ಪುಟ:ಬೃಹತ್ಕಥಾ ಮಂಜರಿ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ಣ ಬ ಹ ತ ಥಾ ಮ೦ ಜರಿ , ೧೧೬ ತನ್ನ ಕುಲಕೋಟಿಯೊಡನೆ ಬಹು ದೂರಂ ಸಂಚರಿಸಿ ಬಂದು, ಆ ರಾತ್ರೆಯೊಳಾ ರಾಜಪುತ್ರಿಯೊಳು ಮುನ್ನಿ ವೊಲು ನುಡಿಯುತ್ತಿರುವಾಗೈ ಎ ತಾಯಿ! ನಿನ್ನೆಯು ದಿನದೊಳು ನಮ್ಮ ಕುಲದವರೆಲ್ಲರೂ ಸೇರಿ, ವಿಂಧ್ಯಾರಣ್ಯ ಕಾಗಿ ನಾಳೆಯದಿನ ಹೋಗಬೇಕೆಂದು ಯೋಚಿಸಿರುವರು, ನನ್ನ ನ ಬರುವದೆಂದು ನಿರ್ಬಂಧಿಸುತ್ತಿ ದ್ದಾರೆ, ಅದಕ್ಕೆ ತಮಾಷೆಯನ್ನು ಕೇಳುವೆನೆಂದೊರೆಯೆ ಹೊಗಿಬರುವಂತೆ ಆಜ್ಞೆ ಯನಿತ್ತು ಮುತ್ತಿಟ್ಟು ಕಳುಹಲು, ಆ ಶುಕಂ ಮರುದಿನದುರ್ದತರ್ವವೇ ಹೊರಟು ತನ್ನ ಕುಲಕ ಬಿಯೊಂದಿಗೆ ಕಲೆತು ಹೋಗುತ್ತಾ ಆ ನಗಾಗ್ರದೊಳು ದಿವ್ಯತರವಾದೊಂದು ತಪೋವನಂ ಕಣ್ ಮಂಗಳಮಾಗೆ ಎಲ್ಲವೂ ಆ ವನ೦ಸಾರಿ ವೃಕ್ಷಗಳ ಶಾಖೆಗಳು ಕುಳಿತು, ಆ ವನದ ಸೊಬಗಂ ನೋಡುತ್ತಾ ಬಂದುದು. ಆ ವೇಳೆಯೊಳಾರಾಜಾತೃಭಾ ಪೋಷಿತ ಶು ಕಂ, ತಮ್ಮ ಕುಲದವರಂ ಕುರಿತು, ಎಲೈ ಶುಕಶ್ರೇಷ್ಟರುಗಳಿರಾ ಕೇಳಿ ! ನಾವೀ ವರೆಗಂ ಸಂಚರಿಸಿದೆಡೆಗಳೊಳು ಇಂತು ಸಿಂಗರಮಾಗಿ ಸಕಲ ಲತಾವೃಕ್ಷ೦ಗಳೂ ಪೂತು, ಫಲಿಸಿ ಸಾಂದ್ರಮಾಗಿ ನೋಡೆ ರಮಣೀಯವಾಗಿರ್ದುದಂ ಕಾಣಲಿಲ್ಲ ವು. ಇದಂ ನೋಡಲು ಯಾರದೊ ಹರವು ಮುನಿಗಳ ತಪೋವನದಂತೆ ತೋರುವದು, ಅದಕ್ಕೆ ತಕ್ಕಂತೆ ಮುಂಗಡೆಯೊಳು ಪಕ್ಷ ಶಾಲಿಯಂ ಕಾಂಬುದು. ಆದುದರಿ೦ ನಾವೀ ಎಡೆಯೊಳು ಮನಸ್ಸಿ: ಧ್ವನಿಮಾ ಡುತ್ತಾ, ಈ ಪಕ್ಷ ಫಲಂಗಳಂ ಕೆಡಿಸಿದರೆ ಆ ಮಹನೀಯರ ಕೊ ಸಕ್ಕೆ ಪಾತ್ರ ರಾಗಿ ಶಾಪಕ್ಕೆ ಭಾಜನರಾಗುವೆವು, ಆದ್ದರಿಂದೀಗ ಮಹನೀಯರು ಸಂದರ್ಶಿಸಿ, ಅವರನುಜ್ಞೆಯಂ ಪಡೆದು, ಪಲಂಗಳಂ ಭಕ್ಷಿಸಿದರೆ ಮುಕ್ತವಾಗಿರುವುದೆಂದರೆ ಯಲು, ವಿವೇಕ ಹೀನಂಗಳಾದ ಆ ಪಕ್ಷಿ ಸಂಕುಲಮದಂ ಕೇಳದೆ ಕಲಕಲಧ್ವನಿ ಯಂ ಮಾಡುತ್ತಾ ಸೈ ಚೆ ಯೋಳು ಚರಿಸುತ್ತಾ ಬಂದವ್ರ, ಆಗಲಾ ರಾಜಪ್ಪತ್ರೆಯ ಲೀಲಾಶುಕವು ಅಂತಸಗದೆ ಪರ್ಣಶಾಲೆಯೊಳು ಧ್ಯಾನಾ ರೂಢನಾದ ಮುನೀಂದ್ರನ ಮುಂಗಡೆಯ ಸಾರಿ ಕುಳಿತುಕೊಂಡಿರ್ದುದು, ಆ ಶುಕ ಕಲಕಲಾರವವಂ ಕೇಳುತ್ತೆ ಬಹಿಮ್ಮುಖನಾದ ತಾಪಸೇ೦ದ್ರಂ ಶವಿಸುವದಕ್ಕಾಗಿ ಕರೆದು ನೋಡುವನಿತರೊಳಾ ಬಳಿಯೊಳಿದ್ದೀ೯ ಲೀಲಾಶು ಕಂ, ಎಲೈ ತಾಪಸಾಗ್ರಗಣ್ಯನೇ ! ತಾವು ಕೋಪಮಂ ತಾಳಲಾಗದು, ನಾವು ಜ್ಞಾನಶೂನ್ಯಮಾದ ಪಕ್ಷಿಗಳು, ತಿಳಿಯದೆ ಶಬ್ದ ಮಾಡುತ್ತಾ, ಫಲಾದಿಗಳಂ ! ತಿಂದ ಅಪರಾಧಮಂ ಕ್ಷಮಿಸಬೇಕೆಂದು ರಮಣೀಮಾ ಗಿಯ ಲಲಿತವಾಗಿಯ ನುಡಿಯುತ್ತಿರುವೀ ರಾಜಶುಕಮಂ ನೋಡಿ, ಅತ್ಯಾನಂದಾ ಶರ ಮಗ್ನನಾಗಿ ಎಲೈ ಶುಕಶ್ರೇಷ್ಠ ನೇ ! ನಿನ್ನ ವಿವೇ ಕಾದಿಗಳಿಗೆ ನಾನು ಮೆಚ್ಚಿ ದೆನು, ನೀ ನು ಬಹು ವೃದವಯಸ್ಸಿನದಾಗಿರುವಿ, ಈ ಫಲಮಂ ಭಕ್ಷಿಸು, ಪ್ರಾ ಯವುಳ್ಳದ್ದಾಗಿ ಬಹುಕಾಲ೦ ಜೀವಿಸುವ, ಎ೦ದಾ ತಾಪಸೇ೦ದ್ರ ಚೂತಪಲ ಮೊ೦ದ೦ ಅಭಿಮಂತ್ರಿಸಿ ಕೊಡಲಾ ಶುಕಮಲ್ಟಿಯೇ ಭಕ್ಷಿಸಲು, ಆಕ್ಷಣದೊಳೆ