ್ಯು‰ತೇŠಂದŠ್ರ | ಸಾŠಗ‰ ರಾಂŠತಂŠ | ನೆ‰ಲ‰ ನೆ‰ನಿ‰ | v‰Àನಿ‰ತು‰ಮŠಂ | ಚŠP‰À್ರದಿಂŠ | ¨‰ೆ¼‰ÀPŠೆಯ್ಸಿ‰ | ವŠಜ್ರ‰ನಾŠಬಿ‰ü | ಯಾŠಗಿ‰ | ¸ŠÀರ್ವಾŠರ್ಥ‰ | ಸಿŠದ್ದಿ‰ಯೊŠಳ್ | ಪುŠಟಿ‰್ಟ | ¨‰sÀg‰Àv‰Àದೊ‰ | ಳಿŠನ್ನಾŠದಿ‰ | ದೇŠª‰À£ŠÀಪ್ಪೊಂŠ | (ಆದಿಪುರಾಣ) (ನೋಡಿ- ಕನ್ನಡ-ಛಂದಸ್ಸು) (ಟಿ.ವಿ.ವಿ.) ಅಂಶ - ಚತುರ್ಥಕ ಕಾರ್ಯಕ್ರಮ : ಅಮೆರಿಕ ಸರ್ಕಾರ ೧೯೪೯ರಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ದೇಶಗಳಿಗೆ ತಾಂತ್ರಿಕ ನೆರವು ನೀಡಲು ಪ್ರಾರಂಭಿಸಿದ ಒಂದು ಕಾರ್ಯಕ್ರಮ. ೧೯೪೯ ಜನವರಿ ೨೦ರಂದು ಪ್ರೆಸಿಡೆಂಟ್ ಹ್ಯಾರಿ ಎಸ್. ಟ್ರೂಮನ್ನರು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಮಾಡಿದ ಭಾಷಣದ ನಾಲ್ಕನೆಯ ಅಂಶದಲ್ಲಿ ಈ ವಿಷಯ ಪ್ರತಿಪಾದಿತವಾಗಿದ್ದುದರಿಂದ ಈ ಹೆಸರು ಬಂದಿತು. ಅಧ್ಯಕ್ಷ ಟ್ರೂಮನ್ ಹೇಳಿದ್ದೇನೆಂದರೆ ‘ನಾಲ್ಕನೆಯದಾಗಿ, ನಮ್ಮ ವಿಜ್ಞಾನದ ಮುನ್ನಡೆ ಮತ್ತು ಔದ್ಯೋಗಿಕಾಭಿವೃದ್ಧಿ ಇವುಗಳ ನೆರವನ್ನು ಅಭಿವೃದ್ಧಿ ಹೊಂದದ ದೇಶಗಳ ಏಳಿಗೆಗೂ ಬೆಳೆವಣಿಗೆಗೂ ಒದಗುವಂತೆ ಮಾಡಲು ನಾವು ಧೃತಿಗೊಂಡು ಒಂದು ಹೊಸ ಕಾರ್ಯಕ್ರಮವನ್ನು ಹಾಕಿಕೊಂಡು ಅದನ್ನು ನಡೆಸಬೇಕಾಗಿದೆ. ಶಾಂತಿಪ್ರಿಯರಾದ ಜನಗಳಿಗೆ ನಮ್ಮ ತಾಂತ್ರಿಕ ವಿಜ್ಞಾನದ ಬೊಕ್ಕಸವನ್ನು ತೆರೆದು, ಅವರು ತಮ್ಮ ಉತ್ತಮ ಜೀವನದಾಸೆಗಳನ್ನು ಪೂರೈಸಿಕೊಳ್ಳಲು ನಾವು ನೆರವು ನೀಡಬೇಕು......