ಪುಟ:ಬೃಹತ್ಕಥಾ ಮಂಜರಿ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೦ ಬೃ ಹ ತ ಥಾ ನ ೦ 8 ರಿ, ಮಂತ್ರಿಯೇ ಈ ದುರಾತ್ಮಕನಾದ ಇವನ ರೀತಿಯಿಂದಲೇ ಇವನು, ಆ ವಾರಾಂಗನೆ ಯಂ ನಾಶಗೊಳಿಸಿದನೆಂದು ಕಾಣುವನಾದ್ದರಿಂದ ಇವನ ಮರಣದಂಡನೆಗೆ ಗುರಿಮಾ ಡಿಸುವಂತೆ ಆಜ್ಞಾಪಿಸಿರುವೆನು, ನನ್ನಾಜ್ಞೆಯಂ ಕ್ಷಿಪ್ರವಾಗಿ ಪೂರೈಸಂದೊರೆಯಲು ಆ ರಾಜಾಜ್ಞಾನುಸಾರವಾಗಿ ರಾಜದೂತರು ಬಂದು ಚಿತ್ರವರ್ಮನ ಕೈ ಹಿಡಿಯುತ್ತಿರು ವಾಗ ರಾಜನಂ ಕುರಿತು ಎಲೈ ರಾಜನೇ ರತ್ನ ಪಕ್ಷಿಯ ತಲೆಯಂ ನಾಂತಿಂದು ರಾಜ್ಯ ಪ್ರಾಪ್ತಿಯಾಗಲಿಯೆಂದು ಅಣ್ಣನೆಂಬ ಭ್ರಮೆಯಿಂದ ಆ ಪಕ್ಷಿಯ ದೇಹಮಾಂಸಮಂ ಬೇಯಿಸಿ ನಿನಗೆ ಉಣಿಸಿದ ಉಪಕಾರಕ್ಕೆ ನೀಂ ರಾಜ್ಯ ಪದವಿಯಂ ಹೊಂದಿ, ಮದಾಂಧ ನಾಗಿ ತಮ್ಮನೆಂಬ ಮಮತಿಯನ್ನು ಬಿಟ್ಟು ಈ ಮಿಣದಂಡನೆಯ ವಿಧಿಸಿದೆಯಾ ! ಒಳ್ಳಿತು, ನೀನಾದರೂ ಸುಖಿಯಾಗಿ ಬಾಳೆಂದು ಹೇಳಿ ಅಲ್ಲಿಂ ಹಿಂತಿರುಗಿ ಹೊರಡಲು, ಆ ಮಣಿವರ೦ ಆ ಮಾತುಗಳಂ ಕೇಳುತ್ತ ತನ್ನ ಪೂರ್ವಸ್ಥಿತಿಯನೆಲ್ಲಮಂ ಸ್ಮತಿಪಥ ದೋಳು ತಾಳೆ ಚಿತ್ರವರ ನಂ ಚೆನ್ನಾಗಿ ನೋಡಿ ತನ್ನ ಸಹೋದರನೆಂದರಿತು ಧಿಗ್ಯನ ಸಿಹಾಸನದಿಂದಿಳಿದು ಹೋಗಿ ಅವನಂ ತನ್ನೆರಡು ಕೈ ಗಳಿಂದಾಲಿಂಗಿಸಿಕೊಂಡು ಅಲ್ಲಿಂ ದೆತ್ತಿಕೊಂಡು ಬಂದವನಾಗಿ ತನ್ನ ಸಿಹ್ಮಾಸನಾರ್ಧದೊಳು ಕುಳ್ಳಿರಿಸಿಕೊಂಡು ಅಯ್ಯೋ ಚಿತ್ರ ವರನೇ ! ನೀನೆಂದರಿಯದೆ ಅಂತಾಜ್ಞಾಪಿಸಿದೆನು. ಮದಾಂಧನಾದ ನಾನು ತಿಳಿ ಯದೆ ಮಾಡಿದ ತಪ್ಪಂ ಮನದೊಳು