ಪುಟ:Mysore-University-Encyclopaedia-Vol-1-Part-1.pdf/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೋದನಿಕಗಳನ್ನು ಕರಗಿಸಿಕೊಳ್ಳುತ್ತದೆ. ಗಟ್ಟಿವಸ್ತುವನ್ನು ಬಿಸಾಡಿ ಉಳಿದ ನೀರಾದ ಮದ್ಯಸಾರವನ್ನು ಇಳಿಸಿದ ಒತ್ತಡದಲ್ಲಿ ಬಟ್ಟಿಯಿಳಿಸಿದಾಗ ಸಾರಕ ದೊರೆಯುವುದು. ಇದರಲ್ಲಿ ಅಡ್ರಿನಲ್ ಕುಸುರಿನಲ್ಲಿರುವ ಅಡ್ರಿನಲೀನ್, ನೋರಡ್ರಿನಲೀನ್ ಕೂಡ ಇರುವುದರಿಂದ, ಇದನ್ನು ಕ್ಲೋರೊಫಾರ್ಮ್‍ನಲ್ಲಿ ಕರಗಿಸಿ ಇಮರಿಸಿದರೆ, ರಗಟೆಯ ಚೋದನಿಕಗಳು ಮಾತ್ರ ದೊರೆಯುತ್ತವೆ. ಉಳಿದುದನ್ನು ಸಾಂದ್ರಗೊಳಿಸಿ, ಅಮೋನಿಯ ಸೇರಿಸಿ ಸೋಸಿದರೆ ಅಡ್ರಿನಲೀನ್ ಬಿಳಿಯ ಹರಳುಗಳಾಗಿ ಬರುತ್ತದೆ. ಈ ತೆರನ ವಿಧಾನಗಳಿಂದ ಅಡ್ರಿನಲ್ ಗ್ರಂಥಿಯ ಸಾರಕವನ್ನು ಮೊಟ್ಟಮೊದಲು ೧೯೨೯ರಲ್ಲಿ ಪರಿಶೋಧಕರ ಎರಡು ತಂಡಗಳು ತಮಗೆ ತಾವಾಗಿ ತಯಾರಿಸಿದುವು. ೧೯೩೦ರ ತನಕ ಅಡ್ರಿನಲ್ ಗ್ರಂಥಿಯ ಕೊರೆಯಾಗಿ, ಅಡಿಸನ್ನನ ರೋಗ ಅನುಭವಿಸುತ್ತಿದ್ದವರು ಯಾರೂ ಉಳಿಯುತ್ತಿರಲಿಲ್ಲ. ಆದರೆ ಈಗ ಈ ರಗಟೆಯ ಚೋದನಿಕವಾದ ಕಾರ್ಟಿಸೋನೊಂದಿಗೆ ಡಿಸಾಕ್ಸಿಕಾರ್ಟಿಕೊಸ್ಟಿರೋನ್ ಕೊಡುವುದರಿಂದ ಪೂರಾ ಗುಣ ಕಂಡಿದೆ. ಅಡ್ರಿನಲ್ ಗ್ರಂಥಿಯ ರಗಟೆಯಿಂದ ಮೊದಲಾಗಿ (೧೯೩೦-೧೯೩೮) ಸುಮಾರು ೩೦ ಬೇರೆಬೇರೆ ಹರಳಂಥ ರಾಸಾಯನಿಕಗಳು ತಯಾರಾಗಿವೆ. ೧೯೩೭ರಲ್ಲಿ ಡಿಸಾಕ್ಸಿಕಾರ್ಟಿ ಕೊಸ್ಟಿರೋನ್ ಕೃತಕ ತಯಾರಿ ಆಯಿತು. ಕಾರ್ಟಿಸೋನ್ (೧೯೪೮), ಹೈಡ್ರೊಕಾರ್ಟಿಸೋನ್ (೧೯೫೧) ಅಷ್ಟೂ ಇಷ್ಟೂ ತಯಾರಾಯಿತು. ಈ ಸರಣಿಯ ಕೊನೆಯ ಮುಖ್ಯ ರಾಸಾಯನಿಕ ವಾದ ಆಲ್ಡೊಸ್ಟಿರೋನ್ ೧೯೫೩ರಲ್ಲಿ ಬೇರ್ಪಟ್ಟು, ೧೯೫೫ರಲ್ಲಿ ಕೃತಕವಾಗೂ ತಯಾರಾಯಿತು. ಸಾರಕದ ಪ್ರಭಾವಗಳು : ರಗಟೆಯಲ್ಲಿನ ಚೋದನಿಕಗಳ ಪ್ರಭಾವಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು: ೧ ಖನಿಜದ ಜೀವ ವಸ್ತುಕರಣದಲ್ಲಿ (ಮೆಟಬಾಲಿಸಂ), ರಕ್ತದಲ್ಲಿರುವ ಸೋಡಿಯಂ, ಪೊಟ್ಯಾಸಿಯಂ, ಕ್ಲೋರೈಡುಗಳ ಪ್ರಮಾಣಗಳನ್ನು ಬಹುಮಟ್ಟಿಗೆ ಸರಿಸಮವಾಗಿ ಇರಿಸುವುದು ಜೀವಿಗೆ ಮುಖ್ಯ. ಆಲ್ಡೊಸ್ಟಿರೋನ್ ಸುರಿಸುವುದರಿಂದ ಈ ರಗಟೆ ಇದನ್ನು ಅಂಕೆಗೊಳಿಸುತ್ತದೆ. ೨. ಜೈವಿಕ ಜೀವವಸ್ತುಕರಣದಲ್ಲಿ, ಹಿಟ್ಟು ಸಕ್ಕರೆಗಳು, ಪ್ರೊಟೀನುಗಳು, ಕೊಬ್ಬುಗಳ ಬಳಕೆಯನ್ನೂ ಹಂಚಿಕೆಯನ್ನೂ ಇದರಲ್ಲಿರುವ ಕಾರ್ಟಿಸೋನ್, ಹೈಡ್ರೊಕಾರ್ಟಿಸೋನುಗಳು ಅಂಕೆಯಲ್ಲಿಡುತ್ತವೆ. ೩ ಒಗ್ಗದಿಕೆ (ಅಲರ್ಜಿ), ಅಂಟುಜನಕದ (ಕೊಲ್ಲೆಜನ್) ರೋಗಗಳು, ಹೇರೀಡುವಳಿಯಂಥ (ಹೈಪರ್‍ಸೆನ್ಸಿಟಿವಿಟಿ) ಕಣಜಾಲಗಳ ಪ್ರತಿಕ್ರಿಯೆಗಳಲ್ಲಿ, ಕಾರ್ಟಿಸೋನ್, ಹೈಡ್ರೊಕಾರ್ಟಿಸೋನುಗಳ ಸುಗುಣಗಳು ಶೀತಸ್ರಾವಂದದ ಕೀಲುರಿತವೇ (ರುಮೆಟಾಯ್ಡ್ ಆತ್ರ್ರೈಟಿಸ್) ಮೊದಲಾದ ೫೦ ಇನ್ನಿತರ ರೋಗಚಿಕಿತ್ಸೆಗಳಲ್ಲಿ ತೋರಿವೆ. ಈ ರೋಗಗಳಲ್ಲಿ ಯಾವುದರಲ್ಲೂ ಅಡ್ರಿನಲ್ ಗ್ರಂಥಿಯ ರಗಟೆಯ ಪಾತ್ರ ಏನೂ ಇಲ್ಲದಿದ್ದರೂ ಕಾರ್ಟಿಸೋನ್, ಹೈಡ್ರೊಕಾರ್ಟಿಸೋನ್ ಮದ್ದುಗಳು ಹೇಗೆ ಗುಣಪಡಿಸುತ್ತವೆಂದು ೧೯೬೦ರ ಮೊದಲಿನ ತನಕ ಗೊತ್ತೇ ಇರಲಿಲ್ಲ. ಅಡ್ರಿನಲ್ ರಗಟೆಯ ಚಟುವಟಿಕೆಯನ್ನು ಅಡ್ರಿನಲ್ ರಗಟೆ ಪಾಲಿಕ ಚೋದನಿಕದ (ಎಸಿಟಿಹೆಚ್) ಮೂಲಕ ತೆಮಡಿಕ (ಪಿಟುಯಿಟರಿ) ಗ್ರಂಥಿ ಅಂಕೆಗೊಳಿಸುತ್ತದೆ. ಅಡ್ರಿನಲೀನ್ (ಎಪಿನೆಫ್ರೀನ್) ನಲ್ಲಿರುವ ಅಮೈನೊ ಗುಂಪಿನ ಬದಲಾಗಿ ಮೆತಿಲ್ ಗುಂಪು ಸೇರಿರದಿರುವುದೇ ನಾರಡ್ರಿನಲೀನ್ (ನಾರೆಪಿನೆಫ್ರೀನ್). ಇವೆರಡೂ ಅಡ್ರಿನಲ್ ಕುಸುರಿಯಲ್ಲಿ ಒಳಸುರಿಯುತ್ತವೆ. ವಾಲ್ಟರ್ ಕ್ಯಾನನ್ ಮೊದಲು ಹೇಳಿದಂತೆ, ಅಡ್ರಿನಲೀನನ್ನು ಚುಚ್ಚಿ ಹೊಗಿಸಿದರೆ, ಅನುವೇದನ ನರದ ಮಂಡಲವನ್ನು ಚೋದಿಸಿದಂಥ ಪರಿಣಾಮಗಳನ್ನೇ ತೋರಿ, ಇದ್ದಕ್ಕಿದ್ದಂತೆ ಅಂಜಿಕೆಯಾದಾಗ, ರೇಗಿದಾಗ, ಕಾದಾಡಬೇಕೆಂದಾಗ, ಮೈಗೆ ಬಲಗೊಡುತ್ತದೆ. ಬೇಗನೆ ರಕ್ತದ ಒತ್ತಡದ ಏರಿಕೆ, ರಕ್ತದ ಸಕ್ಕರೆ ಹೆಚ್ಚಳಿಕೆ, ಸ್ನಾಯುಗಳಿಗೆ ಹೆಚ್ಚು ರಕ್ತದ ಹರಿವು, ಪಚನ ಕುಂದುವುದೇ ಮೊದಲಾದುವು ಈ ಪರಿಣಾಮಗಳು. ಚಟುವಟಿಕೆ, ಹುಮ್ಮಸ್ಸು, ಲವಲವಿಕೆಗಳಿಗೆ ಕಾರಣ ಈ ಚೋದನಿಕದ ಸುರಿಕೆ. ಇಷ್ಟಾದರೂ, ಯಾವ ಜೀವಿಯೇ ಆಗಲಿ, ಅಡ್ರಿನಲ್ ಗ್ರಂಥಿಯ ಕುಸುರಿ ಇಲ್ಲದೆಯೇ ಬದುಕಿರಬಹುದು. ಅನುವೇದನ ನರಗಳು ಚೋದಿಸುವುದರಿಂದಲೂ ಅಸಿಟೈಲ್‍ಕೋಲೀನ್, ಇನ್ಸುಲಿನ್‍ನಂಥ ಕಾರಕಗಳಿಂದಲೂ ಬಹುವಾಗಿ ಅಡ್ರಿನಲ್ ಕುಸುರಿನ ಅಂಕೆಗೊಳಿಸುವುದರಲ್ಲಿ ಕೆಲಸ ಮಾಡುತ್ತವೆ. ಅಡ್ರಿನಲಿನ್‍ನ ಉಡುಗಿಸುವ ಗುಣಗಳಿಗಿಂತಲೂ ಚೋದಿಸುವ ಗುಣಗಳನ್ನೇ ಬಹುವಾಗಿ ನಾರಡ್ರಿನಲೀನ್ ತೋರುವುದು. (ಡಿ.ಎಸ್.