ತಮ್ಮ ತಾಂತ್ರಿಕ ಜ್ಞಾನದ ಸಂಪನ್ಮೂಲಗಳನ್ನು ಈ ಕೆಲಸಕ್ಕಾಗಿ ಒಟ್ಟುಗೂಡಿಸಲು ಇತರ ದೇಶಗಳನ್ನು ನಾವು ಆಹ್ವಾನಿಸುತ್ತೇವೆ. ಇದು ವಿಶ್ವಸಂಸ್ಥೆ ಮತ್ತು ಅದರ ಎಲ್ಲ ವಿಶಿಷ್ಟ ನಿಯೋಗಗಳ ಮೂಲಕ ಎಲ್ಲೆಲ್ಲಿ ಕಾರ್ಯಗತ ಮಾಡಲು ಸಾಧ್ಯವಾಗುತ್ತದೋ ಅಲ್ಲಲ್ಲಿ ಎಲ್ಲ ರಾಷ್ಟ್ರಗಳೂ ಸಹಕರಿಸಿ ವರ್ತಿಸುವ ಉದ್ಯಮವಾಗಬೇಕು. ಮುಖ್ಯವಾಗಿ ತಾಂತ್ರಿಕ ನೆರವನ್ನು ಕೊಡುವ ಸಲುವಾಗಿಯೇ ಈ ಕಾರ್ಯಕ್ರಮವೇರ್ಪಟ್ಟಿತು; ದೇಶಾಭಿವೃದ್ಧಿಗಾಗಿ ಮೂಲಧನವನ್ನು ಒದಗಿಸುವುದಕ್ಕಲ್ಲ. 1949ರಲ್ಲಿ ಅಮೆರಿಕದ ಸ್ಟೇಟ್ ಕಾರ್ಯದರ್ಶಿಯವರು ವಿವರಿಸಿದಂತೆ, ಇದು ತಾಂತ್ರಿಕತಜ್ಞರ ವೇತನ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿದೆ; ಬೃಹತ್ ಪ್ರಮಾಣದಲ್ಲಿ ಯಂತ್ರಸಾಮಗ್ರಿಗಳನ್ನು ಮತ್ತು ಕಚ್ಚಾವಸ್ತುಗಳನ್ನು ಕೊಂಡುಕೊಳ್ಳುವ ವೆಚ್ಚವನ್ನಲ್ಲ. ಆದರೂ ಖಾಸಗಿಯಾಗಿ ಅಮೆರಿಕ ದೇಶದವರು ಅನಭಿವೃದ್ಧಿ ದೇಶಗಳಿಗೆ ಮೂಲಧನವನ್ನು ಒದಗಿಸುವ ಪ್ರವೃತ್ತಿಗೆ ಉತ್ತೇಜನ ಕೊಡುವುದು ಅಂಶ-ಚತುರ್ಥಕ ಉದ್ದೇಶಗಳಲ್ಲೊಂದು. 1949-52ರ ನಡುವೆ ಏಷ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ 30 ದೇಶಗಳು ಅಂಶ-ಚತುರ್ಥಕದ ಪ್ರಕಾರ ತಾಂತ್ರಿಕ ಸಹಾಯವನ್ನು ಪಡೆದಿವೆ. ಈ ಕಾರ್ಯಕ್ರಮದ ನೆರವನ್ನು ಪ್ರಥಮತಃ ಪಡೆದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು. ಇದನ್ನು ಒಂದು ಕಾನೂನಿನ ಮೂಲಕ ಸ್ಟೇಟ್ ಕಾರ್ಯದರ್ಶಿಯವರು ನಿರ್ವಹಿಸಿದರು. ಈ ಕಾನೂನಿಗೆ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾನೂನು ಎಂದು ಹೆಸರು. ಇದನ್ನು ಈ ಉದ್ದೇಶಕ್ಕಾಗಿಯೇ 1950ರಲ್ಲಿ ಕಾರ್ಯಗತಗೊಳಿಸಲಾಯಿತು. ವರ್ಷವೊಂದಕ್ಕೆ 50 ದಶಲಕ್ಷ ಡಾಲರ್ ವೆಚ್ಚದಿಂದ ಈ ಕಾರ್ಯಾಚರಣೆ ಪ್ರಾರಂಭವಾಯಿತು. ಅಂಶ-ಚತುರ್ಥಕ ಕಾರ್ಯಕ್ರಮ ತನ್ನ ಮೂಲ ರೂಪದಲ್ಲಿ ಸು. 