ಪುಟ:ಬೃಹತ್ಕಥಾ ಮಂಜರಿ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ಥಾ ನ ೦ 8 ರಿ, ೨೯೧ ನಂಪೇಳಿದವಳಾಗೆ ಆ ಮಾಂತ್ರಿಕ ಈ ಕೆಲಸಕ್ಕೆ ಒಂದುಸಾವಿರ ವರಹಂಗಳು ಬೇಕು ತಂದುಕೊಟ್ಟರೆ ಆಕೆಯು ಇದ್ದೆಡೆಯೊಳೇ ಮೃತಳಾಗುವಂತೆ ವಿನೆನಲದಕ್ಕೆ ಸಂವ ತಿಸಿ ಅಂತೆಯೆಕೊಂಡೊಯ್ಯು ಕೊಡಲು ಅಮಂತ್ರಜ್ಞನು ವಾರಾಹೀಮಾರಣ ಪ್ರಯೋ ಗಮಂಅಥರ್ವಣಾಗಮರೀತ್ಯಾ ಮಾಡಲು ಮಹದಾಯುರ್ಯೊಗದೊಳು ಹುಟ್ಟಿದ ಆರಾಜಪತ್ನಿ ಯಂ ಏನಂವಾಡಲು ಶಕ್ತಿಸಾಲದ ಸುಮ್ಮನಾದುದು, ಆ ಮಂತ್ರಗಾರನ ಹೇಳಿಕೆಯಂತೆ ಏನೂ ನಡೆಯಲಿಲ್ಲವೆ, ಯಂದು ಚಿಂತಿಸುತ್ತಾ ಒಂದಾತನಂ ಪ್ರಾಸೆ. ಎಲೈ ವೇಶ್ಯಾರತ್ನ ಮೇ ! ನಾಂ ನೀರಂ ಮಂತ್ರಿಸಿ ಕೊಡುವೆನು ಈ ನೀರಿನಿಂದ ಆ ರಾಜ ಪತ್ನಿ ಯಂ ಸ್ನಾನಮಾಡಿಸಿದರೆ, ಆಕೆಯು ಶಿಲಾರೂಪವಾದ ಏಗ್ರಹವಾಗಿ ಹೋಗು ವಳು ಅನಂತರ ಮಾರಾಯನು ನಿನ್ನ ನೈ ಮೋಹಿಸಿ ಯಥಾ ಪ್ರಕಾರವಾಗಿ ನಿನ್ನೊ ಧನುರಾಗಯುಕ್ತನಾಗಿರುವನು ಒಂದೊರೆದು ಒಂದು ಪಾತ್ರೆಯೊಳು; ನೀರು ತುಂಬಿ ಅಭಿಮಂತ್ರಿಸಿ ಕೊಡಲು ಅದಂ ತಂದು ಮನೆಯೊಳು ಭದ್ರಪಡಿಸಿ ತನಗೆ ಸ್ನೇಹಿತಳಾ ಗಿದ್ದ ಆ ರಾಜವಹಿಷಿಯ ಪರಿಚಾರಿಣಿಯಂ, ಕರೆದು ರಹಸ್ಯದೊಳಿದಂ ಆಕೆಯಕ್ಕೆಗೆ ಕೊಟ್ಟು ರಾಜಭಾರೆಗೆ ಸ್ನಾನಮಂ ಮಾಡಿಸೆಂದು ಹೇಳಿ ಪಾರಿತೋಷಕ ದ್ರವ್ಯ ಮತ್ತು ಕಳುಹಿದಳು, ಆ ಪರಿಚಾರಿಣಿಯು ರಾಜಪತ್ನಿಗೆ ಅಭ್ಯಂಗವಂ ಮಾಡಿಸುತ್ತಿ ರುವ ಕಾಲದೊಳು ಈ ಪಾತ್ರೆಯೊಳಗಿನ ನಿರಂ ಮೇಲೆಸುರಿಯಲು ಆ ಕ್ಷಣದೊಳೇ ದಿವ್ಯಸುಂದರವಾದೊಂದು ಶಿಲಾಪ್ರತಿಮೆಯಾದಳು, ಆದಂ ಕೇಳುತಾರಾಯಂ ಪರ ಮಶೋಕಾಕುಲನಾಗಿ ಹೋಗಿನೋಡಿ ಗೋಳಾಡುತ್ತಾ ಆ ಪ್ರತಿಮೆಯಂ ತನ್ನ ಅಂತಃಪುರದೊಳಿಟ್ಟು ಕೊಂಡು ನೋಡಿ ನೋಡಿ ಅಳುತ್ತಾ ಹತ್ತಾರುದಿನವಿರ್ದು ಅನ೦ ತರಮಾ ಪದ್ಮಗಂಧಿನಿಯೆಂಬ ವೇಶ್ಯಾಂಗನೆಯೊಳು ಕಲೆತು ಮುನ್ನಿನಂತೆಯೇ ಸುಖ ಸುತ್ತಾ ಆಕೆಯೊಳು ವಿಶ್ವಾಸಿಯಾಗಿರ್ದನು. ಅತ್ತಲಾ ಚಿತ್ರ ವರಂ ಮುನೀಂದ್ರನಂ ನೋಡಬೇಕೆಂಬ ಲವಲವಿಕೆಯಿಂದಾಶ್ರ ಮಮಂ ಪ್ರವೇಶಿಸಿ ವಿಚಾರಿಸಲು ಆ ಯೋಗೀಂದ್ರಂ ಪರಮ ಪದಮಂ ಹೊಂದಿದನೆಂದು ಕೇಳಿ ನಿನ್ನ ಮಾನಸನಾಗಿ ಅವರ ಶಿಷ್ಯರಾದ ಪ್ರತಿವಿಂದಕನೆಂಬುವನನ್ನೂ ಬಯಸೋ ಮನೆಂಬುವನನ್ನೂ ಕಂಡು ಮಾತಾಡಿಸಲವರಿರ್ವರೂ ತಮ್ಮ ಗುರುನ ಬಳಿ ಇದ್ದ ಪದಾರ್ಥಗಳಿಗಾಗಿ ಕೆಲಸಮಾಡುತ್ತಿದ್ದವರು ಇವನಂ ಕಂಡು ಮಧ್ಯಸ್ಥಗಾರನಂತೆ ಗೊತ್ತು ಮಾಡಿಕೊಂಡು ತಮ್ಮ ತಮ್ಮ ವ್ಯಾಜ್ಯನುಂ ಹೇಳುತಾಂದರು." ಎಲೈ ರಾಜನಂದನನೆ ! ನಮ್ಮ ಗುರು ವರೇಣ್ಯನು ಪರಂಧಾಮವನ್ನೆದು ವಾಗ್ಯ ತಮ್ಮ ಬಳಿಯ ವಸ್ತುಗಳು ಸಮವಾಗಿ ಇರ್ವರೂ ತೆಗೆದುಕೊಳ್ಳಿರೆಂದು ಆಜ್ಞೆ ಯಂಕೊಟ್ಟರು. ಅಂತೆಯೇ ಒರೊಲ್ವರು ಒಂದೊಂದು ತೆಗೆದುಕೊಂಡೆವು ಈ ಪಾದು ಕೆಗಳು ಒಂದೊಂದು ತೆಗೆದುಕೊಂಡರೆ ಯಾರಿಗೂ ಪ್ರಯೋಜನವಿಲ್ಲವು. ಒಬ್ಬನಿ ಗಿದ್ದರೇನೇ ಉಪಯೋಗವು, ತಪ್ಪಿದರೆ ಇದರಿಂದ ಪ್ರಯೋಜನವಿಲ್ಲವು. ಇವುಗಳ ಗುಣಂಗಳೇನೆಂದರೆ,