ಪುಟ:Abhaya.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅಕ್ಕಾ! ಅಕ್ಕಾ!"

-ಎಂದು ತಮ್ಮ್, ಸೋದರಿಯ ಭುಜಕುಲುಕಿದ.

"ಅಕ್ಕಾ!ಅಕ್ಕಾ! ನೋಡು, ಇಲ್ನೋಡು ಅಕ್ಕಾ!"

ತಮ್ಮನ ಕರೆಗೆ ತುಂಗಮ್ಮ ಚೇತರಿಸಿಕೊಂಡಳು.

ಆದರೆ ಮನಸ್ಸು ಕೇಳುತಿತ್ತು:

'ಯಾಕೆ? ಯಾಕೆ ಏಳ್ತಿದ್ದೀಯಾ? ಇಂಥ ಬದುಕಿಗಿಂತ ಯಾವಕಾಲ

ದಲ್ಲೂ ಎಚ್ಚರವಗದೇ ಇರುವ ದೀರ್ಘನಿದ್ರೆಯೆ ಮೇಲಲ್ಲ?'

ಆದರೆ ಅದು, ಸ್ಮರಿಸಿದೊಡನೆ ಬರುವ ದೀರ್ಘನಿದ್ರೆಯಾಗಿರಲಿಲ್ಲ?'

ಹೊಸಹೊಸ ಪದಗಳು ತುಂಗಮ್ಮನ ಮೆದುಳಿಗೆ ಲಗ್ಗೆ ಇಟ್ಟುವು....

ಪಾಪ.... ಕಳಂಕ.... ಮದುವೆಯಾಗದೆಯೇ ತಯ್ತನ... ಅಯೋ!

ತನ್ನನ್ನು ಸಾಕಿಸಲಹಿದ್ದ ತಂದೆಗೆ ಎಂತಹ ದ್ರೋಹ ಬಗೆದಿದ್ದಳಾಕೆ!

ಅವರ ವೃದ್ಧಾಪ್ಯದಲ್ಲಿ ಅದೆಂತಹ ಪರಮ ಸುಖವನ್ನು ತಾನು ಒದಗಿಸಿ ಕೊಟ್ಟ ಹಾಗಾಯಿತು!

ಈ ಅಪರದ್ದಕ್ಕೆ ಶಿಕ್ಷೆಯುಂತಟೆ? ಪ್ರಾಯಶ್ಚಿತ್ತವುಂಟೆ? ಪರಿಹಾರ

ವುಂಟೆ?

ಘಂಟೆಘಂಟೆಗಳಕಾಲ ಯೋಚಿಸಿದ ಮೇಲೂ ಆಕೆಗೆ ಹೊಳೆಯುತ್ತಿದ್ದು

ದೋಂದೆ-ಸಾವು.

ತಂದೆ, ಹುಚ್ಚಿಯಂತೆ ವರ್ತಿಸುತ್ತಿದ್ದ ಮಗಳನ್ನು ಕಂಡರು. ಏನೂ

ತಿಳಿಯದ ಎಳೆಯಮಗು, ಮನಸ್ಸಿಗೆ ಹಚ್ಚಿಕೊಂಡಿದೆ, ಎಂದು ವ್ಯತೆಪಟ್ಟರು. ಆ ಮಗಳ ಅಳಲಿನ ಆಳ ಎಷ್ಟೆಂಬುದು ಅವರಿಗೆ ತಿಳಿಯಲಿಲ್ಲ.

ಅಲ್ಪ ಸ್ವಲ್ಪ ತಿಳಿವಳಿಕೆ ಅನುಸಾರವಾಗಿ ಎಣಿಕೆ ಹಾಕುತ್ತಲೇ

ಇದ್ದಳು ತುಂಗಮ್ಮ.... ಮೂರನೆಯತ್ತಿಂಗಳು.... ಸಂದೇಹವಿರಲ್ಲಿಲ್ಲ.

ಯಾವುದು ಮೇಲು? ಬದುಕಿದರೂ ಮನೆತನಕ್ಕೆ ಕುಂದು-ಸತ್ತರೂ

ಕುಂದು.

ಮನಸಿನರೋಗ ದೇಹಕ್ಕೆ ಅಂಟಿಕೊಂಡು ಮೈ ಕಾವೇರಿ ಜ್ವರ

ಬಂದು ತುಂಗಮ್ಮ ಮಲಗಿಕೋಂಡಳು. ಗಾಬರಿಯಾದ ತಂದೆ ಕಣ್ಣಲ್ಲಿ ಎಣ್ಣೆ ಇಟ್ಟು ಆರೈಕೆ ನದಡೆಸಿದರು.