ಪುಟ:ರಾಣಾ ರಾಜಾಸಿಂಹ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ರಾಹಾರಾಜಸಿಂಹ [ಪ್ರಕರಣ ದ್ರವ್ಯವನ್ನು ಕೊಟ್ಟನು ಆಮೇಲೆ ವಿಕ್ರಮಸಿಂಹನು ಎದ್ದು ನಿಂತು, “ವೀರರೆ, ನಾನೊಬ್ಬ ಅಭಿಮಾನ ಶೂನ್ಯನಾಗಿ ಎಷಯೋಪಭೋಗದಲ್ಲಿ ಹೊರಳಾಡುವ ನರಾಧಮನು, ಮೊಗಲರ ಕೈಕಾಲು ಹಿಡಿದು ನನ್ನ ವಿಶ್ವ ರ್ಯವನ್ನು ಸಂರಕ್ಷಿಸುತ್ತಿದ್ದೆನು ನನ್ನಲ್ಲಿಯ ರಜಪೂತತ್ವವು ಹೊರಟು ಹೋಗಿತ್ತು ಮೊಗಲರ ದಾಸನಾಗಿದ್ದೆನು ಅವರ ತಂತ್ರದಂತೆ ನಡೆಯದಿ ದ್ದರೆ ಯಾವಗ್ಗ ಏನಾಗುವದೆಂಬ ಭೀತಿಯು ನನ್ನಲ್ಲಿ ಮನೆಮಾಡಿ ಕೊಂ ಡಿತ್ತು ಆ ಮಹತ್ತರವಾದ ನನ್ನ ಭೀತಿಯನ್ನೂ ನನ್ನ ತಂತ್ರವನ್ನೂ ಈ ಮಹಾರಾಣಾನು ಇಲ್ಲದಂತೆ ಮಾಡಿದನು ನನ್ನ ಮಗ ಳನ್ನು ಮೊಗಲರ ಕೈಯಿಂದ ಬಡಿಸಿದಳು ನನ್ನ ಮೋಹದಕುಮಾರನಾದ ಪ್ರತಾಪನ ಮಾತು ಕೇಳದೆ ಕುಲಕ್ಕೆ ಕಲಂಕ ತರುವ ಉದ್ಯೋಗಕ್ಕ ಉದ್ಯುಕ್ತನಾಗಿದ್ದೆನು. ಮಹಾರಾಣಾನು ಮುಂದಾಳಾಗಿ ಆ ಅಪಮಾನದ ಸ್ಥಿತಿಯೊಳಗಿಂದ ನನ್ನ ನ್ನು ರಕ್ಷಿಸಿದನು ಅದಕ್ಕಾಗಿ ನನ್ನ ಮಗಳಾದ ಚಂಚಲಕುಮಾರಿ ಯನ್ನು ಆತನಿಗೆ ರ್೬ಸುತ್ತೇನೆ ಮಹಾರಾಣಾನು ನನ್ನ ಅರ್ಪಣೆಯನ್ನು ಸ್ವೀಕರಿಸಬೇಕೆಂದು ಒಡಿ ಕೊಳ್ಳನ ” ಅದರೊಡನೆ 'ಜಯಮಹಾ ರಾಣಾಜಿಕಿಜಯ, ಎಂದು ಜನಸಮುದಾಯವೆಲ್ಲವೂ, ಗರ್ಜಿಸತೊಡಗಿತು ಆಮೇಲ ಪರಮಹಂಸನು ಎದ್ದು ನಿಂತು, “ವೀರರೆ ಈಹೊತ್ತಿಗೆ ನನ್ನ ಕರ್ತವ್ಯವು ತೀರಿಹೋಯಿತು ನನ್ನ ವ್ರತವು ಈಡೇರಿತು, ನನ್ನ ಗುಪ್ತ ವೀರ ಸಂಘದ ಮಾ°ಯನ್ನು ಈಹೊತ್ತಿನಿಂದ ಮಹಾರಾಣಾರಾಜಸಿಂಹನ ಕೊರಳಿನಲ್ಲಿ ಹಾಕುತ್ತೇನೆ, ಮತ್ತು ನನ್ನ ಮಗಳಾದ ಚಂಪಕ ಕಲಿಕೆಯನ್ನು ವಿಕ್ರಮಸಿಂಹನು ಅನುಮತಿಯನ್ನು ಕೊಟ್ಟರೆ ಕುಮಾರ ಪ್ರತಾಪಸಿಂಹನಿಗೆ ಕೊಡಬೇಕೆಂದಿರುತ್ತೇನೆ ವಿಕ್ರಮಸಿಂಹನು ನಮ್ಮನ್ನು ಅಡಿಯಲ್ಲಿ ತಕ್ಕೊಂ ಡು ಪವಿತ್ರರನ್ನಾಗಿ ಮಾಡುವನೆಂದು ಆಶಿಸುತ್ತೇನೆಂದು ಹೇಳಿದನು ಅದಕ್ಕೆ ವಿಕ್ರಮಸಿಂಹನ ಅನುಮತಿಯೂ ದೊರೆಯಿತು ಕಡೆಗೆ ರಾಜಸಿಂಹನು ಎದ್ದು _'ವೀರರೆ, ಎಲ್ಲ ರಮನಸ್ಸಿನಂತೆಯ ಯೋಗವು ಕೂಡಿ ಬಂದಿರು ತ್ರದ ಒಬ್ಬ ವೀರನ ಸನ್ಮಾನಮಡುವದು ಮಾತ್ರ ಇನ್ನೂ ಉಳಿದಿದೆ.