ವಿಷಯಕ್ಕೆ ಹೋಗು

ಪುಟ:ಮಾಲತಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦
ಮಾಲತೀ

ರವಾದ ವಿವತ್ತನ್ನು ಅತಿಕ್ರಮಿಸಿ ಅಲ್ಪಸಂಖ್ಯೆಯ ಸೈನ್ಯದಿಂದ ಕಸಿಯನನೂನು ಬ್ರೂಟಸನ್ನು ಸೋಲಿಸಿದ್ದನು.ಅ೦ಥಾ ಭೀಮ ಪರಾಕ್ರಮಶಾಲಿಯಾದ ಮಹಾ ವೀರಪುರುಷನಾದ ಆಂಟೋನಿಯನೇ, ಕ್ಲಿಯೋಪೇಟ್ರಯ ಕಣ್ಣಿಂದ ಬಿದ್ದ ಒಂದು ಕಂಬನಿಯನ್ನು ಕಂಡು ತಾನು ಜಯಶಾಲಿಯಾಗುವುದಕ್ಕೆ ಪೂರ್ವ ಕ್ಷಣದಲ್ಲಿ ಕಾಪುರುಷನಂತೆ ಯುದ್ಧದಿಂದ ವಿಮುಖನಾಗಿ ಪಲಾಯನವಾಗಿ ಓಡಿಹೋಗಲಿಲ್ಲವೆ ” ಆವ ಹೃದಯವು ಆವಾಗ ಆವದರಿಂದ ಹೇಗೆ ಏನಾಗುವುದೋ ಅದನ್ನು ನಿರ್ಣಯಿಸುವುದು ಕಷ್ಟ. ನ್ಯೂಟನನೂ ಗೆಲಿಲಿಯನೂ ಬಹಳ. ಯೋಚಿಸಿ ಬಾಹ್ಯ ಪ್ರಪಂಚದ ನಿಯಮಗಳನ್ನು ಕಂಡು ಹಿಡಿದರು. ಆದರೆ ಮನದ ಜಗತ್ತಿನ ವ್ಯಾಪಾರವನ್ನು ಕಂಡು ಹಿಡಿಗ ನ್ಯೂಟನನೊಬ್ಬನು ಇನ್ನೂ ಹುಟ್ಟಿಲ್ಲ. ಮುಂದೆ ಆ೦ಥವರಾರು ಹುಟ್ಟುವರೋ ಇಲ್ಲವೋ ಅದನ್ನು ಬಲ್ಲವರಾರು?

ಇಂದು ಸಂಜೆಯಲ್ಲಿ ನಡದೆಂದು ಸಣ್ಣ ಕೆಲಸದಿಂದ ಶೋಭನೆಯ ಯೌವನದ ಪ್ರವಾಹವು ಶುದ್ಧವಾಗಿ ಮಾರಿಹೋಯಿತು. ಅವಳು ಎಲ್ಲವನ್ನೂ ಹೊಸದಾದುದಾಗಿ ಕಂಡಳು. ನೀರಲ್ಲಿ ಮುಳುಗಿದ್ದ ಉತ್ತರಕ್ಷಣದಿಂದಲೇ ಶೋಭನೆಯ ಜೀವನ, ಚರಿತ್ರೆಯು ಹೊಸದಾಗಿ ಆರಂಭವಾಯಿತು. ರಮೇಶನನ್ನು ಮೊದಲಿನಂತೆ ಸ್ನೇಹಮಯನಾದ ಗಂಡನೆಂದು ಕಂಡಳು. ಅವರಲ್ಲಿ ಪ್ರಣಯವು ಹೊರ್ತು ಮತ್ತೇನೂ ಕಂಡು ಬರಲಿಲ್ಲ. ಒಂದು ಕ್ಷಣಕಾಲದಲ್ಲಿ ಅವನು ಹೇಗೆ ಬೇರೆ ವಿಧವಾಗಿ ಕಂಡುಬಂದನೋ ಅದನ್ನು ತಾನೇ ಅರಿಯಳು. ಮೆಲ್ಲ ಮೆಲ್ಲನೆ ಅವರು ಮಾತಾಡುವುದಕ್ಕೆ ಪ್ರಾರಂಭಿಸಿದರು.ಮೆಲ್ಲ ಮೆಲ್ಲನೆ ಹೊಸದಾದ ಪ್ರೇಮದ ನುಡಿಗಳಿಂದ ಕ್ಷಮೆಯನ್ನು ಬೇಡಿದಳು. ನಡೆದ ವಿದ್ಯಮಾನಗಳನ್ನು ರಮೇಶಸಿಂಗ ಅನುಪೂರ್ವಿಕವಾಗಿ ಕೇಳಿ ಅವಳ ಹೃದಯವು ಅನುತಾಪದಿಂದ ತುಂಬಿತು. ಆ ಅನುತಾಪವಾದರೋ, ಮನಃಪೂರ್ವಕ ವಾದುದು, ಮಿತ್ರಿತವಾದುದಲ್ಲ; ಆ ಅನುತಾಪದಲ್ಲಿ ಸಂದೇಹವಾಗಲೀ ಅಪನಂಬಿಕೆಯಾಗಲೀ ಕಂಡುಬರಲಿಲ್ಲ. ರಾತ್ರಿ ಹತ್ತು ಫಳಿಗೆಗಳಾದುವು.ಆಗಲೂ ಆ ಒದ್ದೆ ಬಟ್ಟಿಯಲ್ಲಿಯೇ ಇದ್ದರು. ಒದ್ದೆ ಬಟ್ಟೆಯು ಮೈಮೇಲಿದ್ದ ಹಾಗೆ ಒಣಗಿಹೋಗಿದ್ದಿತು. ಶೋಧನೆಯು ಜ್ಞಾಪಿಸಿಕೊಂಡು ರಮೇಶನ ಬಟ್ಟೆಯನ್ನು ಮುಟ್ಟಿನೋಡಿ,'ನನ್ನಿಂದ ತಮಗೆ ಬಹಳ ಕಷ್ಟವಾಯಿತು! ಅದಕ್ಕಿಂ