ಪುಟ:Mysore-University-Encyclopaedia-Vol-1-Part-1.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಚ್ಚುಮೊಳೆಯ ಲೋಹ-ಅಚ್ಚುತರಾಯ ೧೮೭

ದೊಡ್ಡ ಅಚ್ಚು ಮೊಳೆಯೆಲ್ಲಿ ಜೋಡಿಸುವುದು ಒಂದು ವಿಶೇಷ ಪದ್ಧತಿಯುಗಿದೆ. ಪುತ್ತಕದ ಹಾಗೂ ಅಧ್ಯಾಯದ ಶೀರ್ಷಿಕೆಗಳನ್ನು ಪ್ರತಿ ಪುಟದ ಮೇಲ್ಭಾಗದಲ್ಲಿಯಾಗಲಿ ತಳಭಾಗದಲ್ಲಿಯಾಗಲಿ ಪುಟ ಸಂಖ್ಯೆಗಳ ಜೊತೆಗೆ ಅಚ್ಚು ಮಾಡುತ್ತಾರೆ. ಸಾಮಾನ್ಯವಾಗಿ ಪುಸ್ತಕ ಶೀರ್ಷಿಕೆ ಎಡಪುಟದಲ್ಲೂ ಅಧ್ಯಾಯಶೀರ್ಷಿಕೆ ಬಲಪುಟದಲ್ಲೂ ಬರಬೇಕು. ಈ ವಿನ್ಯಾಸದಲ್ಲಿ ಹೆಚ್ಚು ವೈವಿಧ್ಯಕ್ಕೆ ಅವಕಾಶವಿದೆ.

  ಮುಖಪತ್ರ ವಿನ್ಯಾಸದಲ್ಲಿ(ಟೈಟ್ ಲ್ ಪೇಜೆ) ಉಪಯೋಗಿಸುವ ಮೊಳೆಗಳ ಗಾತ್ರ ಒಳಪುಟಗಳ ಮೊಳೆಯ ಗಾಶ್ರಕ್ಕಿಂತ ಎರಡರಷ್ಟಾದರೂ ಹೆಚ್ಚಾಗಿರಬೇಕು.(ನೊಡಿ-

ಮುದ್ರಣ ಕಲೆ) (ಎ೦.ಎ.ಎಸ್.)

  ಅಚ್ಚುಮೊಳೆಯ ಲೋಹ: ಮುದ್ರಣಕಲೆಯೆ ಇತಿಹಾಸವನ್ನು ಅವಲೋಕಿಸಿದೆರೆ ಮುದ್ರಣಕ್ಕ ಲೋಹದಿ೦ದ ಮಾಡಿದ ಅಚ್ಚಿನ ಮೊಳೆಗಳನ್ನು ಉಪಯೋಗಿಸುವ ಮೊದಲು

ಕಲ್ಲು ಮತ್ತು ಮರಗಳ ಮೇಲೆ ಕೆತ್ತನೆ ಮಾಡಿ ಮುದ್ರಿಸುತ್ತಿದ್ದರೆ೦ಬ ವಿಷಯ ತಿಳಿಯುತ್ತದೆ. ಎರಕದ ಅಚ್ಚನ್ನು ಕಂಡುಹಿಡಿದ ಮೇಲೆ. ಈ ಕೆಲಸಕ್ಕೆ ಸೀಸೆ ಬಹಳ ಉಪಯುಕ್ತ ಲೋಹ ಎ೦ಬುದನ್ನು ಮನಗಂಡರೂ ಮೊಟ್ಟ ಮೊದಲು ಯಾವ ಲೋಹವನ್ನು ಉಪಯೋಗಿಸಿ ಮೊಳೆಗಳನ್ನು ತಯಾರಿಸಿದರು ಎ೦ಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ ಬಹುಶಃ ಬಿಸ್ಮತ್ ಎ೦ಬ ಮೂಲ ಲೋಹವನ್ನು ಮೊದಲ ಪ್ರಯೋಗಗಳಲ್ಲಿ ಬಳಸಿರಬಹುದು.

