ಪುಟ:Abhaya.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

...ನಡೆದು ಬೇಸುತ್ತ ತುಂಗಮ್ಮನಿಗೆ ಬವಳಿ ಬಂದಹಾಗಾಯಿತು.

ಸಮೀಪದಲ್ಲಿ ಯಾರೂ ಇರಲಿಲ್ಲ. ಅಲ್ಲೆ ಒಂದು ಬಂಡೆಯ ಮೇಲೆ ಆಕೆ ಕುಳಿತಳು.

ಎರಡು ನಿಮಿಷಗಳಲ್ಲೆ ಉಸಿರು ಸರಾಗವಾಗಿ ಆಡತೊಡಗಿತು. ಎಷ್ಟು

ದೂರ ಬಂದಿದ್ದಳಾಕೆ, ಎಷ್ಟೊಂದು ದೂರ! ಯಾವಾಗಲೂ ತನ್ನ ಸೆರಗಿಗೇ ಅಂಟಿಕೊಳ್ಳುತ್ತಿದ್ದ ತಮ್ಮ, ಮಮತೆಯ ತಂದೆ, ನಾಲ್ಕು ವರ್ಷಗಳ ಹಿಂದೆಯೇ ಗಂಡನ ಮನೆ ಸೇರಿ ಆಗಲೆ ಎರಡು ಮಕ್ಕಳ ತಾಯಿಯಾಗಿದ್ದ ಅಕ್ಕ-ಅದೆಷ್ಟೋ ಹಿಂದುಳಿಯಿತು ಮಧುರ ಬಾಂಧವ್ಯದ ಸಂಸಾರ ಸಂಬಂಧದ ಆ ಆವರಣ. ಅನಂತರ ಐದು ತಿಂಗಳ ಕಾಲ ತನಗೆ ಆಶ್ರಯ ನೀಡಿದ ಆ ಕುಟುಂಬ. ಎಂದೋ ಒಂದು ಕಾಲದಲ್ಲಿ ತನ್ನ ತಂದೆಯ ಶಿಷ್ಯರಾಗಿದ್ದರಂತೆ ಆ ಮನೆಯ ಯುವಕ ಯಜಮಾನರು. ಆದರೆ ಗುರು-ಶಿಷ್ಯ ಸಂಬಂಧ ಶಾಲೆಯ ಹೊರಗೆ ಆತ್ಮೀಯತೆಯಾಗಿ ಗಾಢ ಸ್ನೇಹವಾಗಿ ಮಾರ್ಪಟ್ಟು ಕಷ್ಟಕಾಲದಲ್ಲಿ ತನ್ನ ತಂದೆಗೆ ನೆರವು ನೀಡಿತ್ತು.

ಆ ದಂಪತಿಗಳಿಬ್ಬರೂ ಧೈರ್ಯವಂತರೇ ಸರಿ.

ತಾನು, ಡವಡವನೆ ಹೊಡೆದುಕೊಳ್ಳುತ್ತಿದ್ದ ಹೃದಯ ಒಡೆದು ಹೋಗು

ವುದೇನೋ ಎಂಬ ಭಯದಿಂದ, ಅವರ ಮೇಲೆ ಅಂಗೈ ಇಟ್ಟು ಭದ್ರವಾಗಿ ಅಮುಕಿ ಬಾಗಿಲ ಹಿಂಭಾಗದಲ್ಲಿ ನಿಂತು ಆ ಪ್ರಶ್ನೋತ್ತರಗಳಿಗೆ ಕಿವಿಗೊಟ್ಟಿದ್ದಳು....

...."ಯಾರೋ ಅತಿಥಿಗಳು ಬಂದ ಹಾಗಿದೆಯಲ್ಲಾ!"

"ನನ್ನ ಚಿಕ್ಕಪ್ಪನ ಮಗ ಉತ್ತರ ಪ್ರದೇಶದಲ್ಲಿದಾರೇಂತ ಆ ದಿನ

ಹೇಳಿರ್ಲಿಲ್ವೆ? ಅವರ ಕುಟುಂಬ."

"ಹಾಗೇನು, ಉತ್ತರ ಪ್ರದೇಶದಲ್ಲಿದಾರೇನು ನಿಮ್ಮ ಚಿಕ್ಕಪ್ಪನ

ಮಗ?"

"ಮರೆತೇ ಬಿಟ್ರೇನೊ ಪಾಪ! ವೆಂಕಟರಾಮಯ್ಯನವರ ಜ್ಞಾಪಕಶಕ್ತಿ

ಕೇಳಬೇಕೆ?!"

"ನೀವೂ ಸರಿಯೆ, ಗೇಲಿಮಾಡೋದಕ್ಕೆ!....ಯಾವಾಗ್ಬರ್ತಾರೆ?"

"ಯಾರು-ಆತನೇ?ಈಗೆಲ್ಲಿ ಬರ್ತಾನೆ?ಕೆಲಸ ಸಿಕ್ಕಿರೋದೇ ಮೊನ್ನೆ