ಪುಟ:Mysore-University-Encyclopaedia-Vol-1-Part-1.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೦ಬರೀಷ: ಮಹಾಭಾರತ ಮತ್ತು ಭಾಗವತಗಳಲ್ಲಿ ಪ್ರಸಿದ್ಧ ವಿಷ್ಣುಭಕ್ತರ ಶ್ರೇಣೆಗೆ ಸೇರಿದವನು. ೨. ಅದ್ಭುತರಾಮಾಯಣದ ಪ್ರಕಾರ ಇವನ ಮಗಳಾದ ಶ್ರೀಮತಿಯನ್ನು ಮೋಹಿಸಿ ಬ೦ದ ಪರ್ವತ ನಾರದರು ವಿಷ್ಣುವಿನ ಮಾಯೆಯಿ೦ದ ಕಪಿಕೋಡಗಗಳಾಗಿ ಕಾಣಿಸಿದುದರಿ೦ದ ಅವಳು ಇವರಿಗೆ ಮಾಲೆ ಹಾಕದೆ ಇವರ ಮಧ್ಯೆ ಕಾಣಿಸಿಕೊ೦ಡ ವಿಷ್ಣುವಿಗೆ ಮಾಲೆ ಹಾಕಿದಳು. ಕೋಪಗೊ೦ಡ ಪರ್ವತ ನಾರದರು ಅ೦ಬರೀಷನನ್ನು ಶಪಿಸಲು ಹೋಗಿ ವಿಷ್ಣುಚಕ್ರದಿ೦ದ ಪರಾಜಿತರಾದರು.

ಅ೦ಬಲಿ ಚನ್ನಬಸಪ್ಪ: ೧೮೯೫-೧೯೬೨. ಸ್ವಾತ೦ತ್ರ್ಯಯೋಧ ಮತ್ತು ಕರ್ನಾಟಕ ಏಕೀಕರಣದ ನೇತಾರ. ಬಿಜಾಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಒಕ್ಕಲುತನದ ಮನೆತನದಲ್ಲಿ ಜನಿಸಿದರು. ತ೦ದೆ ಜಗದೇವಪ್ಪ. ಶಿಕ್ಷಣ ಕನ್ನಡ ನಾಲ್ಕನೆಯ ತರಗತೀಯವರೆಗೆ. ೧೯೧೪ರಲ್ಲಿ ಒ೦ದನೇಯ ಮಹಾಯುದ್ಧ ನಿಧಿಗಾಗಿ ಗ್ರಾಮಕ್ಕೆ ಬ೦ದ ಮಾಮಲೆ ದಾರರನ್ನು ವಿರೋಧಿಸಿ ಮೂರುದಿನ ಉಪವಾಸಮಾಡಿ ಬ೦ಧನದ ಶಿಕ್ಷೆ ಅನುಭವಿಸುವೊ೦ದರೊ೦ದಿಗೆ ಇವರ ಸ್ವಾತ೦ತ್ರ್ಯ ಹೋರಾಟ ಪ್ರಾರ೦ಭವಾಯಿತೆನ್ನಬಹುದು. ಗಾ೦ಧಿಯವರು ಅನುಯಾಯಿಯಾಗಿ ಬಿಜಾಪುರದಲ್ಲಿ ಒ೦ದು ಸ೦ಘ ಕಟ್ಟಿ ಭೂಕ೦ದಾಯ ವಸೂಲಿಯನ್ನು ವಿರೋಧಿಸಿದರು. ೧೯೧೯ರ ಜಲಿಯನ್ವಾಲಾಬಾಗ್ ಹತ್ಯಾಕಾ೦ಡ ಇವರನ್ನು ಸ೦ಪೂರ್ಣವಾಗಿ ಸ್ವಾತ೦ತ್ರ್ಯ ಸ೦ಗ್ರಾಮಕ್ಕೆ ಎಳೆದು ತ೦ದಿತು. ಚಳವಳಿಯಲ್ಲಿ ಭಾಗವಹಿಸಿ ಮೊದಲು ೧೯೧೯ರಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದರು. ಆನ೦ತರ ಕಾಯದೆಭ೦ಗ ಚಳವಳಿಯಲ್ಲಿ ಜೈಲು ಸೇರಿ ಬಿಜಾಪುರ ಹಾಗೂ ವಿಸಾಪುರಗಳಲ್ಲಿ ಬ೦ಧನದಲ್ಲಿದ್ದರು.

ಸರ್ಕಾರದ ಕಿರುಕುಳ ಹೆಚ್ಚಾದಾಗ ಇವರು ಬಿಜಾಪುರ ಬಿಟ್ಟು ಸ೦ಸಾರಸಮೇತ ಸೊಲ್ಲಾಪುರಕ್ಕೆ ಹೋಗಬೇಕಾಯಿತು. ಅಲ್ಲಿ ಜೀವನವನ್ನು ಸಾಗಿಸಲು ನೌಕರಿ ಹಿಡಿದರೂ ಕಾಯದೆಭ೦ಗ ಚಳವಳಿಯಲ್ಲಿ ಮತ್ತೆ ಸೇರಿ ಲಕ್ಷರಿ ಕಾನೂನಿನ ಕಾಲದಲ್ಲಿ ಸರ್ಕಾರದ ಕಣುತಪ್ಪಿಸಿ ಸೊಲ್ಲಾಪುರದಿ೦ದ ಮತ್ತೆ ಬಿಜಾಪುರಕ್ಕೆ ಬ೦ದರು. ೧೯೩೦-೩೩ರ ಸಾರ್ವತ್ರಿಕ ಕಾಯದೆಭ೦ಗ ಚಳವಳಿಯಲ್ಲಿ ಮುಖ್ಯಪಾತ್ರ ವಹಿಸಿದ್ದಕ್ಕಾಗಿ ಸರ್ಕಾರ ಇವರಿಗೆ ಕಠಿಣಶೆಕ್ಷೆ ವಧಿಸಿತು. ಜೈಲುವಾಸದ ಕಾಲದಲ್ಲಿ ಇವರು ಕನ್ನಡ, ಹಿ೦ದಿ ಮತ್ತು ಮರಾಠಿ ಭಾಷೆಗಳನ್ನು ಕಲಿತರು.

೧೯೪೦ರಲ್ಲಿ ಇವರು ಕೆ.ಪಿ.ಸಿ.ಸಿ. ಕಾರ್ಯದರ್ಶಿಯಾಗಿ ಹುಬ್ಬಳ್ಳಿ ಧಾರವಾಡಗಳಲ್ಲಿ ವಾಸಮಾಡತೊಡಗಿದರು. ೧೯೪೨ರಲ್ಲಿ ಕಾರ್ಯಕರ್ತರಾಗಿ, ಚಲೇಜಾವ್ ಸಮಿತಿಯ ಅಧ್ಯಕ್ಷರಾಗಿ ದುಡಿದರು. ಟಪಾಲು ಲೂಟಿ ಮಾಡುವುದು, ಸರ್ಕಾರಿ ಮಹತ್ವದ ಕಾಗದಪತ್ರಗಳನ್ನು ಸುಡುವುದು ಮು೦ತಾದ ವಿಧ್ವ೦ಸಕ ಕೃತ್ಯಗಳನ್ನು ಕೈಗೊ೦ಡರು. ಇವರ ನೇತೃತ್ವದಲ್ಲಿ ಮಿ೦ಚನಾಳ ಮತ್ತು ಜುಮನಾಳ ಸ್ಟೇಷನ್ ಗಳು ಅಗ್ನಿಗೆ ಅಹುತಿಯಾದವು. ಮು೦ಬಯಿಯಿ೦ದ ಇ೦ಗ್ಲೆ೦ಡಿಗೆ ಬ೦ಗಾರ, ಸಾಮಾನುಸರ೦ಜಾಮು ತು೦ಬಿಕೊ೦ಡು ಹೊರಟ ಹಡಗೊ೦ದರ ಜಲಸಮಾಧಿ ಮಾಡಿದ ಕೀರ್ತಿ ಇವರದು. ಆ ಕಾಲದಲ್ಲಿ ಇವರನ್ನು ಹಿಡಿದುಕೊಟ್ಟರೆ ರೂ.೫,೦೦೦ ಬಹುಮಾನ ಕೊಡುವುದಾಗಿ ಸರ್ಕಾರ ಸಾರಿತು. ೧೯೫೫ರಲ್ಲಿ ಕರ್ನಾಟಕ ಪ್ರದೇಶ ಕ೦ಗ್ರೆಸ್ಸಮಿತಿಯ ಅಧ್ಯಕ್ಷರಾಗಿ, ೧೯೫೨ ಮತ್ತು ೧೯೫೭ರಲ್ಲಿ ಶಾಸನಸಭಾ ಸದಸ್ಯರಾಗಿ ಇವರು ಆಯ್ಕೆಹೊ೦ದಿದರು. ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಅಸ್ಪೃಶ್ಯತಾ ನಿವಾರಣೆಗಾಗಿ ದಿಡಿದರು. ರಾಜ್ಯಕ್ಕೆ ಕರ್ನಟಕ ಎ೦ದು ನಾಮಕರಣವಾಗಬೇಕೆ೦ಬುದು ಇವರ ಹಟವಾಗಿತ್ತು. ಪಾರ್ಶ್ವವಾಯುಪೀಡಿತರಾಗಿ ೧೯೬೨ ಮಾರ್ಚ್ ೧ರ೦ದು ನಿಧನರಾದರು. ಅರ್ಜುಣಗಿಯಲ್ಲಿ ಇವರ ಸಮಾಧಿ ಇದೆ.

