ಪುಟ:Abhaya.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೮೧

ತುಂಗಮ್ಮನ ತಂದೆಯ ಮುಖದ ಭಾವನೆ ಸಿಕ್ಕುಗಟ್ಟಕೊಂಡಿದ್ದುದು ಹಾಗೆಯೇ ಉಳಿಯಿತು. ನಾರಾಯಣಮೂರ್ತಿಯನ್ನು ಸರಸಮ್ಮನೋಡಿರಲಿಲ್ಲ. ಆದರೆ ಅವರು ಕಂಡಿದ್ದರು. ಎಂತಹ ಮಾನವಕೀಟ!....ಆ ಮಗು ...ಅದು ಸತ್ತೇ ಹುಟ್ಟಿತು. ..

ಆದ ನಷ್ಟ ಅಷ್ಟರಲ್ಲೇ ಇದೆ- ಎಂದಿತು ವಯಸ್ಸಾಗಿದ್ದ—ಆದರೆ ಕಹಿ ಯಾದ—ಅವರ ಮನಸ್ಸು.

"ಆಮೇಲೇನಾದರೂ ಮದುವೆ ಯೋಚನೆ ಮಾಡಿದ್ರಾ?"

__ಆಗಿನಿಂದಲೇ ತುಂಗಮ್ಮನ ಭವಿಷ್ಯತ್ತಿಗೆ ತಾವೇ ಜವಾಬ್ದಾರರೆಂಬಂತೆ ಸರಸಮ್ಮ ಕೇಳಿದರು.

" ಇಲ್ಲ ಹ್ಯಾಗೆ ಸಾಧ್ಯನೋಡಿ. ನಮ್ಮ ಹುಡುಗಿಗೂ ಗೊತ್ತಿಲ್ಲ. ಮಾವಳ್ಳೀಲಿ ಆಕೇನ ಅಷ್ಟು ದಿವಸ ಸಾಕಿದ ಆ ಇಬ್ಬರನ್ನು ಬಿಟ್ಟು ಬೇಕೆ ಯಾರಿಗೂ ಗೊತ್ತಿಲ್ಲ...ಆದರೂ ...ಹ್ಯಾಗೇಂತ ವರ ಹುಡುಕಿಕೊಂಡು ಹೋಗ್ಲಿ? ನಾಳೆದಿನಸ ಯಾವುದಾದರೂ ಕೆಟ್ಟನಾಲಿಗೆ ಏನಾದರೂ ಅಂದರೆ ಅನುಭವಿಸೋರು ಯಾರು?"

"ಅದರೆ ಹೀಗೇ ಬಿಡೋದ್ಕಾಗುತ್ತಾ? ನಾನೂ ನೋಡ್ತಿರ್‍ತೀನಿ. ಒಳ್ಳೆಯ ಸಂಬಂಧವೇನಾದರೂ ಕುದುರೋ ಲಕ್ಷಣವಿದ್ದರೆ ನಿಮಗೆ ಬರೀತೀನಿ... ...... ಹಾಗೇನಾದರೂ ಆದರೆ ನನಗೆಷ್ಟೋ ಸಂತೋಷ ವಾಗುತ್ತೆ."

" ಅಮ್ಮ! ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಿ. ನನ್ನ ಮಗಳು ಬೀದಿ ಪಾಲಾಗದ ಹಾಗೆ ನೋಡ್ಕೊಳ್ಳಿ. "

" ದೇವರಿದಾನೆ. ಒಳ್ಳೆಯೋರ್‍ನ ದೇವರು ಬಿಟ್ಟು ಹಾಕೊಲ್ಲ!"

ಅದು ಯಾವಾಗಲೂ ಕೆೊನೆಯದಾಗಿ ಸರಸಮ್ಮ ಉಚ್ಚರಿಸುತಿದ್ದ ಉದ್ಗಾರ. ಅದೆಷ್ಟು ಸಾರೆ ಎಷ್ಟು ಜನಕ್ಕೆ ಹಾಗೆ ಹೇಳಿದ್ದರೊ!

ತುಂಗಮ್ಮನ ತಂದೆಯೂ ಕ್ಷಣಕಾಲ, ದೇವರು ನೀಡುವ ಅಭಯದ ಸತ್ಯಾಸತ್ಯತೆಯನ್ನು ಕುರಿತು ಚಿಂತಿಸಬಯಸಿದರು.

" ನಾನು ಪ್ರಯತ್ನಪಟ್ಟು, ಸಮಿತಿಯವರಿಗೆ ಹೇಳಿ, ಓದು ಬರಹ ಏನೂ ಬಾರದ ಹುಡುಗೀರಿಗೆ ಪಾಠ ಹೇಳ್ಳೊಡೊ ಕೆಲಸ ತುಂಗಮ್ನಿಗೆ