ಎಣಿಸಬೇಡ ಎಂದು ಗಟ್ಟಿಯಾಗಿ ಬಿಕ್ಕಿ ಬಿಕ್ಕಿ ಅಳು ತಾ ಕಂರ್ಧಾರೆಯಂ ಸುರಿಸುತ್ತಾ ಎಲೈ ಸಹೋದರನೇ ! ಬಹುಕಾಲದ ಹಿಂದೆ ಆಗಲಿದನಾವು ದೈವಯೋಗದಿಂದ ಈ ದಿನದೊಳು ಸೇರಿದೆವು. ನಿನ್ನ ಮುಖಮಂ ನೋ ಡಿದ ಈ ದಿನವೇ ಸುದಿನವು ಎಂದು ಪರಮಾನಂದ ತುಂದಿತನಾಗಲು, ಈರ್ವರೂ ಅಂತೆಯೇ ಮುಖಾವಲೋಕನಾಲಿಂಗನಾದಿಗಳಿಂದ ಸ್ವಲ್ಪಕಾಲಂ ಮೈಮರೆತವರಾಗಿ ರು, ಎಚ್ಚತ್ತವರಾಗಿ, ತಾವೀರ್ವರೂ ಸೇರಿ, ನೇರಳೆಯ ಮರದಡಿ ಮಲಗಿ ರತ್ನ ಪತ್ನಿ ಯಂ ಸಂಗ್ರಹಿಸಿರ್ದುದು ಮೊದಲಾದ ಅಂದಿನವರಿಗಿನ ಪರಸ್ಪರ ಯೋಗಕ್ಷೇಮಾದಿಗ ಳಂ ಮಾತಾಡುತ್ತಾ ಸುಖವಾಗಿರ್ದು ಗ೦ಧೇಭಜ್ರರದೊಳಾ ವೇಶ್ಯಾಂಗನೆಯ ಮನ ಯೊಳಿರ್ದ ತನ್ನ ತಮ್ಮನ ಪದಾರ್ಥಗಳಂತರಿಸಿಕೊಂಡು ಈರ್ವರೂ ಸ್ನಾನಭೋಜನಾ ದಿಗಳಂ ಮಾಡಿ ಕುಳಿತುಕೊಂಡು ಸುಖಸಲ್ಲಾಪಂಗಳಂ ಗೈಯ್ಯುತ್ತಿರಲು ಚಿತ್ರವನ್ನ ಅಣ್ಣನಂ ಕುರಿತು ಎಲೈ ಅಣ್ಣಾ ತಂದೆತಾಯಿಗಳಂ ಬಿಟ್ಟು ಬಂದು ಬಹುಕಾಲಮಾಯ್ತು, ಪುತ್ರರೇನಾದರೋ ಎಂಬ ವಿಯೋಗದುಃಖದಿಂದ ಸಂತಾಪಗೊಳ್ಳುತ್ತಿರುವರಂ ಸಂತಸ ಬೇಕಾದದ್ದಲ್ಲವೇ, ನಮ್ಮ ಮುಖ್ಯ ಕಾರವು ? ಎಂದು ಹೇಳಲಾ ಮಣಿವರನು ಎಲೆ ಭ್ರಾತೃವತ್ಸಲನೇ ಕೇಳು, ಅದಕ್ಕಿಂತಲೂ ಅಧಿಕವಾದ ನಮ್ಮ ಕಾರವು ಮತ್ತೊಂದಲ್ಲ' ನನಗುಂಟಾಗಿರುವ ಮಹಾ ದುಃಖದಲ್ಲಿ ಯಾವದೂ ತೋರುವದಿಲ್ಲವು. ಅದೇನನ್ನು ವಿಯೋ ನಾನು ಪೇಟೆಗೆ ವ್ಯಾಪಾರರ್ಥವಾಗಿ ಬಂದಿರ್ದವನು .ಈ ಪಟ್ಟಣದ ಸದಾಚೆ 6 ಮಂ ಕೇಳಿ ಹುಚ್ಚು ಹಿಡಿದವನಂತೆ ಏನೂ ತೋರದೆ ಹೊರಟು ಬಂದನು. ಈ ಪುರ