ಪುಟ:ಮಿತ್ರ ದುಖಃ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

--- ೨೧ ---

ರೆಯಾಗಲಿ ಅಡ್ಡಾಡುತ್ತಿರುವದು ಅವುಗಳ ಕಣ್ಣಿಗೆ ಕಾಣು ವದಿಲ್ಲ. ಎಲ್ಲ ರಥಗಳೂ, ಟಾಂಗಗಳೂ ಮಧ್ಯಾಹ್ನ ಕಾಲ ದಲ್ಲಿ ಯಾವದೊಂದು ಗಿಡದ ನೆಳಲಿನಲ್ಲಿ, ಇಲ್ಲವೆ ನದೀ ತೀರದ ಲ್ಲಿ ವಿಶ್ರಾಂತಿಗಾಗಿ ಬಿಡಲ್ಪಟ್ಟಿರುತ್ತವೆ; ಮತ್ತು ಅವುಗಳ ಕುದು ರೆಗಳು ಮನದಣಿಯಾಗಿ ನೀರು ಕುಡಿಯುತ್ತಿರುತ್ತವೆ, ನೀರಲ್ಲಿ ಮುಳುಗಿ ಏಳು ತ್ತಿ ರು ವೆ; ಇಲ್ಲವೆ ಮೇವು-ದಾಣಿ ಗಳನ್ನು ತಿಂದು ಕಣ್ಣು ಮುಚ್ಚಿ, ವಿಶ್ರಾಂತಿ ಸೌಖ್ಯವನ್ನು ಪಡೆಯುತ್ತಿರುತ್ತವೆ. ಭೂಮಿಯ ಮೇಲಿನ ಆ ಪಶುಗಳ ಭಾಗ್ಯವನ್ನು ನೆನೆದು ಈ ನಮ್ಮ ಜಗತ್ರಕಾಶಕನಾದ ಸೂ ರ್ಯನಾರಾಯಣನ ರಥದ ಅಶ್ವಗಳು ತಮ್ಮ ದುರ್ಭಾಗ್ಯವನ್ನು ಸ್ಕರಿಸಿ, ಬಹು ದೀರ್ಘಗಳಾದ ಉಗುರುಗಳನ್ನು ಬಿಡಹತ್ತು ಇವೆ. ಭೂಮಂಡಲದೊಳಗಿನ ಕುದುರೆಗಳು ಮಧ್ಯಾಹ್ನ ದಲ್ಲಿ ನೀರು ಕುಡಿಯುವದನ್ನು ಕಂಡು, ತಾವೂ ಆಗ ನೀರು ಕುಡಿಯಬೇಕೆಂದು ಈ ಬಡಪ್ರಾಣಿಗಳು ಇಚ್ಚಿಸುತ್ತವೆ. ಆದರೆ ಆ ಕಾಲಕ್ಕೆ ಇವು ಸೂರ್ಯನ ರಥದ ಕುದುರೆಗಳಾದರೂ ಒಟ್ಟಿನಲ್ಲಿ ಇವು ಪಶುಗಳೇ ಇರುವದರಿಂದ ಇವು ಸಹಜವಾ ಗಿಯೇ ಬಹು ಕಷ್ಟದಿಂದ ಮೋಸ ಹೋಗುತ್ತವೆ! ಈ ಕುದು ರೆಗಳು ಆಕಾಶದಲ್ಲಿ ಒತ್ತರದಿಂದ ಓಡುತ್ತಿರುವಾಗ ಇವುಗಳ ಸುತ್ತ ಮುತ್ತು ಈ ನೀಲಿಬಣ್ಣದ ಆಕಾಶವು ಸರ್ವತ್ರ ದಲ್ಲಿಯೂ ವ್ಯಾಪಿಸಿರುವದರಿಂದ, ಇದು ಯಾವದೊಂದು ವಿಸ್ತ್ರ ತಜಲಾಶಯವಿರುವದೆಂದು ಇವುಗಳಿಗೆ ಭ್ರಮೆಯುಂಟಾಗು ಇದೆ; ಮತ್ತು ನಮ್ಮಿ ಸೂರ್ಯನ ಕಿರಣಗಳಿಂದುಂಟಾ ಗುವ ಮೃಗಜಲದ ತೆರೆಗಳು ಭೂಮಿಯ ಮೇಲೆ ಹರಿಣಗ ಳನ್ನು ಹೇಗೆ ಮೋಸಗೊಳಿಸುವವೋ, ಹಾಗೆಯೇ ಆ ಮೃಗ ಜಲಗಳ ತೆರೆಗಳು ಈ ಆಕಾಶದಲ್ಲಿ ನಮ್ಮನ್ನೂ, ನಮ್ಮ ಕುದು