ಪುಟ:Mysore-University-Encyclopaedia-Vol-1-Part-1.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಳಿಕ ಮೂರು ಮೂರು ಅಕ್ಷರಗಳಿಗೆ ಒಂದೊಂದು ಗಣವಾಗಿ ಪಾದವನ್ನು ವಿಭಜಿಸಿದರೆ ಹೀಗಾಗುತ್ತದೆ: ಚ‰ಲ‰ದೊŠಳ್ | ದುŠಯೊರ್Šೀz‰sÀ | ನಂŠ ನŠನ್ನಿ‰ | ಯೊ‰ಳಿ‰£‰À | ತ‰£‰ÀಯಂŠ | ಗಂŠಡಿ‰ನೊŠಳ್ | ಭೀŠಮ‰ಸೇŠ | ನಂŠ. ಮೇಲಿನ ಜ್ಞಾಪಕಪದ್ಯಗಳ ಅಥವಾ ಸೂತ್ರದ ನೆರವಿನಿಂದ ಪರಿಶೀಲಿಸಿದಾಗ ಇಲ್ಲಿರುವ ಅಕ್ಷರ (ವರ್ಣ) ಗಣಗಳು ಸ-ತ-ತ-ನ-ಸ-ರ-ರ-ಗ ಎಂಬುದಾಗಿ ತಿಳಿಯುತ್ತದೆ. ಇಂಥ ವಿನ್ಯಾಸವಿರುವ ವೃತ್ತಭೇದ ಮಹಾಸ್ರಗ್ಧರಾ ಎಂಬ ಹೆಸರಿನಿಂದ ಛಂದೋಗ್ರಂಥಗಳಲ್ಲಿ ನಿರ್ದೇಶಿತವಾಗಿರುತ್ತದೆ. (ಒಮ್ಮೊಮ್ಮೆ ಒಂದೇ ವೃತ್ತ ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧವಾಗಿರುವುದೂ ಉಂಟು). ಸೂತ್ರಬದ್ಧವಾದ ವಾಕ್ಯಗಳಿಂದ ವೃತ್ತಗಳ ಹೆಸರುಗಳನ್ನು ನಮ್ಮ ನೆನಪಿನಲ್ಲಿಟ್ಟುಕೊಂಡಿದ್ದರೆ ವೃತ್ತಭೇದವಾವುದೆಂಬುದು ಕೂಡಲೇ ಹೊಳೆಯುತ್ತದೆ. ಉದಾ-ಸತತಂನಂಸಂರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ. ಇದು ಆ ವೃತ್ತವನ್ನು ನಮ್ಮ ನೆನಪಿಗೆ ತರುತ್ತದಲ್ಲದೆ ಅದರ ನಡೆಯನ್ನೂ ತಿಳಿಸುತ್ತದೆ. ಅಕ್ಷರ(ವರ್ಣ) ಗಣ ವಿಭಜನೆಯೆಂಬುದು ಬಹುಸಂಖ್ಯೆಯ ವರ್ಣವೃತ್ತಗಳಲ್ಲಿ ಒಂದೊಂದರ ಪ್ರಸ್ತಾರವನ್ನೂ ಲಕ್ಷಣವನ್ನೂ ಕಂಡುಹಿಡಿದು ಸೂತ್ರೀಕರಿಸುವುದಕ್ಕೆ ಮಾಡಿಕೊಂಡ ಒಂದು ಬಗೆಯ ಕೃತಕಶಾಸ್ತ್ರವ್ಯವಸ್ಥೆ. ಮಾತ್ರಾಗಣ ಮತ್ತು ಅಂಶಗಣಗಳಲ್ಲಿ ಸಾಮಾನ್ಯವಾಗಿ ತೋರುವಂತೆ ಇಲ್ಲಿ ವೃತ್ತಲಯಕ್ಕೂ ಗಣವಿಭಜನೆಗೂ ಆತ್ಮೀಯ ಸಂಬಂಧವೇನೂ ತೋರುವುದಿಲ್ಲ. ಇದಕ್ಕೆ ಮೇಲಿನ ಉದಾಹರಣೆಯನ್ನು ಪರಿಶೀಲಿಸಿದರೆ ಸಾಕು. ಕೆಲವು ಬಾರಿ ಮಾತ್ರಾಗಣದ ಧಾಟಿ ಎದ್ದು ಕಾಣುವ ಕೆಲವು ವರ್ಣವೃತ್ತಗಳಲ್ಲಿ ಅಕ್ಷರ (ವರ್ಣ) ಗಣ ವಿಭಜನೆಯೆಂಬುದು ತೀರ ಕೃತಕವಾಗಿ ತೋರುತ್ತದೆ (ಉದತರ ಳ, ಮಲ್ಲಿಕಮಾಲೆ ಇತ್ಯಾದಿ.) ಹಾಗೆಯೇ ಆದಿಯ ಅಲ್ಪವ್ಯತ್ಯಾಸದ ಹೊರತು ಒಂದೇ ವಿಧವಾದ ಗುರುಲಘುವಿನ್ಯಾಸವಿರುವ ಕೆಲವು ವರ್ಣವೃತ್ತಗಳು ಅಕ್ಷರ(ವರ್ಣ)ಗಣಗಳಿಂದ ವಿಭಜಿತವಾದಾಗ ಒಂದಕ್ಕೊಂದಕ್ಕೆ ಎಷ್ಟೋ ಅಂತರವಿರುವಂತೆ ಭಾಸವಾಗುತ್ತದೆ. ಅಂದರೆ ಉತ್ಪಲಮಾಲೆಯ ಮೊದಲ ಗುರುವನ್ನು ಒಡೆದು ಎರಡು ಲಘುಗಳಾಗಿ ಮಾಡಿದರೆ ಅದೇ ವೃತ್ತ ಚಂಪಕಮಾಲೆಯಾಗುತ್ತದೆ. ಸ್ರಗ್ಧರೆ ಮಹಾಸ್ರಗ್ಧರೆ, ಶಾರ್ದೂಲವಿಕ್ರೀಡಿತ ಮತ್ತೇಭವಿಕ್ರೀಡಿತ ವೃತ್ತಗಳ ಮಧ್ಯದ ವ್ಯತ್ಯಾಸವೂ ಇಷ್ಟೆ. ಆದ್ದರಿಂದ ಅಕ್ಷರಗಣವೆಂಬುದು ವರ್ಣ ವೃತ್ತದ ಪ್ರಸ್ತಾರಕ್ಕಾಗಿಯೂ ವೃತ್ತಭೇದದ ಪರಿಜ್ಞಾನಕ್ಕಾಗಿಯೂ ಮಾಡಿಕೊಂಡ ಒಂದು ಹೊರಗಿನ ವ್ಯವಸ್ಥೆ ಮಾತ್ರ ಎಂಬುದನ್ನು ನೆನಪಿನಲ್ಲಿಡಬೇಕು. (ಟಿ.ವಿ.ವಿ.) ಅಕ್ಷರತೆ : ಅಕ್ಷರಜ್ಞಾನವನ್ನು ಹೊಂದಿರುವುದು, ಸಾಕ್ಷರತೆ (ಲಿಟರಸಿ) ಎಂದರ್ಥ. ಜ್ಞಾನಾರ್ಜನೆಯ ಸಾಧನಗಳಲ್ಲಿ ಅಕ್ಷರತೆ ಬಹಳ ಮುಖ್ಯವಾದುದು. ಮುಂದುವರಿದ ರಾಷ್ಟ್ರಗಳಲ್ಲೆಲ್ಲ ಅಕ್ಷರತೆ ಹೆಚ್ಚಾಗಿರುತ್ತದೆ. ಹಿಂದುಳಿದ ರಾಷ್ಟ್ರಗಳಲ್ಲಿ ನಿರಕ್ಷರತೆ (ಇಲ್ಲಿಟರಸಿ) ಹೆಚ್ಚಾಗಿರುತ್ತದೆ. ಅಕ್ಷರತೆಯ ಗಣತಿಗಾಗಿ 15 ವರ್ಷಕ್ಕೆ ಮೇಲ್ಪಟ್ಟವರನ್ನು ವಯಸ್ಕರೆಂದು ಪರಿಗಣಿಸಲಾಗಿದೆ. ಪ್ರಪಂಚದಲ್ಲಿ ಶೇ.44 ನಿರಕ್ಷರಸ್ಥರಿದ್ದಾರೆ. ಇವರಲ್ಲಿ ಹೆಂಗಸರು ಹೆಚ್ಚು. ಅಮೆರಿಕ ಶೇ.99, ಯುಕೆ ಶೇ.99, ಬ್ರೆಜಿಲ್ ಶೇ.85, ಚೀನ ಶೇ.84, ಕುವೈತ್ ಶೇ.83, ಜಪಾನ್ ಮುಂತಾದ ದೇಶಗಳಲ್ಲಿ ಶೇ.60 ಕ್ಕಿಂತ ಹೆಚ್ಚು ಜನ ಅಕ್ಷರಸ್ಥರಿದ್ದಾರೆ (ಲಿಟರೇಟ್ಸ್). ಭಾರತದಲ್ಲಿ (1907) 57, ಅಂಗೋಲ, ಸೊಮಾಲಿಯ ಶೇ.24, ನೈಜೀರಿಯ ಶೇ.16 ಅಕ್ಷರತೆ ಶೇ.24.4 ಇವರ ಸಂಖ್ಯೆ 1951ರಲ್ಲಿ 16.6, 1931ರಲ್ಲಿ ಶೇ.10.5, 1907ರಲ್ಲಿ ಶೇ.7 ಆಗಿತ್ತು. ಸಾಮಾನ್ಯವಾಗಿ ಉಚಿತವಾದ ಮತ್ತು ಕಡ್ಡಾಯವಾದ ಪ್ರಾಥಮಿಕ ಶಿಕ್ಷಣ ಜಾರಿಯಲ್ಲಿರುವ ರಾಷ್ಟ್ರಗಳಲ್ಲಿ ಸಾಕ್ಷರತೆಯ ಮಟ್ಟ ಹೆಚ್ಚಾಗಿರುತ್ತದೆ. ಆಯಾ ದೇಶದ ಸ್ಥಿತಿಗತಿಗಳಿಗನುಗುಣವಾಗಿ ಸಾಕ್ಷರತೆಯ ಮಟ್ಟ ವ್ಯತ್ಯಾಸವಾಗುತ್ತದೆ. ಯುನೆಸ್ಕೊ ಸಂಸ್ಥೆ ಏರ್ಪಡಿಸಿದ್ದ ಸಮಿತಿಯೊಂದು ಇದರ ಬಗ್ಗೆ ಪರಿಶೀಲನೆ ನಡೆಸಿ ಓದಿ ವಿಷಯವನ್ನು ಗ್ರಹಿಸಿಕೊಳ್ಳುವುದರ ಜೊತೆಗೆ ನಿತ್ಯಜೀವನಕ್ಕೆ ಸಂಬಂಧಪಟ್ಟ, ವಿಷಯವನ್ನು ಸರಳವಾದ ಶೈಲಿಯಲ್ಲಿ ಬರೆಯುವ ಶಕ್ತಿಯನ್ನು ಮಾತ್ರ ಪಡೆದಿದ್ದು, ಬರೆಹ ತಿಳಿಯದವನ್ನು ಅರೆಅಕ್ಷರಸ್ಥನೆಂದೂ ವಿವರಿಸಿದೆ. ಮುಂದುವರಿಯುತ್ತಿರುವ ದೇಶಗಳೆಲ್ಲ ತಮ್ಮ ದೇಶದ ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿವೆ. ಸಾಕ್ಷರತೆ ಕಡಿಮೆ ಇರುವ ದೇಶಗಳಲ್ಲೆಲ್ಲ ವಯಸ್ಕರ ಶಿಕ್ಷಣಸಂಸ್ಥೆಗಳು ಅಕ್ಷರಪ್ರಚಾರಕ್ಕೆ ಹೆಚ್ಚು ಗಮನಕೊಡುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಶೇ.66.64 ಅಕ್ಷರಸ್ಥರಿದ್ದಾರೆ. ಗಂಡಸರಲ್ಲಿ ಶೇ.76.10, ಹೆಂಗಸರಲ್ಲಿ ಶೇ.56.87 ಅಕ್ಷರಸ್ಥರು. ಹಳ್ಳಿಗಳಲ್ಲಿ ಸಾಕ್ಷರತೆ ಶೇ.19.9, ಪಟ್ಟಣಗಳಲ್ಲಿ ಶೇ.44.3. ಸಾಕ್ಷರತೆಯ ಮಟ್ಟ ದೆಹಲಿಯಲ್ಲಿ ಶೇ.81.67 ಕೇರಳದಲ್ಲಿ ಶೇ.90.86 ತಮಿಳುನಾಡಿನಲ್ಲಿ ಶೇ.30.2. ಬಿಹಾರ, ರಾಜಸ್ತಾನ, ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ ಸಾಕ್ಷರತೆ ಬಹಳ ಕಡಿಮೆ. ಕರ್ನಾಟಕ ರಾಜ್ಯದಲ್ಲಿ ಸಾಕ್ಷರತೆಯನ್ನು ಪ್ರಸಾರ ಮಾಡುವ ಕೆಲಸ ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗಲೇ (1912) ಪ್ರಾರಂಭವಾಯಿತು. ಕಾರಣಾಂತರಗಳಿಂದ ನಿಂತಿದ್ದ ಆ ಕಾರ್ಯವನ್ನು 1941ರಿಂದ ಈಚೆಗೆ ಸಂಸ್ಥಾನದ ವಯಸ್ಕರ ಶಿಕ್ಷಣಸಮಿತಿ ಕೈಗೊಂಡಿದೆ. ಅದು ಸಾಕ್ಷರತೆಯ ಮಟ್ಟವನ್ನು ಈ ನಿರ್ಣಯಗಳಿಂದ ಸೂಚಿಸಿದೆ. ವೃತ್ತಪತ್ರಿಕೆಗಳಲ್ಲಿ ಬರುವ ಲೇಖನ, ವರ್ತಮಾನ, ಜಾಹೀರಾತು ಮೊದಲಾದವು ಗಳನ್ನು ಓದಿ ಅರ್ಥಮಾಡಿಕೊಳ್ಳುವುದು. ಸುಲಭ ಲೆಕ್ಕಾಚಾರವನ್ನೂ 1-100ರವರೆಗಿನ ಅಂಕಿಗಳನ್ನೂ ತಿಳಿದಿರುವುದು. ಬಂಧುವಿಗೆ ಒಂದು ಕಾಗದವನ್ನು ಬರೆಯುವ ಶಕ್ತಿ, ಬಂದ ಉತ್ತರವನ್ನು ಓದಿ ಅರ್ಥಮಾಡಿಕೊಳ್ಳುವ ಶಕ್ತಿ ಪಡೆದಿರುವುದು. ಈ ಮಟ್ಟವನ್ನು ಸಾಧಿಸಲು ನಿರ್ದಿಷ್ಟ ಪಠ್ಯಪುಸ್ತಕಗಳ ಸಹಾಯದಿಂದ ಕೇವಲ 150 