ಎಸ್.) ಅಡ್ರಿನಲಿನ್, ನಾರಡ್ರಿನಲಿನ್ : ಮೂತ್ರಪಿಂಡದ ಮೇಲಣ (ಅಡ್ರಿನಲ್) ಗ್ರಂಥಿಗಳ ತಿರುಳಿನಲ್ಲಿ (ಮೆಡುಲ್ಲ) ತಯಾರಾಗುವ, ಒಳಸುರಿಕ ಕ್ರಿಯಾಂಶಗಳಿವು. ಕಾರ್ಯಕಾರಿ ಅಂಗಗಳಿಗೆ ನರ ಆವೇಗಗಳನ್ನು ಸಾಗಿಸುವ ರಾಸಾಯನಿಕ ನಡುಹಾಯಿಕಗಳಾಗಿ, ಅನುವೇದನಾ (ಸಿಂಪತೆಟಿಕ್) ನರತಂತುಗಳ ಕೊನೆಗಳಲ್ಲೂ ಇವು ಬಿಡುಗಡೆಯಾಗುತ್ತವೆ. ರಾಸಾಯನಿಕವಾಗಿ ಇವರೆಡೂ ಸ್ವಲ್ಪಮಟ್ಟಿಗೆ ಬೇರೆಬೇರೆಯಾದರೂ ಅನುವೇದನಾ ನರಮಂಡಲವನ್ನು ಚೋದಿಸುವುದರಿಂದಾಗುವ ಪ್ರಭಾವಗಳನ್ನು ಹೋಲುವ ಪರಿಣಾಮಗಳನ್ನೇ ತೋರುತ್ತವೆ. ಇದಕ್ಕಾಗಿ ಇವಕ್ಕೆ ಅನುವೇದನ ಅಣಕದ ಕಾರಕಗಳೆಂದು ಹೆಸರಿದೆ. ಅಡ್ರಿನಲ್ ಗ್ರಂಥಿಯ ತಿರುಳಿನಲ್ಲಿ ಹೆಚ್ಚೂ ಕಡಿಮೆ ಶೇ.೮೦ ರಷ್ಟು ಅಡ್ರಿನಲಿನ್ನೂ ೨೦% ರಷ್ಟು ನಾರಡ್ರಿನಲಿನ್ನೂ ಸುರಿವುದು. ಬಹುಪಾಲು ನಾರಡ್ರಿನಲಿನ್ ಒಂದನ್ನೇ ಬಿಡುವ ಅನುವೇದನಾ ನರ ಕೊನೆಗಳಲ್ಲಿ ಇದರ ಅದಲುಬದಲು ಇರುವುದು. ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಇದರ ಚೊಕ್ಕವಾದ ಚುರುಕಾದ ಸಂಯುಕ್ತಗಳು ಸಾಕಿದ ಪ್ರಾಣಿಗಳ ಗ್ರಂಥಿಗಳ ಸಾರಕವಾಗೋ ಕೃತಕವಾಗೋ ತಯಾರಾಗುತ್ತವೆ. ಅಡ್ರಿನಲಿನ್ ಚುಚ್ಚಿದರೆ ರಕ್ತದ ಒತ್ತಡ ಏರುತ್ತದೆ; ಗುಂಡಿಗೆ ಕುಗ್ಗುವ ಬಲ, ವೇಗಗಳೂ ಹೆಚ್ಚುವುವಲ್ಲದೆ ಸುತ್ತಂಚಿನ ರಕ್ತನಾಳಗಳೂ ಕುಗ್ಗುತ್ತವೆ. ನವಿರುಸಿರ್ನಾಳಗಳನ್ನು ಹಿಗ್ಗಲಿಸುವುದರಿಂದ ಗೂರಲಿನವರಲ್ಲಿ ಉಸಿರಾಟ ಸರಾಗವಾಗುತ್ತದೆ. ಯಕೃತ್ ಉಪಾಪಚಯದ (ಮೆಟಬಾಲಿಸಮ್) ಮೇಲಿನ ಪ್ರಭಾವದಿಂದ ಈಲಿಯಲ್ಲಿರುವ (ಲಿವರ್) ಗ್ಲೂಕೋಸನ್ನು ಹೊರತೆಗೆದು ರಕ್ತದಲ್ಲಿ ಹೆಚ್ಚಿಸುತ್ತದೆ. ನಾರಡ್ರಿನಲಿನ್ನಿನ ಪ್ರಭಾವಗಳೂ ಇದೇ ತೆರನಾದರೂ ಜೀವವಸ್ತು ಕರಣದ ಅಲ್ಲದೆ ಗುಂಡಿಗೆಯ ಮೇಲಣ ಪ್ರಭಾವಗಳು