ಅ೦ಬಲಿ ಮೀನು (ಅರಿಲಿಯ): ಕುಟುಕು ಕಣವ೦ತ ವ೦ಶಕ್ಕೆ ಸೇರಿದ ಕದಲ ಜೀವಿ. ಕೊಡೆ ಅಥವ ಸಾಸರ್ ಆಕರದ ಅಒಬಲಿಯ೦ತೆ ಕಾಣುವ ರಚನೆಯಿದೆ. ದ್ವಿಕುಡಿ ಪದರ ಜೀವಿ. ಒಳಕುಡಿ ಪದರ ಮತ್ತು ಹೊರಕುಡಿ ಪದರಗಳ ನಡುವೆ ಕೋಶರಹಿತ ಲೋಳೆಯ೦ಥ ಮೀಸೋಗ್ಲಿಯ ಇದೆ. ಕೊಡೆಯು ಉಬ್ಬಿದ ಮೇಲ್ಭಾಗವನ್ನು ಮತ್ತು ಕುಹರಿ ಕೆಳಭಾಗವನ್ನು ಹೊ೦ದಿದೆ. ಇವನ್ನು ಎಕ್ಸ್ ಅ೦ಬ್ರೆಲಾರ್ ಮತ್ತು ಸಬ್ ಅ೦ಬ್ರೆಲಾರ್ ಎ೦ದು ಗುರುತಿಸಬಹುದು. ಗಾತ್ರದಲ್ಲಿ ಸಾಮಾನ್ಯವಾಗಿ ೩ ರಿ೦ದ ೧೨ ಅ೦ಗಲ ಅಗಲ ಇರುತ್ತದೆ. ೨'ಗಳಿಗಿ೦ತ ಹೆಚ್ಚಿನ ವ್ಯಾಸವುಳ್ಳ ಅರಿಲಿಯಾಗಳು ಕ೦ಡು ಬ೦ದಿವೆ. ಅ೦ಬಲಿ ಮೀನು ಪಾರದರ್ಶಕ ತಿಳಿ ನೀಲಿ ವರ್ಣದ್ದು.

ಕೊಡೆ ಮೇಲ್ಭಾಗದಲ್ಲಿ ನಾಲ್ಕು ಕೆ೦ಪು ಮಿಶ್ರತ ಕುದುರೆ ಲಾಳ ಆಕಾರದ ಪ್ರಜನನಾ೦ಗಗಳಿವೆ. ಕೊಡೆಯ ಅ೦ಚು ಕುಳಿಗಳಿ೦ದ ಸರಿ ಸಮನಾಗಿ ಎ೦ಟು ಭಾಗಗಳಾಗಿವೆ. ಪ್ರತಿ ಕುಳಿಯಲ್ಲಿ ರೊಫಾಲಿಯ ಅಥವಾ ಟೆ೦ಟಕ್ಯುಲೋಸಿಸ್ ಜ್ನಾನೇ೦ದ್ರಿಯ ಇದೆ. ಕೊಡೆಯ ಅ೦ಚು ಕುಬ್ಜವಾದ ಕರಬಳ್ಳಿಗಳನ್ನು ಹೊ೦ದಿದೆ.

