ವಿಷಯಕ್ಕೆ ಹೋಗು

ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಭಾಗ ೧.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತರುವಾಯ, ಟೆಲಿಮಾಕಸ್ಸನನ್ನು ಕರೆಸಿ, “ ನಿನ್ನ ವೃತ್ತಾಂತವೇನು ” ಎಂದು ಕೇಳಿದಳು. ಆತನು ತನ್ನ ವೂ ರ್ವೊತ್ತರಗಳನ್ನೆಲ್ಲಾ ತಿಳಿಸಿ, ತಂದೆಯನ್ನು ಹುಡು ಕಿಕೊಂಡು ಬಂದಿರುವುದಾಗಿ ಹೇಳಿ, “ ನನ್ನ ತಂದೆಯ ವೃತ್ತಾಂತವೇನಾದರೂ ತಿಳಿದಿದ್ದರೆ ಅದನ್ನು ತಿಳಿಸಬೇಕು. ಎಂದು ಪ್ರಾರ್ಥಿಸಿದನು. ಅದನ್ನು ಕೇಳಿ, ಈ ಕಿನ್ನರಿಯು " ನಿನ್ನ ತಂದೆಯ ವಿಷಯವನ್ನು ನಾನು ಬಲ್ಲೆನು, ಅವನು ಇಲ್ಲಿಗೆ ಬಂದಿದ್ದನು, ನನ್ನ ಆತಿಧಿಯಾಗಿಯೂ ಇದ್ದನು. ಇಲ್ಲಿಂದ ಹೊರಟು ಹೋದನು, ಅವನ ಹಡಗು ಮುಳುಗಿ ಹೋಯಿತು. ಅವನ ಗತಿಯೇನಾಯಿತೋ ನನಗೆ ತಿಳಿಯದು. ಅವನ ವೃತ್ತಾಂತವನ್ನೂ, ನಿನ ವೃತ್ತಾಂತವನ್ನೂ ತಿಳಿದುಕೊಳ್ಳಬೇಕೆಂಬ ಕುತೂಹವು ನನಗೆ ಇರುವುದು. ನೀವು ಯಾರು ? ನಿಮ್ಮನ್ನು ಹೊಂದಿದ ಭಾಗ್ಯವು ಯಾವ ದೇಶಕ್ಕೆ ಲಭ್ಯವಾಗಿರು ವುದು ? ನಿನ್ನ ತಂದೆಯು ಏತಕ್ಕೋಸ್ಕರ ನಿಮ್ಮ ದೇಶವನ್ನು ಬಿಟ್ಟನು ? ಇದನ್ನು ತಪಶೀಲುವಾರಾಗಿ ಹೇಳಬೇಕೆಂಬ ಕುತೂಹಲವು ನನಗೆ ಉಂಟಾಗಿರುವುದು. ಎಂದು ಹೇಳಿದಳು, ಅದಕ್ಕೆ ಟೆಲಮಾಕನು ಹೇಳಿದ್ದೇನಂದರೆ :- “ ನಮ್ಮ ತಂದೆಯು ಇಥಾಕಾ ನಗರದ ಪ್ರಭುವು, ಬ್ರಾಯ ದೇಶಕ್ಕೂ, ಗ್ರೀಸ್ ದೇಶಕ್ಕೂ ನಡೆದ ಯುದ್ದದಲ್ಲಿ ಮಿತ್ರ ಮಂಡಲಿಯವರಿಗೆ ನಮ್ಮ ತಂದೆಯು ಸಹಾಯವನ್ನು ಮಾಡಿ, ಟ್ರಾಯ ವಂಶವನ್ನೇ ನಿರ್ವಂಶ ಮಾಡಿ, ದುಷ್ಟನಿಗ್ರಹ ವನ್ನು ಪೂರೈಸಿ, ಧರ್ಮಕ್ಕೆ ಉಂಟಾಗಿದ್ದ ನ್ಯೂನತೆಯನ್ನು ಪರಿಹಾರಮಾಡಿ, ಶಿಷ್ಟ ಪರಿಪಾಲನೆಯ ಕೆಲಸವು ಪೂರೈಸಿದ ಕೂಡಲೆ, ದೇಶಾಟನವನ್ನು ಮಾಡಿ ಕೊಂಡು ಬರಬೇಕೆಂದು ಪ್ರಯಾಣ ಮಾಡಿದನು. ಅವನನ್ನು ಹುಡುಕಿಕೊಂಡು ನಾನು ಬಂದಿರುತ್ತೇನೆ.' ಕೆಲಿವ್ಯೂ ಎಂಬ ಕಿನ್ನರಿಯು ಟೆಲಿಮಾಕಸ್ಸನ ಮಾತುಗಳನ್ನು ಕೇಳಿ ಅವನಲ್ಲಿ ತುಂಬಾ ಅನುರಕ್ತಳಾದಳು. ಯೂಲಿಸಿಸ್‌ನಲ್ಲಿದ್ದ ಗುಣಾತಿಶಯಗಳೆಲ್ಲಾ ಇವನಲ್ಲಿ ಯೂ ಇದ್ದವು, ಇವನು ಆಜಾನುಬಾಹುವಾಗಿಯೂ, ಅಸಾಧಾರಣವಾದ ಗಾಂಭೀ ರ್ಯವುಳ್ಳವನಾಗಿಯೂ ಇದ್ದನು. ಇವನ ಮಾತುಗಳ ಮಾಧುರ್ಯವೂ ಅಸಾಧಾ ರಣವಾಗಿತ್ತು. “ ನೀನು ಹೇಳಿದ ವೃತ್ತಾಂತಗಳನ್ನೆಲ್ಲಾ ಕೇಳಿದೆನು, ನನ್ನ ಅಪ್ಪಣೆ ಇಲ್ಲದೆ, ನನ್ನ ದೇಶಕ್ಕೆ ಪರುಷರಾದವರು ಯಾರೂ ಬರಕೂಡದೆಂದು ನಾನು ನಿಯ ಮವನ್ನು ಮಾಡಿರುತ್ತೇನೆ, ನನ್ನ ನಿಯಮವನ್ನು ಉಲ್ಲಂಘಿಸಿದವರಿಗೆ ಬಲವಾದ ಶಿಕ್ಷೆಯು ವಿಧಿಸಲ್ಪಡುವುದು. ಆದರೆ, ನೀವಿಬ್ಬರೂ ವಿಧಿಯಿಲ್ಲದೆ, ಹಡಗು ಮುಳುಗಿಹೋದುದರಿಂದ ನನ್ನ ದ್ವೀಪವನ್ನು ಪ್ರವೇಶಿಸಿದಿರಿ. ಅತಿಕ್ರಮ ಪ್ರವೇ