3 ವರ್ಷಗಳ ಕಾಲ ಮಾತ್ರ ಜರುಗಿತು. 1952ರಿಂದೀಚೆಗೆ ಅಭಿವೃದ್ಧಿಗೊಳ್ಳದ ದೇಶಗಳಿಗೆ ಅಮೆರಿಕದ ಸಹಾಯ ಪರಸ್ಪರ ಸಂರಕ್ಷಣ ಕಾನೂನಿನ ಪ್ರಕಾರ ಮೂಲ ಧನದ ಎಂದರೆ, ಅಮೆರಿಕದ ಯಂತ್ರಸಾಮಗ್ರಿಗಳನ್ನು ಮತ್ತು ಕಚ್ಚಾವಸ್ತುಗಳನ್ನು ಕೊಳ್ಳಲು ಹಣದ ಸಹಾಯವನ್ನೂ ಒಳಗೊಳ್ಳುವಂತೆ ವಿಸ್ತøತವಾಯಿತು. 1956ರಿಂದೀಚೆಗೆ ಅಮೆರಿಕ ದೇಶ ಪಬ್ಲಿಕ್ ಲಾ- 480 ಎಂಬ ವಿಧಿಯ ಮೂಲಕ (ಇದು ತಮ್ಮಲ್ಲಿ ಅಧಿಕವಾಗಿ ಶೇಖರವಾಗಿರುವ ಕೃಷಿವಸ್ತುಗಳನ್ನು ಹೊರಗೆ ವಿಲೇವಾರಿ ಮಾಡಲು ಅವರು ಬಳಸಿದ ಒಂದು ಕಾನೂನು) ತನ್ನಲ್ಲಿ ಹೆಚ್ಚುವರಿಯಾಗಿರುವ ಗೋಧಿ ಮತ್ತು ಹತ್ತಿಯನ್ನು ಕೊಡುವುದರ ಮೂಲಕ ಸಹಾಯ ಮಾಡಲು ಪ್ರಾರಂಭಿಸಿತು. ತಾಂತ್ರಿಕ ಸಹಾಯ ಮೊದಲು ಅಂತಾರಾಷ್ಟ್ರೀಯ ಸಹಕಾರಾಡಳಿತ, ಆ ಬಳಿಕ ಅಂತಾರಾಷ್ಟ್ರೀಯ ಅಭಿವೃದ್ಧಿ ನಿಯೋಗ-ಇವುಗಳಿಂದ ನಿರ್ವಹಿಸಲ್ಪಟ್ಟು, ಅಭಿವೃದ್ಧಿಗೊಳ್ಳದ ದೇಶಗಳಿಗೆ ಸಹಾಯವನ್ನು ನೀಡಲು ಸುಸಂಘಟಿತವಾದ ಯೋಜನೆಯೊಂದರ ಅಂಗವಾಗಿ ಪರಿಣಮಿಸಿತು. 1950ರಲ್ಲಿ ವಿಶ್ವಸಂಸ್ಥೆ ‘ವಿಸ್ತøತ ತಾಂತ್ರಿಕ ಸಹಾಯ ಕಾರ್ಯಕ್ರಮ’ವನ್ನು ಮೊದಲು ಪ್ರಾರಂಭಿಸಲು ಅಂಶ-ಚತುರ್ಥಕ ಕಾರ್ಯಕ್ರಮ ತಕ್ಕಷ್ಟು ಪ್ರಭಾವವನ್ನು ಬೀರಿತು. ವಿಶ್ವಸಂಸ್ಥೆಯ ಕಾರ್ಯಕ್ರಮಗಳಿಗೆ ಅಮೆರಿಕ ತನ್ನ ಕೊಡುಗೆಯನ್ನು ಅಧಿಕಾಂಶದಲ್ಲಿ ನೀಡುವ ದೇಶವಾಗಿದೆ. ತಮಗಿಂತ ಹೀನಸ್ಥಿತಿಯಲ್ಲಿರುವ ರಾಷ್ಟ್ರಗಳಿಗೆ ಸುಸ್ಥಿತಿಯಲ್ಲಿರುವ ರಾಷ್ಟ್ರಗಳು ಸಾಧ್ಯವಾದಷ್ಟು ಸಹಾಯ ಸಂಪತ್ತಿಯನ್ನು ಒದಗಿಸುವಂತೆ ಅಂಶ-ಚತುರ್ಥಕ ಮೇಲುಪಂಕ್ತಿಯನ್ನು ಹಾಕಿಕೊಟ್ಟಿದೆ. (ಎಚ್.