ಪುಟ:ಬೃಹತ್ಕಥಾ ಮಂಜರಿ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ro ಬೃ ಹ ತ ಥಾ ಮ೦ಜರಿ. ಳಂ ಸಪಾದಿಸಿ ಕೊಳ್ಳುತ್ತಿರ್ದೆನು. ನನ್ನ ಕಂಡರೆ ಆಗದಂತಾದುದೇ ಪುನಃ ರಾಜನಿ ಗೆ, ನನ್ನೊಳು ಯಥಾಪ್ರಕಾರವಾಗಿ ವಿಶ್ವಾಸಂವುಟ್ಟುವಂತೆ ಏನುಮಾಡಲಿಎಂದು ಯೋಚಿಸುತ್ತಾ ಆವರ್ತಾಕ್ಷನೆಂದು ಹೆಸರುಳ್ಳ ಕಗ್ರಗೆಮಿಂಚುತ್ತಿರುವ ದೇಹಕಾಂತಿಯಂ ದೊಪ್ಪುವ ಅಡಮೋರೆಯ ಗಂಟುಮಗಿನ, ಗುಜ್ಜಗೊಳಿನ ದೊಡ್ಡದಾದ ಗುಡಾಣ ಹೊಟ್ಟೆಯ ಉದರಿದ ರೋಮಮಿಸೆಗಳ ಉದ್ದವಾದ ಕಾಲುಕೈ ಗಳಗೂನು ಬೆನ್ನಿನಗಾ ರ್ದಭ ಸ್ವರದಸಣಬಿನಂದದ ತಲೆಕೂದಲಿನ ಅತಿಶಯದಿಂದೊಪ್ಪ ತಿರುವವನಂ ಮೊ ಹದ ಮಿಂಡನನ್ನಾಗಿ ಮಾಡಿಕೊಂಡಿದ್ದ ವಳಾದಕಾರಣ ಅವನೊಳು ಸೇರಿರತಿಕ್ರೀಡೆಯಂ ಸಲುಪುತ್ತಿರುವಾ ಸುಂದರಾಂಗಿಯು, ಅವನಂ ಕುರಿತು, ಹೇಳಿದಳು. ಎಲ್ಲಿ ನನ್ನ ಮೋಹದ ಗಣಿಯೆ ! ಆಲಿಸು ಈ ದೇಶಾಧೀಶನು ಇವರಿಗೂ ನನ್ನ ಳು ವಿಶ್ವಾಸವು ಳ್ಳವನಾಗಿ ನನ್ನ ಲಕ್ಷಣವಾದರೂ ಬಿಡಲಾರದೆ ಇದ್ದನು. ಆತನಿಗೆ ಶೋಭನಪ್ರಸ್ತುತ ವಾದುದರಿಂದ ನನ್ನೊಳು ವಿಶ್ವಾಸಮಂ ತೊರೆದು ನನ್ನ೦ ಸ್ಮರಿಸುವುದೇ ಇಲ್ಲವ, ಇದ ಕೇನುಪಾಯದಂ ಮಾಡಬೇಕೋ ತೋರದು ಎಂದು ತನ್ನಂತರಂಗಮಂ ಆ ಮೋ ಹದಮಿಂಡನೊಳು ಹೇಳಿಕೊಂಡಳು. ಲೋಕದೊಳು ರೂಪವಂತರು ಕುರೂಪಿಗಳನ್ನು ಮೋಹಿಸುವುದು ಸಹಜವಾಗಿರುವುದು, ಅದು ಹೇಗೆಂದರೆ ? ಶೂಗಿ ಲಕ್ಷ್ಮಿ ರಾಕ್ಷಣಹೀನೇಕ ಕುಲಹೀನೇ ಸರಸ್ವತೀ | ವಿಕಾರವಂತಂ ಸುಭಗಾಗಿ‌ವರ್ಷವಾಸವಃ | ಸಲ್ಲಕ್ಷಣವಲ್ಲದವನಂ ಲಕ್ಷ್ಮಿಯು ಒಲಿಯುತ್ತಾಳೆ ಕುಲಹೀನನ್ನು ಸರಸ್ಯ ತಿಯು ಮೆಚ್ಚುವಳು ಕುರೂಪಿಯಾದವನನ್ನು ರೂಪಾತಿಶಯವುಳ್ಳ ಸ್ತ್ರೀಯ ಮೋಹಿಸುವಳು ಬೆಟ್ಟಗಳಲ್ಲಿಯೇ ಮಳೆಯು ಸುರಿಯುವದು ವಿಶೇಷವು. ಹೀಗೆ ಇರು ವದರಿಂದ ಪನೀಜಾಸ್ತಿಯಾದವಳು, ಆ ಕುರೂಪಿಯಂ ಮೋಹದಂಡನ ನ್ನಾಗಿ ಮಾಡಿಕೊಂಡು ಅವನೊಳು ಸುಲಿಸುತ್ತಾ ತನ್ನ ಅಂತರಂಗಕ್ಕೆ ಮುಖ್ಯನನ್ನಾ ಗಿಮಾಡಿಕೊಂಡಿದ್ದದ್ದರಿಂದ ಅವಳ ಮಾತುಗಳಂ ಕೇಳುತಲೇ ಅವಳಿಗೆ ಹಿತಕರವಾ ಗುವಂತೆ ಉಪಾಯವಂ ಹೇಳಿದನು. ಹೇಗೆಂದರೆ ಈ ಊರುಹೊರಗಿನ ಸ್ಮಶಾನದೊಳು ವಾಸವಾಗಿರುವ ಮಂತ್ರಿಕ ನಿಂದ ರಾಜಪತ್ನಿಗೆ ಮಾಟವಂ ಮಾಡಿಸಿದರೆ ಮೃತಿಯಂ ತಾಳುವಳು. ಅನಂತರ ಮಹಾರಾಜನು ಮುನ್ನಿನಂತೆ ನಿನ್ನ೦ ವಿಶ್ವಾಸಿಸುವನು, ಎಂದು ದುರ್ಬೋಧನೆಯಂ ಮಾಡಲು ಆ ವಾರಾಂಗನೆಯು ಆ ಮಾರನೇದಿನದುದಯವಾಗಲಲ್ಲಿಂ ಹೊರಟು ಆ ಸ್ಮಶಾನದೊಳಿರುವ ಮಾಂತ್ರಿಕನೆಡೆಯಂಸೇರಿ ಅವನಿಗೆ ಸಾಷ್ಟಾಂಗವೆರಗಿ ತಾಂ ಕೊಂಡೆರ್ದ ಫಲಾದಿಗಳು ಮುಂದಿಟ್ಟು ಸ್ವಾಮಿ ನನ್ನ ಮನೋರಥಸಿದ್ದಿಯಿಂದ ಧನ್ಯಳಂಮಾಡೆಂದು ಕೈಮುಗಿದು ಪ್ರಾರ್ಥಿಸಲಾ ಮಂತ್ರಜ್ಞಂ ಅದೇಂ ತಿಳುಹಿದರೆ ಅವಶ್ಯಕವಾಗಿ ಆಗಗೊಳಿಸುವೆನೆಂದು ಹೇಳಲಾ ವೇಶ್ಯಾಚೇಟಿಯು ತನ್ನ ಮನೋಗತ