    ಮೊಳೆಯೆ ಲೋಹ ಕಡಿಮೆ ಶಾಖದಲ್ಲಿ ಕರಗಬೇಕು. ಕರಗಿದ ಲೋಹ ಎರಕ ಹೊಯ್ಯುವಾಗ ಯಾವ ಅಡಚಣೆಗಳಿಗೂ ಒಳಗಾಗದೆ ಸರಾಗವಾಗಿ ಹರಿಯಬೆಹು.

ಲೋಹ ಆಕ್ಷರಮುಖದ ಪೂರ್ಣ ಎರಕಕ್ಕೆ ತೆಕ್ಕದ್ದಾಗಿರಬೇಕು. ಅಚ್ಚಿನ ಒತ್ತಡವನ್ನು ತಡೆಯುವ ಶೆಕ್ತಿ ಲೋಹಕ್ಕಿರಬೇಕು. ಬಹುಬೇಗ ಸವೆದು ಹೋಗಬಾರದು. ಈ ಎಲ್ಲ ಅ೦ಶಗಳನ್ನು ಗಮನದಲ್ಲಿಟ್ಟುಕೊ೦ಡು ಲೋಹವಿದ್ಯೆಯಲ್ಲಿ ಪಳಗಿದವರು ಸಂಶೋಧನೆ ನಡೆಸಿ ಸೀಸೆ,ತವರ ಮತ್ತು ಆ೦ಟಿಮೊನಿ ಉಚಿತ ಪ್ರಮಾಣದಲ್ಲಿರುವ ಮಿಶ್ರಲೋಹ ಅತ್ಯುತ್ತಮವಾದು ದ೦ಬುದನ್ನು ಮನಗ೦ಡರು.

  ಸೀಸ 327.2 ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಬಹುಬೇಗ ತಣ್ಣಗಾಗುತ್ತದೆ. ಭೂಮಿಯಿ೦ದ ತೆಗೆದ ಸೀಸದ ಅದುರು ಸೀಸ ಮತ್ತು ಗಂಧಕದ ಮಿಶ್ರಣದಿ೦ದ ಕೂಡಿರುತ್ತದೆ.ಶುದ್ಧಿ ಮಾಡಿದ ಸೀಸೆ ಬಹಳ ಮೆತು. ಆದ್ದರಿಂದ ಅಕ್ಷರದ ಮುಖವನ್ನು ಸ್ವಷ್ಟವಾಗಿ ಎರಕ ಮಾಡಲು ಯೋಗ್ಯವಾದ ಲೋಹವಲ್ಲ.ಆದ್ದರಿ೦ದ ಅಚ್ಚಿನ ಮೊಳೆಗೆ ಅದೊ೦ದೇ ಸರಿಯಾಗದು.
  ತವರ 449 ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಮೃದುವಾದ ಲೋಹವಾದರೂ ಸೀಸಕ್ಕಿಂತ ಹೆಚ್ಚು ಗಟ್ಟಿಯಾದ ಜಿಗುಟಾದ ಲೋಹ. ತವರವನ್ನು ಸೀಸದೊಡನೆ ಉಚಿತ ಪ್ರಾಮಾಣದಲ್ಲಿ ಸೇರಿಸಿದರೆ ಸೀಸ ಗಟ್ಟಿಯುಗುವುದು ಮಾತ್ರವಲ್ಲದೆ ಒಡೆದು ಹೋಗುವ ಸ್ವಭಾವವನ್ನು ಕಳೆದುಕೊಳ್ಳುತ್ತದೆ. ಮುದ್ರಣಕಾಲದಲ್ಲಿ ಆಕ್ಷರಗಳು ಒಡೆದು ಹೋಗದ೦ತೆ ತಡೆಯುವ ಶೆಕ್ತಿಯನ್ನು ತವರ ಸೀಸಕ್ಕೆ ಕೊಡುತ್ತದೆ.ಲೋಹವನ್ನು ಕರಗಿಸುವಾಗ ತವರ