ಗಂಟೆಗಳಲ್ಲಿ (5-6 ತಿಂಗಳು) ವಯಸ್ಕರಿಗೆ ಓದು ಬರೆಹ ಕಲಿಸುವ ಯೋಜನೆಯನ್ನು ಸಮಿತಿ ಆಚರಣೆಗೆ ತಂದಿದೆ. ಬೇಗ ಕಲಿತ ಅಕ್ಷರ ಮರೆತು, ನಿರಕ್ಷರತೆಗೆ ಪುನಃ ಜಾರದಿರಲೆಂದು ಹೊಸದಾಗಿ ಅಕ್ಷರಕಲಿತ ವಯಸ್ಕರಿಗಾಗಿಯೇ ವಿಶೇಷ ರೀತಿಯಲ್ಲಿ ರಚಿಸಿದ ಬೆಳಕು ವಾರಪತ್ರಿಕೆಯನ್ನೂ ಮೂರು ಹಂತಗಳ ಓದುಪುಸ್ತಕಗಳನ್ನೂ ಕಿರುಹೊತ್ತಗೆಗಳ ಮಾಲೆಯನ್ನೂ ಸಮಿತಿ ಪ್ರಕಟಿಸುತ್ತಿದೆ (ನೋಡಿ- ವಯಸ್ಕರ-ಶಿಕ್ಷಣ). (ಕೆ.ಎಸ್.ಎಂ.) ಅಕ್ಷರಲಿಪಿ ಚರಿತ್ರೆ : ಚಿಹ್ನೆಗಳ ಮೂಲಕ ಅಭಿಪ್ರಾಯ ಅಥವಾ ಶಬ್ದವನ್ನು ಸೂಚಿಸುವ ಸಾಧನವೇ ಲಿಪಿ. ಲಿಪಿಗಳಲ್ಲಿ ಅನೇಕ ವಿಧಗಳಿವೆ. ಇವುಗಳಲ್ಲಿ ಅಕ್ಷರ ಮಾಲಾಲಿಪಿ (ಆಲ್ಫಬೆಟಿಕ್‍ರೈಟಿಂಗ್) ಬಹಳ ಮುಂದುವರಿದುದು. ಇದರಲ್ಲಿ ಪ್ರತಿಯೊಂದು ಚಿಹ್ನೆಗೂ ಅಕ್ಷರಕ್ಕೂ ಒಂದು ಸ್ಪಷ್ಟವಾದ, ಸಾಮಾನ್ಯವಾಗಿ ಎಲ್ಲರಿಂದಲೂ ಮಾನ್ಯ ಪಡೆದ, ಒಂದು ಅಥವಾ ಅನೇಕ ಶಬ್ದಗಳ ಮೌಲ್ಯ ಇರುತ್ತದೆ. ಬರೆಯುವ ಚಿಹ್ನೆಗೂ ಉಚ್ಚರಿಸುವ ಶಬ್ದಕ್ಕೂ ಯಾವುದೇ ವಿಧವಾದ ಸಂಬಂಧವೂ ಇರುವುದಿಲ್ಲವೆಂದು ಹೇಳಬಹುದು. ಅಂದರೆ ಂ ಎಂಬ ಅಕ್ಷರವನ್ನು ಬರೆಯುವ ವಿಧಾನಕ್ಕೂ ಅದೇ ಅಕ್ಷರವನ್ನು ಉಚ್ಚರಿಸುವ ಶಬ್ದಕ್ಕೂ ಯಾವ ವಿಧವಾದ ಸಂಬಂಧವನ್ನು ಕಲ್ಪಿಸುವುದು ಕಷ್ಟ. ಆದ್ದರಿಂದ ಅಕ್ಷರಲಿಪಿ ಉಚ್ಚರಿತಶಬ್ದದ ಒಂದು ಸಂಕೇತ. ಆದರೆ ಚಿತ್ರಲಿಪಿ, ಭಾವಲಿಪಿ ಮುಂತಾದುವು ಅಕ್ಷರಲಿಪಿಗಳಲ್ಲ. ಅವುಗಳನ್ನು ಅನಕ್ಷರಲಿಪಿಗಳು (ನಾನ್‍ಆಲ್ಫಬೆಟಿಕ್) ಎಂದು ಕರೆಯಬಹುದು. ಏಕೆಂದರೆ ಅವುಗಳಲ್ಲಿ ಬರೆಯುವ ಚಿಹ್ನೆಗೂ ಉಚ್ಚರಿಸುವ ಶಬ್ದಕ್ಕೂ ನಿಕಟ ಸಂಬಂಧವಿರುತ್ತದೆ. ಅನಕ್ಷರಲಿಪಿಯ ಬೆಳೆವಣಿಗೆ ಮತ್ತು ವಿಕಾಸದಿಂದ ಅಕ್ಷರಮಾಲಾಲಿಪಿ ಉಗಮವಾಯಿತು ಎಂಬ ವಾದವನ್ನು ಎಲ್ಲರೂ ಒಪ್ಪುತ್ತಾರೆ. ಮಾನವ ತನ್ನ ನಾಗರಿಕತೆಯ ಪ್ರಾರಂಭ ದೆಶೆಯಲ್ಲಿ, ಚಿತ್ರಲಿಪಿ, ಭಾವಲಿಪಿ ಮುಂತಾದ ಅನಕ್ಷರಲಿಪಿಗಳನ್ನು ಉಪಯೋಗಿಸಿ, ಅವುಗಳಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ, ಸಮರ್ಪಕವಾದ ಅಕ್ಷರಲಿಪಿಗೆ ತಳಹದಿಯನ್ನು ಹಾಕಿದ. ಚರಿತ್ರಪೂರ್ವಕಾಲದ, ಶಿಲಾಯುಗದ ಮಾನವ ಗುಹೆಗಳಲ್ಲಿ ಚಿತ್ರಗಳನ್ನು ಗೀಚುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೂ ಅವು ಬರೆವಣಿಗೆಯ ದೃಷ್ಟಿಯಿಂದ ನಿರ್ಮಾಣವಾದವೆಂದು ಹೇಳಲಾಗುವುದಿಲ್ಲ. ಅನಕ್ಷರಲಿಪಿಯ ಬೆಳೆವಣಿಗೆಯಲ್ಲಿ ಮುಖ್ಯವಾದ ಮೂರು ಮೂಲ ಅವಸ್ಥೆಗಳನ್ನು ನಾವು ಕಾಣಬಹುದು. ಮೊದಲನೆಯದು ಬೀಜರೂಪವಾದ ಬರೆವಣಿಗೆ (ಎಂಬ್ರಿ ಯೋರೈಟಿಂಗ್). ಇದರಲ್ಲಿ ಅನೇಕ ವಿಧವಾದ ಜ್ಯಾಮಿತಿಯ ಸಂಕೇತಗಳು ಚಿಹ್ನೆಗಳು ವೃತ್ತಗಳು ರೇಖೆಗಳು ಮತ್ತು ಇತರ ಗುರುತುಗಳನ್ನು ಕಾಣುತ್ತೇವೆ. ಎರಡನೆಯದು ಬಿಂಬರೂಪ ಮತ್ತು ತಾಂತ್ರಿಕಮತಗಳಲ್ಲಿ ಉಪಯೋಗಿಸುವ ರೀತಿಯ ಸೂಚ್ಯಾತ್ಮಕ ಚಿಹ್ನೆಗಳು (ಐಕನಾಗ್ರಫ಼ಿ ಮತ್ತು ಸಿಂಪತೆಟಿಕ್ ಮ್ಯಾಜಿಕ್). ಮೂರನೆಯದು ಸ್ಮರಣೆಗೆ ಸಹಾಯಕವಾದ (ನೆಮೋನಿಕ್) ಸಾಧನಗಳು. ಉದಾಹರಣೆಗೆ ಪೆರು ಸಂಸ್ಕøತಿಯಲ್ಲಿ ಬಣ್ಣದ ದಾರಗಳಿಂದ ಒಂದು ಅಥವಾ ಅನೇಕ ಗಂಟುಗಳನ್ನು ಹಾಕುವುದು