ಪುಟ:27-Ghuntigalalli.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬ ಘಂಟೆಗಳಲ್ಲಿ

“ ನನ್ನ ವಿಷಯ ನಿಮಗೇನು ಗೊತ್ತು ?” ಎಂದು ಶಶಿಯು ಮುಖ ಗಂಟಿಕ್ಕಿಕೊಂಡು ಕೇಳಿದಳು. "ಓ! 'ಡೋಂಟ್ ಬಿ ಸಿಲ್ಲಿ' ; ನನಗೆ ಪ್ರಪಂಚ ಏನೂ ಅನ್ನೋದು ಗೊತ್ತಿದೆ. ಇಲ್ದೇ ಇದ್ದಿದ್ರೆ ನಾನು ಹೀಗಿರ್ತಿರಲಿಲ್ಲ.” “ ಆತ ನಿಮಗೆಲ್ಲಾ ಹೇಳಿದನೇನು ?” " ಸ್ವಲ್ಪ ಸೂಚನೆ ಕೊಟ್ಟ ; ಉಳಿದದ್ದು ಊಹಿಸಿದೆ.” “ ಆತನನ್ನೇ ಪೂರಾ ನಂಬಿದ್ದೆ ; ನನ್ನ ಕೈ ಬಿಟ್ಟ.”

“ ನಿನಗೆ ತಕ್ಕ ಶಾಸ್ತಿ ಆಯಿತು. ನಿನ್ನ ಮನೆಯೋರೂ ನಿನ್ನ ಇನ್ನೂ ಹೆಚ್ಚಾಗಿ ನಂಬಿರಲಿಲ್ಲವೇನು ? ಅವರ ಯೋಚನೆ ಏನಾದರೂ ಮೊದಲು ನಿನಗಿತ್ತೆ ? ಅವರು ನಿನ್ನಲ್ಲಿ ಎಷ್ಟು ನಂಬಿಕೆ ಇಟ್ಟು ಕೊಂಡಿ ದ್ದರೋ ಏನೋ ; ಅದಕ್ಕೆ ತಿಲಾಂಜಲಿ ಕೊಟ್ಟು ನೀನು ಹೇಗೆ ಅವರ ಕೈ ಬಿಟ್ಯೋ ಹಾಗೇ ಆತನೂ ನಿನ್ನ ಕೈ ಬಿಟ್ಟ. ಕಳ್ಳನು ಇನ್ನೊಬ್ಬ ಕಳ್ಳನ್ನ ಕಳ್ಳಾ೦ತ ಬೈಯೋಕೆ ಸಾಧ್ಯವೆ ?” ಎಂದು, ಗಿರೀಶನು ಮತ್ತೆ ಹೋಗಿ ತನ್ನ ಸ್ಥಾನವನ್ನಾಕ್ರಮಿಸಿಕೊಂಡು ನಿಧಾನವಾಗಿ ಒಂದು ಸಿಗರೇಟನ್ನು ಹಚ್ಚಿದ. “ ನೀವು ಆತನನ್ನೇ ವಹಿಸಿಕೊಂಡು ಮಾತನಾಡುತ್ತಿದ್ದೀರಿ; ಗಂಡಸರೆಲ್ಲಾ ಒಂದೇ. ತಪ್ಪೆಲ್ಲ ಹೆಂಗುಸರ ತಲೆ ಮೇಲೆ.” “ ಅವನೇನೂ ನಮ್ಮ ಚಿಕ್ಕಪ್ಪನ ಮಗನಲ್ಲ. ಒಂದು ವೇಳೆ ಆಗಿದ್ದರೂ ಅವನ ಪರವಾಗಿ ನಾನು ಮಾತಾಡ್ತಿರಲಿಲ್ಲ. ಈಗ ಅವನ ವಿಚಾರವಲ್ಲ ನಾನು ಮಾತಾಡ್ತಿರೋದು, ನಿನ್ನ ವಿಚಾರ.ನಿನ್ನ ಜೀವನದಲ್ಲಿ-'ಹೊಸ ನೀರು ಬಂದು ಹಳೇ ನೀರುನೂ ಕೊಚ್ಕೊಂಡು ಹೋಯ್ತು' ಅನ್ನೋ ಹಾಗೆ ಅವನು ಮಧ್ಯೆ ಬಂದು ಇದ್ದ ನೆರಳೂ ಕಳೆದು ಸಾಕಷ್ಟು ಅವಾಂತರ ಮಾಡಿಟ್ಟು ಹೊರಟ್ಹೋದ. ಉಳ್ಕೊಂಡಿರೋಳೇ ನೀನು. ನಿನ್ನ ಬುದ್ಧಿ ನಿನ್ನ ಕೈಲಿಟ್ಕೊಳ್ಳದಿದ್ರೆ....?