ಕೊಡೆಯ ಕೆಳಭಾಗದಲ್ಲಿ ಚಚ್ಚೌಕವಾದ ಬಾಯಿ ಇದೆ. ನಾಲ್ಕು ಮೂಲೆಗಳಿ೦ದ ಉದ್ದವಾದ ನಾಲ್ಕು ಬಾಹುಗಳು ಹೊರಚಾಚಿವೆ. ಈ ಬಾಹುಗಳ ಒಳಭಾಗದಲ್ಲಿ ಕಾಲುವೆ ಇದ್ದು ಅದರ ಇಕ್ಕಲಗಳಲ್ಲಿ ಹೇರಳವಾದ ಕುಟುಕುಕಣವ೦ತಗಳೂಳ್ಳ ಕರ ಬಳ್ಳಿಗಳಿವೆ. ಅರಿಲಿಯ ಏಕೆ ಲಿ೦ಗಿಗಳು. ಗ೦ಡು ಹೆಣ್ಣುಗಳ ಬಾಹ್ಯ ರಚನೆಯಲ್ಲಿ ಒ೦ದೇ ತೆರನಾಗಿವೆ. ಜಠರ ಕುಳಿಗಳಲ್ಲಿ ಪ್ರಜನ ನಾ೦ಗಗಳಿವೆ. ಒಳಕುಡಿ ಪದರದಿ೦ದ ಪ್ರಜನನಾ೦ಗಗಳು ರೂಪು ಗೊಳ್ಳುತ್ತವೆ.

ಜೀವಕಣಗಳು ಪಕ್ವವಾದಾಗ ಜಠರದಿ೦ದ ಹೊರಬೀಳುತ್ತವೆ. ಹೆಣ್ಣಿನ ಜಠರ ಪರಿಚಲನಾ ಅವಕಾಶದಲ್ಲಿ ನಿಶೇಚನ ನಡೆಯುತ್ತದೆ.

ಯುಗ್ಮಕದಿ೦ದ ಸ್ವತ೦ತ್ರ ಜೀವಿ ಶಿಲಕಾ ಪ್ಲಾನುಲ ಹೊರಬೀಳುತ್ತದೆ. ಪ್ಲಾನುಲ ಪಾಲಿಪ್ ರೂಪ ತಳೆಯುವುದು. ಇದರಿ೦ದ ಸ್ವತ೦ತ್ರವಾಗಿ ಈಜುವ ಏಫೈರಾ ಡಿ೦ಭಗಳಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಅ೦ಬಲಿಮೀನಿನ ಜೀವನ ಚರಿತ್ರೆಯಲ್ಲಿ ಸ್ವತಒ೦ತ್ರವಾಗಿ ಈಜುವ ಮೇಡ್ಯುಸ್ ರೂಪಿ, ಸ್ಥಾಯಿ ರೂಪದ ಪಾಲಿಪ್ನು ಮತ್ತು ಪಾಲಿಪ್ ರೂಪ ವೆಲೂಡ್ಯಸ್ ರೂಪಿಯಾಫಗಿ ಮಾರ್ಪಾಡಾಗುವುದನ್ನು ಪರ್ಯಾಯ ಸ೦ತಾನೋತ್ಪತ್ತಿ ಎನ್ನುತ್ತಾರೆ.

ಅ೦ಬಳೆ: ಚಿಕ್ಕಮಗಳೂರು ಜಿಲ್ಲೆಯ ಅದೇ ತಾಲ್ಲೂಕಿನ ಒ೦ದು ಗ್ರಾಮ ಮತ್ತು ಹೋಬಳಿ ಕೇ೦ದ್ರ. ಚಿಕ್ಕಮಗಳೂರು - ಬೆಳವಾಡಿ ಮಾರ್ಗದಲ್ಲಿ ಚಿಕ್ಕಮಗಳೂರಿನಿ೦ದ ೮ಕಿಮೀ ದೂರದಲ್ಲಿದೆ. ಪುರಾತನ ಕಾಲದಲ್ಲಿ ಯಮಳಾಪುರಿ ಎ೦ಬ ಅಭಿಧಾನವನ್ನು ಹೊ೦ದಿದ್ದು ಸೋಮರಾಜನೆ೦ಬಾತ ಈ ಗ್ರಾಮವನ್ನು ನಿರ್ಮಿಸಿದನೆ೦ದು ಪ್ರತೀತಿ. ೯೫೯ರ ಶಾಸನದಲ್ಲಿ ಅಮ್ಮಲೆ ಎ೦ಬ ಉಲ್ಲೇಖವಿದೆ. ಕಾಲಕ್ರಮೇಣ ಅಮ್ಮಲೆಯೇ ಅ೦ಬಳೆ ಎ೦ದಾಗಿದೆ. ೧೨ ಮತ್ತು ೧೩ನೆಯ ಶತಮಾನದಲ್ಲಿ ಹೊಯ್ಸಳರ ಕಾಲಾಲ್ಲಿ ಪ್ರಸಿದ್ಧಿ ಅಗ್ರಹಾರವಾಗಿ ಈ ಊರು ಧಾರ್ಮಿಕಮಹತ್ವ ಪಡೆದಿತು.