ಅಷ್ಟಾಗಿಲ್ಲ. ನಾರಡ್ರಿನಲಿನ್ ರಕ್ತನಾಳದೊಳಕ್ಕೆ ಚುಚ್ಚಿ ಹೊಗಿಸಿದಾಗ ಸರಕ್ಕನೆ ರಕ್ತದ ಒತ್ತಡ ಅತಿಯಾಗಿ ಏರಲು ಕಾರಣ ರಕ್ತನಾಳಗಳನ್ನು ಬಲವಾಗಿ ಕುಗ್ಗಿಸುವುದೇ. ಸ್ಥಳೀಯ ಅರಿವಳಿಕಗಳು (ಲೋಕಲ್ ಅನೀಸ್ತೆಟಿಕ್ಸ್) ಬೇಗನೆ ಹೀರಿಹೋಗದಂತೆ, ಅಡ್ರಿನಲಿನ್ ಕಿರಿಯ ಧಮನಿಗಳನ್ನು ಕುಗ್ಗಿಸಿ, ಅರಿವಳಿಕದ ಪ್ರಭಾವ ಮುಂದುವರಿಸಿ, ಅದರ ವಿಷತೆಯನ್ನೂ ಇಳಿಸುವುದರಿಂದ, ಸ್ಥಳೀಯ ಅರಿವಳಿಕೆಗಳೊಂದಿಗೆ ತುಸು ಅಡ್ರಿನಲಿನ್ ಸೇರಿಸುವುದುಂಟು. ಮದ್ದುಗಳೆದುರಿನ ಪ್ರತಿಕ್ರಿಯೆಗಳು, ತುರುಚೆ ದದ್ದುಗಳು, ಕರಡ ಜ್ವರಗಳಂಥ ತೀವ್ರ ಒಗ್ಗದಿಕೆಯ (ಅಕ್ಯೂಟ್ ಅಲರ್ಜಿ) ಬೇನೆಗಳಲ್ಲೂ ಗುಣಕಾರಕ. ಕೆಲು ಬಗೆಗಳ ಆಘಾತಗಳಲ್ಲಿ (ಷಾಕ್ಸ್) ರೋಗಿ ನಾಡಿ ಬಡಿತ ನಿಂತು ಸುಸ್ತು ಬಿದ್ದಿರುವಾಗ, ರಕ್ತದ ಒತ್ತಡವನ್ನು ಮತ್ತೆ ಏರಿಸಲು ಇದನ್ನು ನಿಧಾನವಾಗಿ ರಕ್ತನಾಳದ ಮೂಲಕ ಕೊಡಬಹುದು. ಇವೆರಡನ್ನೂ ಮಿತಿಮೀರಿ ಕೊಟ್ಟರೆ ಮಿದುಳಿನಲ್ಲಿ ರಕ್ತನಾಳ ಒಡೆದು ರಕ್ತಸುರಿತ, ಗುಂಡಿಗೆಯ ಏರುಪೇರುಗಳಾಗಿ ಮಾರಕವಾಗಬಹುದು. ಅಲ್ಲದೆ ಸ್ನಾಯುಗಳ ಬಿಗುಪನ್ನೂ ರಕ್ತದ ಒತ್ತಡವನ್ನೂ ಸಮನಾಗಿ ಇರಿಸಿರಲೂ ಅಡ್ರಿನಲಿನ್ ನೆರವಾಗುವುದು. ಚರ್ಮ, ಸ್ಥಳೀಯ ಅಂಗಗಳಿಂದ ಹಾಗೂ ದೇಹದ ಇತರ ಅಂಗಗಳ ಲೋಳ್ಪೊರೆ (ಮ್ಯೂಕಸ್ ಮೆಂಬ್ರೇನ್) ಯಿಂದ ಆಗುವ ರಕ್ತ ಸ್ರಾವ (ಉದಾಹರಣೆಗೆ ಹೊರ ಮೂಗಿನ ಲೋಳ್ಪೊರೆಯಿಂದ ಆಗುವ ರಕ್ತ ಸ್ರಾವ - ಎಪಿಸ್‍ಟ್ಯಾಕ್ಸಿಸ್) ವನ್ನು ಅಡ್ರಿನಲೀನ್ ಹಾಗೂ ಇತರ ಔಷಧಿಗಳಿಂದ ಪಡೆಯಬಹುದು. ಅಡ್ರಿನಲಿನ್ ಕಿರಿಯ ಧಮನಿಗಳನ್ನು ಕುಗ್ಗಿಸಿ ರಕ್ತ ಸ್ರಾವವನ್ನು ಕಡಿಮೆಗೊಳಿಸುತ್ತದೆ. (ಡಿ.