ಪುಟ:ಬೃಹತ್ಕಥಾ ಮಂಜರಿ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹತ್ಯ ಥಾ ನ ೦ ಜರಿ , ೫೭೧ ಬತ್ತದೆ, ಜಲಪೂರಿತಂಗಳಾಗಿ ಶೋಭಿಸುತ್ತಿರ್ದು. ಹೀಗಿರುವ ರಾಜ್ಯಮಂ ಪಾಲಿಸು ತಿರುವ ಕಾಲದೊಳು ಸರ್ವಾ೦ಗಸುಂದರಿಯಾಗಿಯೂ ಸಕ್ಟೋತ್ತಮ ಗುಣಾಭರಣ ಯಾಗಿಯೂ ಇದ್ದ ಜ್ಯೋತಿಗ್ನತಿಯೆಂಬ ಕಾಂತಾಮಣಿಯಂ ಪಾಣಿಗ್ರಹಣವಂ ಮಾಡಿಕೊಂಡು ಅವಳೊಂದಿಗೆ ಸಕಲ ಭೋಗಂಗಗಳು ಅನುಭವಿಸುತ್ತಾ ಕುಪ್ರರ ತಿಯುಳ್ಳವನಾಗಿ ಸುಖದಿಂದಿರುತ್ತಿರುವಲ್ಲಿ, ಆಕೆಯ ಗರ್ಭಾಂಬುಧಿಯೊಳು ಮಣ ವರ ಚಿತ್ರವನ್ಮರೆಂಬಿರೂರು ಸುಕುಮಾರರುದಯಿಸಿದರು. ಈ ಕುಮಾರರ ಪೂರಕ ರ್ಮ ಬಲದಿಂದ ತಂದೆಯಾದ ಚಂದ್ರಧ್ವಜ ಮಹಾರಾಯನಿಗೆ ಸಕಲ ಶಕ್ತಿಗಳೂ ಆಂ ತರ್ಧಾನಂಗಳಾಗುತ್ತಾ ಬಂದವು, ಈ ಸಮಯವಂತಿಳಿದ ಶತ್ರುರಾಯರುಂ ಸೈನ್ಯ ಸವ ವೃತರಾಗಿ ಈ ರಾಜನಂ ಜಯಿಸಬೇಕೆಂದು ಚತುರಂಗ ಸಮಾವೃತರಾಗಿ ಬಂದು ಪಟ್ಟ ಣವಂ ಮುತ್ತಿಕೊಳ್ಳಲು, ರಾಯನಿಗೆ ದುದ್ಯೋಗಪ್ರಾಬಲ್ಯಾವಸ್ಥೆಯಿಂದ ಬುದ್ಧಿಯು ನಾಶವಾಗೆ ಸಕಲ ಸಹಾಯ ಸಂಪತ್ತಿಯ ತಲೆದೋರದೆ ಹೋಗಲು, ಶತ್ರುಗಳಂ ಜಯಿಸುವ ಮಹಾ ಪ್ರಯತ್ನ ಮಂ ಮಾಡದೆ ಪಲಾಯನಸಕ್ಕಮಂ ಮಾಡುವ ಬುದ್ದಿಯು ನೆಲಗೊಳ್ಳಲು, ತನ್ನ ಸಮಸ್ತ ಶಸ್ತ್ರ, ಪದಾರ್ಥಂಗಳಂ ನೆಲದೊಳು ಭದ್ರಪಡಿಸಿ, ಜೊತೆಯೊಳು ಬೇಕಾದ ಅವಮೌಲ್ಯ ರತ್ನಾಭರಣ, ಧನಕನಕಾದಿಗಳಂ ಕೊಂಡು, ಪತ್ನಿ ಪುತ್ರ ಸಮನ್ವಿತನಾಗಿ ಜೋರವಗ೯ದೊಳು ಹೊರಟು, ಸಾಮಾ

  • ಲಕ್ಷ್ಮಿಗೆ ಮೊಗತಿರುಗಿ ಕಾಡುಪಾಲಾದಂ.

ಹಾಗೆ ಅರಣ್ಯ ಮಾರ್ಗವಾಗಿ ಬಹುದೂರಂ ಬಂದು ನಮ್ಮ ಸಾಗರವೆಂಬ ಒಂದ ಗ್ರಹಾರಮಂ ಸಾರಿ ಬ್ರಾಹ್ಮಣ ವೇಷಧಾರಿಯಾಗಿ ತನ್ನ ಹೆಸರು ಗಿರೀಜೇಶನೆಂತಲೂ, ತನ್ನ ಹೆಂಡತಿಗೆ ಜಾನಕೀ ಎಂತಲೂ, ನಾಗಕುಮಾರ, ಶ್ರೀಪತಿಗಳೆಂದು ಕುಮಾರ ರಿಗೂ ಪೆಸರುಗಳಂ ಕಲ್ಪಿಸಿಕೊಂಡು, ಬ್ರಾಹ್ಮಣ ವೃತ್ತಿಯಂ ಹೊರತರುತ್ತಾ, ತನ್ನ ಮಕ್ಕಳಂ ಪೋಷಿಸುತ್ತಾ ತಕ್ಕ ಕೆಲಸಗಾರರು ನೇಮಿಸಿಕೊಂಡು ಕಾಲಮಂ ಕಳೆಯುತಿರ್ದ೦. ಹೀಗೆ ಹದಿನಾರು ಸಂವತ್ಸರಂಗಳು ಕಳೆಯಲು, ತಾಂ ತಂದಿರ್ದ ಪದಾರ್ಥ೦ ಮುಗಿದು ಹೋಗುತ್ತಾ ಬರಲು, ಒಂದಾನೊಂದು ರಾತ್ರಿಯೊಳು ತನ್ನ ಕಾಂತೆಯೊಡನೆ ಸೇರಿ, ರತಿಕ್ರೀಡಾ ಸಮಾಲೋಲನಾಗಿರುವ ಕಾಲದೊಳು ಕಾಂತೆ ಯಂ ಕುರಿತು, ಎಲೈ ಪ್ರಾಣಕಂತೆಯೇ! ನನ್ನ ನೀವರಿಗೂ ಒಂದೇ ಘನವಾದ ಚಿಂತೆಯು ಆವರಿಸಿಕೊಂಡಿರ್ದುದು, ಈಗಲಾದರೋ ಅನೇಕ ಮುಖಂಗಳೊಳು ವಿಧ ವಿಧವಾದ ಯೋಜನೆಗಳು ಆವರಿಸಿ ಮುಂದಂ ಹಾಯಲೀಸದು, ಪುತ್ರರಾದರೋ ಪ್ರಾಪ್ತ ವಯಸ್ಕರಾಗಿರುತ್ತಾರೆ, ತಂದಿರ್ದ ದ್ರವ್ಯಮಂ ಪ್ರಯವಾಡಿ, ವಿದ್ಯಾಭ್ಯಾ ಸಮಂ ಮಾಡಿ ಈವರೆಗಂ ಪೋಷಿಸಿದೆನು. ಇದೇರೀತಿಯಾಗಿ ಕಾಲಕ್ಕೆ ಪ್ರಮಂ ಮಾಡಲು ದ್ರವೋಪಪತ್ತಿಯಿಲ್ಲದೆ ಇಹುದು. ಈಗಿರುವದನೆಲ್ಲಮಂ ಕಾಸಿ ಕರಗಿಸಿ ಪರೆ ಮರು ನಾಲ್ಕು ಸಂವತ್ಸರಗಳೊಳಗಾಗಿ ಎಲ್ಲವೂ ಮುಗಿದು ಹೋಗುವುದು,