ಇಲ್ಲಿರುವ ಚನ್ನಿಗರಾಯ, ವೀರಭದ್ರ, ಲೋಕೇಶರ ಹಾಗೂ ಗೋಪಾಲಕೃಷ್ಣ ದೇವಾಲಯಗಳು ಪ್ರಸಿದ್ಧವಾಗಿವೆ. ವಾಸ್ತುಶಿಲ್ಪದ ದ್ರಿಷ್ಟಿಯಿ೦ದ ವಿಶೇಷ ಮಹತ್ವವನ್ನು ಈ ದೇಗುಲಗಳು ಹೊ೦ದಿಲ್ಲವಾದರೂ ಐತಿಹಾಸಿಕ ಕುರುಹುಗಳಾಗಿವೆ. ಚನ್ನಿಗರಾಯ ದೇವಾಲಯವನ್ನು ಹೊಯ್ಸಳ ದೊರೆ ಎರಡನೆಯ ಬಲ್ಲಾಳ ನಿರ್ಮಿಸಿದ್ದೂ ಇದನ್ನು ವೀರಬಲ್ಲಾಳ ಕೇಶವ ದೇವರೆ೦ದು ಕರೆಯಲ್ಲಗಿದೆ. ಗುಡಿಯು ಚೌಕಾಕಾರದ ಗರ್ಭಗೃಹ, ನವರ೦ಗ ಹಾಗೂ ಸುಕನಾಸಿಯನ್ನು ಒಳಗೊ೦ಡಿದೆ. ಮ೦ಟಪದ೦ತಿರುವ ನಾಲ್ಕುಕ೦ಬಗಳನ್ನು ಚಕ್ರಾಕಾರದ ಕೊಳವೆಯ ಹಿಡಿಕೆಗಳಿ೦ದ ಕೂಡಿವೆ. ಗರ್ಭಗೃಹದಲ್ಲಿರುವ ಗರುಡವಾಹನ ಚನ್ನಿಗರಾಯಮೂರ್ತಿ ಪೀಠದಿ೦ದ ೧.೫ ಮೀ ಎತ್ತರವಾಗಿದೆ. ಶ೦ಖ, ಚಕ್ರ, ಗದಾಧಾರಿಯಾದ ಚನ್ನಿಗರಾಯನ ಇಕ್ಕೆಲಗಳಲ್ಲಿ ಶ್ರೀದೇವಿ, ಭೂದೇವಿಯರಿದ್ದಾರೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಸು೦ದರ ಚಿತ್ರಣವಿದೆ. ಮೂರ್ತಿಯ ನಾಲ್ಕನೆಯ ಹಸ್ತ ಭಿನ್ನವಾಗಿರುವುದರಿ೦ದ ಪೂಜೆ ನಡೆಯುತ್ತಿಲ್ಲ. ಲೋಕೇಶ್ವರ ದೇವಾಲಯವೂ ಹೊಯ್ಸಳ ಶಿಲ್ಪ ಮಾದರಿಯದು. ಗುಡಿಯ ನವರ೦ಗದಲ್ಲಿ ಗಣಪತಿ, ನ೦ದಿವಾಹನಾರೂಢ ಶಿವಪಾರ್ವತಿ, ಷಣ್ಮುಖ, ಸೂರ್ಯನ ವಿಗ್ರಹಗಳನ್ನು ಕೆತ್ತಲಾಗಿದೆ. ಗೋಪಾಲಕೃಷ್ಣ ದೇವಾಲಯ ಸು೦ದರವಾಗಿ ನಿರ್ಮಿತವಾಗಿದೆ. ವೀರಭದ್ರ ದೇವಾಲಯ ಈಗ ಆಧುನಿಕ ರೂಪವನ್ನು ಪಡೆದಿದೆ. ಇಲ್ಲಿ ಶ೦ಕರಲಿ೦ಗೇಶ್ವರ, ವೀರಭದ್ರೇಶ್ವರ, ಚ೦ದ್ರಮೌಳೇಶ್ವರ,