ವಿ.) ಅಂಶುಮಂತ : ಅಯೋಧ್ಯೆಯ ಸಗರ ಚಕ್ರವರ್ತಿಯ ಮೊಮ್ಮಗ. ಸಗರ ಅಶ್ವಮೇಧಯಾಗ ಪ್ರಾರಂಭಿಸಿದಾಗ ಯಾಗಾಶ್ವವನ್ನು ದೇವೇಂದ್ರ ಅಪಹರಿಸಿ ಪಾತಾಳಲೋಕದಲ್ಲಿಟ್ಟನು. ಆ ಅಶ್ವವನ್ನು ತರುವುದಕ್ಕಾಗಿ ಸಗರನ 60,000 ಮಕ್ಕಳು ಪಾತಾಳಕ್ಕೆ ಹೋಗಿ ಅಲ್ಲಿ ಕಪಿಲಮಹರ್ಷಿಯನ್ನು ಕೆಣಕಿ ಅವನ ಕೋಪಾಗ್ನಿಯಲ್ಲಿ ಬೆಂದು ಭಸ್ಮವಾದರು. ಪ್ರಾಜ್ಞನೂ ಸದ್ಗುಣಿಯೂ ಆದ ಅಂಶುಮಂತ ಹೋಗಿ ಆ ಕುದುರೆಯನ್ನು ತಂದು ಯಾಗ ಪೂರ್ಣಗೊಳ್ಳುವಂತೆ ಮಾಡಿದ. ಸಗರ ಸ್ವರ್ಗಸ್ಥನಾದ ಮೇಲೆ ಅಂಶುಮಂತ ಪಟ್ಟಾಭಿಷಿಕ್ತನಾದ. ಇವನ ಅನಂತರ ದಿಲೀಪ, ಭಗೀರಥ ಮುಂತಾದವರು ರಾಜ್ಯವನ್ನು ಆಳಿದರು. (ಎ.ಎಂ.) ಅಂಶುವರ್ಮನ್ : 610-23. ನೇಪಾಳದ ಲಿಚ್ಛವಿ ವಂಶದ ರಾಜನಾದ ಶಿವದೇವನ ಮಹಾಸಾಮಂತ (ಠಾಕುರಿ ರಾಜಪುತ್ರನೆಂದೂ ಠಾಕುರಿ ವಂಶದ ಸಂಸ್ಥಾಪಕನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಈ ವಂಶ ನೇಪಾಳಕ್ಕೆ 18 ರಾಜರನ್ನು ಕೊಟ್ಟಿತು). 7ನೆಯ ಶತಮಾನದ ಆದಿಭಾಗದಲ್ಲಿ ಆಭೀರರು ಲಿಚ್ಛವಿ ರಾಜ್ಯದ ಮೇಲೆ ದಂಡಯಾತ್ರೆಯನ್ನು ನಡೆಸಿದಾಗ ಅಂಶುವರ್ಮ ಅವರ ವಿರುದ್ಧ ಯುದ್ಧಮಾಡಿ, ಗೆದ್ದು ಶ್ರೇಷ್ಠ ಸೇನಾಪತಿಯೆನಿಸಿಕೊಂಡ. ಇವನ ಕೀರ್ತಿ ಎಲ್ಲ ಕಡೆಯೂ ಪ್ರಸರಿಸಿತು. ಕ್ರಮೇಣ ಇವನೇ ನೇಪಾಳಕ್ಕೆ ರಾಜನಾದ. ಲಿಚ್ಛವಿ ವಂಶದ ರಾಜನ ಮಗಳನ್ನೇ ಮದುವೆ ಮಾಡಿಕೊಂಡು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ. ಮಾನಗೃಹವೇ ನಡೆದುಬಂದ ರಾಜಧಾನಿಯಾಗಿದ್ದರೂ ಕೈಲಾಸಕೂಟವನ್ನು ತನ್ನ ನಿವಾಸಸ್ಥಾನವನ್ನಾಗಿ ಮಾಡಿಕೊಂಡ. ಭಾರತಕ್ಕೆ ಬಂದ ಯುವಾನ್ ಚಾಂಗ್ ಇವನನ್ನು ನೇಪಾಳದ ಖ್ಯಾತಿವೆತ್ತ ದೊರೆಯೆಂದೂ