ವಿಮೋಚನೆ/ವಾಹಿನಿ ಕೈಹೊತ್ತಿ ಗೆಗಳು

ವಿಕಿಸೋರ್ಸ್ದಿಂದ
ವಿಮೋಚನೆ by ನಿರಂಜನ
ವಾಹಿನಿ ಕೈಹೊತ್ತಿ ಗೆಗಳು
ವಾಹಿನಿ ಕೈಹೊತ್ತಿಗೆಗಳು

  • ಗ್ರಹಲಕ್ಶ್ಮಿ ಆ.ನ.ಕೃ. ರವರ ಆಮೋಘ ಕಲಾಕೃತಿ

ಕಳೆದ ತಲೆಮಾರಿನ ಜನತೆ. ಅವರ ಸಂಪ್ರದಾಯಪ್ರಿಯತೆ,
ವೈಜ್ಞಾನಿಕ ಮನೋಭಾವ-ಸಂಪ್ರದಾಯ ಪರಂಪರೆಗಳ
ನಡುವಿನ ಘರ್ಷಣೆಯ ಯಶಸ್ವೀ ಚಿತ್ರಣ.

  • ಮಲ್ಲಿ ದೇವುಡು ವಿರಚಿತ ಕಾದಂಬರಿ.ಸುಮಾರು

೧೯೦೦ರಿಂದ ೧೯೩೦ರ ವರೆಗಿನ ಅರ್ಧ ಶತಮಾನದ
ಜನಜೀವನದ ಹಿನ್ನಲೆಯಲ್ಲಿ ಶೃಂಗಾರ ರಸಪೂರ್ಣ ಚಿತ್ರಣ.

  • ವಿಮೋಚನೆ ನಿರಂಜನರ ಕಾದಂಬರಿ. ಅಡ್ಡದಾರಿ ಹಿಡಿದ

ಯುವಕನೋರ್ವನ ಆತ್ಮವೃತ್ತದ ಮೂಲಕ
ಸುತ್ತುಮುತ್ತಲಿನ ವರ್ಣರಂಜಿತ ಬಾಳ್ವೆಯ ನೋವು-ನರಳಾತಟ
ಆಸೆ- ಹೋರಾಟಗಳನ್ನು ಚಿತ್ರಿಸುವ ಕಲಾತ್ಮಕ ಕೃತಿ.

  • ಪರದೇಶಿ ಕುಲಕರ್ಣಿ ಬಿಂದು ಮಾಧವರು ಬರೆದುದು.

ಹಿಂದೂಸ್ತಾನದ ಮೂಲನಿವಾಸಿ ಜನಾಂಗ
ಒಂದರ ಜೀವನ ಕ್ರಮದ ಹಿನ್ನಲೆಯಲ್ಲಿ ಕರುಣಾ ಜನಕ ಕಥಾನಕ.

  • ಸ್ವರ್ಣರೇಖೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಐತಿಹಾಸಿಕ

ಕಾದಂಬರಿ. "ಬಂಗಾರ ದೊಡ್ಡಿ"
ಎಂದು ಮೈಸೂರಿನ ಮನೆ ಮಾತಾಗಿರುವ ಪ್ರೇಯಸಿಯ ಪ್ರಣಯ ಕಥೆ.

  • ರುಕ್ಮಿಣಿ ಕನ್ನಡ ನಾಡಿನ ಮೊತ್ತ ಮೊದಲ ಸುಲಭ ಬೆಲೆಯ

ಕೈಹೊತ್ತಿಗೆಗಾಗಿ ಹೊರಬಿದ್ದು ಕರ್ನಾಟಕದ
ಮನೆಮನೆಯಲ್ಲೂ ಬೆಳಗಿದ "ಗೃಹಲಕ್ಷ್ಮಿ" ಕಾದಂಬರಿಯ ಎರಡನೆ
ಮತ್ತು ಮುಕ್ತಾಯ ಭಾಗ... ಆ.ನ. ಕೃ. ಆವರ ಸಿದ್ದಹಸ್ತ
ರುಕ್ಮಿಣೆಯ ತೇಜಃಪುಂಜ ವ್ಯಕ್ತಿತ್ವವನ್ನು ಅಪ್ರತಿಮವಾಗಿ ಚಿತ್ರಿಸಿದೆ
. ವಾಹಿನಿ ಪ್ರಕಾಶನ
ಜಯಚಾಮರಾಜ ರಸ್ತೆ, ಬೆಂಗಳೂರು-೨