ಪುಟ:AAHVANA.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಭಾರತ ಗಾಥಾ

    ○  ರಂಗಸ್ಥಲವನ್ನು ಎರಡು ಭಾಗಗಳಾಗಿ ವಿ೦ಗಡಿಸಬೇಕು. ಮೂರನೆಯ  ಒಂದು ಭಾಗ, (ಪ್ರೇಕ್ಷಕರ) ಎಡಕ್ಕೆ; ಮೂರನೆಯ ಎರೆಡು ಭಾಗ, ಬಲಕ್ಕೆ. ಎಡದಲ್ಲಿ ಇರಬೇಕಾದವರು ನಿರೂಪಕ ಹಾಗೂ ಇತಿಹಾಸಕಾರ.   ಬಲದಲ್ಲಿ ಪಾತ್ರಗಳು. ಎಡ ಭಾಗದಲ್ಲಿ ರೂಪಕದುದ್ದಕ್ಕೂ ಶುಭ್ರ ಬೆಳಕಿರುತ್ತದೆ. ನಿರೂಪಿತ ಘಟನೆ  ನಡೆಯುವಾಗಲಷ್ಟೇ  ಬಲಭಾಗದಲ್ಲಿ ಬೆಳಕು. ಇಲ್ಲಿ ಬೆಳಕು ಮೊದಲು ಮಸಕಾಗಿದ್ದು  ಕ್ರಮೇಣ ಶುಭ್ರಗೊಳ್ಳಬೇಕು.  ಘಟನೆ [ಹಾಡುಗಾರಿಕೆ, ಶ್ಲೋಕ ಪಠನ, ಘೋಷಣೆ ಅಥವಾ ನಾಟಕದ ಭಾಗ)  ಮುಗಿಯುತ್ತ ಬಂದಂತೆ ಬೆಳಕು ನಿಧಾನವಾಗಿ ಮತ್ತೆ           ಮಸಕುಗೊಂಡು ರಂಗಸ್ಥಲದ ಆ ಭಾಗವನ್ನು ಕತ್ತಲು ಕವಿಯಬೇಕು.
  ಈ ರೂಪಕದಲ್ಲಿ ನಿರೂಪಕನೂ ಇತಿಹಾಸಕಾರನೂ ಪರಸ್ಪರ ಪೂರಕಗು; ವಸ್ತು ಸ್ಥಿತಿಯ ನಿವೇದಕರು. ಘಟನೆಗಳು ನಡೆಯುವಾಗ ಯಾವ ಪ್ರತಿಕ್ರಿಯೆಯನ್ನೂ ಅವರು ವ್ಯಕ್ತಪಡಿಸುವ ಅಗತ್ಯವಿಲ್ಲ.