ಕಿಲಾಡಿ ಜೋಡಿ - ಕೃಷ್ಣಸ್ವಾಮಿ ರಾಮಸ್ವಾಮಿ ಕೆಲಸವನ್ನು ನಾ ಹೇಳುವೆ

ವಿಕಿಸೋರ್ಸ್ದಿಂದ

ಚಿತ್ರ: ಕಿಲಾಡಿ ಜೋಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ


ಕೃಷ್ಣಸ್ವಾಮಿ........yes madam

ರಾಮಸ್ವಾಮಿ.....ಏನ್ madam
you must obey me....follow me.....
ಕೃಷ್ಣಸ್ವಾಮಿ.....yes madam
ರಾಮಸ್ವಾಮಿ.....ಏನ್ madam
ಕೆಲಸವೇನು ನಾ ಹೇಳುವೆ
ಎಚ್ಚರ ತಪ್ಪಿ ನೀವ್ ನಡೆದಾಗ ಸಂಬಳವಿಲ್ಲ ಉಂಬಳವಿಲ್ಲ

ಲಾಯದಲ್ಲೆ ಬಿದ್ದು ಸಾಯಬೇಕು......
ಕೃಷ್ಣಸ್ವಾಮಿ.....ಯಾ...ಯಾ...
ರಾಮಸ್ವಾಮಿ.....ಹೋ...ಹೋ
ಕೆಲಸವನ್ನೂ ಮಾಡೋಣವೇ.....(೨)

ಬೆಳ್ಳಿ ಮಿಂಚು ಹೊಳೆಯೋ ಹಾಗೆ ಮಾಲೀಶ್ ಮಾಡಬೇಕು
ಒಳ್ಳೆ ಹುರುಳಿ ನೋಡಿ ತಂದು ಬೈಸಿ ತಿನ್ಸಬೇಕು......(ಬೆಳ್ಳಿ..)

ಹೇಳಿದಂತೆ ಮಾಡಿ ಆಗ ನೀವು ನೋಡಿ ....
ದುಡಿಯೋತನಕ ಕೆಲಸ ಖಾಯಂ pension ಕೊಡಲ್ಲ......
ರಮ್ ಪಮ್ ಪಮ್ ಪಮ್ ಪಮ್.......ರಮ್ ಪಮ್ ಪಮ್.....
ಮುಂಜಾವಿಂದ ಸಂಜೆವರೆಗು ಮಾಲೀಷ್ ಮಾಡ್ತೀವಿ
ಒಳ್ಳೆ ಹುರುಳಿ ನೋಡಿ ತಂದು ಬೈಸಿ ಬಿಸಾಕ್ತೀವಿ....
advance ಕೇಳೊದಿಲ್ಲ bonus ಕೇಳೋದಿಲ್ಲ

ಕೆಲಸ ಕಾಯಂ ಮಾಡಿ ಸಾಕು ಬಡ್ತಿ ಬೇಕಿಲ್ಲ................{ಪಲ್ಲವಿ}

ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...
ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು......(ಅಲ್ಲಿ...)
ಬಾಲ ನೀವಬೇಕು...ಲಾಳ ಹೊಡೆಯಬೇಕು....
ರಾತ್ರಿ ಹಗಲು ಮೈಯ್ಯ ಮುರಿದು ಕೆಲಸ ಮಾಡಬೇಕು.....
ರಮ್ ಪಮ್ ಪಮ್ ಪಮ್ .....ರಮ್ ಪಮ್ ಪಮ್.....

ಲದ್ದಿ ಏನು ಗಿದ್ದಿ ಏನು ಬಾಚಿ ತಳ್ತೀವಿ
ಚಿಗಟ ಗಿಗಟ ಏನೇ ಇದ್ರೂ ಬಡದು ಬಿಸಾಕ್ತೀವಿ....
ಮಾಡೋ ಕೆಲ್ಸ ನೋಡಿ ಆಮೇಲ್ ಮಾತನಾಡಿ
ನೀವೇ ಮೆಚ್ಚುವಂತ ಜೋಡಿ...ಕಿಲಾಡಿ ಜೋಡಿ........{ಪಲ್ಲವಿ}

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