ಪುಟ:ಬೃಹತ್ಕಥಾ ಮಂಜರಿ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ಮಂಜರಿ , ೨೨೯ ಚಂದ್ರನಂತವರೀರರೂ ಅಭಿವೃದ್ಧಿಯಂ ಹೊಂದುತ್ತಿರುವದಂ ಕಂಡು ಸಂತೋಷಿ ಸುತ್ತಿರ್ದಂ, ಹೀಗಿರುವಲ್ಲಿ ಅವನೆ೦ದಿಗೆ ಪಾಲುವ್ಯಾಪಾರಮಂ ಮಾಡುತ್ತಿರ್ದ ಸೂರ್ಯಾವರ್ತ ಪದ, ವೈಶ್ಯ ವರಂ ದೈವಾಧೀನನಾಗೆ ಆ ವರ್ತಮಾನವಂ ತಿಳಿದು, ವಿಶೇಷವಾದ ತನ್ನ ದ್ರವ್ಯದಲ್ಲಿದ್ದು ದೇನಾಗುವದೋ ಎಂಬ ಭಯ ದಿಂದ ಅವನೆಲ್ಲ ಮು೦ ತರಲು ಯೋಚಿಸಿ ಪುತ್ರರ೦ ಬಿಟ್ಟಿರಲು, ಮನ ಮೊಡಂಬ ಡದೆ ತಾಂ ಬರುವದಕ್ಕೆ ನಾಲ್ಕಾರು ತಿಂಗಳಾಗುವದೆಂದರಿತು, ಸಂಸಾರದೊಂದಿಗೆ ಪ್ರಯಾಣವ೦ಮಾಡಿ, ಸೂರಾವರ್ತ ಮಂ ಸೇರಿದನು ಅಲ್ಲಿ ತನ್ನ ಪಾಲುದಾರನ ಮನೆಯೊಳು ಇಳಿದುಕೊಂಡು ಬರಬೇಕಾಗಿದ್ದ ಬಾಕಿಸಾಕಿಗಳ ಲೆಕ್ಕಗಳಿಂದ ತಿಳಿ ದು ಬರಮಾಡಿಕೊಳ್ಳುತ್ತಾ ವಿಶೇಷ ವರ್ತಕ ನಡೆಯುವ ಸ್ಥಳವಾದ್ದರಿಂದ ವ್ಯಾಪಾ ರವನ್ನು ಮಾಡುತ್ತಾ ಇರುವ ಕಾಲದೊಳು, ತನ್ನ ಪಾಲುದಾರನಾಗಿದ್ದವನ ಹೆಂಡ ತಿಯು ಗಂಡನು ಮೃತನಾಗು ವಾಗ್ಯ ಗರ್ಭಿಣಿಯಾಗಿದ್ದರಿಂದ ಅವಳೂ ಅವಳಿ ಗಂಡುಮಕ್ಕಳಂ ಹತ್ತು ಆ ಕೂಡಲೆ ಮೃತಳಾದಳು. ಆ ಶಿಶುಗಳನ ಈ ವತ್ರ ಕನೆ: ಪಾಲಿಸುತ್ತಾ ವ್ಯಾಪಾರವನ್ನು ಮಾಡುತ್ತಾ ವಿಶೇಷ ಲಾಭ ಪ್ರದವಾದ ಸ್ಥಳವಾದುದರಿ೦ದಲ್ಲಿಯೇ ಬಹು ಕಾಲಂ ವಾಸವಾಗಿರ್ದ೦ ರೂಪದಲ್ಲಿಯ ವರ್ಣದಲ್ಲಿ ಯ, ಧ್ವನಿ ಮು೦ತಾವುಗಳಲ್ಲಿಯೂ ತನ್ನ ಮಕ್ಕಳು ಹೇಗೆ ಒಂದೇ ವಿಧವಾಗಿರುವರೋ, ತಾನು ಸಾಕಿಕೊಂಡವರೀರ್ವರೂ ಹಾಗೆಯೇ ಭೇದವಿಲ್ಲದೆ ಒಂದೇ ವಿಧವಾಗಿದ್ದರಿಂದ ಅವರಿಗೆ ಕುಶಲ ತಂತ್ರರೆಂದು ಇರ್ವರಿಗಂನಾ ಮಂಗಳಂ ಕಲಿ ಸಿ, ಅವರಿರ್ವರೊಳು ಜೈಷ್ಟನಂ ತನ್ನ ಜೈ (ಷ್ಟ ಪುತ್ರನಿಗೂ, ಕನಿಷ್ಕನಂ ಕನಿಷ್ಠ ಪ್ರತ್ರನಿಗೂ, ಸೇವಕರಾಗಿರುವಂತೆ ನಿಶ್ ಸಿ ಅವರವರಂ ಜೆ ತೆಗೊಳಿಸಿ ಅನ್ನೋನ್ಯ ವಾಗಿರುವಂತೆ ನೇಮಿಸಲವರು, ಸ್ವಾಮಿ ನೃತ್ಯಭಾವಂಗ ಘಂ ತಲಿ, ಸರಸ ರಾನುರಾಗಯುಕ್ತರಾಗಿ ಏಕ ದೇಹ ನ್ಯಾಯವಾಗಿ ಸಕಲ ಕಾರಂಗಳಂ ನಡೆಯಿಸಿಕೊಳ್ಳುತ್ತಾ ಇದ್ದರು. - ಹೀಗೆ ನಾಲ್ಕಾರು ಸಂವತ್ಸರಗಳಂ ಕಳೆಯಲಾ ಸತ್ಯ ವಿಜಯನೆಂಬ ವ್ಯಾಪಾ ರಾಗ್ರಣಿಯು, ತಾಂ ತನ್ನ ದೇಶವಂ ಬಿದ್ದು ಬಹುಕಾಲವಾದುದು, ಅಲ್ಲಿ ಸ ವ್ಯಾಪಾರ ಲಾಭಾದಿಗಳಂ ಕಾಗದ ಮುಖಾಂತರವಾಗಿ ನೋಡುವದೇ ಹೊರತು ಪ್ರತ್ಯಕ್ಷವಾಗಿ ನೋಡಲು ಯತ್ನ ಮಿಲ್ಲ ಆ೦ತರ ಮೆಂತಿಹುದೋ ಕಾಣಲರಿಯದು ಇದು ಪರದೇಶವು, ಬಂಧುಮಿತ್ರರು ಯಾರೂ ಇಲ್ಲಿ ಇಲ್ಲ, ಎಷ್ಟು ಕಾಲವಿದ್ದರೂ ಅಲ್ಲಿಗೆ ಹೋಗಿ ಬಾಳಬೇಕಾಗಿದೆ. ಅದರಿಂದ ನನ್ನ ಸಕಲ ಸಾಮಗ್ರಿಗಳಂ ತುಂಬಿಕೊಂಡು ಸ್ವದೇಶಮಂ ಸೇರಿಸುವದೇ ಯುಕ್ತವೆಂದು ನಿಸಿ, ತನ್ನ ಎಲ್ಲಾ ಪದಾರ್ಥಗಳು ಹಡಗಿನಲ್ಲಿ ತುಂಬಿ, ಆ ದಿನದ ಕಾಜ ಕರಾವಸರದಿಂದ ತಾಂ ಹೊರಡಲು ಸಂದರ್ಭಿಸದೇ ಹೋದದ್ದರಿಂದ ತನ್ನ ಹೆಂಡತಿಯನ್ನೂ, ಹಿರಿ