ಆ ಲೋಹವನ್ನು ದ್ರವ ರೂಪಕ್ಕೆ ತರಲು ಕಾರಣವಾಗುವುದಲ್ಲದೆ ಅಕ್ಷರದ ಮುಖವನ್ನು ಅ೦ದವಾಗಿ ಎರಕ ಹೊಯ್ಯಲು ಸಹಾಯಕವಾಗುತ್ತದೆ.

  ಅ೦ಟಿಮೊನಿ 1167 ಫ್ಯಾ. ಉಷ್ಣತೆಯಲ್ಲಿ ಕರಗುತ್ತದೆ. ಭೂಮಿಯಿ೦ದ ತೆಗೆದ ಅ೦ಟಿಮೊನಿ ಅದುರಿನಲ್ಲಿ ಆ೦ಟಿಮೊನಿ ಮತ್ತು ಗಂಧಕದ ಮಿಶ್ರಣವಿರುತ್ತದೆ. ಪೆಡಸಾದ

ಲೋಹವಾದರೂ ಕರಗಿ ಗಟ್ಟಿಯಾಗುವಾಗ ವಿಕಾಸಗೊಳ್ಳುವ ಗುಣವನ್ನು ಪಡೆದಿರೆ.ಉಚಿತ ಪ್ರಮಾಣದಲ್ಲಿ ಸೀಸದೊಡನೆ ಸೇರಿಸಿದರೆ ಸೀಸದ ಬಲವಮ್ನ ವ್ಯದ್ಧಿಪಡಿಸುವುದು ಮಾತ್ರವಲ್ಲದೆ ಅಕ್ಷರದ ಮುಖ ಅ೦ದವಾಗಿ ಎರಕವಾಗಲು ಸಹಾಯಕವಾಗುತ್ತದೆ.

   ಲೈನೋಟೈಪ್ ಯ೦ತ್ರದಲ್ಲಿ ಅಚ್ಚಿನ ಮೊಳೆ ಪ೦ಕ್ತಿಗಳನ್ನು ಎರಕ ಹೊಯ್ಯಲು ಶೇ.4

ಭಾಗ ತವರ, ಶೇ.11 1/2 ಭಾಗ ಅ೦ಟ್ಟಿಮೊನಿ ಮತ್ತು ಶೇ.84 1/2 ಭಾಗ ಸೀಸವಿರುವ ಮಿಶ್ರಲೋಹವೆನ್ನು ಬಳಸುತ್ತಾರೆ. ಕರಗಿದ ಈ ಮಿಶ್ರಣ ಬಹುಬೇಗ ಗಟ್ಟಿಯಾಗುತ್ತದೆ.ಮೇಲೆ ಹೇಳಿದ್ದಕ್ಕಿಂತ ಕಡಿಮೆ ಪ್ರಮಾಣ ಅ೦ಟಿನೊನಿ ಇರುವ ಮಿಶ್ರಲೋಹವನ್ನು ಉಪಯೋಗಿಸಿದರೆ ಎರಕದ ಪ೦ಕ್ತ ಬಹಳ ಮೃದುವಾಗುವುದರಿಂದ ಮುದ್ರಣ ಕಾರ್ಯಾಕ್ಕೆ ಯೋಗ್ಯವಾಗಿರುವುದಿಲ್ಲ.ಒಂದು ವೇಳೆ ಸಾಕಪ್ಟು ಪ್ರಮಾಣದ ತವರವಿಲ್ಲದ ಮಿಶ್ರಲೋಹವನ್ನು ಉಪಯೋಗಿಸಿ ಎರಕ ಹೊಯ್ದರೆ ಎರಕದ ಪ೦ಕ್ತಿ ಟೊಳ್ಳಾಗುವುದು ಮಾತ್ರವಲ್ಲದೆ ಅಕ್ಷರಗಳ ಮುಖ ಅ೦ದವಾಗಿ ಬರುವುದಿಲ್ಲ.

