ಪುಟ:ರಾಣಾ ರಾಜಾಸಿಂಹ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ VV ೨೬] ೨೬] ಔರಂಗಜೇಬನು ಬಲೆಯಲ್ಲಿ ಸಿಕ್ಕನು • • • • • • • • ದಂಡಿಗೆಲ್ಲ ಅಲ್ಲಿಯೇ ಛಾವಣಿಯನ್ನು ಹಾಕಲಿಕ್ಕೆ ಹೇಳಿದನು. ಆದರೆ ಡೇರೆ ಹೊಡೆಯುವಷ್ಟು ಸಪಾಟಪ್ಪಳವು ಆ ಖಿಂಡಿಯಲ್ಲಿ ಇದ್ದಿಲ್ಲ. ಬಹಳ ಪ್ರಯಾಸದಿಂದ ಬಾದಶಹನಹಾಗು ಬೇಗಮ್ಮರ ಡೇರೆಗಳು ಸಿದ್ಧವಾದವು. ಸೇನೆಯ ವ್ಯವಸ್ಥೆಯೇನೂ ಆಗಲಿಲ್ಲ ಅವರು ನಿಂತಪ್ಪಳದಲ್ಲಿಯೆ ನಿಂತರು. ಕುದುರೆಯಮೇಲಿನವರು ಕುದುರೆಯಮೇಲೆ, ಅನೆಯ ಮೇಲಿನವರು ಆನೆಯ ಮೇಲೆ ಉಳಿಯಬೇಕಾಯಿತು. ಇಷ್ಟರಲ್ಲಿ ಎರಡನೇದೊಂದು ಸಂಕಟವು ಉದ್ಭವಿಸಿತು ದಂಡಿನ ಊಟದ ಸಾಹಿತ್ಯಗಳನ್ನು ರಜಪೂ ತರು ಎತ್ತಿಹಾಕಿದ್ದರಿಂದ ಎದೆ ಒಡೆದುಹೋಯಿತು ಖಿಂಡಿಯಲ್ಲಿ ಕುದು ರೆಗಳ ಆಹಾರವೂ ಕಟ್ಟಾ ಯಿತು ಆಮೇಲೆ ಸೇನೆಯವರು ಮಾಡುವ ದೇನು ? ಬಾದಶಹ ಬೇಗಮ್ಮರದೂ ಇದೇಗತಿಯು, ಇಡೀ ರಾತ್ರಿಯೆಲ್ಲ ಹಸಿವೆಯಿಂದಲೂ ಜಾಗರಣೆಯಿಂದಲೂ ಸೇನೆಯು ತಳಮಳಿಸುತ್ತಿತ್ತು, ರಜಪೂತರು ಝೇಬನ್ನಿಗಳನ್ನೂ, ಉದೇಪುರದ ಬೇಗಮ್ಮಳನ್ನೂ ಹರಣಮಾಡಿದ ಸುದ್ದಿಯು ಬಾದಶಹನಿಗೆ ಮುಟ್ಟಿತು ಅದನ್ನು ಕೇಳಿ ಬಾದಶಹನು ಮಿತಿಯಿಲ್ಲದಷ್ಟು ಕೋಪಗೊಂಡನು. ಸಿಟ್ಟಿನಿಂದ ಆತನ ಶರೀರವು ಕಂಪಿಸಹತ್ತಿತು. ಈಹೊತ್ತಿನಲ್ಲಿ ಆತನ ಕೈನಡಿಯುವಂತಿದ್ದು, ಒಂದುವೇಳೆ ಅಂಧ ಸಂಧಿಯು ದೊರೆದಿದ್ದರೆ ರಜಪೂತರನ್ನು ಜಗತ್ತಿನಲ್ಲಿ ಇಲ್ಲೆನಿಸಿ ಬಿಡುತ್ತಿದ್ದನು. ಆದರೆ ಉಪಾಯವಿದ್ದಿಲ್ಲ. ಈ ಮಧ್ಯರಾತ್ರಿಗೆ ಸೇನೆಯಲ್ಲಿ ಶಾಂತತೆಯಾಯಿತು, ಆಕಾಲಕ್ಕೆ ಪರ್ವತದಮೇಲೆ ಸಾವಿರಾರು ಗಿಡಗಳನ್ನು ಕಡಿಯುತ್ತಿರುವಂತೆ ಕೇಳಬರ ಹತ್ತಿತು ಅದರಕಾರಣವು ಯಾರಿಗೂ ಗೊತ್ತಾಗಲಿಲ್ಲ ಭೂತಪಿಶಾಚಿ ಗಳ ಆಟವಿರಬಹುದೆಂದು ಎಲ್ಲರು ತಮ್ಮ ತಮ್ಮ ಸ್ಥಳದಲ್ಲಿ ಸ್ಥಬ್ದರಾಗಿದ್ದರು. •Mಜರಿ