ಎಸ್.ಎಸ್.) ಅಡ್ವೊಕೇಟ್ : ಮತ್ತೊಬ್ಬರನ್ನು ಪ್ರತಿನಿಧಿಸುವ ಅರ್ಹತೆ ಅಥವಾ ಅಧಿಕಾರ ಹೊಂದಿ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ವ್ಯಕ್ತಿ. ಭಾರತದಲ್ಲಿ ಪೋರ್ಚುಗೀಸರ ಕಾಲದಿಂದ ಅಂದರೆ ವಾಸ್ಕೋ ಡಿ ಗಾಮ ಬಂದಾಗಲಿನಿಂದಲೇ - ಕಾನೂನಿನ ಇತಿಹಾಸ ಪ್ರಾರಂಭವಾಯಿತು. ಆಗ ಈಗಿನಂತೆ ಪ್ರತ್ಯೇಕವಾಗಿ ವಾದಿಸುವವರು ಬೇಕಾಗಿರಲಿಲ್ಲ. ಕ್ರಮೇಣ, ಕಾನೂನಿನ ಚರಿತ್ರೆ ಬೆಳೆದುಬಂದಂತೆ-ಪ್ಲೀಡರ್, ಲಾಯರ್, ವಕೀಲ, ಅಟಾರ್ನಿ ಮುಂತಾದ ವಿವಿಧ ನಾಮಗಳಿಂದ ನ್ಯಾಯಾಲಯಗಳಲ್ಲಿ ವಾದಿಸುವವರು ಹುಟ್ಟಿಕೊಂಡರು. ಇದು ಇಂದಿಗೂ ನಡೆದು ಬಂದಿದೆ. ಆದರೆ, ಕಾನೂನಿನ ಕ್ರೋಡೀಕರಣಕ್ಕೋಸ್ಕರ ೧೯೬೧ರಲ್ಲಿ ಒಂದು ಹೊಸ ಕಾನೂನು-ಅಡ್ವೊಕೇಟ್ ಕಾಯಿದೆ ೧೯೬೧ ಜಾರಿಗೆ ಬಂದಿದೆ. ಇದರ ಪ್ರಕಾರ ಮೊದಲಿನ ಪ್ಲೀಡರ್ ಮತ್ತಿತರರು ಬೇಕಾದರೆ ಅವರಿರುವ ತನಕ ಹಾಗೆಯೇ ಮುಂದುವರಿಯಬಹುದಾದರೂ ಇನ್ನುಮುಂದೆ ಅಡ್ವೊಕೇಟುಗಳು ಮಾತ್ರ ಉಳಿಯುತ್ತಾರೆ. ಈಗಿನ ಕಾಯಿದೆಯಂತೆ, ಅಡ್ವೊಕೇಟರು ತಮ್ಮ ತಮ್ಮ ರಾಜ್ಯಗಳ ಬಾರ್‍ಕೌನ್ಸಿಲ್‍ಗಳಿಂದ ಸನ್ನದನ್ನು ಪಡೆದು ಆಯಾ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಯಾರನ್ನಾದರೂ ಪ್ರತಿನಿಧಿಸಬಹುದು. ಆದರೆ, ಸರ್ಕಾರ ಇದಕ್ಕೂ ಮಿತಿಯನ್ನು ಒಡ್ಡಿದೆ. ಉದಾಹರಣೆಗೆ ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ಅಪ್ಪಣೆ ಇಲ್ಲದೆ ವಾದಮಾಡಲಾಗುವುದಿಲ್ಲ. ಇಂಗ್ಲೆಂಡಿನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕೋರ್ಟುಗಳಲ್ಲಿ ವಾದಿಸುವವರಿಗೆ ಮಾತ್ರ, ಅಡ್ವೊಕೇಟರು ಎಂದು ಹೆಸರಿದೆ. ಅಲ್ಲಿಯ ಹಾಗೆ ಇಲ್ಲಿಯೂ ಅಡ್ವೊಕೇಟ್ ಜನರಲ್ ಎಂಬುವರು ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವರು. ಅಮೆರಿಕದಲ್ಲಿ ಅಡ್ವೊಕೇಟ್ ಪದ, ಮಿಕ್ಕ ಹೆಸರುಗಳಾದ, ಅಟಾರ್ನಿ, ಕೌನ್ಸೆಲ್ ಮತ್ತು ಲಾಯರ್ ಪದಗಳ ಜೊತೆಯಲ್ಲಿಯೇ ಉಪಯೋಗಿಸಲ್ಪಡುತ್ತದೆ. ಫ್ರಾನ್ಸ್ ದೇಶದಲ್ಲಿ ಎರಡು ಬಗೆಯ ಅಡ್ವೊಕೇಟರಿದ್ದಾರೆ. ಒಬ್ಬರು ಬರಿಯ ಕಾನೂನಿನ ಸಲಹೆಗಾರರು; ಇವರು ಕಾನೂನಿನ ತಿಳಿವಳಿಕೆಯನ್ನು ಕೊಡುವುದೇ ಅಲ್ಲದೆ ದಾವೆಯನ್ನು ಬರೆದು ಸಿದ್ಧಪಡಿಸಿ ದಾವೆ ನಡೆಸಲು ಸಹಾಯಮಾಡುತ್ತಾರೆ. ಇತರರು ಬೇರೆಯವರ ಪರವಾಗಿ ನ್ಯಾಯಾಲಯದಲ್ಲಿ ಕಾರ್ಯ ನಡೆಸುತ್ತಾರೆ. ಸ್ಕಾಟ್ಲೆಂಡಿನಲ್ಲಿ ಸೆಷನ್ಸ್ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ವಾದಿಸಲು ಅಡ್ವೊಕೇಟುಗಳು ಆಯಾ ಪ್ರಾಂತ್ಯಗಳ ಬಾರ್‍ಕೌನ್ಸಿಲ್‍ಗಳ ಅಧಿಕಾರಕ್ಕೊಳಪಟ್ಟಿರುವರು. (ವಿ.ಎಸ್.) ಅಣಕುಬರೆಹ : ಹಾಸ್ಯಸಾಹಿತ್ಯದ ಒಂದು ಪ್ರಭೇದ (ಪ್ಯಾರಡಿ). ಪ್ಯಾರಡಿ ಎನ್ನುವ ಮೂಲ ಗ್ರೀಕ್ ಶಬ್ದಕ್ಕೆ, ಹಾಡಿಗೆ ಪ್ರತಿಯಾಗಿ ಹೇಳಿದ ಹಾಡು (ಕೌಂಟರ್ ಸಾಂಗ್) ಎಂದು ಅರ್ಥವಿದ್ದರೂ ಈಗ ಅಣಕುಬರೆಹವೆನ್ನುವ ಅರ್ಥದಲ್ಲಿ ಅದರ ಬಳಕೆ ಇದೆ. ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯ ಶೈಲಿ, ವಿಲಕ್ಷಣ ರೀತಿನೀತಿಗಳನ್ನು ಬೇರೊಂದು