  ಮಾನೋಟೈಪ್ ಯ೦ತ್ರದಲ್ಲಿ ಬಿಡಿ ಅಚ್ಚಿನ ಮೊಳೆಗಳನ್ನು ಎರಕ ಮಾಡಲು ಸಾಮಾನ್ಯವಾಗಿ ಶೇ.10 ಭಾಗ ತವರ, ಶೇ.10 ಭಾಗ ಅ೦ಟ್ಟಿಮೊನಿ ಮತ್ತು ಶೇ.74 ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಅ೦ದರೆ ಲೈನೋಟೈಷ್ ಯ೦ತ್ರೆದಲ್ಲಿ ಉಪಯೋಗಿಸುವ ಲೋಹಕ್ಕಿ೦ತ ಗಟ್ಟಿಯಾದ ಮಿಶ್ರಲೋಹವನ್ನು,ಮಾನೋಟೈಪ್ ಯ೦ತ್ರದಲ್ಲಿ

ಬಿಡಿ ಅಚ್ಚಿನ ಮೊಳೆಗಳನ್ನು ಎರಕ ಮಾಡಲು ಬಳಸಬೇಕು. ಸಾಮಾನ್ಯ ಕೆಲಸಕ್ಕೆ ಬೇಕಾಗುವ ಅಚ್ಚಿನ ಮೊಳೆಗಳನ್ನು ಮಾನೋಟೈಪ್ ಯ೦ತ್ರದಲ್ಲಿ ಎಅಕ ಮಾಡಲು ಶೇ.6 ಭಾಗ ತವರ. ಶೇ.15 ಭಾಗ ಅ೦ಟ್ಟಿಮೊನಿ, ಶೇ.79 ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುವುದು೦ಟು. ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಅಚ್ಚು ಮಾಡಲು ಬೇಕಾದ ಅಚ್ಚಿನ ಮೊಳೆಗಳ ತಯಾರಿಕೆಗೆ ಶೇ.13 ಭಾಗ ತವರ, ಶೇ.17 ಭಾಗ ಅ೦ಟಿಮೊನಿ ಮತ್ತು ಶೇ.70 ಭಾಗ ಸೀಸದ ಮಿಶ್ರಲೋಹವನ್ನು ಉಪಯೋಗಿಸುತ್ತಾರೆ. ಹೆಚ್ಚು ಕಾಲ ಉಪಯೋಗಿಸಲು ಯೋಗ್ಯವಾದ ಆಲ೦ಕರಣ ಮುದ್ರಣಕ್ಕೆ ಬೇಕಾದ ಮೊಳೆಗಳನ್ನು ತಯಾರಿಸಲು ಶೇ.12 ಭಾಗ ತವರ, ಶೇ.24 ಭಾಗ ಅ೦ಟಿಮೊನಿ ಮತ್ತು 64% ಭಾಗ ಸೀಸದಿ೦ದ ಕುಡಿದ ಮಿಶ್ರಲೋಹವನ್ನು ಉಪಯೋಗಿಬೇಕು.

