ಪುಟ:ಕರ್ನಾಟಕ ಗತವೈಭವ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪ನೆಯ ಪ್ರಕರಣ – ಕರ್ನಾಟಕದ ವಿಭೂತಿಗಳು

೩೧


ಗಳೆಲ್ಲವೂ ಬಹುಮಟ್ಟಿಗೆ ಬದಲಾಯಿಸಿ ಹೋಗಿವೆ. ಉತ್ತರ ಹಿಂದುಸ್ಥಾನದ ಅಶೋಕ, ಚಂದ್ರಗುಪ್ತ ಆಡುತ್ತಿದ್ದ ಭಾಷೆಯೇ ಬೇರೆ, ಅವರ ಈಗಿನ ಪೀಳಿಗೆಯವರು ಆಡುವ ಭಾಷೆಯೇ ಬೇರೆ. ಮರಾಠರಿಗೂ ಬಂಗಾಲಿಯರಿಗೂ ತಮ್ಮ ದೇಶಗಳ ಪ್ರಾಚೀನ ರಾಜರು ಮರಾಠಿ ಬಂಗಾಲಿ ಭಾಷೆಯನ್ನೇ ಆಡುತ್ತಿದ್ದರೆಂದು ಹೇಳಲಿಕ್ಕೆ ಬರಲಾರದು, ಆದರೆ ಕನ್ನಡಿಗರು ಮಾತ್ರ ನಮ್ಮ ಹಿಂದಿನ ಅರಸರೆಲ್ಲರೂ ಈ ಕನ್ನಡ ಭಾಷೆಯನ್ನೇ ಆಡುತ್ತಿದ್ದರೆಂದು ಎದೆ ತಟ್ಟಿ ಹೇಳಬಹುದು, ಈ ತರದ ಅಭಿಮಾನವು ಮತ್ತಾರಿಗೆ ಶಕ್ಯವು?
ನ್ನು, ಕರ್ನಾಟಕದೊಳಗೆ ಒಂದು ಕಾಲಕ್ಕೆ ಮೆರೆದು ಕರ್ನಾಟಕಕ್ಕೆ ತಿಲಕ ಪ್ರಾಯವಾಗಿರುವ ಪಟ್ಟಣಗಳ ವಿಷಯವನ್ನು ಹೇಳಿ ಈ ಪ್ರಕರಣವನ್ನು ಮುಗಿಸುವೆವು, ಇವುಗಳ ಪ್ರಾಚೀನ ವೈಭವವನ್ನು ಲಕ್ಷಕ್ಕೆ ತಂದುಕೊಂಡರೆ, ಇವಕ್ಕೆ ಐತಿಹಾಸಿಕ ಕ್ಷೇತ್ರಗಳೆಂತಲೇ ಹೇಳುವುದು ಯುಕ್ತವಾಗುವುದು. ಧಾರ್ಮಿಕ ದೃಷ್ಟಿಯಿಂದ ಕ್ಷೇತ್ರ ತೀರ್ಥಗಳಿಗೆ ಎಷ್ಟು ಪ್ರಾಶಸ್ತ್ಯವೋ, ರಾಜಕೀಯ ದೃಷ್ಟಿಯಿಂದಲೂ ಇವಕ್ಕೆ ಅಷ್ಟೇ ಪ್ರಾಶಸ್ತ್ಯವು. ಆದುದರಿಂದ ಕನ್ನಡಿಗರೇ, ನಿಮ್ಮ ಐತಿಹಾಸಿಕ ಕ್ಷೇತ್ರಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಳಖೇಡ, ಕಲ್ಯಾಣ, ಅಜಂತಾ, ವೇರಳ, ಹಳೇಬೀಡ (ದ್ವಾರಸಮುದ್ರ), ಲಕ್ಕುಂಡಿ, ಹಂಪ, ಇವೇ ಮುಂತಾದ ದರ್ಶನೀಯವಾದ ಸ್ಥಳಗಳನ್ನು ನೋಡಿ ನಿಮ್ಮ ಕಣ್ಣುಗಳ ಪಾರಣೆಯನ್ನು ತೀರಿಸಿಕೊಳ್ಳಿರಿ; ಮತ್ತು ಕೃತಕೃತ್ಯರಾಗಿರಿ.