ಬಹು ಸಾಮಾನ್ಯವಾದ ಪದ್ಧತಿಯಾಗಿತ್ತು. ಈ ಗಂಟುಗಳು ಲೆಕ್ಕಕ್ಕೆ ಉಪಯೋಗಿಸಲ್ಪಡುತ್ತಿದ್ದುವು. ಅದೇ ರೀತಿಯಲ್ಲಿ ಚಾಕುವಿನಿಂದ ಮರದ ಕೊಂಬೆಗಳ ಮೇಲೆ ಗೀರುಗಳನ್ನು ಮಾಡಿ ಈ ಗೀರುಗಳ ಅರ್ಥವನ್ನು ಸುದ್ದಿಗಾರರಿಗೆ ತಿಳಿಸಿದರೆ, ಸುದ್ದಿಗಾರ ಅದನ್ನು ಮತ್ತೊಂದು ದೇಶದ ರಾಜನಿಗೆ ವಿವರಿಸುತ್ತಿದ್ದ ಪದ್ಧತಿಯೂ ಇದ್ದಿತೆಂದು ಗೊತ್ತಾಗುತ್ತದೆ. ಅಕ್ಷರಲಿಪಿಯ ಬೆಳೆವಣಿಗೆಯಲ್ಲಿ ಚಿತ್ರಲಿಪಿ (ಪಿಕ್ಟೊಗ್ರಫಿಕ್ ಸ್ಕ್ರಿಪ್ಟ್), ಭಾವಲಿಪಿ (ಐಡಿಯೋಗ್ರಫಿಕ್ ಸ್ಕ್ರಿಪ್ಟ್), ಪದಸೂಚಕಲಿಪಿ (ಫೋನಟಿಕ್ ಸ್ಕ್ರಿಪ್ಟ್) ಏಕಶಬ್ದಾತ್ಮಕ ವರ್ಣಲಿಪಿಗಳು (ಸಿಲಬರಿ) ಕ್ರಮವಾದ ಹಂತಗಳು. ಚಿತ್ರಲಿಪಿಯೇ ಬರೆವಣಿಗೆಯ ಅತ್ಯಂತ ಪ್ರಾಚೀನವಾದ ಅವಸ್ಥೆ. ಚಿತ್ರಗಳಲ್ಲಿ ಉಚ್ಚಾರಣ ಧ್ವನಿಗಳಿಲ್ಲ. ಬರೆಯಲ್ಪಟ್ಟ ವಸ್ತುವಿನ ಅಭಿಪ್ರಾಯ ಬರೆದ ಚಿತ್ರದ ಮೂಲಕ ಮಾತ್ರ ಉಂಟಾಗುತ್ತದೆ. ಒಂದು ಸಣ್ಣ ವೃತ್ತಾಕಾರ ಸೂರ್ಯನನ್ನೂ, ಆನೆಯ ಚಿತ್ರ ಆನೆಯನ್ನೂ ತೋರಿಸುವುದೇ ಚಿತ್ರಲಿಪಿಯ ಮೂಲೋದ್ದೇಶ. ಚಿತ್ರಲಿಪಿ ಪ್ರಾಚೀನಪ್ರಪಂಚದ ಈಜಿಪ್ಟ್, ಮೆಸಪೊಟೇಮಿಯ, ಫೋ಼ನೀಷಿಯ, ಕ್ರೀಟ್, ಸ್ಪೇನ್ ಮುಂತಾದ ಅನೇಕ ಕಡೆಗಳಲ್ಲಿ ಉಪಯೋಗದಲ್ಲಿತ್ತು. ಭಾವಲಿಪಿ ಚಿತ್ರಲಿಪಿಗಿಂತ ಹೆಚ್ಚು ಮುಂದುವರಿದುದು. ಇದರಲ್ಲಿನ ಚಿತ್ರಗಳು ಅವುಗಳ ಹಿಂದೆ ಅಡಗಿರುವ ಭಾವವನ್ನು ವ್ಯಕ್ತಪಡಿಸುತ್ತವೆ. ಒಂದು ಸಣ್ಣ ವೃತ್ತ ಚಿತ್ರಲಿಪಿಯಲ್ಲಿ ಸೂರ್ಯನನ್ನು ತಿಳಿಸಿದರೆ, ಭಾವಲಿಪಿಯಲ್ಲಿ ಸೂರ್ಯನ ಶಾಖ, ಬಿಸಿಲು, ಹಗಲು