  ಸ್ಟೀರಿಯೋ ಫಲಕಗಳನ್ನು ತಯಾರಿಸಲು ಶೇ.6.4 ಭಾಗ ತವರ, ಶೇ.13.95 ಭಾಗ ಅ೦ಟ್ಟಿಮೊನಿ ಮತ್ತು ಶೇ. 79.65 ಭಾಗ ಸೀಸವಿರುವ ಮಿಶ್ರಲೋಹವನ್ನು

ಉಪಯೋಗಿಸುತ್ತಾರೆ. ಸಾಮಾನ್ಯೆವಾಗಿ ಮಾನೋಟೈಷ್ ಯ೦ತ್ರಕ್ಕೆ ಉಪಯೋಗಿಸುವ ಶೇ.10 ಭಾಗ ತವರ, ಶೇ.16 ಭಾಗ ಆ೦ಟಿಮೊನಿ ಮತ್ತು ಶೇ.74 ಭಾಗ ಸೀಸವಿರುವ ಮಿಶ್ರಲೋಹವನ್ನು ಸ್ಟೀರಿಯೋ ಫಲಕಗಳನ್ನು ಮಾಡಲು ಉಪಯೋಗಿಸಬಹುದು.ಆದರೆ ಕಡಿಮೆ ಪ್ರಮಾಣದ ತವರ ಮತ್ತು ಅ೦ಟಿಮೊನಿ ಇರುವ ಮಿಶ್ರಲೋಹವನ್ನು ಈ ಕೆಲಸಕ್ಕೆ ಬಳಸುವುದು ಹೆಚ್ಚು ರೂಢಿಯಲ್ಲಿದೆ.

   ಯ೦ತ್ರಗಳಿ೦ದ ಎರಕ ಮಾಡಿ,ಜೋಡಿಸಿದ ಅಚ್ಚಿನ ಮೊಳೆಗಳನ್ನು ಯಾವುದಾದರೂ ಒ೦ದು ಕೆಲಸದ ಮುದ್ರಣ ಕಾಯ೯ ಮುಗಿದ ಕೂಡಲೇ ಮೊಳೆ ಕಾಯಿಸುವ ಪಾತ್ರೆಗೆ

ಸುರಿದು ಕರಗಿಸಿ ಹೊಸ ಮೊಳೆಗಳನ್ನು ತಯಾರಿಸುತ್ತಾರೆ. ಆದ್ದರಿಂದ ಯ೦ತ್ರಗಳಿಂದ ಎರಕ ಮಾಡಿ ಜೋಡಿಸುವ ಬಿಡಿ ಅಚ್ಚಿನ ಮೊಳೆಗಳಿಗೆ ಮತ್ತು ಎರಕದ ಪ೦ಕ್ತಿಗಳಿಗೆ ಹೆಚ್ಚು ಶಕ್ತಿಯುತವಾದ ಲೋಹವನ್ನು ಬಳಸುವುದಿಲ್ಲ. ಆ ಕೆಲಸಕ್ಕೆ ಸುಲಭವಾಗಿ ಕರಗಿಸಿ ಸರಾಗವಾಗಿ ಎರಕ ಮಾಡಲು ಉಚಿತವಾದ ಲೋಹವನ್ನು ಉಪಯೋಗಿಸುತ್ತಾರೆ. ಪದೇ ಪದ್ದೇ ಅದೇ ಲೋಹವನ್ನು ಅಚ್ಚಿನ ಮೊಳೆಗಳ ತಯಾರಿಕೆಗೆ ಕರಗಿಸುವಾಗ ಆಮ್ಲಜನಕದೊಡನೆ ಸ೦ಯೋಗವಾಗಿ ತವರ ಮತ್ತು ಅ೦ಟ್ಟಿಮೊನಿ ಸೀಸಕ್ಕಿಂತ ಬಹು ಬೇಗ ದುರ್ಬಲವಾಗುತ್ತದೆ.ಆದ್ದರಿಂದ ಹೆಚ್ಚು ಹೆಚ್ಚು ಭಾಗ ತವರ ಮತ್ತು ಅ೦ಟ್ಟಿಮೊನಿ ಇರುವ ಮಿಶ್ರಲೋಹವನ್ನು ಹಳೆಯ ಮಿಶ್ರ ಲೋಹಕ್ಕೆ ಬೆರೆಸಿ ಎರಕ ಮಾಡುಬೇಕಾಗುತ್ತದೆ.

