ಪುಟ:27-Ghuntigalalli.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೮ ಬಿ. ಎಸ್. ವೆಂಕಟರಾಮ

ಯಲ್ಲಿ ಆ ರಾತ್ರಿ ಅವರೆದುರಿನಲ್ಲಿ ನಿಂತೆ. ಆಕೆಗೆ ಭಯವಾಯಿ ತೇನೋ ! “ ಏಕೆ ಹೀಗಿದ್ದೀರಿ?-ನೀವು ಮೊದಲಿನಂತಿಲ್ಲ ! ನೀವು ಬೊಂಬಾಯಿಗೆ ಹೋಗಿ, ನಿಮ್ಮ ತಮ್ಮ ಹೋದದ್ದು ಕಂಡು ಹೀಗಾಗಿ ದ್ದೀರಿ_ಡಾಕ್ಟರಿಗೆ ತೋರಿಸಬಾರದೆ "........ಹಾಗೆ ಹೀಗೆ ಏನೇನೋ ಬಹಳ ಆದರದಿಂದ ಮಾತನಾಡುತ್ತ ಬಳಿಯಲ್ಲಿ ಕುಳಿತಳು.

ಮನಬಿಚ್ಚಿ ಎಲ್ಲವನ್ನೂ ಇದ್ದುದಿದ್ದಂತೆ ಹೇಳಿದೆ. ಆಕೆ ನಂಬಲಿಲ್ಲ. ನಾನು ಕಾಡುವ ಬುದ್ಧಿಯಿಂದ ಹಾಗೆ ಹೇಳುತ್ತಿರುವೆನೆಂದು ಭಾವಿಸಿ ಅಪಹಾಸ್ಯ ಮಾಡಿದಳು. ನಾನು ನನ್ನ ಬೆನ್ನ ಮೇಲಿದ್ದ ಮಚ್ಚೆಯನ್ನು ತೋರಿಸಿದೆ. ಆಕೆ ಬೆಚ್ಚಿ ಬಿದ್ದು ದೂರಸರಿದು ನಿಂತಳು. “ಹಾಗಾದರೆ ನೀವು ಹೇಳಿದ್ದು ಸತ್ಯವೇ ?” ಎಂದಳು. ತಲೆ ತೂಗಿದೆ. ಸರ್ರನೆ ಹೊರಕ್ಕೆ ಹೋಗಿಬಿಟ್ಟಳು. ಇನ್ನು ನಾನು ಬೆಳಿಗ್ಗೆ ತಂದೆ ತಾಯಿಗಳಿಗೆ ಈ ಸುದ್ದಿ ಹೇಗೆ ತಿಳುಹಿಸುವುದೆಂದು ಯೋಚಿಸುತ್ತ ರಾತ್ರಿ ಕಾಲ ಕಳೆದೆ.

ಬೆಳಿಗ್ಗೆ ನಮ್ಮತ್ತಿಗೆ ಮನೆಯಲ್ಲಿರಲಿಲ್ಲ. ಆ ರಾತ್ರಿಯೇ ಕಲ್ಯಾಣಿ ಯಲ್ಲಿ ಹಾರಿಕೊಂಡು ಪತಿಯನ್ನು ಕೂಡಿಕೊಂಡಿದ್ದಳು.

ಇವೆಲ್ಲ ಸನ್ನಿವೇಶಗಳ ತೊಡಕಿನಲ್ಲಿ ಸಿಕ್ಕಿ ಬಿದ್ದು ನರಳಬೇಕಾಗಿದ್ದ ನನ್ನ ಬಾಳು ನನಗೆ ಅಸಹ್ಯವಾಯಿತು. ಮುಗಿದರೆ ಲೇಸೆನಿಸಿತು. ಅಂದೇ ನನಗೇ ಹಿಂದೆಂದೂ ಬರದಿದ್ದ ವಿಪರೀತ ಜ್ವರವು ಬಂದಿತು. ತಲೆಯಲ್ಲಿನ ಮೆದುಳಿಗೆ ಯಾರೋ ಕೈಹಾಕಿ ಬಲವಾಗಿ ಕೇಳುತ್ತಿದ್ದಂತೆ ಅತಿಯಾದ ವೇದನೆಯು ಕಾಣಿಸಿತು.

ಆಮೇಲೇನಾಯ್ತೋ ಸ್ವಾಮಿ, ಜ್ಞಾಪಕವಿಲ್ಲ. ಈಗ೦ತೂ ಇಲ್ಲಿದ್ದೇನೆ. ಹೇಗೆ ಇಲ್ಲಿಗೆ ಬಂದೆನೆನ್ನುವುದು ಸ್ಪಷ್ಟವಾಗಿಲ್ಲ. ನೋಡಿ, ನನ್ನ ಕಥೆಯಲ್ಲಿ ಏನನ್ನೂ ಮರೆಮಾಚದೆ ಎಲ್ಲವನ್ನೂ ನಿಮಗೆ ಹೇಳಿದ್ದೇನೆ. ನಿಧಾನವಾಗಿ ಯೋಚಿಸಿನೋಡಿ, ಆಗೋ ! ನೀವು ಹೊರಡಬೇಕಾದ ಸೂಚನೆ ಬಂತು. ಹೊರಡಿ-ಸ್ವಾಮಿ, ನಾನು ಹೇಳಿದ್ದನ್ನೆಲ್ಲ ಚೆನ್ನಾಗಿ ವಿಚಾರಮಾಡಿ ; ಅದು ಹುಚ್ಚನು