ಪುಟ:ಅನ್ನಪೂರ್ಣಾ.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅನ್ನಪೂರ್ಣಾ

ನಸುನಗುತ್ತಾ ನನ್ನಾಕೆ ಹೆಚ್ಚಿನ ಪ್ರಶ್ನೆ ಕೇಳಿದಾಗ, ಎಲ್ಲಾ ಮಾಹಿ ತಿಯೂ ದೊರಕಿತು........ಆ ಹುಡುಗಿಯ ಸಂಪಾದನೆಯಿಂದಲೇ ಅವರ ಸಂಸಾರ ನಿರ್ವಹಣ, ಕಮಲೆ ಆ ಹೆಂಗಸಿನ ಮಗಳು ಹೌದೋ ಅಲ್ಲವೋ ಅದು ಸಂಶಯವೇ. ಅಂತೂ ತೋರಿಕೆಗೆ ಆಕೆ ತಾಯಿ, ಈಕೆ ಮಗಳು. ಎಳೆತನದಿಂದಲೇ ಸಿದ್ಧಗೊಳಿಸಿದ್ದು ....... -

....ನಾವಿಬ್ಬರೂ ದೀವಳಿಗೆ ಹಬ್ಬಕ್ಕೆ ಹಿಂದಿನ ಆ ರಾತ್ರಿ ಆ ಮನೆಯತ್ತ ನೋಡುತ್ತ ನಿಂತಾಗ ನನ್ನಾಕೆ ಹೇಳಿದಳು, " ಹೋದಸಾರೆಯ ದಿಪಾವಳಿ ನೆನಪೆ ? ಆ ದಿನವೇ ಅಲ್ಲವೇ ?

" ಹೌದು, ಆ ದಿನವೇ....”

ಆ ಬಗ್ಗೆ ಬರೆಯಬೇಕು ಎಂದಾಗ ಕರುಳು ಕಿವುಚಿಕೊಂಡು ಬರುತ್ತಿದೆ. ಯಾಕೋ, ಮುದುಡಿಕೊಳ್ಳುತ್ತದೆ ಮನಸ್ಸು,

ಆ ವರ್ಷ ಕಮಲೆ ಬಸುರಿಯಾಗಿದಳು, ತಂದೆ ಯಾರೆಂದು ಅವಳೊಬ್ಬು ಳಿಗೆ ಗೊತ್ತಿದ್ದಿರಬಹುದು, ಮಂಡಿಯ ವರ್ತಕನೊಬ್ಬ; ಕಾರಿನಲ್ಲಿ ಬರು ವಕೀಲರು; ಇನ್ಸೂರೆನ್ಸ್ ಏಜಂಟನ ಹಾಗೆ ತೋರುತ್ತಿದ್ದ ಸುಂದರ ಯುವಕ ನೊಬ್ಬ; ದೊಡ್ಡ ರುಮಾಲಿನ ಮಹಾನುಭಾವರೊಬ್ಬರು; ಚಿಲ್ಲರೆ..! ಪರಊರಿನ ಗಿರಾಕಿಗಳು.... ಅಂತೂ ಯಾರದೋ ಪ್ರಸಾದ ದಿನವೂ ಔ ನಡೆಯುತ್ತಿತ್ತು. ತಾಯಿ-ಮಗಳಿಗೆ, ಮನವೊಪ್ಪದ ಕೆಲಸಕ್ಕೆ ಈ ಮಗಳನ್ನು ಒತ್ತಾಯಪಡಿಸುತ್ತಿದ್ದಾಳೆ ಎಂದು ತೋರುತ್ತಿತ್ತು.

ಬಸುರಿಯಾಗಿದ್ದಾಗಲೂ ಬಾಗಿಲ ಬಳಿ ಆಕೆ ಜನಪ್ರಿಯವಾರಪತಿ ಆ ವಾರದ ಸಂಚಿಕೆಯನ್ನು ಹಿಡಿದುಕೊಂಡು ಕುಳ್ಳಿರುತ್ತಿದ್ದಳು. ಸ್ಥಿತಿಯ ಪ್ರದರ್ಶನ ಬೇಡವೆಂದೋ ಏನೋ, ತಾಯಿ ' ಒಳ ಹತಿ ಕಮಲೆಗೆ ಗದರಿಸುತ್ತಿದ್ದಳು. ಮತ್ತೆ ಜಗಳ...

ಎಂಥ ಆಸೆಗಳಿದ್ದವೋ ಆಕೆಗೆ, ನನ್ನಾಕೆಯನ್ನೂ ನನ್ನ ಯಲ್ಲಿ ಕಂಡಾಗ ಆಕೆ ಬೀರುತ್ತಿದ್ದ ನೋಟ ಅಂಥಾದ್ದು. ಆ ಜೀವ ಎನ್ನುವಂತೆ ಅಸಹಾಯತೆಯನ್ನು ತೋರುತ್ತಿದ್ದ ಈ ಟಿ" ನಾನೂ ನನ್ನಾಕೆಯ ದೀರ್ಘ ಚರ್ಚೆ ನಡೆಸುತ್ತಿದ್ದೆವು.