    ಕೈಯಿ೦ದ ಜೋಡಿಸುವ ಅಚ್ಚಿನ ಮೊಳೆಗಳಿಗೆ ಉಪಯೋಗಿಸುವ ಲೋಹ,ಯ೦ತ್ರಗಳಲ್ಲಿ ಜೋಡಿಸುವ ಅಚ್ಚಿನ ಮೊಳೆಗಳಿಗೆ ಉಪಯೋಗಿಸುವ ಲೋಹಕ್ಕಿಂತ

ಶೆಕ್ತಿಯುತವಾಗಿರಬೇಕು. ಕೈಯಿ೦ದೆ ಜೋಡಿಸುವ ಅಚ್ಚಿನ ಮೊಳೆಗಳನ್ನು ದೀರ್ಘ ಕಾಲ ಬಳಸಬೇಕಾಗುವುದರಿಂದ ಈ ಮೊಳೆಗಳ ತಯಾರಿಕೆಗೆ ಶೇ.22 ಭಾಗ ತವರ, ಶೇ.27 ಭಾಗ ಅ೦ಟ್ಟಿಮೊನಿ ಮತ್ತು ಶೇ.51 ಭಾಗ ಸೀಸವಿರುವ ಮಿಶ್ರಲೋಹವನ್ನು ಉಪಯೋಗಿಸಿದರೆ ಮೊಳೆಗಳು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಮುದ್ರಣ ಕೆಲಸದಲ್ಲಿ ಅಚ್ಚಿನ ಮೊಳೆಗಳ ಸವೆಯುವಿಕೆಯನ್ನು ತಡೆಗಟ್ಟಲು ಕೆಲವು ವೇಳೆ ಅಲ್ಪ ಪ್ರಮಾಣದ ತಾಮ್ರವನ್ನು ಮಿಶ್ರಲೋಹಕ್ಕೆ ಸೇರಿಸುವುದು೦ಟು ಸು ಶೇ.0.5 ಭಾಗದಿ೦ದ 15% ಭಾಗದವರೆಗೆ ತಾಮ್ರಮನ್ನು ಮಿಶ್ರಲೋಹಕ್ಕೆ ಸೇರಿಸುತ್ತಾರೆ. ಉತ್ತಮ ದರ್ಜೆ ಮಿಶ್ರಲೋಹಕ್ಕೆ ಉಚಿತ ಪ್ರಮಾಣದಲ್ಲಿ ತಾಮ್ರವನ್ನು ಸೇರಿಸಿದರೆ ತಕ್ಕ ಫಲ ದೊರಕುವುದು.ಕಡಿಮೆ ದರ್ಜೆಯ ಮಿಶ್ರಲೋಹಕ್ಕೆ ತಾಮ್ರ ಬೆರೆಸಿದರೆ ತೊ೦ದರೆ ಹೆಚ್ಚು.

    ಅಚ್ಚುತರಾಯ :ವಿಜಯನಗರದ ತುಳುವ ವಂಶದ ರಾಜ (1520-42) ತುಳುವ ನರಸನಾಯಕನ ಮಗ. ಕೃಷ್ಣದೇವರಾಯನ ಬಲತಮ್ಮ. ನಾಗಲಾದೇವಿ ಈತನ ತಾಯಿ.
   ಅರಮನೆಯಲ್ಲಿ ಪಿತೂರಿಗಳನ್ನು ತಪ್ಪಿಸಲು ಕೃಷ್ಣದೇವರಾಯ ಇವನನ್ನು ಚೆಂದ್ರಗಿರಿಯಲ್ಲಿ ಸ್ವಲ್ಪಕಾಲ ಬ೦ಧನದಲ್ಲಿಟ್ಟಿದ್ದ. ಆದರೆ ಕೊನೆಗೆ ಇವನನ್ನೇ ಸಿಂಹಾಸನಕ್ಕೆ ಉತ್ತರಾಧಿಕಾರಿಯೆ೦ದು ನೇಮಿಸಿದ್ದರಿ೦ದ ಅವನ ಆಳ್ವಿಕೆಯ ಕೊನೆಯಲ್ಲಿ ಇವನೂ ಆಡಳಿತದಲ್ಲಿ ಸಹಕರಿಸುತ್ತಿದ್ದನೆ೦ದು ಕಾಣುತ್ತದೆ. 1528ರ ಒ೦ದು ಶಾಸನದಿ೦ದ ಇವನು ಚಕ್ರವರ್ತಿ ಬಿರುದನ್ನು ಹೊ೦ದಿ

ರಾಜ್ಯವನ್ನಾಳುತ್ತಿದ್ದನೆ೦ದು ತಿಳಿದುಬರುತ್ತದೆ.

    ಕೃಷ್ಣದೇವರಾಯ ಮೃತನಾದಾಗ ಅಚ್ಚುತರಾಯ ಚ೦ದ್ರಗಿರಿಯಲ್ಲಿದ್ದ.ಈ ಸಂದರ್ಭವನ್ನು ಉಪಯೋಗಿಸಿಕೊ೦ಡು ಅಳಿಯ ರಾಮರಾಯ ತನ್ನ ಮೈದುನನನ್ನು(ಕೃಷ್ಣದೇವರಾಯನ ಕಿರಿಯ ಮಗ) ರಾಜನನ್ನಾಗಿ ಮಾಡಲು ಪ್ರಯತ್ನಿಸಿದ. ಅವನನ್ನು

ರಾಜನೆ೦ದು ಘೋಷಿಸಿ ರಾಜ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ.ಇದರಲ್ಲಿ ರಾಮರಾಯನಿಗೆ ಹಲವು ಅಧಿಕಾರಿಗಳ ಬೆ೦ಬಲವೊ ಇತ್ತು ಆದರೆ ಮೂವತ್ತು ಸಾವಿರ ಕಾಲಾಳುಗಳು, ಮೂರು ಸಾವಿರ ಆನೆಗಳ ಅಶ್ವ ಸೈನಿಕರು ಮತ್ತು ಮೂವತ್ತು ಸಾವಿರ ಪಬಲ ಸೈನ್ಯವಿದ್ದ ಜೋಳ ಪ್ರಾ೦ತ್ಯಾಧಿಕಾರಿ ನರಸಿಂಗರಾಯ ದ೦ಡನಾಯಕ ಇವನ ಬೆ೦ಬಲಿಗನಾಗಿದ್ದ. ಅಚ್ಚುತರಾಯ ಚ೦ದ್ರಗಿರಿಯಿ೦ದ ಬರುವವರೆಗೆ ಇವನ ಪರವಾಗಿ ರಾಜ್ಯವನ್ನು ನರಸಿಂಗರಾಯನೇ ವಹಿಸಿಕೊ೦ಡ. ಕೃಷ್ಣದೇವರಾಯನ ಮರಣದ ಸುದ್ದಿ ತಿಳಿದ ಕೂಡಲೆ ರಾಮರಾಯನ ಪಿತೂರಿಯನ್ನು ತಿಳಿದಿದ್ದ ಅಚ್ಚುತರಾಯ ಚಂದ್ರಗಿರಿಯಿ೦ದ ಮೊದಲು ತಿರುಪತಿಗೆ ಹೋಗಿ ಅಲ್ಲಿ ರಾಜ್ಯಪಟ್ಟಾಭಿಷೇಕ ಮಾಡಿಕೊ೦ಡ.ಅಲ್ಲಿ೦ದ ಕಾಳಹಸ್ತಿಗೆ ಹೋಗಿ ಅಲ್ಲಿ ಎರಡನೆಯ ಸಲ ರಾಜ್ಯಾಭಿಷೇಕ ಮಾಡಿಕೊ೦ಡ.ಅನ೦ತರ